"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 10 January 2016

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀ಭಾರತದಂತಹ ಮುಂದುವರೆಯುತ್ತಿರುವ ದೇಶಗಳ ಮೇಲೆ ಜಾಗತಿಕ ಹವಾಮಾನ ವೈಪರೀತ್ಯ (ಗ್ಲೋಬಲ್ ವಾರ್ಮಿಂಗ್) ದಿಂದ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿ. (250 ಶಬ್ದಗಳಲ್ಲಿ) (Discuss the effects of the Global Climate Change (Global Warming) on developing countries like India.(in 250 words))

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
☀ಭಾರತದಂತಹ ಮುಂದುವರೆಯುತ್ತಿರುವ ದೇಶಗಳ ಮೇಲೆ ಜಾಗತಿಕ ಹವಾಮಾನ ವೈಪರೀತ್ಯ (ಗ್ಲೋಬಲ್ ವಾರ್ಮಿಂಗ್) ದಿಂದ ಉಂಟಾಗುವ ಪರಿಣಾಮಗಳನ್ನು ಚರ್ಚಿಸಿ.
(250 ಶಬ್ದಗಳಲ್ಲಿ) 
 (Discuss the effects of the Global Climate Change (Global Warming) on developing countries like India.(in 250 words))
━━━━━━━━━━━━━━━━━━━━━━━━━━━━━━━━━━━━━━━━

★ ಪ್ರಾಕೃತಿಕ ಮತ್ತು ಭೌಗೋಳಿಕ ಅಧ್ಯಯನ 
(Environmental Geophysical Studies)

★ಸಾಮಾನ್ಯ ಅಧ್ಯಯನ -ಪತ್ರಿಕೆ III
(General Studies Paper III)


•► ಹವಾಮಾನ ವೈಪರೀತ್ಯ ಇಂದು ಜಾಗತಿಕ ಸಮಸ್ಯೆಯಾಗಿದ್ದು, ಇವತ್ತು ಜಗತ್ತಿನೆಲ್ಲೆಡೆ ಚರ್ಚೆಗೊಳಪಡುತ್ತಿದೆ. ಹವಾಮಾನ ಮಾಪಕಗಳಾದ ಉಷ್ಣತೆ, ಮಳೆ, ಗಾಳಿ ಮತ್ತು ಆದ್ರತೆಗಳಲ್ಲುಂಟಾಗುವ ದೀರ್ಘ‌ಕಾಲೀನ ಬದಲಾವಣೆಯೇ ಹವಾಮಾನ ಬದಲಾವಣೆ. 

•► ಈ ಸಮಸ್ಯೆಗೆ ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು ಹೊಂದುತ್ತಿರುವ ರಾಷ್ಟ್ರಗಳೆಲ್ಲವೂ ಕಾರಣಕರ್ತರು. ಆದರೆ ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳನ್ನು ಹೊಂದಿದ ಮುಂದುವರಿಯುತ್ತಿರುವ ದೇಶಗಳ ಮೇಲೆ ಅತ್ಯಂತ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತಿರುವುದು. 


●. ಕಾರಣಗಳು :
••┈┈┈┈┈┈┈┈••
•► ಈ ಬಗೆಯ ಹವಾಗುಣ ಬದಲಾವಣೆಯು ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಉಂಟಾಗುತ್ತಿದೆ; ಇದಕ್ಕೆ ಮನುಷ್ಯರ ಚಟುವಟಿಕೆಗಳಿಂದ ಉಂಟಾಗುವ ಹಸಿರುಮನೆ ಪರಿಣಾಮವು ಮುಖ್ಯ ಕಾರಣವಾಗಿದೆ. 
•► ಹವಾಗುಣ ಬದಲಾವಣೆಗೆ ಹೆಚ್ಚುತ್ತಿರುವ ಜಲ ಹಾಗೂ ವಾಯು ಮಾಲಿನ್ಯ, ಅತಿಯಾದ ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ಮಿತಿಮೀರಿದ ಕೈಗಾರೀಕರಣ, ಕೃಷಿಯಲ್ಲಿ ಅತಿಯಾದ ರಾಸಾಯನಿಕಗಳ ಬಳಕೆ ಮುಂತಾದವು ಕೂಡಾ ಮುಂದುವರೆಯುತ್ತಿರುವ ದೇಶಗಳ ವಾತಾವರಣದಲ್ಲಿ ಹಸಿರುಮನೆ ಅನಿಲಗಳು ಹೆಚ್ಚಾಗಿರುವುದಕ್ಕೆ ಕಾರಣ.


●. ಪರಿಣಾಮಗಳು :
••┈┈┈┈┈┈┈┈┈••
•► ಜಾಗತಿಕ ತಾಪಮಾನದ ಈ ಏರಿಕೆಯಿಂದಾಗಿ ಭಾರತ ಸೇರಿದಂತೆ ಮುಂದುವರೆಯುತ್ತಿರುವ ಹಲವು ರಾಷ್ಟ್ರಗಳಲ್ಲಿ ಆಹಾರ ಉತ್ಪಾದನೆಯ ಕೊರತೆ, ಅಪೌಷ್ಠಿಕತೆ, ಒಣ ಭೂಮಿಯ ಹೆಚ್ಚಳ, ಉಷ್ಣಾಂಶದಲ್ಲಿ ಹೆಚ್ಚಳ, ಚಂಡಮಾರುತ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳಿಗೆ ಎಡೆ ಮಾಡಿಕೊಡಲಿದೆ.

•► ಮಳೆಬೀಳುವ ಪ್ರಮಾಣದಲ್ಲಿ ಆಗುವ ಬದಲಾವಣೆಗಳು ಕೃಷಿ ಹಾಗೂ ಜಲಮೂಲಗಳ ಮೇಲೆ ಪರಿಣಾಮ ಬೀರುತ್ತವೆ. ವಿಶೇಷವಾಗಿ ಭಾರತದಂತಹ ಕೃಷಿ ಪಾರಮ್ಯದ, ಜೈವಿಕ ಸೂಕ್ಷ್ಮ ಆಕರತೆಗಳ ದೇಶಗಳ ಮೇಲೆ ಅತ್ಯಂತ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತದೆ.

•► ದೇಶದ ಅಭಿವೃದ್ಧಿಯಲ್ಲಿ ಕೃಷಿ ಗಣನೀಯ ಕಾಣಿಕೆ ನೀಡುವ ಈ ದೇಶಗಳಲ್ಲಿ ಕೃಷಿಯೆಂಬುದು ಪರಿಸರದ ಮೇಲೆ ಅವಲಂಬಿತವಾದ ಕಸುಬು. ಹವಾಮಾನ ಬದಲಾವಣೆಯ ಬಿಸಿ ಮೊದಲು ತಟ್ಟುವುದು ಕೃಷಿಕರಿಗೆ. ಕೃಷಿ ಬಡಕಲಾದರೆ ಕೃಷಿಕರು ನಿರ್ಗತಿಕರಾಗುತ್ತಾರೆ. ನೈಸರ್ಗಿಕ ಅಸಮತೋಲನದಿಂದಾಗಿ ಆರ್ಥಿಕತೆಯಲ್ಲಿ ಏರುಪೇರು ಆಗುವುದು.

•► ಸಣ್ಣ ಕೃಷಿಕರಂತೂ ಮೂಲೆಗುಂಪಾಗುವುದು ಖಂಡಿತ. ತತ್ಪರಿಣಾಮ ಸಂಪತ್ತಿನ ಹಂಚಿಕೆಯಲ್ಲಿ ಅಸಮಾನತೆ ಸೃಷ್ಟಿಯಾಗುತ್ತದೆ. ನಿರುದ್ಯೋಗದ ಸೃಷ್ಟಿಯಾಗುತ್ತದೆ. ಆತಂಕಗಳು ನೂರಾರು.

•► ಬಿತ್ತನೆ ಮತ್ತು ಇಳುವರಿ ಕಾಲಾವಧಿಯಲ್ಲೂ ಏರುಪೇರು ಉಂಟಾಗುತ್ತಿದೆ. ಸುಡು ಬಿಸಿಲು; ಅಕಾಲಿಕ/ವಿಪರೀತ ಮಳೆ; ಬೆಳೆನಷ್ಟ; ಸಾಂಕ್ರಾಮಿಕ ರೋಗಗಳಲ್ಲಿ ಹೆಚ್ಚಳ; ಪಕ್ಷಿ-ಜಾನುವಾರುಗಳ ಆರೋಗ್ಯ, ಸಂತಾನೋತ್ಪತ್ತಿ ಮತ್ತು ರೋಗನಿರೋಧಕ ಶಕ್ತಿಯಲ್ಲಿ ಇಳಿಕೆ ಕಂಡುಬಂರುವುದು.


●. ಉಪಸಂಹಾರ :
••┈┈┈┈┈┈┈┈┈┈••
•► ಹವಾಮಾನ ಬದಲಾವಣೆಯ ಅನಾಹುತಕ್ಕೆ ಮಾನವನೇ ಕಾರಣನಾದ್ದರಿಂದ ಸಮಸ್ಯೆಯ ಪರಿಹಾರವೂ ನಮ್ಮ ಕೈಯಲ್ಲೆ ಇದೆ. 
•► ವಾತಾವರಣವನ್ನು ಕಲುಷಿತಗೊಳಿಸುವ ವಸ್ತುಗಳ ಉತ್ಪಾದನೆಯನ್ನು ನಿಯಂತ್ರಿಸಬೇಕಾಗಿದೆ. 
•► ಜಲ ಮತ್ತು ಅರಣ್ಯ ಸಂರಕ್ಷಣೆ, ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆ, ಮರುಸಂಸ್ಕರಣ ಪದ್ಧತಿ, ಮತ್ತು ಪರಿಸರ ಸಂರಕ್ಷಣೆಯ ಕಾಳಜಿ ನಮ್ಮದಾಗಬೇಕು.

•► "ನಾವು ಪರಿಸರವನ್ನು ಬಳಸಿಕೊಳ್ಳುವ ಗ್ರಾಹಕರಾಗಬಾರದು. ಪರಿಸರವನ್ನು ಸಂರಕ್ಷಿಸುವ ಪ್ರತಿಪಾದಕರಾಗಬೇಕು"

No comments:

Post a Comment