"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 11 January 2016

■.ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : — ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಯಲ್ಲಿ ತಂದ, ಮಹಾತ್ಮಾ ಗಾಂಧಿಜಿಯವರ ಕನಸಿನ ಕೂಸಾದ 'ಸ್ವಚ್ಛ ಭಾರತ ಮಿಷನ್' ಯೋಜನೆಯ ಇಲ್ಲಿಯವರೆಗಿನ ಕಾರ್ಯ ನಿರ್ವಹಣೆಯ (ಕಾರ್ಯಚರಣೆ) ಕುರಿತು ವಿಮರ್ಶಾತ್ಮಕವಾಗಿ ವಿವರಿಸಿ. (200 ಶಬ್ದಗಳಲ್ಲಿ) (Critically comment on the performance of the Swachh Bharat Mission (SBM).)

■.ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : 
— ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಯಲ್ಲಿ ತಂದ, ಮಹಾತ್ಮಾ ಗಾಂಧಿಜಿಯವರ ಕನಸಿನ ಕೂಸಾದ 'ಸ್ವಚ್ಛ ಭಾರತ ಮಿಷನ್' ಯೋಜನೆಯ ಇಲ್ಲಿಯವರೆಗಿನ ಕಾರ್ಯ ನಿರ್ವಹಣೆಯ (ಕಾರ್ಯಚರಣೆ) ಕುರಿತು ವಿಮರ್ಶಾತ್ಮಕವಾಗಿ ವಿವರಿಸಿ.  (200 ಶಬ್ದಗಳಲ್ಲಿ) 
(Critically comment on the performance of the Swachh Bharat Mission (SBM).)
━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ಸಾಮಾನ್ಯ ಅಧ್ಯಯನ -ಪತ್ರಿಕೆ II
(General Studies Paper II)


●.ಬರೆಯುವ ಮುನ್ನ :
━━━━━━━━━━━━

━━►️ ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಪರೀಕ್ಷೆ-ಮೇನ್ಸ್ ಎಕ್ಸಾಂ ಗೆ ನೇರವಾಗಿ ಸಹಾಯವಾಗುವ ರೀತಿಯಲ್ಲಿ ಪ್ರತಿದಿನ  GS-1, GS-2, GS-3, GS-4 ಪರೀಕ್ಷೆಗೆ ಸಂಬಂಧಪಟ್ಟಂತೆ ಇಲ್ಲಿ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡುವ  ಉದ್ದೇಶದಿಂದ "ಸ್ಪರ್ಧಾಲೋಕ"ದಲ್ಲಿ ಮಾಡುತ್ತಿರುವ ಒಂದು ಚಿಕ್ಕ ಪ್ರಯತ್ನ ಮೊದಲಿನಿಂದಲೂ ಜಾರಿಯಲ್ಲಿದೆ. 

━━►️ ️ಪ್ರಶ್ನೋತ್ತರಗಳನ್ನು ಶಬ್ದಗಳ ಮಿತಿಯಲ್ಲಿ ಬರೆಯುವುದರಿಂದ (150, 200, 250 ಶಬ್ಧಗಳ ಮಿತಿಯಲ್ಲಿ) ಇದು ಮೇನ್ಸ್ ಪರೀಕ್ಷೆ ತಯಾರಿ ನಡೆಸಿರುವ ಸ್ಪರ್ಧಾರ್ಥಿಗಳಿಗೆ  ಖಂಡಿತ ಸಹಾಯ ಆಗೇ ಆಗುತ್ತೆ. ಎಷ್ಟೋ  ಸ್ಪರ್ಧಾರ್ಥಿಗಳಿಗೆ ಶಬ್ದಗಳ ಮಿತಿಯಲ್ಲಿ ಉತ್ತರಗಳನ್ನು ಬರೆಯುವುದು ತುಂಬಾ ಕಷ್ಟದಾಯಕ ಆಗಿರುವುದು ಸರ್ವೇ ಸಾಮಾನ್ಯ.

━━►️ ಇದು ಕನ್ನಡದಲ್ಲಿ ಮೇನ್ಸ್ ಪರೀಕ್ಷೆ ತಯಾರಿ ನಡೆಸಿರುವ  ಆಗ್ತಿರೋ IAS/KAS ಆಕಾಂಕ್ಷಿಗಳಿಗೆ ಗಳಿಗೆ ತುಂಬಾನೇ ಸಹಾಯ ಆಗುತ್ತೇ ಅಂತಾ ನನ್ನ ಅಭಿಪ್ರಾಯ. ಇದು ನಮ್ಮ ಕನ್ನಡ ಭಾಷೆಯ ಪ್ರಬುದ್ಧತೆಗೂ ಸಹಕಾರಿ.

━━►️ ಇದು ನನ್ನ ಜ್ಞಾನದ ಮಿತಿಯಲ್ಲಿ ಪ್ರಶ್ನೋತ್ತರಗಳನ್ನು ತಯಾರಿಸಿದ್ದು, ದಯವಿಟ್ಟು ಸ್ಪರ್ಧಾರ್ಥಿಗಳು ಸಹಕರಿಸಬೇಕಾಗಿ ವಿನಂತಿ.
••┈┈┈┈┈┈┈••••┈┈┈┈┈┈┈••••┈┈┈┈┈┈┈••••┈┈┈┈┈┈┈••••┈┈┈┈┈┈┈••••┈┈┈┈┈┈┈••





— ಸ್ವಚ್ಛ ಭಾರತ ಅಭಿಯಾನವು ರಾಷ್ಟ್ರೀಯ ಆಂದೋಲನವಾಗಿದ್ದು, 2019ರಲ್ಲಿ ಗಾಂಧಿಯವರ 150 ನೇ ಹುಟ್ಟುಹಬ್ಬದ ಒಳಗೆ ಗ್ರಾಮೀಣ ಭಾರತದ ಎಲ್ಲ ನಾಗರಿಕರಿಗೆ ಶೌಚಾಲಯ ಸೌಲಭ್ಯ ಕಲ್ಪಿಸುವುದು ಮತ್ತು  ಬಯಲು ಶೌಚ ರಹಿತ ಗ್ರಾಮ- ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ.

●.ಸಾಧನೆಗಳು: 
••┈┈┈┈┈┈┈••
1. ಅಭಿಯಾನವು "ಬಯಲು ಮುಕ್ತ ಶೌಚಾ­ಲಯ" ವೆಂಬ ಸಂಗತಿಯೊಂದಿಗೆ ಭಾರೀ ಕಾರ್ಯಾಚರಣೆಯನ್ನು ಕೈಗೊಂಡಿತು. ಇದು ಜನ ಸಾಮಾನ್ಯನಿಗಾಗಿ ಜಾರಿಗೊಂಡ ಮೊದಲ ನಿದರ್ಶನವಾಗಿದೆ. ಇದಕ್ಕೆ ಸ್ಪೂರ್ತಿ ಎಂಬಂತೆ ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ಛತ್ತೀಸಗಢ, ಆಂಧ್ರಪ್ರದೇಶ, ರಾಜಸ್ಥಾನ್, ಹರಿಯಾಣಾ ರಾಜ್ಯಗಳಲ್ಲಿ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ.
 2. ಇದುವರೆಗೆ ಸುಮಾರು 80 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ 
3. ರೈಲ್ವೆ ಸಚಿವಾಲಯವು ಇದರ ಅಂಗವಾಗಿ ರೈಲು ಕೋಚ್ ಗಳಲ್ಲಿ  ಜೈವಿಕ ಶೌಚಾಲಯಗಳನ್ನು ನಿರ್ಮಿಸಿದೆ ಮತ್ತು ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿದೆ 
4. ಖಾಸಗಿ ವಲಯ ಮತ್ತು ಅನೇಕ ಸಾಮಾಜಿಕ ಸೇವಾ ಸಂಘಟನೆಗಳು ನೋಡಲ್ ಸಂಸ್ಥೆಗಳೊಂದಿಗೆ ಪೂರ್ಣ ಆವೇಗ ಕೆಲಸದಲ್ಲಿ ಕೈಜೋಡಿಸಿವೆ. 

●.ನ್ಯೂನತೆಗಳು: 
••┈┈┈┈┈┈┈┈••
1. ಇದು ಆರಂಭಗೊಂಡು ಒಂದು ವರ್ಷವಾದರೂ, ದೇಶದ ಶೇ.72ರಷ್ಟು ನಗರಗಳು ಇನ್ನೂ ಸ್ವಚ್ಛವಾಗಿಲ್ಲ. ಇನ್ನೂ ಹಳ್ಳಿಗಾಡಿನಲ್ಲಿ ಶೇ.67ರಷ್ಟು, ನಗರ ಪ್ರದೇಶದಲ್ಲಿ ಶೇ.13ರಷ್ಟು ಬಯಲೇ ಶೌಚಾಲಯವಾಗಿದೆ.
2. ತಮ್ಮ ಕ್ಷೇತ್ರಗಳಲ್ಲಿ ಸ್ವತಃ ಭಾಗಿಯಾಗುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಮುಂದಾಗಿದ್ದ ನೇತಾರರೆಲ್ಲರೂ ಕಾಲ ಗತಿಸಿದಂತೆ ಇದನ್ನು  ನಿರ್ಲಕ್ಷಿಸಿದ್ದಾರೆ. 
3. ಇದು ನಗರಗಳ ಮೇಲೆ ಸೀಮಿತ ಪರಿಣಾಮ ಹೊಂದಿದೆ. ಇನ್ನೂ ಬೀದಿಗಳಲ್ಲಿ ಮತ್ತು ರಸ್ತೆಗಳಲ್ಲಿ ಕಸ, ತ್ಯಾಜ್ಯ ಕೊಳಕು ಹಬ್ಬಿಕೊಂಡಿರುವುದು. 
4. ಸ್ವಚ್ಛ ಭಾರತ ಅಭಿಯಾನದ ವೇಗದ ಗತಿ 2019ರ ಗುರಿಗೆ ತಕ್ಕಂತೆ ಪೂರಕವಾಗಿಲ್ಲ. ಗುರಿಯಂತೆ ದಿನಕ್ಕೆ 185 ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು. ಆದರೆ ಪ್ರಸ್ತುತ ದಿನವೊಂದಕ್ಕೆ 8 ಮಾತ್ರ ನಿರ್ಮಾಣಗೊಳ್ಳುತ್ತಿವೆ. ಇದೇ ವೇಗದಲ್ಲಿ ಸಾಗಿದರೆ ಗುರಿ 2085ಕ್ಕೆ ಸಾಧಿಸಬಹುದು. 
5. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 'ಸ್ವಚ್ಛ ಭಾರತ್ ಸೆಸ್' ತೆರಿಗೆಯು ಟೆಲಿಕಾಂ ಸೇವೆಗಳು, ಇಂಧನ ಮತ್ತು ಖನಿಜಗಳ ಮೇಲೆ ವಿಧಿಸುತ್ತಿರುವುದು ಸರಿಯಲ್ಲ. .
➡ ನಮ್ಮ ದೇಶದ ಹೆಚ್ಚಿನ ನಾಗರಿಕರಲ್ಲಿ ಅನಕ್ಷರತೆ ಮನೆಮಾಡಿದ್ದು ಸ್ವಚ್ಛ ಭಾರತ ಕಲ್ಪನೆ­ಯ ಬಗ್ಗೆ ತಿಳಿ­ವಳಿಕೆಯ ಕೊರತೆ ಹಾಗೂ ಸಾರ್ವಜನಿ­ಕರ ಸಕ್ರಿಯ ಭಾಗವಹಿ­ಸುವಿಕೆ ಇಲ್ಲದಿರುವುದು ಅಭಿಯಾನ ಹಿಂದುಳಿಯಲು ಕಾರ­ಣ­ವಾಗಿದೆ.



●.Extra Tips :
••┈┈┈┈┈┈┈┈••
•► ಇದಕ್ಕಾಗಿ  ₨ 2 ಲಕ್ಷ ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ.
ಅಭಿಯಾನವು ಉತ್ತರಪ್ರದೇಶ ಹಾಗೂ ಬಿಹಾರದಂಥ ದೊಡ್ಡ ರಾಜ್ಯಗಳಲ್ಲಿ ಪಡೆದುಕೊಳ್ಳಬೇಕಾದಷ್ಟು ವೇಗವನ್ನು ಇನ್ನೂ ಪಡೆದುಕೊಂಡಿಲ್ಲ. ಈ ಅಭಿಯಾನದ ಅಡಿಯಲ್ಲಿ ಐದು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇನ್ನು ಶೌಚಾಲಯ ನಿರ್ಮಾಣ ಆರಂಭವಾಗಿಲ್ಲ.

•► ಇದುವರೆಗೆ ಸುಮಾರು 80 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕೇಂದ್ರೀಯ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯ, ಗ್ರಾಮೀಣ ಮಿಷನ್ ನ ನೂಡಲ್ ಸಂಸ್ಥೆಗಳು ಹೇಳಿಕೊಂಡಿವೆ.

•► ಗ್ರಾಮೀಣ ಮಟ್ಟದಲ್ಲಂತೂ ಆಮೆ ವೇಗದ ಪ್ರಗತಿ.

•► ಕಾಲಮಿತಿಯಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಈ ಅಭಿಯಾನಕ್ಕಾಗಿ ಪ್ರತ್ಯೇಕ ಹಣಕಾಸಿನ ನೆರವು, ನಿರಂತರ ನಿಗಾ ವಹಿಸುವಿಕೆ, ತ್ಯಾಜ್ಯ ಸಂಗ್ರ­ಹಣೆ ಮತ್ತು ನಿರ್ವ­ಹಣೆಯ ಕುರಿ­ತಂತೆ ಜಾಗೃತಿ, ಪರಿಣಾ­ಮಕಾರಿ ಕಾನೂ­­ನಿನ ಅನು­ಷ್ಠಾನ, ಕಾನೂನು ಉಲ್ಲಂಘಿ­ಸುವವರಿಗೆ ಶಿಕ್ಷೆ, ಶಾಲೆ ಕಾಲೇಜು­ಗಳ ವಿದ್ಯಾ­ರ್ಥಿ­­ಗಳನ್ನು, ಸಮುದಾಯಗಳನ್ನು ಈ ಅಭಿಯಾನ­ದಲ್ಲಿ ಬಳಸಿ­­ಕೊಳ್ಳುವುದು. ಈ ಗುರಿ ತಲುಪುವಲ್ಲಿ ನಿರ್ವಹಿಸಬೇಕಾದ ಅಂಶಗಳು. 

•► ಕಸವನ್ನು ಮೂಲ­ದಲ್ಲೇ ಬೇರ್ಪಡಿಸಿ ವಿಲೇವಾರಿ ಮಾಡುವ ಹೊಣೆಗಾರಿಕೆಯನ್ನು ಪ್ರತಿ­ಯೊಬ್ಬ ನಾಗರಿಕರೂ ನಿರ್ವಹಿಸದ ಹೊರತು ಸ್ವಚ್ಛ ಭಾರತ ಅಭಿಯಾನ ಯಶಸ್ಸು ಸಾಧಿಸುವುದು ಸಾಧ್ಯವಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ದೊಡ್ಡದೊಂದು ಆಂದೋಲನವೇ ಆಗ­ಬೇಕು. ಇದು ಸುದೀರ್ಘವಾದ ಪಯಣ ಹಾಗೂ ನಿರಂತರವಾದುದು.

No comments:

Post a Comment