"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕರ್ನಾಟಕದ ಕೃಷಿ ವಲಯ. Show all posts
Showing posts with label ಕರ್ನಾಟಕದ ಕೃಷಿ ವಲಯ. Show all posts

Sunday, 14 June 2020

•► ರಾಜ್ಯದ ಕೃಷಿ ವಲಯದ ಸ್ಥೂಲ ಪರಿಚಯ (Overview of the state's agriculture sector)

•► ರಾಜ್ಯದ ಕೃಷಿ ವಲಯದ ಸ್ಥೂಲ ಪರಿಚಯ
(Overview of the state's agriculture sector)

━━━━━━━━━━━━━━━━━━━━━
★ ಕರ್ನಾಟಕದ ಆರ್ಥಿಕ ವ್ಯವಸ್ಥೆ
(The Karnataka Economic System)

★ ಕರ್ನಾಟಕದ ಕೃಷಿ ವಲಯ
(Karnataka Agriculture Sector


- ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಕರ್ನಾಟಕ ರಾಜ್ಯವು ಶೇ.5.83ರಷ್ಟು ಭೂಪ್ರದೇಶವನ್ನು ಹೊಂದಿದೆ.
ಈ ರಾಜ್ಯವು ಬಹು ಶತಮಾನಗಳಿಂದಲೂ ಕೃಷಿ ಪ್ರಧಾನ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಇಂದಿಗೂ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.23.6ರಷ್ಟು ಉಳಿಮೆಗಾರರು, ಶೇ 25.7 ರಷ್ಟು ಕೃಷಿ ಕಾರ್ಮಿಕರಿದ್ದು (2011) ಒಟ್ಟಾರೆ ಶೇ. 52.6 ರಷ್ಟು ಮಂದಿ ನೇರ ಕೃಷಿಯನ್ನೇ ಅವಲಂಬಿಸಿದ್ದಾರೆ.

- ಕೃಷಿ ಗ್ರಾಮೀಣ ಜನತೆಯ ಜೀವನಾಡಿ ಎಂದರೆ ತಪ್ಪಾಗದು. ಈ ವಲಯದೊಳಗೆ ಶೇ.56ರಷ್ಟು ಕೃಷಿ ಕಾರ್ಮಿಕರಿದ್ದಾರೆ. ರಾಜ್ಯದ ಒಟ್ಟು ಭೂಪ್ರದೇಶದಲ್ಲಿ ಶೇ.66ರಷ್ಟು ಅಂದರೆ 114 ಲಕ್ಷ ಹೆಕ್ಟೇರ್ ಉಳುಮೆ ಭೂಮಿಯಿದ್ದು, ಇದರಲ್ಲಿ ಶೇ.72ರಷ್ಟು ಮಳೆ ಆಶ್ರಿತವಾಗಿದೆ. ಇನ್ನುಳಿದದ್ದು ನೀರಾವರಿ ಆಧರಿತ.

ರಾಜ್ಯದ ಕೃಷಿ ಹವಾಮಾನವನ್ನು 10 ವಲಯಗಳನ್ನಾಗಿ ವಿಂಗಡಿಸಲಾಗಿದೆ. 
ಅವುಗಳೆಂದರೆ;
(1) ಈಶಾನ್ಯ ಮಲೆನಾಡು ವಲಯ-7 ತಾಲ್ಲೂಕುಗಳು.
(2) ಈಶಾನ್ಯ ಒಣವಲಯ-11 ತಾಲ್ಲೂಕುಗಳು
(3) ಉತ್ತರ ಒಣವಲಯ-35 ತಾಲ್ಲೂಕುಗಳು
(4) ಕೇಂದ್ರ ಒಣವಲಯ-17 ತಾಲ್ಲೂಕುಗಳು
(5) ಪೂರ್ವ ಒಣವಲಯ-24 ತಾಲ್ಲೂಕುಗಳು
(6) ದಕ್ಷಿಣ ಒಣವಲಯ-18 ತಾಲ್ಲೂಕುಗಳು
(7) ದಕ್ಷಿಣ ಅರೆಮಲೆನಾಡು ವಲಯ-14 ತಾಲ್ಲೂಕುಗಳು
(8) ಉತ್ತರ ಮಲೆನಾಡು ವಲಯ-14 ತಾಲ್ಲೂಕುಗಳು
(9) ಗುಡ್ಡಗಾಡು ವಲಯ-22 ತಾಲ್ಲೂಕುಗಳು ಹಾಗೂ
(10) ಕರಾವಳಿ ವಲಯ-13 ತಾಲ್ಲೂಕುಗಳು.

ಕರ್ನಾಟಕ ಹೊಂದಿರುವ  ತಾಲ್ಲೂಕುಗಳನ್ನು ಅವುಗಳ ಹವಾಮಾನವನ್ನು ಗಮನಿಸಿ ಹೀಗೆ ವಿಂಗಡಿಸಲಾಗಿದೆ. ಈ ಎಲ್ಲಾ ವಲಯಗಳಲ್ಲಿ ಸರ್ವೇಸಾಮಾನ್ಯವಾಗಿ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಕೂಡಿದ ಭೂಪ್ರದೇಶ ಅತಿ ಹೆಚ್ಚಾಗಿದೆ.
(Courtesy : Yojana Magazine)