"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 3 September 2016

☀ (PART-1)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು : (Model Questions for IAS / KAS Mains Exam in Kannada medium)

☀ (PART-1)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು :
(Model Questions for IAS / KAS Mains Exam in Kannada medium)
•─━━━━━═══════════━━━━━─••─━━━━━═══════════━━━━━─•
★ ಐಎಎಸ್ / ಕೆಎಎಸ್ ಪರೀಕ್ಷೆ :  ಮೇನ್ಸ್ ತಯಾರಿ.
(IAS/KAS Exams - Mains Preparation)



•► ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಗಾಗಿ (ಮೇನ್ಸ್ ಎಕ್ಸಾಂ ಗೆ) direct ಆಗಿ ಸಹಾಯವಾಗುವ ರೀತಿಯಲ್ಲಿ  GS-1,GS-2,GS-3,GS-4 exams ಗೆ ಸಂಬಂಧಪಟ್ಟಂತೆ ಮಾದರಿ ಪರೀಕ್ಷಾ ಪ್ರಶ್ನೆಗಳನ್ನು ಪ್ರಚಲಿತ ಘಟನೆಗಳ ಅವಲೋಕನದೊಂದಿಗೆ ನನ್ನ ಜ್ಞಾನ ಪರಿಮಿತಿಯಲ್ಲಿ ತಯಾರಿಸಿ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನ ಮಾಡಿದ್ದು, ತಾವುಗಳು ಆಯಾ ಪ್ರಶ್ನೆಯನ್ನು (150, 200, 250 ಶಬ್ಧಗಳ ಮಿತಿಯಲ್ಲಿ)  ಸೂಕ್ತ ಉತ್ತರ ಬರೆಯಲು ಪ್ರಯತ್ನಿಸಿ. ಸಾಧ್ಯವಾದಲ್ಲಿ ನನಗೆ Mail ಮೂಲಕ  ಉತ್ತರಗಳನ್ನು ಕಳುಹಿಸಿ. (My Email-- yaseen7ash@gmail.com)



ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆಗಳು :(150, 200, 250 ಶಬ್ಧಗಳ ಮಿತಿಯಲ್ಲಿ)


1. ಕಳೆದ ೨೦೦ ವರ್ಷಗಳಲ್ಲಿ ಜಗತ್ತಿನಾದ್ಯಂತ ಹಾನಿ ಎಸಗುತ್ತಾ ಬಂದ ದುರಾಶೆ ಮೂಲದ, ಜಿ.ಡಿ.ಪಿ. (ಒಟ್ಟು ಆಂತರಿಕ ಉತ್ಪಾದನೆ) ಕೇಂದ್ರಿತ ಮತ್ತು ಪರಿಸರಕ್ಕೆ ಹಾನಿಕರವಾದ ಅಭಿವೃದ್ಧಿಯ ಮಾದರಿಯು ಜಾಗತಿಕ ಜೀವವೈವಿಧ್ಯ ಮತ್ತು ಸಂಪನ್ಮೂಲಗಳ ಬಳಕೆಯಲ್ಲಿ ಉಂಟಾದ ವೈಪರೀತ್ಯಗಳಿಗೆ ಪ್ರತ್ಯಕ್ಷವಾಗಿ ಹೊಣೆಗಾರಿಕೆ ನಿಭಾಯಿಸುತ್ತಿದೆ ಎಂಬ ವಾದ ನಿಜವೇ? ಚರ್ಚಿಸಿ.



2. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಬಗೆಗಿನ ಇತ್ತೀಚಿನ ಹೊಸ ಬೆಳವಣಿಗೆಗಳೊಂದಿಗೆ ಹವಾಮಾನ ವ್ಯತ್ಯಾಸದ ಪರಿಣಾಮಗಳು ಈಗಾಗಲೇ ಗೋಚರಿಸಲು ಆರಂಭಿಸಿವೆ. ಈ ದಿವ್ಯ ನಿರ್ಲಕ್ಷ್ಯದ ಪರಿಣಾಮಗಳಲ್ಲಿ ಭಾರತದ ಕೊಡುಗೆ ಏನು?



3. ಕಳೆದ ಒಂದು ದಶಕದ ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಅವಲೋಕಿಸಿದಾಗ ಆಂತರಿಕ ಸಂಘರ್ಷ, ರಾಜಕೀಯ ಅಸ್ಥಿರತೆ ಅರಾಜಕತೆ ಮುಂತಾದ ಕಾರಣಗಳಿಂದ ಬಲತ್ಕಾರವಾಗಿ ದೇಶದಿಂದ ಹೊರದೂಡುಲ್ಪಡುತ್ತಿರುವ ಅಂತರರಾಷ್ಟ್ರೀಯ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂಥವರ ಸಮಸ್ಯೆಗಳನ್ನು ಆಲಿಸುವ, ನಿವಾರಿಸುವ, ಅವರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ವಿಶ್ವಸಂಸ್ಥೆಯು ಕೈಗೊಂಡ ಕ್ರಮಗಳನ್ನು ವಿಶ್ಲೇಷಿಸಿ.



4.  ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿನೀತಿಯ ಮುಂಜಾಗ್ರತಾ ಕ್ರಮಗಳ ಮಾದರಿಯೊಂದಿಗೆ `ಭಾರತದಲ್ಲೇ ನಿರ್ಮಾಣ’ (`ಮೇಕ್ ಇನ್ ಇಂಡಿಯ’) ಚಳವಳಿಯು ಪರಿಸರಸಹ್ಯವಾದ ರೀತಿಯಲ್ಲಿ ದೇಶದ ಅಭಿವೃದ್ಧಿಯನ್ನು ಸಾಧಿಸವಲ್ಲಿ ಅದರ ಪ್ರಸ್ತುತತೆಯನ್ನು ವಿಮರ್ಶಿಸಿ.



5. ನಮ್ಮ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಭಾಗವಾಗಿರುವ ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಹಲವು ಮಹತ್ವದ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಆಧುನಿಕತೆಯ ನಾಗಾಲೋಟದಲ್ಲಿ ಬಹು ಮುಂದೆ ಸಾಗಿರುವ ಈ ದಿನಗಳಲ್ಲಿ, ಗಾಂಧಿ ಹುಟ್ಟಿದ ನಾಡಿನಲ್ಲಿಯೇ ಗಾಂಧಿ ಚಿಂತನೆಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಮಾತು ಸಮಂಜಸವೇ? ವಿಶ್ಲೇಷಿಸಿ.



6. ಇತ್ತೀಚೆಗೆ ನಡೆದ ಪಂಜಾಬ್‌ನ ಪಠಾಣ್‌ಕೋಟ್ ವಾಯು ನೆಲೆ ಮೇಲಿನ ದಾಳಿಯ ಅವಲೋಕನದೊಂದಿಗೆ ಪ್ರಸ್ತುತ ದೇಶದ ಗಡಿ ಭದ್ರತೆಯ ಸ್ಥಿತಿ ಹಾಗೂ ಭಯೋತ್ಪಾದನೆ ಪ್ರತಿರೋಧ ಕಾರ್ಯಾಚರಣೆಯ ಲೋಪದೋಷಗಳನ್ನು ವಿಮರ್ಶಿಸಿ ಹಾಗೂ ಭದ್ರತೆಯ ಸನ್ನದ್ಧತೆಯನ್ನು ಬಲಪಡಿಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಸ್ಪಷ್ಟೀಕರಿಸಿ.



7. ಬಹುಮತದಿಂದ ಅಂಗೀಕೃತಗೊಂಡ ಸಂವಿಧಾನ ಆಧಾರಿತ ಹೊಸ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ನೇಪಾಳದಲ್ಲಿ ಇತ್ತೀಚೆಗೆ ಉಲ್ಬಣಗೊಂಡ ರಾಜತಾಂತ್ರಿಕ ಸಂದಿಗ್ಧತೆಗೆ ಪ್ರಮುಖ ಕಾರಣಗಳಾವುವು? ಅವರ ಹೊಸ ಸಂವಿಧಾನದ ಕುರಿತು ಭಾರತವು ತಳೆದಿರುವ ನೀತಿಯು ಪರಸ್ಪರ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?



8. ಅಭ್ಯುದಯ ರಾಜಕೀಯ ನೀತಿಯಿಂದ ಪ್ರಾರಂಭಿಸಿ ಇಂದಿನ ನವ-ಉದಾರವಾದಿ ರಾಜಕೀಯ ಚೌಕಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಮುಂದುವರಿದ ಮೀಸಲಾತಿಯು, ಅದರ ಮೂಲ ಉದ್ದೇಶವಾದ ಸಮಾನತೆಯನ್ನು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಸಮಾನ ಅವಕಾಶದ ಸಾಮಾನ್ಯ ತತ್ವದಡಿಯಲ್ಲಿ ಪ್ರಸ್ತುತ ವರ್ತಮಾನದ ಸನ್ನಿವೇಶದಲ್ಲಿ ಅವಲೋಕಿಸಿ.



9. ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಬಡತನದ ಮಧ್ಯೆ ನಿಕಟ ಸಂಬಂಧವಿದೆ. ಸಾಪೇಕ್ಷ ಬಡತನ ಮತ್ತು ಸಾಮಾಜಿಕ ಹಿಂದುಳಿಯುವಿಕೆಯನ್ನು ಸೃಷ್ಟಿಸಿದ ಜಾತಿಯನ್ನೇ ಮೊದಲಿನಿಂದಲೂ ದೇಶದಲ್ಲಿ ಮೀಸಲಾತಿಯ ಹೆಸರಿನಲ್ಲಿ ಅವಕಾಶಗಳ ಹಂಚಿಕೆ ಮತ್ತು ಬಳಕೆಗೆ ಮಾನದಂಡವಾಗಿರಿಸಿರುವುದರ ಪ್ರಸ್ತುತತೆ ಕುರಿತು ಚರ್ಚಿಸಿ.



10. ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿರುವ ರೈತರು ಎದುರಿಸುತ್ತಿರುವ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸಲು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ನೀವು ಕೈಗೊಳ್ಳಬಹುದಾದ ಸ್ವರೂಪಾತ್ಮಕ ಬದಲಾವಣೆಯ ಕ್ರಮಗಳನ್ನು ಸ್ಪಷ್ಟೀಕರಿಸಿ.

— ಮುಂದುವರೆಯುವುದು.

No comments:

Post a Comment