"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 23 September 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ - ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015 ರ ಪ್ರಮುಖ ಅಂಶಗಳು : (Karnataka Gram Swaraj and Panchayat Raj Act - 2015)

☀.ಪಿಡಿಓ ಪರೀಕ್ಷೆ ವಿಶೇಷಾಂಕ - ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015 ರ ಪ್ರಮುಖ ಅಂಶಗಳು :
(Karnataka Gram Swaraj and Panchayat Raj Act - 2015)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015 
(Karnataka Gram Swaraj and Panchayat Raj Act - 2015)



- ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾವಣೆ.
- ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಸುದೀರ್ಘ ಮಸೂದೆ.
- ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ, ಅದಕ್ಕೆ ತಕ್ಕ ಸಂಬಳ ಮತ್ತು ಇತರ ಸವಲತ್ತುಗಳು ಸಿಗಲಿವೆ.


●.ಮಸೂದೆಯಲ್ಲಿನ ಪ್ರಮುಖ ಅಂಶಗಳು :
━━━━━━━━━━━━━━━━━━━━━━━

ಗ್ರಾಮಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ಎಲ್ಲ ಯೋಜನೆಗಳನ್ನು ತಾಲ್ಲೂಕು ಹಾಗೂ ಜಿಲ್ಲಾ ಯೋಜನಾ ಸಮಿತಿಗಳ ಮೂಲಕವೇ ಅನುಷ್ಠಾನಕ್ಕೆ ತರಲಾಗುತ್ತದೆ.

ಜಿಲ್ಲಾ ಸಮಿತಿಗಳಿಂದ ಬಂದ ಪ್ರಸ್ತಾವಗಳಿಗೆ ಅನುಮೋದನೆ ನೀಡಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸ್ಥಾಪಿಸಲಾಗುತ್ತದೆ.

ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಸಾಮಾನ್ಯ, ಸಾಮಾಜಿಕ ನ್ಯಾಯ ಹಾಗೂ ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗಳನ್ನು ಹೊಂದಲು ಅವಕಾಶ ಕಲ್ಪಿಸಲಾಗುತ್ತದೆ.

ಚುನಾಯಿತ ಸದಸ್ಯರು ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆ ಮಾಡುವುದು ಕಡ್ಡಾಯವಾಗಿದೆ.


●.ಜನವಸತಿ ಸಭಾ :
━━━━━━━━━━━━━

ಗ್ರಾಮದ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸಲು ಜನವಸತಿ ಸಭಾ ಪರಿಕಲ್ಪನೆ ಪರಿಚಯ. ನಿರ್ಣಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಜನವಸತಿ ಸಭಾಗಳು ಆರು ತಿಂಗಳಿಗೆ ಕನಿಷ್ಠ ಒಂದು ಸಲ ಸಭೆ ಸೇರಬೇಕು.

ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತ ಸದಸ್ಯ ಆ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕು.

ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಇಲ್ಲವೆ 20 ಸದಸ್ಯರು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆಯಲ್ಲಿ ಕೋರಂ ಇರಬೇಕು’

ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದು, ನೈರ್ಮಲ್ಯ ಕಾಪಾಡಲು ಸಲಹೆ ನೀಡುವುದು, ವಸತಿ ಪ್ರದೇಶಕ್ಕೆ ಅಗತ್ಯವಾದ ಯೋಜನೆ ರೂಪಿಸುವುದು, ಬೀದಿದೀಪಗಳ ನಿರ್ವಹಣೆ, ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಜನವಸತಿ ಸಭಾದ ಕರ್ತವ್ಯಗಳಾಗಿವೆ’ .



●.ಗ್ರಾಮ ಪಂಚಾಯಿತಿ ಕರ್ತವ್ಯಗಳು :
━━━━━━━━━━━━━━━━━━━━━━

ಪಂಚಾಯಿತಿ ಪ್ರದೇಶದ ವಾರ್ಷಿಕ ಯೋಜನೆ ಸಿದ್ಧಪಡಿಸುವುದು.

ವಾರ್ಷಿಕ ಬಜೆಟ್‌ ಸಿದ್ಧಪಡಿಸುವುದು.

ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು.

ಸಾರ್ವಜನಿಕ ಸ್ವತ್ತುಗಳಲ್ಲಿನ ಅತಿಕ್ರಮಣ ತಡೆಯುವುದು.

ಸಮುದಾಯ ಕಾರ್ಯಗಳಿಗೆ ವಂತಿಗೆ ನೀಡುವುದು.

ಗ್ರಾಮಗಳ ಅತ್ಯಾವಶ್ಯಕ ಅಂಕಿಅಂಶ ಇಟ್ಟುಕೊಳ್ಳುವುದು.

ಸಮಗ್ರ ಗ್ರಾಮ ಕೃಷಿ ಯೋಜನೆ ಸಿದ್ಧಪಡಿಸಿ, ಮೇಲ್ವಿಚಾರಣೆ ನಡೆಸುವುದು

ನರ್ಸರಿ ಸ್ಥಾಪಿಸುವುದು

ಮಣ್ಣು, ನೀರು ಮತ್ತು ಬೀಜಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು

ಮಾರುಕಟ್ಟೆ ಧಾರಣೆ ಪ್ರದರ್ಶಿಸುವುದು

ಕೃಷಿವಿಮಾ ಯೋಜನೆಗಳ ಮೇಲ್ವಿಚಾರಣೆ ಮಾಡುವುದು

ಸಾಂಕ್ರಾಮಿಕ ರೋಗ ತಡೆಗಟ್ಟುವುದು

ಗ್ರಾಮೀಣ ಮೀನು ಮತ್ತು ಮಾಂಸದ ಮಾರುಕಟ್ಟೆ ಸ್ಥಾಪಿಸುವುದು

ಹುಲ್ಲುಗಾವಲು ಅಭಿವೃದ್ಧಿ ಮಾಡುವುದು

ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡುವುದು

ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಚಟುವಟಿಕೆಗೆ ಉತ್ತೇಜನ ನೀಡುವುದು

ಗ್ರಾಮೀಣ ವಸತಿ ಸಹಕಾರ ಸಂಘಗಳ ಸ್ಥಾಪನೆ

ನೀರು ಸರಬರಾಜು ಯೋಜನೆ ನಿರ್ವಹಣೆ

ಸ್ಮಶಾನಗಳ ವ್ಯವಸ್ಥೆ

ಭೂ, ಜಲ ಮಾರ್ಗ ನಿರ್ವಹಣೆ

ಪ್ರಾಥಮಿಕ ಶಾಲೆಗಳ ಮೇಲುಸ್ತುವಾರಿ ನೋಡುವುದು

ವಾಚನಾಲಯಗಳ ನಿರ್ವಹಣೆ

ಆಟದ ಮೈದಾನ ನಿರ್ಮಾಣ

ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಮತ್ತು ಜಾತ್ರೆಗಳನ್ನು ನಡೆಸುವುದು

ಎಸ್‌ಸಿ, ಎಸ್‌ಟಿ ಕಾಲೊನಿಗಳಿಗೆ ಸೌಲಭ್ಯ ಒದಗಿಸುವುದು

ಗ್ರಾಮದ ಇತಿಹಾಸ, ಸಂಸ್ಕೃತಿ, ಪರಂಪರೆಗಳ ದತ್ತಾಂಶ ಸಂಗ್ರಹ

ಒಟ್ಟು 30 ಇಲಾಖೆಗಳ ಹೊಣೆ ನಿರ್ವಹಣೆ



●.ತಾಲ್ಲೂಕು ಪಂಚಾಯಿತಿ ಕರ್ತವ್ಯಗಳು :
━━━━━━━━━━━━━━━━━━━━━━━

ಎಲ್ಲ ಗ್ರಾಮಗಳ ವಾರ್ಷಿಕ ಯೋಜನೆ ಪರಿಶೀಲನೆ

ತಾಲ್ಲೂಕು ಬಜೆಟ್‌ ಸಿದ್ಧಪಡಿಸುವುದು

ಜಿಲ್ಲಾ ಪಂಚಾಯಿತಿ ವಹಿಸಿದ ಕಾರ್ಯ ಮಾಡುವುದು

ಕೀಟನಾಶಕ ಸಂಗ್ರಹ ಮಾಡುವುದು

ಉಗ್ರಾಣ ಹಾಗೂ ಶೈತ್ಯಾಗಾರದ ವ್ಯವಸ್ಥೆ

ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯಗಳ ನಿರ್ವಹಣೆ

ತಾಲ್ಲೂಕಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗಳ ದತ್ತಾಂಶ ಸಂಗ್ರಹ



●.ಜಿಲ್ಲಾ  ಪಂಚಾಯಿತಿ :
━━━━━━━━━━━━━━

ಜಿಲ್ಲಾಮಟ್ಟದ ಯೋಜನೆಗಳ ಉಸ್ತುವಾರಿ

ಗೋದಾಮುಗಳ ಸ್ಥಾಪನೆ

ಅಂತರ್ಜಲ ಹೆಚ್ಚಿಸಲು ಯೋಜನೆ ರೂಪಿಸುವುದು

ಉದ್ಯೋಗ ಮೇಳ ನಡೆಸುವುದು

ಯುವಜನ ಮೇಳ ಏರ್ಪಡಿಸುವುದು

ದನಗಳ ಪರಿಷೆ ನಡೆಸುವುದು

ಜಿಲ್ಲಾ ಅಂಕಿ–ಸಂಖ್ಯೆಗಳ ಸಂಗ್ರಹ ಮಾಡುವುದು.

(Telegram App ನಲ್ಲಿ "ಸ್ಪರ್ಧಾಲೋಕ Channel ನ್ನು ಸೇರಲು ಈ ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ.. https://telegram.me/spardhaloka

No comments:

Post a Comment