"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 25 April 2015

☀'ಸಕಾಲ ಕಾರ್ಯಕ್ರಮ' ಎಂದರೇನು? ನಾಗರಿಕರ ಸೇವೆಗಳ ಖಾತರಿ ಕಾಯಿದೆಯ ತತ್ವಗಳಿಗನುಗುಣವಾಗಿ ಅದರ ಹಿನ್ನೆಲೆ ಮತ್ತು ಉದ್ದೇಶವನ್ನು ಚರ್ಚಿಸಿ  (What do you mean by 'SAKALA'? Discuss the background and purpose of the 'SAKALA' with reference to the 'Citizens' Services Guarantee Act')

☀'ಸಕಾಲ ಕಾರ್ಯಕ್ರಮ' ಎಂದರೇನು? ನಾಗರಿಕರ ಸೇವೆಗಳ ಖಾತರಿ ಕಾಯಿದೆಯ ತತ್ವಗಳಿಗನುಗುಣವಾಗಿ ಅದರ ಹಿನ್ನೆಲೆ ಮತ್ತು ಉದ್ದೇಶವನ್ನು ಚರ್ಚಿಸಿ
(What do you mean by 'SAKALA'? Discuss the background and purpose of the 'SAKALA' with reference to the 'Citizens' Services Guarantee Act')
━━━━━━━━━━━━━━━━━━━━━━━━━━━━━━━━━━━━━━━━━━━━━


●.ಸಕಾಲ ಕಾರ್ಯಕ್ರಮದ ಅರ್ಥ:—
━━━━━━━━━━━━━━━━━
— ನಾಗರಿಕರ ಸೇವೆಗಳ ಖಾತರಿ ಕಾಯಿದೆಯನ್ನು ಹಾಗೂ ಅದರ ಪ್ರಕ್ರಿಯೆಯನ್ನು ಪರಿಗಣಿಸಿದರೆ ಒಂದು ನಿರ್ಧಿಷ್ಟ ಕಾಲಮಿತಿಯಲ್ಲಿ ಸೇವೆಯನ್ನು ಒದಗಿಸಲು ಒತ್ತು ಕೊಡಲಾಗಿದೆ.ಅಂದರೆ ನಾಗರಿಕರಿಗೆ ಸಕಾಲದಲ್ಲಿ ಸೇವೆ ಪಡೆದುಕೊಳ್ಳವುದು ನಾಗರಿಕರ ಹಕ್ಕು ಆಗಿರುತ್ತದೆ ಎಂಬುದು ಸರ್ಕಾರದ ಆಶಯ ಮತ್ತು ನೀತಿಯಾಗಿರುತ್ತದೆ.ಆದ್ದರಿಂದ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ವಯ ಸೇವಾ ಯೋಜನೆಯನ್ನು ಸಕಾಲ ಎಂದು ಹೆಸರಿಸಿದೆ.

★ಸರ್ಕಾರ ಅಂಗೀಕರಿಸಿರುವ ಯೋಜನೆಯ ಲಾಂಛನ ಮತ್ತು ಘೋಷ ವಾಕ್ಯಗಳು ನಾಗರಿಕರ ಸೇವೆಗಳ ಖಾತರಿ ಯೋಜನೆಯನ್ನು ಹಿಡಿದಿಟ್ಟಿವೆ.
●.ಲಾಂಛನ:  ಗಡಿಯಾರ (ಸಮಯ)ವನ್ನು ಪ್ರತಿನಿಧಿಸುತ್ತದೆ.
●.ಧ್ಯೇಯ(ಘೋಷ) ವಾಕ್ಯ:  ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯಕ್ಕೆ ತಪ್ಪೀಲ್ಲ ಎಂಬುದು ಧ್ಯೇಯ(ಘೋಷ) ವಾಕ್ಯಗಳಾಗಿವೆ.


●.'ಸಕಾಲ'ದ ಹಿನ್ನೆಲೆ ಮತ್ತು ಉದ್ದೇಶ :-
━━━━━━━━━━━━━━━━━━━

✧.ಭಾರತದ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದು, ಎಲ್ಲವೂ ಸಂವಿಧಾನ ಸೂಚಿಸಿದಂತೆ ನಡೆಯಬೇಕು. ಎಲ್ಲಾ ಸಂಸ್ಥೆಗಳು ಎಲ್ಲಾ ಪ್ರಜೆಗಳು ಸಂವಿಧಾನಕ್ಕೆ ಬದ್ದರಾಗಿರಬೇಕು. ಈ ನಿಟ್ಟಿನಲ್ಲಿ ದೇಶದ ವ್ಯವಹಾರಗಳನ್ನು ನಿಭಾಯಿಸಲು ಸಂವಿಧಾನ ನಿರ್ದೇಶಿಸಿದಂತೆ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ಜಾರಿಯಲ್ಲಿವೆ.

✧.ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಮೂಲಭೂತ ಆಶಯ ಮತ್ತು ತತ್ವಗಳಿಗನುಗುಣವಾಗಿ ಕೆಲಸ ಮಾಡಿದರೆ ಎಲ್ಲವೂ ಸುಲಲಿತ ಮತ್ತು ಸುಮಧುರವಾಗಿರುತ್ತದೆ. ಆದರೆ ಸಮಸ್ಯೆ ಪ್ರಾರಂಭವಾಗುವುದು ಚುನಾವಣೆಗಳ ನಂತರವೇ! ಸರ್ಕಾರ ರಚನೆಯಾಗಿ ಆಡಳಿತ ಕೈಗೆ ಬರುತ್ತಿದ್ದಂತೆ ಜನ ಪ್ರತಿನಿಧಿಗಳ ವರ್ತನೆ ಬದಲಾಗಿ ಬಿಡುತ್ತದೆ ಅವರು ಪ್ರಭುಗಳಾಗಿ ಬಿಡುತ್ತಾರೆ ಅವರು ಆಳಿದ ಹಾಗೆ ಜನ ಆಳಿಸಿ ಕೊಳ್ಳಬೇಕಾಗುತ್ತದೆ ಸರ್ಕಾರವನ್ನು ರಚಿಸುವ (ಪರೋಷವಾಗಿ) ಅಧಿಕಾರ ಜನರಿಗಿದ್ದರೂ, ಸರ್ಕಾರದ ಮಂತ್ರಿ/ನೌಕರರ ಮೇಲೆ ಜನರಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಹಾಗಾಗಿ ದಿನನಿತ್ಯದ ವ್ಯವಹಾರಗಳಲ್ಲಿ ಸರ್ಕಾರಿ ಆಡಳಿತದಲ್ಲಿ ಸಾಮಾನ್ಯ ಜನರು ದಿನಗಟ್ಟಲೆ ಕಛೇರಿಗಳಿಗೆ ಅಲೆದಾಡಬೇಕಾದ , ಸರ್ಕಾರಿ ನೌಕರರ ಮರ್ಜಿಗೆ ಕಾಯಬೇಕಾಗಿ ಬಂದಿರುವ ಪರಿಸ್ಥಿತಿ ಉದ್ಭವವಾಗಿದೆ.

✧.ಅದಕ್ಷ ಹಾಗೂ ಭ್ರಷ್ಟ ಆಡಳಿತ ಏರ್ಪಟ್ಟಾಗ ಜನರಿಗೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ ಇದು ಅಸಹನೆ, ಅಸಮಧಾನ ಹಾಗೂ ಅಂತಿಮವಾಗಿ ಜನರ ಪ್ರತಿರೋದಕ್ಕೆ ದಾರಿಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಚ್ಚೆತ್ತು ಕೆಲವು ರಚನಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಬಹಳ ಮುಖ್ಯವಾದ್ದು ನಾಗರಿಕ ಸನ್ನದು ಅಥವಾ ನಾಗರಿಕ ಸೇವೆಗಳ ಖಾತರಿ ಎಂಬ ಜನಪರ ಸುಧಾರಣೆ ಅಗತ್ಯವಾದ ನಾಗರಿಕ ಸೇವೆಗಳನ್ನು ಜನರಿಗೆ ಸಕಾಲದಲ್ಲಿ ಒದಗಿಸುವುದು ಈ ಸುಧಾರಣೆಯ ಸರಳ ಉದ್ದೇಶ

✧.ಬಿಹಾರ ಮಧ್ಯಪ್ರದೇಶ ದೆಹಲಿ ಸೇರಿದಂತೆ ಕೆಲವು ರಾಜ್ಯಗಳು ಮೊದಲ ಹೆಜ್ಜೆ ತೆಗೆದು ಕಾಯಿದೆ ರೂಪದಲ್ಲಿ ನಾಗರಿಕ ಸೇವೆಗಳ ಸುಧಾರಣೆಯನ್ನು ಜಾರಿಗೆ ತಂದವು ಈಗ ಕರ್ನಾಟಕ ಸರ್ಕಾರ ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆ ಜಾರಿಗೊಳಿಸಿ ರಾಜ್ಯದ ಜನತೆಗೆ ಉತ್ತಮವಾದ ಸೇವೆ ಸಲ್ಲಿಸಲು ಮುಂದಾಗಿದೆ.


●.ನಾಗರಿಕರಿಗೆ ಸೇವೆಗಳ ಖಾತರಿ ಕಾಯಿದೆಯ ಪ್ರಮುಖ ಅಂಶಗಳು:-
━━━━━━━━━━━━━━━━━━━━━━━━━━━━━━

—ಈ ಕಾಯಿದೆ ಅನ್ವಯ ಸರ್ಕಾರ ೩೦ ಇಲಾಖೆಗಳನ್ನು ಗುರುತಿಸಿದ್ದು ಈ ೩೦ ಇಲಾಖೆಗಳೂ ಒದಗಿಸುವ ಸೇವೆಗಳ ಪೈಕಿ ಒಟ್ಟು ೨೬೫ ಸೇವೆಗಳನ್ನು ಖಾತ್ರಿಗೊಳಿಸಿದೆ.
✧.ಈ ಕಾಯಿದೆಯನ್ವಯ ನಾಗರಿಕರು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
✧.ಪ್ರತಿ ಇಲಾಖೆಯಲ್ಲಿ ಯಾವ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸ್ವೀಕರಿಸಿದೆ ಎಷ್ಟು ಕಲಾವಧಿಯಲ್ಲಿ (ದಿನಗಳಲ್ಲಿ) ಸೇವೆಯನ್ನು ಒದಗಿಸಬೇಕು ಎಂಬುದನ್ನು ನಿಗದಿಪಡಿಸಲಾಗಿದೆ(ಅರ್ಜಿಯನ್ನು ತಿರಸ್ಕರಿಸುವ ಸಂದರ್ಭಗಳಲ್ಲಿ ನಿಯೋಜಿತ ಅಧಿಕಾರಿಯು ತಿರಸ್ಕಾರಕ್ಕೆ ಕಾರಣಗಳನ್ನು ಬರವಣಿಗೆಯಲ್ಲಿ ಕೊಡಬೇಕಾಗುತ್ತದೆ)
✧.ಅರ್ಜಿದಾರ ನಾಗರಿಕನಿಂದ ಅರ್ಜಿ ಸ್ವೀಕರಿಸಿದ್ದಕ್ಕೆ ಸ್ವೀಕೃತಿಯನ್ನು ಕೊಡಬೇಕಾಗುತ್ತದೆ.
✧.ನಿರ್ದಿಷ್ಟ ಕಲಾವಧಿಯಲ್ಲಿ ಸೇವೆಯನ್ನು ಒದಗಿಸಬೇಕಾದ ಅಧಿಕಾರಿಯು ಸೇವೆಯನ್ನು ಒದಗಿಸದಿದ್ದರೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬಹುದು.
✧.ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾದ ಅಧಿಕಾರಿಯನ್ನು ನಿಗದಿಪಡಿಸಲಾಗಿದ್ದು ಹೀಗೆ ನಿಗದಿತವಾದ ಅಧಿಕಾರಿಗೆ ಅರ್ಜಿದಾರರು ಮೊದಲ ಮನವಿ ಸಲ್ಲಿಸಬೇಕಾಗುತ್ತದೆ.
✧.ಮೊದಲ ಮನವಿಯಲ್ಲಿ ಅರ್ಜಿದರರಿಗೆ ಸೋಲುಂಟಾದರೆ ಮೇಲ್ಮನವಿ ಸಲ್ಲಿಸಬುದಾಗಿದೆ. ಯಾವ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ ಎಂಬುದನ್ನು ಸೂಚಿಸಲಾಗಿರುತ್ತದೆ. ಮೊದಲ ಹಾಗೂ ಮೇಲ್ಮನವಿಗಳನ್ನು ಇಂತಿಷ್ಟು ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಕಾಲಮಿತಿ ನಿಗದಿಪಡಿಸಲಾಗಿದೆ.
✧.ನಿಗದಿತ ಕಾಲಾವಧಿಯಲ್ಲಿ ಅರ್ಜಿದಾರ ನಾಗರಿಕರಿಗೆ ಖಾತ್ರಿಗೊಳಿಸಿದ ಸೇವೆಯನ್ನು ಒದಗಿಸಲಾಗಿದಿದ್ದ ಪಕ್ಷದಲ್ಲಿ ಅರ್ಜಿದಾರರಿಗೆ ಸರ್ಕಾರ ನಿಗದಿಗೊಳಿಸಿರುವ ಪರಿಹಾರ ಮೊತ್ತವನ್ನು ಕೊಡಬೇಕಾಗುತ್ತದೆ.
✧.ಕಾಲಮಿತಿಯೊಳಗೆ ಸೇವೆ ಸಲ್ಲಿಸಲು ವಿಫಲವಾದ ಅಧಿಕಾರಿ ಅಥವಾ ನೌಕರರಿಗೆ ಸರ್ಕಾರ ದಂಡ ವಿಧಿಸಬಹುದು ಮತ್ತು ಪ್ರಕರಣವನ್ನು ಕಪ್ಪು ಚುಕ್ಕೆಯಾಗಿ ಅಧಿಕಾರಿ/ನೌಕರನ ಸೇವಾ ದಾಖಲೆಗಳಲ್ಲಿ ನಮೂದಿಸಬಹುದು.


●.ಯೋಜನೆಯ ಸಂಕ್ಷಿಪ್ತ ಇತಿಹಾಸ:-
━━━━━━━━━━━━━━━━━

✧.ನಾಗರಿಕ ಸನ್ನದು ಅಂದರೆ ನಾಗರಿಕರು ಪಡೆಯಬೇಕಾದ ಸೇವೆ ಮತ್ತು ಹಕ್ಕು ಈ ಪರಿಕಲ್ಪನೆ ಮೊದಲು ಮೂಡಿ ಬಂದಿದ್ದು ಬ್ರಿಟನ್ ದೇಶದಲ್ಲಿ ಇದು ಸಹಜವೂ ಆಗಿತ್ತು. ಏಕೆಂದರೆ ವಿಶ್ವದ ಮೊತ್ತ ಮೊದಲ ಪ್ರಜಾಪ್ರಭುತ್ವ ವ್ಯವಸ್ಥೆ ರೂಪು ತಾಳಿದ್ದು ಬ್ರಿಟನ್ನಿನಲ್ಲೇ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಆಡಳಿತ ತೆರೆದ ಪುಸ್ತಕವಾಗಿರಬೇಕು. ಅಂದರೆ ಸಂಪೂರ್ಣ ಪಾರದರ್ಶಕತೆ ಹೊಣೆಗಾರಿಕೆ (ಉತ್ತರದಾಯಿತ್ವ) ಹಾಗೂ ಸಹ್ನದಯ ಸ್ವಂದನ ಆಡಳಿತದಲ್ಲಿ ಹಾಸು ಹೊಕ್ಕಾಗಿರಬೇಕು ಎಂಬುದು ಜಗತ್ತು ಒಪ್ಪಿರುವ ಸಿದ್ದಾಂತವಾಗಿದೆ

✧.1991 ರಲ್ಲಿ ಅಂದಿನ ಬ್ರಿಟಿಷ್ ಪ್ರಧಾನಮಂತ್ರಿ ಜಾನ್ ಮೇಜರ್ ರವರು ಪ್ರಪ್ರಥಮವಾಗಿ ಇಂತಹ ಒಂದು ನಾಗರಿಕ ಸನ್ನದನ್ನು ಜಾರಿಗೊಳಿಸಿದರು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಕಾಲಕಾಲಕ್ಕೆ ತಕ್ಕಂತೆ ಯೋಜನೆಯನ್ನು ಪರಿಶ್ಕರಿಸಿ ಅನುಶ್ಟಾನಗೊಳಿಸುತ್ತಿವೆ.

✧.ಬ್ರಿಟನ್ ದೇಶದ ನಾಗರಿಕ ಸನ್ನದು ಪರಿಕಲ್ಪನೆ ಕ್ರಮೇಣ ವಿಶ್ವದಲ್ಲಿ ವ್ಯಾಪಿಸಿಕೊಂಡಿತು.ಕಾಮನ್ ವೆಲ್ತ್ ರಾಷ್ಟ್ರಗಳು ತಮ್ಮ ಸನ್ನಿವೇಶಕ್ಕೆನುಗುಣವಾಗಿ ನಾಗರಿಕ ಸನ್ನದು ಯೋಜನೆಗಳನ್ನು ಜಾರಿಗೊಳಿಸಿದವು.ಭಾರತವೂ ಹಿಂದೆ ಬೀಳಲಿಲ್ಲ ! 1997 ರ ಮೇ ತಿಂಗಳನಲ್ಲಿ ಅಂದಿನ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಪರಿಣಾಮಕಾರಿ ಹಾಗೂ ಸಂವೇದನಾಶೀಲ ಸರ್ಕಾರ ಎಂಬ ಕಾರ್ಯ ಯೋಜನೆಯನ್ನು ಸಿದ್ದಪಡಿಸಲು ತೀರ್ಮಾನಿಸಲಾಯಿತು.

✧.ಹೆಸರು ಬದಲಾಗಿದ್ದರೂ ಇದು ಕೊಡ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವ ನಾಗರಿಕ ಸನ್ನದು ಕಾರ್ಯಕ್ರಮವಾಗಿತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಇಲಾಖೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ನಾಗರಿಕ ಸನ್ನದು ಬಿಡುಗಡೆಗೊಳಿಸಿದವು.ಆದರೆ ಇದು ಯಾವುದೂ ಜನಕ ಗಮನ ಸೆಳೆಯಲಿಲ್ಲ ನಾಗರಿಕ ಸನ್ನದು ಕಾರ್ಯಕ್ರಮ ಒಂದು ಕಾಟಚಾರದ ಪ್ರಕ್ರಿಯೆಯಾಗಿ ವ್ಯರ್ಥವಾಯಿತು. ಇದೆಲ್ಲ ನಡೆದದ್ದು ಸುಮಾರು 15 ವರ್ಷಗಳ ಹಿಂದೆ,ಆದರೆ ಈಗ ಹಾಗಿಲ್ಲ ಈ ಅವಧಿಯಲ್ಲಿ ಕಾಲ ಬದಲಾಗಿದೆ.ಜನ ಜಾಗ್ನತಿಯ ಪ್ರಮಾಣ ಮತ್ತು ವೇಗ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಮೌನವಾಗಿ ಸಹಿಸಿಕೊಂಡು ಆಳಿಸಿಕೊಳ್ಳಲು ಈಗ ಜನ ಸಿದ್ದರಿಲ್ಲ ಎಂಬುದು ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಗೆ ಮನವರಿಕೆಯಾಗಿದೆ.

✧.ಆದ್ದರಿಂದ ಸರ್ಕಾರಗಳು ನಾಗರಿಕ ಸೇವೆಗಳ ಪಟ್ಟಿ ಮಾಡಿ ಪ್ರಚಾರಕ್ಕಾಗಿ ಬಿಡುಗಡೆ ಮಾಡುತ್ತಿಲ್ಲ ಬದಲಾಗಿ ಸಂವಿಧಾನಕ್ಕೆನುಗುಣವಾಗಿ ಕಾನೂನು ರಚಿಸಿ ಅನುಪ್ಠಾನಗೊಳಿಸುತ್ತಿವೆ. ಈನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ನಾಗರಿಕರ ಸೇವೆಗಳ ಖಾತರಿ ಯೋಜನೆ ಸದುದ್ದೇಶದಿಂದ ಕೊಡಿದೆ ಮತ್ತು ಪರಿಣಾಮಕಾರಿಯಾಗಿದೆ.ನಾಗರಿಕರು (ಜನತೆ) ಮಾಡಬೇಕಾದ್ದು ಇಷ್ಠೆ.ಕಾನೂನಿನ ಅಂಶಗಳನ್ನು ಸರಿಯಾಗಿ ತಿಳಿದುಕೊಂಡು ಅದರಂತೆ ಸೇವೆ ಪಡೆದುಕೊಳ್ಳಲು ಕಾರ್ಯೋನ್ಮುಖರಾಗುವುದು.

✧.2011 ರಲ್ಲಿ ಜನಲೋಕಪಾಲ ಪರ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಬೇಡಿಕೆಗಳಲ್ಲಿ ನಾಗರಿಕ ಸನ್ನದು ಕೊಡ ಒಂದಾಗಿತ್ತು. ಬಿಹಾರ ಮಧ್ಯಪ್ರದೇಶ ಮುಂತಾದ ರಾಜ್ಯಗಳು ಕೇಂದ್ರಕ್ಕಿಂತಲೂ ಮೊದಲೇ ನಾಗರಿಕ ಸನ್ನದು ಅಳವಡಿಸಿಕೊಂಡಿದ್ದವು.

✧.ವಿವಿಧ ರಾಜ್ಯಗಳ ಮಾದರಿ ಬಗ್ಗೆ ಅಧ್ಯಯನ ನಡೆಸಿದ್ದ ಡಿ.ವಿ.ಸದಾನಂದಗೌಡರ ನೇತ್ನತ್ವದ ಸರ್ಕಾರ 2012 ಏಪ್ರಿಲ್ 02 ರಂದು ಸಕಾಲ ಯೋಜನೆ ಜಾರಿಗೆ ತಂದರು ಇದು ಯಶಸ್ವಿಯಾಗಿ ಮುಂದುವರಿಯುತ್ತಿದೆ.


●. ಮಸೂದೆ ವಿಶೇಷ:-
━━━━━━━━━━━
✧.ಎಲ್ಲ ರಾಜ್ಯಗಳೂ ಇಂಥ ಸೌಲಭ್ಯ ಜಾರಿಗೊಳಿಸುವುದು ಕಡ್ಡಾಯ.
✧.ಈ ಮಸೂದೆಯಿಂದ ರಾಜ್ಯಗಳ ಅಧಿಕಾರಕ್ಕೆ ದಕ್ಕೆ ಬಿಜೆ.ಪಿ. ವಿರೋಧ.
✧.ಕಾಲಮಿತಿಯೊಳಗೆ ಸರ್ಕಾರಿ ಸೇವೆ ಒದಗಿಸುವ ಕಲ್ಪನೆ ಬ್ರಿಟನ್ ದು 1919 ರಲ್ಲಿ ಮೊದಲಬಾರಿಗೆ ಅಲ್ಲಿ ಇದು ಜಾರಿಗೆ ಬಂದಿತ್ತು.
✧.ವಿಧೇಯಕ ಕಾಯ್ದೆಯಾದ ಬಳಿಕ ಕೇಂದ್ರ ಸರ್ಕಾರದ ನಾಗರಿಕ ಸನ್ನದಿನಲ್ಲಿರುವಂತೆ ಎಲ್ಲ ರಾಜ್ಯಗಳೂ ವಿವಿಧ ಸರ್ಕಾರಿ ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಬೇಕಾಗುತ್ತದೆ.
✧.ಪಾಸ್ ಪೋರ್ಟ್,ಪಿಂಚಣಿ,ಜನನ-ಮರಣ ಪ್ರಮಾಣ ಪತ್ರ, ತೆರಿಗೆ ರೀಫಂಡ್, ಜಾತಿ ಪ್ರಮಾಣಪತ್ರ ಮುಂತಾದ ಸರ್ಕಾರಿ ಸೇವೆಗಳು ಇದರಡಿ ಬರುತ್ತವೆ.
✧.ಸೇವೆ ನೀಡಲು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುವ ಅಧಿಕಾರಿಗೆ ದಿನಕ್ಕೆ 250 ರೂ ಅಥವಾ ಗರಿಷ್ಠ 50 ಸಾವಿರರೂವರೆಗೂ ದಂಡ ವಿಧಿಸುವ ಅವಕಾಶವುಂಟು ಅಲ್ಲದೇ, ಭ್ರಷ್ಟಾಚಾರ ಕುರಿತು ತನಿಖೆ ಹಾಗೂ ಶಿಸ್ತು ಕ್ರಮ ಜರುಗಿಸುವ ಅವಕಾಶವಿದೆ.
✧.ವಿಧೇಯಕ ಕಾಯ್ದುಯಾದ ಬಳಿಕ ಕೇಂದ್ರ ಮಟ್ಟದಿಂದ ಪಂಚಾಯಿತಿವರೆಗೂ ದೂರು ಇತ್ಯರ್ಥ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ.
✧.ಕಾಲಮಿತಿಯೊಳಗೆ ಸೇವೆ ಒದಗಿಸಬೇಕಾದಾದ ಸಾರ್ವಜನಿಕ ಸಂಸ್ಥೆಗಳ ಪಟ್ಟಿಯಲ್ಲಿ ಸಚಿವಾಲಯಗಳು, ಖಾಸಗಿ, ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳು ಸರ್ಕಾರದ ಅನುದಾನ ಪಡೆದಿರುವ (ಎನ್.ಜಿ.ಓ) ಸರ್ಕಾರಕ್ಕೆ ಹೊರಗುತ್ತಿಗೆ ಸೇವೆ ಒದಗಿಸುತ್ತಿರುವ ಖಾಸಗಿ ಕಂಪನಿಗಳು ಸೇರಿವೆ.
✧.ಅಣ್ಣಾ ಹಜಾರೆ ಅವರ ಪ್ರಮುಖ ಬೇಡಿಕೆಗಳಲ್ಲಿ ಕಾಲಮಿತಿಯ ಸೇವೆಯೂ ಒಂದಾಗಿತ್ತು.
✧.ಲೋಕ ಸಭೆಯಲ್ಲಿ 2011 ರ ಡಿಸೆಂಬರ್ ನಲ್ಲಿ ಈ ಮಸೂದೆ ಮಂಡನೆಯಾಗಿತ್ತು. ಇದೀಗ ೧೫ ತಿಂಗಳ ಬಳಿಕ ಸಂಪುಟದ ಮುಂದಿಟ್ಟು ಅನುಮತಿ ಪಡೆಯಲಾಗಿದೆ.

(ಕೃಪೆ:  ಸಮಾಜಕ್ಕಾಗಿ) 

No comments:

Post a Comment