"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 14 June 2020

•► 'ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ'ದ ಕೆಲವು ಪ್ರಮುಖ ವೈಶಿಷ್ಟ್ಯಗಳು: (ಸಾಮಾನ್ಯ ಅಧ್ಯಯನ ಪತ್ರಿಕೆ — 1) (Some of Main features of Indo-Islamic Architecture)

•► 'ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ'ದ ಕೆಲವು ಪ್ರಮುಖ  ವೈಶಿಷ್ಟ್ಯಗಳು: (ಸಾಮಾನ್ಯ ಅಧ್ಯಯನ ಪತ್ರಿಕೆ — 1)
(Some of Main features of Indo-Islamic Architecture)

━━━━━━━━━━━━━━━━━━━━━
★ ಮಧ್ಯಯುಗಿನ ಭಾರತದ ಇತಿಹಾಸ
(Medieval Indian History)

★ ಸಾಮಾನ್ಯ ಅಧ್ಯಯನ ಪತ್ರಿಕೆ — 1
(General Studies Paper — 1)

★ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ
(Indian Heritage & Culture)


— ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ಭಾರತೀಯ ಮತ್ತು ಪರ್ಷಿಯನ್ ಶೈಲಿಗಳ ಸಂಗಮವನ್ನು ಹೊಂದಿತ್ತು.

• ಕಮಾನು ಮತ್ತು ಗುಮ್ಮಟಗಳ ಬಳಕೆಯು ಈ ಅವಧಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.

• ಇಸ್ಲಾಮಿಕ್ ರಾಜರು ಮಸೀದಿಗಳು ಮತ್ತು ಸಮಾಧಿಗಳ ಸುತ್ತಲೂ ಮಿನಾರ್‌ (minars)ಗಳ ಬಳಕೆಯನ್ನು ಪರಿಚಯಿಸಿದರು.

• ಗಾರೆ (mortar)ಯನ್ನು ಅದರ ನಿರ್ಮಾಣದಲ್ಲಿ ಸಿಮೆಂಟಿಂಗ್ ಏಜೆಂಟ್ ಆಗಿ ಬಳಸಲ್ಪಟ್ಟಿತು.

• ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ಮಾನವ ಮತ್ತು ಪ್ರಾಣಿಗಳ ಕಲಾಕೃತಿಗಳ ಬಳಕೆಯನ್ನು ತಪ್ಪಿಸಿತು.

• ಹಿಂದೂ ವಾಸ್ತುಶಿಲ್ಪವು ತುಂಬಾ ಸಂಕೀರ್ಣಗೊಂಡಾಗ, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ವಿಶಾಲತೆ, ಬೃಹತ್ತ್ವ ಮತ್ತು ವಿಸ್ತೃತ್ವವನ್ನು ಪರಿಚಯಿಸಿತು.

• ಹಿಂದಿನ ನಿರ್ಮಾಣಗಳು ಮೂರ್ತಿಶಿಲ್ಪಗಳನ್ನು ಅಲಂಕಾರದ ಸಾಧನವಾಗಿ ಬಳಸಿದರೆ, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ಕ್ಯಾಲಿಗ್ರಫಿ (calligraphy)ಯನ್ನು ಅಲಂಕಾರದ ಸಾಧನವಾಗಿ ಬಳಸಿಕೊಂಡಿತು.

• ಈ ಅವಧಿಯ ವಾಸ್ತುಶಿಲ್ಪದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಕಾರಂಜಿ ಕೊಳಗಳು ಮತ್ತು ಸಣ್ಣ ನೀರಿನ ತೊಟ್ಟಿಗಳ ರೂಪದಲ್ಲಿ ನೀರನ್ನು ಕಟ್ಟಡದ ಆವರಣದಲ್ಲಿ ಬಳಸುವುದು.

• ಇಸ್ಲಾಮಿಕ್ ಆಡಳಿತಗಾರರು 'ಚಾರ್ ಬಾಗ್ ಶೈಲಿಯ ಉದ್ಯಾನ' (Charbagh style of gardening) ವನ್ನು ಪರಿಚಯಿಸಿದರು.

• ಈ ಕಾಲದ ವಾಸ್ತುಶಿಲ್ಪಗಳು ಅಮೂಲ್ಯವಾದ ಕಲ್ಲುಗಳು ಮತ್ತು ರತ್ನಗಳನ್ನು ಕಲ್ಲಿನ ಗೋಡೆಗಳಿಗೆ ಹಾಕಲು ಪಿಯೆಟ್ರಾ-ದುರಾ ತಂತ್ರ (pietra-dura technique) ವನ್ನು ಸಹ ಬಳಸಿದರು.

No comments:

Post a Comment