"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 1 August 2020

•► ️PART XVI — ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : (IAS/KAS Exam Preparation Short Notes in Kannada)

•► ️PART XVI — ಕನ್ನಡದಲ್ಲಿ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್ : 
(IAS/KAS Exam Preparation Short Notes in Kannada)
━━━━━━━━━━━━━━━━━━━━━━━━━
…ಮುಂದುವರೆದ ಭಾಗ.

132.2019ರ ಮಾನವ ಅಭಿವೃದ್ಧಿ ಸೂಚ್ಯಂಕ (HDI-human development index) =
ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ)ದಿಂದ ಈ ವರದಿ ಬಿಡುಗಡೆ + ಒಟ್ಟು 189 ದೇಶಗಳನ್ನು ಮೂಲವಾಗಿಟ್ಟುಕೊಂಡು ಈ ವರದಿ ತಯಾರಿಕೆ + ಭಾರತದ ಸ್ಥಾನ 129ಕ್ಕೆ ಏರಿಕೆ + ಮೊದಲ ಮೂರು ಸ್ಥಾನ-ನಾರ್ವೆ-ಸ್ವಿಟ್ಜರ್‌ಲೆಂಡ್‌-ಐರ್ಲೆಂಡ್ ‌+ ದಕ್ಷಿಣ ಏಷ್ಯಾವು ಜೀವಿತಾವಧಿಯಲ್ಲಿ ಏರಿಕೆಯನ್ನು ಕಂಡಿದೆ. 1990 ಮತ್ತು 2018ರ ನಡುವೆ, ಜನನದ ಮತ್ತು ಜೀವಿತಾವಧಿ 11.6 ವರ್ಷಗಳು ಹೆಚ್ಚಾಗಿದೆ. ತಲಾ ಆದಾಯವು ಶೇ. 250ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, ಬಹು ಆಯಾಮದ ಬಡತನದವು ಭಾರತ ಸೇರಿದಂತೆ ಇತರ ದೇಶಗಳಲ್ಲೂ ಕಂಡು ಬರುತ್ತಿದೆ. 1.3 ಬಿಲಿಯನ್‌ ಬಹು ಆಯಾಮದ ಬಡವರಲ್ಲಿ, 661 ಮಿಲಿಯನ್‌ ಜನರು ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿದ್ದಾರೆ. ಇದು ವಿಶ್ವದ 101 ದೇಶಗಳಲ್ಲಿ ವಾಸಿಸುವ ಬಡವರ ಅರ್ಧದಷ್ಟು ಭಾಗವನ್ನು ಹೊಂದಿದೆ. + ಜಗತ್ತಿನ ಒಟ್ಟು ಬಡವರ ಶೇ. 41ಕ್ಕಿಂತ ಹೆಚ್ಚು ಪಾಲನ್ನು ದಕ್ಷಿಣ ಏಷ್ಯಾ ಹೊಂದಿದೆ. ಭಾರತ ಗಮನಾರ್ಹ ಪ್ರಗತಿಯ ಹೊರತಾಗಿಯೂ, ಇದು 1.3 ಬಿಲಿಯನ್‌ ಬಡವರಲ್ಲಿ ಶೇಕಡಾ 28ರಷ್ಟು ಪಾಲನ್ನು ಹೊಂದಿದೆ. + ಲಿಂಗ ಅಭಿವೃದ್ಧಿ ಸೂಚ್ಯಂಕದಲ್ಲಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್‌ ಎರಡನೇ ಸ್ಥಾನದಲ್ಲಿದ್ದರೆ, ಕೊರಿಯಾ ಗಣರಾಜ್ಯ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾದಲ್ಲಿ ಲಿಂಗಾನುಪಾತಗಳ ಅಂತರ ಹೆಚ್ಚಾಗಿದೆ. ಸಿಂಗಾಪುರದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರದ ಕಡಿಮೆ ಪ್ರಮಾಣದಲ್ಲಿದೆ. + ದಕ್ಷಿಣ ಏಷ್ಯಾದ ಶೇ. 31ರಷ್ಟು ಮಹಿಳೆಯರು ತನ್ನ ಸಂಗಾತಿಯಿಂದ ಹಿಂಸಾಚಾರ ಅನುಭವಿಸಿದ್ದಾರೆ ಎಂದು ವರದಿ ಹೇಳಿದೆ. + ಭಾರತವು ಲಿಂಗ ಅಸಮಾನತೆ ಸೂಚ್ಯಂಕದಲ್ಲಿ 162 ದೇಶಗಳ ಪೈಕಿ 122 ಸ್ಥಾನದಲ್ಲಿದೆ. ಭಾರತದಲ್ಲಿ ಪುರುಷ ಮತ್ತು ಸ್ತ್ರೀ ನಡುವೆ ಅಸಮಾನತೆಗಳು ಹೆಚ್ಚಿವೆ. ಇದು ಪರೋಕ್ಷವಾಗಿ ಮಹಿಳೆಯರು ಸಶಕ್ತಗೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ವರದಿ ಹೇಳಿದೆ.

133.2020ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ (World Press Freedom Index) =
ಪ್ಯಾರಿಸ್ ಮೂಲದ Reporters Sans Frontieres (RSF), ರಿಪೋಟರ್ಸ್ ವಿತೌಟ್ ಬಾರ್ಡರ್ಸ್ (ಆರ್‌ಡಬ್ಲ್ಯೂಬಿ)
'ಗಡಿಗಳ ಕಟ್ಟುಪಾಡಿಲ್ಲದ ವರದಿಗಾರರು' ಎಂಬ ಅಂತರ್ ರಾಷ್ಟ್ರೀಯ ಸಂಸ್ಥೆಯಿಂದ ಪ್ರತೀ ವರ್ಷ ಬಿಡುಗಡೆ + ಇದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಘಟನೆ. ಪ್ರಪಂಚದ ಆಯಾ ರಾಷ್ಟ್ರಗಳ ಪತ್ರಿಕಾ ಸ್ವಾತಂತ್ರ್ಯದ ಕುರಿತು ವಿಶ್ಲೇಷಣೆ  + 180 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 142, ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಸ್ಥಾನ ಕುಸಿತ, 140ನೇ ಸ್ಥಾನದಲ್ಲಿತ್ತು. + ನಾರ್ವೆ ದೇಶ ಪ್ರಥಮ ಸ್ಥಾನ +  ಚೀನಾ 177 ಹಾಗೂ ಉತ್ತರ ಕೊರಿಯಾ 180ನೇ ಸ್ಥಾನದಲ್ಲಿದೆ. ಇಲ್ಲಿ ಪತ್ರಿಕಾ ಸ್ವಾತಂತ್ರ್ಯ ಸಂಪೂರ್ಣವಾಗಿ ನಿಷೇಧಿಸಲಾಗಿದೆ + ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕವನ್ನು ಪ್ರಥಮ ಬಾರಿಗೆ 2002ರಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಭಾರತದ ಮಾಧ್ಯಮಗಳು 80ನೇ ಸ್ಥಾನ ಪಡೆದುಕೊಂಡಿದ್ದವು.+ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ145ನೇ ಸ್ಥಾನ, ಬಾಂಗ್ಲಾದೇಶ 151ನೇ ಸ್ಥಾನ, ನೇಪಾಳ 112ನೇ ಸ್ಥಾನ, ಶ್ರೀಲಂಕಾ 127.


134.2020ರ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕ (Global Democracy Index) =
ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು)ನಿಂದ ವಾರ್ಷಿಕ ವರದಿ ಪ್ರಕಟ + 2006 ರಲ್ಲಿ ಪ್ರಜಾಪ್ರಭುತ್ವ ಸೂಚ್ಯಂಕ ಪ್ರಾರಂಭ + ಭಾರತ 51ನೇ ಸ್ಥಾನ + 2019 ರ ಸೂಚ್ಯಂಕದಲ್ಲಿ ಪ್ರಜಾಪ್ರಭುತ್ವದ ಸರಾಸರಿ ಜಾಗತಿಕ ಅಂಕಗಳು 2018 ರಲ್ಲಿದ್ದ 5.48 ರಿಂದ 5.44 ಕ್ಕೆ ಕುಸಿತ + ಪ್ರಜಾಪ್ರಭುತ್ವ ಸೂಚ್ಯಂಕ ಪಟ್ಟಿಯಲ್ಲಿ ನಾರ್ವೆ ಪ್ರಥಮ ಸ್ಥಾನ + ಐಸ್‌ಲ್ಯಾಂಡ್‌ ಹಾಗೂ ಸ್ವೀಡನ್‌ ಈ ಪಟ್ಟಿಯಲ್ಲಿ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ, ನ್ಯೂಜಿಲೆಂಡ್‌ 4ನೇ ಸ್ಥಾನ, ಫಿನ್‌ಲ್ಯಾಂಡ್‌ (5), ಐರ್ಲೆಂಡ್‌ (6), ಡೆನ್ಮಾರ್ಕ್‌(7) , ಕೆನಡಾ (8) , ಆಸ್ಟ್ರೇಲಿಯಾ (9) ಹಾಗೂ ಸ್ವಿಟ್ಜರ್ಲೆಂಡ್‌ (10) ಟಾಪ್‌ 10 ಪಟ್ಟಿಯಲ್ಲಿವೆ. + ಚೀನಾ 153ನೇ ಸ್ಥಾನದಲ್ಲಿದ್ದು, ಉತ್ತರ ಕೊರಿಯಾ ಜಾಗತಿಕ ಸೂಚ್ಯಂಕದಲ್ಲಿ ಕಟ್ಟ ಕಡೆಯ ಅಂದರೆ 167ನೇ ಸ್ಥಾನ + ಪ್ರಜಾಪ್ರಭುತ್ವದ ವಿವಿಧ ಪ್ರಕ್ರಿಯೆ ಮತ್ತು ಲಕ್ಷಣಗಳನ್ನು 5 ಸೂಚಿಗಳಾಗಿ ವಿಂಗಡಿಸಲಾಗಿದ್ದು, ಐದೂ ಸೂಚಿಗಳ ಅಡಿ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು.
 ಆಯಾ ಸೂಚಿಯಲ್ಲಿ ಆಯಾ ದೇಶಗಳು ಪಡೆದ ಅಂಕಗಳನ್ನು ಆಧರಿಸಿ ಅವುಗಳ ರ‍್ಯಾಂಕ್‌ ಅನ್ನು ನಿಗದಿ +
1. ಚುನಾವಣಾ ಪ್ರಕ್ರಿಯೆ ಮತ್ತು ಬಹುತ್ವಕ್ಕೆ ಮಾನ್ಯತೆ
2. ಸರ್ಕಾರದ ಕಾರ್ಯವೈಖರಿ
3. ರಾಜಕೀಯ ಭಾಗವಹಿಸುವಿಕೆ
4. ರಾಜಕೀಯ ಸಂಸ್ಕೃತಿ
5. ನಾಗರಿಕ ಸ್ವಾತಂತ್ರ್ಯ

135.ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ / ಜಾಗತಿಕ ಭ್ರಷ್ಟಚಾರ ಪಾರದರ್ಶಕ ಗ್ರಹಿಕಾ ಸೂಚ್ಯಂಕ (ಸಿಪಿಐ-2019) (Global Corruption Perception Index) =  
ಜರ್ಮನಿಯಲ್ಲಿ 1993ರಲ್ಲಿ ಸ್ಥಾಪನೆಯಾದ ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಷನಲ್‌ (ಟಿಐ) ಎನ್ನುವ ಸರ್ಕಾರೇತರ ಸಂಸ್ಥೆ ಪ್ರತಿ ವರ್ಷ ಜಾಗತಿಕ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು ತಯಾರಿಸುತ್ತದೆ + ಸಾರ್ವಜನಿಕ ವಲಯದಲ್ಲಿ ನಡೆಯುವ ಭ್ರಷ್ಟಾಚಾರ ಕುರಿತು ಸಮೀಕ್ಷೆ ನಡೆಸಿ, ಅದರ ಆಧಾರದ ಮೇಲೆ ರ‍್ಯಾಂಕ್​ ನೀಡಲಾಗುತ್ತದೆ + ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಈ ಪಟ್ಟಿಯನ್ನು ಬಿಡುಗಡೆ + 180 ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ, 100 ಅಂಕಗಳಿಗೆ ಭಾರತ 41 ಅಂಕ ಪಡೆದಿದು 80ನೇ ಸ್ಥಾನ ಪಡೆದಿದೆ. ಕಳೆದ ವರ್ಷ 78ನೇ ಸ್ಥಾನ, ಒಟ್ಟು 100 ಪಾಯಿಂಟ್ಸ್‌ಗಳ ಪೈಕಿ 48 ಪಾಯಿಂಟ್ಸ್‌ ಪಡೆದಿದೆ. + ನ್ಯೂಜಿಲೆಂಡ್‌ ಮತ್ತು ಡೆನ್ಮಾರ್ಕ್‌ 87 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಸಿರಿಯಾ, ದಕ್ಷಿಣ ಸುಡಾನ್‌, ಸೊಮಾಲಿಯಾ ತಲಾ 13, 12 ಮತ್ತು 9 ಅಂಕಗಳನ್ನು ಪಡೆದು ಕೊನೆಯ ಸ್ಥಾನಗಳಲ್ಲಿವೆ. + ಫಿನ್​ಲೆಂಡ್​ಗೆ 3ನೇ ಸ್ಥಾನ, ಸಿಂಗಪೂರ್‌ಗೆ 4, ಸ್ವೀಡನ್‌ಗೆ 5 ಹಾಗೂ ಸ್ವಿಟ್ಜರ್​​ಲೆಂಡ್​ಗೆ ಆರನೇ ಸ್ಥಾನ ದೊರೆತಿದ್ದು, ವಿಶ್ವದ ಭ್ರಷ್ಟಾಚಾರ ರಹಿತ ದೇಶಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಇನ್ನೂ ಕೊನೆಯ 6 ಸ್ಥಾನದಲ್ಲಿ ವೆನುಜುವೆಲ್ಲಾ, ಯೆಮನ್‌, ಸಿರಿಯಾ, ದಕ್ಷಿಣ ಸುಡಾನ್, ಸೊಮಾಲಿಯಾ ಇವೆ.

136.2019ರ ಜಾಗತಿಕ ಆವಿಷ್ಕಾರ ಸೂಚ್ಯಂಕ (global innovation index-ಜಿಐಐ) =
ಜಿಐಐ ಪಟ್ಟಿಯನ್ನು ಕಾರ್ನೆಲ್‌ ವಿವಿ, ಇನ್‌ಸೀಡ್‌ ಮತ್ತು ವಿಶ್ವ ಬೌದ್ಧಿಕ ಆಸ್ತಿಸಂಘಟನೆ(ಡಬ್ಲ್ಯುಐಪಿಒ) ಹಾಗೂ ಜಿಐಐ ನಾಲೆಜ್‌ ಪಾರ್ಟನರ್‌ಗಳು ಸಿದ್ಧಪಡಿಸುತ್ತವೆ. + 129 ದೇಶಗಳನ್ನು ಒಳಗೊಂಡ 12ನೇ ಆವೃತ್ತಿಯ ಜಿಐಐ ರ‍್ಯಾಂಕ್‌ಗಳು ಬಿಡುಗಡೆಯಾಗಿದ್ದು, 80 ಅಂಶಗಳನ್ನು ಆಧರಿಸಿ ಸ್ಥಾನಗಳ ನಿಗದಿ. + ‘ಮುಂದಿನ ದಶಕದ ವೈದ್ಯಕೀಯ ಆವಿಷ್ಕಾರ ಸನ್ನಿವೇಶ ಮೌಲ್ಯಮಾಪನ’ ಈ ವರ್ಷದ ಘೋಷಣೆ + ಬೌದ್ಧಿಕ ಆಸ್ತಿಯಿಂದ ಮೊಬೈಲ್‌ ಅಪ್ಲಿಕೇಷನ್‌ ಸೃಷ್ಟಿ, ಶಿಕ್ಷಣ, ವೆಚ್ಚಗಳು, ವೈಜ್ಞಾನಿಕ ಮತ್ತು ತಾಂತ್ರಿಕ ಅಂಶಗಳನ್ನು ರ‍್ಯಾಂಂಕಿಂಗ್‌ ವೇಳೆ ಪರಾಮರ್ಶೆ ಮಾಡಲಾಗುತ್ತದೆ. +   ಅತ್ಯಧಿಕ ಆವಿಷ್ಕಾರಿ ದೇಶಗಳೆಂಬ ಖ್ಯಾತಿ ಪಡೆದಿರುವ ಸ್ವಿಜರ್ಲೆಂಡ್‌, ಸ್ವೀಡನ್‌ ದೇಶಗಳು ಮೊದಲ ಮತ್ತು ಎರಡನೇ ಸ್ಥಾನ + ಭಾರತ 52ನೇ ಸ್ಥಾನ + ಟಾಪ್‌ 10 ಸ್ಥಾನದಲ್ಲಿರುವ ಇತರೆ ದೇಶಗಳು - ಸ್ವೀಡನ್‌, ಅಮೆರಿಕ, ನೆದರ್ಲೆಂಡ್‌, ಬ್ರಿಟನ್‌, ಫಿನ್ಲೆಂಡ್‌, ಡೆನ್ಮಾರ್ಕ್‌, ಸಿಂಗಾಪುರ, ಜರ್ಮನಿ, ಇಸ್ರೇಲ್‌.


137.2019ರ ಜಾಗತಿಕ ಹಸಿವು ಸೂಚ್ಯಂಕ (Global Hunger Index) =
 ಜರ್ಮನಿಯ ಸ್ವಯಂಸೇವಾ ಸಂಸ್ಥೆ ‘ವೆಲ್‌ತ್ಹಂಗರ್‌ಲೈಫ್’ ಮತ್ತು ಐರ್ಲೆಂಡ್‌ನ ‘ಕನ್ಸರ್ನ್‌ ವಲ್ಡ್‌ವೈಡ್’ ಜಂಟಿಯಾಗಿ ವರದಿ ಸಿದ್ಧಪಡಿಸಿವೆ. + ಒಟ್ಟು 117 ರಾಷ್ಟ್ರಗಳನ್ನೊಳಗೊಂಡ ಪಟ್ಟಿ ಇದಾಗಿದೆ. + ಅಪೌಷ್ಟಿಕತೆ, ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕದ ಮಕ್ಕಳು ಮತ್ತು ಶಿಶುಮರಣದ ಪ್ರಮಾಣವನ್ನು ಆಧರಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ. ಶಿಶುಮರಣ ಹೊರತುಪಡಿಸಿ ಉಳಿದ ಮೂರೂ ಕ್ಷೇತ್ರಗಳಲ್ಲಿ ಭಾರತದ ಸ್ಥಿತಿ ಆಶಾದಾಯಕವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. + ಅತಿಹೆಚ್ಚು ಹಸಿವಿನಿಂದ ಬಳಲುತ್ತಿರುವವರಿರುವ 45 ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ವರದಿ ತಿಳಿಸಿದೆ. + ಭಾರತ 102ನೇ ಸ್ಥಾನ + ನೆರೆಯ ದೇಶಗಳಾದ ಚೀನಾ (25),ಪಾಕಿಸ್ತಾನ 94, ಬಾಂಗ್ಲಾದೇಶ 88 ಮತ್ತು ಶ್ರೀಲಂಕಾ 66ನೇ ಸ್ಥಾನದಲ್ಲಿವೆ. + ‘ಭಾರತದಲ್ಲಿ 6ರಿಂದ 23 ತಿಂಗಳವರೆಗಿನ ವಯಸ್ಸಿನ ಶೇ 9.6ರಷ್ಟು ಶಿಶುಗಳಿಗೆ ಕನಿಷ್ಠ ಆಹಾರ ನೀಡಲಾಗುತ್ತಿದೆ. 2015–16ರ ಹೊತ್ತಿಗೆ, ಭಾರತದ ಶೇ 90ರಷ್ಟು ಮನೆಗಳು ಸುಧಾರಿತ ಕುಡಿಯುವ ನೀರಿನ ಲಭ್ಯತೆ ಹೊಂದಿವೆ. ಆದರೆ, ಶೇ 39ರಷ್ಟು ಮನೆಗಳಿಗೆ ಶೌಚಾಲಯ ಸೌಲಭ್ಯ ಹೊಂದಿರಲಿಲ್ಲ (ಐಐಪಿಎಸ್ ಮತ್ತು ಐಸಿಎಫ್ 2017)’ ಎಂದು ವರದಿ ಹೇಳಿದೆ.

No comments:

Post a Comment