•► ರಾಜ್ಯದ ಕೃಷಿ ವಲಯದ ಸ್ಥೂಲ ಪರಿಚಯ
(Overview of the state's agriculture sector)
━━━━━━━━━━━━━━━━━━━━━
★ ಕರ್ನಾಟಕದ ಆರ್ಥಿಕ ವ್ಯವಸ್ಥೆ
(The Karnataka Economic System)
★ ಕರ್ನಾಟಕದ ಕೃಷಿ ವಲಯ
(Karnataka Agriculture Sector
- ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಕರ್ನಾಟಕ ರಾಜ್ಯವು ಶೇ.5.83ರಷ್ಟು ಭೂಪ್ರದೇಶವನ್ನು ಹೊಂದಿದೆ.
ಈ ರಾಜ್ಯವು ಬಹು ಶತಮಾನಗಳಿಂದಲೂ ಕೃಷಿ ಪ್ರಧಾನ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಇಂದಿಗೂ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.23.6ರಷ್ಟು ಉಳಿಮೆಗಾರರು, ಶೇ 25.7 ರಷ್ಟು ಕೃಷಿ ಕಾರ್ಮಿಕರಿದ್ದು (2011) ಒಟ್ಟಾರೆ ಶೇ. 52.6 ರಷ್ಟು ಮಂದಿ ನೇರ ಕೃಷಿಯನ್ನೇ ಅವಲಂಬಿಸಿದ್ದಾರೆ.
- ಕೃಷಿ ಗ್ರಾಮೀಣ ಜನತೆಯ ಜೀವನಾಡಿ ಎಂದರೆ ತಪ್ಪಾಗದು. ಈ ವಲಯದೊಳಗೆ ಶೇ.56ರಷ್ಟು ಕೃಷಿ ಕಾರ್ಮಿಕರಿದ್ದಾರೆ. ರಾಜ್ಯದ ಒಟ್ಟು ಭೂಪ್ರದೇಶದಲ್ಲಿ ಶೇ.66ರಷ್ಟು ಅಂದರೆ 114 ಲಕ್ಷ ಹೆಕ್ಟೇರ್ ಉಳುಮೆ ಭೂಮಿಯಿದ್ದು, ಇದರಲ್ಲಿ ಶೇ.72ರಷ್ಟು ಮಳೆ ಆಶ್ರಿತವಾಗಿದೆ. ಇನ್ನುಳಿದದ್ದು ನೀರಾವರಿ ಆಧರಿತ.
• ರಾಜ್ಯದ ಕೃಷಿ ಹವಾಮಾನವನ್ನು 10 ವಲಯಗಳನ್ನಾಗಿ ವಿಂಗಡಿಸಲಾಗಿದೆ.
ಅವುಗಳೆಂದರೆ;
(1) ಈಶಾನ್ಯ ಮಲೆನಾಡು ವಲಯ-7 ತಾಲ್ಲೂಕುಗಳು.
(2) ಈಶಾನ್ಯ ಒಣವಲಯ-11 ತಾಲ್ಲೂಕುಗಳು
(3) ಉತ್ತರ ಒಣವಲಯ-35 ತಾಲ್ಲೂಕುಗಳು
(4) ಕೇಂದ್ರ ಒಣವಲಯ-17 ತಾಲ್ಲೂಕುಗಳು
(5) ಪೂರ್ವ ಒಣವಲಯ-24 ತಾಲ್ಲೂಕುಗಳು
(6) ದಕ್ಷಿಣ ಒಣವಲಯ-18 ತಾಲ್ಲೂಕುಗಳು
(7) ದಕ್ಷಿಣ ಅರೆಮಲೆನಾಡು ವಲಯ-14 ತಾಲ್ಲೂಕುಗಳು
(8) ಉತ್ತರ ಮಲೆನಾಡು ವಲಯ-14 ತಾಲ್ಲೂಕುಗಳು
(9) ಗುಡ್ಡಗಾಡು ವಲಯ-22 ತಾಲ್ಲೂಕುಗಳು ಹಾಗೂ
(10) ಕರಾವಳಿ ವಲಯ-13 ತಾಲ್ಲೂಕುಗಳು.
ಕರ್ನಾಟಕ ಹೊಂದಿರುವ ತಾಲ್ಲೂಕುಗಳನ್ನು ಅವುಗಳ ಹವಾಮಾನವನ್ನು ಗಮನಿಸಿ ಹೀಗೆ ವಿಂಗಡಿಸಲಾಗಿದೆ. ಈ ಎಲ್ಲಾ ವಲಯಗಳಲ್ಲಿ ಸರ್ವೇಸಾಮಾನ್ಯವಾಗಿ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಕೂಡಿದ ಭೂಪ್ರದೇಶ ಅತಿ ಹೆಚ್ಚಾಗಿದೆ.
(Courtesy : Yojana Magazine)

No comments:
Post a Comment