☀ PART-3)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು :
(Model Questions for IAS / KAS Mains Exam in Kannada medium)
•─━━━━━═══════════━━━━━─••─━━━━━═══════════━━━━━─•
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)
★ ಮುಂದುವರೆದ ಭಾಗ..
•► ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಗಾಗಿ (ಮೇನ್ಸ್ ಎಕ್ಸಾಂ ಗೆ) direct ಆಗಿ ಸಹಾಯವಾಗುವ ರೀತಿಯಲ್ಲಿ GS-1,GS-2,GS-3,GS-4 exams ಗೆ ಸಂಬಂಧಪಟ್ಟಂತೆ ಮಾದರಿ ಪರೀಕ್ಷಾ ಪ್ರಶ್ನೆಗಳನ್ನು ನನ್ನ ಜ್ಞಾನ ಪರಿಮಿತಿಯಲ್ಲಿ ತಯಾರಿಸಿ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನ ಮಾಡಿದ್ದು, ತಾವುಗಳು ಆಯಾ ಪ್ರಶ್ನೆಯನ್ನು (150, 200, 250 ಶಬ್ಧಗಳ ಮಿತಿಯಲ್ಲಿ) ಸೂಕ್ತ ಉತ್ತರ ಬರೆಯಲು ಪ್ರಯತ್ನಿಸಿ. ಸಾಧ್ಯವಾದಲ್ಲಿ ನನಗೆ Mail ಮೂಲಕ ಉತ್ತರಗಳನ್ನು ಕಳುಹಿಸಿ. (My Email-- yaseen7ash@gmail.com)
☀ ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆಗಳು : (150, 200, 250 ಶಬ್ಧಗಳ ಮಿತಿಯಲ್ಲಿ)
21. ‘ಸ್ವಚ್ಛ ಭಾರತ’ ಅಭಿಯಾನದ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿರುವ ಎಲ್ಲ ಪ್ರದೇಶಗಳ ಗಂಭೀರ ಸಮಸ್ಯೆಯಾಗಿರುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವಲ್ಲಿ ‘ಕಡಿಮೆ ಬಳಕೆ- ಮರುಬಳಕೆ- ಮರುಸಂಸ್ಕರಣೆ’ಗಳೆಂಬ ಪರಿಸರ ಸ್ನೇಹಿ ಸೂತ್ರಗಳ ಅಳವಡಿಕೆಯ ಮಹತ್ವವನ್ನು ಬರೆಯಿರಿ.
22.ಇತ್ತೀಚಿನ 14ನೇ ಹಣಕಾಸು ಆಯೋಗದ ಅನುದಾನದಡಿ ವಿವಿಧ ಯೋಜನೆಗಳಿಗಾಗಿ ಒದಗಿಸಲ್ಪಟ್ಟ ಮುಕ್ತ ನಿಧಿ ಇದ್ದರೂ ಪಟ್ಟಣ, ನಗರಗಳಲ್ಲಿನ ಮೂಲಭೂತ ಸೌಕರ್ಯಗಳ ಸಮರ್ಪಕ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಇಲ್ಲಿನ ನಗರ ಸ್ಥಳೀಯ ಸಂಸ್ಥೆಗಳ, ಪೌರ ಸಂಸ್ಥೆಗಳ ಸಂಬಂಧಪಟ್ಟ ಇಲಾಖೆಗಳು ತೋರುತ್ತಿರುವ ಉದಾಸೀನ, ವಿಳಂಬ ಧೋರಣೆಗಳಿಗೆ ಹಾಗೂ ಅವುಗಳ ಸಮರ್ಪಕ ಅನುಷ್ಠಾನದಲ್ಲಾಗುತ್ತಿರುವ ವೈಫಲಕ್ಕೆ ಪ್ರಮುಖ ಕಾರಣಗಳನ್ನು ಚರ್ಚಿಸಿ.
23. ಭಾರತದ ಜೊತೆ ಉದ್ವಿಗ್ನತೆ ಹೆಚ್ಚಿಸುವುದರ ಮೂಲಕ ತನ್ನ ಪ್ರಭಾವ ಅಥವಾ ಶಾಂತಿ ಪ್ರಕ್ರಿಯೆಗೆ ಅಡ್ಡಗಾಲಾಗಲು ಪ್ರಯತ್ನಿಸುವ ಹತಾಶ ಸ್ಥಿತಿಯನ್ನು ಪ್ರತಿಪಾದಿಸುವಂತಹ ಪಾಕಿಸ್ತಾನ ಮಿಲಿಟರಿಯ ಕಾರ್ಯತಂತ್ರವು ಇತ್ತೀಚೆಗೆ ಪಠಾಣ್‌ಕೋಟ್ ದಾಳಿಯಲ್ಲಿ ಮತ್ತೆ ಸ್ಪಷ್ಟಪಡಿಸಿದೆ. ಇಂತಹ ಹಿನ್ನಡೆಗಳ ಮಧ್ಯೆಯೂ ಉಭಯ ದೇಶಗಳ ನಡುವೆ ಪರಸ್ಪರ ವಿಶ್ವಾಸವರ್ಧನೆಯ ಬಾಂಧವ್ಯ ವೃದ್ಧಿಗೆ ಹಾಗೆಯೇ ಭಯೋತ್ಪಾದನೆ ಮಟ್ಟ ಹಾಕುವ ಪ್ರಯತ್ನಗಳಿಗೆ ತಾವು ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ.
24. ಅನೇಕ ಕ್ಷೇತ್ರಗಳಲ್ಲಿ ರಾಷ್ಟ್ರ ಪ್ರಗತಿ ಸಾಧಿಸುತ್ತಿದ್ದರೂ ಸಾಮಾಜಿಕ ನೆಲೆಯಲ್ಲಿ ಲಿಂಗ ತಾರತಮ್ಯ ಮುಂದುವರಿದಿದೆ ಎಂಬುದನ್ನು ಇತ್ತೀಚಿನ ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತದಲ್ಲಿ ಮತ್ತಷ್ಟು ಕುಸಿತ ಕಂಡಿರುವುದರ ಕುರಿತು ಅಂಕಿಅಂಶಗಳು ಎತ್ತಿ ಹೇಳುತ್ತಿವೆ. ಇದರ ಹಿಂದಿರುವ ಪ್ರಮುಖ ಕಾರಣಗಳಾವವು ? ಕೇಂದ್ರ ಸರ್ಕಾರದ ‘ಬೇಟಿ ಬಚಾವೊ, ಬೇಟಿ ಪಢಾವೊ ’ಎಂಬ ಅಭಿಯಾನವು ಜನಸಮುದಾಯದಲ್ಲಿ ಅರಿವು ಮೂಡಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುವುದು?
25.ಯಾವುದೇ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅಲ್ಲಿನ ಜೀವವೈವಿಧ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ ಭಾರತದಲ್ಲಿನ ಜೀವ ವೈವಿಧ್ಯ ಹಾಗು ಅದರ ತಾಣಗಳನ್ನು ರಕ್ಷಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದನ್ನು ನೀವು ಒಪ್ಪುವಿರಾ? ವಿಶ್ಲೇಷಿಸಿ.
26. ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಮಹಿಳೆಯರನ್ನು ದೇವದಾಸಿಯರಾಗಿ ಮಾಡುವುದು ಅತ್ಯಂತ ಅಸಹ್ಯ, ಅನಾಗರಿಕ ಪಿಡುಗು. ಇದು ಮಾನವತೆಗೊಂದು ಕಳಂಕ. ಈ ಪಿಡುಗನ್ನು ದೇಶದಾದ್ಯಂತ ನಿಷೇಧಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿ ಅನೇಕ ರಾಜ್ಯಗಳು ಪ್ರತ್ಯೇಕ ಕಾಯ್ದೆಯನ್ನೇ ಮಾಡಿವೆ. ಆದಾಗ್ಯೂ ಇದನ್ನು ಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಯಾಕೆ? ಮಹಿಳೆಯರ ಘನತೆ- ಗೌರವಕ್ಕೆ ಧಕ್ಕೆ ತರುವ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ತಾವು ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ? ವಿವರಿಸಿ.
27. ಇತ್ತೀಚೆಗೆ ರಾಷ್ಟ್ರಾದ್ಯಂತ ಭುಗಿಳೇಳುತ್ತಿರುವ ಮೀಸಲಾತಿ ಚಳವಳಿಗಳು ರಾಷ್ಟ್ರವ್ಯಾಪಿಯಾಗಿರುವ ಅಸಮಾನತೆ, ಅಸಮಾಧಾನ, ದ್ವೇಷಗಳನ್ನೊಳಗೊಂಡ ರಾಜಕೀಯ ಆಯಾಮ ಪಡೆಯುತ್ತಿರುವ ಮೀಸಲಾತಿಗೆ ಸೂಕ್ತ ಉದಾಹರಣೆಗಳಾಗಿವೆ. ಇಂತಹ ಪ್ರಚಲಿತ ಮೀಸಲಾತಿ ವ್ಯವಸ್ಥೆಯ ಬದಲಾಗಿ ಸಮಾನತೆ, ದಕ್ಷತೆ, ಸನ್ನಡತೆಯಿಂದ ಕೂಡಿದ ರಾಷ್ಟ್ರೀಕೃತ ಏಕರೂಪದ ಮೀಸಲಾತಿಯನ್ನು ಅನ್ವಯಿಸುವಲ್ಲಿ ತಾವು ಕೈಗೊಳ್ಳಬಹುದಾದ ರಚನಾತ್ಮಕ ಕ್ರಮಗಳಾವವು?
28. ‘ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಈ ರಂಗದ ಲೋಪಗಳನ್ನು ಪರಿಹರಿಸಲು ಕೈಗೊಳ್ಳಬಹುದಾದ ದೂರಗಾಮಿ ಪರಿಣಾಮ ಬೀರುವ ಸುಧಾರಣಾ ಕ್ರಮಗಳನ್ನೊಳಗೊಂಡ ಪ್ರೊ. ಸ್ವಾಮಿನಾಥನ್ ಸಮಿತಿಯ ಸಮಗ್ರ ಸ್ವರೂಪದ ಪ್ರಮುಖ ಶಿಫಾರಸುಗಳನ್ನು ಚರ್ಚಿಸಿ.
29. ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತು ಅಭಿವೃದ್ಧಿ ಹೊಂದಿದ ಆಧುನಿಕ ಸಮಾಜಕ್ಕೆ ಸೇರ್ಪಡೆಯಾಗಲು ‘ಸ್ವಚ್ಛ ಭಾರತ್’ ಘೋಷಣೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಒಂದು ವರ್ಷ ಕಳೆದು ಹೋದರೂ ಭಾರಿ ಬದಲಾವಣೆ ಏನೂ ಕಂಡುಬಂದಿಲ್ಲ. ಮೂಲಭೂತವಾಗಿ ನಮ್ಮ ಸಂಸ್ಕೃತಿ, ಮತ್ತು ಆಡಳಿತ ವ್ಯವಸ್ಥೆಯಲ್ಲಿಯೇ ಲೋಪವೇ ಈ ಘೋಷಣೆಯ ಹಿನ್ನಡೆಗೆ ಕಾರಣ ಎನ್ನಬಹುದೇ? ನಿಮ್ಮ ಪ್ರಕಾರ ‘ಸ್ವಚ್ಛ ಭಾರತ್’ ಘೋಷಣೆಯ ಹಿನ್ನಡೆಗೆ ಕಾರಣೀಭೂತವಾದ ಪ್ರಮುಖ ಅಂಶಗಳು ಯಾವವು?
30. ಇತ್ತೀಚೆಗೆ ನಿರ್ಭಯಾ ಘಟನೆಯ ಬಳಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳು ಬಿಗಿಯಾಗಿದ್ದರೂ ದೇಶದಾದ್ಯಂತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನನಿತ್ಯ ಸುದ್ದಿಯಾಗುತ್ತಲೇ ಇವೆ.ಇಂತಹ ದೌರ್ಜನ್ಯಗಳ ಹೆಚ್ಚಳ ಹಿಂದಿರುವ ನೈಜ ಕಾರಣಗಳು ಯಾವುವು? ಅತ್ಯಾಚಾರ, ಲೈಂಗಿಕ ದೌರ್ಜನ್ಯ ತಡೆಯುವ ವಿಚಾರದಲ್ಲಿ ನ್ಯಾಯಮೂರ್ತಿ ಜೆ.ಎಸ್.ವರ್ಮ ಸಮಿತಿ ನೀಡಿದ ವರದಿಯು ಇಂತಹ ದೌರ್ಜನ್ಯ ನಿಯಂತ್ರಿಸುವಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

...ಮುಂದುವರೆಯುವುದು.
No comments:
Post a Comment