•► ನೇರ ತೆರಿಗೆ (ಡೈರೆಕ್ಟ್ ಟ್ಯಕ್ಸ್) ಎಂದರೇನು, ಹಾಗೂ ನೇರ ತೆರಿಗೆಯ ವಿವಿಧ ಪ್ರಕಾರಗಳು? ಯಾರಿಗೆಲ್ಲ ಅನ್ವಯಿಸುತ್ತದೆ?
(what is Direct Tax and What Are The Different Types Of Direct Taxes?)
━━━━━━━━━━━━━━━━━━━━━
★ ಭಾರತದ ಆರ್ಥಿಕ ವ್ಯವಸ್ಥೆ
(The Indian Economy)
★ಭಾರತದಲ್ಲಿನ ನೇರ ತೆರಿಗೆಯ ವಿವಿಧ ಪ್ರಕಾರಗಳು
(Types Of Direct Taxes in India)
ಭಾರತದಲ್ಲಿ ನೇರ ತೆರಿಗೆಯ ಆಡಳಿತದ ಜವಾಬ್ದಾರಿಯನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಹೊಂದಿದೆ. ಇದು ಕೇಂದ್ರೀಯ ಕಂದಾಯ ಮಂಡಳಿ ಕಾಯ್ದೆ 1924 ರ ಅಡಿಯಲ್ಲಿ ರೂಪುಗೊಂಡ ಶಾಸನಬದ್ಧ ಸಂಸ್ಥೆ (statutory body) ಯಾಗಿದ್ದು, ಇದು ಕಂದಾಯ ಇಲಾಖೆಯ ಒಂದು ಭಾಗವಾಗಿದೆ.
ಸರ್ಕಾರ ವಿತ್ತೀಯ ಕೊರತೆಯಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಮಾರ್ಗವೂ ತೆರಿಗೆ ಸಂಗ್ರಹ.
• ನೇರ ತೆರಿಗೆ (Direct Tax) :
ಈ ತೆರಿಗೆಗಳನ್ನು ಇನ್ನೊಬ್ಬ ತೆರಿಗೆದಾರರ ಪರವಾಗಿ ಪಾವತಿಸಲಾಗುವುದಿಲ್ಲ. ಇದನ್ನು ನಿಯಂತ್ರಕ(regulator)ರಿಂದ ನೇರವಾಗಿ ವಿಧಿಸಲಾಗುತ್ತದೆ. ಇದಲ್ಲದೆ ಈ ಹೊಣೆಗಾರಿಕೆ ಮತ್ತೊಬ್ಬ ತೆರಿಗೆ ಪಾವತಿದಾರರಿಗೆ ವರ್ಗಾಯಿಸಲಾಗುವುದಿಲ್ಲ.
ವ್ಯಕ್ತಿಯ ಒಟ್ಟು ಆದಾಯ ಅಥವಾ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳು ನೇರ ತೆರಿಗೆ ಅಡಿಯಲ್ಲಿ ಬರುತ್ತವೆ.
* ಆದಾಯ ತೆರಿಗೆ (Income Tax): ವಾರ್ಷಿಕ ₹ 5 ಲಕ್ಷ ಮತ್ತು ಅದಕ್ಕಿಂತಲೂ ಹೆಚ್ಚು ವೇತನ ಪಡೆಯುವ ಉದ್ಯೋಗಿಗಳಿಗೆ ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ಮಾಡಲಾಗುತ್ತದೆ.
* ಆಸ್ತಿ ತೆರಿಗೆ (Wealth tax):
ಆಸ್ತಿ ಯಾವುದೇ ಆದಾಯವನ್ನು ಗಳಿಸುತ್ತದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಆಸ್ತಿ ಮಾಲೀಕರು ಈ ತೆರಿಗೆಯನ್ನು ಪಾವತಿಸಬೇಕು. ತೆರಿಗೆದಾರರ ವಸತಿ ಸ್ಥಿತಿಯನ್ನು ಅವಲಂಬಿಸಿ, ಸಂಪತ್ತು ತೆರಿಗೆಯನ್ನು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬ (HUF) ಮತ್ತು ಕಾರ್ಪೊರೇಟ್ ತೆರಿಗೆದಾರರು ಪಾವತಿಸುತ್ತಾರೆ.
- ಸ್ಟಾಕ್ ಹೋಲ್ಡಿಂಗ್ಸ್, ಚಿನ್ನದ ಠೇವಣಿ ಬಾಂಡ್‌ಗಳು, ವಾಣಿಜ್ಯ ಸಂಕೀರ್ಣ ಆಸ್ತಿ-ಸ್ವತ್ತು, ಒಂದು ವರ್ಷದಲ್ಲಿ 300 ದಿನಗಳಿಗಿಂತ ಹೆಚ್ಚು ಕಾಲ ಬಾಡಿಗೆಗೆ ಪಡೆದ ಮನೆ ಆಸ್ತಿ, ಮತ್ತು ವೃತ್ತಿಪರ ಅಥವಾ ವ್ಯವಹಾರ ಬಳಕೆಗಾಗಿ ಹೊಂದಿರುವ ಮನೆ ಆಸ್ತಿಯನ್ನು ಸಂಪತ್ತು ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ.
ಪುರಸಭೆ, ಪಟ್ಟಣ ಅಥವಾ ಗ್ರಾಮ ಪಂಚಾಯಿತಿ, ಕಾರ್ಪೊರೇಷನ್‌ಗಳು ವ್ಯಕ್ತಿ ಹೊಂದಿರುವ ಕಟ್ಟಡ, ಭೂಮಿ ಅಥವಾ ಖರೀದಿಸುವ ಆಸ್ತಿಗೆ ತೆರಿಗೆ ಸಂಗ್ರಹಿಸಲಾಗುತ್ತದೆ. ರಾಜ್ಯವಾರು ತೆರಿಗೆ ದರದಲ್ಲಿ ವ್ಯತ್ಯಾಸವಾಗುತ್ತದೆ.
(Minimum Alternate Tax (MAT))
– ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಶೂನ್ಯ ಅಥವಾ ಅತ್ಯಂತ ಕಡಿಮೆ ಆದಾಯ ತೋರಿಸುವ ಕಂಪನಿಗಳಿಗೆ ನಿರ್ದಿಷ್ಟ ತೆರಿಗೆ ವಿಧಿಸುವುದು ಕನಿಷ್ಠ ಪರ್ಯಾಯ ತೆರಿಗೆಯಿಂದ (ಮ್ಯಾಟ್) ಸಾಧ್ಯವಾಗಿದೆ
(Fringe Benefits Tax)
– ಸಂಸ್ಥೆಗಳು ಉದ್ಯೋಗಿಗಳಿಗೆ ನೀಡುವ ಸವತ್ತುಗಳಿಗೆ ಪಾವತಿಸಬೇಕಾದುದು ಹೆಚ್ಚುವರಿ ಸೌಲಭ್ಯ ತೆರಿಗೆ (ಎಫ್‌ಬಿಟಿ)
– ಷೇರುಗಳ ಖರೀದಿ ಮತ್ತು ಮಾರಾಟದ ಮೇಲೆ ವಿಧಿಸಲಾಗುವ ಷೇರು ವರ್ಗಾವಣೆ ತೆರಿಗೆ (Securities Transaction Tax (STT)) ಹಾಗೂ ಷೇರುದಾರರಿಗೆ ಕಂಪನಿಗಳು ನೀಡುವ ಲಾಭಾಂಶದ ಮೇಲೆ ವಿಧಿಸಲಾಗುವ ತೆರಿಗೆ ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ) (Dividend Distribution Tax (DDT))
* ಬಂಡವಾಳ ವೃದ್ಧಿ ತೆರಿಗೆ (Capital gains tax) :
ಸಂಸ್ಥೆಗಳು ಅಥವಾ ವ್ಯಕ್ತಿಗೆ ಆಸ್ತಿ ಮಾರಾಟದಿಂದ ಬರುವ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ಮೂಲ ಬೆಲೆ ಮತ್ತು ಮಾರಾಟ ಮಾಡಿದ ಬೆಲೆಯ ವ್ಯತ್ಯಾಸಕ್ಕೆ ಬಂಡವಾಳ ವೃದ್ಧಿ ತೆರಿಗೆ (ಕ್ಯಾಪಿಟಲ್ ಗೇಯ್ಸ್ ಟ್ಯಾಕ್ಸ್) ವಿಧಿಸಲಾಗುತ್ತದೆ. ದೀರ್ಘಾವಧಿ ಮತ್ತು ಅಲ್ಪಾವಧಿ ಎರಡು ವಿಧಗಳಾಗಿ ಇದನ್ನು ವಿಂಗಡಿಸಲಾಗಿದೆ.
(what is Direct Tax and What Are The Different Types Of Direct Taxes?)
━━━━━━━━━━━━━━━━━━━━━
★ ಭಾರತದ ಆರ್ಥಿಕ ವ್ಯವಸ್ಥೆ
(The Indian Economy)
★ಭಾರತದಲ್ಲಿನ ನೇರ ತೆರಿಗೆಯ ವಿವಿಧ ಪ್ರಕಾರಗಳು
(Types Of Direct Taxes in India)
ಭಾರತದಲ್ಲಿ ನೇರ ತೆರಿಗೆಯ ಆಡಳಿತದ ಜವಾಬ್ದಾರಿಯನ್ನು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಹೊಂದಿದೆ. ಇದು ಕೇಂದ್ರೀಯ ಕಂದಾಯ ಮಂಡಳಿ ಕಾಯ್ದೆ 1924 ರ ಅಡಿಯಲ್ಲಿ ರೂಪುಗೊಂಡ ಶಾಸನಬದ್ಧ ಸಂಸ್ಥೆ (statutory body) ಯಾಗಿದ್ದು, ಇದು ಕಂದಾಯ ಇಲಾಖೆಯ ಒಂದು ಭಾಗವಾಗಿದೆ.
ಸರ್ಕಾರ ವಿತ್ತೀಯ ಕೊರತೆಯಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಮಾರ್ಗವೂ ತೆರಿಗೆ ಸಂಗ್ರಹ.
• ನೇರ ತೆರಿಗೆ (Direct Tax) :
ಹೆಸರೇ ಸೂಚಿಸುವಂತೆ ಈ ತೆರಿಗೆಗಳನ್ನು ತೆರಿಗೆದಾರರು ನೇರವಾಗಿ ಸರ್ಕಾರಕ್ಕೆ ಪಾವತಿಸುತ್ತಾರೆ. ಸರ್ಕಾರ ನೇರವಾಗಿ ತೆರಿಗೆದಾರರಿಂದ ಮತ್ತು ಸ್ವತ್ತುಗಳ ಮೇಲೆ ಮೂಲದಲ್ಲಿಯೇ ಕಡಿತಗೊಳಿಸುವ ತೆರಿಗೆಯನ್ನು ನೇರ ತೆರಿಗೆ ಎನ್ನಬಹುದು. ಇದರೊಂದಿಗೆ ಪರೋಕ್ಷ ತೆರಿಗೆಯನ್ನೂ ದೇಶದ ತೆರಿಗೆ ವ್ಯವಸ್ಥೆ ಒಳಗೊಂಡಿರುತ್ತದೆ.
ವ್ಯಕ್ತಿಯ ಒಟ್ಟು ಆದಾಯ ಅಥವಾ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳು ನೇರ ತೆರಿಗೆ ಅಡಿಯಲ್ಲಿ ಬರುತ್ತವೆ.
* ಆಸ್ತಿ ತೆರಿಗೆ (Wealth tax):
ಆಸ್ತಿ ಯಾವುದೇ ಆದಾಯವನ್ನು ಗಳಿಸುತ್ತದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಆಸ್ತಿ ಮಾಲೀಕರು ಈ ತೆರಿಗೆಯನ್ನು ಪಾವತಿಸಬೇಕು. ತೆರಿಗೆದಾರರ ವಸತಿ ಸ್ಥಿತಿಯನ್ನು ಅವಲಂಬಿಸಿ, ಸಂಪತ್ತು ತೆರಿಗೆಯನ್ನು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬ (HUF) ಮತ್ತು ಕಾರ್ಪೊರೇಟ್ ತೆರಿಗೆದಾರರು ಪಾವತಿಸುತ್ತಾರೆ.
- ಸ್ಟಾಕ್ ಹೋಲ್ಡಿಂಗ್ಸ್, ಚಿನ್ನದ ಠೇವಣಿ ಬಾಂಡ್‌ಗಳು, ವಾಣಿಜ್ಯ ಸಂಕೀರ್ಣ ಆಸ್ತಿ-ಸ್ವತ್ತು, ಒಂದು ವರ್ಷದಲ್ಲಿ 300 ದಿನಗಳಿಗಿಂತ ಹೆಚ್ಚು ಕಾಲ ಬಾಡಿಗೆಗೆ ಪಡೆದ ಮನೆ ಆಸ್ತಿ, ಮತ್ತು ವೃತ್ತಿಪರ ಅಥವಾ ವ್ಯವಹಾರ ಬಳಕೆಗಾಗಿ ಹೊಂದಿರುವ ಮನೆ ಆಸ್ತಿಯನ್ನು ಸಂಪತ್ತು ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ.
ಪುರಸಭೆ, ಪಟ್ಟಣ ಅಥವಾ ಗ್ರಾಮ ಪಂಚಾಯಿತಿ, ಕಾರ್ಪೊರೇಷನ್‌ಗಳು ವ್ಯಕ್ತಿ ಹೊಂದಿರುವ ಕಟ್ಟಡ, ಭೂಮಿ ಅಥವಾ ಖರೀದಿಸುವ ಆಸ್ತಿಗೆ ತೆರಿಗೆ ಸಂಗ್ರಹಿಸಲಾಗುತ್ತದೆ. ರಾಜ್ಯವಾರು ತೆರಿಗೆ ದರದಲ್ಲಿ ವ್ಯತ್ಯಾಸವಾಗುತ್ತದೆ.
* ಕಾರ್ಪೊರೇಟ್ ತೆರಿಗೆ (Corporate tax) :
ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್ ತೆರಿಗೆ ಪ್ರಮುಖ ಭಾಗವಾಗಿದೆ. ಈ ತೆರಿಗೆಯನ್ನು ಷೇರುದಾರರಿಗಿಂತ ಭಿನ್ನವಾಗಿರುವ ದೇಶೀಯ ಕಂಪನಿಗಳ ಮೇಲೆ ವಿಧಿಸಲಾಗುತ್ತದೆ. ತಮ್ಮ ಆದಾಯವನ್ನು ಭಾರತದಲ್ಲಿ ಪಡೆಯುವಂತಹ ಅಥವಾ ಪಡೆಯಲು ಪರಿಗಣಿಸಲಾಗುವ ವಿದೇಶಿ ನಿಗಮಗಳು (foreign corporations) ಸಹ ಪಾವತಿಸುತ್ತವೆ. ದೇಶದಲ್ಲಿರುವ ಸ್ವತ್ತು(assets)ಗಳ ಮಾರಾಟದ ಮೂಲಕ ಬಡ್ಡಿ, ರಾಯಲ್ಟಿ, ಲಾಭಾಂಶ(dividends), ತಾಂತ್ರಿಕ ಸೇವೆಗಳ ಶುಲ್ಕ ಅಥವಾ ಗಳಿಕೆಯಾಗಿ ಗಳಿಸಿದ ಆದಾಯವು ಕೂಡ ತೆರಿಗೆಗೊಳಪಡುತ್ತವೆ.
ಕಾರ್ಪೊರೇಟ್ ತೆರಿಗೆಯೂ ಈ ಕೆಳಗಿನ ಹಲವು ರೀತಿಯ ತೆರಿಗೆಗಳು ಒಳಗೊಂಡಿದೆ;
(Minimum Alternate Tax (MAT))
– ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಶೂನ್ಯ ಅಥವಾ ಅತ್ಯಂತ ಕಡಿಮೆ ಆದಾಯ ತೋರಿಸುವ ಕಂಪನಿಗಳಿಗೆ ನಿರ್ದಿಷ್ಟ ತೆರಿಗೆ ವಿಧಿಸುವುದು ಕನಿಷ್ಠ ಪರ್ಯಾಯ ತೆರಿಗೆಯಿಂದ (ಮ್ಯಾಟ್) ಸಾಧ್ಯವಾಗಿದೆ
(Fringe Benefits Tax)
– ಸಂಸ್ಥೆಗಳು ಉದ್ಯೋಗಿಗಳಿಗೆ ನೀಡುವ ಸವತ್ತುಗಳಿಗೆ ಪಾವತಿಸಬೇಕಾದುದು ಹೆಚ್ಚುವರಿ ಸೌಲಭ್ಯ ತೆರಿಗೆ (ಎಫ್‌ಬಿಟಿ)
– ಷೇರುಗಳ ಖರೀದಿ ಮತ್ತು ಮಾರಾಟದ ಮೇಲೆ ವಿಧಿಸಲಾಗುವ ಷೇರು ವರ್ಗಾವಣೆ ತೆರಿಗೆ (Securities Transaction Tax (STT)) ಹಾಗೂ ಷೇರುದಾರರಿಗೆ ಕಂಪನಿಗಳು ನೀಡುವ ಲಾಭಾಂಶದ ಮೇಲೆ ವಿಧಿಸಲಾಗುವ ತೆರಿಗೆ ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ) (Dividend Distribution Tax (DDT))
* ಬಂಡವಾಳ ವೃದ್ಧಿ ತೆರಿಗೆ (Capital gains tax) :
ಸಂಸ್ಥೆಗಳು ಅಥವಾ ವ್ಯಕ್ತಿಗೆ ಆಸ್ತಿ ಮಾರಾಟದಿಂದ ಬರುವ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ಮೂಲ ಬೆಲೆ ಮತ್ತು ಮಾರಾಟ ಮಾಡಿದ ಬೆಲೆಯ ವ್ಯತ್ಯಾಸಕ್ಕೆ ಬಂಡವಾಳ ವೃದ್ಧಿ ತೆರಿಗೆ (ಕ್ಯಾಪಿಟಲ್ ಗೇಯ್ಸ್ ಟ್ಯಾಕ್ಸ್) ವಿಧಿಸಲಾಗುತ್ತದೆ. ದೀರ್ಘಾವಧಿ ಮತ್ತು ಅಲ್ಪಾವಧಿ ಎರಡು ವಿಧಗಳಾಗಿ ಇದನ್ನು ವಿಂಗಡಿಸಲಾಗಿದೆ.
Doing fantastic work
ReplyDeleteContinue,
ReplyDeleteIt's most beneficial for competitive aspirants
Thanks fr your compliment, will try my best to provide helpful notes.
Delete