"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 19 September 2016

☀(PSI) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ - 2016 ಗೆ ಅರ್ಜಿ ಸಲ್ಲಿಸುವ ಮುನ್ನ. ( Procedure of Applying for PSI posts - How to Apply for PSI)

☀(PSI) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ - 2016 ಗೆ ಅರ್ಜಿ ಸಲ್ಲಿಸುವ ಮುನ್ನ.
( Procedure of Applying for PSI posts - How to Apply for PSI)
•─━━━━━═══════════━━━━━─••─━━━━━═══════════━━━━━─•

★ ಪೊಲೀಸ್ ಸಬ್ ಇನ್ಸ್‌ಪೆಕ್ಟರ್  ಪರೀಕ್ಷೆ ಸಿದ್ಧತೆ
(PSI Exam preparation)
     

ರಾಜ್ಯ ಪೊಲೀಸ್ ಇಲಾಖೆ ನಾಗರಿಕ, ಕೆಎಸ್ಆರ್ಪಿ ಮತ್ತು ವೈರ್ಲೆಸ್ ವಿಭಾಗದಲ್ಲಿ ಖಾಲಿ ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಮಾಹಿತಿಯನ್ನು ಪ್ರಶ್ನೋತ್ತರ ಮಾದರಿಯಲ್ಲಿ ಇಲ್ಲಿ ನೀಡಲಾಗಿದೆ.


●.ಅರ್ಜಿ ಶುಲ್ಕವನ್ನು ಪಾವತಿಸುವುದು ಹೇಗೆ?

ಆನ್ಲೈನ್ ಮೂಲಕ ಸೃಜಿಸಿರುವ ಬ್ಯಾಂಕ್ ಚಲನ್ನ್ನು ಮುದ್ರಿಸಿ, ಸ್ಟೇಟ್ ಬ್ಯಾಂಕ್ ಅಫ್ ಮೈಸೂರು ಅಥವಾ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಅಧಿಕೃತ ಶಾಖೆಗಳಲ್ಲಿ ಬ್ಯಾಂಕಿನ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಬಹುದು. ಬೇರಾವುದೇ ಬ್ಯಾಂಕಿನಲ್ಲಿ ಪಾವತಿಸಲು ಅವಕಾಶವಿರುವುದಿಲ್ಲ. ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಅಥವಾ ಇನ್ಯಾವುದೇ ಸ್ವರೂಪದಲ್ಲಿ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿಲ್ಲ. ಶುಲ್ಕವನ್ನು ಪಾವತಿಸದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.



●.ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂಪಡೆಯಬಹುದೇ?

ಒಮ್ಮೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ಸೃಜಿಸಿರುವ ಚಲನ್ನಿಂದ ಸಂಬಂಧಪಟ್ಟ ಬ್ಯಾಂಕಿನಲ್ಲಿ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಕಾರಣಕ್ಕೂ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಹಾಗೂ
ಈ ನೇಮಕಾತಿ ಸಮಿತಿಯು ನೆಡಸುವ ಬೇರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.



●.ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳು ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು?

ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿರುವ ಹುದ್ದೆಗಳಿಗೆ ಮಹಿಳಾ ಆಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿದೆ. ವೈರ್ಲೆಸ್ ಮತ್ತು ನಾಗರಿಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.



●.ಆನ್ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ ಮಾಡಲು ಅವಕಾಶವಿದೆಯೇ?

ಒಮ್ಮೆ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ನೀಡಿರುವ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.



●.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತಾಂತ್ರಿಕ ದೋಷಗಳು ಉಂಟಾದಲ್ಲಿ ಯಾರನ್ನು ಸಂರ್ಪಕಿಸಬೇಕು?

*ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ಅಥವಾ ಬೇರೆ ಸಮಸ್ಯೆಗಳು ಎದುರಾದಲ್ಲಿ ನೇಮಕಾತಿ ಸಮಿತಿಯ ಸಹಾಯವಾಣಿ ಸಂಖ್ಯೆ:

 080-22943346ಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಸಮಸ್ಯೆ ಸರಿಯಾದ ಪಕ್ಷದಲ್ಲಿ ಆನ್ಲೈನ್ನಲ್ಲಿ ಭರ್ತಿ ಮಾಡಿರುವ ಮಾಹಿತಿಯು ಲಭ್ಯವಿದ್ದಲ್ಲಿ ಸದರಿ ಅರ್ಜಿಯನ್ನೇ ಮುಂದುವರೆಸಬಹುದು ಅಥವಾ ಹೊಸ ಅರ್ಜಿಯನ್ನು ತೆರೆದು ಮಾಹಿತಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬಹುದು.



●.ಒಂದಕ್ಕಿಂತ ಹೆಚ್ಚಿನ ಅರ್ಜಿಯನ್ನು ಸಲ್ಲಿಸಬಹುದೇ?

ಇಲ್ಲ, ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿನ ಅರ್ಜಿಯನ್ನು ಸಲ್ಲಿಸಿದಲ್ಲಿ ಅಂತಿಮವಾಗಿ / ಕೊನೆಯಾದಾಗಿ ಸಲ್ಲಿಸಲಾಗುವ ಅರ್ಜಿಯನ್ನು ಮಾತ್ರ ಪರಿಗಣಿಸಿಸಲಾಗುತ್ತದೆ. ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.



●.ಈ ಹುದ್ದೆಗೆ ನಾನು ಅರ್ಹನಿರುವ ಬಗ್ಗೆ ಹೇಗೆ ತಿಳಿದುಕೊಳ್ಳುವುದು?

ಪೊಲೀಸ್ ಇಲಾಖೆಯ ವೆಬ್ನಲ್ಲಿ ಪ್ರಕಟಸಿರುವ ಅಧಿಸೂಚನೆಯನ್ನು ಮೊದಲು ಸಂಪೂರ್ಣವಾಗಿ ಓದಿಕೊಳ್ಳಿ. ಇಲ್ಲಿ ವಿದ್ಯಾರ್ಹತೆ, ದೇಹದಾಢ್ರ್ಯತೆ, ಸಹಿಷ್ಣುತೆ ಬಗ್ಗೆ ಮತ್ತು ವಯೋಮಿತಿಯ ಬಗ್ಗೆ ನೀಡಿರುವ ಮಾಹಿತಿಯನ್ನು ಓದಿಕೊಂಡು ಈ ಹುದ್ದೆಗೆ ನೀವು ಅರ್ಹರೇ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಿ.ಅರ್ಹರಿದ್ದಲ್ಲಿ ಮಾತ್ರ ಆನ್ಲೈನ್ ಮೂಲಕ ಅರ್ಜಿಸಲ್ಲಿಸಿ.



●.ದೇಹದಾಢ್ರ್ಯತೆ / ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಇತರೆ ವೈದ್ಯರಿಂದ ಪ್ರಮಾಣ ಪತ್ರ ಪಡೆದು ನೀಡಬಹುದೇ?

ಇಲ್ಲ. ಇತರೆ ಯಾವುದೇ ವೈದ್ಯರಿಂದ ಪಡೆದ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ನೇಮಕಾತಿ ಸಮಿತಿಯಿಂದ ನಿರ್ದೇಶಿಸಲ್ಪಟ್ಟಿರುವ ಅಧಿಕಾರಿಗಳು ತಪಾಸಣೆಯ ನಂತರ ನೀಡಲಾಗುವ ಪ್ರಮಾಣ ಪತ್ರವನ್ನು
ಮಾತ್ರ ಪರಿಗಣಿಸಲಾಗುತ್ತದೆ ಹಾಗೂ ವೈದ್ಯಕೀಯ ಮಂಡಳಿಯ ಮುಂದೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರದಲ್ಲಿನ ಫಲಿತಾಂಶವೇ ಅಂತಿಮವಾಗಿರುತ್ತದೆ.



●.BMI ಎಂದರೇನು ?
 ಎಂದರೆ body mass index ಎಂದು. ಬಿಎಮ್ಐ ಯಂತ್ರದಿಂದ ದೇಹದಾಢ್ರ್ಯತೆ ಪರೀಕ್ಷೆಯ ಎತ್ತರ ಹಾಗೂ ತೂಕವನ್ನು ಅಳತೆ ಮಾಡಲಾಗುವುದು.



●. ಲಿಖಿತ ಪರೀಕ್ಷೆಗೆ ತರಬೇಕಾದ ದಾಖಲೆಗಳೇನು?

ಲಿಖಿತ ಪರೀಕ್ಷೆಗೆ ಹಾಜರಾಗಲು ಲಿಖಿತ ಪರೀಕ್ಷೆಯ ಕರೆಪತ್ರ ಮತ್ತು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು, ತಪ್ಪಿದಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ.



●.ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಯಾವ ಭಾಷೆಯಲ್ಲಿರುತ್ತದೆ, ಯಾವ ಭಾಷೆಯಲ್ಲಿ ಉತ್ತರಿಸಬಹುದು?

ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಪರೀಕ್ಷೆಯಲ್ಲಿನ ಪತ್ರಿಕೆ-1ಕ್ಕೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸಬಹುದುದಾಗಿದೆ. ಪತ್ರಿಕೆ-2 ವಸ್ತುನಿಷ್ಠ ಮಾದರಿಯದ್ದಾಗಿದ್ದು, ಒಎಂಆರ್ ಶೀಟ್ನಲ್ಲಿ ಉತ್ತರವನ್ನು ಗುರುತಿಸಬೇಕಾಗಿರುತ್ತದೆ.



●.ಮೌಖಿಕ ಪರೀಕ್ಷೆ ಎಂದರೇನು ಹಾಗೂ ಮೌಖಿಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

*ಮೌಖಿಕ ಪರೀಕ್ಷೆ ಎಂದರೆ ಸಂದರ್ಶನ* ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಪತ್ರಿಕೆ-1 ಮತ್ತು 2ರಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೀಸಲಾತಿ ಅರ್ಹತೆಯನುಸಾರ 1:2ರ ಪ್ರಮಾಣದಲ್ಲಿ ಪ್ರತಿ ಗುಂಪು/ಜಾತಿ/ಪಂಗಡಗಳ ಅಭ್ಯರ್ಥಿಗಳನ್ನು ಈ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಮೌಖಿಕ ಪರೀಕ್ಷೆಯಲ್ಲಿ ಅಂದರೆ ಸಂದರ್ಶನದಲ್ಲಿ ನೇಮಕಾತಿ ಸಮಿತಿಯ ಆಯ್ಕೆ ಪ್ರಾಧಿಕಾರವು ಕೆಳಲಾಗುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿರುತ್ತದೆ.



●.ಮೌಖಿಕ ಪರೀಕ್ಷೆಯನ್ನು ಯಾರು ನಡೆಸುತ್ತಾರೆ ?
ಮೌಖಿಕ ಪರೀಕ್ಷೆಯನ್ನು ನೇಮಕಾತಿ ಸಮಿತಿಯ ಆಯ್ಕೆ ಪ್ರಾಧಿಕಾರವು ನಡೆಸುತ್ತದೆ.



●.ಮೌಖಿಕ ಪರೀಕ್ಷೆಗೆ ಎಷ್ಟು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ?
ಮೌಖಿಕ ಪರೀಕ್ಷೆಗೆ 10 (ಹತ್ತು) ಅಂಕಗಳನ್ನು ನಿಗದಿಪಡಿಸಲಾಗಿದೆ.



●.ಸಬ್ಇನ್ಸ್ಪೆಕ್ಟರ್ ಗೆ ಎಷ್ಟು ವೇತನ ನೀಡಲಾಗುತ್ತದೆ?

ಎಲ್ಲ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ವೇತನ ಶ್ರೇಣಿ:

 20000-500-21000-600-24600-700-
28800-800-33600-900-36300



●.ಮೀಸಲಾತಿ ಇರುತ್ತದೆಯೇ?

ಸರಕಾರದ ನೀತಿಯ ಪ್ರಕಾರ ಎಲ್ಲ ಹುದ್ದೆಗಳೂ ಮೀಸಲಾತಿಯನ್ವಯ ಹಂಚಿಕೆಯಾಗಿರುತ್ತದೆ. ಹೈ-ಕ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಮೀಸಲಾತಿ ನೀಡಲಾಗಿರುತ್ತದೆ. ಮೀಸಲಾತಿಯನ್ವಯ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಹೊಂದಿರಬೇಕು.

(Courtesy : GOWDRU BENAKANAL*GKPOINTS)

No comments:

Post a Comment