☀"ಭೂಮಿಯ ಮೇಲಿರುವ ಪ್ರಮುಖ ಭೂಕಂಪ ವಲಯಗಳಲ್ಲಿ ಒಂದಾದ ಹಿಮಾಲಯ ವಲಯವು ಇತರೇ ಭೂಕಂಪ ವಲಯಗಳಿಗಿಂತ ಹೆಚ್ಚು ಹಾನಿಗೆ ಒಳಗಾಗುವುದು." ಹಾಗಾದರೆ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿಯೇ ಏಕೆ ಸಂಭವಿಸುತ್ತವೆ?
("Why more earthquakes occurs in Himalayan region?")
━━━━━━━━━━━━━━━━━━━━━━━━━━━━━━━━━━━━━━━━━━━━━
★ (Physical Geography)
★ (ಪ್ರಾಕೃತಿಕ ಭೂಗೋಳಶಾಸ್ತ್ರ.)
— ಸುಮಾರು 400 ವರ್ಷಗಳ ಭೂಕಂಪದ ದಾಖಲೆಗಳನ್ನು ಅವಲೋಕಿಸಿದಾಗ, ಈ ಭೂಮಿಯ ಮೇಲೆ ಮುಖ್ಯವಾಗಿ ಎರಡು ಭೂಕಂಪ ವಲಯಗಳು ಕಾಣುತ್ತವೆ.
●.ಒಂದು ಶಾಂತಸಾಗರವನ್ನು ಸುತ್ತುವರಿದ ಪ್ರದೇಶ.
●.ಇನ್ನೊಂದು ವಲಯ ಈಸ್ಟ್ ಇಂಡೀಸ್‌ನಿಂದ ಆರಂಭವಾಗಿ ಹಿಮಾಲಯ, ಕ್ಯಾಸ್‌ಕಸ್, ಆಲ್ಪ್ಸ್ ಪರ್ವತ ಶ್ರೇಣಿಗಳನ್ನು ಹಾದು ಮೆಡಿಟರೇನಿಯನ್‌ವರೆಗೆ ಸಾಗುತ್ತದೆ.
— ಭಾರತದಲ್ಲಿ ಮುಖ್ಯವಾಗಿ ಮೂರು ಭೂಕಂಪ ವಲಯಗಳನ್ನು ಗುರುತಿಸಬಹುದು.
ಅದರಲ್ಲಿ ಹೆಚ್ಚು ಹಾನಿಗೆ ಒಳಗಾಗುವುದು ಹಿಮಾಲಯ ವಲಯ. ಇಷ್ಟಕ್ಕೂ ಹೆಚ್ಚು ಭೂಕಂಪಗಳು ಹಿಮಾಲಯದಲ್ಲಿ ಏಕೆ ಸಂಭವಿಸುತ್ತವೆ? ಎಂಬುವುದಕ್ಕೆ ಪ್ರಮುಖ ವೈಜ್ಞಾನಿಕ ಕಾರಣಗಳಿವೆ.
★.ಹಿಮಾಲಯ ಭೂಕಂಪಗಳ ತವರು.
━━━━━━━━━━━━━━━━━
— ಇಲ್ಲಿ 100 ವರ್ಷಗಳಲ್ಲಿ ಸರಾಸರಿ ನಾಲ್ಕು ಅಥವಾ ಐದು ಬಾರಿ ದೊಡ್ಡ ಪ್ರಮಾಣದ ಭೂಕಂಪಗಳು ಘಟಿಸುತ್ತವೆ. ವಿಪರ್ಯಾಸವೆಂದರೆ ಇಡೀ ನೇಪಾಳ ದೇಶ ಹಿಮಾಲಯ ಪರ್ವತಗಳ ಮಡಿಲಲ್ಲಿದೆ.
✧.ಪಶ್ಚಿಮದಲ್ಲಿ ಆಪ್ಘಾನಿಸ್ತಾನದಿಂದ ಹಿಡಿದು ಪೂರ್ವದಲ್ಲಿ ಮ್ಯಾನ್ಮಾರ್‌ವರಗೆ ಚಾಚಿಕೊಂಡಿರುವ ಹಿಮಾಲಯ ಶ್ರೇಣಿಯ ಉದ್ದ 2400 ಕಿ.ಮೀ. ಅಗಲ 160 ಕಿ.ಮೀ.ದಿಂದ 400 ಕಿ.ಮೀ.ವರೆಗೂ ಇದೆ.
✧.ಹಿಮಾಲಯವು ಪೃಥ್ವಿಯ ಮೇಲೆ ಅತಿ ಎತ್ತರದ ಪರ್ವತ ಶ್ರೇಣಿಗಳನ್ನು ಹೊಂದಿದ್ದು ವರ್ಷಕ್ಕೆ ಆರರಿಂದ 10 ಸೆಂಟಿಮೀಟರ್‌ವರೆಗೆ ಬೆಳೆಯುತ್ತಿದೆ.
●.ಭೌಗೋಳಿಕ ಇತಿಹಾ ಸ:—
━━━━━━━━━━━━
✧.ಯುರೇಷ್ಯಾ ಮತ್ತು ಇಂಡಿಯಾ ಭೂಖಂಡಗಳು ಎದುರುಬದುರಾಗಿ ಘರ್ಷಣೆಗೆ ನಿಂತಾಗ ಎರಡೂ ಖಂಡಗಳ ಅಂಚಿನಿಂದ ಕೊಚ್ಚಿ ಬರುತ್ತಿದ್ದ ಅಗಾಧ ಮರಳು, ಮೆಕ್ಕಲುಮಣ್ಣು ಪೂರ್ವ ಮತ್ತು ಪಶ್ಚಿಮದಲ್ಲಿ ಸಂಚಯನಗೊಳ್ಳುತ್ತಿತ್ತು.ಹೀಗೆ ಸಂಚಯನ ಮೂಡುತ್ತಿದ್ದ ಸಾಗರವನ್ನು ಮುಂದೆ ಟೆಥಿಸ್ ಮಹಾಸಾಗರ ಎಂದು ಕರೆಯಲಾಯಿತು.
✧.ಉತ್ತರದಲ್ಲಿ ಯುರೇಷ್ಯಾ ಮತ್ತು ದಕ್ಷಿಣದಲ್ಲಿ ಇಂಡಿಯಾ ಭೂಫಲಕಗಳು ಮೆಲ್ಲಮೆಲ್ಲನೆ ಟೆಥಿಸ್ ಮಹಾಸಾಗರದ ಕತ್ತನ್ನು ಹಿಸುಕಲು ಪ್ರಾರಂಭಿಸಿದವು. ಇಂಡಿಯಾ ಫಲಕ ದಕ್ಷಿಣದಿಂದ ಉತ್ತರದ ಕಡೆಗೆ ನೂಕಲು ಪ್ರಾರಂಭಿಸಿದರೆ, ಉತ್ತರದಲ್ಲಿದ್ದ ಯುರೇಷ್ಯಾ ಫಲಕ ಒತ್ತಿ ಹಿಡಿದುಕೊಂಡಿತು. ಪರಿಣಾಮ ಟೆಥಿಸ್ ಸಾಗರದ ಸಂಚಯನವೆಲ್ಲ ಹಿಮಾಲಯ ಪರ್ವತಗಳಾಗಿ ಅದರಲ್ಲೂ ಮಧ್ಯ ಹಿಮಾಲಯ ಟಿಬೆಟ್ ಪ್ರಸ್ಥಭೂಮಿ ಅಥವಾ ಪ್ರಪಂಚದ ಮೇಲ್ಛಾವಣಿಯಾಗಿ ನಿಂತುಕೊಂಡಿತು.
✧.ಹಿಮಾಲಯ ಶ್ರೇಣಿ ಐದು ಹಂತಗಳಲ್ಲಿ (3.5 ಕೋಟಿ ವರ್ಷಗಳಿಂದ 2.5 ಕೋಟಿ ವರ್ಷಗಳ ನಡುವೆ) ಇಂದಿನ ರೂಪ ಪಡೆದುಕೊಂಡಿತು.
●.ಭೂಕಂಪ ವಲಯವಾಗಿ ಹಿಮಾಲಯ:
━━━━━━━━━━━━━━━━━━
✧.ಎರಡು ಭೂಖಂಡ ಅಥವಾ ಭೂಫಲಕಗಳ ನಡುವೆ ಅಗಾಧವಾದ ಬಿರುಕುಗಳಿದ್ದು, ಅವು ಚಲಿಸುತ್ತಿರುವ ಕಾರಣ ಘರ್ಷಣೆಗೆ ಒಳಗಾಗುತ್ತವೆ. ಎರಡು ಫಲಕಗಳ ಮಧ್ಯೆ ಸಿಕ್ಕಿಕೊಂಡಿರುವ ಹಿಮಾಲಯದ ಮೆದು ಶಿಲೆಗಳ ನಡುವೆ ರಾಕ್ಷಸ ಬಿರುಕುಗಳು ಅಥವಾ ದೈತ್ಯ ಸ್ತರಭಂಗಗಳಿವೆ.
✧.ಎರಡು ಭೂಫಲಕಗಳ ನಡುವೆ ನೂರಾರು ವರ್ಷಗಳ ಕಾಲ ಒತ್ತಡ ಬೆಳೆದು ಮುಂಚೂಣಿಯಲ್ಲಿರುವ ಶಿಲೆಗಳು ಒಮ್ಮೆಲೆ ಆಳದಲ್ಲಿ ಮುರಿದುಬಿದ್ದಾಗ ಭೂಕಂಪ ಘಟಿಸುತ್ತದೆ.
✧.ಇದೇ ಕಠ್ಮಂಡು ಪ್ರದೇಶದಲ್ಲಿ 1255ರಲ್ಲಿ ಆದ ಭೂಕಂಪದಿಂದ ಇಡೀ ನಗರ ನೆಲಸಮವಾದ ದಾಖಲೆ ಇದೆ.ಆದಾದ 679 ವರ್ಷಗಳ ನಂತರ 1934ರಲ್ಲಿ ದೊಡ್ಡ ಭೂಕಂಪವಾಗಿತ್ತು. ಮತ್ತೆ 81 ವರ್ಷಗಳ ನಂತರ ಈಗ ಸಂಭವಿಸಿದೆ.
✧.ಕಳೆದ 100 ವರ್ಷಗಳಲ್ಲಾದ ಅತ್ಯಂತ ಪ್ರಬಲ ಭೂಕಂಪಗಳೆಂದರೆ, 1847-ಅಸ್ಸಾಂ, 1905-ಕಾಂಗ್ರಾ, 1934-ಬಿಹಾರ್-ನೇಪಾಳ, 1950-ಅಸ್ಸಾಂ.
✧.ದೊಡ್ಡ ಕಲ್ಲೊಂದನ್ನು ನೀರಿಗೆ ಎಸೆದಾಗ ಸುತ್ತಲೂ ಅಲೆಗಳು ಏಳುತ್ತವೆ. ಅದೇ ರೀತಿ ಭೂಕಂಪದ ಮಧ್ಯಕೇಂದ್ರದಲ್ಲಿ ಹೆಚ್ಚು ಹಾನಿ ಕಾಣಿಸಿಕೊಂಡು, ದೂರಹೋದಷ್ಟೂ ಹಾನಿ ಕಡಿಮೆಯಾಗುತ್ತ ಹೋಗುತ್ತದೆ .
✧.ಇದನ್ನು ರಿಕ್ಟರ್ ಮಾಪನದಿಂದ ಅಳೆಯಲಾಗುತ್ತದೆ.
✧.ಈಗಿನ ಭೂಕಂಪದ ವ್ಯಾಪ್ತಿ ಸುಮಾರು 4000 ಚದರ ಕಿ.ಮೀ.ಗಳವರೆಗೂ ಹರಡಿದೆ.
(ಕೃಪೆ: prajawani)

No comments:
Post a Comment