•► ️'ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ' (NRETP):
( National Rural Economic Transformation Project)
━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)
ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ ಜಾರಿಗೆ ಕೇಂದ್ರ ಸಂಪುಟ ಅನುಮೋದನೆ.
ವಿಶ್ವ ಬ್ಯಾಂಕ್ ನ ( ಐಆರ್ ಡಿಬಿ) ಸಾಲದ ನೆರವಿನೊಂದಿಗೆ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ) ಅಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ(ಎನ್ ಆರ್ ಇಟಿಪಿ)ಯನ್ನು (Feb 2019) ಕೇಂದ್ರ ಸರ್ಕಾರವು ಜಾರಿಗೊಳಿಸಿ ಅನುಮೋದನೆ ನೀಡಿತು.
ಜುಲೈ 2011 ರಲ್ಲಿ ವಿಶ್ವಬ್ಯಾಂಕ್‍ನಿಂದ ಅನುಮೋದಿಸಿದ (500 ಮಿಲಿಯನ್ ನೆರವಿನ) ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಗೆ (ಎನ್‌ಆರ್‌ಎಲ್‌ಪಿ) ಹೆಚ್ಚುವರಿ ಹಣಕಾಸು ನೆರವಾಗಿ 'ರಾಷ್ಟ್ರೀಯ ಗ್ರಾಮೀಣ ಆರ್ಥಿಕ ಪರಿವರ್ತನೆ ಯೋಜನೆ' (ಎನ್‌ಆರ್‌ಇಟಿಪಿ)ಯು ಜಾರಿಯಾಗಿರುತ್ತದೆ.
ಪ್ರಸ್ತುತ 13 ರಾಜ್ಯಗಳು, 162 ಜಿಲ್ಲೆಗಳು ಮತ್ತು 575 ಬ್ಲಾಕ್‌ಗಳಲ್ಲಿ ಜಾರಿಗೆ ಬರುತ್ತಿರುವ ಎನ್‌ಆರ್‌ಎಲ್‌ಪಿ, ಇಲ್ಲಿಯವರೆಗೆ ಬಡ ಗ್ರಾಮೀಣ ಕುಟುಂಬಗಳಿಂದ 8.8 ದಶಲಕ್ಷಕ್ಕೂ ಹೆಚ್ಚು ಮಹಿಳೆಯರನ್ನು 750,000 ಸ್ವ-ಸಹಾಯ ಗುಂಪುಗಳಾಗಿ (SHGs) ಸಜ್ಜುಗೊಳಿಸಿದೆ. ಈ ಸ್ವಸಹಾಯ ಗುಂಪುಗಳನ್ನು ಮತ್ತಷ್ಟು 48,700 ಗ್ರಾಮ ಸಂಸ್ಥೆಗಳು ಮತ್ತು 2900 ಕ್ಲಸ್ಟರ್ / ಗ್ರಾಮ ಪಂಚಾಯತ್ ಮಟ್ಟದ ಫೆಡರೇಷನ್‌ಗಳಾಗಿ ಸಂಯೋಜಿಸಲಾಗಿದೆ.
ಪ್ರಯೋಜನಗಳು:
ಎನ್ ಆರ್ ಇ ಟಿಪಿ ಅಡಿಯಲ್ಲಿ ತಾಂತ್ರಿಕ ಸಹಾಯವನ್ನು ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿ ಜೀವನೋಪಾಯ ಉತ್ತೇಜನಕ್ಕೆ ಉನ್ನತ ಮಟ್ಟದಲ್ಲಿ ನೀತಿ ನಿರೂಪಣೆಗಳ ಹಸ್ತಕ್ಷೇಪ ಮಾಡುವುದು ಮತ್ತು ಡಿಜಿಟಲ್ ಹಣಕಾಸು ಲಭ್ಯತೆ ಕ್ರಮಗಳನ್ನು ಹೆಚ್ಚಿಸುವುದು ಮತ್ತು ಜೀವನೋಪಾಯಗಳಿಗೆ ನೆರವಾಗುವ ಉದ್ದೇಶವಿದೆ.
ಪ್ರಮುಖಾಂಶಗಳು:
ಈ ಡಿಎವೈ-ಎನ್ ಆರ್ ಎಲ್ ಎಂ ಅಡಿಯಲ್ಲಿ ವಿಶೇಷವಾಗಿ ಬಡವರಲ್ಲಿ ಅತಿ ಕಡುಬಡವರು ಮತ್ತು ದುರ್ಬಲ ಸಮುದಾಯಗಳು ಮತ್ತು ಅವುಗಳ ಆರ್ಥಿಕ ಸೇರ್ಪಡೆಗೆ ವಿಶೇಷ ಒತ್ತು ನೀಡಲಾಗುವುದು.
ಗ್ರಾಮೀಣ ಉತ್ಪನ್ನಗಳ ಸುತ್ತ ಮೌಲ್ಯ ಸರಣಿ ಸೃಷ್ಟಿಸುವುದು, ಹಣಕಾಸು ಸೇರ್ಪಡೆ ಮತ್ತಿತರ ಪರ್ಯಾಯ ಪ್ರಾಯೋಗಿಕ ವಿಧಾನಗಳ ಮೂಲಕ ಎನ್ ಆರ್ ಇ ಟಿಪಿ ಅಡಿಯಲ್ಲಿ ಹೊಸ ಆವಿಷ್ಕಾರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಜೀವನೋಪಾಯ, ಡಿಜಿಟಲ್ ಹಣಕಾಸು ಲಭ್ಯತೆ ಮತ್ತು ಜೀವನೋಪಾಯ ಉತ್ತೇಜನ ಕಾರ್ಯಕ್ರಮಗಳಲ್ಲಿ ಆವಿಷ್ಕಾರಿ ಮಾದರಿಗಳನ್ನು ಪರಿಚಯಿಸಲಾಗುವುದು.
ಡಿಎವೈ-ಎಆರ್ ಎಂ ಎಲ್ ಅಡಿಯಲ್ಲಿ ಪರಸ್ಪರ ಅನುಕೂಲವಾಗುವ ಕಾರ್ಯಕಾರಿ ಸಂಬಂಧ ಒದಗಿಸುವ ಜೊತೆಗೆ ಪಂಚಾಯತ್ ರಾಜ್ ಸಂಸ್ಥೆಗಳು(ಪಿಆರ್ ಐ) ಸಮುದಾಯ ಆಧಾರಿತ ಸಂಸ್ಥೆಗಳು(ಸಿಬಿಒ) ನಡುವೆ ಸಮಾಲೋಚನೆಗೆ ಅಧಿಕೃತ ವೇದಿಕೆ ಒದಗಿಸಲಿದೆ. ಅಲ್ಲದೆ ಎನ್ ಆರ್ ಎಲ್ ಎಂ ಅಡಿಯಲ್ಲಿ ಹಲವು ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಜೊತೆಗೂಡಿ ಎಲ್ಲ ಬಗೆಯ ಎಲ್ಲ ರಾಜ್ಯಗಳ ಗ್ರಾಮೀಣ ಜೀವನೋಪಾಯ ಯೋಜನೆಗಳನ್ನು ಒಂದೆಡೆ ತಂದು ಅದರಡಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು.

No comments:
Post a Comment