☀2015ನೇ ಸಾಲಿನ ನೊಬೆಲ್ ಪ್ರಶಸ್ತಿ ಪಡೆದವರು:
(2015 Noble Prize Winners)
━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)
★ ಸಾಮಾನ್ಯ ಅಧ್ಯಯನ
(General Studies)
●.ನೊಬೆಲ್ ಪ್ರಶಸ್ತಿ:
•┈┈┈┈┈┈┈┈┈┈┈┈•
■. ನೊಬೆಲ್ ಪ್ರಶಸ್ತಿಯು ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ.
■. ನೊಬೆಲ್ ಪ್ರಶಸ್ತಿ ಸ್ಥಾಪಿಸಿದ ಆಲ್‌ಫ್ರೆಡ್ ನೊಬೆಲ್ ಅವರು ತಮ್ಮ ವಿಲ್‌ನಲ್ಲಿ ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ನೀಡಲು ಸೂಚಿಸಿರಲಿಲ್ಲ.
■. ಸ್ವೀಡನ್‌ನ ಸೆಂಟ್ರಲ್ ಬ್ಯಾಂಕ್ ತನ್ನ ಮೂರನೇ ಶತಮಾನೋತ್ಸವದ ಪ್ರಯುಕ್ತ 1968ರಲ್ಲಿ ಅರ್ಥಶಾಸ್ತ್ರದ ನೊಬೆಲ್ ಸ್ಥಾಪಿಸಿತು.
■. 1969ರಲ್ಲಿ ಅರ್ಥಶಾಸ್ತ್ರಕ್ಕೆ ಮೊದಲ ನೊಬೆಲ್ ನೀಡಲಾಯಿತು.
■.ಈ ಪುರಸ್ಕಾರವನ್ನು1969 ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.
●.ನೊಬೆಲ್ ಪ್ರಶಸ್ತಿ ವಿತರಣೆಯ ನಿರ್ಧಾರ :
•┈┈┈┈┈┈┈┈┈┈┈┈┈┈┈┈┈┈┈┈•
■.ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.
■.ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನುರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.
■.ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನುಕ್ಯಾರೋಲಿನ್‌ಸ್ಕಾ ಸಂಸ್ಥೆಯು ನಿರ್ಧರಿಸುತ್ತದೆ.
■.ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.
■.ನೊಬೆಲ್ ಶಾಂತಿ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತುನೇಮಕ ಮಾಡಿದನಾರ್ವೆಯ ನೊಬೆಲ್ ಸಮಿತಿಯು ನಿರ್ಧರಿಸುತ್ತದೆ.
■.ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ. ಈ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ. ಇದನ್ನು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ.
●.2015ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. ಟ್ಯುನಿಷಿಯಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೆ ಹೋರಾಡಿದ ದೇಶದ ನಾಲ್ಕು ಸಂಘಟನೆಗಳ ಒಕ್ಕೂಟಕ್ಕೆ (ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್) 2015ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
■. ‘2011ರಲ್ಲಿ ಟ್ಯುನಿಷಿಯಾದಲ್ಲಿ ನಡೆದ ಕ್ರಾಂತಿಯ ಬಳಿಕ ಬಹುಸಂಸ್ಕೃತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ವಿತ್ವಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಒಕ್ಕೂಟವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿ ಶುಕ್ರವಾರ ಹೇಳಿದೆ.
■. ಉತ್ತರ ಆಫ್ರಿಕಾದ ರಾಷ್ಟ್ರ ಟ್ಯುನಿಷಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹೋರಾಡಲು ನಾಲ್ಕು ಸಂಘಟನೆಗಳು ಕೈಜೋಡಿಸಿ ಒಕ್ಕೂಟ ರಚಿಸಿದ್ದವು.
■. ಟ್ಯುನಿಷಿಯಾ ಕಾರ್ಮಿಕರ ಒಕ್ಕೂಟ (ಯುಜಿಟಿಟಿ),
■. ಟ್ಯುನಿಷಿಯಾ ಕೈಗಾರಿಕೆ, ವ್ಯಾಪಾರ ಮತ್ತು ಕರಕುಶಲ ಸಂಸ್ಥೆ (ಯುಟಿಐಸಿಎ),
■. ಟ್ಯುನಿಷಿಯಾ ಮಾನವ ಹಕ್ಕುಗಳ ಸಂಘ (ಎಲ್‌ಟಿಡಿಎಚ್)
■. ಟ್ಯುನಿಷಿಯಾ ವಕೀಲರ ಸಂಘಗಳು ಸೇರಿ ಒಕ್ಕೂಟ ರಚಿಸಿದ್ದವು.
■. ಪ್ರಶಸ್ತಿ ಪ್ರಧಾನ ಸಮಾರಂಭ ಡಿಸೆಂಬರ್ 10ರಂದು ನಡೆಯಲಿದೆ.
■. 1896ರಲ್ಲಿ ನಿಧನರಾದ ಸ್ವೀಡನ್‌ನ ವಿಜ್ಞಾನಿ ಆಲ್ಫ್ರೆಡ್ ನೊಬೆಲ್ ಅವರ ನೆನಪಿನಲ್ಲಿ ಪ್ರತಿವರ್ಷ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.
(Sat, 10/10/2015)
●.2015ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. 2015ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಬೆಲಾರಸ್‌ನ ಲೇಖಕಿ ಸ್ವೆಟ್ಲಾನಾ ಅಲೆಕ್ಸಿಯೆವಿಚ್ ಆಯ್ಕೆಯಾಗಿದ್ದಾರೆ.
■. ಈ ಕಾಲದ ನೋವು ಮತ್ತು ಧೈರ್ಯದ ಪ್ರತೀಕವಾದ ವಿವಿಧ ಪ್ರಕಾರಗಳಲ್ಲಿನ ಅವರ ಬರವಣಿಗೆಗೆ ಈ ಗೌರವ ನೀಡಲಾಗುತ್ತಿದೆ ಎಂದು ಸ್ವೀಡಿಷ್ ಅಕಾಡೆಮಿ ಹೇಳಿದೆ.
■. ಉಕ್ರೇನ್‌ನಲ್ಲಿ ಸಂಭವಿಸಿದ ಚೆರ್ನೊಬಿಲ್ ಅಣು ಅವಘಡ ಮತ್ತು ಎರಡನೇ ಮಹಾಯುದ್ಧದ ದುರಂತಗಳ ಕುರಿತ ಭಾವನಾತ್ಮಕ ಬರಹಗಳ ಮೂಲಕ ಅಲೆಕ್ಸಿಯೆವಿಚ್ (67) ಜಾಗತಿಕ ಮನ್ನಣೆ ಗಳಿಸಿದ್ದಾರೆ. ಪತ್ರಕರ್ತೆಯಾಗಿಯೂ ಅವರು ದುಡಿದಿದ್ದಾರೆ.
■. ಅಲೆಕ್ಸಿಯೆವಿಚ್, ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾಗುತ್ತಿರುವ14ನೇ ಮಹಿಳೆಯಾಗಿದ್ದಾರೆ.
■. ಅವರು ಎಂಬತ್ತು ಲಕ್ಷ ಸ್ವೀಡಿಷ್ ಕ್ರೋನಾರ್ (₹6.18 ಕೋಟಿ) ಪ್ರಶಸ್ತಿ ಮೊತ್ತ ಪಡೆಯಲಿದ್ದಾರೆ.
(Fri, 10/09/2015)
●.2015ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. 2015ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯು ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಆಂಗಸ್ ಡೀಟನ್ ಅವರಿಗೆ ಸಂದಿದೆ.
■. ‘ಅನುಭೋಗತೆ, ಬಡತನ ಹಾಗೂ ಕಲ್ಯಾಣದ ವಿಶ್ಲೇಷಣೆಗಾಗಿ’ ಈ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಪ್ರತಿಷ್ಠಾನವಾದ ಸ್ವೀಡನ್‌ನ ರಾಯಲ್ ಅಕಾಡೆಮಿ ಸೋಮವಾರ ಹೇಳಿದೆ.
(Mon, 12th Oct, 2015)
●.2015ರ ರಸಾಯನ ವಿಜ್ಞಾನ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರ:

■. ಡಿಎನ್‌ಎ ದುರಸ್ತಿಯ ಯಾಂತ್ರಿಕ ಅಧ್ಯಯನದಲ್ಲಿನ ಸಾಧನೆಗಾಗಿ ಸ್ವೀಡನ್‌ನ ಟೊಮಸ್ ಲಿಂಡಲ್, ಅಮೆರಿಕದ ಪಾಲ್ ಮಾಡ್ರಿಚ್ ಮತ್ತು ಅಮೆರಿಕ ಮೂಲದ ಟರ್ಕಿ ವಿಜ್ಞಾನಿ ಅಜೀಜ್ ಸಂಕರ್ ಅವರು ರಸಾಯನ ವಿಜ್ಞಾನದ ನೊಬೆಲ್ ಪ್ರಶಸ್ತಿ ಹಂಚಿಕೊಂಡಿದ್ದಾರೆ.
■. ಜೀವಂತ ಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಮೂಲಭೂತ ತಿಳಿವಳಿಕೆಯನ್ನು ಈ ವಿಜ್ಞಾನಿಗಳು ನೀಡಿದ್ದಾರೆ. ■. ಅವರ ಸಂಶೋಧನೆಗಳು ಕ್ಯಾನ್ಸರ್‌ನ ಹೊಸ ಚಿಕಿತ್ಸಾ ವಿಧಾನಗಳ ಅಭಿವೃದ್ಧಿ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ ಎಂದು ರಾಯಲ್ ಸ್ವೀಡಿಶ್ ವಿಜ್ಞಾನಗಳ ಅಕಾಡೆಮಿ ತಿಳಿಸಿದೆ.
■. ಹಾನಿಯಾದ ಡಿಎನ್‌ಎಯನ್ನು ಕೋಶಗಳು ಹೇಗೆ ದುರಸ್ತಿಪಡಿಸುತ್ತವೆ ಮತ್ತು ಅನುವಂಶೀಯ ಮಾಹಿತಿಯನ್ನು ರಕ್ಷಿಸುತ್ತದೆ ಎಂಬುದನ್ನು ಪತ್ತೆ ಮಾಡಿ ಈ ಮೂವರು ಸಂಶೋಧಕರು ವಿವರಿಸಿದ್ದರು.
■. ಡಿಎನ್‌ಎ ನಾಶ ಹೊಂದುವ ಬಗೆಯನ್ನು ವಿವರಿಸಿದ್ದ ಲಿಂಡಲ್, ಅದರ ಆಧಾರದಲ್ಲಿ ಡಿಎನ್ಎ ನಾಶವನ್ನು ನಿರಂತರವಾಗಿ ಎದುರಿಸಿ ದುರಸ್ತಿ ಮಾಡುವ ಆಣ್ವಿಕ ಯಂತ್ರವನ್ನು (ಮೊಲಿಕ್ಯುಲರ್ ಮೆಷಿನರಿ) ಆವಿಷ್ಕರಿಸಿದ್ದರು.
■. ಡಿಎನ್‌ಎದಲ್ಲಿನ ಹಾನಿಯನ್ನು ಸರಿಪಡಿಸುವ ನ್ಯುಕ್ಲಿಯೊಟೈಡ್ ಛೇದಕ ದುರಸ್ತಿಯನ್ನು ಸಂಕರ್ ಕಂಡುಹಿಡಿದಿದ್ದರು.
■. ಕೋಶ ವಿಭಾಗೀಕರಣದ ವೇಳೆ ಡಿಎನ್‌ಎ ನಕಲು ಸೃಷ್ಟಿಯಾದಾಗ ಉಂಟಾಗುವ ತಪ್ಪುಗಳನ್ನು ಕೋಶ ಹೇಗೆ ಸರಿಪಡಿಸುತ್ತದೆ ಎಂಬುದನ್ನು ಮಾಡ್ರಿಚ್ ವಿವರಿಸಿದ್ದರು. ಲಿಂಡಲ್ (77),
■. ಫ್ರಾನ್ಸಿಸ್ ಕ್ರಿಕ್ ಸಂಸ್ಥೆಯ ಗೌರವ ಸಮೂಹ ಮುಖ್ಯಸ್ಥ ಮತ್ತು ಬ್ರಿಟನ್‌ನ ಗ್ಲೇರ್ ಹಾಲ್ ಪ್ರಯೋಗಾಲಯದಲ್ಲಿನ ಇಂಗ್ಲೆಂಡ್ ಕ್ಯಾನ್ಸರ್ ಸಂಶೋಧನೆಯ ಗೌರವ ನಿರ್ದೇಶಕರಾಗಿದ್ದಾರೆ.
■. ಪಾಲ್ ಮಾಡ್ರಿಚ್ (69), ಹೊವಾರ್ಡ್ ಹ್ಯೂಸ್ ವೈದ್ಯಕೀಯ ಸಂಸ್ಥೆಯ ಪರೀಕ್ಷಕ ಮತ್ತು ಉತ್ತರ ಕೆರೊಲಿನಾದ ಡ್ಯೂಕ್ ವೈದ್ಯಕೀಯ ಶಾಲೆ ವಿ.ವಿಯ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
■. ಸಂಕರ್ (69), ಉತ್ತರಕೆರೊಲಿನಾದ ಚಾಪೆಲ್ ಹಿಲ್‌ನಲ್ಲಿರುವ ಉತ್ತರ ಕೆರೊಲಿನಾ ವೈದ್ಯಕೀಯ ಶಾಲೆ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
■. ಡಿಸೆಂಬರ್ 10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಮೂವರು ನೊಬೆಲ್ ಪ್ರಶಸ್ತಿಯ ಜೊತೆಗೆ 80 ಲಕ್ಷ ಸ್ವೀಡಿಶ್ ಕ್ರೋನೊರ್ (₹6.24 ಕೋಟಿ) ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ.
(Thu, 10/08/2015 )
●.2015ನೇ ಸಾಲಿನ ಭೌತ ವಿಜ್ಞಾನ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರ:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. ಜಪಾನ್‌ನ ತಕಾಕಿ ಕಜಿಟ ಮತ್ತು ಕೆನಡಾದ ಆರ್ಥರ್ ಮೆಕ್‌ಡೊನಾಲ್ಡ್ ಅವರಿಗೆ ಈ ಬಾರಿಯ ಭೌತವಿಜ್ಞಾನ ನೊಬೆಲ್ ದೊರೆತಿದೆ. ಭೌತ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗಾಗಿ ಈ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಿ ರಾಯಲ್ ಸ್ವೀಡಿಷ್ ಅಕಾಡೆಮಿಆಫ್ ಸೈನ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
■. ಇವರು ನ್ಯೂಟ್ರಿನೋ ಕಣಗಳ ಬಗ್ಗೆ ಸಂಶೋಧನೆ ಕೈಗೊಂಡಿದ್ದರು.ಟೋಕಿಯೊ ವಿ.ವಿ. ಪ್ರೊಫೆಸರ್ ಆಗಿರುವ ಕಜಿಟ ಅವರು ಕಾಸ್ಮಿಕ್ ರೇ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರೂ ಆಗಿದ್ದಾರೆ.
■. ಮೆಕ್‌ಡೊನಾಲ್ಡ್ ಅವರು ಕೆನಡಾದ ಕಿಂಗ್‌ಸ್ಟನ್‌ನಲ್ಲಿರುವ ಕ್ವೀನ್ಸ್ ವಿ.ವಿ.ದಲ್ಲಿ ಪ್ರೊಫೆಸರ್ ಆಗಿದ್ದಾರೆ.
■. ಇಬ್ಬರೂ ₹ 6.28 ಕೋಟಿ ಬಹುಮಾನ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 10ರಂದು ನಡೆಯಲಿದೆ.
(Wed, 10/07/2015)
●.2015ನೇ ಸಾಲಿನ ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರ:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರವನ್ನು ಈ ಬಾರಿ ಮೂವರು ಹಂಚಿಕೊಂಡಿದ್ದಾರೆ.
■. ಐರಿಷ್ ಮೂಲದ ವಿಲಿಯಂ ಕ್ಯಾಂಪ್‌ಬೆಲ್,
■. ಚೀನಾದ ತು ಯುಯು ಮತ್ತು ಜಪಾನ್ ನ ಸಟೋಷಿ ಒಮುರಾ 2015ನೇ ಸಾಲಿನ ವೈದ್ಯಕೀಯ ನೊಬೆಲ್‌ಗೆ ಪಾತ್ರರಾಗಿದ್ದಾರೆ.
(Tue, 10/06/2015 )
●.ಹೊರರಾಷ್ಟ್ರಗಳಲ್ಲಿ ಅಧ್ಯಯನ ಮಾಡಿದ ನೊಬೆಲ್ ಪುರಸ್ಕೃತರ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನವರು ಇಂಗ್ಲೆಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರು ಎಂದು ಬ್ರಿಟಿಷ್ ಕೌನ್ಸಿಲ್ ನಡೆಸಿದ ಅಧ್ಯಯನ ವರದಿ ಹೇಳಿದೆ.
(Wed, 7th Oct, 2015)
(ಕೃಪೆ : ಪ್ರಜಾವಾಣಿ)

No comments:
Post a Comment