"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 24 August 2020

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (ಸರಿ ಉತ್ತರಗಳೊಂದಿಗೆ) (Daily 10 Multiple Choice Questions with Answers)

•► ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (ಸರಿ ಉತ್ತರಗಳೊಂದಿಗೆ)
 (Daily 10 Multiple Choice Questions with Answers)
━━━━━━━━━━━━━━━━━━━━━━━━━━━━━━━━━━━━━━━━


141.ಸಿಂಧೂ ನದಿಯ ಜಲಾನಯನ ಪ್ರದೇಶವು ಈ ಕೆಳಕಂಡ ದೇಶಗಳೊಂದಿಗೆ ಹಂಚಿಹೋಗಿದೆ.
A) ಭಾರತ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ.
B) ನೇಪಾಳ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ.
C) ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ.√
D) ಭಾರತ, ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ.

142. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ  “ಕ್ಸೆನೋಬೊಟ್ಸ್”(Xenobots) ಎಂಬ ಪದವು ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದುದಾಗಿದೆ?
A) ಇದು ಸ್ವಯಂಚಾಲಿತ ಪ್ರೊಗ್ರಾಮೆಬಲ್ ಮಾಲ್ವೇರ್ ಆಗಿದ್ದು ಸಿಸ್ಟಮ್ ಸೆನ್ಸಿಟಿವ್ ಫೈಲ್‌ಗಳಲ್ಲಿ ಅನುಚಿತವಾಗಿ ಮಧ್ಯಪ್ರವೇಶಿಸುವ ಕಾರ್ಯಾಚರಣೆ.
B) COVID ಸ್ಕ್ರೀನಿಂಗ್ ಮತ್ತು ಕಣ್ಗಾವಲುಗೆ ಸಹಾಯ ಮಾಡುವ ಭಾರತೀಯ ರೈಲ್ವೆಯ ರೋಬೋಟ್.
C) ಸ್ವ-ಗುಣಪಡಿಸುವ (self- healing) ಸಾಮರ್ಥ್ಯ ಹೊಂದಿರುವ ವಿಶ್ವದ ಮೊದಲ ಜೈವಿಕ ರೋಬೋಟ್ √
D) ನೈಜ ಮಾನವರಂತೆ ಸಂಭಾಷಿಸುವ ಮತ್ತು ಸಹಾನುಭೂತಿ ತೋರುವ ಸಾಮರ್ಥ್ಯ ಹೊಂದಿದ ವಿಶ್ವದ ಮೊದಲ ಕೃತಕ ಮಾನವ.

143. ಇತ್ತೀಚೆಗೆ  (Feb 2019) ದೇಶದ ಮೊದಲ ರೋಬೋಟ್ ಪೊಲೀಸ್ 'ಕೆಪಿ-ಬೋಟ್' (KP-BOT) - ಹ್ಯೂಮನಾಯ್ಡ್  ಪೊಲೀಸ್ ರೋಬೋ (ಮಾನವರ ಜತೆ ಸಂಭಾಷಣೆ ನಡೆಸುವಂಥ ಯಂತ್ರ ಮಾನವ) ಗೆ ಚಾಲನೆ ನೀಡಿದ ರಾಜ್ಯ?
A) ಕೇರಳ.√
B) ನವ ದೆಹಲಿ.
C) ತಮಿಳು ನಾಡು.
D) ಪಂಜಾಬ್.

144.ಕೆಳಗಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಶ್ಯೋಕ್ ನದಿಯು ಸಿಂಧೂ ನದಿಯ ಉಪನದಿ.
2.ಈ ನದಿಯು ನುಬ್ರ ಕಣಿವೆಯಲ್ಲಿ ಹರಿಯುತ್ತದೆ.
A. 1 ಮಾತ್ರ.
B. 2 ಮಾತ್ರ.
C. ಮೇಲಿನ ಎಲ್ಲವೂ.√
D. ಮೇಲಿನ ಯಾವುದೂ ಅಲ್ಲ.

145.'ಕರಾವಳಿ ನಿಯಂತ್ರಣ ವಲಯ (ಸಿ.ಆರ್.ಜಡ್ -Coastal Regulation Zone) ಅಧಿಸೂಚನೆ 2018' ರ ಕುರಿತ ಕೆಳಗಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಪರಿಗಣಿಸಿ.
1.ಎಲ್ಲ ದ್ವೀಪಗಳ 20 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿಗೆ ಅವಕಾಶ ಇರುವುದಿಲ್ಲ.
2.ಸಮುದ್ರದ ಕಡಿಮೆ ಉಬ್ಬರವಿಳಿತದಿಂದ ಸಮುದ್ರದಲ್ಲಿ 12 ನಾಟಿಕಲ್‌ ಮೈಲುಗಳ ಪ್ರದೇಶವು ಪರಿಸರ ಸೂಕ್ಷ್ಮ ಜೈವಿಕ ವಲಯವೆಂದು ಪರಿಗಣಿಸಲಾಗಿದೆ.
A. 1 ಮಾತ್ರ.√
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

(ಸಿ.ಆರ್.ಝೆಡ್. ೧ರ ಪ್ರಕಾರ, ಹೆಚ್ಚು ಉಬ್ಬರವಿಳಿತದ ರೇಖೆಯಿಂದ ೫೦೦ ಮೀಟರ್ವರೆಗೆ ಅಭಿವೃದ್ಧಿಕರ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ.

ಸಿ.ಆರ್.ಝೆಡ್. ೪ ಪ್ರಕಾರ, ಕಡಿಮೆ ಉಬ್ಬರವಿಳಿತದ ರೇಖೆಯಿಂದ ೧೨ ಕಡಲ ಮೈಲುಗಳವರೆಗೆ ಸಾಗರದೊಳಗಿರುವ ಪ್ರದೇಶಗಳು ಪರಿಸರ ಸೂಕ್ಷ್ಮವಲ್ಲದ ಪ್ರದೇಶಕ್ಕೆ ಸೇರಿದ್ದು)

146.ಇತ್ತೀಚೆಗೆ ಬಿಡುಗಡೆಯಾದ 'ರಾಷ್ಟ್ರೀಯ ಹುಲಿ  ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವರದಿ'ಯ (Jun 2020) ಪ್ರಕಾರ...
1.ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶವಾಗಿದೆ.
2.ಮಹಾರಾಷ್ಟ್ರದಲ್ಲಿಯೇ ಗರಿಷ್ಠ ಹುಲಿಗಳು ಸಾವನ್ನಪ್ಪಿದೆ.
ಮೇಲಿನವುಗಳಲ್ಲಿನ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
A. 1 ಮಾತ್ರ.√
B. 2 ಮಾತ್ರ.
C. ಮೇಲಿನ ಎಲ್ಲವೂ.
D. ಮೇಲಿನ ಯಾವುದೂ ಅಲ್ಲ.

(ಮಧ್ಯ ಪ್ರದೇಶದಲ್ಲಿ ಗರಿಷ್ಠ ಹುಲಿಗಳು ಸಾವನ್ನಪ್ಪಿದೆ. ಮಧ್ಯಪ್ರದೇಶದಲ್ಲಿ ಮಾತ್ರವಾಗಿ 173 ಹುಲಿಗಳು ಬಲಿಯಾಗಿದೆ. ಮಧ್ಯ ಪ್ರದೇಶ ಹೊರತಾಗಿ ಮಹಾರಾಷ್ಟ್ರದಲ್ಲಿ 125, ಕರ್ನಾಟಕದಲ್ಲಿ 111, ಉತ್ತರಾಖಂಡದಲ್ಲಿ 88, ತಮಿಳುನಾಡು ಹಾಗೂ ಅಸ್ಸಾಂನಲ್ಲಿ ತಲಾ 54, ಕೇರಳ ಹಾಗೂ ಉತ್ತರ ಪ್ರದೇಶದಲ್ಲಿ ತಲಾ 35 ಹುಲಿಗಳ ಸಾವು ಸಂಭವಿಸಿದೆ.
 ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶವಾಗಿದ್ದು, ಅಲ್ಲಿ 526 ಹುಲಿಗಳಿವೆ.)

147. 'ನವರೂಜ್‌ ಹಬ್ಬ(Nowruz)'ದ ಕುರಿತ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
1.ಇದು ಇಸ್ಲಾಂ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದು.
2.ಒಮರ್ ಖಯ್ಯಾಂ ‘ನವರೂಜ್ ನಾಮಾ’ ಬರೆದಿದ್ದಾನೆ.
3.ಪ್ರತಿವರ್ಷ ಮಾರ್ಚ್‌ 21 'ಅಂತರರಾಷ್ಟ್ರೀಯ ನವರೂಜ್ ರಜೆ'ಯಾಗಿ ವಿಶ್ವಸಂಸ್ಥೆಯಿಂದ ಘೊಷಿಸಲಾಗಿದೆ.
A. 1 ಮತ್ತು 3 ಮಾತ್ರ
B. 3 ಮಾತ್ರ.
C. 2 ಮತ್ತು 3 ಮಾತ್ರ.√
D. ಮೇಲಿನ ಎಲ್ಲವೂ.

 ('ನವರೋಜ್ ಹಬ್ಬ'ವು ಪಾರ್ಸಿಗಳ ಹೊಸವರ್ಷ ಆಚರಣೆಯ ಹಬ್ಬವಾಗಿದೆ.)

148.ಈ ಕೆಳಗಿನ ಯಾವ ಘಟನೆ-ಗಳು 'ಅಸಹಕಾರ ಚಳವಳಿ'ಗೆ (NCM) ಸಂಬಂಧಿಸಿವೆ?
1. ಅನ್ನಿ ಬೆಸೆಂಟ್‍ರ ಬಂಧನ
2. ಮಲಬಾರ್‌ನ ಮಾಪ್ಪಿಲಾ ದಂಗೆ
3. ಚೌರಿ ಚೌರಾ ಹಿಂಸೆ
4. ಗಾಂಧಿ ಮತ್ತು ಲಾರ್ಡ್ ರೀಡಿಂಗ್‍ರ ಮಾತುಕತೆ
— ಕೆಳಗೆ ನೀಡಿರುವ ಸರಿಯಾದ ಉತ್ತರವನ್ನು ಆರಿಸಿ.
A) 3 ಮಾತ್ರ
B) 3 ಮತ್ತು 4 ಮಾತ್ರ.√
C) 1 ಮತ್ತು 2 ಮಾತ್ರ.
D) ಮೇಲಿನ ಎಲ್ಲವೂ.
 
149. ಈ ಕೆಳಗಿನವುಗಳಲ್ಲಿ ಯಾವವು ಭಾರತದ 'ಗಡಿ‌ ಮರು ನಿರ್ಣಯ ಆಯೋಗ'(ಡಿಲಿಮಿಟೇಶನ್ ಕಮಿಷನ್) ನ ಪ್ರಮುಖ ಕಾರ್ಯಗಳಾಗಿವೆ?
1. ರಾಜ್ಯದ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವುದು.
2. ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದಲ್ಲಿ ಚುನಾವಣಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವುದು.
3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಸ್ಥಾನಗಳನ್ನು ಗುರುತಿಸುವುದು.
— ಕೆಳಗೆ ನೀಡಿರುವ ಸರಿಯಾದ ಉತ್ತರವನ್ನು ಆರಿಸಿ.
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ √
C) 2 ಮತ್ತು 3 ಮಾತ್ರ
D) ಮೇಲಿನ ಎಲ್ಲವೂ.

150.ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ “ಪಿಎಂ-ಸ್ವನಿಧಿ ಯೋಜನೆ (PM Svandihi scheme)” ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಹೆಚ್ಚು ಗ್ರಾಮೀಣ ಭೂಹೀನ ವ್ಯಕ್ತಿಗಳಿಗೆ ರೂ.10,000 ವರೆಗೆ ಕೈಗೆಟುಕುವ ಸಾಲವನ್ನು ನೀಡುವ ವಿಶೇಷ ಮೈಕ್ರೋ-ಕ್ರೆಡಿಟ್ ಸೌಲಭ್ಯ ಯೋಜನೆಯಾಗಿದೆ. 2. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಈ ಯೋಜನೆಯ ಅನುಷ್ಠಾನಕ್ಕೆ ತಾಂತ್ರಿಕ ಪಾಲುದಾರ. 3. ಇದನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭಿಸಿದ್ದು, ಮೇಲ್ವಿಚಾರಣೆಯನ್ನು ಕೂಡ ಇದು ಕೈಗೊಳ್ಳುವುದು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮಾತ್ರ
B) 1 ಮತ್ತು 2 ಮಾತ್ರ
C) 2 ಮತ್ತು 3 ಮಾತ್ರ √
D) ಮೇಲಿನ ಎಲ್ಲವೂ.

(ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಪುನರಾರಂಭಿಸಲು ಕೇಂದ್ರ ಸರ್ಕಾರವು ‘ಪಿಎಂ ಸ್ವನಿಧಿ’ ಯೋಜನೆಯಡಿ ₹ 10 ಸಾವಿರದ ತನಕ ಸಾಲ ನೀಡುವ ಉದ್ದೇಶವನ್ನು ಹೊಂದಿದೆ’)

No comments:

Post a Comment