"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 6 August 2020

•► ️'ಮಿಷನ್ ಶಕ್ತಿ' ಯೋಜನೆ ಹಾಗೂ ದೇಶದ ಮೊಟ್ಟ ಮೊದಲ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿ ಎ-ಸ್ಯಾಟ್ Mission Shakti Operation and Anti-Satellite (ASAT)

•► ️'ಮಿಷನ್ ಶಕ್ತಿ' ಯೋಜನೆ ಹಾಗೂ ದೇಶದ ಮೊಟ್ಟ ಮೊದಲ ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿ ಎ-ಸ್ಯಾಟ್
Mission Shakti Operation and Anti-Satellite (ASAT)
━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)


• ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಮತ್ತು ಇಸ್ರೋ ಜಂಟಿಯಾಗಿ ‘ಮಿಷನ್ ಶಕ್ತಿ’ ಹೆಸರಿನಲ್ಲಿ ಈ ಪ್ರಯೋಗವನ್ನು March 2019ರಲ್ಲಿ  ನಡೆಸಿವೆ. ಆ ಮೂಲಕ ದೇಶದ ಮೇಲೆ ಗೂಢಚಾರಿಕೆ ನಡೆಸುವ ಅಥವಾ ಶತ್ರುದೇಶಗಳ ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈಗ ಭಾರತ ಪಡೆದುಕೊಂಡಿದ್ದು, ರಕ್ಷಣಾ ಬಲವನ್ನೂ ಹೆಚ್ಚಿಸಿಕೊಂಡಂತಾಗಿದೆ. ಉಪಗ್ರಹವೊಂದನ್ನು ಕ್ಷಿಪಣಿ ಮೂಲಕ ಹೊಡೆದುರುಳಿಸಿದ ದೇಶದ ಮೊಟ್ಟ ಮೊದಲ ಉಪಗ್ರಹ ನಿರೋಧಕ ಕ್ಷಿಪಣಿ (ಆ್ಯಂಟಿ ಸ್ಯಾಟೆಲೈಟ್ ಕ್ಷಿಪಣಿ) ಎ-ಸ್ಯಾಟ್(Anti-Satellite -ASAT) ಎಂಬ ಹೆಗ್ಗಳಿಕೆಯನ್ನು ಪಡೆದಿದೆ.

• ಬಾಹ್ಯಾಕಾಶದಲ್ಲಿರುವ ಸಕ್ರಿಯ ಉಪಗ್ರಹವನ್ನು ಹೊಡೆದುರುಳಿಸುವ ಈ ಕ್ಷಿಪಣಿ ಯೋಜನೆಗೆ ಭಾರತ ತನ್ನದೇ ನಿರುಪಯುಕ್ತ ಸಕ್ರಿಯ ಉಪಗ್ರಹವನ್ನು ಗುರಿಯಾಗಿಸಿಕೊಂಡಿತ್ತು. ಕಳೆದ ಜನವರಿ 24ರಂದು ಇಸ್ರೋ ಉಡಾಯಿಸಿದ್ದ ಮೈಕ್ರೋ ಉಪಗ್ರಹವನ್ನು March 27, 2019ರಂದು  ಎ-ಸ್ಯಾಟ್ ಬಾಹ್ಯಾಕಾಶದಲ್ಲೇ ಉಡಾಯಿಸಲಾಯಿತು. ಎ-ಸ್ಯಾಟ್ ಮಿಸೈಲ್ (ಎಲ್ಇಒ) ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹವನ್ನು ಗುರಿಯಾಗಿಸಿಕೊಂಡು ಯಶಸ್ವಿಯಾಗಿ ದಾಳಿ ಮಾಡಿ ಉಡಾಯಿಸಿದೆ. ಭೂಮಿಯ ಕೆಳ ಕಕ್ಷೆಯಲ್ಲಿರುವ ಉಪಗ್ರಹವನ್ನೇ ಈ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಲು ಕಾರಣ ಕೂಡ ಇದ್ದು, ಭೂಮಿಯ ಕೆಳ ಕಕ್ಷೆಯಲ್ಲಿರುವ (300 ಕಿ.ಮೀ. ಎತ್ತರದ ಕಕ್ಷೆ) ಉಪಗ್ರಹ ಹೊಡೆದುರುಳಿಸಿದಾಗ ಅದರ ಅವಶೇಷಗಳು ನೇರವಾಗಿ ಭೂಮಿ ವಾತಾವರಣ ತಲುಪುತ್ತದೆ. ಆಗ ಅದರ ಬಿಡಿಭಾಗಗಳು ಭೂಮಿಯ ಗುರುತ್ವಾಕರ್ಷಣ ಬಲ ಹಾಗೂ ಅತಿಯಾದ ವಾತಾವರಣದ ಶಾಖಕ್ಕೆ ಸಿಕ್ಕು ಅಲ್ಲಿಯೇ ಉರಿದು ಭಸ್ಮವಾಗುತ್ತದೆ. ಇದರಿಂದ ಕಕ್ಷೆಯಲ್ಲಿರುವ ಯಾವುದೇ ಇತರೆ ಉಪಗ್ರಹಗಳಿಗೆ ತೊಂದರೆಯಾಗುವುದಿಲ್ಲ.

• ಭೂಮಿಗೆ ಸನಿಹದ ಕಕ್ಷೆ(Low Earth Orbit – LEO) : ಭೂಮಿಯಿಂದ 2000 ಕಿ.ಮೀ. ಎತ್ತರವನ್ನು ಭೂ ಸನಿಹದ ಕಕ್ಷೆ ಎನ್ನುತ್ತಾರೆ. ಎ–ಸ್ಯಾಟ್ ಕ್ಷಿಪಣಿ ವ್ಯವಸ್ಥೆಯು ಈ ಕಕ್ಷೆಯಲ್ಲಿರುವ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದೆ’

• ಇಂಥ ತಂತ್ರಜ್ಞಾನ ಹೊಂದಿರುವ ವಿಶ್ವದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಸಾಮರ್ಥ್ಯವನ್ನು ಹೊಂದಿದ್ದವು. ಈ ಕ್ಷಿಪಣಿಯು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ತಯಾರಾಗಿದೆ.

• ಭಾರತ ಅವಧಿ ಮುಗಿದ ತನ್ನದೇ ಉಪಗ್ರಹವನ್ನು, ಹಾಗೆಯೇ ತನ್ನ ಭದ್ರತೆಗೆ ಆತಂಕಕಾರಿಯಾದ ಇತರ ದೇಶಗಳ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯ‌ ಗಳಿಸಿದೆ. ‘ಮಿಷನ್ ಶಕ್ತಿ' ಪ್ರಯೋಗದಲ್ಲಿ ಬ್ಯಾಲಿಸ್ಟಿಕ್‌ ಮಿಸೈಲ್‌ ಡಿಫೆನ್ಸ್‌ ಇಂಟರ್‌ಸೆಪ್ಟರ್‌ನ್ನು ಬಳಸಲಾಯಿತು. ವೈರಿ ಉಪಗ್ರಹವನ್ನು ಕೆಲಸ ಮಾಡದಂತೆ ಮಾಡುವ ಜಾಮಿಂಗ್‌ ತಂತ್ರಜ್ಞಾನವೂ ಇದೆ. ಇಲ್ಲಿ ಬಳಸಲಾದ ತಂತ್ರಜ್ಞಾನ ನಿರ್ದಿಷ್ಟವಾಗಿ 'ಕೈನೆಟಿಕ್‌ ಕಿಲ್‌' ಅಂದರೆ ಸಂಚಾರಿ ಉಪಗ್ರಹ ನಾಶಪಡಿಸುವ ವರ್ಗದ್ದು. ನೇರವಾಗಿ ಹೇಳುವುದಾದರೆ, ಭಾರತ ಇದೀಗ ಪಾಕಿಸ್ತಾನ ಹಾಗೂ ಚೀನಾದ ಯಾವುದೇ ಉಪಗ್ರಹವನ್ನು 'ಉಡೀಸ್‌' ಮಾಡಬಲ್ಲದು.

• ಬಾಹ್ಯಾಕಾಶವನ್ನು ಯಾವುದೇ ದೇಶವೂ ಆಯುಧಶಾಲೆಯಾಗಿ ಮಾರ್ಪಡಿಸುವುದಾಗಲೀ, ಯುದ್ಧಕ್ಕೆ ಉಪಯೋಗಿಸುವುದಾಗಲೀ ಮಾಡಕೂಡದು ಎಂದು 1967ರಲ್ಲಿ ಅಂತರಾಷ್ಟ್ರೀಯ ಒಪ್ಪಂದವಾಗಿದೆ; ಭಾರತ ಕೂಡ ಅದಕ್ಕೆ ಸಹಿ ಹಾಕಿದೆ. ''ಅಂತರಿಕ್ಷದ ಶಾಂತಿಯುತ ಬಳಕೆ ತನ್ನ ಆದ್ಯತೆ; ಬಾಹ್ಯಾಕಾಶದ ಶಸ್ತ್ರಾಸ್ತ್ರ ರೇಸ್‌ನಲ್ಲಿ ಭಾಗವಹಿಸುವ ಉದ್ದೇಶ ತನಗಿಲ್ಲ,'' ಎಂದು ಭಾರತ ಘೋಷಿಸಿದೆ. ಈ ಯೋಜನೆಯಲ್ಲಿ ಭಾರತ ಯಾವುದೇ ಅಂತಾರಾಷ್ಟ್ರೀಯ ನಿಯಮಾವಳಿಯನ್ನು ಉಲ್ಲಂಘಿಸಿಲ್ಲ.

No comments:

Post a Comment