•► ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ -(NIIF)
(National Investment and Infrastructure Fund)
━━━━━━━━━━━━━━━━━━━━━
★ ಭಾರತದ ಆರ್ಥಿಕ ವ್ಯವಸ್ಥೆ
(The Indian Economy)
★ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ

— ಎನ್ಐಐಎಫ್ ವು ಭಾರತದ ಮೊದಲ ಸಾರ್ವಭೌಮ ಸಂಪತ್ತು ನಿಧಿ(sovereign wealth fund)ಯಾಗಿದ್ದು, ಕೇಂದ್ರ ಸರ್ಕಾರವು ಇದನ್ನು ಫೆಬ್ರವರಿ 2015 ರಲ್ಲಿ ಸ್ಥಾಪಿಸಿತು.
ದೇಶದ ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸು ನೆರವು ಕಲ್ಪಿಸಲು, ಕೇಂದ್ರ ಸರ್ಕಾರವು ₹ 40 ಸಾವಿರ ಕೋಟಿಗಳ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್) ಸ್ಥಾಪಿಸಿದೆ.
— ಈ ನಿಧಿಯಲ್ಲಿನ ಸರ್ಕಾರದ ಪಾಲು ಬಂಡವಾಳವು ಶೇ 49.ರಷ್ಟು.
ಕೇಂದ್ರ ಸಚಿವ ಸಂಪುಟವು 2019 ರ ಜುಲೈನಲ್ಲಿ ಈ ನಿಧಿ ಸ್ಥಾಪಿಸಲು ಅನುಮೋದನೆ ನೀಡಿತ್ತು. ಜೊತೆಗೆ ಭಾರತೀಯ ಷೇರು ನಿಯಂತ್ರಣ ಮಂಡಳಿ ಕೂಡ, ‘ಎನ್‌ಐಐ ಎಫ್’ಗೆ ಅನುಮೋದನೆ ನೀಡಿದೆ.
ಪ್ರಸ್ತುತ ಇದು 4 ಬಿಲಿಯನ್ ಬಂಡವಾಳದೊಂದಿಗೆ ಮೂರು ನಿಧಿಗಳನ್ನು ನಿರ್ವಹಿಸುತ್ತಿದೆ: ಅವುಗಳೆಂದರೆ ಮಾಸ್ಟರ್ ಫಂಡ್, ಫಂಡ್ ಆಫ್ ಫಂಡ್ ಮತ್ತು ಸ್ಟ್ರಾಟೆಜಿಕ್ ಫಂಡ್. ಆ ಮೂಲಕ ಹೊಸ ಯೋಜನೆಗಳ ಆರಂಭ, ಕೈಗಾರಿಕೆ ಉದ್ದೇಶಕ್ಕೆ ಬಳಸಿದ ಭೂಮಿಯನ್ನು ನಗರ ನಿರ್ಮಾಣ ಯೋಜನೆಗಳಿಗೆ ಬಳಸುವ ಮತ್ತು ಸ್ಥಗಿತಗೊಂಡ ಯೋಜನೆಗಳ ಪುನರಾರಂಭಕ್ಕೆ ಈ ನಿಧಿಯನ್ನು ಬಳಸಿಕೊಳ್ಳಲಾಗುವುದು.
‘ಎನ್‌ಐಐಎಫ್’ ನಿಧಿಯ ಬಂಡವಾಳ ಹೂಡಿಕೆಯ ನಿರ್ಧಾರಗಳಿಗೆ ಹೂಡಿಕೆ ನಿರ್ವಹಣಾ ಸಮಿತಿಯು ಹೊಣೆಯಾಗಿರುತ್ತದೆ.
ಭಾರತದ ಮೂಲಸೌಕರ್ಯ ಹಣಕಾಸು ಸಂಸ್ಥೆಯನ್ನು (ಐಐಎಫ್‌ಸಿಎಲ್) ನಿಧಿಯ ಹೂಡಿಕೆ ಸಲಹೆಗಾರ ಸಂಸ್ಥೆಯನ್ನಾಗಿ ಮತ್ತು ಐಡಿಬಿಐ ಕ್ಯಾಪಿಟಲ್ ಮಾರ್ಕೆಟ್ ಸರ್ವಿಸಸ್ ಲಿಮಿಟೆಡ್ ಅನ್ನು, ಎನ್‌ಐಐಎಫ್ ಟ್ರಸ್ಟ್‌ನ ಸಲಹೆಗಾರ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ.
ಎನ್‌ಐಐಎಫ್ ಈಗಾಗಲೇ CPPIB, ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ, ಆಸ್ಟ್ರೇಲಿಯನ್ ಸೂಪರ್, ಒಂಟಾರಿಯೊ ಶಿಕ್ಷಕ (Ontario Teachers)ರ ಪಿಂಚಣಿ ಯೋಜನೆ, ತೆಮಾಸೆಕ್(Temasek), ಆಕ್ಸಿಸ್ ಬ್ಯಾಂಕ್, HDFC ಗ್ರೂಪ್, ICICI ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್ ನಂತಹ ಸಂಸ್ಥೆಗಳು ಸೇರಿ ಎನ್‌ಐಐಎಫ್ ನ ಮಾಸ್ಟರ್ ಫಂಡ್‌ನಲ್ಲಿ ಹೂಡಿಕೆ ಮಾಡಿವೆ.
—• ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್)
• ಸ್ಥಾಪನೆ— ಫೆಬ್ರವರಿ 2015 ರಲ್ಲಿ
• ಪ್ರಧಾನ ಕಚೇರಿ — ಮುಂಬೈ, ಭಾರತ
• ಸರ್ಕಾರಿ ಸಚಿವಾಲಯ — ಹಣಕಾಸು ಸಚಿವಾಲಯ
• ಪ್ರಸ್ತುತ CEO (ಮುಖ್ಯ ಕಾರ್ಯನಿರ್ವಾಹಕ) — ಸುಜಾಯ್ ಬೋಸ್
—• ಎನ್‌ಐಐಎಫ್ ನಿಧಿಯ ಆಡಳಿತ ಮಂಡಳಿಯ ರಚನೆ :
• ಅಧ್ಯಕ್ಷರು — ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು.
• ಸದಸ್ಯರು —
> ಆರ್ಥಿಕ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ,
> ಹಣಕಾಸು ಸೇವೆಗಳ ಕಾರ್ಯದರ್ಶಿ
> ಎಸ್‌ಬಿಐ ನ ಅಧ್ಯಕ್ಷರು ಇರುವರು.
ಈ ಆಡಳಿತ ಮಂಡಳಿಯು ಸಭೆ ಸೇರಿ ಹೂಡಿಕೆ ಮಾಡಲು ಮುಂದೆ ಬಂದಿರುವ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಪ್ರಗತಿ ಪರಿಶೀಲಿಸುವುದು.

No comments:
Post a Comment