"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 14 October 2015

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -20)   (General knowledge on Current Affairs (Part-20))  ☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -20)
(General knowledge on Current Affairs (Part-20))
☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)


811)  ಸಿಂಗಪುರದ ಪ್ರಧಾನಿಯಾಗಿ ಪುನರಾಯ್ಕೆಯಾಗಿರುವ ಲೀ ಸಿಯೆನ್‌ ಲೂಂಗ್‌ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
(Fri, 2nd Oct, 2015)


812)  ‘ಪ್ರಾಜೆಕ್ಟ್ ಲೂನ್’ ಎಂಬುದು ದುರ್ಗಮ ಪ್ರದೇಶಗಳ ಜನರಿಗೆ ಅಂತರ್ಜಾಲ ಸಂಪರ್ಕ ಒದಗಿಸುವ ಗೂಗಲ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಕಾರ್ಯ ಸೇವೆಯಾಗಿದೆ.
■. ‘ಲೂನ್’ ಸೇವೆಯು ದೂರ ಶಿಕ್ಷಣ, ಗ್ರಾಮೀಣ ಶಾಲೆಗಳು ಹಾಗೂ ಟೆಲಿ ಮೆಡಿಸಿನ್‌ ಕ್ಷೇತ್ರ ಸೇರಿದಂತೆ ವಿವಿಧೆಡೆ ನೆರವಿಗೆ ಬರುವುದು ಖಚಿತ ಎಂದು ಗೂಗಲ್‌ ಅಧಿಕಾರಿಗಳು ತಿಳಿಸಿದ್ದಾರೆ.
(Thu, 10/01/2015)


813)  ಅಮೆರಿಕದ ಪ್ರತಿಷ್ಠಿತ 'ಮ್ಯಾಕ್ ಅರ್ಥರ್ ಫೆಲೊ' ಗೌರವಕ್ಕೆ ಭಾರತ ಮೂಲದ ಪರಿಸರ ಎಂಜಿನಿಯರ್ ಕಾರ್ತಿಕ್‌ ಚಂದ್ರನ್ (41) ಅವರನ್ನು ಆಯ್ಕೆ ಮಾಡಲಾಗಿದೆ.
(Thu, 1st Oct, 2015)


814)  ಪ್ರಸ್ತುತ ಮಾಲ್ಡೀವ್ಸ್‌ ದೇಶದ ಅಧ್ಯಕ್ಷ :
■. ಅಬ್ದುಲ್ಲಾ ಯಮೀನ್‌ ಅಬ್ದುಲ್ಲಾ ಗಯೂಂ


815)  ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಗೆದ್ದ ಟ್ರೋಫಿಯೊಂದಿಗೆ ಮಾರ್ಟಿನಾ ಹಿಂಗಿಸ್ ಮತ್ತು ಸಾನಿಯಾ ಮಿರ್ಜಾ ಫೈನಲ್‌ ಪಂದ್ಯದಲ್ಲಿ ಸಾನಿಯಾ ಮತ್ತು ಹಿಂಗಿಸ್ 6–3, 6–3ರ ನೇರ ಸೆಟ್‌ಗಳಲ್ಲಿ ಆಸ್ಟ್ರೇಲಿಯಾದ ಕೆಸೆ ಡೆಲಾಕಾ ಮತ್ತು ಕಜಕಸ್ತಾನದ ಯರೊಸ್ಲಾವಾ ಶ್ವೆಡೋವಾ ಅವರನ್ನು ಮಣಿಸಿದರು
■. ಸಾನಿಯಾ ಜೊತೆ ಜಯಿಸಿದ ಹಿಂಗಿಸ್ ಅಮೆರಿಕ ಓಪನ್ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿ ಗೌರವ ಗಳಿಸಿದರು.
■. ಈ ಪ್ರಶಸ್ತಿಯೂ ಸೇರಿದಂತೆ ಸಾನಿಯಾ ಒಟ್ಟು ಐದು ಡಬಲ್ಸ್‌ ಮತ್ತು ಮೂರು ಮಿಶ್ರ ಡಬಲ್ಸ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ.
■. ಹಿಂಗಿಸ್ ಒಟ್ಟು 20 ಗ್ರ್ಯಾಂಡ್‌ಸ್ಲಾಮ್ ಗೆದ್ದಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರು ಸತತ ಐದು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
(Mon, 09/14/2015)


816)  ಭಾರತದ ಟೆನಿಸ್ ತಾರೆ ಲಿಯಾಂಡರ್ ಮಾರ್ಟಿನಾ ಹಿಂಗಿಸ್‌ ಜೊತೆಗೂಡಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ ಗೆದ್ದರು.
■. ಅವರು, ಅತಿ ಹೆಚ್ಚು ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
■. ಈ ಮೂಲಕ ಪೇಸ್ 17ನೇ ಬಾರಿ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದರು.
(Aug, 2015)


817)  ಸಾನಿಯಾ ಗೆದ್ದಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳು

■. ಮಹಿಳಾ ವಿಭಾಗದ ಡಬಲ್ಸ್‌
2015: ವಿಂಬಲ್ಡನ್‌ ಟೂರ್ನಿ
2015: ಅಮೆರಿಕ ಓಪನ್‌ ಟೂರ್ನಿ

■. ಮಿಶ್ರ ಡಬಲ್ಸ್‌ ವಿಭಾಗ
2009: ಆಸ್ಟ್ರೇಲಿಯಾ ಓಪನ್‌
2012: ಫ್ರೆಂಚ್‌ ಓಪನ್‌
2014: ಅಮೆರಿಕ ಓಪನ್


818)  ಇತ್ತೀಚೆಗೆ ನಡೆದ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರನ್ನು 6-4, 5-7, 6-4, 6-4 ರಲ್ಲಿ ಸೋಲಿಸುವ ಮೂಲಕ ಮತ್ತೊಮ್ಮೆ ಚಾಂಪಿಯನ್‌ ರಾದರು.
(Mon, 09/14/2015)


819)  ಹೃದಯದಿಂದ ದೇಹದ ಇತರ ಭಾಗಗಳಿಗೆ ಆಮ್ಲಜನಕ ವಿತರಿಸುವ ರಕ್ತನಾಳ :
■. ಮಹಾಪಧಮನಿ .


820)  'ಕೊಲಾಜೆನ್' ಎಂಬುದು ನೈಸರ್ಗಿಕವಾಗಿ ಮಾನವನ ದೇಹದ ಮೂಳೆಗಳು, ಮಾಂಸಖಂಡಗಳು ಮತ್ತು ಚರ್ಮದಲ್ಲಿ ಕಂಡುಬರುವ ಒಂದು ಪ್ರೋಟಿನ್ ಆಗಿದ್ದು, ಈ ಅಂಗಾಂಶಗಳಲ್ಲಿನ ಬಿಗಿತದ ನಿರ್ವಹಣೆ ಇದರ ಜವಾಬ್ದಾರಿಯಾಗಿದೆ.


821)  ನಮ್ಮ ದೇಹದಲ್ಲಿ ಕಂಡುಬರುವ ‘ಎಲಾಸ್ಟಿನ್’ ಎಂಬ ಒಂದು ವಿಧದ ಪ್ರೋಟಿನ್, ಅಂಗಾಂಶಗಳು ನಮ್ಯತೆಯನ್ನು ಹೊಂದಿದ್ದೂ ಬಿಗಿಯಾಗಿರುವಂತೆ ನೋಡಿಕೊಳ್ಳುತ್ತದೆ.


822)  ಭಾರತ ಮೂಲದ ಲೇಖಕಿ, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತೆ ಜುಂಪಾ ಲಾಹಿರಿ ಅಮೆರಿಕದ ಪ್ರತಿಷ್ಠಿತ ರಾಷ್ಟ್ರೀಯ ಮಾನವಿಕ ಪದಕಕ್ಕೆ (ನ್ಯಾಷನಲ್ ಹ್ಯುಮ್ಯಾನಿಟೀಸ್‌ ಮೆಡಲ್‌) ಆಯ್ಕೆಯಾಗಿದ್ದಾರೆ.
■. ಜುಂಪಾ ಲಾಹಿರಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿರುವ ನೀಲಾಂಜನ ಸುದೇಷ್ಣ ಪ್ರಿನ್ಸ್‌ಟನ್‌ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
■. ಭಾರತೀಯ ಮೂಲದ ಅಮೆರಿಕನ್ ಲೇಖಕಿಯಾಗಿರುವ ಜುಂಪಾ ಅವರ ‘ಇಂಟರ್‌ಪ್ರಿಟರ್ ಆಫ್‌ ಮ್ಯಾಲಡೀಸ್‌’ ಕೃತಿ 2000ರ ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು.
(Sat, 09/05/2015)


823)  ಒಬ್ಬ ವ್ಯಕ್ತಿಗೆ 422 ಮರಗಳಂತೆ ಜಗತ್ತಿನಲ್ಲಿ ಈಗ ಮೂರು ಲಕ್ಷ ಕೋಟಿ ಮರಗಳಿವೆ. ನಾಗರಿಕತೆ ಆರಂಭವಾದಾಗಿನಿಂದ ಮರಗಳ ಪ್ರಮಾಣ ಶೇ 46ರಷ್ಟು ಕಡಿತವಾಗಿದೆ ಎಂದು ಯೇಲ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.
(Sat, 5th Sep, 2015)


824)  ಇತ್ತೀಚೆಗೆ ಗ್ರೀಸ್‌ನ ಪ್ರಥಮ ಮಹಿಳಾ ಪ್ರಧಾನಿಯಾಗಿ ನೇಮಕಗೊಂಡವರು:
■. ವಸಿಲಿಕಿತನೌ (Sat, 29th Aug, 2015)


825)  ನಾಸಾ ಹಾಗೂ ಭಾರಿ ಸಾಮರ್ಥ್ಯದ ಇಎಸ್‌ಎ ಹಬ್ಬಲ್‌ ಬಾಹ್ಯಾ ಕಾಶ ಟೆಲಿಸ್ಕೋಪ್‌ ನೆರವಿನಿಂದ ಖಭೌತ ವಿಜ್ಞಾನಿಗಳು ಬೃಹತ್ ಆಕಾರದ ಆಕಾಶ ಗಂಗೆಯನ್ನು ಪತ್ತೆ ಹಚ್ಚಿದ್ದಾರೆ.
■. ಸೌರವ್ಯೂಹದಲ್ಲಿ ಇಷ್ಟೊಂದು ದೈತ್ಯ ಗಾತ್ರದ ನಕ್ಷತ್ರಪುಂಜ ಪತ್ತೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ.
■. ಅತ್ಯಂತ ಪುರಾತನವಾದ ಕೆಂಪು ಹಾಗೂ ಸತ್ತ ನಕ್ಷತ್ರಗಳ ಸಮೂಹದಿಂದ ನಿರ್ಮಾಣವಾದ ಈ ಆಕಾಶಗಂಗೆಗೆ ಎಸ್‌ಪಿಎಆರ್‌ಸಿಎಸ್‌1049+56 ಎಂದು ಹೆಸರಿಸಲಾಗಿದೆ.
■. ಕನಿಷ್ಠ 27 ನಕ್ಷತ್ರಪುಂಜಗಳ ಸಮೂಹ ಒಟ್ಟುಗೂಡಿ ಈ ಬೃಹತ್‌ ಆಕಾಶಗಂಗೆ ನಿರ್ಮಾಣವಾಗಿದ್ದು, ಒಟ್ಟು ದ್ರವ್ಯರಾಶಿ 400 ಸಹಸ್ರಕೋಟಿ ಸೂರ್ಯನಿಗೆ ಸಮ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
(Sat, 09/12/2015)


826)  ಭಾರತದ ಖ್ಯಾತ ಕೃಷಿ ವಿಜ್ಞಾನಿ ಡಾ. ಮೊಡಡುಗು ವಿಜಯ್‌ ಗುಪ್ತ ಅವರಿಗೆ ಭಾರತ, ಬಾಂಗ್ಲಾ ದೇಶ ಹಾಗೂ ದಕ್ಷಿಣ ಪೂರ್ವ ಏಷ್ಯಾ ದೇಶಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಮೊದಲ ಸನ್‌ಹಾಕ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
■. 76 ವರ್ಷದ ಗುಪ್ತ, ₹6 ಕೋಟಿ ಮೊತ್ತದ ಪ್ರಶಸ್ತಿಯನ್ನು ಕಿರಿಬತಿ ದ್ವೀಪ ಸಮೂಹದ ಅಧ್ಯಕ್ಷ ಅನೋಟ್ ಟಾಂಗ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
■. 63 ವರ್ಷದ ಟಾಂಗ್‌ ಅವರು ಪೆಸಿಫಿಕ್‌ ಸಾಗರ ದ್ವೀಪಗಳಲ್ಲಿ ಇಂಗಾಲ ಹೊರಸೂಸುವಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
■. ಗುಪ್ತ ಅವರು ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕೃಷಿ ಸಂಸ್ಥೆಗಳೊಂದಿಗೆ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
■. ನೊಬೆಲ್‌ ಶಾಂತಿ ಪ್ರಶಸ್ತಿಗೆ ಪರ್ಯಾಯ ಎಂದೇ ಪರಿಗಣಿಸಲಾಗಿರುವ ಈ ಪುರಸ್ಕಾರವನ್ನು ದಕ್ಷಿಣ ಕೊರಿಯಾದ ಧಾರ್ಮಿಕ ನಾಯಕಿ ಡಾ. ಜಾಕ್‌ ಜಾ ಹ್ಯಾನ್‌ ಮೂನ್‌ ಪ್ರದಾನ ಮಾಡಿದ್ದಾರೆ.
■. ಜನ ಕಲ್ಯಾಣಕ್ಕಾಗಿ ದುಡಿದವರಿಗಾಗಿ ಜಾ ಅವರ ಪತಿ ದಿ. ರೆವ್‌ ಸನ್‌ ಮೈಯುಂಗ್‌ ಮೂನ್‌ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.


827)  ಈಜಿಪ್ಟ್‌ನ ನೂತನ ಪ್ರಧಾನಿಯಾಗಿ ಷರೀಫ್‌ ಇಸ್ಮಾಯಿಲ್‌ ಪ್ರಮಾಣವಚನ ಸ್ವೀಕರಿಸಿದರು.
■. ಅಧ್ಯಕ್ಷ ಅಬ್ದೆಲ್‌– ಫತ್ತಾಹ್‌ ಅಲ್‌ ಸೀಸಿ ಅವರು ಪ್ರಮಾಣವಚನ ಬೋಧಿಸಿದರು.
(Sun, 20th Sep, 2015)


828)  ಹಂಗೆರಿ ರಾಷ್ಟ್ರದ ಪ್ರಸ್ತುತ ರಾಜಧಾನಿ :
■. ಬುಡಾಪೆಸ್ಟ್


829)  ಮಾಲ್ಕಂ ಟರ್ನ್‌ಬುಲ್‌ ಅವರು ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
(Wed, 16th Sep, 2015)


830)  ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ, ಸಂಜೀವ್ ಚತುರ್ವೇದಿ ಹಾಗೂ ‘ಗೂಂಜ್‌’ ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕ ಅಂಶು ಗುಪ್ತಾ ಅವರಿಗೆ ಸೋಮವಾರ ಪ್ರತಿಷ್ಠಿತ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
(Tue, 1st Sep, 2015)


(Courtesy : Prajawani Newspaper)

To be continued....

No comments:

Post a Comment