☀‘ಭಾರತಿ’ ಅಂಟಾರ್ಟಿಕಾ ಸಂಶೋಧನಾ ಕೇಂದ್ರ :
('Bharati': The Research Station in Antarctica)
━━━━━━━━━━━━━━━━━━━━━━━━━━━━━
●.ಸಾಮಾನ್ಯ ಅಧ್ಯಯನ
(General Studies)
●.ಸಾಮಾನ್ಯ ವಿಜ್ಞಾನ
(General Science)
●.'ಭಾರತಿ':
••┈┈┈┈┈••
■. ಮೊದಲ ನೋಟದಲ್ಲಿ ಅಂತರಿಕ್ಷ ಕೇಂದ್ರದಂತೆ ಕಾಣುತ್ತಿರುವ ಮತ್ತು ತನ್ನ ರಚನೆಯಿಂದಲೇ ಎಲ್ಲರನ್ನೂ ಸೆಳೆಯುತ್ತಿರುವ ನೂತನ ಸಂಶೋಧನಾ ಕೇಂದ್ರವೊಂದನ್ನು ಭಾರತವು ಅಂಟಾರ್ಟಿಕಾ ಖಂಡದಲ್ಲಿ ಸ್ಥಾಪಿಸಿದೆ.
■. ಅಂಟಾಟಿಕಾ ಖಂಡದಲ್ಲಿ ಸ್ಥಾಪಿಸುತ್ತಿರುವ ಮೂರನೇ ಸಂಶೋಧನಾ ಕೇಂದ್ರ ಇದಾಗಿದೆ.
■. ಅಂಟಾರ್ಟಿಕಾ ಖಂಡದಲ್ಲಿ 52 ದೇಶಗಳು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಲ್ಲಿ ವಿವಿಧ ಸಂಶೋಧನೆಗಳನ್ನು ನಡೆಸುತ್ತಿದೆ.
■. ಭಾರತವು ಸಹ ಮೊದಲ ಬಾರಿಗೆ 1983-84ರಲ್ಲಿ ಅಂಟಾರ್ಟಿಕಾದ ದಕ್ಷಿಣ ಗಂಗೋತ್ರಿಯಲ್ಲಿ ತನ್ನ ಮೊದಲ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿತ್ತು. ಆದರೆ ಸಮುದ್ರ ಮಟ್ಟ ಹೆಚ್ಚಾದ ಕಾರಣ 1989ರಲ್ಲಿ ಅದು ನೀರಿನಲ್ಲಿ ಮುಳುಗಡೆ ಆಯಿತು.
■. ಆ ನಂತರ ಭಾರತವು ‘ಮೈತ್ರಿ’ ಎಂಬ ಸಂಶೋಧನಾ ಕೇಂದ್ರವನ್ನು 1990ರಲ್ಲಿ ಸ್ಥಾಪಿಸಿತು.
■. ಅಂಟಾರ್ಟಿಕಾ ಮತ್ತು ಸಾಗರ ಸಂಶೋಧನಾ ರಾಷ್ಟ್ರೀಯ ಕೇಂದ್ರ (ಎನ್ಸಿಎಒಆರ್) ಈ ಕೇಂದ್ರವನ್ನು ನಿರ್ವಹಿಸುತ್ತಿದೆ.
☀‘ಭಾರತಿ’ ಸಂಶೋಧನಾ ಕೇಂದ್ರದ ಕಾರ್ಯ ಯೋಜನೆ :
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
■. ಭಾರತವು ಹೊಸದಾಗಿ ‘ಭಾರತಿ’ ಎಂಬ ಸಂಶೋಧನಾ ಕೇಂದ್ರದ ನಿರ್ಮಾಣ ಕಾರ್ಯವನ್ನು 2009ರಲ್ಲಿ ಪ್ರಾರಂಭಿಸಿತು. ಈ ಕೇಂದ್ರವು 2013ರಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿತು.
■. ಈ ಸಂಶೋಧನಾ ಕೇಂದ್ರದಲ್ಲಿ ಹಿಮಾವೃತ ಭೂಭಾಗ ಮತ್ತು ಮಂಜುಗಡ್ಡೆಯ ಕುರಿತು ಸಂಶೋಧನೆ ನಡೆಸಲಾಗುತ್ತಿದೆ.
■. ಹವಾಮಾನ ವೈಪರೀತ್ಯದ ಕುರಿತು ಸಂಶೋಧನೆ ಸಹ ನಡೆಸಲಾಗುತ್ತಿದೆ.
■. ಹೊಸ ಕೇಂದ್ರವು ಅಂಟಾರ್ಟಿಕಾದ ತೀರ ಪ್ರದೇಶದಲ್ಲಿ ಈ ಪ್ರದೇಶದಲ್ಲಿ -40 ಡಿಗ್ರಿ ತಾಪಮಾನವಿರುತ್ತದೆ ಮತ್ತು ಸುಮಾರು 200 ಮೈಲಿ ಪ್ರತಿ ಕಿ.ಮೀ. ವೇಗದಲ್ಲಿ ಹಿಮಗಾಳಿ ಬೀಸುತ್ತಿರುತ್ತದೆ. ಇಂತಹ ಪ್ರತಿಕೂಲ ಹವಾಮಾನದಲ್ಲೂ ಸಹ ಭಾರತೀಯ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ತೊಡಗಿದ್ದಾರೆ.
(Courtesy : Vijayavani Newspaper)

No comments:
Post a Comment