"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 16 June 2020

•► ಉಷ್ಣ ಮಾರುತ (ಬಿಸಿಗಾಳಿ) (heat wave, tropical cyclone)

 •► ಉಷ್ಣ ಮಾರುತ (ಬಿಸಿಗಾಳಿ)
(heat wave, tropical cyclone )

━━━━━━━━━━━━━━
★ ಪ್ರಾಕೃತಿಕ ಭೂಗೋಳಶಾಸ್ತ್ರ
(Physical Geography)


ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಾದಾಗ ಮತ್ತು ಸಾಮಾನ್ಯ ಉಷ್ಣಾಂಶ ಸಾಮಾನ್ಯಕ್ಕಿಂತಲೂ 5 ರಿಂದ 6.4 ಡಿಗ್ರಿ ಸೆಲ್ಶಿಯಸ್‌ವೆಗೂ ಏರಿಕೆಯಾದಾಗ ಅದನ್ನು ಉಷ್ಣ ಮಾರುತ ಎಂದು ಪರಿಗಣಿಸಲಾಗುತ್ತದೆ.

ಇದು ಅಸಹಜವಾಗಿ ಹೆಚ್ಚಿನ ತಾಪಮಾನದ ಅವಧಿಯಾಗಿದೆ, ಇದು ಭಾರತದ ವಾಯುವ್ಯ ಮತ್ತು ದಕ್ಷಿಣ ಮಧ್ಯ ಭಾಗಗಳಲ್ಲಿ ಬೇಸಿಗೆಯಲ್ಲಿ ಸಂಭವಿಸುವ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಾಗಿರುವುದು.


ಈ ಉಷ್ಣಗಾಳಿಯು (ಶಾಖದ ಅಲೆಗಳು) ಸಾಮಾನ್ಯವಾಗಿ ಭಾರತದಲ್ಲಿ ಮಾರ್ಚ್‌ನಿಂದ ಜೂನ್ ಅವಧಿಯಲ್ಲಿ ಗೋಚರಿಸುತ್ತದೆ.ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ ಜುಲೈ ವರೆಗೆ ವಿಸ್ತರಿಸುತ್ತವೆ. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲಿನದ್ದಾಗ ಬಿಸಿ ಗಾಳಿ ಬೀಸುತ್ತದೆ. ಆ ಸಂದರ್ಭದಲ್ಲಿ ಸಾಮಾನ್ಯ ಉಷ್ಣಾಂಶ 4-5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ.

ಉದಾಹರಣೆಗೆ, ಆ ಪ್ರದೇಶದಲ್ಲಿ ಸಾಮಾನ್ಯ ಉಷ್ಣಾಂಶ 40 ಡಿಗ್ರಿ ಇದ್ದರೆ ಆ ದಿನಗಳಲ್ಲಿ 45 ಡಿಗ್ರಿಗೆ ಏರಿಕೆಯಾಗುತ್ತದೆ. ಉಷ್ಣಾಂಶ 45 ಡಿಗ್ರಿಗಿಂತ ಮೇಲಿದ್ದರೆ ಉಷ್ಣಗಾಳಿ ಬೀಸುತ್ತಿದೆ ಎಂದೇ ಅರ್ಥ.


ಉಷ್ಣ ಮಾರುತ ಅಪಾಯದ ಸನ್ನಿವೇಶ

- ಸಮತಟ್ಟಾದ ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಉಷ್ಣ ಮಾರುತ ಅಪಾಯ ಎದುರಾಗುತ್ತದೆ.

- ಕರಾವಳಿ ಪ್ರದೇಶದಲ್ಲಿ 37 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಉಷ್ಣಮಾರುತದ ಅಪಾಯ.

- ಗಿರಿಧಾಮಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಉಷ್ಣ ಮಾರುತದ ಅಪಾಯ.

- ಸತತ ಎರಡು ದಿನ 45 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಬಿಸಿ ಗಾಳಿಯ ವಾತಾವರಣ ಎಂತಲೂ, ಸತತ ಎರಡು ದಿನ 47 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಅತಿ ಬಿಸಿ ಗಾಳಿಯ ವಾತಾವರಣ ಎಂತಲೂ ಪರಿಗಣಿಸಲಾಗುತ್ತದೆ

No comments:

Post a Comment