"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 24 October 2015

☀ಪಿ.ಎಸ್.ಎಲ್.ವಿ (PSLV) : (Polar Satellite Launch Vehicle) 

☀ಪಿ.ಎಸ್.ಎಲ್.ವಿ (PSLV) :
(Polar Satellite Launch Vehicle)
━━━━━━━━━━━━━━━━━━━━━━━━━

●.ಸಾಮಾನ್ಯ ಅಧ್ಯಯನ
(General Studies)

●.ಸಾಮಾನ್ಯ ವಿಜ್ಞಾನ
(General Science)


ನಾವು ಯಾವುದಾದರೂ ವಸ್ತುಗಳನ್ನು / ಜನರನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಾಗಿಸಬೇಕಾದರೆ ವಾಹನಗಳು ಬೇಕಾಗುತ್ತದೆ. ಅದೇ ರೀತಿ ಕೃತಕ ಉಪಗ್ರಹಗಳನ್ನು ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಲು ರಾಕೆಟ್ ಉಡಾವಣಾ ವಾಹನಗಳನ್ನು ಬಳಸುತ್ತಾರೆ.

●.ಉಪಗ್ರಹಗಳನ್ನು ಉಡಾಯಿಸಲು ಎರಡು ರೀತಿಯ ಉಡಾವಣಾ ವಾಹನಗಳನ್ನು ಬಳಸುತ್ತದೆ,
■. ಧ್ರುವ (ಪೋಲಾರ್) ಉಪಗ್ರಹ ಉಡಾವಣಾ ವಾಹನಗಳು (ಪಿ.ಎಸ್.ಎಲ್.ವಿ) ಮತ್ತು
■. ಭೂಸ್ಥಿರ ಕಕ್ಷಾ (ಜಿಯೊಸ್ಟೇಶನರಿ) ಉಪಗ್ರಹ ಉಡಾವಣಾ ವಾಹನಗಳು (ಜಿ.ಎಸ್.ಎಲ್.ವಿ).

●.ಈ ಉಡಾವಣಾ ವಾಹನವೂ ಭಾರತದ 32 ಮತ್ತು ವಿದೇಶದ 35 ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಿದೆ. 1993ರ ಸೆಪ್ಟೆಂಬರ್ 20ರಂದು ಐ.ಆರ್.ಎಸ್.-1ಇ ಉಪಗ್ರಹವನ್ನು ಉಡಾವಣೆ ಮಾಡುವಾಗ ವಿಫಲಗೊಂಡಿದ್ದು ಬಿಟ್ಟರೆ ಇದುವರೆಗೂ ಪಿ.ಎಸ್.ಎಲ್.ವಿಯೂ ಸತತವಾಗಿ 27 ಬಾರಿ ಯಶಸ್ವಿ ಫಲಿತಾಂಶವನ್ನು ಕೊಟ್ಟಿದೆ.

●.ಈ ವಾಹನದಲ್ಲಿ ಉಡಾವಣೆಯಾದ ಪ್ರಮುಖ ಯೋಜನೆಗಳು ಚಂದ್ರಯಾನ-1 ಮತ್ತು ಮಂಗಳಯಾನ ಯೋಜನೆ.


●.ಉಡಾವಣಾ ವಾಹನದ ಸಾಮರ್ಥ್ಯ :
••┈┈┈┈┈┈┈┈┈┈┈┈┈┈┈┈┈┈┈••
ಈ ಉಡಾವಣಾ ವಾಹನವೂ 620 ಕಿ. ಮೀ. ಸೂರ್ಯ ಸಮಕಾಲಿಕ ಧ್ರುವಿಯ ಕಕ್ಷೆಯಲ್ಲಿ (ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್) 1600 ಕಿ. ಗ್ರಾಂ. ತೂಕದ ಉಪಗ್ರಹವನ್ನು ಮತ್ತು ಭೂ ಸಮಕಾಲಿಕ ವರ್ಗಾವಣೆ ಕಕ್ಷೆಯಲ್ಲಿ(ಜಿಯೋ ಸಿಂಕ್ರೊನಸ್ ಟ್ರಾನ್ಸ್​ಫರ್ ಆರ್ಬಿಟ್) 1050 ಕಿ. ಗ್ರಾಂ. ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.


●.ಉಡಾವಣಾ ವಾಹನದ ಉದ್ದ:
••┈┈┈┈┈┈┈┈┈┈┈┈┈┈••
ಈ ವಾಹನದ ಉದ್ದ 44.4 ಮೀ. ಮತ್ತು ಉಡಾವಣೆಯ ತೂಕ 295 ಟನ್​ಗಳು.


●. ಉಡಾವಣಾ ಹಂತಗಳು :
••┈┈┈┈┈┈┈┈┈┈┈┈┈┈••
■. ಬಹುಹಂತೀಯವಾಗಿ ನಿರ್ವಿುಸಲಾಗಿರುವ ಈ ವಾಹನವೂ ಮೇಲೇರುತ್ತಾ ಒಂದೊಂದೇ ಹಂತ ಉರಿಯುತ್ತ ಕಳಚಿಬೀಳುತ್ತ ಹೋಗುತ್ತದೆ. ವ್ಯೋಮನೌಕೆಯ ರೀತಿ ಇವುಗಳನ್ನು ಮರುಬಳಕೆ ಮಾಡಲಾಗುವುದಿಲ್ಲ.
■. ಈ ವಾಹನವೂ ಸರತಿ ಪ್ರಕಾರವಾಗಿ ನಾಲ್ಕು ಹಂತಗಳ ಘನ ಮತ್ತು ದ್ರವನೋದನ (ಪ್ರಾಪಲ್ಷನ್) ವ್ಯವಸ್ಥೆಯನ್ನು ಹೊಂದಿದೆ.
■. ಮೊದಲ ಹಂತವೂ ಪ್ರಪಂಚದಲ್ಲೇ ದೊಡ್ಡದಾದ ಘನನೋದಕ (ಪ್ರಾಪೆಲಂಟ್) ಬೂಸ್ಟರ್ ವ್ಯವಸ್ಥೆಯನ್ನು ಹೊಂದಿದೆ. ಇದು 139 ಟನ್ ನೋದಕವನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದೆ.


●.ಪಿ.ಎಸ್.ಎಲ್.ವಿ. ಉಡಾವಣಾ ವಾಹನದ ಮೈಲಿಗಲ್ಲುಗಳು :
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

1 - ಉಪಗ್ರಹದ ಹೆಸರು - ಐ.ಆರ್.ಎಸ್.-1ಇ
■. ಉಡಾವಣಾ ದಿನಾಂಕ - 20-09-1993
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ1


2 -ಉಪಗ್ರಹದ ಹೆಸರು - ಐ.ಆರ್.ಎಸ್.-ಪಿ2
■. ಉಡಾವಣಾ ದಿನಾಂಕ - 15-10-1994
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ2


3 -ಉಪಗ್ರಹದ ಹೆಸರು - ಐ.ಆರ್.ಎಸ್.-ಪಿ3
■. ಉಡಾವಣಾ ದಿನಾಂಕ - 21-03-1996
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ3


4 -ಉಪಗ್ರಹದ ಹೆಸರು - ಐ.ಆರ್.ಎಸ್.-1ಡಿ
■. ಉಡಾವಣಾ ದಿನಾಂಕ - 29-09-1997
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ1


5 -ಉಪಗ್ರಹದ ಹೆಸರು - ಓಶನ್​ಸ್ಯಾಟ್ (ಐ.ಆರ್.ಎಸ್-ಪಿ.4), ಕಿಟ್​ಸ್ಯಾಟ್-3, ಡಿಎಲ್​ಆರ್-ಟಬ್​ಸ್ಯಾಟ್
■. ಉಡಾವಣಾ ದಿನಾಂಕ - 26-05-1999
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ2


6 -ಉಪಗ್ರಹದ ಹೆಸರು - ಟೆಕ್ನಾಲಜಿ ಎಕ್ಸ್​ಪರಿಮೆಂಟ್ ಸ್ಯಾಟ್​ಲೈಟ್ (ಟಿ.ಇ.ಎಸ್.)
■. ಉಡಾವಣಾ ದಿನಾಂಕ - 22-10-2001
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ3


7 -ಉಪಗ್ರಹದ ಹೆಸರು - ಕಲ್ಪನಾ-1 (ಮೆಟ್​ಸ್ಯಾಟ್)
■. ಉಡಾವಣಾ ದಿನಾಂಕ - 12-09-2002
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ4


8 -ಉಪಗ್ರಹದ ಹೆಸರು - ರಿಸೋರ್ಸ್​ಸ್ಯಾಟ್-1 (ಐ.ಆರ್.ಎಸ್.-ಪಿ6)
■. ಉಡಾವಣಾ ದಿನಾಂಕ - 17-10-2003
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ5


9 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-1, ಹ್ಯಾಮ್್ಯಾಟ್
■. ಉಡಾವಣಾ ದಿನಾಂಕ - 05-05-2005
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ6


10 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2, ಎಸ್.ಆರ್.ಇ.-1 ಇನ್ನೂ ಎರಡು ಇತರೆ ಉಪಗ್ರಹ
■. ಉಡಾವಣಾ ದಿನಾಂಕ - 10-01-2007
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ7


11 -ಉಪಗ್ರಹದ ಹೆಸರು - ಅಗಿಲೆ
■. ಉಡಾವಣಾ ದಿನಾಂಕ - 23-04-2007
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ8


12 -ಉಪಗ್ರಹದ ಹೆಸರು - ಟೆಕ್​ಸಾರ್
■. ಉಡಾವಣಾ ದಿನಾಂಕ - 23-01-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ10


13 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2ಎ, ಐ.ಎಮ್​ಎಸ್.-1 ಮತ್ತು ಎಂಟು ನ್ಯಾನೋ ಉಪಗ್ರಹ
■. ಉಡಾವಣಾ ದಿನಾಂಕ - 28-04-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ9


14 -ಉಪಗ್ರಹದ ಹೆಸರು - ಚಂದ್ರಯಾನ-1
■. ಉಡಾವಣಾ ದಿನಾಂಕ - 22-10-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ11


15 -ಉಪಗ್ರಹದ ಹೆಸರು - ರಿಸ್ಯಾಟ್-2, ಅನುಸ್ಯಾಟ್
■. ಉಡಾವಣಾ ದಿನಾಂಕ - 20-04-2009
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ12


16 -ಉಪಗ್ರಹದ ಹೆಸರು - ಓಶನ್​ಸ್ಯಾಟ್-2 (ಐ.ಆರ್.ಎಸ್.-ಪಿ4) ಮತ್ತು ಆರು ನ್ಯಾನೋ ಉಪಗ್ರಹ
■. ಉಡಾವಣಾ ದಿನಾಂಕ - 23-09-2009
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ14


17 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2ಬಿ ಇನ್ನೂ ನಾಲ್ಕು ಇತರೆ ಉಪಗ್ರಹ
■. ಉಡಾವಣಾ ದಿನಾಂಕ - 12-07-2010
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ15


18 -ಉಪಗ್ರಹದ ಹೆಸರು - ರಿಸೋರ್ಸ್​ಸ್ಯಾಟ್-2, ಯೂಥ್​ಸ್ಯಾಟ್ ಮತ್ತು ಎಕ್ಸ್​ಸ್ಯಾಟ್
■. ಉಡಾವಣಾ ದಿನಾಂಕ - 20-04-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ16


19 -ಉಪಗ್ರಹದ ಹೆಸರು - ಜಿಸ್ಯಾಟ್-12
■. ಉಡಾವಣಾ ದಿನಾಂಕ - 15-07-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ17


20 -ಉಪಗ್ರಹದ ಹೆಸರು - ಮೆಗಾ ಟ್ರೊಪಿಕ್ಯೂಸ್, ಎಸ್.ಆರ್.ಎಮ್್ಯಾಟ್, ಜುಗ್ನು
■. ಉಡಾವಣಾ ದಿನಾಂಕ - 12-10-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ18


21 -ಉಪಗ್ರಹದ ಹೆಸರು - ರಿಸ್ಯಾಟ್-1
■. ಉಡಾವಣಾ ದಿನಾಂಕ - 26-04-2012
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ19


22 -ಉಪಗ್ರಹದ ಹೆಸರು - ಸ್ಪಾಟ್-6 ಮತ್ತು ಪ್ರೋಯ್ಟರ್ಸ್
■. ಉಡಾವಣಾ ದಿನಾಂಕ - 09-09-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ21


23 -ಉಪಗ್ರಹದ ಹೆಸರು - ಸರಳ್ ಮತ್ತು ಆರು ವಾಣಿಜ್ಯೋದ್ದೇಶ ಉಪಗ್ರಹಗಳು
■. ಉಡಾವಣಾ ದಿನಾಂಕ - 25-02-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ20


24 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್
■. ಉಡಾವಣಾ ದಿನಾಂಕ - 01-07-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ22


25 -ಉಪಗ್ರಹದ ಹೆಸರು - ಮಾರ್ಸ್ ಆರ್ಬಿಟರ್ ಮಿಷನ್ ಸ್ಪೇಸ್​ಕ್ರಾಫ್ಟ್
(ಮಂಗಳ ಕಕ್ಷೆಗಾಮಿ ಗಗನನೌಕೆ)
■. ಉಡಾವಣಾ ದಿನಾಂಕ - 05-11-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ25


26 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್ 1ಬಿ
■. ಉಡಾವಣಾ ದಿನಾಂಕ - 04-04-2014
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ24


27 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್ 1ಸಿ
■. ಉಡಾವಣಾ ದಿನಾಂಕ - 16-10-2014
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ26


28 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್ 1ಡಿ
■. ಉಡಾವಣಾ ದಿನಾಂಕ - 28-03-2015
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ27

(Courtesy: Vijayavani News Paper)

No comments:

Post a Comment