"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 23 October 2015

☀‘ಸೂಪರ್‌ ಮೂನ್‌’: (ಟಿಪ್ಪಣಿ ಬರಹ) (Write a short notes on Super Moon)

☀‘ಸೂಪರ್‌ ಮೂನ್‌’: (ಟಿಪ್ಪಣಿ ಬರಹ)
(Write a short notes on Super Moon)

━━━━━━━━━━━━━━━━━━━━━━━━━━━━━━━━━━━━━━━━━━━━━

●.ಸಾಮಾನ್ಯ ಅಧ್ಯಯನ
(General Studies)

●.ಸಾಮಾನ್ಯ ವಿಜ್ಞಾನ
(General Science)


■. ತಿಂಗಳಿಗೊಮ್ಮೆ ಭೂಮಿಯನ್ನು ಸುತ್ತು ಹಾಕುವ ಚಂದ್ರ ಗ್ರಹದ ಪಥ ದೀರ್ಘ ವೃತ್ತಾಕಾರವಾಗಿದ್ದು ಸರಾಸರಿ ತ್ರಿಜ್ಯದ ದೂರ 3,84,000 ಕಿ.ಮೀ ಆಗಿದೆ. ತಿಂಗಳಲ್ಲಿ ಒಮ್ಮೆ ಅತಿ ಸಮೀಪದಲ್ಲಿ ಅಂದರೆ 3,56,000 ಕಿ.ಮೀ ದೂರದಲ್ಲಿ ಮತ್ತು ಇನ್ನೊಮ್ಮೆ ಅತೀ ದೂರದಲ್ಲಿ 4,06,000 ಕಿ.ಮೀ ದೂರದಲ್ಲಿ ಚಂದ್ರ ಗ್ರಹ ಗೋಚರಿಸುವುದು.

■. ಸಮೀಪದಲ್ಲಿ ಗೋಚರಿಸುವುದಕ್ಕೆ ಸೂಪರ್ ಮೂನ್‌ ಎಂದು ಕರೆಯಲಾಗುತ್ತದೆ.‌

■. ಚಂದ್ರ ಅತಿ ದೂರದಲ್ಲಿ ಕಾಣ ಸಿಗುವುದಕ್ಕೆ ಮೈಕ್ರೋ ಮೂನ್‌ ಎಂದು ಕರೆಯಲಾಗುತ್ತದೆ.

■. ಚಂದ್ರನು ಭೂಮಿಯ ಅತ್ಯಂತ ಸಮೀಪಕ್ಕೆ ಬರುವ ಅವಧಿಯಲ್ಲಿ ತನ್ನ ಗಾತ್ರದಲ್ಲಿ ಶೇ 14ರಷ್ಟುದೊಡ್ಡದಾಗಿ ಮತ್ತು ಶೇ 30 ರಷ್ಟು ಅಧಿಕ ಪ್ರಕಾಶಮಾನವಾಗಿ ಗೋಚರಿಸುತ್ತಾನೆ. ಈ ‘ಸೂಪರ್‌ಮೂನ್‌’ ಪ್ರಕ್ರಿಯೆ ಸುಮಾರು 14 ತಿಂಗಳಿಗೊಮ್ಮೆ ನಡೆಯುತ್ತಿರುತ್ತದೆ. ಆದರೆ ಇದೇ ಅವಧಿಯಲ್ಲಿ ಚಂದ್ರ ಗ್ರಹಣ ಸಂಭವಿಸುವುದು ತೀರಾ ವಿರಳ.

■. ಸಂಪೂರ್ಣ ಚಂದ್ರಗ್ರಹಣ ಮತ್ತು ಸೂಪರ್ ಮೂನ್ ಒಟ್ಟೊಟ್ಟಿಗೆ ಸಂಭವಿಸುವುದು ತೀರಾ ಅಪರೂಪ. ಕಳೆದ 115 ವರ್ಷಗಳಲ್ಲಿ ಕೇವಲ ನಾಲ್ಕು ಬಾರಿ ಈ ವಿಸ್ಮಯ ಜರುಗಿದ್ದು, 33 ವರ್ಷಗಳ ನಂತರ ಮತ್ತೊಮ್ಮೆ ಈ ದೃಶ್ಯವೈಭವ ಕಾಣಬಹುದಾಗಿದೆ.


●.ಸೂಪರ್ ಮೂನ್ ಗೋಚರಿಸುವ ದಿನಗಳು :
•┈┈┈┈┈┈┈┈┈┈┈┈┈┈┈┈┈┈┈┈┈•
■. 2015 ಸೆಪ್ಟೆಂಬರ್ 28 ರಂದು3,56,879 ಕಿ.ಮೀ,
■. 2016 ನವೆಂಬರ್ 14 ರಂದು 3,56,523 ಕಿ.ಮೀ ಮತ್ತು
■. 2018 ಜನವರಿ 2 ರಂದು 3,56,605 ಕಿ.ಮೀ ದೂರದಲ್ಲಿ ಚಂದ್ರ ಗ್ರಹ ಗೋಚರಿಸಲಿದೆ.


●.ಈ ವರ್ಷದ ಸೂಪರ್ ಮೂನ್ ವಿಶೇಷ :
•┈┈┈┈┈┈┈┈┈┈┈┈┈┈┈┈┈┈┈•
■. ಕುತೂಹಲಕಾರಿ ವಿಷಯವೆಂದರೆ,ಇದೇ ವರ್ಷದ ನವೆಂಬರ್ 28ರಂದು ಹುಣ್ಣಿಮೆಯ ರಾತ್ರಿ ಚಂದ್ರ ಭೂಮಿಯಿಂದ ಅತೀ ದೂರಕ್ಕೆ ಸರಿಯಲಿದ್ದು, ಚಂದ್ರ ಹಾಗೂ ಭೂಮಿಯ ಅಂತರ 4,06,349ಕಿಮೀಗಳಿಗೆ ಹೆಚ್ಚಲಿದೆ. ಭಾನುವಾರ ಇರುಳಿನಲ್ಲಿ ಕಾಣಿಸುವ ಚಂದ್ರ ನವೆಂಬರ್ 28ರಂದು ಕಾಣಿಸುವ ಚಂದ್ರನಿಗಿಂತ ಶೇಕಡಾ 11 ರಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

■. ಸಾಮಾನ್ಯವಾಗಿ ಹುಣ್ಣಿಮೆ ದಿನ ಕಾಣುವ ಚಂದ್ರನಿಗಿಂತ ಈ ಹುಣ್ಣಿಮೆಯ ಚಂದ್ರ ಸುಮಾರು ಶೇ.12ರಷ್ಟು ದೊಡ್ಡದಾಗಿ ಹಾಗೂ ಶೇ.24ರಷ್ಟು ಹೆಚ್ಚಿನ ಪ್ರಭೆಯೊಂದಿಗೆ ಕಾಣಿಸುತ್ತಾನೆ. 1982ರ ನಂತರ ಇಂಥ ದೊಡ್ಡ ಚಂದ್ರ ಕಾಣುತ್ತಿದ್ದಾನೆ. 2033ರಲ್ಲಿ ಮತ್ತೊಮ್ಮೆ ಇದೇ ರೀತಿಯ ಪ್ರಭೆ ಬೀರಲಿದ್ದಾನೆ.

No comments:

Post a Comment