"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 28 January 2016

☀(ಭಾಗ-28 ಸಾಮಾನ್ಯ ಜ್ಞಾನ) ಕರ್ನಾಟಕ ರಾಜ್ಯದ ಜನಗಣತಿ-2011ರ ಮೇಲೆ ತೆಗೆಯಲಾದ ಉಪಯುಕ್ತ ಬಹು ಆಯ್ಕೆಯ ಪ್ರಶ್ನೋತ್ತರಗಳು.: ( Objective Type Question Paper on Karnataka State Census -2011)

☀(ಭಾಗ-28 ಸಾಮಾನ್ಯ ಜ್ಞಾನ) ಕರ್ನಾಟಕ ರಾಜ್ಯದ ಜನಗಣತಿ-2011ರ ಮೇಲೆ ತೆಗೆಯಲಾದ ಉಪಯುಕ್ತ ಬಹು ಆಯ್ಕೆಯ ಪ್ರಶ್ನೋತ್ತರಗಳು.:
( Objective Type Question Paper on Karnataka State Census -2011)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ 'ಕರ್ನಾಟಕ ರಾಜ್ಯದ ಜನಗಣತಿ'ಯ ಬಗ್ಗೆ ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ ಆಯ್ದು ಉಪಯುಕ್ತವಾದ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಈ 'ಸ್ಪರ್ಧಾಲೋಕ'ದಲ್ಲಿಡಲು ಒಂದು ಚಿಕ್ಕ ಪ್ರಯತ್ನ ಮಾಡಿರುವೆನು. ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.


1001) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಪ್ರಮಾಣವೆಷ್ಟು?
A] 6.11 ಕೋಟಿ √
B] 5.28 ಕೋಟಿ
C] 7.12 ಕೋಟಿ
D] 5.50 ಕೋಟಿ


1002) 2001-2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ ಬೆಳವಣಿಗೆ ದರ ಎಷ್ಟು ಪ್ರತಿಶತ ಇದೆ?
A] ಶೇ.18.51ರಷ್ಟು
B] ಶೇ.17.51 ರಷ್ಟು
C] ಶೇ. 15.67 ರಷ್ಟು √
D] ಶೇ.13.20 ರಷ್ಟು


1003) 2001-2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪುರುಷರ ಬೆಳವಣಿಗೆ ಪ್ರಮಾಣ ಎಷ್ಟು ಪ್ರತಿಶತ ಇದೆ?
A] ಶೇ.15.46ರಷ್ಟು√
B] ಶೇ.16.46ರಷ್ಟು
C] ಶೇ.17.51ರಷ್ಟು
D] ಶೇ.18.00ರಷ್ಟು


1004) 2001-2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಬೆಳವಣಿಗೆ ಪ್ರಮಾಣ ಎಷ್ಟು ಪ್ರತಿಶತ ಇದೆ?
A] ಶೇ.15.46ರಷ್ಟು
B] ಶೇ.16.33ರಷ್ಟು
C] ಶೇ.15.88ರಷ್ಟು√
D] ಶೇ.12.20ರಷ್ಟು


1005) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಕಡಿಮೆ ಜನಸಂಖ್ಯೆ ಬೆಳವಣಿಗೆ ದರ ಹೊಂದಿದ ಜಿಲ್ಲೆ ಯಾವುದು?
A] ಚಾಮರಾಜನಗರ
B] ಚಿಕ್ಕಮಗಳೂರು√
C] ಕೊಡುಗು
D] ಮೈಸೂರು


1006) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಬೆಳವಣಿಗೆ ದರ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ಕೊಡುಗು
D] ಮೈಸೂರು


1007) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅಧಿಕ ಬೆಳವಣಿಗೆ ದರ ಹೊಂದಿರುವ ಮೊದಲ 3 ಜಿಲ್ಲೆಗಳು ಯಾವವು?
A] ಬೆಂಗಳೂರು, ಬಳ್ಳಾರಿ, ಯಾದಗಿರಿ √
B] ಬೆಳಗಾವಿ, ಬೆಂಗಳೂರು, ರಾಯಚೂರು
C] ಬೆಂಗಳೂರು, ಬೆಳಗಾವಿ, ಉಡುಪಿ
D] ಬೆಳಗಾವಿ, ಯಾದಗಿರಿ, ಚಿಕ್ಕಮಗಳೂರು


1008) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತ್ಯಂತ ಕಡಿಮೆ ಬೆಳವಣಿಗೆ ದರ ಹೊಂದಿರುವ ಕೊನೆಯ 3 ಜಿಲ್ಲೆಗಳು ಯಾವವು?
A] ಉಡುಪಿ , ಮಂಡ್ಯ, ದಕ್ಷಿಣ ಕನ್ನಡ
B] ಚಿಕ್ಕಮಗಳೂರು, ಕೊಡುಗು, ಮಂಡ್ಯ√
C] ಚಿಕ್ಕಮಗಳೂರು, ಹಾಸನ, ಉಡುಪಿ
D] ಉಡುಪಿ , ಯಾದಗಿರಿ, ಕೊಡಗು


1009) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಹೆಚ್ಚು ಜನಸಂಖ್ಯೆ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ಬಳ್ಳಾರಿ
D] ಮೈಸೂರು


1010) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲ ಐದು ಜಿಲ್ಲೆಗಳು ಯಾವವು?
A] ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು, ಗುಲ್ಬರ್ಗಾ√
B] ಬೆಳಗಾವಿ, ಬೆಂಗಳೂರು, ರಾಯಚೂರು, ಗುಲ್ಬರ್ಗಾ, ಕೊಡುಗು
C] ಬೆಂಗಳೂರು, ಬೆಳಗಾವಿ, ದಕ್ಷಿಣ ಕನ್ನಡ, ತುಮಕೂರು, ಉಡುಪಿ
D] ಬೆಳಗಾವಿ, ಮಂಡ್ಯ, ತುಮಕೂರು, ಯಾದಗಿರಿ, ಚಿಕ್ಕಮಗಳೂರು


1011) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆ ಯಾವುದು?
A] ಚಾಮರಾಜನಗರ
B] ಬೆಂಗಳೂರು ಗ್ರಾಮಾಂತರ
C] ಕೊಡುಗು√
D] ಉಡುಪಿ


1012) 2011ರ ಜನಗಣತಿಯ ಪ್ರಕಾರ ಯಾವ ಎರಡು ಜಿಲ್ಲೆಗಳನ್ನು ಹೊತರುಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ?
A] ಕೊಡುಗು ಮತ್ತು ಉಡುಪಿ ಜಿಲ್ಲೆ
B] ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ √
C] ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಉಡುಪಿ ಜಿಲ್ಲೆ
D] ಚಿಕ್ಕಮಗಳೂರು ಮತ್ತು ಕೊಡುಗು


1013) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆ ಪ್ರಮಾಣವೆಷ್ಟು?
A] 70.55 ಲಕ್ಷ
B] 38.70 ಲಕ್ಷ
C] 68.55 ಲಕ್ಷ √
D] 50.15 ಲಕ್ಷ


1014) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ ಗಂಡು ಮಕ್ಕಳ ಪ್ರಮಾಣವೆಷ್ಟು?
A] 35.27 ಲಕ್ಷ √
B] 38.30 ಲಕ್ಷ
C] 40.75 ಲಕ್ಷ
D] 43.12 ಲಕ್ಷ


1015) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಪ್ರಮಾಣವೆಷ್ಟು?
A] 35.27 ಲಕ್ಷ
B] 33.27 ಲಕ್ಷ√
C] 28.53 ಲಕ್ಷ
D] 25.30 ಲಕ್ಷ


1016) 2001-2011ರ ಪ್ರಸಕ್ತ ದಶಕದಲ್ಲಿ ರಾಜ್ಯದ ಒಟ್ಟು 0-6 ಮಕ್ಕಳ ಜನಸಂಖ್ಯೆಯ ಒಟ್ಟು ಬೆಳವಣಿಗೆಯಲ್ಲಿ ಶೇ. ಎಷ್ಟು ಪ್ರತಿಶತ ಕುಸಿತ ಕಂಡಿದೆ?
A] ಶೇ. 4.54ರಷ್ಟು√
B] ಶೇ.8.53ರಷ್ಟು
C] ಶೇ.9.06ರಷ್ಟು
D] ಶೇ.12.20ರಷ್ಟು


1017) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯ ಅತಿ ಹೆಚ್ಚು ಜನಸಂಖ್ಯಾ ಅನುಪಾತ ಹೊಂದಿದ ಜಿಲ್ಲೆ ಯಾವುದು ?
A] ಉಡುಪಿ ಜಿಲ್ಲೆ
B] ಯಾದಗಿರಿ ಜಿಲ್ಲೆ√
C] ಕೊಪ್ಪಳ ಜಿಲ್ಲೆ
D] ಚಿಕ್ಕಮಗಳೂರು ಜಿಲ್ಲೆ


1018) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಒಟ್ಟು ಜನಸಂಖ್ಯೆಯಲ್ಲಿ ಕಡಿಮೆ ಜನಸಂಖ್ಯಾ ಅನುಪಾತ ಹೊಂದಿದ ಜಿಲ್ಲೆ ಯಾವುದು ?
A] ಉಡುಪಿ ಜಿಲ್ಲೆ √
B] ಹಾಸನ ಜಿಲ್ಲೆ
C] ಕೊಪ್ಪಳ ಜಿಲ್ಲೆ
D] ರಾಯಚೂರು ಜಿಲ್ಲೆ


1019) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಹೆಚ್ಚು ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಮೊದಲ 3 ಜಿಲ್ಲೆಗಳು ಯಾವವು?
A] ಉಡುಪಿ , ಮಂಡ್ಯ, ದಕ್ಷಿಣ ಕನ್ನಡ
B] ಯಾದಗಿರಿ, ರಾಯಚೂರು, ಕೊಪ್ಪಳ√
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಯಾದಗಿರಿ, ಮಂಡ್ಯ, ಕೊಡಗು


1020) 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲೇ ಕಡಿಮೆ ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಮೊದಲ 3 ಜಿಲ್ಲೆಗಳು ಯಾವವು?
A] ಉಡುಪಿ, ಹಾಸನ, ಚಿಕ್ಕಮಗಳೂರು√
B] ಚಿಕ್ಕಮಗಳೂರು, ರಾಯಚೂರು, ಕೊಪ್ಪಳ
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಉಡುಪಿ, ಮಂಡ್ಯ, ಹಾಸನ


1021) 2011ರ ಜನಗಣತಿ ಪ್ರಕಾರ ರಾಜ್ಯದ ಜನಸಾಂದ್ರತೆಯ ಪ್ರಮಾಣ ಪ್ರತಿ ಚದುರ ಕಿ.ಮೀ.ಗೆ ಎಷ್ಟಿದೆ?
A] 345
B] 457
C] 319√
D] 276


1022) 2011ರ ಜನಗಣತಿ ಪ್ರಕಾರ ರಾಜ್ಯದಲ್ಲೇ ಅತಿ ಹೆಚ್ಚು ಜನಸಾಂದ್ರತೆಯ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಬೆಳಗಾವಿ
C] ದಕ್ಷಿಣ ಕನ್ನಡ
D] ಚಿಕ್ಕಮಗಳೂರು


1023) 2011ರ ಜನಗಣತಿ ಪ್ರಕಾರ ರಾಜ್ಯದ ಕಡಿಮೆ ಜನಸಾಂದ್ರತೆಯ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ಉತ್ತರ ಕನ್ನಡ
B] ಕೊಡುಗು√
C] ದಕ್ಷಿಣ ಕನ್ನಡ
D] ಚಿಕ್ಕಮಗಳೂರು


1024) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಪುರುಷರ ಪ್ರಮಾಣ ಎಷ್ಟಿದೆ?
A] 3.10ಕೋಟಿ√
B] 3.00ಕೋಟಿ
C] 4.10ಕೋಟಿ
D] 4.50ಕೋಟಿ


1025) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಎಷ್ಟಿದೆ?
A] 3.10ಕೋಟಿ
B] 3.00ಕೋಟಿ√
C] 4.10ಕೋಟಿ
D] 4.50ಕೋಟಿ


1026) 2011ರ ಜನಗಣತಿ ಪ್ರಕಾರ ರಾಜ್ಯದ ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಎಷ್ಟಿದೆ?
A] 951
B] 908
C] 965
D] 968√


1027) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಕಡಿಮೆ ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು√
B] ಉಡುಪಿ
C] ಕೊಡುಗು
D] ಬಿಜಾಪುರ


1028) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಹೊಂದಿದ ಜಿಲ್ಲೆ ಯಾವುದು?
A] ಯಾದಗಿರಿ
B] ಉಡುಪಿ√
C] ದಕ್ಷಿಣ ಕನ್ನಡ
D] ಕೊಡುಗು


1029) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಲಿಂಗಾನುಪಾತ (ಪ್ರತಿ ಸಾವಿರ ಪುರುಷರಿಗೆ ಮಹಿಳೆಯರ ಸರಾಸರಿ ಪ್ರಮಾಣ) ಹೊಂದಿದ ಮೊದಲ ಮೂರು ಜಿಲ್ಲೆಗಳು ಯಾವವು?
A] ಉಡುಪಿ, ಹಾಸನ, ಚಿಕ್ಕಮಗಳೂರು
B] ಚಿಕ್ಕಮಗಳೂರು, ರಾಯಚೂರು, ಕೊಪ್ಪಳ
C] ಚಿಕ್ಕಮಗಳೂರು, ಕೊಪ್ಪಳ , ಉಡುಪಿ
D] ಉಡುಪಿ, ಕೊಡುಗು, ದಕ್ಷಿಣ ಕನ್ನಡ√


1030) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಹೆಚ್ಚು ಲಿಂಗಾನುಪಾತ ಹೊಂದಿದ ಮೊದಲ ಮೂರು ಜಿಲ್ಲೆಗಳು ಯಾವವು?
A] ಬೆಂಗಳೂರು, ಹಾವೇರಿ, ಚಿಕ್ಕಮಗಳೂರು
B] ಕೊಡುಗು, ಹಾಸನ, ಚಿಕ್ಕಮಗಳೂರು√
C] ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾವೇರಿ
D] ಬೆಂಗಳೂರು ಗ್ರಾಮಾಂತರ, ಕೊಡುಗು, ದಕ್ಷಿಣ ಕನ್ನಡ


1031) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಕಡಿಮೆ ಲಿಂಗಾನುಪಾತ ಹೊಂದಿದ ಮೊದಲ ಮೂರು ಜಿಲ್ಲೆಗಳು ಯಾವವು?
A] ಬಿಜಾಪುರ, ಬಾಗಲಕೋಟೆ, ಯಾದಗಿರಿ
B] ರಾಯಚೂರು, ದಾವಣಗೆರೆ, ಯಾದಗಿರಿ,
C] ಬೆಂಗಳೂರು ಗ್ರಾಮಾಂತರ, ಹಾವೇರಿ, ಕೊಡಗು.
D] ಬಾಗಲಕೋಟೆ, ಬಿಜಾಪುರ , ದಾವಣಗೆರೆ√


1032) 2011ರ ಜನಗಣತಿ ಪ್ರಾಥಮಿಕ ವರದಿ ಪ್ರಕಾರ ರಾಜ್ಯದ ಒಟ್ಟು ಸಾಕ್ಷರತೆ ಪ್ರಮಾಣ ಎಷ್ಟು?
A] ಶೇ. 66.64
B] ಶೇ.82.85
C] ಶೇ.68.13
D] ಶೇ.75.60√


1033) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಸಾಕ್ಷರತೆಯಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಎಷ್ಟು?
A] ಶೇ. 66.64
B] ಶೇ.82.85√
C] ಶೇ.68.13
D] ಶೇ.75.60


1034) 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಸಾಕ್ಷರತೆಯಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಎಷ್ಟು?
A] ಶೇ. 66.64
B] ಶೇ.82.85
C] ಶೇ.68.13√
D] ಶೇ.75.60


1035) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ಬೆಂಗಳೂರು
B] ದಕ್ಷಿಣ ಕನ್ನಡ √
C] ಹಾಸನ
D] ಮೈಸೂರು


1036) 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಕಡಿಮೆ ಸಾಕ್ಷರತೆ ಪ್ರಮಾಣ ಹೊಂದಿದ ಜಿಲ್ಲೆ ಯಾವುದು?
A] ವಿಜಾಪುರ
B] ರಾಯಚೂರು
C] ಹಾಸನ
D] ಯಾದಗಿರಿ√
.......••••…………••••……

No comments:

Post a Comment