"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 13 October 2015

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -19)   (General knowledge on Current Affairs (Part-19))  ☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -19)
(General knowledge on Current Affairs (Part-19))
☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)


●.ನಿಮ್ಮ ಗಮನಕ್ಕೆ....

☆.ಪ್ರೀಯ ಸ್ಪರ್ಧಾರ್ಥಿಗಳೇ...ವಿಸ್ತಾರವಾದ ಪ್ರಚಲಿತ ಘಟನೆಗಳು ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಕೋನದಿಂದ ತುಂಬಾ ಉಪಯುಕ್ತವಾದವು. ಆದ್ದರಿಂದ ನಾನು ಸ್ವಲ್ಪ ಬದಲಾವಣೆಗಳೊಂದಿಗೆ ಸಾಮಾನ್ಯ ಜ್ಞಾನದ ಭಾಗಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
☆.ಸವಿಸ್ತಾರವಾದ ಅಧ್ಯಯನಕ್ಕೆ ಈ ನನ್ನ ಪ್ರಯತ್ನ ಅನುಕೂಲವಾಗಬಹುದೆಂಬ ಅಭಿಲಾಷೆಯೊಂದಿಗೆ...ನಿಮ್ಮ ಅಮೂಲ್ಯವಾದ ಸಲಹೆ, ಸೂಚನೆಗಳಿಗೆ ಕಾದಿರುವ.... ಸ್ಪರ್ಧಾಲೋಕ.
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•


781)  ಪ್ರಸ್ತುತ ಭಾರತೀಯ ಬ್ಯಾಹ್ಯಾಕಾಶ ಸಂಸ್ಥೆ (ಇಸ್ರೊ)ಯ ಅಧ್ಯಕ್ಷ :

■. ಕಿರಣ್‌ ಕುಮಾರ್‌


782)  ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ :

■. ವಿಶ್ವನಾಥ್‌ ಪ್ರಸಾದ್‌ ತಿವಾರಿ


783)  ಹೈಕೋರ್ಟ್‌ಗಳ ಮರುನಾಮಕರಣ ಮಾಡುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುವ ಕಾನೂನು ತರುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
■. ಹೊಸ ಕಾಯ್ದೆ ಅಸ್ತಿತ್ವಕ್ಕೆ ಬಂದಲ್ಲಿ ರಾಷ್ಟ್ರಪತಿಗಳು ಆಯಾ ರಾಜ್ಯಗಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಹೈಕೋರ್ಟ್‌ಗೆ ಹೊಸ ಹೆಸರು ಇಡಬಹುದಾಗಿದೆ.
■. ಪ್ರಸ್ತುತ, ದೇಶದಲ್ಲಿ ಹೈಕೋರ್ಟ್‌ಗಳಿಗೆ ಮರುನಾಮಕರಣ ಮಾಡಲು ಕಾರ್ಯವಿಧಾನವಿಲ್ಲ. ಹಾಲಿ ಇರುವ ನಗರಗಳ ಹೆಸರುಗಳನ್ನೇ ಹೈಕೋರ್ಟ್‌ಗಳಿಗೆ ಇಡಬೇಕು ಎನ್ನುವ ಬೇಡಿಕೆ ಇದೆ.


784)  ‘370ನೇ ವಿಧಿಯು ‘ತಾತ್ಕಾಲಿಕ ನಿಯಮ’ ಎನ್ನುವ ಶೀರ್ಷಿಕೆಯಲ್ಲಿ ಇದೆ. ಅಲ್ಲದೇ ಪ್ಯಾರಾ 21ರಲ್ಲಿ ‘ತಾತ್ಕಾಲಿಕ, ಬದಲಾಗಬಹುದಾದ, ವಿಶೇಷ ನಿಯಮ’ ಎನ್ನುವ ಶೀರ್ಷಿಕೆ ಇದೆ. ಆದರೂ ಸಂವಿಧಾನದಲ್ಲಿ ಇದಕ್ಕೆ ಕಾಯಂ ಸ್ಥಾನಮಾನ ಇದೆ’ ಎಂದು ವಿಭಾಗೀಯ ಪೀಠ ಹೇಳಿದೆ.
■. ‘370 (1) ನೇ ವಿಧಿ ಅಡಿ ಸಂವಿಧಾನದ ಯಾವುದೇ ನಿಯಮವನ್ನು ರಾಜ್ಯಕ್ಕೆ ವಿಸ್ತರಿಸುವ ಅಧಿಕಾರ ರಾಷ್ಟ್ರಪತಿಗೆ ಇದೆ.
■. ರಾಜ್ಯ ಸರ್ಕಾರದ ಸಮ್ಮತಿ ಪಡೆದುಕೊಂಡು ಅವರು ಆ ನಿಯಮದಲ್ಲಿ ಬದಲಾವಣೆ ತರಬಹುದು. ನಿಯಮಕ್ಕೆ ತಿದ್ದಪಡಿ ತರುವುದು ಅಥವಾ ಬದಲಾವಣೆ ಮಾಡುವುದು, ಅಳಿಸಿ ಹಾಕುವುದು ಅಥವಾ ತೆಗೆದುಹಾಕುವುದು ಅಥವಾ ಹೆಚ್ಚುವರಿಯಾಗಿ ಸೇರಿಸುವುದು... ಇತ್ಯಾದಿ ಅಧಿಕಾರಗಳು ಇದರಲ್ಲಿ ಅಡಕವಾಗಿರುತ್ತವೆ’ ಎಂದೂ ಕೋರ್ಟ್‌ ತಿಳಿಸಿದೆ.
(Mon, 10/12/2015)


785)  ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹಂಗಳ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ರಾಜ್ಯದ ಮೊದಲ ‘ಜಿಪಿ-1’ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಚಾಲನೆ ನೀಡಿದರು.
■. ‘ಬೆಂಗಳೂರು– ಒನ್’ ಎಂಬ ಸೇವೆಯ ಮಾದರಿಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ‘ಗ್ರಾಮ ಪಂಚಾಯಿತಿ-1’ ಎಂಬ ಆನ್‌ಲೈನ್‌ ಸೇವೆ ಗ್ರಾಮೀಣರಿಗೆ ದೊರೆಯಲಿದೆ.
■. ‘ಗಾಂಧಿ ಗ್ರಾಮ’ ಪುರಸ್ಕಾರ ಪಡೆದ ಮತ್ತು ಡಿಜಿಟಲೀಕರಣದ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಎಂದು ಹೆಸರು ಪಡೆದಿರುವ ಈ ಕಾಡಂಚಿನ ಗ್ರಾಮ ಪಂಚಾಯಿತಿ ಈ ಮೂಲಕ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
(Mon, 12th Oct, 2015)


786)  ಮಂಗಳೂರಿನ ಕೃಪಾ ಆಳ್ವ ಅವರನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಕಳೆದ ಜೂನ್‌ನಲ್ಲಿ ಸರ್ಕಾರ ನೇಮಕ ಮಾಡಿದೆ.(June, 2015)


787)  ಹೊಸ ಸಂವಿಧಾನದ ಮೂಲಕ ಹಿಂದೂ ರಾಜಪ್ರಭುತ್ವದಿಂದ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿದ ನೇಪಾಳ ರಾಷ್ಟ್ರಕ್ಕೆ ನೂತನ ಪ್ರಧಾನಿಯಾಗಿ ಖಡ್ಗ ಪ್ರಸಾದ್ ಶರ್ಮಾ ಒಲಿ ಅವರು ಆಯ್ಕೆಯಾಗಿದ್ದಾರೆ.
■. ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ಸಿಪಿಎನ್ ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ಅವರಿಗೆ 598 ಸದಸ್ಯರ ಪೈಕಿ 338 ಮತಗಳು ದೊರಕಿದ್ದು, ನೇಪಾಳದ 38ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
■. ನೇಪಾಳದ ಹಾಲಿ ಪ್ರಧಾನಿಯಾಗಿದ್ದ ಸುಶೀಲ್ ಕೊಯಿರಾಲಾ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶನಿವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಪ್ರಧಾನಿ ಆಯ್ಕೆಗೆ ಮತ್ತೆ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಶೀಲ್ ಕೊಯಿರಾಲಾ ಅವರಿಗೆ 249 ಮತಗಳು ದೊರಕಿವೆ.
(Mon, 12th Oct, 2015)


788)  (1972) ಒಲಂಪಿಕ್ಸ್‌ನಲ್ಲೂ ವೇಣುವಾದನ ಮಾಡಿದ ಅಪರೂಪದ ಖ್ಯಾತ ಕೊಳಲು ವಾದಕ ಎನ್‌.ರಮಣಿ (81 ವರ್ಷ) ಅವರು ಶುಕ್ರವಾರ ಚೆನ್ನೈನಲ್ಲಿ ನಿಧನರಾದರು.
(Sat, 10/10/2015)


789)  ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನವೆಂಬರ್ 26, 27, 28 ಮತ್ತು 29ರಂದು ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್‌ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
(Sat, 10th Oct, 2015)


790)  ಅ. 17 – 18 ರಂದು ಬಾಗಲಕೋಟೆಯಲ್ಲಿ ಅಖಿಲ ಭಾರತ ಆರನೇ ‘ದಲಿತ ಸಾಹಿತ್ಯ ಸಮ್ಮೇಳನ’. ಡಾ. ಸತ್ಯಾನಂದ ಪಾತ್ರೋಟ ಈ ಸಮ್ಮೇಳನದ ಅಧ್ಯಕ್ಷರು.


791)  ಹಿರಿಯ ಸಂಗೀತ ನಿರ್ದೇಶಕ, ಗಾಯಕ ಹಾಗೂ ಗೀತರಚನೆಕಾರ ರವೀಂದ್ರ ಜೈನ್‌ (71ವರ್ಷ) ಅವರು ಅಂಗಾಂಗ ವೈಫಲ್ಯಗಳಿಂದಾಗಿ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.
(Sat, 10th Oct, 2015)


792)  ಖ್ಯಾತ ವಿಜ್ಞಾನಿ ಶೇಖರ್‌ ಬಸು ಅವರನ್ನು ಅಣುಶಕ್ತಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
(Sat, 10th Oct, 2015)


793)  ನಾಲ್ಕು ವರ್ಷಗಳಲ್ಲಿ (2009–2013) ಹನ್ನೊಂದು ಅಣು ವಿಜ್ಞಾನಿಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾರೆ ಎಂಬ ವಿಷಯ ಅಣು ಶಕ್ತಿ ಇಲಾಖೆ ವರದಿಯಿಂದ ಬಹಿರಂಗಗೊಂಡಿದೆ.
(Fri, 9th Oct, 2015)


794)  ಏಷ್ಯಾದ ಅತ್ಯಂತ ದೊಡ್ಡ ಸಾಹಿತ್ಯಿಕ ಹಬ್ಬ ಎಂಬ ಖ್ಯಾತಿ ಪಡೆದಿರುವ ‘ಜೈಪುರ ಸಾಹಿತ್ಯ ಉತ್ಸವ–2016’ ಜನವರಿ 21ರಿಂದ ಐದು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಭಾರತೀಯ ಲೇಖಕರೂ ಸೇರಿದಂತೆ ವಿಶ್ವದ ವಿವಿಧ ಭಾಗಗಳ 165 ಮಂದಿ ಖ್ಯಾತ ಬರಹಗಾರರು ಪಾಲ್ಗೊಳ್ಳಲಿದ್ದಾರೆ.


795)  ಯುನಿಸೆಫ್‌ ಹಾಗೂ ಗ್ಲೋಬಲ್ ಗೋಲ್ಸ್‌ ಸಂಸ್ಥೆ ಜಂಟಿಯಾಗಿ ರೂಪಿಸಿರುವ ‘ದಿ ವರ್ಲ್ಡ್ಸ್ ಲಾರ್ಜೆಸ್ಟ್‌ ಲೆಸನ್‌’ ಯೋಜನೆಯ ಭಾರತೀಯ ರಾಯಭಾರಿಯಾಗಿ ಖ್ಯಾತ ಬಾಲಿವುಡ್ ನಟ ಹೃತಿಕ್‌ ರೋಷನ್‌ ಅವರನ್ನುನೇಮಕ ಮಾಡಲಾಗಿದೆ.
■. ಸುಮಾರು ನೂರಕ್ಕೂ ಹೆಚ್ಚು ರಾಷ್ಟ್ರಗಳ ಮಕ್ಕಳಲ್ಲಿ ‘ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಸವಾಲು’ ಕುರಿತು ಜಾಗೃತಿ ಮೂಡಿಸಲು ಯೋಜನೆಯನ್ನು ರೂಪಿಸಲಾಗಿದೆ.
■. ಹವಾಮಾನ ವೈಪರೀತ್ಯ, ಗುಣಮಟ್ಟದ ಶಿಕ್ಷಣ, ಬಡತನ ನಿರ್ಮೂಲನೆ, ಆರೋಗ್ಯ, ಮುಂತಾದ ಜಾಗತಿಕ ಸವಾಲು ಮತ್ತು ಗುರಿಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಈ ರಾಯಭಾರಿಗಳು ಮಾಡಲಿದ್ದಾರೆ.
(Wed, 10/07/2015)


796)  ತಮಿಳು ಲೇಖಕ ಪೆರುಮಾಳ್‌ ಮುರುಗನ್‌ ಅವರಿಗೆ 4ನೇ ಭಾರತೀಯ ಭಾಷಾ ಉತ್ಸವದ ‘ಸಮನ್ವಯ ಭಾಷಾ ಸಮ್ಮಾನ್‌’ ಪ್ರಶಸ್ತಿ ಲಭಿಸಿತು.
(Tue, 6th Oct, 2015)


797)  ಮಹಾಸಭೆಯ 70ನೇ ಅಧಿವೇಶನ ಮಂಗಳವಾರ ಪ್ರಾರಂಭ.
■.ಪ್ರಸ್ತುತ ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷ ಸ್ಯಾಮ್‌ ಕಹಂಬ ಕುಟೆಸಾ.
(Wed, 09/16/2015)


799)  ಅಗ್ರ ಶ್ರೇಯಾಂಕದ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಅವರು ಡಬ್ಲ್ಯುಟಿಎ ಚೀನಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿದೆ.
(Sun, 11th Oct, 2015)


800)  ಮುರುಘಾಮಠದಿಂದ ಪ್ರತಿ ವರ್ಷ ನೀಡುವ ‘ಬಸವಶ್ರೀ’ ಪ್ರಶಸ್ತಿಯನ್ನು ಈ ಬಾರಿ ಸಂಶೋಧನೆ, ಸಾಹಿತ್ಯ ಹಾಗೂ ಅಧ್ಯಯನದಲ್ಲಿ ಪಾಂಡಿತ್ಯ ಹೊಂದಿದ್ದ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ನೀಡಲಾಗುತ್ತಿದೆ ಎಂದು ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾಶರಣರು ಪ್ರಕಟಿಸಿದರು.
(Thu, 8th Oct, 2015)


801)  ಮಂಗಳೂರು ವಿಶ್ವ ಕೊಂಕಣಿ ಕೇಂದ್ರ ನೀಡುವ ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಪುಸ್ತಕ ಪುರಸ್ಕಾರ -2015’ಕ್ಕೆ ಗೋವಾದ ಲೇಖಕಿ ಮೀನಾ ಎಸ್. ಕಾಕೋಡಕರ್ ಬರೆದಿರುವ ‘ವಾಸ್ತು’ ಕಾದಂಬರಿ ಆಯ್ಕೆಯಾಗಿದೆ.
■. ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕವಿತಾ ಕೃತಿ ಪುರಸ್ಕಾರ’ಕ್ಕೆ ಮಂಗಳೂರಿನ ಕವಿ ಆಂಡ್ರ್ಯೂ ಎಲ್. ಡಿಕುನ್ಹಾ ಅವರ ‘ಅಂಜೂರಾಚೆ ಪಾನ್’ ಕವನ ಸಂಗ್ರಹ ಆಯ್ಕೆಯಾಗಿದೆ.
■. ಹಿರಿಯ ಕೊಂಕಣಿ ಸಂಶೋಧಕ ಗೋವಾದ ಸುರೇಶ ಜಿ. ಅಮ್ಮೋಣಕರ ಅವರು ‘ವಿಶ್ವ ಕೊಂಕಣಿ ಜೀವನ ಸಿದ್ಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
■. ಈ ಮೂರು ಪ್ರಶಸ್ತಿಗಳೂ ತಲಾ ₹ 1 ಲಕ್ಷ ನಗದು ಒಳಗೊಂಡಿವೆ.
(Thu, 8th Oct, 2015)


802)  ಸಂಯುಕ್ತ ಅರಬ್ ಒಕ್ಕೂಟದ (ಯುಎಇ) ಮಾನವ ಹಕ್ಕುಗಳ ಕಾರ್ಯಕರ್ತ ಅಹಮದ್ ಮನ್ಸೂರ್ 2015ರ ಪ್ರತಿಷ್ಠಿತ ಮಾರ್ಟಿನ್ ಎನ್ನಾಲ್ಸ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ■. ಮಾನವ ಹಕ್ಕುಗಳಿಗಾಗಿ ಶ್ರಮಿಸಿದವರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ನೊಬೆಲ್‌ಗೆ ಸಮನಾದ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ.
(Thu, 10/08/2015)


803)  ಕ್ಯಾನ್ಸರ್ ಕೋಶಗಳು ವೃದ್ಧಿಯಾಗದಂತೆ ತಡೆಯಬಲ್ಲ ಪ್ರೊಟೀನ್‌ ಅನ್ನು ಭಾರತ ಮೂಲದ ಸಂಶೋಧಕಿ ಡಾ. ಡೆಬೊರಾ ಗೋವರ್ಧನ್ಅವರು ಪತ್ತೆ ಮಾಡಿದ್ದಾರೆ .
■. ‘ಪಿಎಟಿ4’ ಹೆಸರಿನ ಪ್ರೊಟೀನ್‌ ಕ್ಯಾನ್ಸರ್ ಕೋಶಗಳು ವೃದ್ಧಿಯಾಗದಂತೆ ತಡೆಯಬಲ್ಲದು ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ.
■. ‘ಆಕ್ರಮಣಕಾರಿ ಕ್ಯಾನ್ಸರ್ ಕೋಶಗಳು ಹೆಚ್ಚು ಪ್ರೊಟೀನ್‌ (ಪಿಎಟಿ4) ಅನ್ನು ಉತ್ಪಾದಿಸುತ್ತವೆ. ಈ ಪ್ರೊಟೀನ್‌ಗಳು ಕ್ಯಾನ್ಸರ್ ಕೋಶದ ಸುತ್ತಮುತ್ತಲಿರುವ ಪೌಷ್ಟಿಕಾಂಶ ಮತ್ತು ಆರೋಗ್ಯಕರ ಕೋಶಗಳನ್ನು ಕಬಳಿಸುತ್ತವೆ.
■. ಈ ಪ್ರೊಟೀನ್‌ ಅಧಿಕ ಪ್ರಮಾಣದಲ್ಲಿರುವ ಕ್ಯಾನ್ಸರ್ ರೋಗಿಗಳಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ನಿಧಾನವಾಗುತ್ತದೆ’ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಶರೀರ, ಅಂಗರಚನಾ ಶಾಸ್ತ್ರ ಮತ್ತು ತಳಿಶಾಸ್ತ್ರ ವಿಭಾಗದ ಸಂಶೋಧಕಿ ಡಾ.ಡೆಬೊರಾ ಗೋವರ್ಧನ್ ತಿಳಿಸಿದ್ದಾರೆ.
■. ‘ಪಿಎಟಿ4 ಪ್ರೊಟೀನ್‌ ಹೆಚ್ಚು ಇರುವ ರೋಗಿಗಳು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಿರಲಿಲ್ಲ. ಅದೇ ಪಿಎಟಿ4 ಪ್ರೊಟೀನ್ ಕಡಿಮೆ ಇರುವರೋಗಿಗಳಲ್ಲಿ ರೋಗ ಮರುಕಳಿಸುತ್ತಿತ್ತು ಮತ್ತು ಬೇಗನೆ ಸಾವನ್ನಪ್ಪುತ್ತಿದ್ದರು’ ಎಂಬುದನ್ನು ಸಂಶೋಧನೆಯಲ್ಲಿ ಕಂಡುಕೊಂಡಿರುವುದಾಗಿ ಅವರು ಹೇಳಿದ್ದಾರೆ.
■. ಗೋವರ್ಧನ್ ಅವರ ಈ ಸಂಶೋಧನಾ ವರದಿ ‘ಆಂಕೊಜೆನ್’ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
(Thu, 8th Oct, 2015)


805)  ಸಂಶೋಧನೆ ಹಾಗೂ ಅಭಿವೃದ್ಧಿಯ ಕೇಂದ್ರವಾದ ಅಮೆರಿಕಕ್ಕೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಕಳುಹಿಸುವ ಏಷ್ಯಾದ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ.
■. ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ರಾಷ್ಟ್ರೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಖ್ಯಾಶಾಸ್ತ್ರ ಕೇಂದ್ರದ ವರದಿ ಈ ಮಾಹಿತಿ ನೀಡಿದೆ.
(Wed, 7th Oct, 2015)


806)  ಆಹಾರ ಉತ್ಪಾದನೆ ಹಾಗೂ ಕೃಷಿಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನ- ಸಂಶೋಧನೆಯನ್ನು ಜಗತ್ತಿಗೆ ತಿಳಿಸುವ ‘ಮಿಲಾನ್- ಎಕ್ಸ್‌ಪೋ 2015 ಇಲ್ಲಿ ಈಗ ನಡೆಯುತ್ತಿದೆ.
■. ಆದರೊಂದಿಗೆ, ಜಗತ್ತಿನ ಜನರ ಹಸಿವು ನೀಗಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತಿರುವ ಸಣ್ಣ ರೈತರಿಗೆ ಮನ್ನಣೆ ಸಿಗಬೇಕು ಎಂಬ ಒತ್ತಾಯದೊಂದಿಗೆ ಎಕ್ಸ್‌ಪೋಗೆ ಸಮಾನಾಂತರವಾಗಿ ಹಮ್ಮಿಕೊಂಡಿರುವ ‘ವೀ ಫೀಡ್ ದ ಪ್ಲ್ಯಾನೆಟ್’ ಸಮಾವೇಶ ಕೂಡ ಇಲ್ಲಿ ಆರಂಭವಾಗಿದೆ.
(Tue, 10/06/2015)


807)  ಪ್ರಸ್ತುತ ಗ್ರೀಸ್ ದೇಶದ ಪ್ರಧಾನಿ :

■. ಅಲೆಕ್ಸಿಸ್ ಸಿಪ್ರಾಸ್


808)  ನಾಸಾ ವಿಜ್ಞಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
■. ಐಎಸ್‌ಎಸ್‌ನಲ್ಲಿ ಸೊಪ್ಪು ಮತ್ತು ತರಕಾರಿ ಬೆಳೆಯಲು ನಾಸಾ ‘ವೆಜ್‌–01’ ಎಂಬ ಯೋಜನೆ ಕೈಗೊಂಡಿತ್ತು. ಇದು ಯಶಸ್ವಿಯಾಗಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.
(Tue, 10/06/2015)


809)  ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್‌ನ ಶಾಶ್ವತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ಜಾಕ್‌ ಡೊರ್ಸಿ ನೇಮಕಗೊಂಡಿದ್ದಾರೆ.
(Mon, 5th Oct, 2015)


810)  ಭಾರತದ 17 ಉನ್ನತ ಶಿಕ್ಷಣ ಸಂಸ್ಥೆಗಳು ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.(Fri, 2nd Oct, 2015)

(Courtesy :Prajawani newspaper)

.....ಮುಂದುವರಿಯುತ್ತದೆ :)

No comments:

Post a Comment