"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 16 August 2020

•► ಪ್ರಚಲಿತ ಘಟನೆಗಳಾಧಾರಿತ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020"- "ಭಾಗ 3 (Multiple choice questions based on Current affairs - 2020)

•► ಪ್ರಚಲಿತ ಘಟನೆಗಳಾಧಾರಿತ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020"- "ಭಾಗ 3 
(Multiple choice questions based on Current affairs - 2020)
━━━━━━━━━━━━━━━━━━━━━━━━━━━━━━━━━━━━━━━━


•• .ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆಯು 2019-20 ರ  ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ. 
★ ಸ್ಪರ್ಧಾಲೋಕ ಟೆಲೆಗ್ರಾಮ್ ಚಾನೆಲ್‌ (@spardhaloka) ನಲ್ಲಿ ದಿನಂಪ್ರತಿ ಕೇಳಲಾಗುವ ಕ್ವಿಝ್ ಎಲ್ಲವನ್ನೂ  ಇಲ್ಲಿ ಒಂದೆಡೆ ಕ್ರೋಢೀಕರಿಸಿರುವುದು.
★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ ಭಾಗ 3ನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.

— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.


121. 'ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್'- 2019' ಕುರಿತ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1.ಸರ್ಕಾರವು ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನ ಸಮೀಕ್ಷೆಯನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವುದು.
 2.ಅರಣ್ಯ ವ್ಯಾಪ್ತಿ ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ನಾಟಕವು ಪ್ರಥಮ ಸ್ಥಾನದಲ್ಲಿದೆ.
 — ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಇವೆರಡೂ ಸರಿಯಾಗಿಲ್ಲ.

122. ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.
1.ಪಿ-ನೋಟ್ಸ್ ಮೂಲಕ ನಡೆಸುವ ವ್ಯವಹಾರವು ಸೆಬಿಯಿಂದ ನಿಯಂತ್ರಿಸಲ್ಪಡುತ್ತದೆ.
2.ಪಿ-ನೋಟ್ಸ್ ಗಳ ಮೂಲಕ ಭಾರತೀಯ ಮಾರುಕಟ್ಟೆಗಳಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ಗುರುತನ್ನು ಬಹಿರಂಗಪಡಿಸದೆ ಹೂಡಿಕೆ ಮಾಡಬಹುದು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಇವೆರಡೂ ಸರಿಯಾಗಿಲ್ಲ.

123.  ಈ ಕೆಳಗಿನವುಗಳಲ್ಲಿ ಸರಿಯಾದವನ್ನು ಗುರುತಿಸಿ.
a. ಕಿಶೆನ್ ಗಂಗಾ - ಜಮ್ಮು ಮತ್ತು ಕಾಶ್ಮೀರ.
b. 'ಪೆನಗಂಗಾ ನದಿ' - ಮಹಾರಾಷ್ಟ್ರ
c. 'ವೆನಗಂಗಾ ನದಿ'- ಮಧ್ಯಪ್ರದೇಶ
1) a ಮಾತ್ರ
2) a & b ಮಾತ್ರ
3) b & c ಮಾತ್ರ
4) ಮೇಲಿನೆಲ್ಲವೂ.

124.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಆಪರೇಷನ್ ಪೀಸ್ ಸ್ಪ್ರಿಂಗ್' ಕಾರ್ಯಾಚರಣೆಯನ್ನು ನಡೆಸಿದ ದೇಶ?
A) ಟರ್ಕಿ.
B) ಸಿರಿಯಾ.
C) ಯಮೆನ್.
D) ಸೌದಿ ಅರೇಬಿಯಾ.

125. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಒರೊಮೊ ಸಮುದಾಯ' / 'ಒರೊಮಿಯಾ ಪ್ರಾಂತ್ಯ' ಈ ದೇಶಕ್ಕೆ ಸಂಬಂಧಿಸಿರುವುದು.
A) ಬುರ್ಕಿನಾ ಫಾಸೊ.
B) ಇಥಿಯೋಪಿಯಾ.
C) ಹೊಂಡುರಾಸ್‌.
D) ನ್ಯೂಜಿಲೆಂಡ್.

126.ಈ ಕೆಳಕಂಡ ಯಾವ್ಯಾವ 'ಕಾನ್ಫರೆನ್ಸ್ ಆಫ್ ಪಾರ್ಟಿಸ್' (ಸಿಒಪಿ) ಜಾಗತಿಕ ಸಮ್ಮೇಳನಗಳು ಇತ್ತೀಚೆಗೆ ಭಾರತದಲ್ಲಿ ಹಮ್ಮಿಕೊಂಡಿರುವಂಥವು?
1.UNCCD.
2.UNFCCC
3.UNCBD
— ಸರಿಯಾದುದನ್ನು ಗುರುತಿಸಿ.
A. 2 ಮಾತ್ರ
B. 1 ಮತ್ತು 2
C. 2 ಮತ್ತು 3
D. ಮೇಲಿನ ಎಲ್ಲವೂ.

127.'ಹಳದಿ ಉಡುಗೆ ಪ್ರತಿಭಟನೆ'(Yellow Vest)ಯು ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶಕ್ಕೆ ಸಂಬಂಧಿಸಿದೆ.
A) ಫ್ರಾನ್ಸ್.
B) ಟರ್ಕಿ.
C) ಸಿರಿಯಾ.
D) ಹಾಂಗ್‌ಕಾಂಗ್.

128. ಇತ್ತೀಚೆಗೆ ಜಾಗತಿಕ ತಾಪಮಾನ ನಿಯಂತ್ರಣ, ಹಸಿರುಮನೆ ಅನಿಲ ಹೊರಸೂಸುವಿಕೆ ಕಡಿತಗೊಳಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ತನ್ನ  ವರದಿಯಲ್ಲಿ ’ಇಂಗಾಲದ ಮೇಲಿನ ತೆರಿಗೆ’ (ಕಾರ್ಬನ್‌ ಟ್ಯಾಕ್ಸ್‌)‌' ಬಗ್ಗೆ ಸೂಚಿಸಿದ್ದು, ಪ್ರತಿ ಟನ್‌ ಇಂಗಾಲದ ಡೈ ಆಕ್ಸೈಡ್‌ ಹೊರಸೂಸುವಿಕೆ'ಗೆ ಎಷ್ಟು ತೆರಿಗೆ ವಿಧಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ?
A) 100 ಅಮೆರಿಕನ್‌ ಡಾಲರ್‌(₹7,000).
B) 70 ಅಮೆರಿಕನ್‌ ಡಾಲರ್‌(₹4,840).
C) 50 ಅಮೆರಿಕನ್‌ ಡಾಲರ್‌(₹3,457).
D) 10 ಅಮೆರಿಕನ್‌ ಡಾಲರ್‌(₹690).

129 ಇತ್ತೀಚೆಗೆ ಭಾರತದಲ್ಲಿ ಹಮ್ಮಿಕೊಳ್ಳಲಾದ ಯಾವ ಜಾಗತಿಕ ಸಮಾವೇಶದಲ್ಲಿ “ದೆಹಲಿ ಘೋಷಣೆ”(Delhi Declaration) ಎಂಬ ನಿರ್ಣಾಯಕ ಭವಿಷ್ಯದ ಕ್ರಿಯಾಯೋಜನೆಯನ್ನು ಘೋಷಿಸಲಾಯಿತು?
A. UNCCD.
B. UNFCCC.
C. UNCBD.
D. CMS COP13.

130. ಜಾಗತಿಕ ಮಟ್ಟದಲ್ಲಿ ಜೀವ ವೈವಿಧ್ಯ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲು 'ಜೀವವೈವಿಧ್ಯತೆಯ ಕುರಿತ ವಿಶ್ವಸಂಸ್ಥೆಯ ಸಮಾವೇಶ' (United Nations Convention on Biodiversity) ವು 3 ಪ್ರಮುಖ ಪೂರಕಗಳನ್ನು ಹೊಂದಿದೆ, ಅವುಗಳೆಂದರೆ ಕಾರ್ಟಜೆನಾ ಪ್ರೋಟೋಕಾಲ್, ಐಚಿ ಜೀವವೈವಿಧ್ಯ ಪ್ರೋಟೋಕಾಲ್ ಮತ್ತು ನಾಗೋಯಾ ಪ್ರೋಟೋಕಾಲ್.
— ಸರಿಯಾದ ದೇಶಗಳೊಂದಿಗೆ ಹೊಂದಿಸಲಾದ ಆಯಾ ಸ್ಥಳವನ್ನು ಗುರುತಿಸಿ.
1) ಕಾರ್ಟಜೆನಾ - ವೆನೆಜುವೆಲಾ
2) ಐಚಿ - ಜಪಾನ್
3) ನಾಗೋಯಾ - ಜಪಾನ್
— ಸರಿಯಾದುದನ್ನು ಗುರುತಿಸಿ.
A. 1 ಮಾತ್ರ
B. 2 ಮಾತ್ರ.
C. 2 ಮತ್ತು 3.
D. ಮೇಲಿನ ಎಲ್ಲವೂ.

131. ಈ ಕೆಳಗಿನ ಯಾವ ಬುಡಕಟ್ಟು ಜನಾಂಗಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ ?
1) ಕಾನಿಕರಣ್ ಬುಡಕಟ್ಟು - ಅಗಸ್ತ್ಯಮಾಲೈ ಬಯೋಸ್ಪಿಯರ್ ರಿಸರ್ವ್
2) ತೋಡಾ ಬುಡಕಟ್ಟು - ನೀಲಗಿರಿ ಬಯೋಸ್ಪಿಯರ್ ರಿಸರ್ವ್
3) ಮಂಕಿಡಿಯಾ ಬುಡಕಟ್ಟು - ಸಿಂಪ್ಲಿಪಾಲ್ ಬಯೋಸ್ಪಿಯರ್ ರಿಸರ್ವ್
4) ಮಾಲ್ಧಾರಿ ಬುಡಕಟ್ಟು - ಕಚ್ ಬಯೋಸ್ಪಿಯರ್ ರಿಸರ್ವ್.
A. 1 ಮತ್ತು 3 ಮಾತ್ರ
B. 1 ಮತ್ತು 4 ಮಾತ್ರ.
C. 1, 3 ಮತ್ತು 4 ಮಾತ್ರ.
D. ಮೇಲಿನ ಎಲ್ಲವೂ.

132.'ಬಾರಾ-ಲಾಚ್ ಲಾ ಕಣಿವೆಮಾರ್ಗ' ಇತ್ತೀಚೆಗೆ ಸುದ್ದಿಯಲ್ಲಿತ್ತು. ಈ ನಿಟ್ಟಿನಲ್ಲಿ ಈ ಕೆಳಗಿನ ನೀಡಲಾದ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1. ಇದು ಕಾರಕೋರಂ ಶ್ರೇಣಿಯಲ್ಲಿದೆ.
2. ಇದು ಹಿಮಾಚಲ ಪ್ರದೇಶದ ಲಾಹೌಲ್ ಜಿಲ್ಲೆಯನ್ನು ಲಡಾಖ್‌ನ ಲೇಹ್ ಜಿಲ್ಲೆಗೆ ಸಂಪರ್ಕಿಸುತ್ತದೆ.
3. ಇದು ಭಾಗಾ ನದಿ ಮತ್ತು ಯುನಮ್ ನದಿಯ ನಡುವೆ ಗಡಿ ವಿಭಜನೆಯಾಗಿ ನೆಲೆಗೊಂಡಿದೆ.
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನ ಎಲ್ಲವೂ.

133. 'ಆಯುಷ್ಮಾನ್‌ ಭಾರತ್‌ ಅಥವಾ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ' (PMJAY) ಕುರಿತ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1.ಇದು ಒಂದು ಅರ್ಹತೆ ಆಧಾರಿತ ಯೋಜನೆಯಾಗಿದ್ದು ಭಾರತದಾದ್ಯಂತ ಎಲ್ಲಾ ಸಾರ್ವಜನಿಕ ಮತ್ತು ಎಂಪನೇಲ್ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೇವೆಗಳನ್ನು ಪಡೆಯಬಹುದು.
2.ಆಯುಷ್ಮಾನ್ ಭಾರತ್ ಯೋಜನೆಯಡಿ ಕೋವಿಡ್-19 ಚಿಕಿತ್ಸೆಯೂ ಸೇರ್ಪಡೆಯಾಗಿದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

134.'ಹೋಪ್ (HOPE) ಬಾಹ್ಯಾಕಾಶ ನೌಕೆ' ಕುರಿತ  ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1. ಇದು ಜಪಾನ್‌ ಸಹಭಾಗಿತ್ವದಲ್ಲಿ, ಸಂಯುಕ್ತ ಅರಬ್ ಸಂಸ್ಥಾನ(ಯುಎಇ) ನಿರ್ಮಿಸಿರುವ ಬಾಹ್ಯಾಕಾಶ ನೌಕೆಯಾಗಿದೆ.
2. ಮಂಗಳ ಗ್ರಹದ ಕೆಳ ವಾತಾವರಣದಲ್ಲಿನ ವಾತಾವರಣ ಮತ್ತು ಹವಾಮಾನ ಘಟನೆಗಳನ್ನು ಅಧ್ಯಯನ ಮಾಡುತ್ತದೆ.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

135. ಇತ್ತೀಚೆಗೆ ಸುದ್ದಿಯಲ್ಲಿದ್ದ ಸಕ್ರಿಯ ಜ್ವಾಲಾಮುಖಿಗಳು & ಅವುಗಳಿರುವ ದೇಶಗಳ ಸರಿಯಾದ ಜೋಡಿ ಗುರುತಿಸಿ.
1. ಮೌಂಟ್ ಮೆರಾಪಿ — ಇಂಡೋನೇಷ್ಯಾ.
2. ಒಲ್‌ ಡೋಯಿನ್ಯೋ ಲೆಂಗಾಯಿ — ತಾಂಜಾನಿಯಾ.
3. ಎರ್ಟಾ ಏಲ್ — ಇಂಥಿಯೋಪಿಯಾ‌
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನ ಎಲ್ಲವೂ.

136. ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಿಂದ (ಸಿಐಐಎಲ್) ಅಧಿಕೃತವಾಗಿ ಘೋಷಿಸಲಾದ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ  ಅಳಿವಿನಂಚಿನಲ್ಲಿರುವ `ಸೈಮರ್ ಬುಡಕಟ್ಟು ಭಾಷೆ'ಯು ಯಾವ ರಾಜ್ಯದಲ್ಲಿ ಕಂಡುಬರುವುದು?.
A) ತ್ರಿಪುರ.
B) ನಾಗಾಲ್ಯಾಂಡ್.
C) ಆಸ್ಸಾಂ.
D) ರಾಜಸ್ಥಾನ.

137. ಇತ್ತೀಚೆಗೆ ಸುದ್ದಿಯಲ್ಲಿದ್ದ 'ಸಕ್ಟೆಂಗ್‌ ಅಭಯಾರಣ್ಯ ಪ್ರದೇಶ'ವು ಇವೆರಡು ದೇಶಗಳ ನಡುವಿನ ವಿವಾದಿತ ಪ್ರದೇಶವಾಗಿದೆ.
A) ಭೂತಾನ್‌ ಮತ್ತು ಭಾರತ.
B) ಚೀನಾ ಮತ್ತು ಭೂತಾನ್‌.
C) ನೇಪಾಳ ಮತ್ತು ಭಾರತ.
D) ಚೀನಾ ಮತ್ತು ಭಾರತ.

138. ಫೈನಾನ್ಶಿಯಲ್ ಆಕ್ಷನ್ ಟಾಸ್ಕ್‌ ಫೋರ್ಸ್ (FATF) ಕುರಿತ  ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಇದು ನ್ಯೂಯಾರ್ಕ್ ಮೂಲದ ಅಂತರ ಸರ್ಕಾರಿ ಮಟ್ಟದ ಸಂಸ್ಥೆಯಾಗಿದೆ.
2. ಪಾಕಿಸ್ತಾನವನ್ನು ಉಗ್ರ ಚಟುವಟಿಕೆಗಳಿಂದ ಸುಧಾರಿಸಲು ಕೊನೆಯ ಎಚ್ಚರಿಕೆ ನೀಡುವ ಮೂಲಕ ‘ಕಡು­ಬೂದು’ ಪಟ್ಟಿಯಲ್ಲಿ ಸೇರಿಸಿದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

139. 'ಅಶ್ಗಬತ್ ಒಪ್ಪಂದ' (Ashgabat Agreement) ವು ಬಹುರಾಷ್ಟ್ರೀಯ ಸಾರಿಗೆ ಒಪ್ಪಂದವಾಗಿದ್ದು, ಇದು ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾಗಣೆ ಕಾರಿಡಾರ್ ಅನ್ನು ಮಧ್ಯ ಏಷ್ಯಾವನ್ನು ಪರ್ಷಿಯನ್ ಗಲ್ಫ್‌ನೊಂದಿಗೆ ಸಂಪರ್ಕಿಸುತ್ತದೆ.
— ಈ ಒಪ್ಪಂದಕ್ಕೊಳಪಡುವ ದೇಶಗಳು ಯಾವವೆಂದರೆ;
1.ಕಝಾಕಿಸ್ತಾನ್ 2.ಇರಾನ್ 3.ಭಾರತ 4.ಪಾಕಿಸ್ತಾನ 5.ಅಫ್ಘಾನಿಸ್ತಾನ.

A) 2, 3 ಮತ್ತು 5 ಮಾತ್ರ.
B) 2, 3, 4 ಮತ್ತು 5 ಮಾತ್ರ.
C) 1,3 ಮತ್ತು 5 ಮಾತ್ರ.
D) 1, 2, 3 ಮತ್ತು 4 ಮಾತ್ರ.

140. ಇತ್ತೀಚೆಗೆ  "ಓಷನ್ಸ್ ಅಂಡ್ ಕ್ರಯೊಸ್ಪಿಯರ್" ಎಂಬ ವಿಶೇಷ ವರದಿಯನ್ನು ಬಿಡುಗಡೆ ಮಾಡಿದ  ಸಂಸ್ಥೆ?
A) UNFCC.
B) WMO.
C) ಗ್ಲೋಬಲ್ ಗ್ರೀನ್ ಗ್ರೋತ್ ಇನ್‌ಸ್ಟಿಟ್ಯೂಟ್ ಹಾಗೂ CSTEP.
D) IPCC..

... ಸರಿಯುತ್ತರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

No comments:

Post a Comment