☀ PART-2)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು :
(Model Questions for IAS / KAS Mains Exam in Kannada medium)
•─━━━━━═══════════━━━━━─••─━━━━━═══════════━━━━━─•
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)
★ PART -II
•► ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಗಾಗಿ (ಮೇನ್ಸ್ ಎಕ್ಸಾಂ ಗೆ) direct ಆಗಿ ಸಹಾಯವಾಗುವ ರೀತಿಯಲ್ಲಿ GS-1,GS-2,GS-3,GS-4 exams ಗೆ ಸಂಬಂಧಪಟ್ಟಂತೆ ಮಾದರಿ ಪರೀಕ್ಷಾ ಪ್ರಶ್ನೆಗಳನ್ನು ನನ್ನ ಜ್ಞಾನ ಪರಿಮಿತಿಯಲ್ಲಿ ತಯಾರಿಸಿ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನ ಮಾಡಿದ್ದು, ತಾವುಗಳು ಆಯಾ ಪ್ರಶ್ನೆಯನ್ನು (150, 200, 250 ಶಬ್ಧಗಳ ಮಿತಿಯಲ್ಲಿ) ಸೂಕ್ತ ಉತ್ತರ ಬರೆಯಲು ಪ್ರಯತ್ನಿಸಿ. ಸಾಧ್ಯವಾದಲ್ಲಿ ನನಗೆ Mail ಮೂಲಕ ಉತ್ತರಗಳನ್ನು ಕಳುಹಿಸಿ.
(My Email-- yaseen7ash@gmail.com)
☀ ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆಗಳು : (150, 200, 250 ಶಬ್ಧಗಳ ಮಿತಿಯಲ್ಲಿ)
11. ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ - ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚು ಪೂರಕವಾದ ತೆರಿಗೆ ಸರಳೀಕರಣಗೊಳಿಸುವುದರೊಂದಿಗೆ ದೇಶಿ ವಾಣಿಜ್ಯೋದ್ಯಮ ರಂಗಕ್ಕೆ ಉತ್ತೇಜನ ಹಾಗೂ ಮಾರುಕಟ್ಟೆಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯು ವಹಿಸಬಹುದಾದ ಪರಿಣಾಮಕಾರಿಯಾದ ಪಾತ್ರವನ್ನು ಕುರಿತು ಚರ್ಚಿಸಿ.
12.ಭಾರತದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗಾಗಿ 65 ವರ್ಷಗಳಿಂದ ಸರ್ಕಾರಗಳು ನೂರಾರು ಯೋಜನೆಗಳನ್ನು ಜಾರಿಗೆ ತಂದಿವೆ. ಆದಾಗ್ಯೂ ಈ ಸಮುದಾಯಗಳು ಅಭಿವೃದ್ಧಿ ಯೋಜನೆಗಳ ಲಾಭವನ್ನು ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ. ಹಲವಾರು ಗೊಂದಲಗಳ ಮಧ್ಯೆ ಬುಡಕಟ್ಟೇತರ ಜನರು ರೂಪಿಸುವ ಬುಡಕಟ್ಟು ಜನರ ಅಭಿವೃದ್ಧಿ ಎಂಬ ಪರಿಕಲ್ಪನೆ ಒಂದು ದುರಂತಮಯ ಅಂತ್ಯದತ್ತ ಸಾಗುತ್ತಿದೆಯೇ? ಇತ್ತೀಚಿನ ಭಾರತ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳ ಅವಲೋಕನದೊಂದಿಗೆ ವಿಶ್ಲೇಷಿಸಿ.
13:— ಈಶಾನ್ಯ ರಾಜ್ಯಗಳು ಹಾಗು ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ದಂಗೆಕೋರರನ್ನು ಹತ್ತಿಕ್ಕಲು, ಭಾರತೀಯ ಸೇನೆಗೆ ನೀಡಿರುವ ವಿಶೇಷ ಅಧಿಕಾರ AFSPA ಕಾಯಿದೆಯನ್ನು ಪ್ರಸ್ತುತ ದಿನಗಳಲ್ಲಿ ಈಗಲೂ ಮುಂದುವರೆಸುವುದು ಔಚಿತ್ಯವೇ? AFSPA ಕಾಯಿದೆಯ ವಿಶೇಷ ಅಧಿಕಾರದ ಪರಿಣಾಮಗಳ ವ್ಯಾಪಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಿ.
14. 21ನೇ ಶತಮಾನದ ಅಗತ್ಯತೆಗಳಿಗೆ ಅನುಗುಣವಾಗಿ 'ಭಾರತೀಯ ದಂಡ ಸಂಹಿತೆ'ಯ ಸಮಗ್ರ ಪರಿಷ್ಕರಣೆ ಅಗತ್ಯವಾಗಿದೇಯೇ? ಇತ್ತೀಚೆಗೆ ಜೆಎನ್‍ಯು (JNU) ವಿದ್ಯಾರ್ಥಿಗಳ ಮೇಲಾದ ದೇಶದ್ರೋಹದ ಆರೋಪ ಹಿನ್ನೆಲೆಯೊಂದಿಗೆ ವಿಶ್ಲೇಷಿಸಿ.
15. ಕಳೆದ ಒಂದು ದಶಕದ ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಅವಲೋಕಿಸಿದಾಗ ಆಂತರಿಕ ಸಂಘರ್ಷ, ರಾಜಕೀಯ ಅಸ್ಥಿರತೆ ಅರಾಜಕತೆ ಮುಂತಾದ ಕಾರಣಗಳಿಂದ ಬಲತ್ಕಾರವಾಗಿ ದೇಶದಿಂದ ಹೊರದೂಡುಲ್ಪಡುತ್ತಿರುವ ಅಂತರರಾಷ್ಟ್ರೀಯ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂಥವರ ಸಮಸ್ಯೆಗಳನ್ನು ಆಲಿಸುವ, ನಿವಾರಿಸುವ, ಅವರ ಹಕ್ಕುಗಳನ್ನು ರಕ್ಷಿಸುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಲಸಿಗರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ವಿಶ್ವಸಂಸ್ಥೆಯು ಕೈಗೊಂಡ ಕ್ರಮಗಳನ್ನು ವಿಶ್ಲೇಷಿಸಿ.
16. ದೇಶದ ಅರ್ಥವ್ಯವಸ್ಥೆಯಲ್ಲಿ ಹಣಕಾಸಿನ ಸೇರ್ಪಡೆಯ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಹೆಚ್ಚು ವ್ಯಾಪಕವಾಗಿ ನಡೆಸುವ ಉದ್ದೇಶದಿಂದ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವಲ್ಲಿ ಆರ್‌ಬಿಐ ಉದ್ದೇಶಿತ ಹೊಸ ಶ್ರೇಣಿಯ ಸಂಸ್ಥೆಗಳಾದ ಸಣ್ಣ ಹಣಕಾಸು ಬ್ಯಾಂಕುಗಳು (Small Finance Banks) ಅದರಲ್ಲೂ , ಮುಖ್ಯವಾಗಿ ಗ್ರಾಮೀಣ ಮತ್ತು ಬ್ಯಾಂಕ್ ಶಾಖಾರಹಿತ ಪ್ರದೇಶಗಳಲ್ಲಿ ವಹಿಸಬಲ್ಲ ಮಹತ್ವದ ಪೂರಕ ಪಾತ್ರಗಳನ್ನು ವಿವರಿಸಿ.
17. 'ಬಡತನದ ಅಗಾಧತೆ’ ಮತ್ತು ‘ಏಳಿಗೆಯ ಹಂಚಿಕೆಯಲ್ಲಿನ ಅಸಮತೆ’ ವಿಶ್ವ ಎದುರಿಸುತ್ತಿರುವ ಎರಡು ಅತಿ ದೊಡ್ಡ ಸವಾಲುಗಳು. ಇವುಗಳನ್ನು ನಿಗ್ರಹಿಸುವಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕಗಳು ಗುರಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳು’(ಎಸ್‍ಡಿಜಿ) ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲವು?
18.ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ."— ಈ ನಿಟ್ಟಿನಲ್ಲಿ ಕೊರತೆ ನೀಗಿಸಿ ಯೋಜನೆಗಳ ಪ್ರಯೋಜನ ಎಲ್ಲರಿಗೂ ತಲುಪಿಸುವ, ಅರಿವು ಮೂಡಿಸುವ ಹಾಗೂ ಕಾನೂನು ನೆರವು ಒದಗಿಸುವ ಸಲುವಾಗಿ ಸ್ಥಾಪಿತವಾಗಿರುವ 'ರಾಜ್ಯ ಕಾನೂನು ಸೇವಾ ಪ್ರಾಧಿಕಾರ'ದ ಕಾರ್ಯವ್ಯಾಪ್ತಿಯ ಕುರಿತು ಚರ್ಚಿಸಿ.
19. ಬರ ಸಂಭಾವ್ಯ ಪ್ರದೇಶದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಕರ್ನಾಟಕಕ್ಕಿದೆ. ಇಂಥ ನೈಸರ್ಗಿಕ ವಿಕೋಪದ ಪರಿಸ್ಥಿತಿಯಲ್ಲಿ ನೀವು ಕೈಗೊಳ್ಳಬಹುದಾದ ಬರ ನಿರ್ವಹಣೆಯ ಸೂಕ್ತ ಕ್ರಮಗಳು ಯಾವವು?
20.ನಕಲಿ ನೋಟುಗಳ (ಕಳ್ಳನೋಟುಗಳು) ಚಲಾವಣೆಯು ಇಂದು ಮುಂದುವರೆಯುತ್ತಿರುವ ಭಾರತದಂತಹ ದೇಶಗಳ ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಉಂಟುಮಾಡಬಲ್ಲದು? ವಿವರಿಸಿ.
...ಮುಂದುವರೆಯುವುದು.

No comments:
Post a Comment