☀ ಇತ್ತೀಚೆಗೆ ದೇಶದ ಸಣ್ಣ ವ್ಯಾಪಾರ ವಹಿವಾಟಿಗೆ ಅಂದರೆ ಏಕವ್ಯಕ್ತಿ ಮಾಲೀಕತ್ವದ ವ್ಯಾಪಾರೋದ್ದಿಮೆಗಳಿಗೆ ಹಣಕಾಸಿನ ನೆರವು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ "ಮುದ್ರಾ ಬ್ಯಾಂಕ್"ನ ಪ್ರಮುಖ ಕಾರ್ಯ ಹಾಗು ಉದ್ದೇಶಗಳ ಕುರಿತು ವಿಶ್ಲೇಷಿಸಿ.
(analyze the main tasks and intentions of the 'MUDRA' bank)
━━━━━━━━━━━━━━━━━━━━━━━━━━━━━━━━━━━━━━━━━━━━━
★ (ಭಾರತದ ಅರ್ಥವ್ಯವಸ್ಥೆ.)
★(Indian Economy)
●.ದೇಶದ ಸುಮಾರು 5.77 ಕೋಟಿ ಸಣ್ಣ ವ್ಯಾಪಾರದ ಘಟಕಗಳಿಗೆ ಅಂದರೆ ಬಹುತೇಕ ಏಕವ್ಯಕ್ತಿ ಮಾಲೀಕತ್ವದ ವ್ಯಾಪಾರೋದ್ದಿಮೆಗಳಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದ ಮುದ್ರಾ ಬ್ಯಾಂಕ್ (ಏ.8) ಕಾರ್ಯಾರಂಭ ಮಾಡಿದೆ.
✧."ಮುದ್ರಾ" ಎಂದರೆ: ‘ಮೈಕ್ರೊ ಯುನಿಟ್ಸ್ ಡೆವಲಪ್ವೆುಂಟ್ ಆಂಡ್ ರಿಫೈನಾನ್ಸ್ಏಜನ್ಸಿ ಲಿ. ಎಂದರ್ಥ.
✧.ಸಣ್ಣ ವ್ಯಾಪಾರೋದ್ದಿಮೆಗಳ ಪೈಕಿ ಶೇಕಡ 62ರಷ್ಟು ಘಟಕಗಳು ಎಸ್ಸಿ/ಎಸ್ಟಿ/ಒಬಿಸಿ ಜನಾಂಗದವರದ್ದಾಗಿದ್ದು, ಅವರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಸಿಗುವುದು ದುರ್ಲಭ. ಇದನ್ನು ಗಮನದಲ್ಲಿ ಇರಿಸಿಕೊಂಡೇ ಈ ಮುದ್ರಾ ಬ್ಯಾಂಕ್ ಸ್ಥಾಪನೆಗೊಂಡಿದೆ.
✧.ಮೂಲಬಂಡವಾಳವಾಗಿ 20,000 ಕೋಟಿ ರೂಪಾಯಿ, ಖಚಿತ ಸಾಲದ ಮೂಲಧನವಾಗಿ 3,000 ಕೋಟಿ ರೂಪಾಯಿಯೊಂದಿಗೆ ಆರಂಭವಾಗುತ್ತಿರುವ ಈ ಬ್ಯಾಂಕ್, ಕಿರು ಹಣಕಾಸು ಸಂಸ್ಥೆಗಳಿಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಅಡಿ ಮರುಹಣಕಾಸು ನೆರವು ಒದಗಿಸುತ್ತದೆ. ಸಾಲಸೌಲಭ್ಯ ಒದಗಿಸುವ ಸಂದರ್ಭದಲ್ಲಿ ಎಸ್ಸಿ/ಎಸ್ಟಿ ಉದ್ದಿಮೆದಾರರಿಗೆ ಬ್ಯಾಂಕ್ ಆದ್ಯತೆ ನೀಡಲಿದೆ.
✧.ಮುದ್ರಾ ಬ್ಯಾಂಕ್ ಸ್ಥಾಪನೆಯಿಂದಾಗಿ ಯುವ ಉದ್ದಿಮೆದಾರರಿಗೆ ಅದರಲ್ಲೂ ಹಿಂದುಳಿದ ಸಮುದಾಯದ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸುಶಿಕ್ಷಿತ, ಕೌಶಲ ಹೊಂದಿದ ಯುವಜನರ ವಿಶ್ವಾಸವನ್ನು ಇದು ಹೆಚ್ಚಿಸಲಿದೆ. ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳಿಗೂ ಇದು ನೆರವಾಗಲಿದೆ.
✧.ರಾಜ್ಯ ಮತ್ತು ಪ್ರಾದೇಶಿಕ ಮಟ್ಟದ ಸಮನ್ವಯಕಾರರ ಜೊತೆಗೂ ಮುದ್ರಾ ಸಹಯೋಗ ಸ್ಥಾಪಿಸಲಿದ್ದು, ಕಟ್ಟಕಡೆಯ ಸಣ್ಣ/ಕಿರು ವಾಣಿಜ್ಯೋದ್ಯಮಗಳನ್ನೂ ಫಲಾನುಭವಿಯನ್ನಾಗಿ ಪರಿಗಣಿಸಲಿದೆ.
●.ಯಾರಿಗೆ ಲಾಭ?:
✧.ಏಕವ್ಯಕ್ತಿ ಮಾಲೀಕತ್ವದ ವಾಣಿಜ್ಯೋದ್ದಿಮೆ, ವ್ಯಾಪಾರ ವಹಿವಾಟುಗಳು- ಸಣ್ಣ ಉತ್ಪಾದನಾ ಘಟಕಗಳು, ವ್ಯಾಪಾರಿಗಳು, ಹಣ್ಣು ಹಂಪಲು/ತರಕಾರಿ ವ್ಯಾಪಾರಿಗಳು, ಟ್ರಕ್ ಮತ್ತು ಟ್ಯಾಕ್ಸಿ ಆಪರೇಟರ್ಗಳು, ಆಹಾರ ಸೇವಾ ಘಟಕಗಳು, ದುರಸ್ತಿ ಅಂಗಡಿಗಳು, ಮಷಿನ್ ಆಪರೇಟರ್ಗಳು, ಸಣ್ಣ ಕೈಗಾರಿಕೆ, ಕಲಾವಿದರು, ಆಹಾರ ಸಂಸ್ಕರಣಾ ಘಟಕ, ಬೀದಿ ಬದಿ ವ್ಯಾಪಾರಿಗಳು ಮತ್ತು ಇತರರು- ಈ ಯೋಜನೆಯ ಫಲಾನುಭವಿಗಳು.
✧.ಸರಿಯಾದ ಕಾಲದಲ್ಲಿ ಹಣಕಾಸಿನ ನೆರವು ಸಿಗದೇ ಇರುವುದು ಈ ಉದ್ದಿಮೆ, ವ್ಯಾಪಾರದಾರರ ಪಾಲಿಗೆ ಬಹುದೊಡ್ಡ ಹಿನ್ನಡೆ. ಇವು ಅಸಂಘಟಿತ ವಲಯಕ್ಕೆ ಸೇರಿದ್ದು, ಬಹುತೇಕರು ವಹಿವಾಟನ್ನು ನೋಂದಾಯಿಸಿರುವುದಿಲ್ಲ. ಹೀಗಾಗಿ ಅಧಿಕೃತ ಮೂಲಗಳಿಂದ ಹಣಕಾಸು ನೆರವು ಪಡೆಯುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ವಲಯಕ್ಕೆ ಮುದ್ರಾ ವರದಾನ.
●.ಯಾವೆಲ್ಲ ರೀತಿಯ ನೆರವು?:
✧.ಮುದ್ರಾದ ಪ್ರಾಥಮಿಕ ಆದ್ಯತೆ ಕಿರು ವಾಣಿಜ್ಯೋದ್ದಿಮೆಗೆ ಪ್ರಧಾನಮಂತ್ರಿ ಮುದ್ರಾ ಯೋಜನೆ ಮೂಲಕ ಮರುಹಣಕಾಸು ನೆರವು ಒದಗಿಸುವುದು.
✧.ಉದ್ದಿಮೆಗಳ ಬೆಳವಣಿಗೆಗೆ ಅನುಸಾರವಾಗಿ ‘ಶಿಶು’, ‘ಕಿಶೋರ್’ ಮತ್ತು ‘ತರುಣ್’ ಎಂಬ ಹೆಸರಿನಡಿ ಫಲಾನುಭವಿ ಉದ್ದಿಮೆಗೆ ಹಣಕಾಸು ಸೌಲಭ್ಯ ಒದಗಿಸಲಾಗುತ್ತದೆ.
✧.ಶಿಶು ವಿಭಾಗದಲ್ಲಿ 50,000 ರೂಪಾಯಿ, ಕಿಶೋರ್ ವಿಭಾಗದಲ್ಲಿ 50,000 ರೂಪಾಯಿಯಿಂದ 5 ಲಕ್ಷ ರೂಪಾಯಿ ತನಕ, ತರುಣ್ ವಿಭಾಗದಲ್ಲಿ 5 ಲಕ್ಷ ರೂ. ಮೇಲ್ಪಟ್ಟು 10 ಲಕ್ಷ ರೂ. ಒಳಗೆ ಸಾಲ ಸೌಲಭ್ಯ ಸಿಗಲಿದೆ.
●.ಆರಂಭಿಕ ಹಂತದ ನೆರವು:
✧.ವಾಣಿಜ್ಯ ಚಟುವಟಿಕೆಗಳಾದ ಸಾರಿಗೆ ಸೌಲಭ್ಯ, ಸಾಮಾಜಿಕ, ಸಾಮುದಾಯಿಕ ಮತ್ತು ವೈಯಕ್ತಿಕ ಸೇವೆಗಳು, ಆಹಾರೋತ್ಪನ್ನಗಳು, ಜವಳಿ ಉತ್ಪಾದನಾ ವಲಯಗಳು ಸೇರಿ ನಿಗದಿತ ವಲಯ/ಚಟುವಟಿಕೆ ಆಧಾರಿತ ಯೋಜನೆಗಳು.
✧.ಕಿರು ಸಾಲ ಯೋಜನೆ (ಎಂಸಿಎಸ್), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್(ಆರ್ಆರ್ಬಿ)/ ಷೆಡ್ಯೂಲ್ಡ್ ಸಹಕಾರಿಬ್ಯಾಂಕ್ಗಳಿಗೆ ಮರುಹಣಕಾಸು ಯೋಜನೆ, ಮಹಿಳಾ ಉದ್ಯಮಿ ಯೋಜನೆ, ವ್ಯಾಪಾರಿಗಳು ಮತ್ತು ಅಂಗಡಿಮುಂಗಟ್ಟುದಾರರಿಗೆ ವಾಣಿಜ್ಯ ಸಾಲ ಸೌಲಭ್ಯ, ಮಧ್ಯಮ ಸಾಲ ಯೋಜನೆ, ಕಿರು ಉದ್ದಿಮೆಗಳಿಗೆ ಉಪಕರಣ ಖರೀದಿಗೆ ಸಾಲ ಸೌಲಭ್ಯಗಳು ಇದರ ಅಡಿ ಬರಲಿವೆ.
●.ಕ್ರೆಡಿಟ್ ಪ್ಲಸ್ ಅಪ್ರೋಚ್:
✧.ಉದ್ದಿಮೆಗಳ ಅಭಿವೃದ್ಧಿಗೆ ಪೂರಕವಾಗಿ ಅನೇಕ ಸವಲತ್ತುಗಳನ್ನು ಒದಗಿಸುವ ಮುದ್ರಾ, ಹಲವು ರೀತಿಯಲ್ಲಿ ಫಲಾನುಭವಿಗಳಿಗೆ ನೆರವು ಒದಗಿಸಲಿದೆ. ಅಂಥವುಗಳಲ್ಲಿ, ಹಣಕಾಸು ಸಾಕ್ಷರತೆ ಅರ್ಥಾತ್ ಖರ್ಚು-ವೆಚ್ಚದ ಮೇಲೆ ನಿಗಾವಹಿಸುವುದಕ್ಕೆ ಅಗತ್ಯ ತಿಳಿವಳಿಕೆ ಒದಗಿಸುವುದು, ತಳಮಟ್ಟದ ಸಂಸ್ಥೆಗಳು/ಉದ್ದಿಮೆಗಳಿಗೆ ಉತ್ತೇಜನ ಮತ್ತು ಬೆಂಬಲ ನೀಡುವುದು.
✧.ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ (ಎನ್ಆರ್ಎಲ್ಎಂ), ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಜೊತೆ ಸಹಯೋಗ, ಕ್ರೆಡಿಟ್ ಬ್ಯೂರೋ ಮತ್ತು ರೇಟಿಂಗ್ ಏಜನ್ಸಿಗಳ ಜೊತೆ ಕೆಲಸ ಪ್ರಮುಖವಾದವು.
✧.ಇದಲ್ಲದೇ ಫಲಾನುಭವಿಗಳಿಗೆ, ಮುದ್ರಾ ಕಾರ್ಡ್, ಪೋರ್ಟ್ಪೋಲಿಯೋ ಕ್ರೆಡಿಟ್ ಗ್ಯಾರಂಟಿ, ಸಾಲದ ಉನ್ನತೀಕರಣ ಸೌಲಭ್ಯವನ್ನೂ ಒದಗಿಸುತ್ತದೆ.
●.ಬ್ಯಾಂಕಿನ ಪ್ರಮುಖ ಜವಾಬ್ದಾರಿಗಳು:
✧. ಕಿರು ಹಣಕಾಸು ಸಂಸ್ಥೆಗಳ ನೋಂದಣಿ ಪ್ರಕ್ರಿಯೆ.
✧. ಗ್ರಾಹಕ ರಕ್ಷಣಾ ನಿಯಮಗಳ ಜೊತೆ ಜವಾಬ್ದಾರಿಯುತ ಹಣಕಾಸಿನ ವ್ಯವಹಾರ ನಡೆಸುವುದು ಮತ್ತು ಸಾಲ ವಸೂಲಾತಿಗೆ ಕ್ರಮ ತೆಗೆದುಕೊಳ್ಳುವುದಕ್ಕೆ ಅಗತ್ಯ ಕಾರ್ಯಸೂಚಿ ಸಿದ್ಧಪಡಿಸುವುದು.
✧. ಕಿರುಹಣಕಾಸು ವ್ಯವಹಾರ ನಡೆಸುವ ಸಂಸ್ಥೆಗಳಿಗೆ ನೀತಿ/ಮಾರ್ಗಸೂಚಿ ಸಿದ್ಧಪಡಿಸುವುದು.
✧. ಕಿರು ಹಣಕಾಸು ಸಂಸ್ಥೆಗಳಿಗೆ ಮಾನ್ಯತೆ/ರೇಟಿಂಗ್ ನೀಡುವುದು.
✧. ಕಟ್ಟಕಡೆಯ ಕಿರು ಉದ್ದಿಮೆ ತನಕವೂ ಸಾಲಸೌಲಭ್ಯವನ್ನು ತಲುಪಿಸುವುದಕ್ಕೆ ಅಗತ್ಯವಾದ ನಿಗದಿತ ಮಾರ್ಗಸೂಚಿ ಅಭಿವೃದ್ಧಿಪಡಿಸುವುದು.
✧. ಕಟ್ಟಕಡೆಯ ವ್ಯವಸ್ಥೆ ತನಕವೂ ಸಮರ್ಪಕ ತಂತ್ರಜ್ಞಾನದ ಸೌಲಭ್ಯ ಒದಗಿಸುವ ಮೂಲಕ ವ್ಯವಸ್ಥೆಯನ್ನು ಸರಳೀಕರಿಸುವುದು.
✧. ಖಚಿತ ಸಾಲದ ಯೋಜನೆ (ಕಿರು ವಾಣಿಜ್ಯೋದ್ಯಮಿಗಳಿಗೆ ಸಾಲ ಸೌಲಭ್ಯ)ಯನ್ನು ರೂಪಿಸಿ, ನಿರ್ವಹಿಸುವ ಹೊಣೆ.
✧. ಕಿರು ಉದ್ದಿಮೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಪೂರಕವಾದ ಬೆಂಬಲ ಮತ್ತು ಉತ್ತೇಜಕ ಚಟುವಟಿಕೆ.
(ಮೂಲ: vijayavani)