"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 11 April 2015

☀ಕೆಎಎಸ್ ಅಧ್ಯಯನ ವಿಶೇಷಾಂಕ: "ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’— ಸಂಕ್ಷಿಪ್ತ ವಿಶ್ಲೇಷಣೆ". ("Brief Analysis of the Karnataka Economic Survey 2014-15"

☀ಕೆಎಎಸ್ ಅಧ್ಯಯನ ವಿಶೇಷಾಂಕ:
"ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’— ಸಂಕ್ಷಿಪ್ತ ವಿಶ್ಲೇಷಣೆ".
("Brief Analysis of the Karnataka Economic Survey 2014-15"

━━━━━━━━━━━━━━━━━━━━━━━━━━━━━━━━━━━━━━━━━━━━━


●.‘ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’

— ಪ್ರತಿವರ್ಷ ಬಜೆಟ್ ಸಮಯದಲ್ಲಿ ಹಾಗೂ ಅದಕ್ಕಿಂತ ಸ್ವಲ್ಪ ಮುಂದು ಬಿಡುಗಡೆಯಾಗುವ ಭಾರತದ ಆರ್ಥಿಕ ಸಮೀಕ್ಷೆ ರೈಲ್ವೆ ಬಜೆಟ್, ಕೇಂದ್ರ ಸರಕಾರದ ಬಜೆಟ್‌ಗಳು. ಹಾಗೆಯೇ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ‘ಕರ್ನಾಟಕ ಆರ್ಥಿಕ ಸಮೀಕ್ಷೆ, ‘ಕರ್ನಾಟಕ ಬಜೆಟ್’ಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹುಮುಖ್ಯ ಮಾಹಿತಿಯ ಆಗರಗಳಾಗಿರುತ್ತವೆ. ಈ ಲೇಖನದಲ್ಲಿ ‘ಕರ್ನಾಟಕ ಆರ್ಥಿಕ ಸಮೀಕ್ಷೆ 2014-15’ಅನ್ನು ತೆಗೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಖ್ಯವಾದ ವಿಷಯಗಳನ್ನು ಇಲ್ಲಿ ಚರ್ಚಿಸಲಾಗಿದೆ.


●.2011ರ ಜನಗಣತಿಯಂತೆ ಕರ್ನಾಟಕದ ಜನಸಂಖ್ಯೆಯು 6.11 ಕೋಟಿಯಷ್ಟಿದ್ದು ಇದು ಭಾರತದ ಜನಸಂಖ್ಯೆಯ ಶೇಕಡ 5.05ರಷ್ಟು ಆಗಿರುತ್ತದೆ.

●.ಕರ್ನಾಟಕ ರಾಜ್ಯವು ಜನಸಂಖ್ಯೆಯಲ್ಲಿ ಭಾರತ ದೇಶದಲ್ಲಿ 9ನೇ ಸ್ಥಾನದಲ್ಲಿರುತ್ತದೆ.

●.ಕರ್ನಾಟಕ ರಾಜ್ಯವು ವಿಸ್ತಿರ್ಣದಲ್ಲಿ ಭಾರತದಲ್ಲಿ 8ನೇ ಅತಿ ದೊಡ್ಡ ರಾಜ್ಯವಾಗಿದ್ದು ಭಾರತದ ಭೌಗೋಳಿಕ ಪ್ರದೇಶ ಶೇ. 5.83ರಷ್ಟು ಹೊಂದಿದೆ.

●.2011ರ ಜನಗಣತಿಯಂತೆ ಕರ್ನಾಟಕ ರಾಜ್ಯದ ಜನಸಾಂದ್ರತೆಯು 319 ಇದ್ದು, ಕಳೆದ ದಶಕದಲ್ಲಿ ರಾಜ್ಯದ ಜನಸಂಖ್ಯೆಯು ಶೇಕಡ 15.7ರಷ್ಟು ಬೆಳೆದಿದೆ.

●.ರಾಜ್ಯದಲ್ಲಿನ ಜನನ ಪ್ರಮಾಣವು (ಪ್ರತಿ 1000ಜನರಿಗೆ) 2001ರಲ್ಲಿ ಶೇಕಡ 19.2ರಷ್ಟು ಇರುತ್ತದೆ. ಅದೇ ರೀತಿ ಮರಣ ಪ್ರಮಾಣವು ಶೇಕಡ 7.1ರಷ್ಟು ಇರುತ್ತದೆ.

●.2011ರ ಜನಗಣತಿಯಂತೆ ರಾಜ್ಯದಲ್ಲಿ ಲಿಂಗಾನುಪಾತ 943ಇರುತ್ತದೆ ಹಾಗೂ ಜನಸಂಖ್ಯೆಯ ಶೇ. 50.80ರಷ್ಟು ಪುರುಷರು ಇರುತ್ತಾರೆ.

●.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ತಲಾ ಆದಾಯವು ಸ್ಥಿರ ಜಿಲ್ಲೆಗಳಲ್ಲಿ (2004-05) ರಲ್ಲಿ ಶೇಕಡ 7.0ರಷ್ಟು ನಿರೀಕ್ಷಿಸಲಾಗಿದೆ.

 ●.ರಾಜ್ಯದ ಆದಾಯವು 2014-15ನೇ ಸಾಲಿನಲ್ಲಿ 3,44,106 ಕೋಟಿಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ.

●.ರಾಜ್ಯದ ಆದಾಯಕ್ಕೆ ಪ್ರಮುಖ ವಲಯಗಳಾದ ಸೇವಾ ವಲಯದಲ್ಲಿ ಶೇ. 8.9ರಷ್ಟು ಕೃಷಿ ವಲಯದಲ್ಲಿ ಶೇ.4.5ರಷ್ಟು ಹಾಗೂ ಕೈಗಾರಿಕಾ ವಲಯದಲ್ಲಿ ಶೇ.4.4 ರಷ್ಟು ಪ್ರಗತಿಯಾಗುವ ನಿರೀಕ್ಷೆ ಇದೆ.

●.ರಾಜ್ಯದ ತಲಾ ಆದಾಯವು ಸ್ಥಿರ ಬೆಲೆಗಳಲ್ಲಿ (2004-05) 2014-15ನೇ ಸಾಲಿನಲ್ಲಿ 48907ಕ್ಕೆ ಹೆಚ್ಚಾಗಬಹುದೆಂದು ಅಂದಾಜಿಸಲಾಗಿದೆ.

●.ಡಿಸೆಂಬರ್ 2013ರ ಅಂತ್ಯಕ್ಕೆ ಅಖಿಲ ಭಾರತ ಮಟ್ಟದ ಸಗಟು ಮಾರಾಟ ಸೂಚ್ಯಂಕ 179.6 ಇದ್ದು, ಇದು ಡಿಸೆಂಬರ್ 2014ರ ಅಂತ್ಯಕ್ಕೆ 179.8 ರಷ್ಟು ಹೆಚಾಗಿದ್ದು ಇದರಿಂದಾಗಿ ವಾರ್ಷಿಕ ಹಣದುಬ್ಬರ ಶೇ. 0.11 ರಷ್ಟು ಏರಿಕೆಯಾಗಿರುತ್ತದೆ.

●.ಏಪ್ರಿಲ್ 2000 ದಿಂದ 2014ರ ನವೆಂಬರ್‌ವರೆಗೂ ಕರ್ನಾಟಕವು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಯು.ಎಸ್. ಡಾಲರ್ 14.174 ಮಿಲಿಯನ್ ಆಕರ್ಷಿಸಿದ್ದು, ಇದು ರಾಷ್ಟ್ರಮಟ್ಟದ ವಿದೇಶಿ ಬಂಡವಾಳ ಹೂಡಿಕೆಯ ಶೇ. 5.99 ರಷ್ಟಾಗಿದೆ.

●.ಕರ್ನಾಟಕವು ವಾಣಿಜ್ಯ ರಫ್ತಿನಲ್ಲಿ 4ನೇ ಸ್ಥಾನವನ್ನು ಪಡೆದಿದ್ದು ರಾಷ್ಟ್ರದ ರಫ್ತಿನ ಶೇ. 12.37 ರಷ್ಟು ಪಾಲನ್ನು ಒಂದಿರುತ್ತದೆ.

●.ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಎಸ್‌ಡಿಪಿ) ಕರ್ನಾಟಕದ ರಫ್ತು ಸಾಕಷ್ಟು ಹೆಚ್ಚಿನ ಭಾಗವಾಗಿದ್ದು ಶೇ. 47.3ರಷ್ಟು ಪಾಲನ್ನು ಹೊಂದಿದೆ.

●.ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಂತ್ರಾಂಶವು ರಾಜ್ಯದ ರಫ್ತಿನ ಶೇ.61ರಷ್ಟು ಪಾಲನ್ನು ಹೊಂದಿದೆ.

●.ಮಳೆ ನೀರನ್ನು ಸಂರಕ್ಷಿಸಲು ಮತ್ತು ನ್ಯಾಯಯುತವಾಗಿ ಬಳಕೆ ಮಾಡಲು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ.

●.ಎಲ್ಲಾ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ನೀತಿಯ ಮೇಲೆ ರಾಜ್ಯ ಸರಕಾರಕ್ಕೆ ಸಲಹೆ ನೀಡುವುದಕ್ಕಾಗಿ ರಾಜ್ಯವು 2014-15 ರಲ್ಲಿ ‘ಕೃಷಿ ಬೆಲೆ ಆಯೋಗ’ವನ್ನು ಸ್ಥಾಪಿಸಿರುತ್ತದೆ.

●.ಪ್ರಮುಖ ಕೃಷಿ ಯಂತ್ರೋಪಕರಣಗಳ ಸೇವೆಗಳನ್ನು ಪಡೆಯುವುದಕ್ಕಾಗಿ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ‘ಕಸ್ಟಮ್ ಹೈರ್’ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

●.ಹೊಸದಾದ ಕೇಂದ್ರಿಯ ಪುರಸ್ಕೃತ ಯೋಜನೆಯಾದ ‘ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ’ (ಎನ್‌ಎಮ್‌ಎಸ್‌ಎ) ರೂಪಿಸಲಾಗಿರುತ್ತದೆ.

●.ರಾಜ್ಯದಲ್ಲಿನ ಜಾನುವಾರು ಸಾಂದ್ರತೆಯು ಪ್ರತಿ ಚದರ ಕಿ.ಮೀ. ಪ್ರದೇಶಕ್ಕೆ 151.21ರಷ್ಟು ಇರುತ್ತದೆ.

●.ಹಾಲು ಉತ್ಪಾದನೆಯಲ್ಲಿ ಭಾರತವು ಪ್ರಪಂಚದಲ್ಲಿ ಎರಡನೇ ಸ್ಥಾನವನ್ನು ಗಳಿಸಿರುತ್ತದೆ ಮತ್ತು ಭಾರತದ ರಾಜ್ಯಗಳ ಪೈಕಿ ಕರ್ನಾಟಕವು 11ನೇ ಸ್ಥಾನದಲ್ಲಿರುತ್ತದೆ.

●.ರಾಷ್ಟ್ರದ ಮೀನು ಉತ್ಪಾದನೆಗೆ ಹೋಲಿಸಿದರೆ ಕರ್ನಟಕವು ಸಮುದ್ರದ ಮೀನು ಉತ್ಪಾದನೆಯಲ್ಲಿ 6ನೇ ಸ್ಥಾನವನ್ನೂ, ಒಳನಾಡಿನ ಮೀನು ಉತ್ಪಾದನೆಯಲ್ಲಿ 9ನೇ ಸ್ಥಾನವನ್ನು ಪಡೆದಿರುತ್ತದೆ.

●.ರಾಜ್ಯದ 2013–14ರ ಅರಣ್ಯ ಇಲಾಖೆಯ ವಾರ್ಷಿಕ ವರದಿಯಂತೆ ಕರ್ನಾಟಕವು 43,3356.47 ಚದರ ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ ಭೌಗೋಳಿಕ ಪ್ರದೇಶದ ಶೇ. 22.61 ರಷ್ಟು ಇರುತ್ತದೆ.

●.ರಾಜ್ಯವು ಸಾಕ್ಷರತಾ ಸಾಧನೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 2001ರಲ್ಲಿ ಶೇಕಡಾ 66.64 ರಷ್ಟಿದ್ದ ರಾಜ್ಯದ ಸಾಕ್ಷರತಾ ಪ್ರಮಾಣವು 2011ರಲ್ಲಿ ಶೇ. 75.60ಕ್ಕೆ ಏರಿಕೆಯಾಗಿದೆ. ಅರದಲ್ಲಿ ಪುರುಷರ ಸಾಕ್ಷರತಾ ಪ್ರಮಾಣ 82.85% ರಷ್ಟು ಹಾಗೂ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇಕಡಾ 65.46ರಷ್ಟು ಇರುತ್ತದೆ.

●.ಕಳೆದ ಕೆಲವು ವರ್ಷಗಳಲ್ಲಿ ಶಿಶುಮರಣ ದರವು ತೀವ್ರಗತಿಯಲ್ಲಿ ಕಡಿಮೆಯಾಗಿದ್ದು ಪ್ರಸ್ತುತವಾಗಿ ಇದನ್ನು ಒಂದು ಸಾವಿರ ಜನನಕ್ಕೆ ಸುಮಾರು 10ರ ಪ್ರಮಾಣದಲ್ಲಿ ನಿಯಂತ್ರಣಕ್ಕೆ ತರಲಾಗಿದೆ.

●.ಒಂದು ಲಕ್ಷ ಸಜೀವ ಜನನಕ್ಕೆ ತಾಯಂದಿರ ಮರಣ ಪ್ರಮಾಣ (ಎಂಎಂಆರ್) 2010-13ರಲ್ಲಿ 144ರಷ್ಟಿದೆ.

(Courtesy: Newspapers) 

No comments:

Post a Comment