"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 27 October 2015

☀ಕರ್ನಾಟಕ ರಾಜ್ಯದ ಆರ್ಥಿಕತೆ ಕುರಿತ ಸಾಮಾನ್ಯ ಜ್ಞಾನ (ಭಾಗ -21)  (General knowledge on Karnataka State Economics (Part-21)) ☆.(ಕರ್ನಾಟಕ ಆರ್ಥಿಕ ಸಮೀಕ್ಷೆ 2014-15)

☀ಕರ್ನಾಟಕ ರಾಜ್ಯದ ಆರ್ಥಕತೆ ಕುರಿತ ಸಾಮಾನ್ಯ ಜ್ಞಾನ (ಭಾಗ -21)
(General knowledge on Karnataka State Economics (Part-21))
☆.(ಕರ್ನಾಟಕ ಆರ್ಥಿಕ ಸಮೀಕ್ಷೆ 2014-15)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕರ್ನಾಟಕ ಆರ್ಥಿಕ ಸಮೀಕ್ಷೆ 2014-15
(Karnataka Economic Survey 2014-15)

★ ಕರ್ನಾಟಕದ ಆರ್ಥಿಕತೆ
(Karnataka State Economics)

■. ಕೆಎಎಸ್ / ಐಎಎಸ್ ಅಭ್ಯರ್ಥಿಗಳಿಗೆ ಹಾಗೂ ಇತರೆ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾಗುವ ದೃಷ್ಟಿಯಿಂದ 'ಕರ್ನಾಟಕ ಆರ್ಥಿಕ ಸಮೀಕ್ಷೆ 2014-15'ರ ಅನುಸಾರ ಸಿದ್ಧಪಡಿಸಿದ 55 ಪ್ರಶ್ನೆಗಳ ಮಾದರಿ ಪ್ರಶ್ನೆ ಪತ್ರಿಕೆಯನ್ನು ಗೆಳೆಯರ ಸಹಾಯದಿಂದ ಸಿದ್ಧಪಡಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ಇದು ಸಹಾಯಕವಾಗುತ್ತದೆಂದು ನನ್ನ ಅನಿಸಿಕೆ.

-ಏನಾದರೂ ಪ್ರಮಾದಗಳು ನಿಮ್ಮ ಗಮನಕ್ಕೆ ಬಂದಲ್ಲಿ ಖಂಡಿತ ಕಮೆಂಟ್ ಮಾಡುವುದನ್ನು ಮರೆಯದಿರಿ.


1. 2014-15ನೇ ಸಾಲಿನ ಕರ್ನಾಟಕ ಆರ್ಥಿಕಸಮೀಕ್ಷೆಯ ಪ್ರಕಾರ, ರಾಜ್ಯದ ಸ್ವಂತ ತೆರಿಗೆಆದಾಯದಲ್ಲಿ ಮಾರಾಟ ತೆರಿಗೆ/ವ್ಯಾಟ್ ಮುಖ್ಯಮೂಲವಾಗಿದ್ದು, 2014-15ನೇ ಸಾಲಿನಲ್ಲಿ ಅದರಪಾಲು ಎಷ್ಟಿತ್ತು?
A. 43.31
B. 48.31
C. 53.31●
D. 58.81


2. 2013-14ರಲ್ಲಿ ಅಭಿವೃದ್ಧಿ ವೆಚ್ಚ 81454.10 ಕೋಟಿರೂ. ಗಳಾಗಿತ್ತು. ಅದು 2014-15ರಲ್ಲಿ ಶೇ. ಎಷ್ಟು
ಏರಿಕೆಯಾಯಿತು?
A. 10.57%
B. 12.67%
C. 15.57%●
D. 17.77%


3. 2014-15ನೇ ಸಾಲಿನಲ್ಲಿ ಕೆಳಕಂಡ ಯಾವ ಭಾಗದ 4 ಮತ್ತು 5ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ
ಸರಳ ರೀತಿಯಲ್ಲಿ ಗಣಿತ ಬೋಧನೆ ಸುಗಮಗೊಳಿಸಲುಅಕ್ಷರ ಗಣಿತ ಕಿಟ್'ಗಳನ್ನು ವಿತರಿಸಲಾಯಿತು?
A. ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ
B. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ●
C. ಹಳೆ ಮೈಸೂರು ಭಾಗದ ಜಿಲ್ಲೆಗಳಿಗೆ
D. ಕರಾವಳಿ ಜಿಲ್ಲೆಗಳಿಗೆ


4. 2014-15ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಕೆಳಕಂಡ ಯಾವ ಅವಧಿಗಾಗಿ ಹೊಸ ಕೈಗಾರಿಕಾ
ನೀತಿಯನ್ನು ಜಾರಿಗೊಳಿಸಿತು?
A. 2014-16
B. 2014-17
C. 2014-19●
D. 2014-20


5. 2014-15ರಲ್ಲಿ ಸರ್ಕಾರ ನೂತನ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿತು. ಇದರನ್ವಯ
ಕೈಗಾರಿಕಾ ಬೆಳವಣಿಗೆಯ ದರವನ್ನು ಶೇ.12ರಷ್ಚನ್ನು ಕಾಯ್ದುಕೊಂಡು, ರಾಜ್ಯ ಜಿಡಿಪಿಗೆ ಉತ್ಪಾದನಾ ಕ್ಷೇತ್ರದ ಕೊಡುಗೆಯನ್ನು
ಶೇ.16.87ರಿಂದ ಶೇ.ಎಷ್ಟಕ್ಕೆ ಹೆಚ್ಚಿಸುವುದು ಗುರಿಯಾಗಿತ್ತು?
A. ಶೇ. 18
B. ಶೇ. 19
C. ಶೇ. 20●
D. ಶೇ. 22


6. ಪ್ರಸಕ್ತ ಬೆಲೆಗಳಲ್ಲಿನ ರಾಜ್ಯದ ನಿವ್ವಳ ಉತ್ಪನ್ನವನ್ನು ವಿತ್ತೀಯ ವರ್ಷದ ಯಾವ ಅವಧಿಯಲ್ಲಿ ಇರಬಹುದಾದ
ಅಂದಾಜು ಜನಸಂಖ್ಯೆಯಿಂದ ಭಾಗಿಸಿ ತಲಾ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ?
A. ಏಪ್ರಿಲ್ 1
B. ಆಗಸ್ಟ್ 1
C. ಆಕ್ಟೋಬರ್ 1●
D. ನವೆಂಬರ್ 1


7. ರಾಜ್ಯದ ತೆರಿಗೆಯೇತರ ವರಮಾನ ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ಇದೆ.
ಕಳೆದ 2-3 ವರ್ಷಗಳಿಂದ ಅದು ಶೇಕಡಾ ಎಷ್ಟರ ಆಸುಪಾಸಿನಲ್ಲಿದೆಯೆಂದು ಕರ್ನಾಟಕ ಆರ್ಥಿಕ
ಸಮೀಕ್ಷೆ 2014-15ರಲ್ಲಿ ಹೇಳಲಾಗಿದೆ?
A. 1%●
B. 2%
C. 3%
D. 4%


8. 2014-15ನೇ ಸಾಲಿನಲ್ಲಿ ಒಟ್ಟು ಎಷ್ಟು ಹೊಸ ಕಾರ್ಯಕ್ರಮಗಳನ್ನು ಘೋಷಿಸಲಾಗಿತ್ತು?
A. 77
B. 87
C. 97●
D. 107


9. 2014-15ನೇ ಸಾಲಿನಲ್ಲಿ ಘೋಷಿಸಲಾದ ಹೊಸ ಕಾರ್ಯಕ್ರಮಗಳನ್ನು ಆಯಾ ಇಲಾಖೆವಾರು {ಅತಿ
ಹೆಚ್ಚು ದಿಂದ ಕಡಿಮೆ} ಪಟ್ಟಿ ಮಾಡಿ.
A. ಸಮಾಜ ಕಲ್ಯಾಣ ಇಲಾಖೆ
B. ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ
C. ಕನ್ನಡ, ಕಲೆ ಮತ್ತು ಮಾಹಿತಿ●
D. ಯು.ಡಿ.ಡಿ


10. 2014-15ನೇ ಸಾಲಿನಲ್ಲಿ ವಿಶ್ವಬ್ಯಾಂಕ್ ಮತ್ತು ಇತರೆ ವಿದೇಶಿ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯದ
ಒಟ್ಟು ಎಷ್ಟು ಯೋಜನೆಗಳಿಗೆ 10762.39 ಕೋ.ರೂ.ಗಳ ಅನುದಾನ ದೊರಕಿದೆ?
A. 10
B. 12
C. 15●
D. 16


11. ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದ ಪ್ರಕಾರ, ಬೆಂಗಳೂರು ನಗರವು ಜಾಗತಿಕ ಮಾಹಿತಿ
ತಂತ್ರಜ್ಞಾನ ಮುಂಚೂಣಿಯಲ್ಲಿದ್ದು, ಸುಮಾರು ಎಷ್ಟು ಕಂಪನಿಗಳು ಇಲ್ಲಿ ಹೊರಗುತ್ತಿಗೆ ವಹಿವಾಟನ್ನು ನಡೆಸುತ್ತಿವೆ?
A. 200
B. 300
C. 400
D. 500●


12. IT/ITES ಸ್ಚಾರ್ಟ್ - ಅಪ್ಸ್ ಹಾಗೂ ಇತರೆಜ್ಞಾನಾಧಾರಿತ ಉದ್ದಿಮೆಗಳಿಗೆ 1964ರ ಕರ್ನಾಟಕ
ಕೈಗಾರಿಕಾ ಉದ್ಯೋಗ (ನಿಲುವು ಆದೇಶ) ನಿಯಮಗಳಿಂದ ಎಷ್ಟು ವರ್ಷಗಳ ವಿನಾಯ್ತಿ ನೀಡಲಾಗಿದೆ?
A. 2 ವರ್ಷ
B. 3 ವರ್ಷ
C. 5 ವರ್ಷ●
D. 10 ವರ್ಷ


13. ಕರ್ನಾಟಕವು ಸಾಫ್ಟವೇರ್/ಸೇವೆಗಳ ರಫ್ತಿನಲ್ಲಿ
ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು,
ಮಾರಾಟ ಸರಕು ರಫ್ತಿನಲ್ಲಿ ಎಷ್ಟನೇ ಸ್ಥಾನದಲ್ಲಿದೆ
ಎಂದು ಕ. ಆ. ಸ. 2014-15ರಲ್ಲಿ ತಿಳಿಸಲಾಗಿದೆ?
A. 2ನೇ
B. 3ನೇ
C. 4ನೇ●
D. 5ನೇ


14. ಗ್ರಾಮೀಣ ಆಶ್ರಯ/ ಬಸವ ವಸತಿ ಯೋಜನೆ
ಹಾಗೂ ಗ್ರಾಮೀಣ ಅಂಬೇಡ್ಕರ್
ಯೋಜನೆಯನ್ವಯ ಎಷ್ಟು ವಾರ್ಷಿಕ ಆದಾಯಕ್ಕಿಂತ
ಕಡಿಮೆ ಇರುವ ವಸತಿರಹಿತರಿಗೆ ವಸತಿ ಸೌಕರ್ಯ
ಕಲ್ಪಿಸಲಾಗುತ್ತಿದೆ?
A. 20,000ರೂ
B. 28,000ರೂ.
C. 32,000ರೂ.●
D. 40,000ರೂ


15. 2013-14ನೇ ಸಾಲಿನಿಂದ ಗ್ರಾಮೀಣ ವಸತಿ
ಯೋಜನೆಗಾಗಿ ಪ್ರತಿ ಮನೆಯ ಕನಿಷ್ಪ ಘಟಕ ವೆಚ್ಚವನ್ನು
ಎಷ್ಟೆಂದು ನಿಗದಿಪಡಿಸಲಾಯಿತು?
A. 1 ಲಕ್ಷ ರೂ.
B. 1.20 ಲಕ್ಷ ರೂ.
C. 1.50 ಲಕ್ಷ ರೂ.●
D. 2 ಲಕ್ಷ ರೂ.


16. ' ಕರ್ನಾಟಕ ರೂರಲ್ ಇನ್'ಫ್ರಾಸ್ಟ್ರಕ್ಚರ್
ಡೆವಲಪ್'ಮೆಂಟ್ ಲಿಮಿಟೆಡ್' 2013-14ನೇ ಸಾಲಿನಲ್ಲಿ
ರಾಜ್ಯ ಸರ್ಕಾರಕ್ಕೆ 2.45 ಕೋ.ರೂ.ಗಳ
ಲಾಭಾಂಶವನ್ನು ನೀಡಿತು. ಅಂದಹಾಗೆ ಈ ನಿಗಮ
ಆ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭವೆಷ್ಟು?
A. 59.22ಕೋ.ರೂ
B. 69.11ಕೋ.ರೂ.●
C. 79.31ಕೋ.ರೂ
D. 89.41ಕೋ.ರೂ


17. ಈಗ 'ಕರ್ನಾಟಕ ರೂರಲ್ ಇನ್'ಫ್ರಾಸ್ಟ್ರಕ್ಚರ್
ಡೆವಲಪ್'ಮೆಂಟ್ ಲಿಮಿಟೆಡ್' ಆಗಿರುವ 'ಕರ್ನಾಟಕ
ಭೂಸೇನಾ ನಿಗಮ' ಕರ್ನಾಟಕ ಸರ್ಕಾರದ
ಅಂಗಸಂಸ್ಥೆಯಾಗಿ ಯಾವ ವರ್ಷ
ಪ್ರಾರಂಭವಾಗಿತ್ತು ?
A. 1970
B. 1972
C. 1974●
D. 1976


18. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯನ್ವಯ 2014ರ
ಡಿಸೆಂಬರ್ ಅಂತ್ಯದ ತನಕ ಎಷ್ಟು ಕುಟುಂಬಗಳಿಗೆ
ಉದ್ಯೋಗ ನೀಡಲಾಗಿತ್ತೆಂದು ಕ. ಆ. ಸ.
2014-15ರಲ್ಲಿ ಹೇಳಲಾಗಿದೆ?
A. 6.56 ಲಕ್ಷ ಕುಟುಂಬಗಳಿಗೆ
B. 7.66 ಲಕ್ಷ ಕುಟುಂಬಗಳಿಗೆ
C. 8.26 ಲಕ್ಷ ಕುಟುಂಬಗಳಿಗೆ●
D. 9.76 ಲಕ್ಷ ಕುಟುಂಬಗಳಿಗೆ


19. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (National Urban Livelihood Mission -
NULM ) ದನ್ವಯ ಎಷ್ಟು ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳು ಈ ಯೋಜನೆಯನ್ನು
ಅನುಷ್ಠಾನಗೊಳಿಸುವ ಅರ್ಹತೆ ಪಡೆದಿರುತ್ತವೆ?
A. 50,000 ಮೇಲ್ಪಟ್ಟು
B. 75,000 ಮೇಲ್ಪಟ್ಟು
C. 1 ಲಕ್ಷಕ್ಕಿಂತ ಹೆಚ್ಚು●
D. 2ಲಕ್ಷಕ್ಕಿಂತ ಹೆಚ್ಚು


20. 'ಭೂಚೇತನ ಪ್ಲಸ್' ಯೋಜನೆಯನ್ವಯ 2013-14ನೇ ಸಾಲಿನಿಂದ 2016-17ನೇ ಸಾಲಿನತನಕ
ಪ್ರಾಯೋಗಿಕವಾಗಿ ಕೆಳಕಂಡ ಯಾವ ಜಿಲ್ಲೆಗಳು ಆಯ್ಕೆಯಾಗಿವೆ ?
A. ತುಮಕೂರು
B. ರಾಯಚೂರು
C. ಚಿಕ್ಕಮಗಳೂರು
D. ವಿಜಯಪುರ


21. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರಲ್ಲಿ ತಿಳಿಸಿದ
ಪ್ರಕಾರ, ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡಾ
ಎಷ್ಟು ಜನ ಕೆಲಸಗಾರರು?
A. ಶೇ.35.40
B. ಶೇ.40.50
C. ಶೇ.45.60●
D. ಶೇ.50.60


22. 2013-14ನೇ ಸಾಲಿನಲ್ಲಿ ರಾಜ್ಯದ ಒಟ್ಟು
ಮೀನು ಉತ್ಪಾದನೆ 5.55ಲಕ್ಷ ಟನ್'ಗಳಷ್ಟಿತ್ತು.
ಅಂದಹಾಗೆ ಇದು ದೇಶದ ರಾಷ್ಟ್ರೀಯ
ಮೀನು ಉತ್ಪಾದನೆಯ ಶೇಕಡಾವಾರು
ಪ್ರಮಾಣ ಎಷ್ಟು?
A. 2.3%
B. 3.8%
C. 4.6%
D. 5.8%●


23. 2013-14ನೇ ಸಾಲಿನಲ್ಲಿ ರಾಜ್ಯ ಸಮುದ್ರ
ಮೀನು ಉತ್ಪಾದನೆ ಹಾಗೂ ಒಳನಾಡು
ಮೀನು ಉತ್ಪಾದನೆಯಲ್ಲಿ ಕ್ರಮವಾಗಿ ಎಷ್ಟನೇ
ಸ್ಥಾನದಲ್ಲಿತ್ತು?
A. 5 ಹಾಗೂ 7
B. 6 ಹಾಗೂ 9●
C. 7 ಹಾಗೂ 9
D. 9 ಹಾಗೂ 6


24. 2012-13ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ
ಶಾಲೆ ತೊರೆಯುವವರ ಸಂಖ್ಯೆ 2.56 ಇತ್ತು. ಅದು
2013-14ನೇ ಸಾಲಿನಲ್ಲಿ ಎಷ್ಟಕ್ಕೆ ಕಡಿಮೆಯಾಯಿತು
ಅಥವಾ ಏರಿಕೆಯಾಯಿತು?
A. 1.96%
B. 2.16%
C. 2.96%●
D. 3.16%


25. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 2001ರಲ್ಲಿ
1000ಕ್ಕೆ 41ಇದ್ದುದು 2013ನೇ ಸಾಲಿಗೆ ಶೇಕಡಾ
ಎಷ್ಟಕ್ಕೆ ಏರಿಕೆ ಅಥವಾ ಇಳಿಕಯಾಯಿತು?
A. 46
B. 51
C. 31●
D. 21


26. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15 ಪ್ರಕಾರ,
ರಾಜ್ಯದ ಜಿಲ್ಲಾವಾರು ಅತಿಹೆಚ್ಚು
ನಗರೀಕರಣಕ್ಕೊಳಗಾದ ಜಿಲ್ಲೆಗಳನ್ನು 1 - 4 ಈ
ಕ್ರಮದಲ್ಲಿ ದಾಖಲಿಸಿ.
A. ಧಾರವಾಡ
B. ಬೆಂಗಳೂರು
C. ದಕ್ಷಿಣ ಕನ್ನಡ
D. ಮೈಸೂರು
ಉತ್ತರ: BACD.


27. ರಾಜ್ಯದ ಒಟ್ಟು ಕೆಲಸಗಾರರಲ್ಲಿ ಪುರುಷ
ಹಾಗೂ ಮಹಿಳೆಯರ ಶೇಕಡಾವಾರು ಪ್ರಮಾಣ
ಕ್ರಮವಾಗಿ ಎಷ್ಟು ?
A. 50% ಹಾಗೂ 40%
B. 59% ಹಾಗೂ 31%●
C. 65% ಹಾಗೂ 25%
D. 60% ಹಾಗೂ 30%


28. ಕರ್ನಾಟಕದಲ್ವಿ 2011ರ ಜನಸಂಖ್ಯೆಯ ಪ್ರಕಾರ,
ಕುಟುಂಬಗಳ ಜನಸಂಖ್ಯೆಯಲ್ಲಿ ಶೇ.
28.41ರಷ್ಟು ಬೆಳವಣಿಗೆಯಾಗಿದ್ದು, ರಾಜ್ಯದ
ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಎಷ್ಟು
ಕುಟುಂಬಗಳು ಮಹಿಳಾಪ್ರಧಾನ
ಕುಟುಂಬಗಳಾಗಿವೆ ?
A. 10. 9%
B. 12. 8%
C. 14. 91%●
D. 15. 55%


29. ಮಹಿಳಾಪ್ರಧಾನ ಕುಟುಂಬಗಳ ಸಂಖ್ಯೆ
ಅಖಿಲಭಾರತ ಮಟ್ಟದಲ್ಲಿ ಶೇಕಡಾ ಎಷ್ಟು ಇದೆ?
A. 08.9%
B. 10.9%●
C. 12.9%
D. 15.3%


30. ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದ ಪ್ರಕಾರ,
ರಾಜ್ಯದಲ್ಲಿ ಜಾನುವಾರು ಸಾಂದ್ರತೆ ಪ್ರತಿ ಕಿ.
ಮೀ. ಗೆ 151. 21ರಷ್ಪಿದೆ. ಅಂದಹಾಗೆ ಪ್ರತಿ ಲಕ್ಷ
ಮನುಷ್ಯರಿಗೆ ಎಷ್ಟು ಜಾನುವಾರುಗಳಿವೆಯೆಂದು ಅದರಲ್ಲಿ ತಿಳಿಸಲಾಗಿದೆ?
A. 32,478
B. 37,488
C. 42,498
D. 47,468●


31. ಭಾರತದ ರಾಜ್ಯಗಳ ಪೈಕಿ ಕರ್ನಾಟಕ (2013-14ನೇ ಸಾಲಿನಲ್ಲಿ) ಹಾಲು ಉತ್ಪಾದನೆಯಲ್ಲಿ
ಎಷ್ಟನೇ ಸ್ಥಾನದಲ್ಲಿತ್ತು?
A. 7ನೇ
B. 9ನೇ
C.11ನೇ●
D.13ನೇ


32 2013-14ನೇ ಸಾಲಿನ ಅರಣ್ಯ ವರದಿಯ ಪ್ರಕಾರ,
ಕರ್ನಾಟಕ 43, 356.47 ಚ. ಕಿ. ಮೀ. ಅರಣ್ಯ
ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ
ಭೌಗೋಳಿಕ ಪ್ರದೇಶದ ಶೇಕಡಾ ಎಷ್ಟು ?
A. 18.61%
B. 21.36%
C. 22.61%●
D. 23. 86%


33. ಕರ್ನಾಟಕದ ರಾಜ್ಯದ ಒಟ್ಟು ಅರಣ್ಯ
ಪ್ರದೇಶದಲ್ಲಿ ಮೀಸಲು ಅರಣ್ಯ ಪ್ರದೇಶದ
ಪ್ರಮಾಣ ಶೇಕಡಾ ಎಷ್ಟು?
A. 13.84%
B. 15.48%●
C. 16,67%
D. 17.87%


34. 2012-13ನೇ ಸಾಲಿನ ಜಿಲ್ಲಾ ತಲಾವಾರು
ಆದಾಯದಲ್ಲಿ ಕೆಳಕಂಡ ಜಿಲ್ಲೆಗಳನ್ನು 1 - 4 ಕ್ರಮದಲ್ಲಿ
ಬರೆಯಿರಿ.
A. ದಕ್ಷಿಣ ಕನ್ನಡ
B. ಕೊಡಗು
C. ಬೆಂಗಳೂರು ಗ್ರಾಮಾಂತರ
D. ಬೆಂಗಳೂರು ನಗರ
ಉತ್ತರ: DBCA


35. 2012-13ನೇ ಸಾಲಿನಲ್ಲಿ ಜಿಲ್ಲಾ ತಲಾವಾರು
ಆದಾಯದಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿದ್ದ
ಜಿಲ್ಲೆ ಯಾವುದು?
A. ರಾಯಚೂರು
B. ಕೊಪ್ಪಳ
C. ಯಾದಗಿರಿ●
D. ಹಾವೇರಿ


36. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರ ಪ್ರಕಾರ, ಅತಿ
ಕಡಿಮೆ ನಗರೀಕರಣಗೊಂಡ ಜಿಲ್ಲೆಗಳನ್ನು ಕೆಳಗಿನಿಂದ
ಮೇಲಿನ ಕ್ರಮದಲ್ಲಿ ಬರೆಯಿರಿ.
A. ಯಾದಗೀರ
B. ಕೊಪ್ಪಳ
C. ಕೊಡಗು
D. ಮಂಡ್ಯ
E. ಚಾಮರಾಜನಗರ
ಉತ್ತರ: CBDEA
A. 19%
B. 17%
C. 15%
D. 17%
E. 17%


37. ಅತ್ಯಂತ ದಟ್ಟ ಅರಣ್ಯ ಹೊಂದಿದ
ಜಿಲ್ಲೆಗಳನ್ನು ಅತಿ ಹೆಚ್ಚು ವ್ಯಾಪ್ತಿಯಿಂದ ಕಡಿಮೆ
ವ್ಯಾಪ್ತಿ ಈ ಕ್ರಮದಲ್ಲಿ ಬರೆಯಿರಿ.
A. ದಕ್ಷಿಣ ಕನ್ನಡ
B. ಚಿಕ್ಕಮಗಳೂರು
C. ಶಿವಮೊಗ್ಗ
D. ಕೊಡಗು
ಉತ್ತರ: BADC
A. 253 ಚ. ಕಿ. ಮೀ.
B. 587 ಚ. ಕಿ. ಮೀ.
C. 205 ಚ. ಕಿ. ಮೀ.
D. 246 ಚ. ಕಿ. ಮೀ.


38. ಮಧ್ಯಮ ದಟ್ಟ ಅರಣ್ಯ ಹೊಂದಿದ
ಜಿಲ್ಲೆಗಳನ್ಪು ಅತಿಹೆಚ್ಚು ಚ. ಕಿ. ಮೀ ವ್ಯಾಪ್ತಿಯಿಂದ
ಕಡಿಮೆ ಚ. ಕಿ. ಮೀ. ಈ ಕ್ರಮದಲ್ಲಿ ಬರೆಯಿರಿ.
A. ಕೊಡಗು
B. ಉತ್ತರ ಕನ್ನಡ
C. ಶಿವಮೊಗ್ಗ
D. ಚಿಕ್ಕಮಗಳೂರು
ಉತ್ತರ : BCDA
A. 2142 ಚ. ಕಿ. ಮೀ
B. 5775 ಚ. ಕಿ. ಮೀ
C. 2008 ಚ. ಕಿ. ಮೀ
D. 2428 ಚ. ಕಿ. ಮೀ.


39. ಕೆಳಕಂಡ ರಾಷ್ಟ್ರೀಯ ಉದ್ಯಾನಗಳನ್ನು
ಅವುಗಳ ಚ. ಕಿ. ಮೀ. ವ್ಯಾಪ್ತಿಗನುಗುಣವಾಗಿ 1 - 4
ಕ್ರಮದಲ್ಲಿ ಬರೆಯಿರಿ.
A. ಮಲೈ ಮಹದೇಶ್ವರ ವನ್ನಧಾಮ
B. ಕಾವೇರಿ ವನ್ನಧಾಮ
C. ದಾಂಡೇಲಿ ವನ್ಯಧಾಮ
D. ಬಂಡೀಪುರ ರಾಷ್ಟ್ರೀಯ ಉದ್ಯಾನ
ಉತ್ತರ: BACD.
A. 906.187 ಚ. ಕಿ. ಮೀ.
B. 1027.53 ಚ. ಕಿ. ಮೀ.
C. 886.41 ಚ. ಕಿ. ಮೀ.
D. 872.24 ಚ. ಕಿ. ಮೀ..


40. ಡಿಸೆಂಬರ್ 2014ರ ತನಕ ಕೆಳಕಂಡ ಪ್ರವಾಸಿ ತಾಣಗಳಿಗೆ
ಭೇಟಿ ಕೊಟ್ಟ ಪ್ರವಾಸಿಗರ ಸಂಖ್ಯೆಗನುಣವಾಗಿ
ಕ್ರಮವಾಗಿ ಬರೆಯಿರಿ.
A. ನಾಗರಹೊಳೆ ರಾಷ್ಟ್ರೀಯ ಉದ್ಯಾನ
B. ಬಂಡಿಪುರ ರಾಷ್ಟ್ರೀಯ ಉದ್ಯಾನ
C. ರಂಗನತಿಟ್ಟು ಪಕ್ಷಿಧಾಮ
D. ಬ್ರಹ್ಮಗಿರಿ ವನ್ಯಜೀವಿ ಅಭಿಯಾರಣ್ಯ
ಉತ್ತರ: CBDA
A. 64, 768
B. 96, 888
C. 2, 46, 359
D. 96, 250


41. ಕರ್ನಾಟಕ 320ಕಿಮೀ. ಉದ್ದದ ಕರಾವಳಿ
ಹೊಂದಿದ್ದು, ಕೆಳಕಂಡ ಜಿಲ್ಲೆಗಳನ್ನು ಅವುಗಳು
ಹೊಂದಿದ ಕರಾವಳಿಯ ಉದ್ದಕ್ಕನುಗುಣವಾಗಿ
ಕ್ರಮವಾಗಿ ಬರಿಯಿರಿ.
A. ಉಡುಪಿ
B. ದಕ್ಷಿಣ ಕನ್ನಡ
C. ಉತ್ತರ ಕನ್ನಡ
ಉತ್ತರ: CAB
A. 098 ಕಿ. ಮೀ
B. 062
C. 160ಕಿ. ಮೀ


42. ರಾಜ್ಯ ಸರ್ಕಾರ ರೂಪಿಸಿದ ನೀತಿ ಹಾಗೂ
ವರ್ಷಕ್ಕೆ ಸಂಬಂಧಪಟ್ಟಂತೆ ಕೆಳಕಂಡವುಗಳಲ್ಲಿ
ಯಾವುದು/ಯಾವುವು ಸರಿ?
A. ಕರ್ನಾಟಕ ಕೈಗಾರಿಕಾ ನೀತಿ- 2014-19
B. ಕರ್ನಾಟಕ ಜವಳಿ ನೀತಿ - 2013
C. ಕರ್ನಾಟಕ ಅಂತರಿಕ್ಷಯಾನ ನೀತಿ - 2013
D. ಕರ್ನಾಟಕ ಐ4 ನೀತಿ - 2013
ಉತ್ತರ: ಎಲ್ಲವೂ ಸರಿ.


43. ಕರ್ನಾಟಕದಲ್ಲಿ ನೀರಾವರಿಗೆ ಕೆಳಕಂಡ
ಮೂಲಗಳನ್ನು ಅನುಸರಿಸಲಾಗುತ್ತಿದ್ದು, ಅವುಗಳ
ಬಳಕೆಯ ಪ್ರತಿಶತಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಕಾಲುವೆಗಳಿಂದ
B. ಕೆರೆಗಳಿಂದ
C. ಭಾವಿಗಳಿಂದ
D. ಕೊಳವೆ ಭಾವಿಗಳಿಂದ
ಉತ್ತರ : DACB.
A. 34. 24%
B. 05. 17%
C. 12. 30%
D. 37. 15%


44. 2013-14ರ ಕೈಗಾರಿಕಾ ಉತ್ಪಾದನಾ
ಸಾಮಾನ್ಯ ಸೂಚ್ಯಂಕ 175.79 ಆಗಿತ್ತು. ಇದು
ಹಿಂದಿನ ವರ್ಷಕ್ಕೆ ಹೋಲಿಸಿದರೆ ಎಷ್ಟು ಶೇಕಡಾ
ವಾರ್ಷಿಕ ಬೆಳವಣಿಗೆಯಾಗಿದೆ?
A. 2.65%
B. 3.66%●
C. 4.22%
D. 5.33%


45. 2014ರಲ್ಲಿ ಕರ್ನಾಟಕ 608.81 ಕೋ. ರೂ. ಗಳ
ರೇಷ್ಮೆ ವಸ್ತುಗಳ ರಫ್ತು ವಹಿವಾಟು ನಡೆಸಿದ್ದು,
ಇದು ದೇಶದ ಶೇಕಡಾವಾರು ಪ್ರಮಾಣ
ಎಷ್ಟು?
A. 15.24%
B. 24.54%●
C. 34.34%
D. 44.64%


46. 2013-14ರನ್ವಯ ದಕ್ಷಿಣದ ರಾಜ್ಯಗಳಲ್ಲಿ ತಮ್ಮ
ಭೌಗೋಳಿಕ ಪ್ರದೇಶಕ್ಕನುಗುಣವಾಗಿ ಅತಿಹೆಚ್ಚು
ದಿಂದ ಅತಿ ಕಡಿಮೆ ಅರಣ್ಯ ವ್ಯಾಪ್ತಿ ಹೊಂದಿದ
ರಾಜ್ಯಗಳನ್ನು ಕ್ರಮವಾಗಿ ಬರೆಯಿರಿ.
A. ಕರ್ನಾಟಕ
B. ಕೇರಳ
C. ತಮಿಳುನಾಡು
D. ಆಂಧ್ರಪ್ರದೇಶ
BACD
A. 18. 84%
B. 46. 12%
C. 18. 33%
D. 16. 77%


47. ರಾಜ್ಯ ಸರ್ಕಾರ ಕೆಳಕಂಡ ಯಾವ ವರ್ಷದಿಂದ
ಯಾವ ವರ್ಷಕ್ಕೆ ಅನ್ವಯಿಸುವಂತೆ ಸೌರನೀತಿಯನ್ನು
ಘೋಷಿಸಿತ್ತು?
A. 2010 - 2015
B. 2011 - 2016●
C. 2012 - 2017
D. 2013 - 2018


48. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ
2001ರಲ್ಲಿ 7ನೇ ಸ್ಥಾನದಲ್ಲಿತ್ತು. 2011ರಲ್ಲಿ ಅದರ
ಸ್ದಾನ ಎಷ್ಟು?
A. 6ನೇ
B. 8ನೇ
C. 10ನೇ●
D. 12ನೇ


49. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣದ
ರಾಜ್ಯಗಳನ್ನು ಅವು ಹೊಂದಿದ
ಸ್ಥಾನಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಆಂಧ್ರಪ್ರದೇಶ
B. ಕೇರಳ
C. ತಮಿಳುನಾಡು
D. ಕರ್ನಾಟಕ
ಉತ್ತರ: BCDA.


50. ಕರ್ನಾಟಕದ ಸಾಕ್ಷರತಾ ಪ್ರಮಾಣ 2001ರಲ್ಲಿ
66.64ರಷ್ಟಿತ್ತು. 2011ರಲ್ಲಿ ಅದರ ಪ್ರಮಾಣ ಎಷ್ಟಿತ್ತು?
A. 68.80%
B. 72.67%
C. 75.60%●
D. 78.79%


51. ಕರ್ನಾಟಕದಲ್ಲಿ 2011ರಲ್ಲಿದ್ದ ಪುರುಷ ಹಾಗೂ
ಮಹಿಳೆಯರ ಸಾಕ್ಷರತಾ ಪ್ರಮಾಣ ಕ್ರಮವಾಗಿ ಎಷ್ಟು?
A. 80 ಮತ್ತು 70
B. 82 ಮತ್ತು 68
C. 85 ಮತ್ತು 61●
D. 90 ಮತ್ತು 60


52. ರಾಜ್ಯದ ವಿದ್ಯುತ್ ಗ್ರಾಹಕರಿಗೆ ಲಭಿಸುತ್ತಿರುವ
ವಿವಿಧ ಮೂಲದ ವಿದ್ಯುತ್ ಉತ್ಪಾದನೆಯನ್ನು
ಅವುಗಳ ಉತ್ಪಾದನೆ ಗನುಗುಣವಾಗಿ
ಶೇಕಡಾವಾರು ಲೆಕ್ಕದಲ್ಲಿ ಕ್ರಮವಾಗಿ ಬರೆಯಿರಿ.
A. ರಾಜ್ಯದಲ್ವಿ ಉತ್ಪಾದನೆ - ಜಲವಿದ್ಯುತ್
B. ಶಾಖೋತ್ಪನ್ನ ಮೂಲದಿಂದ
C. ಖಾಸಗಿ ಕ್ಷೇತ್ರದಿಂದ
D. ಕೇಂದ್ರೀಯ ಉತ್ಪಾದನಾ ಘಟಕದ ಪಾಲು
CADB
A. 25%
B. 18%
C. 34%
D. 19%


53. ವಿದ್ಯುತ್ ಪ್ರಸರಣ ಮತ್ತು ವಿತರಣಾ ನಷ್ಟ
2004-05ರಲ್ಲಿ 27.5ರಷ್ಟಿತ್ತು. ಅದು 2013-14ನೇ
ಸಾಲಿನಷ್ಟೊತ್ತಿಗೆ ಶೇಕಡಾ ಎಷ್ಟಕ್ಕೆ ತಗ್ಗಿದೆ ?
A. 23.9%
B. 21.6%
C. 19.7%●
D. 18.6%


54. ರಾಜ್ಯದಲ್ಲಿ ವಿದ್ಯುತ್ ಬಳಕೆಯ ಕುರಿತಂತೆ
ಕೆಳಕಂಡ ಕ್ಷೇತ್ರಗಳನ್ನು ಅವು ಬಳಸಿದ
ಶೇಕಡಾವಾರು ಕ ವಿದ್ಯುತ್
ಪ್ರಮಾಣಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಕೈಗಾರಿಕೆಗಳು
B. ಗೃಹಬಳಕೆ
C. ನೀರಾವರಿ ಪಂಪ್'ಸೆಟ್
D. ವಾಣಿಜ್ಯ ದೀಪಗಳು
CBAD
A. 18. 08%
B. 20. 35%
C. 33. 53%
D. 12. 22%


55. 2014ರ ಮಾರ್ಚ್'ತನಕ ರಾಜ್ಯದಲ್ಲಿ ಎಷ್ಟು
ವಾಣಿಜ್ಯ ಬ್ಯಾಂಕುಗಳು ಹಾಗೂ
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
ಕಾರ್ಯನಿರ್ವಹಿಸುತ್ತಿದ್ದವು?
A. 6578 ಮತ್ತು 1487
B. 6876 ಮತ್ತು 1547●
C. 7686 ಮತ್ತು 1676
D. 8676 ಮತ್ತು 1878

(Courtesy : ಸಾಮಾನ್ಯ ಜ್ಞಾನ ಜಿಕೆ)

No comments:

Post a Comment