"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 2 January 2016

☀(ಭಾಗ -27) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-27)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀(ಭಾಗ -27) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-27))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.


976) ಇತ್ತೀಚೆಗೆ ಚೀನಾ ದೇಶದ ಅಧಿಕೃತ ಕರೆನ್ಸಿಯಾದ 'ಯೆನ್ ಕರೆನ್ಸಿ'ಯನ್ನು ತನ್ನ ದೇಶದಲ್ಲಿ ಅಳವಡಿಸಿಕೊಳ್ಳಲಿರುವ ರಾಷ್ಟ್ರ ಯಾವುದು?
••►  ಜಿಂಬಾಬ್ವೆ (2015ರ ಡಿಸೆಂಬರ್ 21)


977) ಇತ್ತೀಚೆಗೆ '2015ರ ಐಸಿಸಿ ವರ್ಷದ ಕ್ರಿಕೆಟಿಗ' ಪ್ರಶಸ್ತಿಯ ಜೊತೆಗೆ ‘ವರ್ಷದ ಶ್ರೇಷ್ಠ ಟೆಸ್ಟ್ ಆಟಗಾರ’ ಪ್ರಶಸ್ತಿಯನ್ನೂ ಕೂಡ ಪಡೆದ ಕ್ರಿಕೆಟಿಗ ಯಾರು?
••► ಸ್ಟೀವನ್ ಸ್ಮಿತ್(ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ)
(ಈ ಮೂಲಕ ಒಂದೇ ಸಾಲಿನಲ್ಲಿ ವರ್ಷದ ಕ್ರಿಕೆಟಿಗ ಹಾಗೂ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿಗಳೆರಡನ್ನೂ ಪಡೆದ ವಿಶ್ವದ 7ನೇ ಆಟಗಾರನೆಂಬ ಹಿರಿಮೆಯನ್ನು ಸ್ಮಿತ್ ಪಡೆದಿದ್ದಾರೆ.)


978) ಭಾರತದಲ್ಲಿ 'ರಾಷ್ಟ್ರೀಯ ಗ್ರಾಹಕರ ದಿನ'ವಾಗಿ ಯಾವ ದಿನದಂದು ಆಚರಿಸಲಾಗುತ್ತದೆ?
••► ಡಿಸೆಂಬರ್ 24.


979) ಜಾಗತಿಕ ಮಟ್ಟದಲ್ಲಿ 'ವಿಶ್ವ ಗ್ರಾಹಕರ ದಿನ'ವನ್ನಾಗಿ ಯಾವ ದಿನದಂದು ಆಚರಿಸಲಾಗುತ್ತದೆ?
••► ಮಾರ್ಚ್ 15.


980) ಇತ್ತೀಚೆಗೆ ಘೋಷಿಸಲಾದ '2015ರ ಬಿಬಿಸಿ (ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್‍) ವರ್ಷದ ಕ್ರೀಡಾಪಟು' ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾ ಪಟು ಯಾರು?
••► ಬ್ರಿಟನ್‍ನ ಆಂಡಿ ಮರ್ರೆ. (2015ರ ಡಿಸೆಂಬರ್ 20)


981) ವಿಶ್ವಖ್ಯಾತ ಐರ್ಲೆಂಡಿನ 'ಬರ್ರೆ ಮೆಕ್‍ಗ್ಯುಗನ್' ಕ್ರೀಡಾಪಟು ಯಾವ ಆಟದ ದಂತಕಥೆ ಎಂದು ಪ್ರಸಿದ್ಧವಾಗಿರುವನು?
••► ಬಾಕ್ಸಿಂಗ್.


982) ಇತ್ತೀಚೆಗೆ ಘೋಷಿಸಲಾದ '2015ರ ಬಿಬಿಸಿ (ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಷನ್‍) ವರ್ಷದ ಕ್ರೀಡಾಪಟು' ಪ್ರಶಸ್ತಿಗೆ ಆಯ್ಕೆಯಾದ 'ಆಂಡಿ ಮರ್ರೆ'ಯು ಯಾವ ಆಟದ ಪ್ರಸಿದ್ಧ ಕ್ರೀಡಾ ಪಟು?
••► ಟೆನಿಸ್ (ಸ್ಕಾಟ್ಲೆಂಡ್)


983) ಯಾರ ಹುಟ್ಟುಹಬ್ಬದ ದಿನವನ್ನು ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ?
••► ಖ್ಯಾತ ಗಣಿತಶಾಶ್ತ್ರಜ್ಞ ಡಾ..ಶ್ರೀನಿವಾಸ ರಾಮಾನುಜಂ.


984) ದೇಶಾದ್ಯಂತ 'ರಾಷ್ಟ್ರೀಯ ಗಣಿತ ದಿನ'ವಾಗಿ ಯಾವ ದಿನದಂದು ಆಚರಿಸಲಾಗುತ್ತದೆ?
••► ಡಿಸೆಂಬರ್ 22.


985) ಸೂರ್ಯನ ಸೌರಮಂಡಲದ ಸಾಂದ್ರವಾದ ವಿಸ್ಮಯಕಾರಿ ಕಪ್ಪು ವಸ್ತುವಿನ ಮೇಲೆ ಬೆಳಕು ಚೆಲ್ಲುವ ಮಹದುದ್ದೇಶದಿಂದ ಇತ್ತೀಚೆಗೆ ಡ್ಯಾಂಪಲ್ ಉಪಗ್ರಹ ಉಡಾವಣೆ ಮಾಡಿದ ದೇಶ ಯಾವುದು?
••► ಚೀನಾ .
(ಇದು ದೇಶದ ಪ್ರಪ್ರಥಮ ಬಾಹ್ಯಾಕಾಶ ದೂರದರ್ಶಕವಾಗಿದ್ದು, ಲಾಂಗ್‍ಮಾರ್ಚ್ 2-ಡಿ ರಾಕೆಟ್ ಮೂಲಕ ಜ್ಯೂಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ 2015ರ ಡಿಸೆಂಬರ್ 17ರಂದು  ಇದನ್ನು ಹಾರಿಬಿಡಲಾಯಿತು. ಈ ಉಪಗ್ರಹಕ್ಕೆ ವೂಕಾಂಗ್ ಎಂದು ಹೆಸರಿಸಲಾಗಿದೆ.)


986) ಇತ್ತೀಚೆಗೆ ಭಾರತ ಸರ್ಕಾರವು 'ಸಲ್ಮಾ ಅಣೆಕಟ್ಟ'ನ್ನು ಪುನರ್ ನಿರ್ಮಾಣ ಮಾಡುವ ಮತ್ತು ಪೂರ್ಣಗೊಳಿಸುವ ಮಹತ್ವದ ಯೋಜನೆಯನ್ನು ಕೈಗೊಂಡಿದ್ದು, ಹಾಗಾದರೆ ಈ 'ಸಲ್ಮಾ ಅಣೆಕಟ್ಟು' ಯಾವ ದೇಶದಲ್ಲಿದೆ?
••► ಅಫ್ಘಾನಿಸ್ತಾನ.


987) 'ಸಲ್ಮಾ ಅಣೆಕಟ್ಟ'ನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದೆ?
••► ಹರಿ ರುದ್ ನದಿ.(ಅಫ್ಘಾನಿಸ್ತಾನ)


988) ಇತ್ತೀಚೆಗೆ ‘ಡೆಂಗೆ ನಿಯಂತ್ರಿಸುವ ಔಷಧ(ಲಸಿಕೆ ಡೆಂಗ್‍ವಾಕ್ಸಿಯಾ)ಕ್ಕೆ ಅನುಮತಿ ನೀಡಿದ ಏಷ್ಯಾದ ಮೊಟ್ಟಮೊದಲ ದೇಶ’ ಎಂಬ ಹೆಗ್ಗಳಿಕೆಗೆ ಪಾತ್ರವಾದ ದೇಶ ಯಾವುದು?
••► ಫಿಲಿಫೀನ್ಸ್.


989) ಇತ್ತೀಚೆಗೆ ಡೆಂಗೆ ನಿಯಂತ್ರಿಸುವ ಔಷಧ ಲಸಿಕೆ 'ಡೆಂಗ್‍ವಾಕ್ಸಿಯಾ' ಅನ್ನು ತಯಾರಿಸಿದ ಕಂಪನಿ ಯಾವುದು?
••► ಫ್ರೆಂಚ್ ಕಂಪನಿ ಸನೋಫಿ ಪಾಶ್ಚರ್


990) ದೇಶಾದ್ಯಂತ ಪ್ರತಿ ವರ್ಷ ಡಿಸೆಂಬರ್ 23ರಂದು ಯಾರ ಸ್ಮರಣಾರ್ಥ 'ಕಿಸಾನ್ ದಿನ'ವಾಗಿ ಆಚರಿಸಲಾಗುತ್ತದೆ?
••► ಚೌಧರಿ ಚರಣ್ ಸಿಂಗ್ (ಭಾರತದ ಐದನೇ ಪ್ರಧಾನಿ)


991) ಈಗಾಗಲೇ ಯುನೆಸ್ಕೋದ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ದೇಶದ ಎಷ್ಟು ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳು ಸೇರ್ಪಡೆಗೊಂಡಿವೆ?
••► 32


992) ಅಳಿವಿನಂಚಿನಲ್ಲಿರುವ ಪ್ಯಾಂಥೆರಾ ಲಿಯೊ ಲಿಯೊ ಮತ್ತು ಪ್ಯಾಂಥೆರಾ ಲಿಯೊ ಮೆಲಾನೊಚೈತ ಎಂಬ ಪ್ರಭೇದಗಳು ಯಾವ ವನ್ಯಜೀವಿಗೆ ಸಂಬಂಧಪಟ್ಟಿವೆ?
••► ಸಿಂಹ.


993) ಇತ್ತೀಚೆಗೆ ಗ್ರಾಮ ಪಂಚಾಯ್ತಿ ಹಾಗೂ ಮುನ್ಸಿಪಾಲಿಟಿ ಕಾರ್ಪೋರೇಶನ್ ಚುನಾವಣೆಗಳಿಗೆ ಸ್ಪರ್ಧಿಸಲು ಕನಿಷ್ಟ ಶಿಕ್ಷಣ ಅರ್ಹತೆ ನಿಗದಿಗೊಳಿಸಿದ್ದ ದೇಶದ ಪ್ರಥಮ ರಾಜ್ಯ ಯಾವುದು?
••► ಹರಿಯಾಣ.


994) ವಾಯು ಮಾಲಿನ್ಯ ಪ್ರಮಾಣ ಇಂದು ತುರ್ತು ಸ್ವರೂಪವನ್ನು ಪಡೆದ ಹಿನ್ನೆಲೆಯಲ್ಲಿ ಶಾಸನಾತ್ಮಕ ವಿಧಿಗಳ, ನಿಯಮಾವಳಿಗಳ ಅನ್ವಯ, ಮಾಲಿನ್ಯಕಾರಕ ಕಣಗಳು (ಪಿಎಂ-ಪರ್ಟಿಕ್ಯುಲೇಟ್ ಮ್ಯಾಟರ್) ಒಂದು ಘನ ಮೀಟರ್ ಪ್ರದೇಶದಲ್ಲಿ ದಿನಕ್ಕೆ ಎಷ್ಟು ಮೈಕ್ರೊಗ್ರಾಂಗಳನ್ನು ಮೀರುವಂತಿಲ್ಲ?
••► 60 ಮೈಕ್ರೊಗ್ರಾಂಗಳಿಂದ 100 ಮೈಕ್ರೊಗ್ರಾಂಗಳು.


995) ಪ್ರಸ್ತುತ ರಾಜ್ಯಸಭೆಯ ಉಪಾಧ್ಯಕ್ಷರು ಯಾರು?
••► ಪಿ.ಜೆ. ಕುರಿಯನ್ (14dec2015)


996) ಪ್ರಸ್ತುತ ವಿಶ್ವ ಹವಾಮಾನ ಸಂಸ್ಥೆಯ ಮುಖ್ಯಸ್ಥರು ಯಾರಿದ್ದಾರೆ?
••► ಮೈಕೆಲ್ ಜರಾಡ್ (25Nov2015)


997) ಪ್ರಸ್ತುತ ದೇಶದ ಹಸಿರು ನ್ಯಾಯಪೀಠ (NGT) ದ ಅಧ್ಯಕ್ಷರು ಯಾರು?  
••►  ನ್ಯಾಯಮೂರ್ತಿ ಸ್ವತಂತ್ರಕುಮಾರ್ (Dec 11, 2015)


998) ಇತ್ತಿಚೆಗೆ ನೇಪಾಳದ ಇತಿಹಾಸದಲ್ಲೆ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು?
••► ವಿದ್ಯಾದೇವಿ ಭಂಡಾರಿ.


999) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಇತ್ತೀಚೆಗೆ ಪ್ರಕಟಿಸಿದ ‘ಸಮನ್ವಯ್‌’ ಯೋಜನೆಯನ್ನು ಯಾವುದಕ್ಕೆ ಸಂಬಂಧಿಸಿದೆ?
••► ಗ್ರಾಮ ಪಂಚಾಯ್ತಿ


1000) 'TAPI ಅನಿಲ ಕೊಳವೆ ಮಾರ್ಗ ಯೋಜನೆ' ಯಾವ ದೇಶಗಳಿಗೆ ಸಂಬಂಧಿಸಿದೆ?
••► ತುರ್ಕ್ ಮೆನಿಸ್ಥಾನ್— ಅಫಘಾನಿಸ್ತಾನ— ಪಾಕಿಸ್ತಾನ— ಇಂಡಿಯಾ

- ಇಲ್ಲಿಯವರೆಗೆ 27 ಭಾಗಗಳಲ್ಲಿ 1,000 (ಒಂದು ಸಾವಿರ) ಪ್ರಮುಖ ಪ್ರಚಲಿತ ಘಟನೆಗಳ ಮೇಲೆ ಪ್ರಶ್ನೆಗಳನ್ನು ತಯಾರಿಸಿ ಉತ್ತರಗಳೊಂದಿಗೆ 'ಸ್ಪರ್ಧಾಲೋಕ'ದಲ್ಲಿ ವಿವರಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವು ತುಂಬಾ ಉಪಯುಕ್ತವಾಗಿರುವವು. ಸ್ಪರ್ಧಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಲ್ಲಿ ನನ್ನ ಅವಿರತ ಶ್ರಮಕ್ಕೆ ಒಂದು ನಿಜವಾದ ಅರ್ಥದೊರೆಯುವುದು.

ಧನ್ಯವಾದಗಳು...

No comments:

Post a Comment