"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 30 October 2015

☀ಜಗತ್ತಿನ ಹಾಗೂ ಭಾರತದ ಪ್ರಥಮ ಪಿತಾಮಹರು :

☀ಜಗತ್ತಿನ ಹಾಗೂ ಭಾರತದ ಪ್ರಥಮ ಪಿತಾಮಹರು :
━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


■. ಭಾರತ ಇತಿಹಾಸದ ಪಿತಾಮಹ :••┈┈┈┈┈┈•• ಕಲ್ಹಣ.

■. ಭಾರತದ ಸಮಾಜಶಾಸ್ತ್ರದ ಪಿತಾಮಹ :••┈┈┈┈┈┈•• ಎಮ್,ಎನ್,ಶ್ರೀನಿವಾಸ.

■. ಭಾರತದ ಪುನರುಜ್ಜೀವನದ ಪಿತಾಮಹ :••┈┈┈┈┈┈•• ರಾಜಾರಾಮ ಮೋಹನ್ ರಾಯ್.

■. ಭಾರತದ ಹಸಿರುಕ್ರಾಂತಿಯ ಪಿತಾಮಹ:••┈┈┈┈┈┈•• M.S.ಸ್ವಾಮಿನಾಥನ್.

■. ಭಾರತದ ಯೋಜನೆಗಳ ಪಿತಾಮಹ :••┈┈┈┈┈┈•• ಸರ್.ಎಂ.ವಿಶ್ವೇಶ್ವರಯ್ಯ.

■. ಕರ್ನಾಟಕದ ಸುಗಮ ಸಂಗೀತದ ಪಿತಾಮಹ :••┈┈┈┈┈┈•• ಸಂತ ಶಿಶುನಾಳ ಶರೀಫ್.

■. ಕರ್ನಾಟಕದ ಶಾಸನಗಳ ಪಿತಾಮಹ :••┈┈┈┈┈┈•• ಬಿ.ಎಲ್.ರೈಸ್.

■. ಪುನರುಜ್ಜೀವನದ ಪಿತಾಮಹ :••┈┈┈┈┈┈•• ಪೆಟ್ಟ್ರಾರ್ಕ್.

■. ಭೂಗೋಳ ಶಾಸ್ತ್ರದಪಿತಾಮಹ :••┈┈┈┈┈┈•• ಎರಟೋಸನೀಸ್.

■. ಪ್ರತಿಸುಧಾರಣೆಯ ಪಿತಾಮಹ :••┈┈┈┈┈┈••ಇಗ್ನೇಷಿಯಸ್ ಲಯೋಲ.

■. ಮತಸುಧಾರಣೆಯ ಪಿತಾಮಹ :••┈┈┈┈┈┈•• ಮಾರ್ಟಿನ್ ಲೂಥರ್.

■. ಭಾರತದ ಚಲನಚಿತ್ರದ ಪಿತಾಮಹ:••┈┈┈┈┈┈•• ದಾದಾಸಾಹೇಬ್ ಫಾಲ್ಕೆ.

■. ವಿಜ್ಞಾನದ ಪಿತಾಮಹ :••┈┈┈┈┈┈•• ರೋಜರ್ ಬೇಕನ್.

■. ವಿಕಾಸವಾದದ ಪಿತಾಮಹ ••┈┈┈┈┈┈•• ಚಾರ್ಲ್ಸ್ ಡಾರ್ವಿನ್.

■. ಅಣುವಂಶಿಯವಾದ ಪಿತಾಮಹ ••┈┈┈┈┈┈•• ಗ್ರೇಗರ ಮೆಂಡಲ್.

■. ಚಲನಶಾಸ್ರದ ಪಿತಾಮಹ ••┈┈┈┈┈┈•• ನ್ಯೂಟನ್.

■. ಪರಮಾಣು ಸಿದ್ಧಾಂತದ ಪಿತಾಮಹ ••┈┈┈┈┈┈•• ಜಾನ್ ಡಾಲ್ಟನ್

■. ಸೌರ ಕೇಂದ್ರ ಸಿದ್ಧಾಂತದ ಪಿತಾಮಹ ••┈┈┈┈┈┈•• ಕೋಪರ್ ನಿಕಸ್

■. ಗ್ರಹಗಳ ಚಲನೆ ನಿಯಮದ ಪಿತಾಮಹ ••┈┈┈┈┈┈•• ಜೋಹಾನ್ಸ್ ಕೆಪ್ಲರ್

■. ಆಯಾನಿಕರಣ ಸಿದ್ಧಾಂತದ ಪಿತಾಮಹ ••┈┈┈┈┈┈•• ಹೀನಿಯಸ್

■. ಆವರ್ತಕೋಷ್ಟಕದ ಜನಕ ••┈┈┈┈┈┈•• ಡಿಮಿಟ್ರಿ ಮೆಂಡಲಿವ್

■. ಸಾಪೇಕ್ಷವಾದದ ಪಿತಾಮಹ ••┈┈┈┈┈┈•• ಐನ್ಸ್ಟಿನ್

■. ಜೀವಶಾಸ್ತ್ರದ ಪಿತಾಮಹ ••┈┈┈┈┈┈•• ಅರಿಸ್ಟಾಟಲ್

■. ವೈದ್ಯಕೀಯ ಶಾಸ್ತ್ರದ ಪಿತಾಮಹ ••┈┈┈┈┈┈•• ಹಿಪ್ಪೋಕ್ರೆಟಸ್

■. ಅಂಗರಚನಾಶಾಸ್ರದ ಪಿತಾಮಹ ••┈┈┈┈┈┈•• ಚರಕ

■. ಪ್ಲಾಸ್ಟಿಕ್ ಸರ್ಜರಿಯ ಪಿತಾಮಹ ••┈┈┈┈┈┈•• ಸುಶ್ರುತ

■. ಯೋಗಶಾಸ್ತ್ರದ ಪಿತಾಮಹ ••┈┈┈┈┈┈•• ಪತಂಜಲಿ

Tuesday, 27 October 2015

☀ಭಾರತೀಯ ರೈಲ್ವೆ :ಪ್ರಮುಖ ಅಂಶಗಳು : (Indian Railways :Important Points)

☀ಭಾರತೀಯ ರೈಲ್ವೆ :ಪ್ರಮುಖ ಅಂಶಗಳು :
(Indian Railways :Important Points)
━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ಭಾರತೀಯ ರೈಲ್ವೆ :
•┈┈┈┈┈┈┈┈┈┈•
■. ಭಾರತದಲ್ಲಿ ರೈಲ್ವೆಯು ಮೊದಲು ಪ್ರಾರಂಭವಾದದ್ದು•┈┈┈┈•16 ಏಪ್ರಿಲ್ 1853

■. ಭಾರತದ ಮೊಟ್ಟ ಮೊದಲ ರೈಲು ಪ್ರಾರಂಭವಾದ್ದು •┈┈┈┈•16 ಏಪ್ರಿಲ್ 1853 ರಂದು ಮುಂಬೈಯಿಂದ ಠಾಣೆಯವರೆಗೆ

■. ಮೊದಲ ರೈಲು ಮುಂಬೈಯಿಂದ ಠಾಣೆಯವರೆಗೆ ಕ್ರಮಿಸಿದ ದೂರ•┈┈┈┈•34 ಕಿ ಮೀ

■. ಭಾರತೀಯ ರೈಲ್ವೆಯ ಮುಖ್ಯ ಕಚೇರಿ•┈┈┈┈•ನವದೆಹಲಿ

■. ಭಾರತದ ರೈಲ್ವೆಯು ಕೇಂದ್ರ ಸರ್ಕಾರದ ಅಧೀನದಲ್ಲಿದೆ.

■. ಒಟ್ಟು ರೈಲ್ವೆ ವಿಭಾಗಗಳು•┈┈┈┈•17

■. ರೈಲ್ವೆ ಸ್ಟಾಪ್ ಕಾಲೇಜ ಇರುವುದು•┈┈┈┈• ವಡೋದರಾ

■. ಯಾವ ರೈಲ್ವೆಯ ಮಾರ್ಗವು ಅತ್ಯಂತ ಉದ್ದವಾಗಿದೆ•┈┈┈┈• ವಿವೇಕ ಎಕ್ಸಪ್ರೆಸ್

■. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರೈಲ್ವೆ ಸಮಯವನ್ನು ನಿಗದಿ ಪಡಿಸಿದವರು •┈┈┈┈• ಜಾರ್ಜ ಬ್ರೈಡಷಾ

■. ಭಾರತದಲ್ಲಿರುವ ಅತೀ ದೊಡ್ಡ ರೈಲ್ವೆ ಜಕ್ಷನ್•┈┈┈┈•ಮಥುರಾ

■. ಭಾರತದಲ್ಲಿರುವ ಅತೀ ದೊಡ್ಡ ಪ್ಲಾಟಪಾರ್ಮ•┈┈┈┈•ಗೋರಕಪುರ

■. ಸ್ವತಂತ್ರ್ಯ ಭಾರತದ ಮೊದಲ ರೈಲ್ವೆ ಮಂತ್ರಿ•┈┈┈┈•ಜಾನ್ ಮಥಾಯಿ

■. ಭಾತರದ ಮೊದಲು ವಿದ್ಯುತ್ ರೈಲು•┈┈┈┈•ಡೆಕ್ಕನ್ ಮಥಾಯಿ

■. ಬ್ರಾಡಗೇಜನ್ ಹಳಿಯ ಅಗಲ•┈┈┈┈•1.676 mtr

■. ಭಾರತೀಯ ರೈಲ್ವೆಯು ಯಾವ ವರ್ಷವನ್ನು Year of Rail users ಎಂದು ಘೋಷಣೆ ಮಾಡಿದೆ•┈┈┈┈•1995

■. ಭಾರತದಲ್ಲಿರುವ ಅತೀ ವೇಗದ ರೈಲು•┈┈┈┈•ಶತಾಬ್ದಿ ಎಕ್ಸಪ್ರೆಸ್

■. ಭಾರತದಲ್ಲಿರುವ ಅತೀ ಉದ್ದವಾದ ರೈಲ್ವೆ ಟ್ಯೂನಲ್•┈┈┈┈•ಪೀರ ಪಂಜಲ್ ರೈಲ್ವೆ ಟ್ಯೂನಲ್

■. ರೈಲ್ವೆ ಇಲಾಖೆಯನ್ನು 1905 ರಲ್ಲಿ ಸ್ಥಾಪಿಸಿಲಾಯಿತು.

■. ಭಾತರದ ಮೊದಲು ಮಹಿಳಾ ರೈಲ್ವೆ ಮಂತ್ರಿ•┈┈┈┈•ಮಮತಾ ಬ್ಯಾನರ್ಜಿ

■. ಏಷಿಯಾದಲ್ಲಿಯೇ ಅತೀ ಉದ್ದವಾದ ರೈಲ್ವೆ ಮಾರ್ಗವನ್ನು ಹೊಂದಿರುವುದು ಭಾರತ.

■. ಪ್ರಪಂಚದಲ್ಲಿ ಎರಡನೇ ಅತೀ ದೊಡ್ಡ ರೈಲ್ವೆ ಜಾಲವನ್ನು ಹೊಂದಿದೆ.

■. ಭಾರತದ ಮೊದಲ ರೈಲ್ವೆ ಸುರಂಗ ಮಾರ್ಗ•┈┈┈┈•ಪಾರಸಿಕ ರೈಲ್ವೆ

■. ಭಾರತದ ಅತೀ ದೊಡ್ಡ ರೈಲ್ವೆ ಯಾರ್ಡ ಇರುವುದು•┈┈┈┈•ಮುಗಲಸರಾಯ

■. ಭಾರತದಲ್ಲಿರುವ ಅತೀ ಉದ್ದವಾದ ರೈಲ್ವ ಸೇತುವೆ•┈┈┈┈•ನೆಹರು ಸೇತುವೆ.

■. ಭಾರತದ ಅತೀ ಜನದಟ್ಟನೆಯ ರೈಲು ನಿಲ್ದಾಣ•┈┈┈┈•ಲಖನೌ

■. ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಮೆಟ್ರೋ ರೈಲು ಆರಂಬವಾದದ್ದು•┈┈┈┈•ಕಲ್ಕತ್ತಾ

■. ಭಾತರದ ರೈಲು ಮ್ಯುಸಿಯಂ ಇರುವ ಸ್ಥಳ•┈┈┈┈• ಚಾಣಕ್ಯನಗರಿ ನವದೆಹಲಿ.

☀ಕರ್ನಾಟಕ ರಾಜ್ಯದ ಆರ್ಥಿಕತೆ ಕುರಿತ ಸಾಮಾನ್ಯ ಜ್ಞಾನ (ಭಾಗ -21)  (General knowledge on Karnataka State Economics (Part-21)) ☆.(ಕರ್ನಾಟಕ ಆರ್ಥಿಕ ಸಮೀಕ್ಷೆ 2014-15)

☀ಕರ್ನಾಟಕ ರಾಜ್ಯದ ಆರ್ಥಕತೆ ಕುರಿತ ಸಾಮಾನ್ಯ ಜ್ಞಾನ (ಭಾಗ -21)
(General knowledge on Karnataka State Economics (Part-21))
☆.(ಕರ್ನಾಟಕ ಆರ್ಥಿಕ ಸಮೀಕ್ಷೆ 2014-15)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕರ್ನಾಟಕ ಆರ್ಥಿಕ ಸಮೀಕ್ಷೆ 2014-15
(Karnataka Economic Survey 2014-15)

★ ಕರ್ನಾಟಕದ ಆರ್ಥಿಕತೆ
(Karnataka State Economics)

■. ಕೆಎಎಸ್ / ಐಎಎಸ್ ಅಭ್ಯರ್ಥಿಗಳಿಗೆ ಹಾಗೂ ಇತರೆ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾಗುವ ದೃಷ್ಟಿಯಿಂದ 'ಕರ್ನಾಟಕ ಆರ್ಥಿಕ ಸಮೀಕ್ಷೆ 2014-15'ರ ಅನುಸಾರ ಸಿದ್ಧಪಡಿಸಿದ 55 ಪ್ರಶ್ನೆಗಳ ಮಾದರಿ ಪ್ರಶ್ನೆ ಪತ್ರಿಕೆಯನ್ನು ಗೆಳೆಯರ ಸಹಾಯದಿಂದ ಸಿದ್ಧಪಡಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ಇದು ಸಹಾಯಕವಾಗುತ್ತದೆಂದು ನನ್ನ ಅನಿಸಿಕೆ.

-ಏನಾದರೂ ಪ್ರಮಾದಗಳು ನಿಮ್ಮ ಗಮನಕ್ಕೆ ಬಂದಲ್ಲಿ ಖಂಡಿತ ಕಮೆಂಟ್ ಮಾಡುವುದನ್ನು ಮರೆಯದಿರಿ.


1. 2014-15ನೇ ಸಾಲಿನ ಕರ್ನಾಟಕ ಆರ್ಥಿಕಸಮೀಕ್ಷೆಯ ಪ್ರಕಾರ, ರಾಜ್ಯದ ಸ್ವಂತ ತೆರಿಗೆಆದಾಯದಲ್ಲಿ ಮಾರಾಟ ತೆರಿಗೆ/ವ್ಯಾಟ್ ಮುಖ್ಯಮೂಲವಾಗಿದ್ದು, 2014-15ನೇ ಸಾಲಿನಲ್ಲಿ ಅದರಪಾಲು ಎಷ್ಟಿತ್ತು?
A. 43.31
B. 48.31
C. 53.31●
D. 58.81


2. 2013-14ರಲ್ಲಿ ಅಭಿವೃದ್ಧಿ ವೆಚ್ಚ 81454.10 ಕೋಟಿರೂ. ಗಳಾಗಿತ್ತು. ಅದು 2014-15ರಲ್ಲಿ ಶೇ. ಎಷ್ಟು
ಏರಿಕೆಯಾಯಿತು?
A. 10.57%
B. 12.67%
C. 15.57%●
D. 17.77%


3. 2014-15ನೇ ಸಾಲಿನಲ್ಲಿ ಕೆಳಕಂಡ ಯಾವ ಭಾಗದ 4 ಮತ್ತು 5ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ
ಸರಳ ರೀತಿಯಲ್ಲಿ ಗಣಿತ ಬೋಧನೆ ಸುಗಮಗೊಳಿಸಲುಅಕ್ಷರ ಗಣಿತ ಕಿಟ್'ಗಳನ್ನು ವಿತರಿಸಲಾಯಿತು?
A. ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ
B. ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ●
C. ಹಳೆ ಮೈಸೂರು ಭಾಗದ ಜಿಲ್ಲೆಗಳಿಗೆ
D. ಕರಾವಳಿ ಜಿಲ್ಲೆಗಳಿಗೆ


4. 2014-15ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಕೆಳಕಂಡ ಯಾವ ಅವಧಿಗಾಗಿ ಹೊಸ ಕೈಗಾರಿಕಾ
ನೀತಿಯನ್ನು ಜಾರಿಗೊಳಿಸಿತು?
A. 2014-16
B. 2014-17
C. 2014-19●
D. 2014-20


5. 2014-15ರಲ್ಲಿ ಸರ್ಕಾರ ನೂತನ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿತು. ಇದರನ್ವಯ
ಕೈಗಾರಿಕಾ ಬೆಳವಣಿಗೆಯ ದರವನ್ನು ಶೇ.12ರಷ್ಚನ್ನು ಕಾಯ್ದುಕೊಂಡು, ರಾಜ್ಯ ಜಿಡಿಪಿಗೆ ಉತ್ಪಾದನಾ ಕ್ಷೇತ್ರದ ಕೊಡುಗೆಯನ್ನು
ಶೇ.16.87ರಿಂದ ಶೇ.ಎಷ್ಟಕ್ಕೆ ಹೆಚ್ಚಿಸುವುದು ಗುರಿಯಾಗಿತ್ತು?
A. ಶೇ. 18
B. ಶೇ. 19
C. ಶೇ. 20●
D. ಶೇ. 22


6. ಪ್ರಸಕ್ತ ಬೆಲೆಗಳಲ್ಲಿನ ರಾಜ್ಯದ ನಿವ್ವಳ ಉತ್ಪನ್ನವನ್ನು ವಿತ್ತೀಯ ವರ್ಷದ ಯಾವ ಅವಧಿಯಲ್ಲಿ ಇರಬಹುದಾದ
ಅಂದಾಜು ಜನಸಂಖ್ಯೆಯಿಂದ ಭಾಗಿಸಿ ತಲಾ ಆದಾಯವನ್ನು ಲೆಕ್ಕ ಹಾಕಲಾಗುತ್ತದೆ?
A. ಏಪ್ರಿಲ್ 1
B. ಆಗಸ್ಟ್ 1
C. ಆಕ್ಟೋಬರ್ 1●
D. ನವೆಂಬರ್ 1


7. ರಾಜ್ಯದ ತೆರಿಗೆಯೇತರ ವರಮಾನ ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಅತ್ಯಂತ ಕಡಿಮೆ ಇದೆ.
ಕಳೆದ 2-3 ವರ್ಷಗಳಿಂದ ಅದು ಶೇಕಡಾ ಎಷ್ಟರ ಆಸುಪಾಸಿನಲ್ಲಿದೆಯೆಂದು ಕರ್ನಾಟಕ ಆರ್ಥಿಕ
ಸಮೀಕ್ಷೆ 2014-15ರಲ್ಲಿ ಹೇಳಲಾಗಿದೆ?
A. 1%●
B. 2%
C. 3%
D. 4%


8. 2014-15ನೇ ಸಾಲಿನಲ್ಲಿ ಒಟ್ಟು ಎಷ್ಟು ಹೊಸ ಕಾರ್ಯಕ್ರಮಗಳನ್ನು ಘೋಷಿಸಲಾಗಿತ್ತು?
A. 77
B. 87
C. 97●
D. 107


9. 2014-15ನೇ ಸಾಲಿನಲ್ಲಿ ಘೋಷಿಸಲಾದ ಹೊಸ ಕಾರ್ಯಕ್ರಮಗಳನ್ನು ಆಯಾ ಇಲಾಖೆವಾರು {ಅತಿ
ಹೆಚ್ಚು ದಿಂದ ಕಡಿಮೆ} ಪಟ್ಟಿ ಮಾಡಿ.
A. ಸಮಾಜ ಕಲ್ಯಾಣ ಇಲಾಖೆ
B. ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆ
C. ಕನ್ನಡ, ಕಲೆ ಮತ್ತು ಮಾಹಿತಿ●
D. ಯು.ಡಿ.ಡಿ


10. 2014-15ನೇ ಸಾಲಿನಲ್ಲಿ ವಿಶ್ವಬ್ಯಾಂಕ್ ಮತ್ತು ಇತರೆ ವಿದೇಶಿ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯದ
ಒಟ್ಟು ಎಷ್ಟು ಯೋಜನೆಗಳಿಗೆ 10762.39 ಕೋ.ರೂ.ಗಳ ಅನುದಾನ ದೊರಕಿದೆ?
A. 10
B. 12
C. 15●
D. 16


11. ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದ ಪ್ರಕಾರ, ಬೆಂಗಳೂರು ನಗರವು ಜಾಗತಿಕ ಮಾಹಿತಿ
ತಂತ್ರಜ್ಞಾನ ಮುಂಚೂಣಿಯಲ್ಲಿದ್ದು, ಸುಮಾರು ಎಷ್ಟು ಕಂಪನಿಗಳು ಇಲ್ಲಿ ಹೊರಗುತ್ತಿಗೆ ವಹಿವಾಟನ್ನು ನಡೆಸುತ್ತಿವೆ?
A. 200
B. 300
C. 400
D. 500●


12. IT/ITES ಸ್ಚಾರ್ಟ್ - ಅಪ್ಸ್ ಹಾಗೂ ಇತರೆಜ್ಞಾನಾಧಾರಿತ ಉದ್ದಿಮೆಗಳಿಗೆ 1964ರ ಕರ್ನಾಟಕ
ಕೈಗಾರಿಕಾ ಉದ್ಯೋಗ (ನಿಲುವು ಆದೇಶ) ನಿಯಮಗಳಿಂದ ಎಷ್ಟು ವರ್ಷಗಳ ವಿನಾಯ್ತಿ ನೀಡಲಾಗಿದೆ?
A. 2 ವರ್ಷ
B. 3 ವರ್ಷ
C. 5 ವರ್ಷ●
D. 10 ವರ್ಷ


13. ಕರ್ನಾಟಕವು ಸಾಫ್ಟವೇರ್/ಸೇವೆಗಳ ರಫ್ತಿನಲ್ಲಿ
ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು,
ಮಾರಾಟ ಸರಕು ರಫ್ತಿನಲ್ಲಿ ಎಷ್ಟನೇ ಸ್ಥಾನದಲ್ಲಿದೆ
ಎಂದು ಕ. ಆ. ಸ. 2014-15ರಲ್ಲಿ ತಿಳಿಸಲಾಗಿದೆ?
A. 2ನೇ
B. 3ನೇ
C. 4ನೇ●
D. 5ನೇ


14. ಗ್ರಾಮೀಣ ಆಶ್ರಯ/ ಬಸವ ವಸತಿ ಯೋಜನೆ
ಹಾಗೂ ಗ್ರಾಮೀಣ ಅಂಬೇಡ್ಕರ್
ಯೋಜನೆಯನ್ವಯ ಎಷ್ಟು ವಾರ್ಷಿಕ ಆದಾಯಕ್ಕಿಂತ
ಕಡಿಮೆ ಇರುವ ವಸತಿರಹಿತರಿಗೆ ವಸತಿ ಸೌಕರ್ಯ
ಕಲ್ಪಿಸಲಾಗುತ್ತಿದೆ?
A. 20,000ರೂ
B. 28,000ರೂ.
C. 32,000ರೂ.●
D. 40,000ರೂ


15. 2013-14ನೇ ಸಾಲಿನಿಂದ ಗ್ರಾಮೀಣ ವಸತಿ
ಯೋಜನೆಗಾಗಿ ಪ್ರತಿ ಮನೆಯ ಕನಿಷ್ಪ ಘಟಕ ವೆಚ್ಚವನ್ನು
ಎಷ್ಟೆಂದು ನಿಗದಿಪಡಿಸಲಾಯಿತು?
A. 1 ಲಕ್ಷ ರೂ.
B. 1.20 ಲಕ್ಷ ರೂ.
C. 1.50 ಲಕ್ಷ ರೂ.●
D. 2 ಲಕ್ಷ ರೂ.


16. ' ಕರ್ನಾಟಕ ರೂರಲ್ ಇನ್'ಫ್ರಾಸ್ಟ್ರಕ್ಚರ್
ಡೆವಲಪ್'ಮೆಂಟ್ ಲಿಮಿಟೆಡ್' 2013-14ನೇ ಸಾಲಿನಲ್ಲಿ
ರಾಜ್ಯ ಸರ್ಕಾರಕ್ಕೆ 2.45 ಕೋ.ರೂ.ಗಳ
ಲಾಭಾಂಶವನ್ನು ನೀಡಿತು. ಅಂದಹಾಗೆ ಈ ನಿಗಮ
ಆ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭವೆಷ್ಟು?
A. 59.22ಕೋ.ರೂ
B. 69.11ಕೋ.ರೂ.●
C. 79.31ಕೋ.ರೂ
D. 89.41ಕೋ.ರೂ


17. ಈಗ 'ಕರ್ನಾಟಕ ರೂರಲ್ ಇನ್'ಫ್ರಾಸ್ಟ್ರಕ್ಚರ್
ಡೆವಲಪ್'ಮೆಂಟ್ ಲಿಮಿಟೆಡ್' ಆಗಿರುವ 'ಕರ್ನಾಟಕ
ಭೂಸೇನಾ ನಿಗಮ' ಕರ್ನಾಟಕ ಸರ್ಕಾರದ
ಅಂಗಸಂಸ್ಥೆಯಾಗಿ ಯಾವ ವರ್ಷ
ಪ್ರಾರಂಭವಾಗಿತ್ತು ?
A. 1970
B. 1972
C. 1974●
D. 1976


18. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯನ್ವಯ 2014ರ
ಡಿಸೆಂಬರ್ ಅಂತ್ಯದ ತನಕ ಎಷ್ಟು ಕುಟುಂಬಗಳಿಗೆ
ಉದ್ಯೋಗ ನೀಡಲಾಗಿತ್ತೆಂದು ಕ. ಆ. ಸ.
2014-15ರಲ್ಲಿ ಹೇಳಲಾಗಿದೆ?
A. 6.56 ಲಕ್ಷ ಕುಟುಂಬಗಳಿಗೆ
B. 7.66 ಲಕ್ಷ ಕುಟುಂಬಗಳಿಗೆ
C. 8.26 ಲಕ್ಷ ಕುಟುಂಬಗಳಿಗೆ●
D. 9.76 ಲಕ್ಷ ಕುಟುಂಬಗಳಿಗೆ


19. ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (National Urban Livelihood Mission -
NULM ) ದನ್ವಯ ಎಷ್ಟು ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳು ಈ ಯೋಜನೆಯನ್ನು
ಅನುಷ್ಠಾನಗೊಳಿಸುವ ಅರ್ಹತೆ ಪಡೆದಿರುತ್ತವೆ?
A. 50,000 ಮೇಲ್ಪಟ್ಟು
B. 75,000 ಮೇಲ್ಪಟ್ಟು
C. 1 ಲಕ್ಷಕ್ಕಿಂತ ಹೆಚ್ಚು●
D. 2ಲಕ್ಷಕ್ಕಿಂತ ಹೆಚ್ಚು


20. 'ಭೂಚೇತನ ಪ್ಲಸ್' ಯೋಜನೆಯನ್ವಯ 2013-14ನೇ ಸಾಲಿನಿಂದ 2016-17ನೇ ಸಾಲಿನತನಕ
ಪ್ರಾಯೋಗಿಕವಾಗಿ ಕೆಳಕಂಡ ಯಾವ ಜಿಲ್ಲೆಗಳು ಆಯ್ಕೆಯಾಗಿವೆ ?
A. ತುಮಕೂರು
B. ರಾಯಚೂರು
C. ಚಿಕ್ಕಮಗಳೂರು
D. ವಿಜಯಪುರ


21. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರಲ್ಲಿ ತಿಳಿಸಿದ
ಪ್ರಕಾರ, ಕರ್ನಾಟಕದ ಜನಸಂಖ್ಯೆಯಲ್ಲಿ ಶೇಕಡಾ
ಎಷ್ಟು ಜನ ಕೆಲಸಗಾರರು?
A. ಶೇ.35.40
B. ಶೇ.40.50
C. ಶೇ.45.60●
D. ಶೇ.50.60


22. 2013-14ನೇ ಸಾಲಿನಲ್ಲಿ ರಾಜ್ಯದ ಒಟ್ಟು
ಮೀನು ಉತ್ಪಾದನೆ 5.55ಲಕ್ಷ ಟನ್'ಗಳಷ್ಟಿತ್ತು.
ಅಂದಹಾಗೆ ಇದು ದೇಶದ ರಾಷ್ಟ್ರೀಯ
ಮೀನು ಉತ್ಪಾದನೆಯ ಶೇಕಡಾವಾರು
ಪ್ರಮಾಣ ಎಷ್ಟು?
A. 2.3%
B. 3.8%
C. 4.6%
D. 5.8%●


23. 2013-14ನೇ ಸಾಲಿನಲ್ಲಿ ರಾಜ್ಯ ಸಮುದ್ರ
ಮೀನು ಉತ್ಪಾದನೆ ಹಾಗೂ ಒಳನಾಡು
ಮೀನು ಉತ್ಪಾದನೆಯಲ್ಲಿ ಕ್ರಮವಾಗಿ ಎಷ್ಟನೇ
ಸ್ಥಾನದಲ್ಲಿತ್ತು?
A. 5 ಹಾಗೂ 7
B. 6 ಹಾಗೂ 9●
C. 7 ಹಾಗೂ 9
D. 9 ಹಾಗೂ 6


24. 2012-13ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ
ಶಾಲೆ ತೊರೆಯುವವರ ಸಂಖ್ಯೆ 2.56 ಇತ್ತು. ಅದು
2013-14ನೇ ಸಾಲಿನಲ್ಲಿ ಎಷ್ಟಕ್ಕೆ ಕಡಿಮೆಯಾಯಿತು
ಅಥವಾ ಏರಿಕೆಯಾಯಿತು?
A. 1.96%
B. 2.16%
C. 2.96%●
D. 3.16%


25. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ 2001ರಲ್ಲಿ
1000ಕ್ಕೆ 41ಇದ್ದುದು 2013ನೇ ಸಾಲಿಗೆ ಶೇಕಡಾ
ಎಷ್ಟಕ್ಕೆ ಏರಿಕೆ ಅಥವಾ ಇಳಿಕಯಾಯಿತು?
A. 46
B. 51
C. 31●
D. 21


26. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15 ಪ್ರಕಾರ,
ರಾಜ್ಯದ ಜಿಲ್ಲಾವಾರು ಅತಿಹೆಚ್ಚು
ನಗರೀಕರಣಕ್ಕೊಳಗಾದ ಜಿಲ್ಲೆಗಳನ್ನು 1 - 4 ಈ
ಕ್ರಮದಲ್ಲಿ ದಾಖಲಿಸಿ.
A. ಧಾರವಾಡ
B. ಬೆಂಗಳೂರು
C. ದಕ್ಷಿಣ ಕನ್ನಡ
D. ಮೈಸೂರು
ಉತ್ತರ: BACD.


27. ರಾಜ್ಯದ ಒಟ್ಟು ಕೆಲಸಗಾರರಲ್ಲಿ ಪುರುಷ
ಹಾಗೂ ಮಹಿಳೆಯರ ಶೇಕಡಾವಾರು ಪ್ರಮಾಣ
ಕ್ರಮವಾಗಿ ಎಷ್ಟು ?
A. 50% ಹಾಗೂ 40%
B. 59% ಹಾಗೂ 31%●
C. 65% ಹಾಗೂ 25%
D. 60% ಹಾಗೂ 30%


28. ಕರ್ನಾಟಕದಲ್ವಿ 2011ರ ಜನಸಂಖ್ಯೆಯ ಪ್ರಕಾರ,
ಕುಟುಂಬಗಳ ಜನಸಂಖ್ಯೆಯಲ್ಲಿ ಶೇ.
28.41ರಷ್ಟು ಬೆಳವಣಿಗೆಯಾಗಿದ್ದು, ರಾಜ್ಯದ
ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ ಎಷ್ಟು
ಕುಟುಂಬಗಳು ಮಹಿಳಾಪ್ರಧಾನ
ಕುಟುಂಬಗಳಾಗಿವೆ ?
A. 10. 9%
B. 12. 8%
C. 14. 91%●
D. 15. 55%


29. ಮಹಿಳಾಪ್ರಧಾನ ಕುಟುಂಬಗಳ ಸಂಖ್ಯೆ
ಅಖಿಲಭಾರತ ಮಟ್ಟದಲ್ಲಿ ಶೇಕಡಾ ಎಷ್ಟು ಇದೆ?
A. 08.9%
B. 10.9%●
C. 12.9%
D. 15.3%


30. ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದ ಪ್ರಕಾರ,
ರಾಜ್ಯದಲ್ಲಿ ಜಾನುವಾರು ಸಾಂದ್ರತೆ ಪ್ರತಿ ಕಿ.
ಮೀ. ಗೆ 151. 21ರಷ್ಪಿದೆ. ಅಂದಹಾಗೆ ಪ್ರತಿ ಲಕ್ಷ
ಮನುಷ್ಯರಿಗೆ ಎಷ್ಟು ಜಾನುವಾರುಗಳಿವೆಯೆಂದು ಅದರಲ್ಲಿ ತಿಳಿಸಲಾಗಿದೆ?
A. 32,478
B. 37,488
C. 42,498
D. 47,468●


31. ಭಾರತದ ರಾಜ್ಯಗಳ ಪೈಕಿ ಕರ್ನಾಟಕ (2013-14ನೇ ಸಾಲಿನಲ್ಲಿ) ಹಾಲು ಉತ್ಪಾದನೆಯಲ್ಲಿ
ಎಷ್ಟನೇ ಸ್ಥಾನದಲ್ಲಿತ್ತು?
A. 7ನೇ
B. 9ನೇ
C.11ನೇ●
D.13ನೇ


32 2013-14ನೇ ಸಾಲಿನ ಅರಣ್ಯ ವರದಿಯ ಪ್ರಕಾರ,
ಕರ್ನಾಟಕ 43, 356.47 ಚ. ಕಿ. ಮೀ. ಅರಣ್ಯ
ಪ್ರದೇಶವನ್ನು ಹೊಂದಿದ್ದು, ಇದು ರಾಜ್ಯದ
ಭೌಗೋಳಿಕ ಪ್ರದೇಶದ ಶೇಕಡಾ ಎಷ್ಟು ?
A. 18.61%
B. 21.36%
C. 22.61%●
D. 23. 86%


33. ಕರ್ನಾಟಕದ ರಾಜ್ಯದ ಒಟ್ಟು ಅರಣ್ಯ
ಪ್ರದೇಶದಲ್ಲಿ ಮೀಸಲು ಅರಣ್ಯ ಪ್ರದೇಶದ
ಪ್ರಮಾಣ ಶೇಕಡಾ ಎಷ್ಟು?
A. 13.84%
B. 15.48%●
C. 16,67%
D. 17.87%


34. 2012-13ನೇ ಸಾಲಿನ ಜಿಲ್ಲಾ ತಲಾವಾರು
ಆದಾಯದಲ್ಲಿ ಕೆಳಕಂಡ ಜಿಲ್ಲೆಗಳನ್ನು 1 - 4 ಕ್ರಮದಲ್ಲಿ
ಬರೆಯಿರಿ.
A. ದಕ್ಷಿಣ ಕನ್ನಡ
B. ಕೊಡಗು
C. ಬೆಂಗಳೂರು ಗ್ರಾಮಾಂತರ
D. ಬೆಂಗಳೂರು ನಗರ
ಉತ್ತರ: DBCA


35. 2012-13ನೇ ಸಾಲಿನಲ್ಲಿ ಜಿಲ್ಲಾ ತಲಾವಾರು
ಆದಾಯದಲ್ಲಿ ಅತ್ಯಂತ ಕೊನೆಯ ಸ್ಥಾನದಲ್ಲಿದ್ದ
ಜಿಲ್ಲೆ ಯಾವುದು?
A. ರಾಯಚೂರು
B. ಕೊಪ್ಪಳ
C. ಯಾದಗಿರಿ●
D. ಹಾವೇರಿ


36. ಕರ್ನಾಟಕ ಆರ್ಥಿಕ ಸಮೀಕ್ಷೆ 2014-15ರ ಪ್ರಕಾರ, ಅತಿ
ಕಡಿಮೆ ನಗರೀಕರಣಗೊಂಡ ಜಿಲ್ಲೆಗಳನ್ನು ಕೆಳಗಿನಿಂದ
ಮೇಲಿನ ಕ್ರಮದಲ್ಲಿ ಬರೆಯಿರಿ.
A. ಯಾದಗೀರ
B. ಕೊಪ್ಪಳ
C. ಕೊಡಗು
D. ಮಂಡ್ಯ
E. ಚಾಮರಾಜನಗರ
ಉತ್ತರ: CBDEA
A. 19%
B. 17%
C. 15%
D. 17%
E. 17%


37. ಅತ್ಯಂತ ದಟ್ಟ ಅರಣ್ಯ ಹೊಂದಿದ
ಜಿಲ್ಲೆಗಳನ್ನು ಅತಿ ಹೆಚ್ಚು ವ್ಯಾಪ್ತಿಯಿಂದ ಕಡಿಮೆ
ವ್ಯಾಪ್ತಿ ಈ ಕ್ರಮದಲ್ಲಿ ಬರೆಯಿರಿ.
A. ದಕ್ಷಿಣ ಕನ್ನಡ
B. ಚಿಕ್ಕಮಗಳೂರು
C. ಶಿವಮೊಗ್ಗ
D. ಕೊಡಗು
ಉತ್ತರ: BADC
A. 253 ಚ. ಕಿ. ಮೀ.
B. 587 ಚ. ಕಿ. ಮೀ.
C. 205 ಚ. ಕಿ. ಮೀ.
D. 246 ಚ. ಕಿ. ಮೀ.


38. ಮಧ್ಯಮ ದಟ್ಟ ಅರಣ್ಯ ಹೊಂದಿದ
ಜಿಲ್ಲೆಗಳನ್ಪು ಅತಿಹೆಚ್ಚು ಚ. ಕಿ. ಮೀ ವ್ಯಾಪ್ತಿಯಿಂದ
ಕಡಿಮೆ ಚ. ಕಿ. ಮೀ. ಈ ಕ್ರಮದಲ್ಲಿ ಬರೆಯಿರಿ.
A. ಕೊಡಗು
B. ಉತ್ತರ ಕನ್ನಡ
C. ಶಿವಮೊಗ್ಗ
D. ಚಿಕ್ಕಮಗಳೂರು
ಉತ್ತರ : BCDA
A. 2142 ಚ. ಕಿ. ಮೀ
B. 5775 ಚ. ಕಿ. ಮೀ
C. 2008 ಚ. ಕಿ. ಮೀ
D. 2428 ಚ. ಕಿ. ಮೀ.


39. ಕೆಳಕಂಡ ರಾಷ್ಟ್ರೀಯ ಉದ್ಯಾನಗಳನ್ನು
ಅವುಗಳ ಚ. ಕಿ. ಮೀ. ವ್ಯಾಪ್ತಿಗನುಗುಣವಾಗಿ 1 - 4
ಕ್ರಮದಲ್ಲಿ ಬರೆಯಿರಿ.
A. ಮಲೈ ಮಹದೇಶ್ವರ ವನ್ನಧಾಮ
B. ಕಾವೇರಿ ವನ್ನಧಾಮ
C. ದಾಂಡೇಲಿ ವನ್ಯಧಾಮ
D. ಬಂಡೀಪುರ ರಾಷ್ಟ್ರೀಯ ಉದ್ಯಾನ
ಉತ್ತರ: BACD.
A. 906.187 ಚ. ಕಿ. ಮೀ.
B. 1027.53 ಚ. ಕಿ. ಮೀ.
C. 886.41 ಚ. ಕಿ. ಮೀ.
D. 872.24 ಚ. ಕಿ. ಮೀ..


40. ಡಿಸೆಂಬರ್ 2014ರ ತನಕ ಕೆಳಕಂಡ ಪ್ರವಾಸಿ ತಾಣಗಳಿಗೆ
ಭೇಟಿ ಕೊಟ್ಟ ಪ್ರವಾಸಿಗರ ಸಂಖ್ಯೆಗನುಣವಾಗಿ
ಕ್ರಮವಾಗಿ ಬರೆಯಿರಿ.
A. ನಾಗರಹೊಳೆ ರಾಷ್ಟ್ರೀಯ ಉದ್ಯಾನ
B. ಬಂಡಿಪುರ ರಾಷ್ಟ್ರೀಯ ಉದ್ಯಾನ
C. ರಂಗನತಿಟ್ಟು ಪಕ್ಷಿಧಾಮ
D. ಬ್ರಹ್ಮಗಿರಿ ವನ್ಯಜೀವಿ ಅಭಿಯಾರಣ್ಯ
ಉತ್ತರ: CBDA
A. 64, 768
B. 96, 888
C. 2, 46, 359
D. 96, 250


41. ಕರ್ನಾಟಕ 320ಕಿಮೀ. ಉದ್ದದ ಕರಾವಳಿ
ಹೊಂದಿದ್ದು, ಕೆಳಕಂಡ ಜಿಲ್ಲೆಗಳನ್ನು ಅವುಗಳು
ಹೊಂದಿದ ಕರಾವಳಿಯ ಉದ್ದಕ್ಕನುಗುಣವಾಗಿ
ಕ್ರಮವಾಗಿ ಬರಿಯಿರಿ.
A. ಉಡುಪಿ
B. ದಕ್ಷಿಣ ಕನ್ನಡ
C. ಉತ್ತರ ಕನ್ನಡ
ಉತ್ತರ: CAB
A. 098 ಕಿ. ಮೀ
B. 062
C. 160ಕಿ. ಮೀ


42. ರಾಜ್ಯ ಸರ್ಕಾರ ರೂಪಿಸಿದ ನೀತಿ ಹಾಗೂ
ವರ್ಷಕ್ಕೆ ಸಂಬಂಧಪಟ್ಟಂತೆ ಕೆಳಕಂಡವುಗಳಲ್ಲಿ
ಯಾವುದು/ಯಾವುವು ಸರಿ?
A. ಕರ್ನಾಟಕ ಕೈಗಾರಿಕಾ ನೀತಿ- 2014-19
B. ಕರ್ನಾಟಕ ಜವಳಿ ನೀತಿ - 2013
C. ಕರ್ನಾಟಕ ಅಂತರಿಕ್ಷಯಾನ ನೀತಿ - 2013
D. ಕರ್ನಾಟಕ ಐ4 ನೀತಿ - 2013
ಉತ್ತರ: ಎಲ್ಲವೂ ಸರಿ.


43. ಕರ್ನಾಟಕದಲ್ಲಿ ನೀರಾವರಿಗೆ ಕೆಳಕಂಡ
ಮೂಲಗಳನ್ನು ಅನುಸರಿಸಲಾಗುತ್ತಿದ್ದು, ಅವುಗಳ
ಬಳಕೆಯ ಪ್ರತಿಶತಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಕಾಲುವೆಗಳಿಂದ
B. ಕೆರೆಗಳಿಂದ
C. ಭಾವಿಗಳಿಂದ
D. ಕೊಳವೆ ಭಾವಿಗಳಿಂದ
ಉತ್ತರ : DACB.
A. 34. 24%
B. 05. 17%
C. 12. 30%
D. 37. 15%


44. 2013-14ರ ಕೈಗಾರಿಕಾ ಉತ್ಪಾದನಾ
ಸಾಮಾನ್ಯ ಸೂಚ್ಯಂಕ 175.79 ಆಗಿತ್ತು. ಇದು
ಹಿಂದಿನ ವರ್ಷಕ್ಕೆ ಹೋಲಿಸಿದರೆ ಎಷ್ಟು ಶೇಕಡಾ
ವಾರ್ಷಿಕ ಬೆಳವಣಿಗೆಯಾಗಿದೆ?
A. 2.65%
B. 3.66%●
C. 4.22%
D. 5.33%


45. 2014ರಲ್ಲಿ ಕರ್ನಾಟಕ 608.81 ಕೋ. ರೂ. ಗಳ
ರೇಷ್ಮೆ ವಸ್ತುಗಳ ರಫ್ತು ವಹಿವಾಟು ನಡೆಸಿದ್ದು,
ಇದು ದೇಶದ ಶೇಕಡಾವಾರು ಪ್ರಮಾಣ
ಎಷ್ಟು?
A. 15.24%
B. 24.54%●
C. 34.34%
D. 44.64%


46. 2013-14ರನ್ವಯ ದಕ್ಷಿಣದ ರಾಜ್ಯಗಳಲ್ಲಿ ತಮ್ಮ
ಭೌಗೋಳಿಕ ಪ್ರದೇಶಕ್ಕನುಗುಣವಾಗಿ ಅತಿಹೆಚ್ಚು
ದಿಂದ ಅತಿ ಕಡಿಮೆ ಅರಣ್ಯ ವ್ಯಾಪ್ತಿ ಹೊಂದಿದ
ರಾಜ್ಯಗಳನ್ನು ಕ್ರಮವಾಗಿ ಬರೆಯಿರಿ.
A. ಕರ್ನಾಟಕ
B. ಕೇರಳ
C. ತಮಿಳುನಾಡು
D. ಆಂಧ್ರಪ್ರದೇಶ
BACD
A. 18. 84%
B. 46. 12%
C. 18. 33%
D. 16. 77%


47. ರಾಜ್ಯ ಸರ್ಕಾರ ಕೆಳಕಂಡ ಯಾವ ವರ್ಷದಿಂದ
ಯಾವ ವರ್ಷಕ್ಕೆ ಅನ್ವಯಿಸುವಂತೆ ಸೌರನೀತಿಯನ್ನು
ಘೋಷಿಸಿತ್ತು?
A. 2010 - 2015
B. 2011 - 2016●
C. 2012 - 2017
D. 2013 - 2018


48. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ
2001ರಲ್ಲಿ 7ನೇ ಸ್ಥಾನದಲ್ಲಿತ್ತು. 2011ರಲ್ಲಿ ಅದರ
ಸ್ದಾನ ಎಷ್ಟು?
A. 6ನೇ
B. 8ನೇ
C. 10ನೇ●
D. 12ನೇ


49. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣದ
ರಾಜ್ಯಗಳನ್ನು ಅವು ಹೊಂದಿದ
ಸ್ಥಾನಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಆಂಧ್ರಪ್ರದೇಶ
B. ಕೇರಳ
C. ತಮಿಳುನಾಡು
D. ಕರ್ನಾಟಕ
ಉತ್ತರ: BCDA.


50. ಕರ್ನಾಟಕದ ಸಾಕ್ಷರತಾ ಪ್ರಮಾಣ 2001ರಲ್ಲಿ
66.64ರಷ್ಟಿತ್ತು. 2011ರಲ್ಲಿ ಅದರ ಪ್ರಮಾಣ ಎಷ್ಟಿತ್ತು?
A. 68.80%
B. 72.67%
C. 75.60%●
D. 78.79%


51. ಕರ್ನಾಟಕದಲ್ಲಿ 2011ರಲ್ಲಿದ್ದ ಪುರುಷ ಹಾಗೂ
ಮಹಿಳೆಯರ ಸಾಕ್ಷರತಾ ಪ್ರಮಾಣ ಕ್ರಮವಾಗಿ ಎಷ್ಟು?
A. 80 ಮತ್ತು 70
B. 82 ಮತ್ತು 68
C. 85 ಮತ್ತು 61●
D. 90 ಮತ್ತು 60


52. ರಾಜ್ಯದ ವಿದ್ಯುತ್ ಗ್ರಾಹಕರಿಗೆ ಲಭಿಸುತ್ತಿರುವ
ವಿವಿಧ ಮೂಲದ ವಿದ್ಯುತ್ ಉತ್ಪಾದನೆಯನ್ನು
ಅವುಗಳ ಉತ್ಪಾದನೆ ಗನುಗುಣವಾಗಿ
ಶೇಕಡಾವಾರು ಲೆಕ್ಕದಲ್ಲಿ ಕ್ರಮವಾಗಿ ಬರೆಯಿರಿ.
A. ರಾಜ್ಯದಲ್ವಿ ಉತ್ಪಾದನೆ - ಜಲವಿದ್ಯುತ್
B. ಶಾಖೋತ್ಪನ್ನ ಮೂಲದಿಂದ
C. ಖಾಸಗಿ ಕ್ಷೇತ್ರದಿಂದ
D. ಕೇಂದ್ರೀಯ ಉತ್ಪಾದನಾ ಘಟಕದ ಪಾಲು
CADB
A. 25%
B. 18%
C. 34%
D. 19%


53. ವಿದ್ಯುತ್ ಪ್ರಸರಣ ಮತ್ತು ವಿತರಣಾ ನಷ್ಟ
2004-05ರಲ್ಲಿ 27.5ರಷ್ಟಿತ್ತು. ಅದು 2013-14ನೇ
ಸಾಲಿನಷ್ಟೊತ್ತಿಗೆ ಶೇಕಡಾ ಎಷ್ಟಕ್ಕೆ ತಗ್ಗಿದೆ ?
A. 23.9%
B. 21.6%
C. 19.7%●
D. 18.6%


54. ರಾಜ್ಯದಲ್ಲಿ ವಿದ್ಯುತ್ ಬಳಕೆಯ ಕುರಿತಂತೆ
ಕೆಳಕಂಡ ಕ್ಷೇತ್ರಗಳನ್ನು ಅವು ಬಳಸಿದ
ಶೇಕಡಾವಾರು ಕ ವಿದ್ಯುತ್
ಪ್ರಮಾಣಕ್ಕನುಗುಣವಾಗಿ ಕ್ರಮವಾಗಿ ಬರೆಯಿರಿ.
A. ಕೈಗಾರಿಕೆಗಳು
B. ಗೃಹಬಳಕೆ
C. ನೀರಾವರಿ ಪಂಪ್'ಸೆಟ್
D. ವಾಣಿಜ್ಯ ದೀಪಗಳು
CBAD
A. 18. 08%
B. 20. 35%
C. 33. 53%
D. 12. 22%


55. 2014ರ ಮಾರ್ಚ್'ತನಕ ರಾಜ್ಯದಲ್ಲಿ ಎಷ್ಟು
ವಾಣಿಜ್ಯ ಬ್ಯಾಂಕುಗಳು ಹಾಗೂ
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು
ಕಾರ್ಯನಿರ್ವಹಿಸುತ್ತಿದ್ದವು?
A. 6578 ಮತ್ತು 1487
B. 6876 ಮತ್ತು 1547●
C. 7686 ಮತ್ತು 1676
D. 8676 ಮತ್ತು 1878

(Courtesy : ಸಾಮಾನ್ಯ ಜ್ಞಾನ ಜಿಕೆ)

☀2015ರಲ್ಲಿ ನಡೆದ ಜಗತ್ಪ್ರಸಿದ್ಧ ಪ್ರಮುಖ ಓಪನ್ ಟೆನಿಸ್ ಚಾಂಪಿಯನ್ಸಿಪ್ ಗಳು : (World Famous Open Tennis Championship -2015)

☀2015ರಲ್ಲಿ ನಡೆದ ಜಗತ್ಪ್ರಸಿದ್ಧ ಪ್ರಮುಖ ಓಪನ್ ಟೆನಿಸ್ ಚಾಂಪಿಯನ್ಸಿಪ್ ಗಳು :
(World Famous Open Tennis Championship -2015)
━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


1] 2015ರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್ಸಿಪ್ :
(Australian Open Tennis Championship -2015)
━━━━━━━━━━━━━━━━━━━━━━━━━━━━━━━━━━━━━━
 ■. ಪಂದ್ಯ ನಡೆಯುವ ಸ್ಥಳ:••┈┈┈┈•• ಮೆಲ್ಬೊರ್ನ್ ಪಾರ್ಕ್ ನಲ್ಲಿ
 ■. ಸ್ಥಾನ:••┈┈┈┈•• ಆಸ್ಟ್ರೇಲಿಯಾದ ಮೆಲ್ಬರ್ನ್ನ್
 ■. ಸರ್ಫೇಸ್:••┈┈┈┈•• ಹಾರ್ಡ್ ಹೊರಾಂಗಣ

●.2015 ಚಾಂಪಿಯನ್ಸ್:
••┈┈┈┈┈┈┈┈┈┈┈┈┈┈••
 ■. ಪುರುಷರ ಸಿಂಗಲ್ಸ್:••┈┈┈┈•• ನೊವಾಕ್ ಜೊಕೊವಿಕ್ (SRB)
 ■. ಪುರುಷರ ಡಬಲ್ಸ್:••┈┈┈┈•• ಸಿಮೊನ್ ಬೊಲೆಲಿ / ಫ್ಯಾಬಿಯೊ ಫೊಗ್ ನಿನಿ (ITA)
 ■. ಮಹಿಳೆಯರ ಸಿಂಗಲ್ಸ್:••┈┈┈┈•• ಸೆರೆನಾ ವಿಲಿಯಮ್ಸ್ (ಅಮೇರಿಕಾ)
 ■. ಮಹಿಳೆಯರ ಡಬಲ್ಸ್:••┈┈┈┈•• ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜೋಡಿ (USA) / ಲೂಸೀ ಸಫರೊವಾ (CZE)
 ■. ಮಿಶ್ರ ಡಬಲ್ಸ್:••┈┈┈┈•• ಮಾರ್ಟಿನಾ ಹಿಂಗಿಸ್ (SWI) / ಲಿಯಾಂಡರ್ ಪೇಸ್ (INDIA)

••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

2] 2015ರ ಪ್ರೆಂಚ್ ಓಪನ್ ಟೆನಿಸ್ ಚಾಂಪಿಯನ್ಸಿಪ್ :
(French Open Tennis Championship -2015)
━━━━━━━━━━━━━━━━━━━━━━━━━━━━━━━━
 ■. ಪಂದ್ಯ ನಡೆಯುವ ಸ್ಥಳ:••┈┈┈┈•• ರೊಲ್ಯಾಂಡ್ ಗ್ಯಾರೋಸ್ನಲ್ಲಿ
 ■. ಸ್ಥಾನ:••┈┈┈┈•• ಪ್ಯಾರಿಸ್, ಫ್ರಾನ್ಸ್
 ■. ಸರ್ಫೇಸ್:••┈┈┈┈•• ಹೊರಾಂಗಣ ಕೆಂಪು ಜೇಡಿ ಮಣ್ಣಿನ

●.2015 ಚಾಂಪಿಯನ್ಸ್ :
••┈┈┈┈┈┈┈┈┈┈┈┈┈┈••
 ■. ಪುರುಷರ ಸಿಂಗಲ್ಸ್:••┈┈┈┈•• ಸ್ಟಾನ್ ವಾವ್ರಿಂಕಾ (SWI)
 ■. ಪುರುಷರ ಡಬಲ್ಸ್:••┈┈┈┈•• ಇವಾನ್ ಡುಡಿಗ್ (CRO) / ಮರ್ಸೆಲೊ ಮೆಲೊ (BRA)
 ■. ಮಹಿಳೆಯರ ಸಿಂಗಲ್ಸ್:••┈┈┈┈•• ಸೆರೆನಾ ವಿಲಿಯಮ್ಸ್ (ಅಮೇರಿಕಾ)
 ■. ಮಹಿಳೆಯರ ಡಬಲ್ಸ್:••┈┈┈┈•• ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜೋಡಿ (USA) / ಲೂಸೀ ಸಫರೊವಾ (CZE)
 ■. ಮಿಶ್ರ ಡಬಲ್ಸ್:••┈┈┈┈•• ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಜೋಡಿ / ಮೈಕ್ ಬ್ರ್ಯಾನ್ (ಅಮೇರಿಕಾ)

••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

3] 2015ರ ವಿಂಬಲ್ಡನ್ ಚಾಂಪಿಯನ್ಸಿಪ್ :
(Wimbledon Open Tennis Championship -2015)
━━━━━━━━━━━━━━━━━━━━━━━━━━━━━━━━━━━━━━
 ■. ಪಂದ್ಯ ನಡೆಯುವ ಸ್ಥಳ:••┈┈┈┈•• ಆಲ್ ಇಂಗ್ಲೆಂಡ್ ಲಾನ್ ಟೆನಿಸ್ & ಕ್ರಾಕೆಟ್ ಕ್ಲಬ್
 ■. ಸ್ಥಾನ:••┈┈┈┈•• ವಿಂಬಲ್ಡನ್, ಲಂಡನ್, ಇಂಗ್ಲೆಂಡ್
 ■. ಸರ್ಫೇಸ್:••┈┈┈┈•• ಹೊರಾಂಗಣ ಹುಲ್ಲುಗಾವಲು

●.2015 ಚಾಂಪಿಯನ್ಸ್ :
••┈┈┈┈┈┈┈┈┈┈┈┈┈┈••
 ■. ಪುರುಷರ ಸಿಂಗಲ್ಸ್:••┈┈┈┈•• ನೊವಾಕ್ ಜೊಕೊವಿಕ್ (SRB)
 ■. ಪುರುಷರ ಡಬಲ್ಸ್:••┈┈┈┈•• ಜೀನ್-ಜೂಲಿಯನ್ ರೋಜರ್ (NED) / ಹೊರಿಯಾ ತೆಕಾವೂ (Rou)
 ■. ಮಹಿಳೆಯರ ಸಿಂಗಲ್ಸ್:••┈┈┈┈•• ಸೆರೆನಾ ವಿಲಿಯಮ್ಸ್ (ಅಮೇರಿಕಾ)
 ■. ಮಹಿಳೆಯರ ಡಬಲ್ಸ್:••┈┈┈┈•• ಮಾರ್ಟಿನಾ ಹಿಂಗಿಸ್ (SWI) / ಸಾನಿಯಾ ಮಿರ್ಜಾ (ಭಾರತ)
 ■. ಮಿಶ್ರ ಡಬಲ್ಸ್:••┈┈┈┈•• ಮಾರ್ಟಿನಾ ಹಿಂಗಿಸ್ (SWI) / ಲಿಯಾಂಡರ್ ಪೇಸ್ (ಭಾರತ)

••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

4] 2015ರ ಯುಎಸ್ ಓಪನ್ ಟೆನಿಸ್ ಚಾಂಪಿಯನ್ಸಿಪ್ :
(US Open Tennis Championship -2015)
━━━━━━━━━━━━━━━━━━━━━━━━━━━━━━━━━
 ■. ಸ್ಥಳ:••┈┈┈┈•• ಕ್ವೀನ್ಸ್ ನ್ಯೂಯಾರ್ಕ್, ಯುಎಸ್ಎ
 ■. ಸರ್ಫೇಸ್:••┈┈┈┈•• ಹೊರಾಂಗಣ ಹಾರ್ಡ್ (DecoTurf)

●.2015 ಚಾಂಪಿಯನ್ಸ್ :
••┈┈┈┈┈┈┈┈┈┈┈┈┈┈••
 ■. ಪುರುಷರ ಸಿಂಗಲ್ಸ್:••┈┈┈┈•• ನೊವಾಕ್ ಜೊಕೊವಿಕ್ (SRB)
 ■. ಪುರುಷರ ಡಬಲ್ಸ್:••┈┈┈┈•• ಪಿಯರ್-ಹ್ಯೂಗ್ಸ್ ಹರ್ಬರ್ಟ್ / ನಿಕೋಲಸ್ ಮಹುತ್ (R)
 ■. ಮಹಿಳೆಯರ ಸಿಂಗಲ್ಸ್:••┈┈┈┈•• ಫ್ಲೇವಿಯಾ ಪೆನ್ನೆಟಾ (ITA)
 ■. ಮಹಿಳೆಯರ ಡಬಲ್ಸ್:••┈┈┈┈•• ಮಾರ್ಟಿನಾ ಹಿಂಗಿಸ್ (SWI) / ಸಾನಿಯಾ ಮಿರ್ಜಾ (ಭಾರತ)
 ■. ಮಿಶ್ರ ಡಬಲ್ಸ್:••┈┈┈┈•• ಮಾರ್ಟಿನಾ ಹಿಂಗಿಸ್ (SWI) / ಲಿಯಾಂಡರ್ ಪೇಸ್ (ಭಾರತ)

Saturday, 24 October 2015

☀‘ಭಾರತಿ’ ಅಂಟಾರ್ಟಿಕಾ ಸಂಶೋಧನಾ ಕೇಂದ್ರ : ('Bharati': The Research Station in Antarctica)

☀‘ಭಾರತಿ’ ಅಂಟಾರ್ಟಿಕಾ ಸಂಶೋಧನಾ ಕೇಂದ್ರ :
('Bharati': The Research Station in Antarctica)
━━━━━━━━━━━━━━━━━━━━━━━━━━━━━

●.ಸಾಮಾನ್ಯ ಅಧ್ಯಯನ
(General Studies)

●.ಸಾಮಾನ್ಯ ವಿಜ್ಞಾನ
(General Science)


●.'ಭಾರತಿ':
••┈┈┈┈┈••
■. ಮೊದಲ ನೋಟದಲ್ಲಿ ಅಂತರಿಕ್ಷ ಕೇಂದ್ರದಂತೆ ಕಾಣುತ್ತಿರುವ ಮತ್ತು ತನ್ನ ರಚನೆಯಿಂದಲೇ ಎಲ್ಲರನ್ನೂ ಸೆಳೆಯುತ್ತಿರುವ ನೂತನ ಸಂಶೋಧನಾ ಕೇಂದ್ರವೊಂದನ್ನು ಭಾರತವು ಅಂಟಾರ್ಟಿಕಾ ಖಂಡದಲ್ಲಿ ಸ್ಥಾಪಿಸಿದೆ.
■. ಅಂಟಾಟಿಕಾ ಖಂಡದಲ್ಲಿ ಸ್ಥಾಪಿಸುತ್ತಿರುವ ಮೂರನೇ ಸಂಶೋಧನಾ ಕೇಂದ್ರ ಇದಾಗಿದೆ.
■. ಅಂಟಾರ್ಟಿಕಾ ಖಂಡದಲ್ಲಿ 52 ದೇಶಗಳು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಲ್ಲಿ ವಿವಿಧ ಸಂಶೋಧನೆಗಳನ್ನು ನಡೆಸುತ್ತಿದೆ.
■. ಭಾರತವು ಸಹ ಮೊದಲ ಬಾರಿಗೆ 1983-84ರಲ್ಲಿ ಅಂಟಾರ್ಟಿಕಾದ ದಕ್ಷಿಣ ಗಂಗೋತ್ರಿಯಲ್ಲಿ ತನ್ನ ಮೊದಲ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿತ್ತು. ಆದರೆ ಸಮುದ್ರ ಮಟ್ಟ ಹೆಚ್ಚಾದ ಕಾರಣ 1989ರಲ್ಲಿ ಅದು ನೀರಿನಲ್ಲಿ ಮುಳುಗಡೆ ಆಯಿತು.
■. ಆ ನಂತರ ಭಾರತವು ‘ಮೈತ್ರಿ’ ಎಂಬ ಸಂಶೋಧನಾ ಕೇಂದ್ರವನ್ನು 1990ರಲ್ಲಿ ಸ್ಥಾಪಿಸಿತು.
■. ಅಂಟಾರ್ಟಿಕಾ ಮತ್ತು ಸಾಗರ ಸಂಶೋಧನಾ ರಾಷ್ಟ್ರೀಯ ಕೇಂದ್ರ (ಎನ್​ಸಿಎಒಆರ್) ಈ ಕೇಂದ್ರವನ್ನು ನಿರ್ವಹಿಸುತ್ತಿದೆ.


☀‘ಭಾರತಿ’ ಸಂಶೋಧನಾ ಕೇಂದ್ರದ ಕಾರ್ಯ ಯೋಜನೆ :
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
■. ಭಾರತವು ಹೊಸದಾಗಿ ‘ಭಾರತಿ’ ಎಂಬ ಸಂಶೋಧನಾ ಕೇಂದ್ರದ ನಿರ್ಮಾಣ ಕಾರ್ಯವನ್ನು 2009ರಲ್ಲಿ ಪ್ರಾರಂಭಿಸಿತು. ಈ ಕೇಂದ್ರವು 2013ರಲ್ಲಿ ತನ್ನ ಕಾರ್ಯವನ್ನು ಪ್ರಾರಂಭಿಸಿತು.
■. ಈ ಸಂಶೋಧನಾ ಕೇಂದ್ರದಲ್ಲಿ ಹಿಮಾವೃತ ಭೂಭಾಗ ಮತ್ತು ಮಂಜುಗಡ್ಡೆಯ ಕುರಿತು ಸಂಶೋಧನೆ ನಡೆಸಲಾಗುತ್ತಿದೆ.
■. ಹವಾಮಾನ ವೈಪರೀತ್ಯದ ಕುರಿತು ಸಂಶೋಧನೆ ಸಹ ನಡೆಸಲಾಗುತ್ತಿದೆ.
■. ಹೊಸ ಕೇಂದ್ರವು ಅಂಟಾರ್ಟಿಕಾದ ತೀರ ಪ್ರದೇಶದಲ್ಲಿ ಈ ಪ್ರದೇಶದಲ್ಲಿ -40 ಡಿಗ್ರಿ ತಾಪಮಾನವಿರುತ್ತದೆ ಮತ್ತು ಸುಮಾರು 200 ಮೈಲಿ ಪ್ರತಿ ಕಿ.ಮೀ. ವೇಗದಲ್ಲಿ ಹಿಮಗಾಳಿ ಬೀಸುತ್ತಿರುತ್ತದೆ. ಇಂತಹ ಪ್ರತಿಕೂಲ ಹವಾಮಾನದಲ್ಲೂ ಸಹ ಭಾರತೀಯ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ತೊಡಗಿದ್ದಾರೆ.

(Courtesy : Vijayavani Newspaper)

☀ಪಿ.ಎಸ್.ಎಲ್.ವಿ (PSLV) : (Polar Satellite Launch Vehicle) 

☀ಪಿ.ಎಸ್.ಎಲ್.ವಿ (PSLV) :
(Polar Satellite Launch Vehicle)
━━━━━━━━━━━━━━━━━━━━━━━━━

●.ಸಾಮಾನ್ಯ ಅಧ್ಯಯನ
(General Studies)

●.ಸಾಮಾನ್ಯ ವಿಜ್ಞಾನ
(General Science)


ನಾವು ಯಾವುದಾದರೂ ವಸ್ತುಗಳನ್ನು / ಜನರನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸಾಗಿಸಬೇಕಾದರೆ ವಾಹನಗಳು ಬೇಕಾಗುತ್ತದೆ. ಅದೇ ರೀತಿ ಕೃತಕ ಉಪಗ್ರಹಗಳನ್ನು ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಲು ರಾಕೆಟ್ ಉಡಾವಣಾ ವಾಹನಗಳನ್ನು ಬಳಸುತ್ತಾರೆ.

●.ಉಪಗ್ರಹಗಳನ್ನು ಉಡಾಯಿಸಲು ಎರಡು ರೀತಿಯ ಉಡಾವಣಾ ವಾಹನಗಳನ್ನು ಬಳಸುತ್ತದೆ,
■. ಧ್ರುವ (ಪೋಲಾರ್) ಉಪಗ್ರಹ ಉಡಾವಣಾ ವಾಹನಗಳು (ಪಿ.ಎಸ್.ಎಲ್.ವಿ) ಮತ್ತು
■. ಭೂಸ್ಥಿರ ಕಕ್ಷಾ (ಜಿಯೊಸ್ಟೇಶನರಿ) ಉಪಗ್ರಹ ಉಡಾವಣಾ ವಾಹನಗಳು (ಜಿ.ಎಸ್.ಎಲ್.ವಿ).

●.ಈ ಉಡಾವಣಾ ವಾಹನವೂ ಭಾರತದ 32 ಮತ್ತು ವಿದೇಶದ 35 ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಿದೆ. 1993ರ ಸೆಪ್ಟೆಂಬರ್ 20ರಂದು ಐ.ಆರ್.ಎಸ್.-1ಇ ಉಪಗ್ರಹವನ್ನು ಉಡಾವಣೆ ಮಾಡುವಾಗ ವಿಫಲಗೊಂಡಿದ್ದು ಬಿಟ್ಟರೆ ಇದುವರೆಗೂ ಪಿ.ಎಸ್.ಎಲ್.ವಿಯೂ ಸತತವಾಗಿ 27 ಬಾರಿ ಯಶಸ್ವಿ ಫಲಿತಾಂಶವನ್ನು ಕೊಟ್ಟಿದೆ.

●.ಈ ವಾಹನದಲ್ಲಿ ಉಡಾವಣೆಯಾದ ಪ್ರಮುಖ ಯೋಜನೆಗಳು ಚಂದ್ರಯಾನ-1 ಮತ್ತು ಮಂಗಳಯಾನ ಯೋಜನೆ.


●.ಉಡಾವಣಾ ವಾಹನದ ಸಾಮರ್ಥ್ಯ :
••┈┈┈┈┈┈┈┈┈┈┈┈┈┈┈┈┈┈┈••
ಈ ಉಡಾವಣಾ ವಾಹನವೂ 620 ಕಿ. ಮೀ. ಸೂರ್ಯ ಸಮಕಾಲಿಕ ಧ್ರುವಿಯ ಕಕ್ಷೆಯಲ್ಲಿ (ಸನ್ ಸಿಂಕ್ರೊನಸ್ ಪೋಲಾರ್ ಆರ್ಬಿಟ್) 1600 ಕಿ. ಗ್ರಾಂ. ತೂಕದ ಉಪಗ್ರಹವನ್ನು ಮತ್ತು ಭೂ ಸಮಕಾಲಿಕ ವರ್ಗಾವಣೆ ಕಕ್ಷೆಯಲ್ಲಿ(ಜಿಯೋ ಸಿಂಕ್ರೊನಸ್ ಟ್ರಾನ್ಸ್​ಫರ್ ಆರ್ಬಿಟ್) 1050 ಕಿ. ಗ್ರಾಂ. ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.


●.ಉಡಾವಣಾ ವಾಹನದ ಉದ್ದ:
••┈┈┈┈┈┈┈┈┈┈┈┈┈┈••
ಈ ವಾಹನದ ಉದ್ದ 44.4 ಮೀ. ಮತ್ತು ಉಡಾವಣೆಯ ತೂಕ 295 ಟನ್​ಗಳು.


●. ಉಡಾವಣಾ ಹಂತಗಳು :
••┈┈┈┈┈┈┈┈┈┈┈┈┈┈••
■. ಬಹುಹಂತೀಯವಾಗಿ ನಿರ್ವಿುಸಲಾಗಿರುವ ಈ ವಾಹನವೂ ಮೇಲೇರುತ್ತಾ ಒಂದೊಂದೇ ಹಂತ ಉರಿಯುತ್ತ ಕಳಚಿಬೀಳುತ್ತ ಹೋಗುತ್ತದೆ. ವ್ಯೋಮನೌಕೆಯ ರೀತಿ ಇವುಗಳನ್ನು ಮರುಬಳಕೆ ಮಾಡಲಾಗುವುದಿಲ್ಲ.
■. ಈ ವಾಹನವೂ ಸರತಿ ಪ್ರಕಾರವಾಗಿ ನಾಲ್ಕು ಹಂತಗಳ ಘನ ಮತ್ತು ದ್ರವನೋದನ (ಪ್ರಾಪಲ್ಷನ್) ವ್ಯವಸ್ಥೆಯನ್ನು ಹೊಂದಿದೆ.
■. ಮೊದಲ ಹಂತವೂ ಪ್ರಪಂಚದಲ್ಲೇ ದೊಡ್ಡದಾದ ಘನನೋದಕ (ಪ್ರಾಪೆಲಂಟ್) ಬೂಸ್ಟರ್ ವ್ಯವಸ್ಥೆಯನ್ನು ಹೊಂದಿದೆ. ಇದು 139 ಟನ್ ನೋದಕವನ್ನು ತುಂಬುವ ಸಾಮರ್ಥ್ಯವನ್ನು ಹೊಂದಿದೆ.


●.ಪಿ.ಎಸ್.ಎಲ್.ವಿ. ಉಡಾವಣಾ ವಾಹನದ ಮೈಲಿಗಲ್ಲುಗಳು :
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

1 - ಉಪಗ್ರಹದ ಹೆಸರು - ಐ.ಆರ್.ಎಸ್.-1ಇ
■. ಉಡಾವಣಾ ದಿನಾಂಕ - 20-09-1993
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ1


2 -ಉಪಗ್ರಹದ ಹೆಸರು - ಐ.ಆರ್.ಎಸ್.-ಪಿ2
■. ಉಡಾವಣಾ ದಿನಾಂಕ - 15-10-1994
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ2


3 -ಉಪಗ್ರಹದ ಹೆಸರು - ಐ.ಆರ್.ಎಸ್.-ಪಿ3
■. ಉಡಾವಣಾ ದಿನಾಂಕ - 21-03-1996
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಡಿ3


4 -ಉಪಗ್ರಹದ ಹೆಸರು - ಐ.ಆರ್.ಎಸ್.-1ಡಿ
■. ಉಡಾವಣಾ ದಿನಾಂಕ - 29-09-1997
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ1


5 -ಉಪಗ್ರಹದ ಹೆಸರು - ಓಶನ್​ಸ್ಯಾಟ್ (ಐ.ಆರ್.ಎಸ್-ಪಿ.4), ಕಿಟ್​ಸ್ಯಾಟ್-3, ಡಿಎಲ್​ಆರ್-ಟಬ್​ಸ್ಯಾಟ್
■. ಉಡಾವಣಾ ದಿನಾಂಕ - 26-05-1999
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ2


6 -ಉಪಗ್ರಹದ ಹೆಸರು - ಟೆಕ್ನಾಲಜಿ ಎಕ್ಸ್​ಪರಿಮೆಂಟ್ ಸ್ಯಾಟ್​ಲೈಟ್ (ಟಿ.ಇ.ಎಸ್.)
■. ಉಡಾವಣಾ ದಿನಾಂಕ - 22-10-2001
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ3


7 -ಉಪಗ್ರಹದ ಹೆಸರು - ಕಲ್ಪನಾ-1 (ಮೆಟ್​ಸ್ಯಾಟ್)
■. ಉಡಾವಣಾ ದಿನಾಂಕ - 12-09-2002
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ4


8 -ಉಪಗ್ರಹದ ಹೆಸರು - ರಿಸೋರ್ಸ್​ಸ್ಯಾಟ್-1 (ಐ.ಆರ್.ಎಸ್.-ಪಿ6)
■. ಉಡಾವಣಾ ದಿನಾಂಕ - 17-10-2003
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ5


9 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-1, ಹ್ಯಾಮ್್ಯಾಟ್
■. ಉಡಾವಣಾ ದಿನಾಂಕ - 05-05-2005
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ6


10 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2, ಎಸ್.ಆರ್.ಇ.-1 ಇನ್ನೂ ಎರಡು ಇತರೆ ಉಪಗ್ರಹ
■. ಉಡಾವಣಾ ದಿನಾಂಕ - 10-01-2007
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ7


11 -ಉಪಗ್ರಹದ ಹೆಸರು - ಅಗಿಲೆ
■. ಉಡಾವಣಾ ದಿನಾಂಕ - 23-04-2007
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ8


12 -ಉಪಗ್ರಹದ ಹೆಸರು - ಟೆಕ್​ಸಾರ್
■. ಉಡಾವಣಾ ದಿನಾಂಕ - 23-01-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ10


13 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2ಎ, ಐ.ಎಮ್​ಎಸ್.-1 ಮತ್ತು ಎಂಟು ನ್ಯಾನೋ ಉಪಗ್ರಹ
■. ಉಡಾವಣಾ ದಿನಾಂಕ - 28-04-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ9


14 -ಉಪಗ್ರಹದ ಹೆಸರು - ಚಂದ್ರಯಾನ-1
■. ಉಡಾವಣಾ ದಿನಾಂಕ - 22-10-2008
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ11


15 -ಉಪಗ್ರಹದ ಹೆಸರು - ರಿಸ್ಯಾಟ್-2, ಅನುಸ್ಯಾಟ್
■. ಉಡಾವಣಾ ದಿನಾಂಕ - 20-04-2009
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ12


16 -ಉಪಗ್ರಹದ ಹೆಸರು - ಓಶನ್​ಸ್ಯಾಟ್-2 (ಐ.ಆರ್.ಎಸ್.-ಪಿ4) ಮತ್ತು ಆರು ನ್ಯಾನೋ ಉಪಗ್ರಹ
■. ಉಡಾವಣಾ ದಿನಾಂಕ - 23-09-2009
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ14


17 -ಉಪಗ್ರಹದ ಹೆಸರು - ಕಾರ್ಟೋಸ್ಯಾಟ್-2ಬಿ ಇನ್ನೂ ನಾಲ್ಕು ಇತರೆ ಉಪಗ್ರಹ
■. ಉಡಾವಣಾ ದಿನಾಂಕ - 12-07-2010
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ15


18 -ಉಪಗ್ರಹದ ಹೆಸರು - ರಿಸೋರ್ಸ್​ಸ್ಯಾಟ್-2, ಯೂಥ್​ಸ್ಯಾಟ್ ಮತ್ತು ಎಕ್ಸ್​ಸ್ಯಾಟ್
■. ಉಡಾವಣಾ ದಿನಾಂಕ - 20-04-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ16


19 -ಉಪಗ್ರಹದ ಹೆಸರು - ಜಿಸ್ಯಾಟ್-12
■. ಉಡಾವಣಾ ದಿನಾಂಕ - 15-07-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ17


20 -ಉಪಗ್ರಹದ ಹೆಸರು - ಮೆಗಾ ಟ್ರೊಪಿಕ್ಯೂಸ್, ಎಸ್.ಆರ್.ಎಮ್್ಯಾಟ್, ಜುಗ್ನು
■. ಉಡಾವಣಾ ದಿನಾಂಕ - 12-10-2011
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ18


21 -ಉಪಗ್ರಹದ ಹೆಸರು - ರಿಸ್ಯಾಟ್-1
■. ಉಡಾವಣಾ ದಿನಾಂಕ - 26-04-2012
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ19


22 -ಉಪಗ್ರಹದ ಹೆಸರು - ಸ್ಪಾಟ್-6 ಮತ್ತು ಪ್ರೋಯ್ಟರ್ಸ್
■. ಉಡಾವಣಾ ದಿನಾಂಕ - 09-09-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ21


23 -ಉಪಗ್ರಹದ ಹೆಸರು - ಸರಳ್ ಮತ್ತು ಆರು ವಾಣಿಜ್ಯೋದ್ದೇಶ ಉಪಗ್ರಹಗಳು
■. ಉಡಾವಣಾ ದಿನಾಂಕ - 25-02-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ20


24 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್
■. ಉಡಾವಣಾ ದಿನಾಂಕ - 01-07-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ22


25 -ಉಪಗ್ರಹದ ಹೆಸರು - ಮಾರ್ಸ್ ಆರ್ಬಿಟರ್ ಮಿಷನ್ ಸ್ಪೇಸ್​ಕ್ರಾಫ್ಟ್
(ಮಂಗಳ ಕಕ್ಷೆಗಾಮಿ ಗಗನನೌಕೆ)
■. ಉಡಾವಣಾ ದಿನಾಂಕ - 05-11-2013
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ25


26 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್ 1ಬಿ
■. ಉಡಾವಣಾ ದಿನಾಂಕ - 04-04-2014
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ24


27 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್ 1ಸಿ
■. ಉಡಾವಣಾ ದಿನಾಂಕ - 16-10-2014
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ26


28 -ಉಪಗ್ರಹದ ಹೆಸರು - ಐಆರ್​ಎನ್​ಎಸ್​ಎಸ್ 1ಡಿ
■. ಉಡಾವಣಾ ದಿನಾಂಕ - 28-03-2015
■. ಉಡಾವಣಾ ವಾಹನ- ಪಿ.ಎಸ್.ಎಲ್.ವಿ.-ಸಿ27

(Courtesy: Vijayavani News Paper)

Friday, 23 October 2015

☀ಈ ದಿನದ IAS/KAS ಪರೀಕ್ಷಾ ಪ್ರಶ್ನೆ : ಇತ್ತೀಚೆಗೆ 'ಸ್ಮಾರ್ಟ್ ಸಿಟಿ' ಬಗ್ಗೆ ತುಂಬಾ ಮಾತುಗಳು ಕೇಳಿಬರುತ್ತಿವೆ. ನಿಮ್ಮ ಪ್ರಕಾರ ಸ್ಮಾರ್ಟ್ ಸಿಟಿ ಅಂದರೆ ಏನು? ಸ್ಮಾರ್ಟ್ ಸಿಟಿಯಲ್ಲಿ ತಾವು ಪರಿಗಣಿಸಬಹುದಾದ ಪ್ರಮುಖ ಮಾನದಂಡಗಳು-ಅಂಶಗಳನ್ನು ವಿಶ್ಲೇಷಿಸಿ. (What do you mean by 'Smart City' Initiative? Analyze the most important elements criteria that to be considered for a Smart City)

☀ಈ ದಿನದ IAS/KAS ಪರೀಕ್ಷಾ ಪ್ರಶ್ನೆ :
ಇತ್ತೀಚೆಗೆ 'ಸ್ಮಾರ್ಟ್ ಸಿಟಿ' ಬಗ್ಗೆ ತುಂಬಾ ಮಾತುಗಳು ಕೇಳಿಬರುತ್ತಿವೆ. ನಿಮ್ಮ ಪ್ರಕಾರ ಸ್ಮಾರ್ಟ್ ಸಿಟಿ ಅಂದರೆ ಏನು? ಸ್ಮಾರ್ಟ್ ಸಿಟಿಯಲ್ಲಿ ತಾವು ಪರಿಗಣಿಸಬಹುದಾದ ಪ್ರಮುಖ ಮಾನದಂಡಗಳು-ಅಂಶಗಳನ್ನು ವಿಶ್ಲೇಷಿಸಿ.

(What do you mean by 'Smart City' Initiative? Analyze the most important elements criteria that to be considered for a Smart City)
━━━━━━━━━━━━━━━━━━━━━━━━━━━━━━━━━━━━━━━━━━━━━

●.ಸಾಮಾನ್ಯ ಅಧ್ಯಯನ
(General Studies)


☀‘ಸ್ಮಾರ್ಟ್‌ ಸಿಟಿ’(SMART CITY):
•┈┈┈┈┈┈┈┈┈┈┈┈┈┈┈┈┈┈┈┈┈•
■. ದೇಶದಾದ್ಯಂತ ನೂರು ನಗರಗಳನ್ನು ‘ಸ್ಮಾರ್ಟ್‌ ಸಿಟಿ’ಗಳನ್ನಾಗಿ ಗುರುತಿಸಿ ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಈ ಸ್ಮಾರ್ಟ್‌ ಸಿಟಿಯಾಗಿದೆ.
■. ‘ಸ್ಮಾರ್ಟ್‌ ಸಿಟಿ’ಗಳಾಗಲಿರುವ ಒಟ್ಟು 98 ನಗರಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ.
 ■. ಸ್ಮಾರ್ಟ್‌ ಸಿಟಿ ಎಂದರೆ ಎಲ್ಲರನ್ನು ಒಳಗೊಂಡ ಸುಸಜ್ಜಿತ ನಗರ ನಿರ್ಮಾಣ ಆಗಿದ್ದು ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದೆ.

■. ಬ್ರಾಡ್‌ಬ್ಯಾಂಡ್‌ ಸಂಪರ್ಕ, ವಿದ್ಯುನ್ಮಾನ ಉಪಕರಣಗಳು ಮತ್ತು ಸಾಫ್ಟ್‌ವೇರ್‌ನಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಿರುವ ಕಂಪೆನಿಗಳು ಪಶ್ಚಿಮದ ದೇಶಗಳಲ್ಲಿ ಈ ಪದವನ್ನು ಜನಪ್ರಿಯಗೊಳಿಸಿವೆ.
■. ಸ್ಮಾರ್ಟ್‌ ಮೀಟರ್ ವ್ಯವಸ್ಥೆ, ಸಮನ್ವಯ ಹೊಂದಿರುವ ಸಂಚಾರ ದೀಪಗಳು, ಸ್ಮಾರ್ಟ್‌ ವಾಹನ ನಿಲುಗಡೆ ವ್ಯವಸ್ಥೆ, ಯಂತ್ರಗಳ ನಡುವೆ ಸಂವಹನ ಇತ್ಯಾದಿ ತಂತ್ರಜ್ಞಾನ ಆಧಾರಿತವಾದ ಭವಿಷ್ಯದ ನಗರಗಳ ಪರಿಕಲ್ಪನೆಯನ್ನು ಈ ಕಂಪೆನಿಗಳು ಜನರಿಗೆ ತಲುಪಿಸಿದವು.

■. ಆದರೆ ಭಾರತದಲ್ಲಿ ಈ ಪರಿಕಲ್ಪನೆ ಅತ್ಯಂತ ಸೀಮಿತ ಅನಿಸುತ್ತದೆ. ಏಕೆಂದರೆ ಇಲ್ಲಿನ ಜನಸಂಖ್ಯೆಯ ಬಹುದೊಡ್ಡ ವರ್ಗ ವಸತಿ, ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವುದಕ್ಕೇ ಹೆಣಗುತ್ತಿದೆ.
■. ಭಾರತದಲ್ಲಿ ಸ್ಮಾರ್ಟ್‌ ನಗರಗಳು ಎಂದರೆ, ಸೂಕ್ತ ಆಡಳಿತ ವ್ಯವಸ್ಥೆಯೊಳಗೆ ಅಗತ್ಯ ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನದ ನೆರವಿನೊಂದಿಗೆ ಹೆಚ್ಚು ಪರಿಸರ ಸ್ನೇಹಿ ಹಾಗೂ ಸುಸ್ಥಿರ ರೀತಿಯಲ್ಲಿ ನಮ್ಮ ನಗರಗಳನ್ನು ಯೋಜಿಸುವುದಾಗಿದೆ.


●.ವಿಶ್ವಾದ್ಯಂತ ಸ್ಮಾರ್ಟ್ ಸಿಟಿಗಳ ಕಲ್ಪನೆ ಹೇಗಿದೆ ಎಂಬುದನ್ನು ಆಧರಿಸಿ ಸ್ಮಾರ್ಟ್ ಸಿಟಿ ಮಾನದಂಡಗಳ ಬಗ್ಗೆ ಒಂದಷ್ಟು ಪ್ರಮುಖ ಅಂಶಗಳನ್ನು ಇಲ್ಲಿ ಪರಿಗಣಿಸಲಾಗಿದೆ. ಈ ಅಂಶಗಳು ಕೆಳಕಂಡಂತಿವೆ.
━━━━━━━━━━━━━━━━━━━━━━━━━━━━━━━━━━━━━━━━━━━━━

●.1) ಇ-ಆಡಳಿತ:
•┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯ ಮುಖ್ಯಾಂಶಗಳಲ್ಲಿ ಇ-ಆಡಳಿತ ಕೂಡ ಒಂದು. ಸ್ಮಾರ್ಟ್ ಸಿಟಿಯಲ್ಲಿ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನ ಶಕ್ತ ಆಡಳಿತ (ICT enabled governance) ಇರುತ್ತದೆ. ಇದಕ್ಕೆ ಒಂದು ಪುಟ್ಟ ಉದಾಹರಣೆ, ಕರ್ನಾಟಕದ ಮೊಬೈಲ್ ಒನ್ ಆಪ್. ಈ ಆಪ್'ನಲ್ಲಿ ನಮ್ಮ ಅನೇಕ ಸರಕಾರೀ ಸೇವೆಗಳನ್ನು ಒಂದೇ ಆಪ್'ನಲ್ಲಿ ತಲುಪಬಹುದಾಗಿದೆ. ಎಲೆಕ್ಟ್ರಿಕ್ ಬಿಲ್, ವಾಟರ್ ಬಿಲ್, ಖಾತೆ ಪಡೆಯುವುದು ಇತ್ಯಾದಿ ಸೇವೆಗಳನ್ನ ಒಂದೇ ಕ್ಲಿಕ್'ನಲ್ಲಿ ಮಾಡಬಹುದಾಗಿದೆ. ಒಟ್ಟಿನಲ್ಲಿ ನಮ್ಮ ಅನೇಕ ಕಾರ್ಯಗಳನ್ನು ಹೊಸ ತಂತ್ರಜ್ಞಾನದ ಮೂಲಕ ಸುಲಭವಾಗಿ ಮಾಡುವ ವ್ಯವಸ್ಥೆ ಹೊಂದಿರಲಾಗುತ್ತದೆ.


●.2) ಸಂಪನ್ಮೂಲ ಸದ್ಬಳಕೆ:
•┈┈┈┈┈┈┈┈┈┈┈┈┈┈┈┈•
ಪುನರ್ಬಳಕೆ ಇಂಧನ, ಜಲ ಸಂರಕ್ಷಣೆ, ವೈಜ್ಞಾನಿಕವಾಗಿ ಕಸ ವಿಲೇವಾರಿ, ಕಸದಿಂದ ರಸ ಇತ್ಯಾದಿ ನಮ್ಮ ಪರಿಸರ ರಕ್ಷಣೆಗೆ ಬಹಳ ಮಹತ್ವದ ಅಂಶಗಳು ಸ್ಮಾರ್ಟ್ ಸಿಟಿಯಲ್ಲಿರುತ್ತವೆ.


●.3) ಪಿಪಿಪಿ (PPP) ಮಾದರಿ:
•┈┈┈┈┈┈┈┈┈┈┈┈┈┈┈┈┈┈•
ಈಗೀಗ ನಮ್ಮ ದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಪಬ್ಲಿಕ್-ಪ್ರೈವೇಟ್ ಪಾಲುದಾರಿಕೆಯಲ್ಲಿ ನಿಜಕ್ಕೂ ಸಮರ್ಪಕ ಯೋಜನೆಗಳು ಬರಲು ಸಾಧ್ಯ. ಪಿಪಿಪಿ ಮಾದರಿಯಲ್ಲಿ ಖಾಸಗಿ ಕ್ಷೇತ್ರದಿಂದ ಬಂಡವಾಳ ಹೂಡಿಕೆ ಹೆಚ್ಚುವುದಲ್ಲದೆ, ಸೇವೆಯ ಗುಣಮಟ್ಟವನ್ನೂ ಕಾಪಾಡಿಕೊಳ್ಳಲು ಸಾಧ್ಯ.


●.4) ಸುರಕ್ಷತೆ:
•┈┈┈┈┈┈┈┈┈┈•
ರಸ್ತೆ ಗಲಾಟೆ, ಕಳ್ಳತನ, ದರೋಡೆ, ಮಹಿಳೆಯರು ಹಾಗೂ ವೃದ್ಧರ ಮೇಲೆ ಹಲ್ಲೆ ಇತ್ಯಾದಿ ಅಪರಾಧಗಳಿಗೆ ಆಸ್ಪದ ಕೊಡದಂಥ ಸುರಕ್ಷಿತ ವ್ಯವಸ್ಥೆಯನ್ನು ಸ್ಮಾರ್ಟ್ ಸಿಟಿಯಲ್ಲಿ ಕಲ್ಪಿಸಬೇಕಾಗುತ್ತದೆ. ನಗರದಾದ್ಯಂತ ಸಾರ್ವಜನಿಕ ಪ್ರದೇಶಗಳಲ್ಲಿ ಕ್ಯಾಮೆರಾ ಅಳವಡಿಸುವುದು; ರಾತ್ರಿ ಎಲ್ಲ ಕಡೆ ಸರಿಯಾದ ಬೆಳಕಿನ ವ್ಯವಸ್ಥೆ, ತುರ್ತು ಕರೆಗಳಿಗೆ ಕ್ಷಿಪ್ರ ಪ್ರತಿಸ್ಪಂದನೆ; ಪೊಲೀಸ್ ಕಟ್ಟೆಚ್ಚರ ಇತ್ಯಾದಿ ವ್ಯವಸ್ಥೆಗಳು ಸ್ಮಾರ್ಟ್ ಸಿಟಿಯಲ್ಲಿರುತ್ತವೆ.


●.5) ಆರ್ಥಿಕ ಸ್ವಾವಲಂಬನೆ:
•┈┈┈┈┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿ ತನ್ನ ಖರ್ಚು ವೆಚ್ಚಗಳೆಲ್ಲವನ್ನೂ ತಾನೇ ನಿಭಾಯಿಸಿಕೊಳ್ಳುವಷ್ಟು ಆರ್ಥಿಕ ಶಕ್ತಿ ಹೊಂದಿರಬೇಕಾಗುತ್ತದೆ. ಕೇಂದ್ರ ಅಥವಾ ರಾಜ್ಯ ಸರಕಾರದ ಸಹಾಯವಾಗಲೀ ನಿರೀಕ್ಷಿಸುವಂತಿಲ್ಲ.


●.6) ನಾಗರಿಕರ ಪಾತ್ರ:
•┈┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿ ವಾಸಿಸುವ ಜನಸಾಮಾನ್ಯರು ತಮ್ಮ ಪ್ರದೇಶದ ಸ್ಥಳೀಯ ಸಮಸ್ಯೆಗಳ ವಿಷಯದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತಹ ವ್ಯವಸ್ಥೆ ರೂಪುಗೊಳ್ಳಬೇಕು. ಇದಕ್ಕಾಗಿ, ಚುನಾವಣೆ ವ್ಯವಸ್ಥೆಯಲ್ಲಿ ಸೂಕ್ತ ಬದಲಾವಣೆ ಬೇಕಾದರೆ ಮಾಡಬಹುದು.


●.7) ಸಾಮಾಜಿಕ ಸೌಲಭ್ಯಗಳು:
•┈┈┈┈┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಸಾಮಾಜಿಕ ಸೌಲಭ್ಯಗಳು ಜನರ ಕೈಗೆಟುಕುವಂತಿರಬೇಕು. ಶಾಲೆ, ಆಸ್ಪತ್ರೆ, ಕ್ರೀಡಾಂಗಣ, ಮನರಂಜನಾ ತಾಣ ಇತ್ಯಾದಿಗಳು ಅಗತ್ಯ ಪ್ರಮಾಣದಲ್ಲಿ ಸಾಕಷ್ಟು ಇರಲೇಬೇಕು.


●.8) ಸಾರಿಗೆ ವ್ಯವಸ್ಥೆ:
•┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿರುವ ಪ್ರತಿಯೊಂದು ಪ್ರದೇಶದಿಂದ ಇತರ ಕಡೆಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇರಬೇಕು. ಮೆಟ್ರೋ ರೈಲು, ಬಸ್ಸುಗಳು ಎಲ್ಲಾ ಕಡೆ ತಲುಪುವಂತಿರಬೇಕು. ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಕಾರು, ಬೈಕು ಬಳಸುವ ಬದಲು ಸಾರ್ವಜನಿಕ ಸಾರಿಗೆ ಬಳಸುವಂತಾಗಬೇಕು.


●.9) ಹಸಿರು ಛಾಯೆ:
•┈┈┈┈┈┈┈┈┈┈┈┈•
ಸ್ಮಾರ್ಟ್ ಸಿಟಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಉದ್ಯಾನಗಳಂತಹ ಹಸಿರು ಪ್ರದೇಶಗಳು ಅತ್ಯಗತ್ಯ. ಪುನರ್ಬಳಕೆ ತಂತ್ರಜ್ಞಾನಗಳ ಯಥೇಚ್ಛ ಬಳಕೆ ಇತ್ಯಾದಿಗಳಿಂದ ಪರಿಸರ ಹಾನಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.


●.10) ಸೀಮಿತ ಜನಸಂಖ್ಯೆ:
•┈┈┈┈┈┈┈┈┈┈┈┈┈┈┈┈•
ವಿಶ್ವದ ಕೆಲವೆಡೆ ಸ್ಮಾರ್ಟ್ ಸಿಟಿಗೆ ನಿರ್ದಿಷ್ಟ ವಿಸ್ತಾರ ಹಾಗೂ ಜನಸಂಖ್ಯೆ ನಿಗದಿ ಮಾಡಲಾಗಿದೆ. ಉದಾಹರಣೆಗೆ ಜಪಾನ್'ನ ಫುಜಿಸಾವದಲ್ಲಿ 47 ಎಕರೆಯಲ್ಲಿ ಸ್ಮಾರ್ಟ್ ಟೌನ್ ನಿರ್ಮಿಸಲಾಗಿದೆ. ಇಲ್ಲಿ 1 ಸಾವಿರ ಮನೆ ಹಾಗೂ 3 ಸಾವಿರ ಜನಸಂಖ್ಯೆ ಸೀಮಿತಗೊಳಿಸಲಾಗಿದೆ. ಭಾರತದ ವಿಷಯಕ್ಕೆ ಬಂದರೆ ಇದು ವರ್ಕೌಟ್ ಆಗುವುದಿಲ್ಲ. ಒಂದು ಸ್ಮಾರ್ಟ್'ಸಿಟಿ ಇಂತಿಷ್ಟು ವಿಸ್ತೀರ್ಣ ಹಾಗೂ ಜನಸಂಖ್ಯೆಯನ್ನು ನಿಗದಿ ಮಾಡಿ ಅದಕ್ಕೆ ತಕ್ಕಂತೆ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.


●.ಅನುಷ್ಠಾನ ಹೀಗೆ...
•┈┈┈┈┈┈┈┈┈•
■. ಜನರ ಜೀವನಮಟ್ಟ ಸುಧಾರಣೆಯೇ ಯೋಜನೆಯ ಮುಖ್ಯ ಉದ್ದೇಶ
■.  5 ವರ್ಷಗಳಲ್ಲಿ ಹಂತಹಂತವಾಗಿ ದೇಶದ 100 ನಗರಗಳ ಅಭಿವೃದ್ಧಿ
■.  ಒಟ್ಟು ₹ 48 ಸಾವಿರ ಕೋಟಿ ವೆಚ್ಚ
■.  ವರ್ಷಾಂತ್ಯಕ್ಕೆ 20 ನಗರಗಳಲ್ಲಿ ಯೋಜನೆ  ಕಾರ್ಯಾರಂಭ
■.  ಎರಡನೇ ಹಂತದಲ್ಲಿ 40 ನಗರಗಳ ಅಭಿವೃದ್ಧಿ ಗುರಿ
■.  ಸುಸಜ್ಜಿತ ನಗರಗಳ ನೀಲನಕ್ಷೆ ಸಿದ್ಧಪಡಿಸಲು ಪ್ರತಿ ನಗರಕ್ಕೂ ಸದ್ಯದಲ್ಲೇ ತಲಾ ₹ 2 ಕೋಟಿ ಬಿಡುಗಡೆ


●.ವಿಶ್ಲೇಷಣೆ :
•┈┈┈┈┈┈┈┈•
■. ಈ ಎಲ್ಲ 10 ಅಂಶಗಳನ್ನು ಪೂರೈಸುವುದು ನಿಜಕ್ಕೂ ಕಷ್ಟವೇ ಸರಿ. ಸ್ಥಳೀಯ ಜನರ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್‌ಸಿಟಿ ನಿರ್ಮಾಣವಾಗಬೇಕು. ಸಲಹೆ ಸೂಚನೆಗಳನ್ನು ಇಂಗ್ಲಿಷ್‌ನಲ್ಲಿ ಮುದ್ರಿಸದೆ, ಕನ್ನಡದಲ್ಲಿ ಮುದ್ರಿಸಿ ಜನರಿಗೆ ಅರ್ಥವಾಗುವಂತೆ ಮಾಡಬೇಕು. ಸ್ಮಾರ್ಟ್‌ಸಿಟಿ ಎಂದರೆ ಕೇವಲ ಕಟ್ಟಡ ನಿರ್ಮಾಣ, ಕೈಗಾರಿಕೆಗಳ ಅಭಿವೃದ್ಧಿಯಲ್ಲ. ಅದರೊಂದಿಗೆ ಶ್ರೀಸಾಮಾನ್ಯರ ಜನಜೀವನವೂ ಅಭಿವೃದ್ಧಿಯಾಗಬೇಕು.
■. ಮುಂದಿನ 20 ವರ್ಷಗಳ ಭವಿಷ್ಯದ ಜನಸಂಖ್ಯೆ ಗಮನದಲ್ಲಿಟ್ಟುಕೊಂಡು ನಗರವನ್ನು ಎಲ್ಲಾ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಬೇಕಿರುವುದರಿಂದ ಸಾರ್ವಜನಿಕರು ಹೆಚ್ಚು ಆಸಕ್ತಿ ವಹಿಸುವ ಅಗತ್ಯವಿದೆ. ಭವಿಷ್ಯದ ನಗರ ಹೇಗಿರಬೇಕು ಎಂಬುದನ್ನು ತೀರ್ಮಾನಿಸಬೇಕಿದೆ. ನಗರದಲ್ಲಿರುವ ಬಡವರು, ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡುವ ಜೊತೆಗೆ, ಸ್ಲಂಗಳ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳ ದಕ್ಷ ಆಡಳಿತ ಅತಿ ಅವಶ್ಯಕ.ಜನಜೀವನ ಸುಧಾರಣೆಗೆ ಅಗತ್ಯ ಕ್ರಮ ಯೋಜನೆ ರೂಪಿಸಬೇಕು.
■. ಪಾಲಿಕೆಗೆ ಪರ್ಯಾಯವಾಗಿ ಸಮಿತಿ ರಚಿಸುವ ಬದಲು ಸಂವಿಧಾನ ಸಂಸ್ಥೆಯಾದ ಪಾಲಿಕೆ ಅಡಿಯಲ್ಲಿಯೇ ಸಂಸ್ಥೆ ಬರುವಂತೆ ಮಾಡಿದರೆ ಹೆಚ್ಚು ಸೂಕ್ತ. ಅಲ್ಲದೆ ಸ್ಮಾರ್ಟ್‌ ಸಿಟಿಯನ್ನು ಆರ್‌ಟಿಇ ಅಡಿಯಲ್ಲಿ ತಂದು ಪಾರದರ್ಶಕಗೊಳಿಸಬೇಕು
ಇವುಗಳಲ್ಲಿ ಕೆಲವನ್ನಾದರೂ ನಾವು ಸಾಧಿಸಿ ತೋರಿಸಿದರೆ ಸ್ಮಾರ್ಟ್ ಎನಿಸಿಕೊಳ್ಳಬಹುದು.

☀‘ಸೂಪರ್‌ ಮೂನ್‌’: (ಟಿಪ್ಪಣಿ ಬರಹ) (Write a short notes on Super Moon)

☀‘ಸೂಪರ್‌ ಮೂನ್‌’: (ಟಿಪ್ಪಣಿ ಬರಹ)
(Write a short notes on Super Moon)

━━━━━━━━━━━━━━━━━━━━━━━━━━━━━━━━━━━━━━━━━━━━━

●.ಸಾಮಾನ್ಯ ಅಧ್ಯಯನ
(General Studies)

●.ಸಾಮಾನ್ಯ ವಿಜ್ಞಾನ
(General Science)


■. ತಿಂಗಳಿಗೊಮ್ಮೆ ಭೂಮಿಯನ್ನು ಸುತ್ತು ಹಾಕುವ ಚಂದ್ರ ಗ್ರಹದ ಪಥ ದೀರ್ಘ ವೃತ್ತಾಕಾರವಾಗಿದ್ದು ಸರಾಸರಿ ತ್ರಿಜ್ಯದ ದೂರ 3,84,000 ಕಿ.ಮೀ ಆಗಿದೆ. ತಿಂಗಳಲ್ಲಿ ಒಮ್ಮೆ ಅತಿ ಸಮೀಪದಲ್ಲಿ ಅಂದರೆ 3,56,000 ಕಿ.ಮೀ ದೂರದಲ್ಲಿ ಮತ್ತು ಇನ್ನೊಮ್ಮೆ ಅತೀ ದೂರದಲ್ಲಿ 4,06,000 ಕಿ.ಮೀ ದೂರದಲ್ಲಿ ಚಂದ್ರ ಗ್ರಹ ಗೋಚರಿಸುವುದು.

■. ಸಮೀಪದಲ್ಲಿ ಗೋಚರಿಸುವುದಕ್ಕೆ ಸೂಪರ್ ಮೂನ್‌ ಎಂದು ಕರೆಯಲಾಗುತ್ತದೆ.‌

■. ಚಂದ್ರ ಅತಿ ದೂರದಲ್ಲಿ ಕಾಣ ಸಿಗುವುದಕ್ಕೆ ಮೈಕ್ರೋ ಮೂನ್‌ ಎಂದು ಕರೆಯಲಾಗುತ್ತದೆ.

■. ಚಂದ್ರನು ಭೂಮಿಯ ಅತ್ಯಂತ ಸಮೀಪಕ್ಕೆ ಬರುವ ಅವಧಿಯಲ್ಲಿ ತನ್ನ ಗಾತ್ರದಲ್ಲಿ ಶೇ 14ರಷ್ಟುದೊಡ್ಡದಾಗಿ ಮತ್ತು ಶೇ 30 ರಷ್ಟು ಅಧಿಕ ಪ್ರಕಾಶಮಾನವಾಗಿ ಗೋಚರಿಸುತ್ತಾನೆ. ಈ ‘ಸೂಪರ್‌ಮೂನ್‌’ ಪ್ರಕ್ರಿಯೆ ಸುಮಾರು 14 ತಿಂಗಳಿಗೊಮ್ಮೆ ನಡೆಯುತ್ತಿರುತ್ತದೆ. ಆದರೆ ಇದೇ ಅವಧಿಯಲ್ಲಿ ಚಂದ್ರ ಗ್ರಹಣ ಸಂಭವಿಸುವುದು ತೀರಾ ವಿರಳ.

■. ಸಂಪೂರ್ಣ ಚಂದ್ರಗ್ರಹಣ ಮತ್ತು ಸೂಪರ್ ಮೂನ್ ಒಟ್ಟೊಟ್ಟಿಗೆ ಸಂಭವಿಸುವುದು ತೀರಾ ಅಪರೂಪ. ಕಳೆದ 115 ವರ್ಷಗಳಲ್ಲಿ ಕೇವಲ ನಾಲ್ಕು ಬಾರಿ ಈ ವಿಸ್ಮಯ ಜರುಗಿದ್ದು, 33 ವರ್ಷಗಳ ನಂತರ ಮತ್ತೊಮ್ಮೆ ಈ ದೃಶ್ಯವೈಭವ ಕಾಣಬಹುದಾಗಿದೆ.


●.ಸೂಪರ್ ಮೂನ್ ಗೋಚರಿಸುವ ದಿನಗಳು :
•┈┈┈┈┈┈┈┈┈┈┈┈┈┈┈┈┈┈┈┈┈•
■. 2015 ಸೆಪ್ಟೆಂಬರ್ 28 ರಂದು3,56,879 ಕಿ.ಮೀ,
■. 2016 ನವೆಂಬರ್ 14 ರಂದು 3,56,523 ಕಿ.ಮೀ ಮತ್ತು
■. 2018 ಜನವರಿ 2 ರಂದು 3,56,605 ಕಿ.ಮೀ ದೂರದಲ್ಲಿ ಚಂದ್ರ ಗ್ರಹ ಗೋಚರಿಸಲಿದೆ.


●.ಈ ವರ್ಷದ ಸೂಪರ್ ಮೂನ್ ವಿಶೇಷ :
•┈┈┈┈┈┈┈┈┈┈┈┈┈┈┈┈┈┈┈•
■. ಕುತೂಹಲಕಾರಿ ವಿಷಯವೆಂದರೆ,ಇದೇ ವರ್ಷದ ನವೆಂಬರ್ 28ರಂದು ಹುಣ್ಣಿಮೆಯ ರಾತ್ರಿ ಚಂದ್ರ ಭೂಮಿಯಿಂದ ಅತೀ ದೂರಕ್ಕೆ ಸರಿಯಲಿದ್ದು, ಚಂದ್ರ ಹಾಗೂ ಭೂಮಿಯ ಅಂತರ 4,06,349ಕಿಮೀಗಳಿಗೆ ಹೆಚ್ಚಲಿದೆ. ಭಾನುವಾರ ಇರುಳಿನಲ್ಲಿ ಕಾಣಿಸುವ ಚಂದ್ರ ನವೆಂಬರ್ 28ರಂದು ಕಾಣಿಸುವ ಚಂದ್ರನಿಗಿಂತ ಶೇಕಡಾ 11 ರಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

■. ಸಾಮಾನ್ಯವಾಗಿ ಹುಣ್ಣಿಮೆ ದಿನ ಕಾಣುವ ಚಂದ್ರನಿಗಿಂತ ಈ ಹುಣ್ಣಿಮೆಯ ಚಂದ್ರ ಸುಮಾರು ಶೇ.12ರಷ್ಟು ದೊಡ್ಡದಾಗಿ ಹಾಗೂ ಶೇ.24ರಷ್ಟು ಹೆಚ್ಚಿನ ಪ್ರಭೆಯೊಂದಿಗೆ ಕಾಣಿಸುತ್ತಾನೆ. 1982ರ ನಂತರ ಇಂಥ ದೊಡ್ಡ ಚಂದ್ರ ಕಾಣುತ್ತಿದ್ದಾನೆ. 2033ರಲ್ಲಿ ಮತ್ತೊಮ್ಮೆ ಇದೇ ರೀತಿಯ ಪ್ರಭೆ ಬೀರಲಿದ್ದಾನೆ.

Wednesday, 14 October 2015

☀2015ನೇ ಸಾಲಿನ ನೊಬೆಲ್‌ ಪ್ರಶಸ್ತಿ ಪಡೆದವರು: (2015 Noble Prize Winners)

☀2015ನೇ ಸಾಲಿನ ನೊಬೆಲ್‌ ಪ್ರಶಸ್ತಿ ಪಡೆದವರು:
(2015 Noble Prize Winners)
━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)

★ ಸಾಮಾನ್ಯ ಅಧ್ಯಯನ
(General Studies)


●.ನೊಬೆಲ್ ಪ್ರಶಸ್ತಿ:
•┈┈┈┈┈┈┈┈┈┈┈┈•
■. ನೊಬೆಲ್ ಪ್ರಶಸ್ತಿಯು ಅಲ್‌ಫ್ರೆಡ್ ನೊಬೆಲ್‌ರ ಮರಣೋತ್ತರ ಉಯಿಲಿನ ಪ್ರಕಾರ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ಅತ್ಯುಚ್ಚ ಜನೋಪಕಾರಿ ಸಾಧನೆ, ಸಂಶೋಧನೆ, ಅವಿಷ್ಕಾರ ಮತ್ತು ಸೇವೆಗಳಿಗೆ ನೀಡಲ್ಪಡುತ್ತಿರುವ ಪುರಸ್ಕಾರ.
■. ನೊಬೆಲ್‌ ಪ್ರಶಸ್ತಿ ಸ್ಥಾಪಿಸಿದ ಆಲ್‌ಫ್ರೆಡ್‌ ನೊಬೆಲ್‌ ಅವರು ತಮ್ಮ ವಿಲ್‌ನಲ್ಲಿ ಅರ್ಥಶಾಸ್ತ್ರಕ್ಕೆ ನೊಬೆಲ್‌ ಪ್ರಶಸ್ತಿ ನೀಡಲು ಸೂಚಿಸಿರಲಿಲ್ಲ.
■. ಸ್ವೀಡನ್‌ನ ಸೆಂಟ್ರಲ್‌ ಬ್ಯಾಂಕ್‌ ತನ್ನ ಮೂರನೇ  ಶತಮಾನೋತ್ಸವದ ಪ್ರಯುಕ್ತ 1968ರಲ್ಲಿ ಅರ್ಥಶಾಸ್ತ್ರದ ನೊಬೆಲ್‌ ಸ್ಥಾಪಿಸಿತು.
■. 1969ರಲ್ಲಿ ಅರ್ಥಶಾಸ್ತ್ರಕ್ಕೆ ಮೊದಲ ನೊಬೆಲ್‌ ನೀಡಲಾಯಿತು.
■.ಈ ಪುರಸ್ಕಾರವನ್ನು1969 ರಲ್ಲಿ ಬ್ಯಾಂಕ್ ಆಫ್ ಸ್ವೀಡನ್ ಪ್ರಾರಂಭ ಮಾಡಿತು.


●.ನೊಬೆಲ್ ಪ್ರಶಸ್ತಿ ವಿತರಣೆಯ ನಿರ್ಧಾರ :
•┈┈┈┈┈┈┈┈┈┈┈┈┈┈┈┈┈┈┈┈•
■.ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.
■.ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನುರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.
■.ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನುಕ್ಯಾರೋಲಿನ್‌ಸ್ಕಾ ಸಂಸ್ಥೆಯು ನಿರ್ಧರಿಸುತ್ತದೆ.
■.ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ.
■.ನೊಬೆಲ್ ಶಾಂತಿ ಪ್ರಶಸ್ತಿ ಪದಕಕ್ಕೆ ಅರ್ಹತೆಯನ್ನು ನಾರ್ವೆಯ ಸಂಸತ್ತುನೇಮಕ ಮಾಡಿದನಾರ್ವೆಯ ನೊಬೆಲ್ ಸಮಿತಿಯು ನಿರ್ಧರಿಸುತ್ತದೆ.
■.ಆಲ್‌ಫ್ರೆಡ್ ನೊಬೆಲ್ ಅವರ ಸ್ಮರಣೆಗಾಗಿ ಬ್ಯಾಂಕ್ ಆಫ್ ಸ್ವೀಡನ್ ನೀಡುವ ಅರ್ಥಶಾಸ್ತ್ರ ಪ್ರಶಸ್ತಿ. ಈ ಪದಕಕ್ಕೆ ಅರ್ಹತೆಯನ್ನು ರಾಯಲ್ ಸ್ವೀಡಿಷ್ ವಿಜ್ಞಾನ ಅಕಾಡೆಮಿಯು ನಿರ್ಧರಿಸುತ್ತದೆ. ಇದನ್ನು ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದು ಪರಿಗಣಿಸಿದರೂ, ಇದು ಆಲ್‌ಫ್ರೆಡ್ ನೊಬೆಲ್ ಅವರ ಉಯಿಲಿನಲ್ಲಿರಲಿಲ್ಲ.


●.2015ರ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. ಟ್ಯುನಿಷಿಯಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪನೆಗೆ ಹೋರಾಡಿದ ದೇಶದ ನಾಲ್ಕು ಸಂಘಟನೆಗಳ ಒಕ್ಕೂಟಕ್ಕೆ (ನ್ಯಾಷನಲ್‌ ಡಯಲಾಗ್‌ ಕ್ವಾರ್ಟೆಟ್‌) 2015ರ ಸಾಲಿನ ನೊಬೆಲ್‌ ಶಾಂತಿ ಪ್ರಶಸ್ತಿ ಲಭಿಸಿದೆ.
■. ‘2011ರಲ್ಲಿ ಟ್ಯುನಿಷಿಯಾದಲ್ಲಿ ನಡೆದ ಕ್ರಾಂತಿಯ ಬಳಿಕ ಬಹುಸಂಸ್ಕೃತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ವಿತ್ವಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಒಕ್ಕೂಟವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ನೊಬೆಲ್‌ ಶಾಂತಿ ಪ್ರಶಸ್ತಿ ಸಮಿತಿ ಶುಕ್ರವಾರ ಹೇಳಿದೆ.
■. ಉತ್ತರ ಆಫ್ರಿಕಾದ ರಾಷ್ಟ್ರ ಟ್ಯುನಿಷಿಯಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ ಹೋರಾಡಲು ನಾಲ್ಕು ಸಂಘಟನೆಗಳು ಕೈಜೋಡಿಸಿ ಒಕ್ಕೂಟ ರಚಿಸಿದ್ದವು.
■. ಟ್ಯುನಿಷಿಯಾ ಕಾರ್ಮಿಕರ ಒಕ್ಕೂಟ (ಯುಜಿಟಿಟಿ),
■. ಟ್ಯುನಿಷಿಯಾ ಕೈಗಾರಿಕೆ, ವ್ಯಾಪಾರ ಮತ್ತು ಕರಕುಶಲ ಸಂಸ್ಥೆ (ಯುಟಿಐಸಿಎ),
■. ಟ್ಯುನಿಷಿಯಾ ಮಾನವ ಹಕ್ಕುಗಳ ಸಂಘ (ಎಲ್‌ಟಿಡಿಎಚ್‌)
■. ಟ್ಯುನಿಷಿಯಾ ವಕೀಲರ ಸಂಘಗಳು ಸೇರಿ ಒಕ್ಕೂಟ ರಚಿಸಿದ್ದವು.
■. ಪ್ರಶಸ್ತಿ ಪ್ರಧಾನ ಸಮಾರಂಭ ಡಿಸೆಂಬರ್‌ 10ರಂದು ನಡೆಯಲಿದೆ.
■. 1896ರಲ್ಲಿ ನಿಧನರಾದ ಸ್ವೀಡನ್‌ನ ವಿಜ್ಞಾನಿ ಆಲ್ಫ್ರೆಡ್‌ ನೊಬೆಲ್‌ ಅವರ ನೆನಪಿನಲ್ಲಿ ಪ್ರತಿವರ್ಷ ನೊಬೆಲ್‌ ಪ್ರಶಸ್ತಿ ನೀಡಲಾಗುತ್ತಿದೆ.
(Sat, 10/10/2015)


●.2015ನೇ ಸಾಲಿನ ನೊಬೆಲ್‌ ಸಾಹಿತ್ಯ ಪ್ರಶಸ್ತಿ:
 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. 2015ನೇ ಸಾಲಿನ ನೊಬೆಲ್‌ ಸಾಹಿತ್ಯ ಪ್ರಶಸ್ತಿಗೆ ಬೆಲಾರಸ್‌ನ ಲೇಖಕಿ ಸ್ವೆಟ್ಲಾನಾ ಅಲೆಕ್ಸಿಯೆವಿಚ್‌ ಆಯ್ಕೆಯಾಗಿದ್ದಾರೆ.
■. ಈ ಕಾಲದ ನೋವು ಮತ್ತು ಧೈರ್ಯದ ಪ್ರತೀಕವಾದ ವಿವಿಧ ಪ್ರಕಾರಗಳಲ್ಲಿನ ಅವರ ಬರವಣಿಗೆಗೆ ಈ ಗೌರವ ನೀಡಲಾಗುತ್ತಿದೆ ಎಂದು ಸ್ವೀಡಿಷ್‌ ಅಕಾಡೆಮಿ ಹೇಳಿದೆ.
■. ಉಕ್ರೇನ್‌ನಲ್ಲಿ ಸಂಭವಿಸಿದ ಚೆರ್ನೊಬಿಲ್‌ ಅಣು ಅವಘಡ ಮತ್ತು ಎರಡನೇ ಮಹಾಯುದ್ಧದ ದುರಂತಗಳ ಕುರಿತ ಭಾವನಾತ್ಮಕ ಬರಹಗಳ ಮೂಲಕ ಅಲೆಕ್ಸಿಯೆವಿಚ್‌ (67) ಜಾಗತಿಕ ಮನ್ನಣೆ ಗಳಿಸಿದ್ದಾರೆ. ಪತ್ರಕರ್ತೆಯಾಗಿಯೂ ಅವರು ದುಡಿದಿದ್ದಾರೆ.
■. ಅಲೆಕ್ಸಿಯೆವಿಚ್‌, ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾಗುತ್ತಿರುವ14ನೇ ಮಹಿಳೆಯಾಗಿದ್ದಾರೆ.
■. ಅವರು ಎಂಬತ್ತು ಲಕ್ಷ ಸ್ವೀಡಿಷ್‌ ಕ್ರೋನಾರ್‌ (₹6.18 ಕೋಟಿ) ಪ್ರಶಸ್ತಿ ಮೊತ್ತ ಪಡೆಯಲಿದ್ದಾರೆ.
(Fri, 10/09/2015)


●.2015ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ
 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. 2015ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಯು ಸ್ಕಾಟಿಷ್‌ ಅರ್ಥಶಾಸ್ತ್ರಜ್ಞ ಆಂಗಸ್ ಡೀಟನ್‌ ಅವರಿಗೆ ಸಂದಿದೆ.
■. ‘ಅನುಭೋಗತೆ, ಬಡತನ ಹಾಗೂ ಕಲ್ಯಾಣದ ವಿಶ್ಲೇಷಣೆಗಾಗಿ’ ಈ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್‌ ಪ್ರಶಸ್ತಿ ಪ್ರತಿಷ್ಠಾನವಾದ ಸ್ವೀಡನ್‌ನ ರಾಯಲ್‌ ಅಕಾಡೆಮಿ ಸೋಮವಾರ ಹೇಳಿದೆ.
(Mon, 12th Oct, 2015)


●.2015ರ ರಸಾಯನ ವಿಜ್ಞಾನ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್‌ ಪುರಸ್ಕಾರ:
 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. ಡಿಎನ್‌ಎ ದುರಸ್ತಿಯ ಯಾಂತ್ರಿಕ ಅಧ್ಯಯನದಲ್ಲಿನ ಸಾಧನೆಗಾಗಿ ಸ್ವೀಡನ್‌ನ ಟೊಮಸ್‌ ಲಿಂಡಲ್‌, ಅಮೆರಿಕದ ಪಾಲ್‌ ಮಾಡ್ರಿಚ್ ಮತ್ತು ಅಮೆರಿಕ ಮೂಲದ ಟರ್ಕಿ ವಿಜ್ಞಾನಿ ಅಜೀಜ್‌ ಸಂಕರ್‌ ಅವರು ರಸಾಯನ ವಿಜ್ಞಾನದ ನೊಬೆಲ್‌ ಪ್ರಶಸ್ತಿ ಹಂಚಿಕೊಂಡಿದ್ದಾರೆ.
■. ಜೀವಂತ ಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಮೂಲಭೂತ ತಿಳಿವಳಿಕೆಯನ್ನು ಈ ವಿಜ್ಞಾನಿಗಳು ನೀಡಿದ್ದಾರೆ. ■. ಅವರ ಸಂಶೋಧನೆಗಳು ಕ್ಯಾನ್ಸರ್‌ನ ಹೊಸ ಚಿಕಿತ್ಸಾ ವಿಧಾನಗಳ ಅಭಿವೃದ್ಧಿ ಸೇರಿದಂತೆ ವಿವಿಧ ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ ಎಂದು ರಾಯಲ್‌ ಸ್ವೀಡಿಶ್‌ ವಿಜ್ಞಾನಗಳ ಅಕಾಡೆಮಿ ತಿಳಿಸಿದೆ.
■. ಹಾನಿಯಾದ ಡಿಎನ್‌ಎಯನ್ನು ಕೋಶಗಳು ಹೇಗೆ ದುರಸ್ತಿಪಡಿಸುತ್ತವೆ ಮತ್ತು ಅನುವಂಶೀಯ ಮಾಹಿತಿಯನ್ನು ರಕ್ಷಿಸುತ್ತದೆ ಎಂಬುದನ್ನು ಪತ್ತೆ ಮಾಡಿ ಈ ಮೂವರು ಸಂಶೋಧಕರು ವಿವರಿಸಿದ್ದರು.
■. ಡಿಎನ್‌ಎ ನಾಶ ಹೊಂದುವ ಬಗೆಯನ್ನು ವಿವರಿಸಿದ್ದ ಲಿಂಡಲ್‌, ಅದರ ಆಧಾರದಲ್ಲಿ ಡಿಎನ್ಎ ನಾಶವನ್ನು ನಿರಂತರವಾಗಿ ಎದುರಿಸಿ ದುರಸ್ತಿ ಮಾಡುವ ಆಣ್ವಿಕ ಯಂತ್ರವನ್ನು (ಮೊಲಿಕ್ಯುಲರ್‌ ಮೆಷಿನರಿ) ಆವಿಷ್ಕರಿಸಿದ್ದರು.
■. ಡಿಎನ್‌ಎದಲ್ಲಿನ ಹಾನಿಯನ್ನು ಸರಿಪಡಿಸುವ ನ್ಯುಕ್ಲಿಯೊಟೈಡ್‌ ಛೇದಕ ದುರಸ್ತಿಯನ್ನು ಸಂಕರ್‌ ಕಂಡುಹಿಡಿದಿದ್ದರು.
■. ಕೋಶ ವಿಭಾಗೀಕರಣದ ವೇಳೆ ಡಿಎನ್‌ಎ ನಕಲು ಸೃಷ್ಟಿಯಾದಾಗ ಉಂಟಾಗುವ ತಪ್ಪುಗಳನ್ನು ಕೋಶ ಹೇಗೆ ಸರಿಪಡಿಸುತ್ತದೆ ಎಂಬುದನ್ನು ಮಾಡ್ರಿಚ್‌ ವಿವರಿಸಿದ್ದರು. ಲಿಂಡಲ್‌ (77),
■. ಫ್ರಾನ್ಸಿಸ್‌ ಕ್ರಿಕ್‌ ಸಂಸ್ಥೆಯ ಗೌರವ ಸಮೂಹ ಮುಖ್ಯಸ್ಥ ಮತ್ತು ಬ್ರಿಟನ್‌ನ ಗ್ಲೇರ್‌ ಹಾಲ್‌ ಪ್ರಯೋಗಾಲಯದಲ್ಲಿನ ಇಂಗ್ಲೆಂಡ್‌ ಕ್ಯಾನ್ಸರ್‌ ಸಂಶೋಧನೆಯ ಗೌರವ ನಿರ್ದೇಶಕರಾಗಿದ್ದಾರೆ.
■. ಪಾಲ್‌ ಮಾಡ್ರಿಚ್‌ (69), ಹೊವಾರ್ಡ್‌ ಹ್ಯೂಸ್‌ ವೈದ್ಯಕೀಯ ಸಂಸ್ಥೆಯ ಪರೀಕ್ಷಕ ಮತ್ತು ಉತ್ತರ ಕೆರೊಲಿನಾದ ಡ್ಯೂಕ್‌ ವೈದ್ಯಕೀಯ ಶಾಲೆ ವಿ.ವಿಯ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
■. ಸಂಕರ್‌ (69), ಉತ್ತರಕೆರೊಲಿನಾದ ಚಾಪೆಲ್‌ ಹಿಲ್‌ನಲ್ಲಿರುವ ಉತ್ತರ ಕೆರೊಲಿನಾ ವೈದ್ಯಕೀಯ ಶಾಲೆ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
■. ಡಿಸೆಂಬರ್‌ 10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಮೂವರು ನೊಬೆಲ್‌ ಪ್ರಶಸ್ತಿಯ ಜೊತೆಗೆ 80 ಲಕ್ಷ ಸ್ವೀಡಿಶ್‌ ಕ್ರೋನೊರ್‌ (₹6.24 ಕೋಟಿ) ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ.
(Thu, 10/08/2015 )


●.2015ನೇ ಸಾಲಿನ ಭೌತ ವಿಜ್ಞಾನ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್‌ ಪುರಸ್ಕಾರ:
 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. ಜಪಾನ್‌ನ ತಕಾಕಿ ಕಜಿಟ ಮತ್ತು ಕೆನಡಾದ ಆರ್ಥರ್‌ ಮೆಕ್‌ಡೊನಾಲ್ಡ್‌ ಅವರಿಗೆ ಈ ಬಾರಿಯ ಭೌತವಿಜ್ಞಾನ ನೊಬೆಲ್‌ ದೊರೆತಿದೆ. ಭೌತ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗಾಗಿ ಈ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಿ ರಾಯಲ್‌ ಸ್ವೀಡಿಷ್‌ ಅಕಾಡೆಮಿಆಫ್‌ ಸೈನ್ಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
■. ಇವರು ನ್ಯೂಟ್ರಿನೋ ಕಣಗಳ ಬಗ್ಗೆ ಸಂಶೋಧನೆ ಕೈಗೊಂಡಿದ್ದರು.ಟೋಕಿಯೊ ವಿ.ವಿ. ಪ್ರೊಫೆಸರ್‌ ಆಗಿರುವ ಕಜಿಟ ಅವರು ಕಾಸ್ಮಿಕ್‌ ರೇ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರೂ ಆಗಿದ್ದಾರೆ.
■. ಮೆಕ್‌ಡೊನಾಲ್ಡ್‌ ಅವರು ಕೆನಡಾದ ಕಿಂಗ್‌ಸ್ಟನ್‌ನಲ್ಲಿರುವ ಕ್ವೀನ್ಸ್‌ ವಿ.ವಿ.ದಲ್ಲಿ ಪ್ರೊಫೆಸರ್‌ ಆಗಿದ್ದಾರೆ.
■. ಇಬ್ಬರೂ ₹ 6.28 ಕೋಟಿ ಬಹುಮಾನ ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್‌ 10ರಂದು ನಡೆಯಲಿದೆ.
(Wed, 10/07/2015)


●.2015ನೇ ಸಾಲಿನ ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್‌ ಪುರಸ್ಕಾರ:
 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
■. ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್‌ ಪುರಸ್ಕಾರವನ್ನು ಈ ಬಾರಿ ಮೂವರು ಹಂಚಿಕೊಂಡಿದ್ದಾರೆ.
■. ಐರಿಷ್‌ ಮೂಲದ ವಿಲಿಯಂ ಕ್ಯಾಂಪ್‌ಬೆಲ್‌,
■. ಚೀನಾದ ತು ಯುಯು ಮತ್ತು ಜಪಾನ್‌ ನ ಸಟೋಷಿ ಒಮುರಾ 2015ನೇ ಸಾಲಿನ ವೈದ್ಯಕೀಯ ನೊಬೆಲ್‌ಗೆ ಪಾತ್ರರಾಗಿದ್ದಾರೆ.
(Tue, 10/06/2015 )


●.ಹೊರರಾಷ್ಟ್ರಗಳಲ್ಲಿ ಅಧ್ಯಯನ ಮಾಡಿದ ನೊಬೆಲ್ ಪುರಸ್ಕೃತರ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನವರು ಇಂಗ್ಲೆಂಡ್‌ನ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದವರು ಎಂದು ಬ್ರಿಟಿಷ್‌ ಕೌನ್ಸಿಲ್‌ ನಡೆಸಿದ ಅಧ್ಯಯನ ವರದಿ ಹೇಳಿದೆ.
(Wed, 7th Oct, 2015)


(ಕೃಪೆ : ಪ್ರಜಾವಾಣಿ) 

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -20)   (General knowledge on Current Affairs (Part-20))  ☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -20)
(General knowledge on Current Affairs (Part-20))
☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)


811)  ಸಿಂಗಪುರದ ಪ್ರಧಾನಿಯಾಗಿ ಪುನರಾಯ್ಕೆಯಾಗಿರುವ ಲೀ ಸಿಯೆನ್‌ ಲೂಂಗ್‌ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
(Fri, 2nd Oct, 2015)


812)  ‘ಪ್ರಾಜೆಕ್ಟ್ ಲೂನ್’ ಎಂಬುದು ದುರ್ಗಮ ಪ್ರದೇಶಗಳ ಜನರಿಗೆ ಅಂತರ್ಜಾಲ ಸಂಪರ್ಕ ಒದಗಿಸುವ ಗೂಗಲ್ ಸಂಸ್ಥೆಯ ಮಹತ್ವಾಕಾಂಕ್ಷೆಯ ಕಾರ್ಯ ಸೇವೆಯಾಗಿದೆ.
■. ‘ಲೂನ್’ ಸೇವೆಯು ದೂರ ಶಿಕ್ಷಣ, ಗ್ರಾಮೀಣ ಶಾಲೆಗಳು ಹಾಗೂ ಟೆಲಿ ಮೆಡಿಸಿನ್‌ ಕ್ಷೇತ್ರ ಸೇರಿದಂತೆ ವಿವಿಧೆಡೆ ನೆರವಿಗೆ ಬರುವುದು ಖಚಿತ ಎಂದು ಗೂಗಲ್‌ ಅಧಿಕಾರಿಗಳು ತಿಳಿಸಿದ್ದಾರೆ.
(Thu, 10/01/2015)


813)  ಅಮೆರಿಕದ ಪ್ರತಿಷ್ಠಿತ 'ಮ್ಯಾಕ್ ಅರ್ಥರ್ ಫೆಲೊ' ಗೌರವಕ್ಕೆ ಭಾರತ ಮೂಲದ ಪರಿಸರ ಎಂಜಿನಿಯರ್ ಕಾರ್ತಿಕ್‌ ಚಂದ್ರನ್ (41) ಅವರನ್ನು ಆಯ್ಕೆ ಮಾಡಲಾಗಿದೆ.
(Thu, 1st Oct, 2015)


814)  ಪ್ರಸ್ತುತ ಮಾಲ್ಡೀವ್ಸ್‌ ದೇಶದ ಅಧ್ಯಕ್ಷ :
■. ಅಬ್ದುಲ್ಲಾ ಯಮೀನ್‌ ಅಬ್ದುಲ್ಲಾ ಗಯೂಂ


815)  ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಗೆದ್ದ ಟ್ರೋಫಿಯೊಂದಿಗೆ ಮಾರ್ಟಿನಾ ಹಿಂಗಿಸ್ ಮತ್ತು ಸಾನಿಯಾ ಮಿರ್ಜಾ ಫೈನಲ್‌ ಪಂದ್ಯದಲ್ಲಿ ಸಾನಿಯಾ ಮತ್ತು ಹಿಂಗಿಸ್ 6–3, 6–3ರ ನೇರ ಸೆಟ್‌ಗಳಲ್ಲಿ ಆಸ್ಟ್ರೇಲಿಯಾದ ಕೆಸೆ ಡೆಲಾಕಾ ಮತ್ತು ಕಜಕಸ್ತಾನದ ಯರೊಸ್ಲಾವಾ ಶ್ವೆಡೋವಾ ಅವರನ್ನು ಮಣಿಸಿದರು
■. ಸಾನಿಯಾ ಜೊತೆ ಜಯಿಸಿದ ಹಿಂಗಿಸ್ ಅಮೆರಿಕ ಓಪನ್ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿ ಗೌರವ ಗಳಿಸಿದರು.
■. ಈ ಪ್ರಶಸ್ತಿಯೂ ಸೇರಿದಂತೆ ಸಾನಿಯಾ ಒಟ್ಟು ಐದು ಡಬಲ್ಸ್‌ ಮತ್ತು ಮೂರು ಮಿಶ್ರ ಡಬಲ್ಸ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ.
■. ಹಿಂಗಿಸ್ ಒಟ್ಟು 20 ಗ್ರ್ಯಾಂಡ್‌ಸ್ಲಾಮ್ ಗೆದ್ದಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರು ಸತತ ಐದು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
(Mon, 09/14/2015)


816)  ಭಾರತದ ಟೆನಿಸ್ ತಾರೆ ಲಿಯಾಂಡರ್ ಮಾರ್ಟಿನಾ ಹಿಂಗಿಸ್‌ ಜೊತೆಗೂಡಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್‌ ಗೆದ್ದರು.
■. ಅವರು, ಅತಿ ಹೆಚ್ಚು ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
■. ಈ ಮೂಲಕ ಪೇಸ್ 17ನೇ ಬಾರಿ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದರು.
(Aug, 2015)


817)  ಸಾನಿಯಾ ಗೆದ್ದಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳು

■. ಮಹಿಳಾ ವಿಭಾಗದ ಡಬಲ್ಸ್‌
2015: ವಿಂಬಲ್ಡನ್‌ ಟೂರ್ನಿ
2015: ಅಮೆರಿಕ ಓಪನ್‌ ಟೂರ್ನಿ

■. ಮಿಶ್ರ ಡಬಲ್ಸ್‌ ವಿಭಾಗ
2009: ಆಸ್ಟ್ರೇಲಿಯಾ ಓಪನ್‌
2012: ಫ್ರೆಂಚ್‌ ಓಪನ್‌
2014: ಅಮೆರಿಕ ಓಪನ್


818)  ಇತ್ತೀಚೆಗೆ ನಡೆದ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರನ್ನು 6-4, 5-7, 6-4, 6-4 ರಲ್ಲಿ ಸೋಲಿಸುವ ಮೂಲಕ ಮತ್ತೊಮ್ಮೆ ಚಾಂಪಿಯನ್‌ ರಾದರು.
(Mon, 09/14/2015)


819)  ಹೃದಯದಿಂದ ದೇಹದ ಇತರ ಭಾಗಗಳಿಗೆ ಆಮ್ಲಜನಕ ವಿತರಿಸುವ ರಕ್ತನಾಳ :
■. ಮಹಾಪಧಮನಿ .


820)  'ಕೊಲಾಜೆನ್' ಎಂಬುದು ನೈಸರ್ಗಿಕವಾಗಿ ಮಾನವನ ದೇಹದ ಮೂಳೆಗಳು, ಮಾಂಸಖಂಡಗಳು ಮತ್ತು ಚರ್ಮದಲ್ಲಿ ಕಂಡುಬರುವ ಒಂದು ಪ್ರೋಟಿನ್ ಆಗಿದ್ದು, ಈ ಅಂಗಾಂಶಗಳಲ್ಲಿನ ಬಿಗಿತದ ನಿರ್ವಹಣೆ ಇದರ ಜವಾಬ್ದಾರಿಯಾಗಿದೆ.


821)  ನಮ್ಮ ದೇಹದಲ್ಲಿ ಕಂಡುಬರುವ ‘ಎಲಾಸ್ಟಿನ್’ ಎಂಬ ಒಂದು ವಿಧದ ಪ್ರೋಟಿನ್, ಅಂಗಾಂಶಗಳು ನಮ್ಯತೆಯನ್ನು ಹೊಂದಿದ್ದೂ ಬಿಗಿಯಾಗಿರುವಂತೆ ನೋಡಿಕೊಳ್ಳುತ್ತದೆ.


822)  ಭಾರತ ಮೂಲದ ಲೇಖಕಿ, ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತೆ ಜುಂಪಾ ಲಾಹಿರಿ ಅಮೆರಿಕದ ಪ್ರತಿಷ್ಠಿತ ರಾಷ್ಟ್ರೀಯ ಮಾನವಿಕ ಪದಕಕ್ಕೆ (ನ್ಯಾಷನಲ್ ಹ್ಯುಮ್ಯಾನಿಟೀಸ್‌ ಮೆಡಲ್‌) ಆಯ್ಕೆಯಾಗಿದ್ದಾರೆ.
■. ಜುಂಪಾ ಲಾಹಿರಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರಾಗಿರುವ ನೀಲಾಂಜನ ಸುದೇಷ್ಣ ಪ್ರಿನ್ಸ್‌ಟನ್‌ ವಿ.ವಿ.ಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.
■. ಭಾರತೀಯ ಮೂಲದ ಅಮೆರಿಕನ್ ಲೇಖಕಿಯಾಗಿರುವ ಜುಂಪಾ ಅವರ ‘ಇಂಟರ್‌ಪ್ರಿಟರ್ ಆಫ್‌ ಮ್ಯಾಲಡೀಸ್‌’ ಕೃತಿ 2000ರ ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿತ್ತು.
(Sat, 09/05/2015)


823)  ಒಬ್ಬ ವ್ಯಕ್ತಿಗೆ 422 ಮರಗಳಂತೆ ಜಗತ್ತಿನಲ್ಲಿ ಈಗ ಮೂರು ಲಕ್ಷ ಕೋಟಿ ಮರಗಳಿವೆ. ನಾಗರಿಕತೆ ಆರಂಭವಾದಾಗಿನಿಂದ ಮರಗಳ ಪ್ರಮಾಣ ಶೇ 46ರಷ್ಟು ಕಡಿತವಾಗಿದೆ ಎಂದು ಯೇಲ್‌ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.
(Sat, 5th Sep, 2015)


824)  ಇತ್ತೀಚೆಗೆ ಗ್ರೀಸ್‌ನ ಪ್ರಥಮ ಮಹಿಳಾ ಪ್ರಧಾನಿಯಾಗಿ ನೇಮಕಗೊಂಡವರು:
■. ವಸಿಲಿಕಿತನೌ (Sat, 29th Aug, 2015)


825)  ನಾಸಾ ಹಾಗೂ ಭಾರಿ ಸಾಮರ್ಥ್ಯದ ಇಎಸ್‌ಎ ಹಬ್ಬಲ್‌ ಬಾಹ್ಯಾ ಕಾಶ ಟೆಲಿಸ್ಕೋಪ್‌ ನೆರವಿನಿಂದ ಖಭೌತ ವಿಜ್ಞಾನಿಗಳು ಬೃಹತ್ ಆಕಾರದ ಆಕಾಶ ಗಂಗೆಯನ್ನು ಪತ್ತೆ ಹಚ್ಚಿದ್ದಾರೆ.
■. ಸೌರವ್ಯೂಹದಲ್ಲಿ ಇಷ್ಟೊಂದು ದೈತ್ಯ ಗಾತ್ರದ ನಕ್ಷತ್ರಪುಂಜ ಪತ್ತೆಯಾಗಿರುವುದು ಇದೇ ಮೊದಲು ಎನ್ನಲಾಗಿದೆ.
■. ಅತ್ಯಂತ ಪುರಾತನವಾದ ಕೆಂಪು ಹಾಗೂ ಸತ್ತ ನಕ್ಷತ್ರಗಳ ಸಮೂಹದಿಂದ ನಿರ್ಮಾಣವಾದ ಈ ಆಕಾಶಗಂಗೆಗೆ ಎಸ್‌ಪಿಎಆರ್‌ಸಿಎಸ್‌1049+56 ಎಂದು ಹೆಸರಿಸಲಾಗಿದೆ.
■. ಕನಿಷ್ಠ 27 ನಕ್ಷತ್ರಪುಂಜಗಳ ಸಮೂಹ ಒಟ್ಟುಗೂಡಿ ಈ ಬೃಹತ್‌ ಆಕಾಶಗಂಗೆ ನಿರ್ಮಾಣವಾಗಿದ್ದು, ಒಟ್ಟು ದ್ರವ್ಯರಾಶಿ 400 ಸಹಸ್ರಕೋಟಿ ಸೂರ್ಯನಿಗೆ ಸಮ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
(Sat, 09/12/2015)


826)  ಭಾರತದ ಖ್ಯಾತ ಕೃಷಿ ವಿಜ್ಞಾನಿ ಡಾ. ಮೊಡಡುಗು ವಿಜಯ್‌ ಗುಪ್ತ ಅವರಿಗೆ ಭಾರತ, ಬಾಂಗ್ಲಾ ದೇಶ ಹಾಗೂ ದಕ್ಷಿಣ ಪೂರ್ವ ಏಷ್ಯಾ ದೇಶಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಮೊದಲ ಸನ್‌ಹಾಕ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
■. 76 ವರ್ಷದ ಗುಪ್ತ, ₹6 ಕೋಟಿ ಮೊತ್ತದ ಪ್ರಶಸ್ತಿಯನ್ನು ಕಿರಿಬತಿ ದ್ವೀಪ ಸಮೂಹದ ಅಧ್ಯಕ್ಷ ಅನೋಟ್ ಟಾಂಗ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
■. 63 ವರ್ಷದ ಟಾಂಗ್‌ ಅವರು ಪೆಸಿಫಿಕ್‌ ಸಾಗರ ದ್ವೀಪಗಳಲ್ಲಿ ಇಂಗಾಲ ಹೊರಸೂಸುವಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
■. ಗುಪ್ತ ಅವರು ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಕೃಷಿ ಸಂಸ್ಥೆಗಳೊಂದಿಗೆ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
■. ನೊಬೆಲ್‌ ಶಾಂತಿ ಪ್ರಶಸ್ತಿಗೆ ಪರ್ಯಾಯ ಎಂದೇ ಪರಿಗಣಿಸಲಾಗಿರುವ ಈ ಪುರಸ್ಕಾರವನ್ನು ದಕ್ಷಿಣ ಕೊರಿಯಾದ ಧಾರ್ಮಿಕ ನಾಯಕಿ ಡಾ. ಜಾಕ್‌ ಜಾ ಹ್ಯಾನ್‌ ಮೂನ್‌ ಪ್ರದಾನ ಮಾಡಿದ್ದಾರೆ.
■. ಜನ ಕಲ್ಯಾಣಕ್ಕಾಗಿ ದುಡಿದವರಿಗಾಗಿ ಜಾ ಅವರ ಪತಿ ದಿ. ರೆವ್‌ ಸನ್‌ ಮೈಯುಂಗ್‌ ಮೂನ್‌ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.


827)  ಈಜಿಪ್ಟ್‌ನ ನೂತನ ಪ್ರಧಾನಿಯಾಗಿ ಷರೀಫ್‌ ಇಸ್ಮಾಯಿಲ್‌ ಪ್ರಮಾಣವಚನ ಸ್ವೀಕರಿಸಿದರು.
■. ಅಧ್ಯಕ್ಷ ಅಬ್ದೆಲ್‌– ಫತ್ತಾಹ್‌ ಅಲ್‌ ಸೀಸಿ ಅವರು ಪ್ರಮಾಣವಚನ ಬೋಧಿಸಿದರು.
(Sun, 20th Sep, 2015)


828)  ಹಂಗೆರಿ ರಾಷ್ಟ್ರದ ಪ್ರಸ್ತುತ ರಾಜಧಾನಿ :
■. ಬುಡಾಪೆಸ್ಟ್


829)  ಮಾಲ್ಕಂ ಟರ್ನ್‌ಬುಲ್‌ ಅವರು ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
(Wed, 16th Sep, 2015)


830)  ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ, ಸಂಜೀವ್ ಚತುರ್ವೇದಿ ಹಾಗೂ ‘ಗೂಂಜ್‌’ ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕ ಅಂಶು ಗುಪ್ತಾ ಅವರಿಗೆ ಸೋಮವಾರ ಪ್ರತಿಷ್ಠಿತ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
(Tue, 1st Sep, 2015)


(Courtesy : Prajawani Newspaper)

To be continued....

Tuesday, 13 October 2015

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -19)   (General knowledge on Current Affairs (Part-19))  ☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -19)
(General knowledge on Current Affairs (Part-19))
☆.(ಪ್ರಚಲಿತ ಘಟನೆಗಳ ವಿಸ್ತ್ರತ ನೋಟ್ಸ್)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)


●.ನಿಮ್ಮ ಗಮನಕ್ಕೆ....

☆.ಪ್ರೀಯ ಸ್ಪರ್ಧಾರ್ಥಿಗಳೇ...ವಿಸ್ತಾರವಾದ ಪ್ರಚಲಿತ ಘಟನೆಗಳು ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಕೋನದಿಂದ ತುಂಬಾ ಉಪಯುಕ್ತವಾದವು. ಆದ್ದರಿಂದ ನಾನು ಸ್ವಲ್ಪ ಬದಲಾವಣೆಗಳೊಂದಿಗೆ ಸಾಮಾನ್ಯ ಜ್ಞಾನದ ಭಾಗಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
☆.ಸವಿಸ್ತಾರವಾದ ಅಧ್ಯಯನಕ್ಕೆ ಈ ನನ್ನ ಪ್ರಯತ್ನ ಅನುಕೂಲವಾಗಬಹುದೆಂಬ ಅಭಿಲಾಷೆಯೊಂದಿಗೆ...ನಿಮ್ಮ ಅಮೂಲ್ಯವಾದ ಸಲಹೆ, ಸೂಚನೆಗಳಿಗೆ ಕಾದಿರುವ.... ಸ್ಪರ್ಧಾಲೋಕ.
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•


781)  ಪ್ರಸ್ತುತ ಭಾರತೀಯ ಬ್ಯಾಹ್ಯಾಕಾಶ ಸಂಸ್ಥೆ (ಇಸ್ರೊ)ಯ ಅಧ್ಯಕ್ಷ :

■. ಕಿರಣ್‌ ಕುಮಾರ್‌


782)  ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ :

■. ವಿಶ್ವನಾಥ್‌ ಪ್ರಸಾದ್‌ ತಿವಾರಿ


783)  ಹೈಕೋರ್ಟ್‌ಗಳ ಮರುನಾಮಕರಣ ಮಾಡುವ ಅಧಿಕಾರವನ್ನು ರಾಷ್ಟ್ರಪತಿಗೆ ನೀಡುವ ಕಾನೂನು ತರುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
■. ಹೊಸ ಕಾಯ್ದೆ ಅಸ್ತಿತ್ವಕ್ಕೆ ಬಂದಲ್ಲಿ ರಾಷ್ಟ್ರಪತಿಗಳು ಆಯಾ ರಾಜ್ಯಗಳ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಹೈಕೋರ್ಟ್‌ಗೆ ಹೊಸ ಹೆಸರು ಇಡಬಹುದಾಗಿದೆ.
■. ಪ್ರಸ್ತುತ, ದೇಶದಲ್ಲಿ ಹೈಕೋರ್ಟ್‌ಗಳಿಗೆ ಮರುನಾಮಕರಣ ಮಾಡಲು ಕಾರ್ಯವಿಧಾನವಿಲ್ಲ. ಹಾಲಿ ಇರುವ ನಗರಗಳ ಹೆಸರುಗಳನ್ನೇ ಹೈಕೋರ್ಟ್‌ಗಳಿಗೆ ಇಡಬೇಕು ಎನ್ನುವ ಬೇಡಿಕೆ ಇದೆ.


784)  ‘370ನೇ ವಿಧಿಯು ‘ತಾತ್ಕಾಲಿಕ ನಿಯಮ’ ಎನ್ನುವ ಶೀರ್ಷಿಕೆಯಲ್ಲಿ ಇದೆ. ಅಲ್ಲದೇ ಪ್ಯಾರಾ 21ರಲ್ಲಿ ‘ತಾತ್ಕಾಲಿಕ, ಬದಲಾಗಬಹುದಾದ, ವಿಶೇಷ ನಿಯಮ’ ಎನ್ನುವ ಶೀರ್ಷಿಕೆ ಇದೆ. ಆದರೂ ಸಂವಿಧಾನದಲ್ಲಿ ಇದಕ್ಕೆ ಕಾಯಂ ಸ್ಥಾನಮಾನ ಇದೆ’ ಎಂದು ವಿಭಾಗೀಯ ಪೀಠ ಹೇಳಿದೆ.
■. ‘370 (1) ನೇ ವಿಧಿ ಅಡಿ ಸಂವಿಧಾನದ ಯಾವುದೇ ನಿಯಮವನ್ನು ರಾಜ್ಯಕ್ಕೆ ವಿಸ್ತರಿಸುವ ಅಧಿಕಾರ ರಾಷ್ಟ್ರಪತಿಗೆ ಇದೆ.
■. ರಾಜ್ಯ ಸರ್ಕಾರದ ಸಮ್ಮತಿ ಪಡೆದುಕೊಂಡು ಅವರು ಆ ನಿಯಮದಲ್ಲಿ ಬದಲಾವಣೆ ತರಬಹುದು. ನಿಯಮಕ್ಕೆ ತಿದ್ದಪಡಿ ತರುವುದು ಅಥವಾ ಬದಲಾವಣೆ ಮಾಡುವುದು, ಅಳಿಸಿ ಹಾಕುವುದು ಅಥವಾ ತೆಗೆದುಹಾಕುವುದು ಅಥವಾ ಹೆಚ್ಚುವರಿಯಾಗಿ ಸೇರಿಸುವುದು... ಇತ್ಯಾದಿ ಅಧಿಕಾರಗಳು ಇದರಲ್ಲಿ ಅಡಕವಾಗಿರುತ್ತವೆ’ ಎಂದೂ ಕೋರ್ಟ್‌ ತಿಳಿಸಿದೆ.
(Mon, 10/12/2015)


785)  ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಹಂಗಳ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ರಾಜ್ಯದ ಮೊದಲ ‘ಜಿಪಿ-1’ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಎಸ್. ಮಹದೇವ ಪ್ರಸಾದ್ ಚಾಲನೆ ನೀಡಿದರು.
■. ‘ಬೆಂಗಳೂರು– ಒನ್’ ಎಂಬ ಸೇವೆಯ ಮಾದರಿಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ‘ಗ್ರಾಮ ಪಂಚಾಯಿತಿ-1’ ಎಂಬ ಆನ್‌ಲೈನ್‌ ಸೇವೆ ಗ್ರಾಮೀಣರಿಗೆ ದೊರೆಯಲಿದೆ.
■. ‘ಗಾಂಧಿ ಗ್ರಾಮ’ ಪುರಸ್ಕಾರ ಪಡೆದ ಮತ್ತು ಡಿಜಿಟಲೀಕರಣದ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಎಂದು ಹೆಸರು ಪಡೆದಿರುವ ಈ ಕಾಡಂಚಿನ ಗ್ರಾಮ ಪಂಚಾಯಿತಿ ಈ ಮೂಲಕ ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
(Mon, 12th Oct, 2015)


786)  ಮಂಗಳೂರಿನ ಕೃಪಾ ಆಳ್ವ ಅವರನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಕಳೆದ ಜೂನ್‌ನಲ್ಲಿ ಸರ್ಕಾರ ನೇಮಕ ಮಾಡಿದೆ.(June, 2015)


787)  ಹೊಸ ಸಂವಿಧಾನದ ಮೂಲಕ ಹಿಂದೂ ರಾಜಪ್ರಭುತ್ವದಿಂದ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿದ ನೇಪಾಳ ರಾಷ್ಟ್ರಕ್ಕೆ ನೂತನ ಪ್ರಧಾನಿಯಾಗಿ ಖಡ್ಗ ಪ್ರಸಾದ್ ಶರ್ಮಾ ಒಲಿ ಅವರು ಆಯ್ಕೆಯಾಗಿದ್ದಾರೆ.
■. ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದ ಸಿಪಿಎನ್ ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಒಲಿ ಅವರಿಗೆ 598 ಸದಸ್ಯರ ಪೈಕಿ 338 ಮತಗಳು ದೊರಕಿದ್ದು, ನೇಪಾಳದ 38ನೇ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
■. ನೇಪಾಳದ ಹಾಲಿ ಪ್ರಧಾನಿಯಾಗಿದ್ದ ಸುಶೀಲ್ ಕೊಯಿರಾಲಾ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಶನಿವಾರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಪ್ರಧಾನಿ ಆಯ್ಕೆಗೆ ಮತ್ತೆ ನೇಪಾಳಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸುಶೀಲ್ ಕೊಯಿರಾಲಾ ಅವರಿಗೆ 249 ಮತಗಳು ದೊರಕಿವೆ.
(Mon, 12th Oct, 2015)


788)  (1972) ಒಲಂಪಿಕ್ಸ್‌ನಲ್ಲೂ ವೇಣುವಾದನ ಮಾಡಿದ ಅಪರೂಪದ ಖ್ಯಾತ ಕೊಳಲು ವಾದಕ ಎನ್‌.ರಮಣಿ (81 ವರ್ಷ) ಅವರು ಶುಕ್ರವಾರ ಚೆನ್ನೈನಲ್ಲಿ ನಿಧನರಾದರು.
(Sat, 10/10/2015)


789)  ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನವೆಂಬರ್ 26, 27, 28 ಮತ್ತು 29ರಂದು ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್‌ ನುಡಿಸಿರಿ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
(Sat, 10th Oct, 2015)


790)  ಅ. 17 – 18 ರಂದು ಬಾಗಲಕೋಟೆಯಲ್ಲಿ ಅಖಿಲ ಭಾರತ ಆರನೇ ‘ದಲಿತ ಸಾಹಿತ್ಯ ಸಮ್ಮೇಳನ’. ಡಾ. ಸತ್ಯಾನಂದ ಪಾತ್ರೋಟ ಈ ಸಮ್ಮೇಳನದ ಅಧ್ಯಕ್ಷರು.


791)  ಹಿರಿಯ ಸಂಗೀತ ನಿರ್ದೇಶಕ, ಗಾಯಕ ಹಾಗೂ ಗೀತರಚನೆಕಾರ ರವೀಂದ್ರ ಜೈನ್‌ (71ವರ್ಷ) ಅವರು ಅಂಗಾಂಗ ವೈಫಲ್ಯಗಳಿಂದಾಗಿ ಮುಂಬೈಯ ಲೀಲಾವತಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನ ಹೊಂದಿದರು.
(Sat, 10th Oct, 2015)


792)  ಖ್ಯಾತ ವಿಜ್ಞಾನಿ ಶೇಖರ್‌ ಬಸು ಅವರನ್ನು ಅಣುಶಕ್ತಿ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
(Sat, 10th Oct, 2015)


793)  ನಾಲ್ಕು ವರ್ಷಗಳಲ್ಲಿ (2009–2013) ಹನ್ನೊಂದು ಅಣು ವಿಜ್ಞಾನಿಗಳು ಅಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾರೆ ಎಂಬ ವಿಷಯ ಅಣು ಶಕ್ತಿ ಇಲಾಖೆ ವರದಿಯಿಂದ ಬಹಿರಂಗಗೊಂಡಿದೆ.
(Fri, 9th Oct, 2015)


794)  ಏಷ್ಯಾದ ಅತ್ಯಂತ ದೊಡ್ಡ ಸಾಹಿತ್ಯಿಕ ಹಬ್ಬ ಎಂಬ ಖ್ಯಾತಿ ಪಡೆದಿರುವ ‘ಜೈಪುರ ಸಾಹಿತ್ಯ ಉತ್ಸವ–2016’ ಜನವರಿ 21ರಿಂದ ಐದು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಭಾರತೀಯ ಲೇಖಕರೂ ಸೇರಿದಂತೆ ವಿಶ್ವದ ವಿವಿಧ ಭಾಗಗಳ 165 ಮಂದಿ ಖ್ಯಾತ ಬರಹಗಾರರು ಪಾಲ್ಗೊಳ್ಳಲಿದ್ದಾರೆ.


795)  ಯುನಿಸೆಫ್‌ ಹಾಗೂ ಗ್ಲೋಬಲ್ ಗೋಲ್ಸ್‌ ಸಂಸ್ಥೆ ಜಂಟಿಯಾಗಿ ರೂಪಿಸಿರುವ ‘ದಿ ವರ್ಲ್ಡ್ಸ್ ಲಾರ್ಜೆಸ್ಟ್‌ ಲೆಸನ್‌’ ಯೋಜನೆಯ ಭಾರತೀಯ ರಾಯಭಾರಿಯಾಗಿ ಖ್ಯಾತ ಬಾಲಿವುಡ್ ನಟ ಹೃತಿಕ್‌ ರೋಷನ್‌ ಅವರನ್ನುನೇಮಕ ಮಾಡಲಾಗಿದೆ.
■. ಸುಮಾರು ನೂರಕ್ಕೂ ಹೆಚ್ಚು ರಾಷ್ಟ್ರಗಳ ಮಕ್ಕಳಲ್ಲಿ ‘ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಸವಾಲು’ ಕುರಿತು ಜಾಗೃತಿ ಮೂಡಿಸಲು ಯೋಜನೆಯನ್ನು ರೂಪಿಸಲಾಗಿದೆ.
■. ಹವಾಮಾನ ವೈಪರೀತ್ಯ, ಗುಣಮಟ್ಟದ ಶಿಕ್ಷಣ, ಬಡತನ ನಿರ್ಮೂಲನೆ, ಆರೋಗ್ಯ, ಮುಂತಾದ ಜಾಗತಿಕ ಸವಾಲು ಮತ್ತು ಗುರಿಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಈ ರಾಯಭಾರಿಗಳು ಮಾಡಲಿದ್ದಾರೆ.
(Wed, 10/07/2015)


796)  ತಮಿಳು ಲೇಖಕ ಪೆರುಮಾಳ್‌ ಮುರುಗನ್‌ ಅವರಿಗೆ 4ನೇ ಭಾರತೀಯ ಭಾಷಾ ಉತ್ಸವದ ‘ಸಮನ್ವಯ ಭಾಷಾ ಸಮ್ಮಾನ್‌’ ಪ್ರಶಸ್ತಿ ಲಭಿಸಿತು.
(Tue, 6th Oct, 2015)


797)  ಮಹಾಸಭೆಯ 70ನೇ ಅಧಿವೇಶನ ಮಂಗಳವಾರ ಪ್ರಾರಂಭ.
■.ಪ್ರಸ್ತುತ ವಿಶ್ವಸಂಸ್ಥೆಯ ಮಹಾಸಭೆಯ ಅಧ್ಯಕ್ಷ ಸ್ಯಾಮ್‌ ಕಹಂಬ ಕುಟೆಸಾ.
(Wed, 09/16/2015)


799)  ಅಗ್ರ ಶ್ರೇಯಾಂಕದ ಜೋಡಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಅವರು ಡಬ್ಲ್ಯುಟಿಎ ಚೀನಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿದೆ.
(Sun, 11th Oct, 2015)


800)  ಮುರುಘಾಮಠದಿಂದ ಪ್ರತಿ ವರ್ಷ ನೀಡುವ ‘ಬಸವಶ್ರೀ’ ಪ್ರಶಸ್ತಿಯನ್ನು ಈ ಬಾರಿ ಸಂಶೋಧನೆ, ಸಾಹಿತ್ಯ ಹಾಗೂ ಅಧ್ಯಯನದಲ್ಲಿ ಪಾಂಡಿತ್ಯ ಹೊಂದಿದ್ದ ಖ್ಯಾತ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ನೀಡಲಾಗುತ್ತಿದೆ ಎಂದು ಮುರುಘಾಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾಶರಣರು ಪ್ರಕಟಿಸಿದರು.
(Thu, 8th Oct, 2015)


801)  ಮಂಗಳೂರು ವಿಶ್ವ ಕೊಂಕಣಿ ಕೇಂದ್ರ ನೀಡುವ ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಪುಸ್ತಕ ಪುರಸ್ಕಾರ -2015’ಕ್ಕೆ ಗೋವಾದ ಲೇಖಕಿ ಮೀನಾ ಎಸ್. ಕಾಕೋಡಕರ್ ಬರೆದಿರುವ ‘ವಾಸ್ತು’ ಕಾದಂಬರಿ ಆಯ್ಕೆಯಾಗಿದೆ.
■. ‘ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕವಿತಾ ಕೃತಿ ಪುರಸ್ಕಾರ’ಕ್ಕೆ ಮಂಗಳೂರಿನ ಕವಿ ಆಂಡ್ರ್ಯೂ ಎಲ್. ಡಿಕುನ್ಹಾ ಅವರ ‘ಅಂಜೂರಾಚೆ ಪಾನ್’ ಕವನ ಸಂಗ್ರಹ ಆಯ್ಕೆಯಾಗಿದೆ.
■. ಹಿರಿಯ ಕೊಂಕಣಿ ಸಂಶೋಧಕ ಗೋವಾದ ಸುರೇಶ ಜಿ. ಅಮ್ಮೋಣಕರ ಅವರು ‘ವಿಶ್ವ ಕೊಂಕಣಿ ಜೀವನ ಸಿದ್ಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
■. ಈ ಮೂರು ಪ್ರಶಸ್ತಿಗಳೂ ತಲಾ ₹ 1 ಲಕ್ಷ ನಗದು ಒಳಗೊಂಡಿವೆ.
(Thu, 8th Oct, 2015)


802)  ಸಂಯುಕ್ತ ಅರಬ್ ಒಕ್ಕೂಟದ (ಯುಎಇ) ಮಾನವ ಹಕ್ಕುಗಳ ಕಾರ್ಯಕರ್ತ ಅಹಮದ್ ಮನ್ಸೂರ್ 2015ರ ಪ್ರತಿಷ್ಠಿತ ಮಾರ್ಟಿನ್ ಎನ್ನಾಲ್ಸ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ■. ಮಾನವ ಹಕ್ಕುಗಳಿಗಾಗಿ ಶ್ರಮಿಸಿದವರಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ನೊಬೆಲ್‌ಗೆ ಸಮನಾದ ಪ್ರಶಸ್ತಿಯೆಂದು ಪರಿಗಣಿಸಲಾಗುತ್ತದೆ.
(Thu, 10/08/2015)


803)  ಕ್ಯಾನ್ಸರ್ ಕೋಶಗಳು ವೃದ್ಧಿಯಾಗದಂತೆ ತಡೆಯಬಲ್ಲ ಪ್ರೊಟೀನ್‌ ಅನ್ನು ಭಾರತ ಮೂಲದ ಸಂಶೋಧಕಿ ಡಾ. ಡೆಬೊರಾ ಗೋವರ್ಧನ್ಅವರು ಪತ್ತೆ ಮಾಡಿದ್ದಾರೆ .
■. ‘ಪಿಎಟಿ4’ ಹೆಸರಿನ ಪ್ರೊಟೀನ್‌ ಕ್ಯಾನ್ಸರ್ ಕೋಶಗಳು ವೃದ್ಧಿಯಾಗದಂತೆ ತಡೆಯಬಲ್ಲದು ಎಂದು ಸಂಶೋಧನೆಯಲ್ಲಿ ಸಾಬೀತಾಗಿದೆ.
■. ‘ಆಕ್ರಮಣಕಾರಿ ಕ್ಯಾನ್ಸರ್ ಕೋಶಗಳು ಹೆಚ್ಚು ಪ್ರೊಟೀನ್‌ (ಪಿಎಟಿ4) ಅನ್ನು ಉತ್ಪಾದಿಸುತ್ತವೆ. ಈ ಪ್ರೊಟೀನ್‌ಗಳು ಕ್ಯಾನ್ಸರ್ ಕೋಶದ ಸುತ್ತಮುತ್ತಲಿರುವ ಪೌಷ್ಟಿಕಾಂಶ ಮತ್ತು ಆರೋಗ್ಯಕರ ಕೋಶಗಳನ್ನು ಕಬಳಿಸುತ್ತವೆ.
■. ಈ ಪ್ರೊಟೀನ್‌ ಅಧಿಕ ಪ್ರಮಾಣದಲ್ಲಿರುವ ಕ್ಯಾನ್ಸರ್ ರೋಗಿಗಳಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ನಿಧಾನವಾಗುತ್ತದೆ’ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಶರೀರ, ಅಂಗರಚನಾ ಶಾಸ್ತ್ರ ಮತ್ತು ತಳಿಶಾಸ್ತ್ರ ವಿಭಾಗದ ಸಂಶೋಧಕಿ ಡಾ.ಡೆಬೊರಾ ಗೋವರ್ಧನ್ ತಿಳಿಸಿದ್ದಾರೆ.
■. ‘ಪಿಎಟಿ4 ಪ್ರೊಟೀನ್‌ ಹೆಚ್ಚು ಇರುವ ರೋಗಿಗಳು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಿರಲಿಲ್ಲ. ಅದೇ ಪಿಎಟಿ4 ಪ್ರೊಟೀನ್ ಕಡಿಮೆ ಇರುವರೋಗಿಗಳಲ್ಲಿ ರೋಗ ಮರುಕಳಿಸುತ್ತಿತ್ತು ಮತ್ತು ಬೇಗನೆ ಸಾವನ್ನಪ್ಪುತ್ತಿದ್ದರು’ ಎಂಬುದನ್ನು ಸಂಶೋಧನೆಯಲ್ಲಿ ಕಂಡುಕೊಂಡಿರುವುದಾಗಿ ಅವರು ಹೇಳಿದ್ದಾರೆ.
■. ಗೋವರ್ಧನ್ ಅವರ ಈ ಸಂಶೋಧನಾ ವರದಿ ‘ಆಂಕೊಜೆನ್’ ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
(Thu, 8th Oct, 2015)


805)  ಸಂಶೋಧನೆ ಹಾಗೂ ಅಭಿವೃದ್ಧಿಯ ಕೇಂದ್ರವಾದ ಅಮೆರಿಕಕ್ಕೆ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳನ್ನು ಕಳುಹಿಸುವ ಏಷ್ಯಾದ ರಾಷ್ಟ್ರಗಳ ಪೈಕಿ ಭಾರತ ಮುಂಚೂಣಿ ಸ್ಥಾನವನ್ನು ಕಾಯ್ದುಕೊಂಡಿದೆ.
■. ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದ ರಾಷ್ಟ್ರೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಸಂಖ್ಯಾಶಾಸ್ತ್ರ ಕೇಂದ್ರದ ವರದಿ ಈ ಮಾಹಿತಿ ನೀಡಿದೆ.
(Wed, 7th Oct, 2015)


806)  ಆಹಾರ ಉತ್ಪಾದನೆ ಹಾಗೂ ಕೃಷಿಯಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನ- ಸಂಶೋಧನೆಯನ್ನು ಜಗತ್ತಿಗೆ ತಿಳಿಸುವ ‘ಮಿಲಾನ್- ಎಕ್ಸ್‌ಪೋ 2015 ಇಲ್ಲಿ ಈಗ ನಡೆಯುತ್ತಿದೆ.
■. ಆದರೊಂದಿಗೆ, ಜಗತ್ತಿನ ಜನರ ಹಸಿವು ನೀಗಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತಿರುವ ಸಣ್ಣ ರೈತರಿಗೆ ಮನ್ನಣೆ ಸಿಗಬೇಕು ಎಂಬ ಒತ್ತಾಯದೊಂದಿಗೆ ಎಕ್ಸ್‌ಪೋಗೆ ಸಮಾನಾಂತರವಾಗಿ ಹಮ್ಮಿಕೊಂಡಿರುವ ‘ವೀ ಫೀಡ್ ದ ಪ್ಲ್ಯಾನೆಟ್’ ಸಮಾವೇಶ ಕೂಡ ಇಲ್ಲಿ ಆರಂಭವಾಗಿದೆ.
(Tue, 10/06/2015)


807)  ಪ್ರಸ್ತುತ ಗ್ರೀಸ್ ದೇಶದ ಪ್ರಧಾನಿ :

■. ಅಲೆಕ್ಸಿಸ್ ಸಿಪ್ರಾಸ್


808)  ನಾಸಾ ವಿಜ್ಞಾನಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ತರಕಾರಿ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
■. ಐಎಸ್‌ಎಸ್‌ನಲ್ಲಿ ಸೊಪ್ಪು ಮತ್ತು ತರಕಾರಿ ಬೆಳೆಯಲು ನಾಸಾ ‘ವೆಜ್‌–01’ ಎಂಬ ಯೋಜನೆ ಕೈಗೊಂಡಿತ್ತು. ಇದು ಯಶಸ್ವಿಯಾಗಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ.
(Tue, 10/06/2015)


809)  ಪ್ರಮುಖ ಸಾಮಾಜಿಕ ಜಾಲತಾಣ ಟ್ವಿಟರ್‌ನ ಶಾಶ್ವತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ (ಸಿಇಒ) ಜಾಕ್‌ ಡೊರ್ಸಿ ನೇಮಕಗೊಂಡಿದ್ದಾರೆ.
(Mon, 5th Oct, 2015)


810)  ಭಾರತದ 17 ಉನ್ನತ ಶಿಕ್ಷಣ ಸಂಸ್ಥೆಗಳು ಜಗತ್ತಿನ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.(Fri, 2nd Oct, 2015)

(Courtesy :Prajawani newspaper)

.....ಮುಂದುವರಿಯುತ್ತದೆ :)

☀ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಮೂಲ/ಉಗಮಸ್ಥಾನ.  (Rivers and their places of origin) 

☀ಭಾರತದ ಪ್ರಮುಖ ನದಿಗಳು ಮತ್ತು ಅವುಗಳ ಮೂಲ/ಉಗಮಸ್ಥಾನ.
(Rivers and their places of origin)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ನದಿ. •┈┈┈┈┈┈┈┈┈┈┈• ●.ಮೂಲ/ಉಗಮಸ್ಥಾನ.
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ಗಂಗಾ:•┈┈┈┈┈┈┈┈┈┈┈• ಗಂಗೋತ್ರಿ (ಉತ್ತರಖಂಡ).

●.ಯಮುನಾ:•┈┈┈┈┈┈┈┈┈• ಯಮುನೋತ್ರಿ (ಉತ್ತರಖಂಡ).

●.ಇಂಡಸ್:•┈┈┈┈┈┈┈┈┈┈• ಮಾನಸ ಸರೋವರ (ಟಿಬೆಟ್).

●.ನರ್ಮದಾ:•┈┈┈┈┈┈┈┈• ಮೈಕಾಲ್ ಬೆಟ್ಟಗಳು, ಅಮರಕಂಟಕ್ (ಮಧ್ಯಪ್ರದೇಶ).

●.ತಾಪಿ / ತಪತಿ:•┈┈┈┈┈┈┈┈• ಸಾತ್ಪುರ ಶ್ರೇಣಿ, ಬೇತುಲ್ (ಮಧ್ಯಪ್ರದೇಶ).

●.ಮಹಾನದಿ:•┈┈┈┈┈┈┈┈┈┈• ನಗ್ರಿ ಪಟ್ಟಣ (ಛತ್ತೀಸ ಗಢ).

●.ಬ್ರಹ್ಮಪುತ್ರ:•┈┈┈┈┈┈┈┈┈• ಚೆಮಯಂಗ್ ಡಂಗ್ (ಟಿಬೆಟ್).

●.ಸಟ್ಲೆಜ್:•┈┈┈┈┈┈┈┈┈┈┈• ಕೈಲಾಶ್ ಪರ್ವತ (ಟಿಬೆಟ್).

●.ಬಿಯಾಸ್:•┈┈┈┈┈┈┈┈┈┈┈• ರೊಹ್ಟಂಗ್ ಪಾಸ್ (ಹಿಮಾಚಲ ಪ್ರದೇಶ).

●.ಗೋದಾವರಿ:•┈┈┈┈┈┈┈┈┈• ನಾಸಿಕ್ (ಮಹಾರಾಷ್ಟ್ರ).

●.ಕೃಷ್ಣ:•┈┈┈┈┈┈┈┈┈┈┈• ಮಹಾಬಲೇಶ್ವರ (ಮಹಾರಾಷ್ಟ್ರ).

●.ಕಾವೇರಿ:•┈┈┈┈┈┈┈┈┈• ಬ್ರಹ್ಮಗಿರಿ ಬೆಟ್ಟಗಳು, ಕೊಡಗು (ಕರ್ನಾಟಕ).

●.ಸಬರಮತಿ:•┈┈┈┈┈┈┈┈• ಉದಯಪುರ, ಅರಾವಳಿ ಬೆಟ್ಟಗಳು (ರಾಜಸ್ಥಾನ).

●.ರಾವಿ:•┈┈┈┈┈┈┈┈┈┈┈• ಚಂಬಾ (ಹಿಮಾಚಲ ಪ್ರದೇಶ).

●.ಪೆಣ್ಣೆರ್:•┈┈┈┈┈┈┈┈┈┈┈• ನಂದಿ ಬೆಟ್ಟ, ಚಿಕ್ಕಬಳ್ಳಾಪುರ (ಕರ್ನಾಟಕ).

☀ದೇಶದಲ್ಲಿನ ಪ್ರಮುಖ ನದಿ ನೀರಿನ ವಿವಾದಗಳು ಹಾಗೂ ಅವು ಸಂಬಂಧಪಟ್ಟ ರಾಜ್ಯಗಳು : (River water disputes in India and State involved)

☀ದೇಶದಲ್ಲಿನ ಪ್ರಮುಖ ನದಿ ನೀರಿನ ವಿವಾದಗಳು ಹಾಗೂ ಅವು ಸಂಬಂಧಪಟ್ಟ ರಾಜ್ಯಗಳು :
(River water disputes in India and State involved)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ನದಿ ನೀರಿನ ವಿವಾದಗಳು •┈┈┈┈┈┈┈┈┈┈┈┈┈┈┈┈┈┈┈┈• ●.ರಾಜ್ಯಗಳು
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

1).ಕೃಷ್ಣ ನದಿ ನೀರಿನ ವಿವಾದ •┈┈┈┈• ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ.

2).ಮಹಾದಾಯಿ / ಮಾಂಡೋವಿ ನದಿ ನೀರಿನ ವಿವಾದ •┈┈┈┈• ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ.

3).ವಂಸಧಾರಾ ನದಿ ನೀರಿನ ವಿವಾದ •┈┈┈┈• ಆಂಧ್ರಪ್ರದೇಶ ಹಾಗೂ ಒಡಿಶಾ.

4).ಕಾವೇರಿ ನದಿ ನೀರಿನ ವಿವಾದ •┈┈┈┈• ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಪುದುಚೇರಿ.

5).ಬಭಲಿ ಆಣೆಕಟ್ಟು ಸಮಸ್ಯೆ •┈┈┈┈• ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ.

6).ಮುಲ್ಲ ಪೆರಿಯಾರ್ ಅಣೆಕಟ್ಟು ಸಮಸ್ಯೆ •┈┈┈┈• ತಮಿಳುನಾಡು ಮತ್ತು ಕೇರಳ.