"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 31 December 2022

•► ಬಾಂಬ್ ಸೈಕ್ಲೋನ್ (Bomb Cyclone) :

 
•►  ಬಾಂಬ್ ಸೈಕ್ಲೋನ್ (Bomb Cyclone) :
━━━━━━━━━━━━━━━━━━━━━━━━━


- ‘ಬಾಂಬ್ ಸೈಕ್ಲೋನ್’ ಎಂದು ಕರೆಸಿಕೊಳ್ಳುವ ಚಳಿಗಾಲದ ಚಂಡಮಾರತವು ಭೂಮಿಯ ಮೇಲ್ಮೈ ಭಾಗದ ಬೆಚ್ಚನೆಯ ಗಾಳಿಗೆ ಭಾರಿ ಶೀತಗಾಳಿ ಡಿಕ್ಕಿ ಹೊಡೆದಾಗ ಉಂಟಾಗುವ ಒತ್ತಡಕ್ಕೆ ಬಾಂಬ್‌ ಸೈಕ್ಲೋನ್‌ ಎಂದು ಕರೆಯಲಾಗುತ್ತದೆ.

 
- 24 ಗಂಟೆಯೊಳಗೆ ಗಾಳಿಯ ಒತ್ತಡ 20 ಮಿಲಿಬಾರ್‌ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಾಗ ಉಂಟಾಗುವ ತೀವ್ರಗತಿಯ ಮಾರುತ
ವನ್ನು ಸಹ ಇದೇ ಹೆಸರಿನಿಂದ ಕರೆಯಲಾಗುತ್ತದೆ.

- ವಾಯುಭಾರ ಒತ್ತಡವು ಇಳಿಕೆಯಾಗಿ, ಶೀತ ಗಾಳಿಯ ದ್ರವ್ಯರಾಶಿಯು ಬಿಸಿಗಾಳಿಯ ದ್ರವ್ಯರಾಶಿಯೊಂದಿಗೆ ಘರ್ಷಣೆಯಾದಾಗ “ಬಾಂಬ್‌ ಸೈಕ್ಲೋನ್‌’ ಉಂಟಾಗುತ್ತದೆ.

- ಒತ್ತಡವು ಎಷ್ಟು ಕಡಿಮೆಯಾಗುತ್ತದೋ ಗಾಳಿಯು ಅಷ್ಟೇ ಬಲಿಷ್ಠವಾಗುತ್ತದೆ. ಕೆಲವೇ ಗಂಟೆಗಳ ಅವಧಿಯಲ್ಲಿ ತಾಪಮಾನ 11 ಡಿ.ಸೆ.ಗಿಂತಲೂ ಹೆಚ್ಚು ಇಳಿಯುತ್ತದೆ.

- ಇಂತಹ ಪರಿಸ್ಥಿತಿಯಲ್ಲಿ ಫ್ರಾಸ್ಟ್‌ಬೈಟ್‌  (ಚಳಿಯ ಹೊಡೆತಕ್ಕೆ ಚರ್ಮಕ್ಕೆ ಆಗುವ ಗಾಯ)  ಉಂಟಾಗುವ ಹೆಚ್ಚು ಸಂಭವವಿರುತ್ತದೆ. ಫ್ರಾಸ್ಟ್‌ಬೈಟ್‌ ಎಂದರೆ ಅತಿಯಾದ ಶೀತಕ್ಕೆ ಮೈ ಒಡ್ಡಿಕೊಂಡರೆ ದೇಹದ ಅಂಗಾಂಶಗಳಿಗೆ ಉಂಟಾಗುವ ಗಾಯ. ಮೂಗು, ಕೈಬೆರಳು, ಕಾಲೆºರಳುಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಗ್ಯಾಂಗ್ರೀನ್‌ಗೂ ಕಾರಣವಾಗಬಹುದು.

- ಪ್ರಸ್ತುತ ಅಮೆರಿಕಕ್ಕೆ ಈ ತೀವ್ರ ಶೀತ ಚಂಡಮಾರುತ (ಬಾಂಬ್‌ ಸೈಕ್ಲೋನ್‌) ಅಪ್ಪಳಿಸಿದ್ದು, ತಾಪಮಾನ ‘ಮೈನಸ್‌ 40’ ಡಿಗ್ರಿವರೆಗೆ ಕುಸಿದಿದೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಡಕೋಟಾ, ಓಕ್ಲಹಾಮ, ಅಯೋವಾ ಮತ್ತು ಡಲ್ಲಾಸ್, ಟೆಕ್ಸಾಸ್‌ ಗಳೊಳಗೊಂಡಂತೆ ಎಲ್ಲ ರಾಜ್ಯಗಳ ಮೇಲೂ ಪರಿಣಾಮ ಬೀರಿದೆ.

Friday, 23 December 2022

•► ಅನ್ನಿ ಬೆಸೆಂಟ್ ರವರ ಪ್ರಸಿದ್ಧ ಸಾಹಿತ್ಯ ಕೃತಿಗಳು: (Annie Besant's famous literary works)

 •► ಅನ್ನಿ ಬೆಸೆಂಟ್ ರವರ ಪ್ರಸಿದ್ಧ ಸಾಹಿತ್ಯ ಕೃತಿಗಳು:
(Annie Besant's famous literary  works)

━━━━━━━━━━━━━━━━━━━━━━━━━━━━

ಅನ್ನಿ ಬೆಸೆಂಟ್‍ರು ಐರಿಶ್ ಮೂಲದ ಭಾರತೀಯರ ಹಕ್ಕುಗಳಿಗಾಗಿ ಹೋರಾಡಿದ ಪ್ರಮುಖ ಥಿಯೊಸೊಫಿಸ್ಟ್ ರಾಜಕೀಯ ನಾಯಕಿ, ಬ್ರಿಟಿಷ್ ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಬರಹಗಾರ್ತಿ ಮತ್ತು ವಾಗ್ಮಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಇವರು ವಿವಿಧ ಪ್ರಮುಖ ಚಳುವಳಿಗಳ ಮುಖ್ಯಸ್ಥರಾಗಿ ಮತ್ತು ಮಹಿಳಾ ಹಕ್ಕುಗಳ ಪರವಾದ ಹೋರಾಟದಲ್ಲಿ ನಾಯಕಿಯಾಗಿ 'ಜನತೆಯ ದಣಿವರಿಯದ ಸೇವಕಿ' ಎಂದು ಹೆಸರಾಗಿದ್ದರು.
 
1.ಅನ್ನಿ ಬೆಸೆಂಟ್ ಅವರ ಪ್ರಸಿದ್ಧ ಸಾಹಿತ್ಯ ಕೃತಿಗಳಲ್ಲಿ ಒಂದಾದ
'ಭಾರತ : ಒಂದು ರಾಷ್ಟ್ರ; ಸ್ವಯಂ ಸರ್ಕಾರಕ್ಕಾಗಿ ಕರೆ' (India:  A  Nation;  A  Plea  for  Self  Government) ಎಂಬ ಪುಸ್ತಕವನ್ನು  1915 ರಲ್ಲಿ ಬರೆದರು.
- ಈ ಪುಸ್ತಕದಲ್ಲಿ ಅವರು ಭಾರತೀಯ ದೃಷ್ಟಿಕೋನದಿಂದ ಜ್ವಲಂತ ಭಾರತೀಯರ ಪರಿಸ್ಥಿತಿಗಳು ಮತ್ತು ಸಮಸ್ಯೆಗಳನ್ನು ಬ್ರಿಟಿಷ್ ಗಮನಕ್ಕೆ ತಂದರು ಆ ಮೂಲಕ ಭಾರತದ ನಿಜವಾದ ಹಿತಾಸಕ್ತಿಗಳನ್ನು ಸ್ಪಷ್ಟಪಡಿಸಿದರು..
- ಇದು ರಾಜಕೀಯ ರಚನೆಯನ್ನು ಅಧ್ಯಯನ ಮಾಡುವ ಮೂಲಕ ಮತ್ತು ಭಾರತೀಯ ಪರಿಸ್ಥಿತಿಗಳು ಮತ್ತು ಹಿತಾಸಕ್ತಿಗಳನ್ನು  ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗಳೊಂದಿಗೆ ಸಮನ್ವಯಗೊಳಿಸಲು ಪ್ರಯತ್ನಿಸಿತು.
 
2.ಪುರಾತನ ಲೋಕಜ್ಞಾನ (The Ancient  Wisdom)
3.ನಾಸ್ತಿಕತೆಯೆಡೆಗೆ ನನ್ನ ಮಾರ್ಗ.(My path  to atheism)
4.ಭಾರತೀಯ ರಾಜಕೀಯದ ಭವಿಷ್ಯ.(The Future Of  Indian  Politics)
5.ದೇವರಿಲ್ಲದ ಜಗತ್ತು.(A World Without  God)
6.ಗಾಂಧಿವಾದಿ ಅಸಹಕಾರ; ಅಥವಾ, ಭಾರತವು ಆತ್ಮಹತ್ಯೆ ಮಾಡಿಕೊಳ್ಳಬೇಕೆ?.(Gandhian Non Cooperation;  Or, Shall  India Commit  Suicide?)
7.ಎದ್ದೇಳು, ಭಾರತ: ಸಮಾಜ ಸುಧಾರಣೆಗಾಗಿ ಕರೆ.(Wake Up, India:  A  Plea For  Social  Reform)
8.ಕರ್ಮದ ಅಧ್ಯಯನ.( A Study  in Karma)

 
- ಥಿಯೊಸಾಫಿಕಲ್ ಸೊಸೈಟಿಯ ಸದಸ್ಯರಾಗಿ ಹಾಗೂ ನಂತರದಲ್ಲಿ ಅದರ ಅಧ್ಯಕ್ಷರಾಗಿ ಬೆಸೆಂಟ್ ಅವರು ಪ್ರಪಂಚದಾದ್ಯಂತ ವಿಶೇಷವಾಗಿ ಭಾರತದಲ್ಲಿ ಥಿಯೊಸಾಫಿಕಲ್ ನಂಬಿಕೆಗಳನ್ನು ಪ್ರಚುರಪಡಿಸಲು  ಶ್ರಮಿಸಿದರು. ಇವರು ಮೊದಲು 1893 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ತದನಂತರ ಇಲ್ಲಿಯೇ ನೆಲೆಸಿ ಭಾರತೀಯ ರಾಷ್ಟ್ರೀಯ ಚಳುವಳಿಯಲ್ಲಿ ತೊಡಗಿಸಿಕೊಂಡರು.
 
-1916 ರಲ್ಲಿ ಅವರು ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು ಹಾಗು ಅದರ ಅಧ್ಯಕ್ಷರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ಸದಸ್ಯರೂ ಕೂಡ ಆಗಿದ್ದರು.


- ಶಿಕ್ಷಣದಲ್ಲಿ ಇವರ ದೀರ್ಘಕಾಲದ ಆಸಕ್ತಿಯು ಬನಾರಸ್‌ನಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಲು ಕಾರಣವಾಯಿತು (1898).


- ಅನ್ನಿ ಬೆಸೆಂಟ್ ಅವರು "ದಿ ಕಾಮನ್‌ವೆಲ್" (The Commonweal)ಮತ್ತು "ನ್ಯೂ ಇಂಡಿಯಾ" (New  India) ಎಂಬ ಎರಡು ದಿನ ಪತ್ರಿಕೆಗಳನ್ನು ಸ್ಥಾಪಿಸಿದರು.
 

Tuesday, 20 December 2022

•► ಘರಾನಾ ಜೌಗು ಪ್ರದೇಶ (ತೇವ ಭೂಮಿ) (Gharana Wetlands)

 •► ಘರಾನಾ ಜೌಗು ಪ್ರದೇಶ (ತೇವ ಭೂಮಿ)
(Gharana Wetlands)

━━━━━━━━━━━━━━━━━━━━━━━━━

- ಸಂರಕ್ಷಿತ ಜೌಗು ಪ್ರದೇಶ +  ಜಮ್ಮು ಮತ್ತು ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿಯ ಪಕ್ಕದಲ್ಲಿರುವ  ರಣಬೀರ್ ಸಿಂಗ್‌ಪುರದ ಘರಾನಾ ಗ್ರಾಮದಲ್ಲಿನ ಜಲಾಶಯ - ಅರೆ-ಶುಷ್ಕ ತೇವ ಪ್ರದೇಶ + ಚೀನಾ, ಸೈಬೀರಿಯಾ ಮತ್ತು ಇತರ ದೇಶಗಳಿಂದ ಬರುವ 50 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆ +  ಇದನ್ನು ಪ್ರಮುಖ ಪಕ್ಷಿ ಪ್ರದೇಶ (IBA) ಎಂದು ಘೋಷಿಸಲಾಗಿದೆ + ಜಮ್ಮುವಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಘರಾನಾವು ಮಕ್ವಾಲ್, ಕುಕ್ಡಿಯನ್, ಅಬ್ದುಲ್ಲಿಯನ್ ಮತ್ತು ಪರ್ಗ್ವಾಲ್ ಜೌಗು ಪ್ರದೇಶಗಳಿಂದ ಆವೃತವಾಗಿದೆ + ಇಲ್ಲಿ 170 ಕ್ಕೂ ಹೆಚ್ಚು ತಳಿಯ  ಮೂಲವಾಸಿ  ಮತ್ತು ವಲಸೆ ಹಕ್ಕಿಗಳು ಚಳಿಗಾಲದಲ್ಲಿ ಸೇರುತ್ತವೆ. + ಈ ಘರಾನಾ ಜೌಗು ಪ್ರದೇಶವು ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ಚಳಿಗಾಲದ ತಿಂಗಳುಗಳಲ್ಲಿ 25,000-30,000 ಪಕ್ಷಿಗಳಿಗೆ ನೆಲೆಯಾಗಿದೆ.


— ಇಲ್ಲಿ ವಲಸೆ ಬರುವ ಪಕ್ಷಿಗಳಲ್ಲಿ ಪ್ರಮುಖವಾದವುಗಳೆಂದರೆ; ಬಾರ್-ಹೆಡೆಡ್ ಗೂಸ್,  ನಾರ್ದರ್ನ್ ಪಿನ್‌ಟೇಲ್, ನಾರ್ದರ್ನ್ ಶೊವೆಲರ್, ಬ್ಲ್ಯಾಕ್-ವಿಂಗ್ಡ್ ಸ್ಟಿಲ್ಟ್ ಮತ್ತು ಗ್ರೇ ಹೆರಾನ್ ಸಾಮಾನ್ಯವಾಗಿ ವಲಸೆ ಬರುವ ಪಕ್ಷಿಗಳಾದರೆ, ಘರಾನಾ ವೆಟ್‌ಲ್ಯಾಂಡ್‌ನಲ್ಲಿ ಕಂಡುಬರುವ ಇತರೆ ಹೊಸ ಪ್ರಭೇದದ ಪಕ್ಷಿಗಳೆಂದರೆ ವೈಟ್-ಬ್ರೆಸ್ಟೆಡ್ ಐಬಿಸ್, ಪೈಡ್ ಕಿಂಗ್‌ಫಿಷರ್ ಮತ್ತು ಯುರೇಷಿಯನ್ ವಿಜಿಯನ್ ಗಳಾಗಿವೆ. ಘರಾನಾದಲ್ಲಿ ವಿರಳವಾಗಿ ಕಂಡುಬರುವ ಉಣ್ಣೆಯ ಕುತ್ತಿಗೆಯ ಕೊಕ್ಕರೆಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜೌಗು ಪ್ರದೇಶಕ್ಕೆ ಹಾರಿವೆ.

Monday, 24 October 2022

•► ರಕ್ತದ ಗುಂಪುಗಳ ನಡುವಿನ ವ್ಯತ್ಯಾಸ ಮತ್ತು ಅವುಗಳ ವಿಶೇಷತೆ: (Some intresting facts on Blood Group and How Blood type is determined)

 
•► ರಕ್ತದ ಗುಂಪುಗಳ ನಡುವಿನ ವ್ಯತ್ಯಾಸ ಮತ್ತು ಅವುಗಳ ವಿಶೇಷತೆ:
(Some intresting facts on Blood Group and How Blood type is determined)

━━━━━━━━━━━━━━━━━━━━━━━━━━━━━━━━━━━━━━━━━━━━━

ಸಾಮಾನ್ಯವಾಗಿ ನಮ್ಮೆಲ್ಲರ ರಕ್ತ ಒಂದೇ ರೀತಿಯಾಗಿರುತ್ತದೆ. ಮೂಲತಃ ಮನುಷ್ಯನ ರಕ್ತ ಅದೇ ಪ್ಲಾಸ್ಮಾ, ಜೀವಕೋಶಗಳು ಮತ್ತು ಇತರ ರಾಸಾಯನಿಕ ವಸ್ತುಗಳಿಂದ ಮಾಡಲ್ಪಟ್ಟಿದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ ಜೀವಕೋಶಗಳು, ಪ್ಲಾಸ್ಮಾದಲ್ಲಿನ ವ್ಯವಸ್ಥೆಗಳು ಮತ್ತು ರಾಸಾಯನಿಕ ಪ್ರಮಾಣದಲ್ಲಿ ಕೆಲವು ವ್ಯತ್ಯಾಸ ಇರುತ್ತದೆ. ಇದೇ ಕಾರಣಕ್ಕೆ ಆಸ್ಪತ್ರೆಗಳಲ್ಲಿ ರಕ್ತದ ಬದಲಿಗೆ ರಕ್ತ ವಿನಿಮಯ ಮಾಡಿಕೊಳ್ಳುವ ಪ್ರಮೇಯವಿದ್ದಾಗ ಕೂಲಂಕಷವಾಗಿ ಪರೀಕ್ಷೆ ಮಾಡಿ ತೆಗೆದುಕೊಳ್ಳಲಾಗುತ್ತದೆ. ರಕ್ತದಾನ ಶಿಬಿರಗಳಲ್ಲಿ ಅನೇಕ ಸಲ ಇಂಥ ಪರೀಕ್ಷೆಗಳಿಲ್ಲದೆ ತೆಗೆದುಕೊಂಡ ರಕ್ತ ಉಪಯೋಗಕ್ಕೆ ಬಾರದೆ ಹೋಗುತ್ತದೆ. ರಾಸಾಯನಿಕ ಸೇರಿಸಿ ಉಪಯೋಗಿಸಲು ಸಾಧ್ಯವಾಗುವ ಹಾಗಿದ್ದರೆ ಮಾತ್ರ ಬಳಕೆಯಾಗುತ್ತದೆ. ರಕ್ತವನ್ನು ಪ್ರಮುಖವಾಗಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ.

ಮನುಷ್ಯನ ರಕ್ತವನ್ನು ಎ, ಬಿ, ಎಬಿ, ಮತ್ತು ಓ ಎಂಬ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಪ್ರತಿಜನಕ (ಆಂಟಿಜೆನ್-ಕೆಂಪುರಕ್ತ ಕಣಗಳ ಮೇಲ್ಮೈಯಲ್ಲಿ ಇರುವ ಪ್ರೋಟಿನ್ ಅಣುಗಳು) ಅಂಶಗಳನ್ನು ಆಧಾರದ ಮೇಲೆ ರಕ್ತದ ಗುಂಪುಗಳನ್ನು ವರ್ಗೀಕರಿಸಲಾಗಿದೆ. ಜೊತೆಗೆ ಆರ್‍ಎಚ್ ಆಂಟಿಜೆನ್‍ ಆಧಾರದ ಮೇಲೆ ಎ ಪಾಸಿಟಿವ್, ಬಿ ಪಾಸಿಟಿವ್, ಎಬಿ ಪಾಸಿಟಿವ್, ಎಬಿ ನೆಗೆಟಿವ್, ಓ ನೆಗೆಟಿವ್, ಓ ಪಾಸಿಟಿವ್ ಎಂಬುದಾಗಿ ಪುನಃ ವಿಂಗಡಿಸಲಾಗಿದೆ.

ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ ಎ ಪಾಸಿಟಿವ್ ಮತ್ತು ಓ ಪಾಸಿಟಿವ್ ಗುಂಪುಗಳು ಕಾಣಸಿಗುತ್ತವೆ. ಬಿ ನೆಗೆಟಿವ್, ಓ ನೆಗೆಟಿವ್ ಮುಂತಾದ ರಕ್ತದ ಗುಂಪುಗಳು ಬಹಳ ವಿರಳ. ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಬಹಳ ಕಷ್ಟದ ಕೆಲಸ. ಆ ಕಾರಣಕ್ಕಾಗಿಯೂ ವಿರಳ ರಕ್ತದ ಗುಂಪನ್ನು ಹೊಂದಿದ ವ್ಯಕ್ತಿಗಳನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆ ತೆಗೆದುಕೊಳ್ಳಲಾಗುತ್ತದೆ ಹಾಗೂ ಅಗತ್ಯವಿದ್ದಾಗ ಮಾತ್ರ ಇಂತಹ ವಿರಳಗುಂಪಿನ ವ್ಯಕ್ತಿಗಳಿಂದ ರಕ್ತದಾನವನ್ನು ಪಡೆಯಲಾಗುತ್ತದೆ.

● ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
━━━━━━━━━━━━━━━━━━━━━━━━━━━━━
ಆಸ್ಟ್ರಿಯಾದ ಕಾರ್ಲ್ ಲ್ಯಾಂಡ್‍ಸ್ಟೈನರ್‍ ಎಂಬ ವೈದ್ಯರು 1901ರಲ್ಲಿ ರಕ್ತದ ಗುಂಪುಗಳ ವರ್ಗೀಕರಣ ಮಾಡಿದರು. ಈ ಕಾರಣಕ್ಕಾಗಿಯೇ ಅವರ ಜನ್ಮದಿನವಾದ ಜೂನ್ 14ರಂದು “ವಿಶ್ವ ರಕ್ತದಾನಿಗಳ ದಿವಸ”ವನ್ನು ಆಚರಿಸಲಾಗುತ್ತದೆ. ಇದೇ ರೀತಿ ಅಕ್ಟೋಬರ್ 1ರಂದು ‘ರಾಷ್ಟ್ರೀಯ ರಕ್ತದಾನ ದಿವಸ’ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ.

● ಯುನಿವರ್ಸಲ್ ಪ್ಲಾಸ್ಮಾ ಡೋನರ್ :
(Universal Plasma Donor)

━━━━━━━━━━━━━━━━━━━━
ಎಬಿ ರಕ್ತದ ಗುಂಪು ಇರುವವರನ್ನು ‘ಯುನಿವರ್ಸಲ್ ಪ್ಲಾಸ್ಮಾ ಡೋನರ್’ ಎಂದು ಕರೆಯುತ್ತಾರೆ. ತುರ್ತು ಸನ್ನಿವೇಶಗಳಲ್ಲಿ ಮತ್ತು ನವಜಾತ ಶಿಶುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ ಎಬಿ ಗುಂಪಿನ ಪ್ಲಾಸ್ಮಾವನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ರಕ್ತದಲ್ಲಿಯೂ ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲೇಟ್‍ಲೆಟ್‍ ಮತ್ತು ಪ್ಲಾಸ್ಮಾ ಎಂಬ ಅಂಶಗಳು ಇರುತ್ತದೆ. ಆದರೆ ಪ್ರತಿಯೊಬ್ಬರ ರಕ್ತವು ಇತರರ ರಕ್ತಕ್ಕಿಂತ ಭಿನ್ನವಾಗಿರುತ್ತದೆ. ಈ ಕಾರಣಕ್ಕಾಗಿಯೇ ರಕ್ತದಾನ ಮಾಡುವ ಮೊದಲ ಹಲವಾರು ಬಾರಿ ರಕ್ತವನ್ನು ಪರೀಕ್ಷಿಸಿ ಹೊಂದಾಣಿಕೆ ಮಾಡಿದ ಬಳಿಕವೇ ರಕ್ತವನ್ನು ರೋಗಿಗೆ ನೀಡಲಾಗುತ್ತದೆ.

● ರಕ್ತದ ಗುಂಪುಗಳು:
(Blood Groups)

━━━━━━━━━━━━
ಕೆಂಪು ರಕ್ತಕಣಗಳ ಮೇಲಿರುವ ಆಂಟಿಜೆನ್ ಮತ್ತು ಆಂಟಿಬಾಡಿ ಆಧಾರದ ಮೇಲೆ ರಕ್ತದ ಗುಂಪುಗಳನ್ನು ಈ ರೀತಿ ವಿಂಗಡಿಸಲಾಗಿದೆ.

ಎ ರಕ್ತದ ಗುಂಪು:
ಕೆಂಪು ರಕ್ತಕಣಗಳ ಮೇಲೆ ‘ಎ’ ಆಂಟಿಜೆನ್ ಮತ್ತು ಪ್ಲಾಸ್ಮಾದಲ್ಲಿ ‘ಬಿ’ ಪ್ರತಿಕಾಯ (ಆಂಟಿಬಾಡಿ-ಪ್ಲಾಸ್ಮಾದಲ್ಲಿರುವ ಕಾರ್ಯವಿಧಾನ ಸಂಬಂಧಿತ ಪ್ರೋಟಿನ್)  ಇರುತ್ತದೆ.

ಬಿ ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘ಬಿ’ ಆಂಟಿಜೆನ್ ಮತ್ತು ಪ್ಲಾಸ್ಮಾದಲ್ಲಿ ‘ಎ’ ಆಂಟಿಬಾಡಿ ಇರುತ್ತದೆ.
ಎಬಿ ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘ಎ’ ಮತ್ತು ‘ಬಿ’ ಆಂಟಿಜೆನ್‍ ಎರಡೂ ಇರುತ್ತದೆ ಮತ್ತು ಪ್ಲಾಸ್ಮಾದಲ್ಲಿ ಯಾವುದೇ ಆಂಟಿಬಾಡಿ ಇರುವುದಿಲ್ಲ.

ಓ ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ಯಾವುದೇ ಆಂಟಿಜೆನ್‍ ಇರುವುದಿಲ್ಲ. ಆದರೆ ಪ್ಲಾಸ್ಮಾದಲ್ಲಿ ‘ಎ’ ಮತ್ತು ‘ಬಿ’ ಆಂಟಿಬಾಡಿ ಇರುತ್ತದೆ.

● ಯುನಿವರ್ಸಲ್‍ ಡೋನರ್ :
(Universal Donor)

━━━━━━━━━━━━━━━
ಸಾಮಾನ್ಯವಾಗಿ ಓ ನೆಗೆಟಿವ್‍ ರಕ್ತವನ್ನು ಸಾರ್ವತ್ರಿಕ ದಾನಿ (ಯುನಿವರ್ಸಲ್‍ ಡೋನರ್)  ಎಂದು ಕರೆಯಲಾಗುತ್ತದೆ. ಯಾಕೆಂದರೆ ವ್ಯಕ್ತಿಗೆ ಸರಿಹೊಂದುವ ರಕ್ತವು ದೊರಕದೇ ಇದ್ದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಥವಾ ರೋಗಿಯ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ಹಾಗೂ ನವಜಾತ ಶಿಶುಗಳಲ್ಲಿ ಈ ರೀತಿ ಓ ನೆಗೆಟಿವ್‍ ರಕ್ತವನ್ನು ರೋಗಿಗೆ ಕೊಡಲಾಗುತ್ತದೆ. ಯಾವುದೇ ರಕ್ತದ ಗುಂಪು ಹೊಂದಿರುವ ವ್ಯಕ್ತಿಗೆ ಓ ನೆಗೆಟಿವ್‍ ರಕ್ತವನ್ನು ಕೊಡಬಹುದು.

ಆದರೆ ನಮ್ಮ ದೇಶದ ಜನಸಂಖ್ಯೆಯ ಕೇವಲ 7 ಪ್ರತಿಶತ ಜನರು ಮಾತ್ರ ಓ ನೆಗೆಟಿವ್‍ ರಕ್ತವನ್ನು ಹೊಂದಿದ್ದಾರೆ. 35 ಪ್ರತಿಶತ ಜನರು ಓ (ಪಾಸಿಟಿವ್ ಮತ್ತು ನೆಗೆಟಿವ್) ರಕ್ತದ ಗುಂಪನ್ನು ಹೊಂದಿರುತ್ತಾರೆ. ಕೇವಲ 0.4 ಪ್ರತಿಶತ ಜನರು ಎಬಿ ರಕ್ತದ ಗುಂಪು ಹೊಂದಿರುತ್ತಾರೆ.

● ಯುನಿವರ್ಸಲ್ ರಿಸೀವರ್ :
(Universal Receiver)

━━━━━━━━━━━━━━━
ಎಬಿ ರಕ್ತದ ಗುಂಪು ಇರುವವರಲ್ಲಿ ಯಾವುದೇ ಆಂಟಿಬಾಡಿ ಇಲ್ಲದ ಕಾರಣ ಎಬಿ ರಕ್ತದ ಗುಂಪಿನವರು ಎ, ಬಿ, ಎಬಿ ಮತ್ತು ಓ ಗುಂಪಿನವರು ರಕ್ತವನ್ನು ಪಡೆಯಬಹುದು. ಆ ಕಾರಣಕ್ಕಾಗಿಯೇ ‘ಎಬಿ ಪಾಸಿಟಿವ್’ ರಕ್ತ ಗುಂಪನ್ನು ‘ಯುನಿವರ್ಸಲ್ ರಿಸೀವರ್’ ಎಂದು ಹೇಳುತ್ತಾರೆ. ಅದೇ ರೀತಿ ‘ಓ’ ಗುಂಪಿನ ರಕ್ತದಲ್ಲಿ ಯಾವುದೇ ಆಂಟಿಜೆನ್‍ ಇಲ್ಲದ ಕಾರಣ ‘ಓ’ ಗುಂಪಿನ ರಕ್ತವನ್ನು ಎ, ಬಿ, ಎಬಿ ಮತ್ತು ಓ ಗುಂಪಿನವರಿಗೆ ತುರ್ತು ಪರಿಸ್ಥಿತಿಗಳಲ್ಲಿ ನೀಡಬಹುದು. ಅದಕ್ಕಾಗಿಯೇ ಓ ನೆಗೆಟಿವ್ ಗುಂಪಿನ ರಕ್ತದಾನಿಗಳನ್ನು ಯುನಿವರ್ಸಲ್‍ ಡೋನರ್‍ ಎಂದು ಕರೆಯಲಾಗುತ್ತದೆ.


Friday, 2 September 2022

9. ಹವಾಮಾನ ಬದಲಾವಣೆಯ ಮೇಲಿನ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (UNFCC) : (United Nations Framework Convention on Climate Change)

  •► PART :2- ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು.
(List of Important Environmental Conventions and Protocols)
━━━━━━━━━━━━━━━━━━━━━━━━━━━━━━━━━━━━━━━━
 

… ಮುಂದುವರಿದ ಭಾಗ.


9. ಹವಾಮಾನ ಬದಲಾವಣೆಯ ಮೇಲಿನ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ (UNFCC) :
(United Nations Framework Convention on Climate Change)

 

 


 



Thursday, 1 September 2022

•► PART :2- ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು. (8) ಕ್ಯೋಟೋ ಪ್ರೋಟೋಕಾಲ್ (Kyoto Protocol) (List of Important Environmental Conventions and Protocols)

  •► PART :2- ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು.
(List of Important Environmental Conventions and Protocols) 
━━━━━━━━━━━━━━━━━━━━━━━━━━━━━━━━━━━━━━━━


… ಮುಂದುವರಿದ ಭಾಗ.

8. ಕ್ಯೋಟೋ ಪ್ರೋಟೋಕಾಲ್
(Kyoto Protocol)




Monday, 29 August 2022

Saturday, 13 August 2022

•►PART-2: ಭಾರತದ ಕಾರ್ಯಾಚರಣೆಯಲ್ಲಿರುವ 13 ರಾಷ್ಟ್ರೀಯ ಜಲಮಾರ್ಗಗಳು (13 Operational National Waterways in the Country)

 •►PART-2: ಭಾರತದ ಕಾರ್ಯಾಚರಣೆಯಲ್ಲಿರುವ 13 ರಾಷ್ಟ್ರೀಯ ಜಲಮಾರ್ಗಗಳು
(13 Operational National Waterways in the Country)

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

 … ಮುಂದುವರೆದ ಭಾಗ.

— ರಾಷ್ಟ್ರೀಯ ಜಲಮಾರ್ಗ ಕಾಯ್ದೆ 2016 ರ ಅಡಿಯಲ್ಲಿ 111 ಒಳನಾಡಿನ ಜಲಮಾರ್ಗಗಳನ್ನು (ಈ ಹಿಂದೆ ಘೋಷಿಸಿದ 5 ರಾಷ್ಟ್ರೀಯ ಜಲಮಾರ್ಗಗಳನ್ನು ಒಳಗೊಂಡಂತೆ) ' ರಾಷ್ಟ್ರೀಯ ಜಲಮಾರ್ಗಗಳು ' ಎಂದು ಘೋಷಿಸಲಾಗಿದೆ.
ಭಾರತದ ಒಳನಾಡಿನ ಜಲಸಾರಿಗೆಯನ್ನು ಆರ್ಥಿಕ, ಪರಿಸರ ಸ್ನೇಹಿ ಮತ್ತು ರೈಲು ಮತ್ತು ರಸ್ತೆಗೆ ಪೂರಕ ಸಾರಿಗೆ ವಿಧಾನವಾಗಿ ಉತ್ತೇಜಿಸುವುದು ಸರ್ಕಾರದ ಗುರಿಯಾಗಿದೆ.
ಪ್ರಸ್ತುತ ದೇಶದ 111 ರಾಷ್ಟ್ರೀಯ ಜಲಮಾರ್ಗಗಳಲ್ಲಿ 13 ರಾಷ್ಟ್ರೀಯ ಜಲಮಾರ್ಗಗಳು ಸಾಗಾಟ ಮತ್ತು ಸಂಚರಣೆಗಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳೆಂದರೆ :




Wednesday, 10 August 2022

•► PART :2- ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು. (List of Important Environmental Conventions and Protocols)

 
 •► PART :2- ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು.
(List of Important Environmental Conventions and Protocols)

━━━━━━━━━━━━━━━━━━━━━━━━━━━━━━━━━━━━━━━━

 

… ಮುಂದುವರಿದ ಭಾಗ


4. ಜೈವಿಕ ವೈವಿಧ್ಯತೆಯ ಸಮಾವೇಶ
(CBD-Convention on Biological Diversity) :

5. CITES.

6. ವಿಯೆನ್ನಾ ಸಮಾವೇಶ :
(Vienna Convention)

7. ಮಾಂಟ್ರಿಯಲ್ ಪ್ರೋಟೋಕಾಲ್:
(Montreal Protocol)



Sunday, 7 August 2022

•► PART-1: ಭಾರತದ ಕಾರ್ಯಾಚರಣೆಯಲ್ಲಿರುವ 13 ರಾಷ್ಟ್ರೀಯ ಜಲಮಾರ್ಗಗಳು (13 Operational National Waterways in the Country)

 •►PART-1: ಭಾರತದ ಕಾರ್ಯಾಚರಣೆಯಲ್ಲಿರುವ 13 ರಾಷ್ಟ್ರೀಯ ಜಲಮಾರ್ಗಗಳು
(13 Operational National Waterways in the Country)

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

— ರಾಷ್ಟ್ರೀಯ ಜಲಮಾರ್ಗ ಕಾಯ್ದೆ 2016 ರ ಅಡಿಯಲ್ಲಿ 111 ಒಳನಾಡಿನ ಜಲಮಾರ್ಗಗಳನ್ನು (ಈ ಹಿಂದೆ ಘೋಷಿಸಿದ 5 ರಾಷ್ಟ್ರೀಯ ಜಲಮಾರ್ಗಗಳನ್ನು ಒಳಗೊಂಡಂತೆ) ' ರಾಷ್ಟ್ರೀಯ ಜಲಮಾರ್ಗಗಳು ' ಎಂದು ಘೋಷಿಸಲಾಗಿದೆ.
ಭಾರತದ ಒಳನಾಡಿನ ಜಲಸಾರಿಗೆಯನ್ನು ಆರ್ಥಿಕ, ಪರಿಸರ ಸ್ನೇಹಿ ಮತ್ತು ರೈಲು ಮತ್ತು ರಸ್ತೆಗೆ ಪೂರಕ ಸಾರಿಗೆ ವಿಧಾನವಾಗಿ ಉತ್ತೇಜಿಸುವುದು ಸರ್ಕಾರದ ಗುರಿಯಾಗಿದೆ.
ಪ್ರಸ್ತುತ ದೇಶದ 111 ರಾಷ್ಟ್ರೀಯ ಜಲಮಾರ್ಗಗಳಲ್ಲಿ 13 ರಾಷ್ಟ್ರೀಯ ಜಲಮಾರ್ಗಗಳು ಸಾಗಾಟ ಮತ್ತು ಸಂಚರಣೆಗಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳೆಂದರೆ :



•► PART :1- ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು. (List of Important Environmental Conventions and Protocols)

 
 •► PART :1- ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು.
(List of Important Environmental Conventions and Protocols)

━━━━━━━━━━━━━━━━━━━━━━━━━━━━━━━━━━━━━━━━

— ಕೇಂದ್ರ ಲೋಕಸೇವಾ ಆಯೋಗ ನಡೆಸುವ ಐಎಎಸ್/ಐಪಿಎಸ್/ಐಎಫ್ಎಸ್/ಐಆರ್‌ಎಸ್ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಗ್ರೂಪ್ ಎ ಮತ್ತು ಬಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆಗಳಿಗೆ ಪರಿಸರ ಅಧ್ಯಯನ ವಿಭಾಗದಿಂದ ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ, ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳೊಳಗೊಂಡಂತೆ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅವುಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಪರಿಸರ ಸಮಾವೇಶಗಳು ಮತ್ತು ಶಿಷ್ಟಾಚಾರ‌ಗಳ ಅಧ್ಯಯನ ಮುಖ್ಯವಾಗಿರುತ್ತದೆ. ಈ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನಿಮ್ಮ ಸ್ಪರ್ಧಾಲೋಕದಲ್ಲಿ ಹಂಚಿಕೊಳ್ಳಲು ಪ್ರಯತ್ನಸಿಲಾಗಿದೆ. 

 ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


1. ರಾಮ್ಸರ್ ಸಮಾವೇಶ
(Ramsar Convention)


2. ಸ್ಟಾಕ್‌ಹೋಮ್ ಸಮಾವೇಶ
(Stockholm Convention)


3. ಬಾನ್ ಸಮಾವೇಶ
(Bonn Convention)
...ಮುಂದುವರಿಯುತ್ತದೆ .


 

Friday, 5 August 2022

•► ಅರಾವಳಿ ಬೆಟ್ಟಗಳು: (Aravalli Mountain Range)

 •► ಅರಾವಳಿ  ಬೆಟ್ಟಗಳು:
(Aravalli Mountain Range)

 

(ಯುಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆಗಳು, ಕೆಪಿಎಸ್‌ಸಿ-ಪ್ರಿಲಿಮ್ಸ್ ಮತ್ತು ಸಾಮಾನ್ಯ ಅಧ್ಯಯನ ಪತ್ರಿಕೆಗಳು ಸೇರಿದಂತೆ ಎಲ್ಲಾ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಮಾಹಿತಿ)

 


•► ರಾಷ್ಟ್ರಪತಿ ಚುನಾವಣೆ ಕುರಿತ ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳು : ರಾಷ್ಟ್ರಪತಿಯವರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಗಳು, ಕಾಯ್ದೆ, ನೀತಿ–ನಿಯಮಗಳು. (Constitutional and Legal Provisions on Presidential Election: Election Procedures, Acts, Rules for Electing the President /The process of electing India’s President / How the President of India is elected )

 •► ರಾಷ್ಟ್ರಪತಿ ಚುನಾವಣೆ ಕುರಿತ ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳು : ರಾಷ್ಟ್ರಪತಿಯವರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಗಳು, ಕಾಯ್ದೆ, ನೀತಿ–ನಿಯಮಗಳು.
(Constitutional and Legal Provisions on Presidential Election: Election Procedures, Acts, Rules for Electing the President /The process of electing India’s President / How the President of India is elected  )

━━━━━━━━━━━━━━━━━━━━━━━━━━━━━━━━━━━━━━━━━━

ಭಾರತೀಯ ಸಂವಿಧಾನದ 62 ನೇ ವಿಧಿಯ ಪ್ರಕಾರ, ಪ್ರಸ್ತುತವಿರುವ ರಾಷ್ಟ್ರಾಧ್ಯಕ್ಷರ ಅಧಿಕಾರದ ಅವಧಿ ಮುಗಿಯುವ ಮೊದಲೇ, ಅಧಿಕಾರದ ಅವಧಿಯು ಮುಕ್ತಾಯಗೊಳ್ಳುವುದರಿಂದ ಉಂಟಾಗುವ ಖಾಲಿ ಸ್ಥಾನವನ್ನು ತುಂಬಲು ಕಡ್ಡಾಯವಾಗಿ ಚುನಾವಣೆ ನಡೆಸಬೇಕು.

ಇತ್ತೀಚೆಗೆ ಇದೇ ಪ್ರಕ್ರಿಯೆಯಲ್ಲೇ ನೂತನ ರಾಷ್ಟ್ರಪತಿಯವರ ಆಯ್ಕೆ ನಡೆಯಿತು. ರಾಮನಾಥ್‌ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24, 2022ಕ್ಕೆ ಮುಗಿದಿದ್ದು, ಅದಕ್ಕೂ ಮುನ್ನವೇ ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಿತು. ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾದರು. ಜುಲೈ 25, 2022 ರಂದು ಅಧಿಕಾರ ಸ್ವೀಕರಿಸಿದರು.

● ರಾಷ್ಟ್ರಪತಿಯವರನ್ನು ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆಗಳು, ಕಾಯ್ದೆ, ನೀತಿ–ನಿಯಮಗಳು

● ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳು


l→ಸಂವಿಧಾನದ 324ನೇ ವಿಧಿಯ ಅನ್ವಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಕಾಯ್ದೆ 1952 ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷೀಯ ಚುನಾವಣಾ ನಿಯಮಗಳು 1974 ಅನ್ನು ಜಾರಿಗೆ ತಂದಿದ್ದು, ಈ ಕಾಯ್ದೆ ಹಾಗೂ ನಿಯಮಾವಳಿಗಳ ಅನ್ವಯ ಭಾರತೀಯ ಚುನಾವಣಾ ಆಯೋಗ ರಾಷ್ಟ್ರಪತಿ ಹುದ್ದೆಗೆ ಸಂಬಂಧಿಸಿದಂತೆ ಚುನಾವಣಾ ನಿರ್ವಹಣೆ, ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಕಾರ್ಯವನ್ನು ನಿರ್ವಹಿಸುತ್ತದೆ.

l→ದೇಶದ ಅತ್ಯುನ್ನತ ಸ್ಥಾನವಾದ ಭಾರತದ ರಾಷ್ಟ್ರಪತಿ ಹುದ್ದೆಯ ಆಯ್ಕೆಗಾಗಿ ನಡೆಯುವ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಬಾಧ್ಯಸ್ಥವಾಗಿರುತ್ತದೆ.

l→ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣೆಗಳ ಕಾಯಿದೆ, 1952 ರ ಸೆಕ್ಷನ್ 4(3)ರ ಪ್ರಕಾರ ನಿರ್ಗಮಿತ ಅಧ್ಯಕ್ಷರ ಅಧಿಕಾರದ ಅವಧಿ ಮುಗಿಯಲು 60 ದಿನಗಳಿರುವಾಗ ಅಥವಾ ನಂತರ ರಾಷ್ಟ್ರಪತಿ ಚುನಾವಣೆಯ ಅಧಿಸೂಚನೆ ಹೊರಡಿಸಲಾಗುತ್ತದೆ.

● ಮತದಾರರ ಗುಂಪು

ಸಂವಿಧಾನದ 54ನೇ ವಿಧಿಯ ಪ್ರಕಾರ ಭಾರತದ ಸಂವಿಧಾನ, ಅಧ್ಯಕ್ಷರನ್ನು ಸಂವಿಧಾನ ನಿರ್ದಿಷ್ಟ ಪಡಿಸಿದ ಮತದಾರಗುಂಪು (ಎಲೆಕ್ಟರಲ್‌ ಕಾಲೇಜ್‌ ಅಥವಾ ನಿರ್ವಚನಾ ಮಂಡಳಿ) ಆಯ್ಕೆ ಮಾಡುತ್ತದೆ. ಆ ಗುಂಪು ಈ ಕೆಳಗಿನ ಸದಸ್ಯರನ್ನು ಹೊಂದಿರುತ್ತದೆ:

(i) ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರು ಮತ್ತು

(II)ಎಲ್ಲಾ ರಾಜ್ಯಗಳ ವಿಧಾನಸಭೆಗಳ ಚುನಾಯಿತ ಸದಸ್ಯರು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ದೆಹಲಿ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ವಿಧಾನಸಭೆಗಳ ಚುನಾಯಿತ ಸದಸ್ಯರನ್ನು ಒಳಗೊಂಡಿರುತ್ತದೆ.

l→ರಾಜ್ಯಸಭೆ ಮತ್ತು ಲೋಕಸಭೆ ಅಥವಾ ರಾಜ್ಯಗಳ ವಿಧಾನಸಭೆಗಳ ನಾಮನಿರ್ದೇಶಿತ ಸದಸ್ಯರು ಚುನಾವಣಾ ಗುಂಪಿನಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿರುವುದಿಲ್ಲ ಆದ್ದರಿಂದ, ಅವರು ಈ ಚುನಾವಣೆಯಲ್ಲಿ ಭಾಗವಹಿಸುವಂತಿರುವುದಿಲ್ಲ.

l→ಅದೇ ರೀತಿ ವಿಧಾನ ಪರಿಷತ್ತಿನ ಸದಸ್ಯರು ಕೂಡ ರಾಷ್ಟ್ರಪತಿ ಚುನಾವಣೆಗೆ ಆಯ್ಕೆದಾರರಲ್ಲ.

l→ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರ ಮತಗಳ ಮೌಲ್ಯವನ್ನು ಸಂವಿಧಾನದ 55(2) ನೇ ವಿಧಿಯ ಮೂಲಕ ನಿರ್ಧರಿಸಲಾಗುತ್ತದೆ.

1) 16ನೇ ರಾಷ್ಟ್ರಪತಿ ಚುನಾವಣೆಗೆ ಶಾಸಕರ ಒಟ್ಟು ಮತಗಳ ಮೌಲ್ಯ 5,43,231 ಆಗಿರುತ್ತದೆ.

2) ಸಂಸದರ ಒಟ್ಟು ಮತಗಳ ಮೌಲ್ಯ 5,43,200 ಆಗಿರುತ್ತದೆ.

3) ಅಧ್ಯಕ್ಷೀಯ ಚುನಾವಣೆ 2022 ರ ಮತದಾರರ ಒಟ್ಟು ಮತದ ಮೌಲ್ಯವು 10,86,431 ಆಗಿದೆ.

l→ಸಂವಿಧಾನದ 55(3)ನೇ ವಿಧಿ ಪ್ರಕಾರ ಏಕ ವರ್ಗಾವಣಾ ಮತದ ಮೂಲಕ ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಗೆ ಅನುಗುಣವಾಗಿ ಚುನಾವಣೆ ನಡೆಸಬೇಕು ಎಂದು ಹೇಳುತ್ತದೆ.

l→ರಹಸ್ಯ ಮತದಾನದ ಮೂಲಕ ಮತದಾನ ನಡೆಯಬೇಕು ಮತ್ತು ಈ ವ್ಯವಸ್ಥೆಯಲ್ಲಿ, ಮತದಾರರು ಅಭ್ಯರ್ಥಿಗಳ ಹೆಸರಿನ ವಿರುದ್ಧ ತಮ್ಮ ಆದ್ಯತೆಗಳನ್ನು ಗುರುತಿಸಬೇಕು.

l→ಅಭ್ಯರ್ಥಿಗಳ ಸಂಖ್ಯೆಯಷ್ಟು ಆದ್ಯತೆಗಳನ್ನು ಮತದಾರರು ಗುರುತಿಸಬಹುದು. ಬ್ಯಾಲೆಟ್ ಪೇಪರ್ ಮಾನ್ಯವಾಗಬೇಕಾದರೆ ಮೊದಲ ಆದ್ಯತೆಯ ಗುರುತು ಕಡ್ಡಾಯವಾಗಿರುತ್ತದೆ. ಆದರೆ ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ.

l→ಅಧ್ಯಕ್ಷೀಯ ಚುನಾವಣೆಯ ಮತದಾನದ ವಿಷಯದಲ್ಲಿ ಪಕ್ಷಗಳು ತಮ್ಮ ಸಂಸದರು ಮತ್ತು ಶಾಸಕರಿಗೆ ಯಾವುದೇ ವಿಪ್ ನೀಡುವಂತಿಲ್ಲ .

l→ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷರ ಚುನಾವಣೆ ಗಳ ಕಾಯಿದೆ - 1952 ರ ಸೆಕ್ಷನ್ 18 ರ ಪ್ರಕಾರ, ಚುನಾವಣಾ ಬಿಕ್ಕಟ್ಟುಗಳು ಸಂಭವಿಸಿದಲ್ಲಿ ಇತ್ಯರ್ಥಪಡಿಸುವ ಮತ್ತು ಚುನಾವಣೆಯನ್ನು ಅನೂರ್ಜಿತ ಎಂದು ಘೋಷಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. 

(Courtesy : ಪ್ರಜಾವಾಣಿ)

Thursday, 4 August 2022

•► PART -2: ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳ ಮೂಲಕ ಹರಿಯುವ ನದಿಗಳು — (National Parks and River flowing through the Parks / National Parks and Rivers)

 •► PART -2: ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳ ಮೂಲಕ ಹರಿಯುವ ನದಿಗಳು —
(National Parks and River flowing through the Parks / National Parks and Rivers)

━━━━━━━━━━━━━━━━━━━━━━━━━━━━━━━━━━━━━━━━━━


•► UPSC ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ವೇಳಾಪಟ್ಟಿ: 2022 ಬಿಡುಗಡೆ (upsc civil services main exam 2022 schedule released)

 •►  UPSC ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ವೇಳಾಪಟ್ಟಿ: 2022 ಬಿಡುಗಡೆ
(upsc civil services main exam 2022 schedule released)

━━━━━━━━━━━━━━━━━━━━━━━━━━━━━━━━━━━━━━━━━━
 

ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ)ವು, ಯುಪಿಎಸ್ಸಿ ನಾಗರಿಕ ಸೇವೆ ಮುಖ್ಯ ಪರೀಕ್ಷೆ 2022 ರ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.


ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗಿರುವ ಮತ್ತು ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ಸೈಟ್ ಮೂಲಕ ವೇಳಾಪಟ್ಟಿಯನ್ನು ಪರಿಶೀಲಿಸಬಹುದು, ಅಂದರೆ, upsc.gov.in.ಉಲ್ಲೇಖಿಸಿದ ವೇಳಾಪಟ್ಟಿಯ ಪ್ರಕಾರ, ಯುಪಿಎಸ್ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ 2022 ಅನ್ನು ಸೆಪ್ಟೆಂಬರ್ 16ರಂದು ಪ್ರಬಂಧ, ಸೆಪ್ಟೆಂಬರ್ 17 ಮತ್ತು 18 ರಂದು ಜನರಲ್ ಸ್ಟಡೀಜ್, ಸೆಪ್ಟೆಂಬರ್ 24 ರಂದು ಭಾರತೀಯ ಭಾಷೆ, ಇಂಗ್ಲೀಷ್  ಮತ್ತು ಸೆಪ್ಟೆಂಬರ್ 25 ಕ್ಕೆ ಐಚ್ಛಿಕ ವಿಷಯಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯು ಎರಡು ಸೆಷನ್‌ ಗಳಲ್ಲಿ ನಡೆಯಲಿದೆ – ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನದ ಸೆಷನ್ ಅನ್ನು ಮಧ್ಯಾಹ್ನ 2 ರಿಂದ 5 ರವರೆಗೆ ನಡೆಸಲಾಗುತ್ತದೆ.

ಯುಪಿಎಸ್ಸಿ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ 2022: ವೇಳಾಪಟ್ಟಿ
ಪೂರ್ಣ ವೇಳಾಪಟ್ಟಿಯನ್ನು ವೀಕ್ಷಿಸಲು ಮತ್ತು ಡೌನ್ಲೋಡ್ ಮಾಡಲು, ಅಭ್ಯರ್ಥಿಗಳು ಯುಪಿಎಸ್ಸಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವಂತೆ ವಿನಂತಿಸಲಾಗಿದೆ, ಅಂದರೆ, upsc.gov.in. ಮುಖಪುಟದಲ್ಲಿ, ‘ವಾಟ್ ಈಸ್ ನ್ಯೂ’ ಸೆಷನ್ ಅಡಿಯಲ್ಲಿ, ಅಭ್ಯರ್ಥಿಗಳು ನಾಗರಿಕ ಸೇವೆ (ಮುಖ್ಯ) ಪರೀಕ್ಷೆ 2022 – ಪರೀಕ್ಷೆಯ ಟೈಮ್ ಟೇಬಲ್’ ಎಂದು ಓದುವ ಲಿಂಕ್ ಅನ್ನು ಕ್ಲಿಕ್ ಮಾಡಲು ವಿನಂತಿಸಲಾಗಿದೆ.

Wednesday, 3 August 2022

•► PART -1: ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳ ಮೂಲಕ ಹರಿಯುವ ನದಿಗಳು — (National Parks and River flowing through the Parks / National Parks and Rivers)

•► PART -1: ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು ಮತ್ತು ಅವುಗಳ ಮೂಲಕ ಹರಿಯುವ ನದಿಗಳು —
(National Parks and Rivers flowing through the Parks / National Parks and Rivers)

━━━━━━━━━━━━━━━━━━━━━━━━━━━━━━━━━━━━━━━━━━




Saturday, 7 May 2022

•► "ಪ್ರಿಲೀಮ್ಸ್ 2022: ದೈನಂದಿನ (07/05/2022) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Prelims 2022: Daily 10 Multiple Choice Questions)

 
•► "ಪ್ರಿಲೀಮ್ಸ್  2022: ದೈನಂದಿನ (07/05/2022) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Prelims 2022: Daily 10 Multiple Choice Questions)

━━━━━━━━━━━━━━━━━━━━━━━━━━━━━━━━━━━━━━


21.'ಉತ್ತರ ವೈದಿಕ ಸಂಸ್ಕೃತ ಸಾಹಿತ್ಯ'ದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಪ್ರತಿಯೊಂದು ವೇದವು ತನ್ನದೇ ಆದ ಬ್ರಾಹ್ಮಣಕವನ್ನು ಹೊಂದಿದೆ.
2. ಕೆನ್, ಮುಕ್ತಿಕಾ ಮತ್ತು ಕಥಾ ಇವು ಪ್ರಮುಖ ಪುರಾಣಗಳು.
3. ಉಪನಿಷತ್ತುಗಳು ಅಮೂರ್ತವಾದ ತಾತ್ವಿಕ ಚರ್ಚೆಗಳೊಂದಿಗೆ ವ್ಯವಹರಿಸುತ್ತವೆ.
4. ಅರಣ್ಯಕವು ಆತ್ಮ, ಜನನ ಮತ್ತು ಮರಣ ಹಾಗೂ  ಅದರಾಚೆಗಿನ ಜೀವನದ ಕುರಿತು ಚರ್ಚಿಸುತ್ತದೆ.
- ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1, 2 ಮತ್ತು 3 ಮಾತ್ರ.
(ಬಿ) 1, 3 ಮತ್ತು 4 ಮಾತ್ರ.
(ಸಿ) 3 ಮತ್ತು 4 ಮಾತ್ರ.
(ಡಿ) 1, 2, 3 ಮತ್ತು 4.


https://t.me/spardhalokaa


22. ‘ಪ್ರೊಟೆಕ್ಟೆಡ್‌ ಪ್ಲ್ಯಾನೆಟ್‌’ ಎಂಬ ವರದಿಯನ್ನು ಬಿಡುಗಡೆ ಮಾಡಿದವರು...
A.ವಿಶ್ವಸಂಸ್ಥೆ.
B.ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)
C.ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ  (UNFCCC)
D.ವಿಶ್ವ ಆರ್ಥಿಕ ವೇದಿಕೆ (WEF)


23. “ವೂಲ್ಫ್ ವಾರಿಯರ್ ರಾಜತಾಂತ್ರಿಕತೆ” (wolf warrior diplomacy) ಎಂಬುದು ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶದ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ.
A.ಉಕ್ರೇನ್
B.ರಷ್ಯಾ
C.ಚೀನಾ
D.ಉತ್ತರ ಕೊರಿಯಾ


24. ‘ಅಜೆಂಡಾ 21’ ಎಂದೇ ಜಗದ್ವಿಖ್ಯಾತವಾಗಿರುವ ಘೋಷಣೆಯು  ಯಾವ ಸಮಾವೇಶದಲ್ಲಿ ಹೊರಡಿಸಲಾಯಿತು?  
(ಎ) ಸ್ಟಾಕ್‌ಹೋಮ್‌ ಸಮಾವೇಶ.
(ಬಿ) ವಿಯೆನ್ನಾ ಸಮಾವೇಶ
(ಸಿ) ರಿಯೊ ಶೃಂಗಸಭೆ.
(ಡಿ) ಬಾಸೆಲ್ ಸಮಾವೇಶ


25. ಇತ್ತೀಚೆಗೆ ಸುದ್ದಿಯಲ್ಲಿರುವ 'ಕರೆನ್‌ ಜನಾಂಗ'ವು ಈ ದೇಶದ ನಿವಾಸಿಗಳು.
A. ಕ್ಯೂಬಾ.
B. ಹಾಂಕಾಂಗ್.
C. ಚೀನಾ.
D. ಮ್ಯಾನ್ಮಾರ್.‌


26. ಇತ್ತೀಚೆಗೆ ಬಿಡುಗಡೆಯಾದ 'ಆಹಾರ ತ್ಯಾಜ್ಯ ಸೂಚ್ಯಂಕ ವರದಿ'(Food Waste Index)ಯನ್ನು ಪ್ರಕಟಿಸುವವರು,
A. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) .
B. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP).
C. ವಿಶ್ವ ಆಹಾರ ಕಾರ್ಯಕ್ರಮ(WFO)
D. ವಿಶ್ವ ಬ್ಯಾಂಕ್(WB)

27. 'ಕೊಡೊ'(KODO), ಕುಟ್ಕಿ (KUTKI), ಚೆನ್ನ (CHENNA) ಮತ್ತು ಸನ್ವಾ (SANWA) ಶಬ್ದಗಳು ಇತ್ತೀಚೆಗೆ ಸುದ್ದಿಯಲ್ಲಿದ್ದು ಇವಕ್ಕೆ ಸಂಬಂಧಿಸಿವೆ.
A. ಈಶಾನ್ಯ ರಾಜ್ಯಗಳಲ್ಲಿನ ಬುಡಕಟ್ಟುಗಳು.
B. ಅಳಿವಿನಂಚಿನಲ್ಲಿರುವ ದಕ್ಷಿಣ ಭಾರತೀಯ ಭಾಷೆಗಳು.
C. ರಾಗಿಯ ಪ್ರಮುಖ ತಳಿಗಳು.
D. ಎಮ್ಮೆಯ ತಳಿಗಳು.


28. ವಿಜ್ಞಾನಿಗಳು 'ವಿಶ್ವದ ಹಳೆಯ ಪಳೆಯುಳಿಕೆ ಕಾಡಿನ ಅವಶೇಷ'ಗಳನ್ನು ಇಲ್ಲಿ ಪತ್ತೆ ಹಚ್ಚಿದ್ದಾರೆ.
A. ಆಪ್ರಿಕಾ.
B. ಯು.ಎಸ್.ಎ.
C. ರಷ್ಯಾ.
D. ಚೀನಾ.


29. ಏಷ್ಯ, ಯೂರೊಪ್ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಆಯಕಟ್ಟಿನ ಸ್ಥಳವೆಂದರೆ,
A. ಈಜಿಪ್ಟ್.
B. ಸಿರಿಯಾ.
C. ಪ್ಯಾಲಸ್ತೀನ್
D. ಇರಾಕ್.


30. ಇತ್ತೀಚೆಗೆ ಸುದ್ದಿಯಲ್ಲಿರುವ 'ಮಿಷನ್ ಕಲ್ಪತ್ರು'(Mission KALPATRU) ಎಂಬುದು ಇದಕ್ಕೆ ಸಂಬಂಧಿಸಿದುದಾಗಿದೆ.
A. ವನ ಸಂಪತ್ತನ್ನು ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳುವುದು.
B. ಪತ್ರಿಕೋದ್ಯಮದ ಸ್ಥಿತಿಗತಿಗಳನ್ನು ಸುಧಾರಿಸುವುದು.
C. ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ ಸೌಲಭ್ಯಗಳನ್ನು ಹೆಚ್ಚಿಸುವುದು.
D. ಅಪೌಷ್ಟಿಕತೆ ವಿರುದ್ಧ ಹೋರಾಡುವುದು.

… ಮುಂದುವರೆಯುವುದು.

Wednesday, 4 May 2022

•► (ಸರಿ ಉತ್ತರಗಳೊಂದಿಗೆ) "ಪ್ರಿಲೀಮ್ಸ್ 2022: ಭಾಗ 2- ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Prelims 2022: Daily 10 Multiple Choice Questions)

 •►(ಸರಿ ಉತ್ತರಗಳೊಂದಿಗೆ) "ಪ್ರಿಲೀಮ್ಸ್  2022: ಭಾಗ 2- ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Prelims 2022: Daily 10 Multiple Choice Questions)

━━━━━━━━━━━━━━━━━━━━━━━━━━━━━━━━━━━━━━

11. ಪಲ್ಲವರ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 'ಅರ್ಜುನನ ತಪಸ್ಸು ಏಕಶಿಲಾ ಬಂಡೆಯ ಕೆತ್ತನೆ' ನರಸಿಂಹವರ್ಮನ್-I ನಿಂದ ನೀರ್ಮಿಸಲಾಯಿತು.
2. ಹಲ್ಮಿಡಿ ಶಾಸನಗಳು' ಪಲ್ಲವರ ಸಂಗೀತದ ಆಸಕ್ತಿಯನ್ನು ಚಿತ್ರಿಸುತ್ತವೆ.
3. ‘ತಚ್ಚಿನ ಚಿತ್ರಂ’ ಎಂಬ ಕೃತಿಯನ್ನು ರಾಜಸಿಂಹನು ರಚಿಸಿರುವನು.
— ಮೇಲಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.


12.'ಕುರಿಲ್ ದ್ವೀಪಗಳ ವಿವಾದ'ವು ಇತ್ತೀಚೆಗೆ ಸುದ್ದಿಯಲ್ಲಿದ್ದು ಈ ದೇಶಗಳ ಮಧ್ಯೆ ಜ್ವಲಂತವಾಗಿದೆ.
A) ಫಿಲಿಪೈನ್ಸ್  ಮತ್ತು ಚೀನಾ.
B) ಜಪಾನ್ ಮತ್ತು ಚೀನಾ.
C) ಜಪಾನ್ ಮತ್ತು  ರಷ್ಯಾ
D) ದ.ಕೋರಿಯಾ ಮತ್ತು ಚೀನಾ.


13.'ಕಾಂಗ್ರೆಸ್‌ನ ಫೈಜ್‌ಪುರ ಅಧಿವೇಶನ'ದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್‌ ನಡೆಸಿದ ಮೊದಲ ಅಧಿವೇಶನವಾಗಿತ್ತು.
2. ಇದರ ಅಧ್ಯಕ್ಷತೆಯನ್ನು ವಲ್ಲಭಭಾಯಿ ಪಟೇಲ್ ವಹಿಸಿದ್ದರು.
3. ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಅಧಿವೇಶನವು ಕೂಡ  ಫೈಜ್‌ಪುರದಲ್ಲಿ ಕಾಂಗ್ರೆಸ್ ಅಧಿವೇಶನದೊಂದಿಗೆ ನಡೆಯಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮತ್ತು 2 ಮಾತ್ರ.
(ಬಿ) 1 ಮತ್ತು 3 ಮಾತ್ರ.
(ಸಿ) 2 ಮತ್ತು 3 ಮಾತ್ರ.
(ಡಿ) 1, 2 ಮತ್ತು 3


14.'ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್' (Build Back Better World Initiative) ಉಪಕ್ರಮವು ಇದಕ್ಕೆ ಸಂಬಂಧಿಸಿದುದಾಗಿದೆ. 

A) ಜಿ-20
B) ಜಿ 7
C) ಬ್ರಿಕ್ಸ್
D) ಸಾರ್ಕ್


15.ಮೊಘಲ್ ಅವಧಿಯಲ್ಲಿನ 'ಸತ್ನಾಮಿ'(Satnamis)ಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸತ್ನಾಮಿಗಳು ಹೆಚ್ಚಾಗಿ ರೈತರು, ಕುಶಲಕರ್ಮಿಗಳು ಮತ್ತು ಕೆಳ ಜಾತಿಯ ಜನರಾಗಿದ್ದರು.
2. ಅವರು ಜಾತಿ, ಶ್ರೇಣಿಯ ಅಥವಾ ಹಿಂದೂ ಮುಸ್ಲಿಮರ ನಡುವಿನ ಭೇದಗಳನ್ನು ಗಮನಿಸಲಿಲ್ಲ ಮತ್ತು ಕಟ್ಟುನಿಟ್ಟಾದ ನೀತಿ ಸಂಹಿತೆಯನ್ನು ಅನುಸರಿಸಿದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮಾತ್ರ
(ಬಿ) 2 ಮಾತ್ರ
(ಸಿ) 1 ಮತ್ತು 2 ಎರಡೂ
(ಡಿ) 1 ಅಥವಾ 2 ಅಲ್ಲ.


16.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ನೆರೆಯ ಮೊಘಲ್ ಪ್ರಾಂತ್ಯಗಳ ಮೇಲೆ ತೆರಿಗೆಯನ್ನು ವಿಧಿಸುವ ಮೂಲಕ ಶಿವಾಜಿ ತನ್ನ ಆದಾಯವನ್ನು ಪೂರಕಗೊಳಿಸಿದನು.
2. ಶಿವಾಜಿ ಜಮೀನ್ದಾರಿ (ದೇಶಮುಖಿ) ವ್ಯವಸ್ಥೆಯನ್ನು ಉತ್ತೇಜಿಸಿದನು.
3. ಶಿವಾಜಿ ಮಿರಾಸ್ದಾರರನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಿದನು.
- ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮತ್ತು 3 ಮಾತ್ರ
(ಬಿ) 1 ಮತ್ತು 2 ಮಾತ್ರ
(ಸಿ) 2 ಮತ್ತು 3 ಮಾತ್ರ
(ಡಿ) 1, 2 ಮತ್ತು 3


17.'ಸೇಂಟ್ ಪೀಟರ್ಸ್‌ಬರ್ಗ್ ಘೋಷಣೆʼಯು ಇದಕ್ಕೆ ಸಂಬಂಧಿಸಿದುದಾಗಿದೆ.
A.ಅಂತರರಾಷ್ಟ್ರೀಯ ಸೈಬರ್ ಭದ್ರತೆ.
B.ಕಡಲತೀರದ ಯೋಗಕ್ಷೇಮ ಮತ್ತು ಸಿಬ್ಬಂದಿ ಬದಲಾವಣೆ.
C.ಹವಾಮಾನ ಬದಲಾವಣೆ.
D.ಹುಲಿ ಸಂರಕ್ಷಣೆ.


18.ಕೆಳಗೆ ನೀಡಲಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒತ್ತಡವು ಕಡಿಮೆ.
2. ವಾಯುಮಂಡಲದ ಒತ್ತಡವು ಭೂಮೇಲ್ಮೈನಿಂದ ಎತ್ತರಕ್ಕೆ  ಹೋದಂತೆ ಕಡಿಮೆಯಾಗುವುದು.  
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ.) 1 ಮಾತ್ರ
(ಬಿ.) 2 ಮಾತ್ರ
(ಸಿ.) 1 ಮತ್ತು 2 ಎರಡೂ
(ಡಿ.) 1 ಅಥವಾ 2 ಆಗಿಲ್ಲ


19. ವೇದಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಋಗ್ವೇದ ಕಾಲದಲ್ಲಿ, ಸ್ತ್ರೀ ದೇವತೆಗಳ ಉಲ್ಲೇಖವಿಲ್ಲ.
2. ಯಜುರ್ವೇದವು ರೋಗಗಳ ಚಿಕಿತ್ಸೆಗೆ ಸಂಬಂಧಿಸಿದೆ.
3. ಸಾಮವೇದದ ಎಲ್ಲಾ ಶ್ಲೋಕಗಳನ್ನು ಋಗ್ವೇದದಿಂದ ಎರವಲು ಪಡೆಯಲಾಗಿದೆ.
4. ಅಥರ್ವವೇದವು ಧಾರ್ಮಿಕ ಆಚರಣೆಗಳ ನಿರ್ವಹಣೆಗೆ ಸಂಬಂಧಿಸಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(ಎ) 1 ಮತ್ತು 3 ಮಾತ್ರ
(ಬಿ) 1, 2 ಮತ್ತು 4 ಮಾತ್ರ
(ಸಿ) 2, 3 ಮತ್ತು 4 ಮಾತ್ರ
(ಡಿ) 1, 2, 3 ಮತ್ತು 4


20.'ರಾಟೆಲ್ ಜಲ ವಿದ್ಯುತ್ ಯೋಜನೆ'ಯು ಈ ಕೆಳಗಿನ ನದಿಗೆ ಸಂಬಂಧಿಸಿದೆ.
A) ಬ್ರಹ್ಮಪುತ್ರ ನದಿ.
B) ಚೆನಬ್ ನದಿ.
C) ಸಟ್ಲೆಜ್ ನದಿ.
D) ಕೋಸಿ ನದಿ.

Sunday, 1 May 2022

•► "ಪ್ರಿಲೀಮ್ಸ್ 2022: ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು (Daily 10 Multiple Choice Questions)

 •► "ಪ್ರಿಲೀಮ್ಸ್  2022: ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
 (Daily 10 Multiple Choice Questions)

━━━━━━━━━━━━━━━━━━━━━━

01.ಭೂಮಿಯ ಕಕ್ಷೆಯಾಚೆಗಿನ ‘ಲ್ಯಾಂಗ್ರೇಜ್‌ ಪಾಯಿಂಟ್‌’ ಕುರಿತ ಈ  ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿದೆ?
1) ಈ ಸಂಯೋಜನೆಯಲ್ಲಿ ಸೂರ್ಯ ಮತ್ತು ದೂರದರ್ಶಕದ ನಡುವೆ ಭೂಮಿ ಇರುತ್ತದೆ.
2) ಸೂರ್ಯ, ಭೂಮಿ ಮತ್ತು ದೂರದರ್ಶಕವು ಒಂದೇ ಸರಳ ರೇಖೆಯಲ್ಲಿ ಇರುತ್ತವೆ.
3) ಈ ಸಂಯೋಜನೆಯಲ್ಲಿ ಭೂಮಿಯ ನೆರಳಿನ ಪ್ರದೇಶದಲ್ಲಿ ಸೂರ್ಯನ ಗುರುತ್ವ ಬಲ ಸ್ವಲ್ಪ ಕಡಿಮೆ ಇರುತ್ತದೆ.
A. 1 ಮಾತ್ರ.
B. 1 ಮತ್ತು 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನೆಲ್ಲವೂ. 

02. `ಪಿರ್ ಪಂಜಾಲ್ ಶ್ರೇಣಿ`ಯ ಕುರಿತ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿದೆ?
1) ಪಿರ್ ಪಂಜಾಲ್ಪರ್ವತ ಶ್ರೇಣಿಯು ಪಶ್ಚಿಮ (ಪಂಜಾಬ್) ಹಿಮಾಲಯದ ಭಾಗವಾಗಿದೆ
2) ಇದು ಒಂದು ಬದಿಯಲ್ಲಿ ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನಡುವೆ ಮತ್ತು ಇನ್ನೊಂದು ಬದಿಯಲ್ಲಿ ಸಿಂಧೂ  ನಡುವೆ ವಿಭಜನೆಯನ್ನು ರೂಪಿಸುತ್ತದೆ.
3) ಹಿಮಾಲಯದ ಪೂರ್ವ ಪಿರ್ ಪಂಜಾಲ್ ಶ್ರೇಣಿಯಲ್ಲಿರುವ  ರೋಹ್ಟಂಗ್ ಕಣಿವೆಮಾರ್ಗದಲ್ಲಿ ಅಟಲ್ ಸುರಂಗವನ್ನು ನಿರ್ಮಿಸಲಾಗಿದೆ.
A. 1 ಮಾತ್ರ.
B. 1 ಮತ್ತು 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನೆಲ್ಲವೂ.  


03. ಈ ಕೆಳಗಿನ ಯಾವ ಉಪಕ್ರಮಗಳು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಹೋರಾಟದೊಂದಿಗೆ ಸಂಬಂಧಿಸಿಲ್ಲ.
1. ಚುನಾವಣಾ ತೆರಿಗೆ (Poll Tax) ವಿರುದ್ಧ ಪ್ರಚಾರ.
2. ಬಲವಂತದ ದುಡಿಮೆ ವಿರುದ್ಧ ಅಭಿಯಾನ.
3. 'ಇಂಡಿಯನ್ ಒಪಿನಿಯನ್' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.
4.ಭಾರತೀಯರ ವಲಸೆಯ ಮೇಲಿನ ನಿರ್ಬಂಧದ ವಿರುದ್ಧದ ಅಭಿಯಾನ.
5.ವಿವಾಹಗಳ ನೋಂದಣಿ ಮೇಲಿನ ನಿರ್ಬಂಧದ ವಿರುದ್ಧದ ಅಭಿಯಾನ
(ಎ) 1 ಮಾತ್ರ.
(ಬಿ) 2 ಮಾತ್ರ.
(ಸಿ) 1, 2 ಮತ್ತು 5 ಮಾತ್ರ.
(ಡಿ) 2, 4 ಮತ್ತು 5  ಮಾತ್ರ.


04. ವುಡ್ಸ್ ಡಿಸ್‍ಪ್ಯಾಚ್ (Wood’s Despatch) ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಇದು ಎಲ್ಲಾ ಹಂತಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಿತು.
2. ಇದು ಸ್ತ್ರೀ ಮತ್ತು ವೃತ್ತಿಪರ ಶಿಕ್ಷಣದ ಮೇಲೆ ಒತ್ತಡ ಹಾಕಿತು.
3. ಸರ್ಕಾರಿ ಸಂಸ್ಥೆಗಳಲ್ಲಿ ನೀಡುವ ಶಿಕ್ಷಣವು ಜಾತ್ಯತೀತವಾಗಿರಬೇಕು ಎಂದು ಇದು ಒತ್ತಿ ಹೇಳಿತು.

— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.


05."ನಿರ್ದಿಷ್ಟ ಕುಶಲ ಕಾರ್ಮಿಕ"(Specified Skilled Worker)ರಿಗೆ ಸಂಬಂಧಿದಂತೆ ಸೂಕ್ತ ಕಾರ್ಯಾಚರಣೆ ವ್ಯವಸ್ಥೆಗಾಗಿ ಮೂಲಭೂತ ಚೌಕಟ್ಟು(Basic Framework)ನ ಕುರಿತಂತೆ ಭಾರತ ಸರ್ಕಾರವು ಈ ಕೆಳಕಂಡ ಯಾವ ದೇಶದೊಂದಿಗಿನ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಿದೆ?
A) ಸೌದಿ ಅರೇಬಿಯಾ
B) ಸ್ವಿಟ್ಜರ್‌ಲೆಂಡ್
C) ಜಪಾನ್
D) ಜರ್ಮನಿ.

06.ಈ ಕೆಳಗಿನವುಗಳಲ್ಲಿ ಯಾವ ದೇಶವು ‘ಕ್ವಾಡ್‌’(Quad)ನ ಸದಸ್ಯ ರಾಷ್ಟ್ರವಾಗಿಲ್ಲ.
A) ಭಾರತ.
B) ಅಮೆರಿಕ.
C) ಜಪಾನ್
D) ಚೀನಾ


07.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಜಾಗತಿಕ ಸುಸ್ಥಿರ ಅಭಿವೃದ್ಧಿ ಶೃಂಗಸಭೆ'(World Sustainable Development Summit)ಯು ಈ ಸಂಸ್ಥೆಯ ವಾರ್ಷಿಕ ಕಾರ್ಯಕ್ರಮವಾಗಿದೆ.
A. ವಿಶ್ವ ಆರ್ಥಿಕ ವೇದಿಕೆ (WEF)
B.ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)
C.ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ  (UNFCCC)
D.ಇಂಧನ ಮತ್ತು ಸಂಶೋಧನಾ ಸಂಸ್ಥೆ (TERI)


08."ಜಾಗತಿಕ ಅಪಾಯಗಳ ವರದಿ"(Global Risk Report) ಯನ್ನು ಬಿಡುಗಡೆ ಮಾಡಿದವರು...
A) ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‍ಇಪಿ)
B) ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ' (ಎಫ್‌ಎಟಿಎಫ್‌)  
C) ವಿಶ್ವ ಆರ್ಥಿಕ ವೇದಿಕೆ
D) ವಿಶ್ವ ಬ್ಯಾಂಕು


09.'ಪ್ರಧಾನಮಂತ್ರಿ ಮಾತೃವಂದನಾ ಯೋಜನೆ' ಕುರಿತ ಈ ಕೆಳಗಿನ ಸರಿಯಾದ ಹೇಳಿಕೆ/ಗಳನ್ನು ಪರಿಗಣಿಸಿ.
1.ಈ ಯೋಜನೆಯ ಮೊದಲಿನ ಹೆಸರು ಇಂದಿರಾ ಮಾತೃ ಯೋಜನೆ ಎಂದು.
2. ಮೊದಲ ಜೀವಂತ ಹೆರಿಗೆಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.
3. ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನುಸಾರ ಅನುಷ್ಠಾನಗೊಳ್ಳಿಸಲಾಗಿದೆ. 

— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.


10. 'ಬಿಂಜರಪುರಿ', 'ಮೋಟು', 'ಘುಮುಸರಿ', ಖರಿಯಾರ್,
ಇತ್ತೀಚೆಗೆ ಸುದ್ದಿಯಲ್ಲಿ ಕಂಡಿದ್ದು?

A) ಬುಡಕಟ್ಟು ನೃತ್ಯಗಳು.
B) ಧೀರ್ಘಾವಧಿ ಬದುಕಬಲ್ಲ ಮರಭೂಮಿ ಸಸ್ಯಗಳು.
C) ಜಾನುವಾರುಗಳ ತಳಿ
D) GI ಟ್ಯಾಗ್ ಮಾಡಲಾದ ವಸ್ತುಗಳು. 

...ಮುಂದುವರೆಯುವುದು.

Thursday, 14 April 2022

★ ಟೀಪು ಸುಲ್ತಾನ್ ಕಾಲದ ಪ್ರಮುಖ ಕೃತಿ ಗ್ರಂಥಗಳು : (Literature in Tippu Sultan Period)

 ★ ಟೀಪು ಸುಲ್ತಾನ್ ಕಾಲದ ಪ್ರಮುಖ ಕೃತಿ ಗ್ರಂಥಗಳು :
(Literature in Tippu Sultan Period)

1, 'ಫತುಲ್ ಮುಜಾಹುದಿನ್'' ಯುದ್ಧ ಕಲೆಯನ್ನು ಕುರಿತು
ಗ್ರಂಥವಾಗಿದೆ.
2. ಮುಫ್ರಾಹ-ಅಲ್-ಖುಲಾಬ್' ಸಂಗೀತ ಶಾಸ್ತ್ರವನ್ನು ಕುರಿತು ವಿವರಿಸುತ್ತದೆ.
3. 'ಖುಲಾಸ್ -ಏ-ಸುಲ್ತಾನಿ'ಯು ಮಹಿಳೆಯರ ಕರ್ತವ್ಯಗಳನ್ನು ವಿವರಿಸುತ್ತದೆ.
4.'ಅಜ್ರಬ್ -ಏ-ಸುಲ್ತಾನಿ' ಅಥವಾ “ಫತಃ ನಮಾ-ಏ-ಟೀಪು ಸುಲ್ತಾನ್'' ಎಂಬ ಗ್ರಂಥವು ಟೀಪು ಸುಲ್ತಾನನ ಚರಿತ್ರೆಯನ್ನು ವಿವರಿಸುತ್ತದೆ.
5. 'ಖಿಲಾಬಂದಿ' ಎಂಬ ಕೃತಿಯು ಕೋಟೆಗಳ ನಿರ್ಮಾಣದ ಬಗ್ಗೆ ವಿವರಿಸುತ್ತದೆ.
6. 'ಅಸ್ಲಾಹ್ ಖಾನಾ' ಎಂಬ ಕೃತಿಯು ಮದ್ದು ಗುಂಡುಗಳ ಬಗ್ಗೆ
ವಿವರಿಸುತ್ತದೆ.
7. ಮೀರ್ ಹುಸೇನ್‌ ಅಲಿ ಕಿರ್ಮಾನಿಯು ಬರೆದ 'ನಿಶಾನ್-ಏ-ಹೈದರಿ' ಗ್ರಂಥವು ಹೈದರ ಅಲಿಯ ಚರಿತ್ರೆಯನ್ನು ವಿವರಿಸುತ್ತದೆ. 

ಈತನ ಕಾಲದಲ್ಲಿ ಉರ್ದು ಭಾಷೆಯಲ್ಲಿ ಅನೇಕ ಗ್ರಂಥಗಳು ರಚನೆಯಾದವು. ಇವುಗಳಲ್ಲಿ ತರಬ್ ಎಂಬ ವಿದ್ವಾಂಸನು ಬರೆದ 'ಫತಾನಾಮಾ' ಎಂಬ ಚಾರಿತ್ರಿಕ ಕೃತಿಯು ಪ್ರಮುಖವಾಗಿದೆ. 

ಈತನು ಶ್ರೀರಂಗ ಪಟ್ಟಣದಲ್ಲಿ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಅದಕ್ಕೆ 'ಜಮಿ-ಉಲ್-ಉಮರ್” ಎಂದು ಕರೆದನು. 

'ಭಾರತದ ಉರ್ದು ಪತ್ರಿಕೆಯ ಪಿತಾಮಹ' ಎಂದು ಈತನನ್ನು ಕರೆಯಲಾಗಿದೆ. 

ಕ್ರಿ. ಶ. 1784ರಲ್ಲಿ ಟೀಪುಸುಲ್ತಾನನು 'ಮೌಲಾದಿ' ಎಂಬ ಹೊಸ ಶಕೆಯನ್ನು ಆರಂಭಿಸಿದನು. ಇದು ಚಂದ್ರ ಮತ್ತು ಸೌರ ಮಾನಗಳ ಮಿಶ್ರಣವಾಗಿತ್ತು ಹಿಂದೂ ಪಂಚಾಂಗದಂತೆ ಇದರಲ್ಲೂ ಕೂಡ 60 ವರ್ಷಗಳ ಆವರ್ತನವನ್ನು ಮತ್ತು ಮೂರು ವರ್ಷಗಳಿಗೊಮ್ಮೆ ಒಂದು ಹೆಚ್ಚಿನ ತಿಂಗಳನ್ನು ಅಥವಾ ಅಧಿಕ ಮಾಸವನ್ನು ಸೇರಿಸುವ ಪದ್ಧತಿಯನ್ನು ಒಳಗೊಂಡಿತ್ತು


Thursday, 31 March 2022

•► ಚಿನ್ನ (Gold)

  •► ಚಿನ್ನ (Gold) =
 ━━━━━━━━
 - ಇದು ಹಳದಿ ಬಣ್ಣದಿಂದ ಹೊಳೆಯುವ ಲೋಹ. + ಇದೊಂದು ಅಪರೂಪದ ಲೋಹ. + ಚಿನ್ನದ ಸಂಕೇತ - AU
- ಚಿನ್ನದ ಲ್ಯಾಟಿನ್ ಹೆಸರು - ಆರಂ (Aurum)  

+ ಚಿನ್ನವು ಮನುಷ್ಯನಿಗೆ ತಾಮ್ರದ ಯುಗ (ಕ್ಯಾಥೋಲಿನಿಕ್ ಯುಗ) ದಿಂದ ಪರಿಚಯವಿತ್ತು.

+ ಚಿನ್ನವು ಶುದ್ಧರೂಪದಲ್ಲಿ ದೊರೆಯುತ್ತದೆ ಎಂಬ ಅಭಿಪ್ರಾಯವಿದೆ. ಆದರೆ ಚಿನ್ನವು ಕೂಡ, ಅನೇಕ ಲೋಹದೊಡನೆ ಬೆರೆತಿರುತ್ತದೆ. ಶಿಲೆಗಳಲ್ಲಿ ಚಿಕ್ಕ ಚಿಕ್ಕ ಕಣದ ರೂಪದಲ್ಲಿ ಚಿನ್ನದ ಅದಿರು ಕಂಡುಬರುತ್ತದೆ. + ಕ್ವಾಟ್ಟರ್ಜ್ ಅಥವಾ ಸಲೈಡ್ ಖನಿಜದೊಂದಿಗೆ ಇರುವ ಚಿನ್ನದ ಅದಿರನ್ನು 'ಜೂಲ್ಸ್ ಗೋಲ್ಡ್'(Fool's Gold) ಎನ್ನುವರು.
+ ಚಿನ್ನವು ಬೆಳ್ಳಿಯೊಂದಿಗೆ ಮಿಶ್ರ ಲೋಹವಾಗಿ ದೊರೆಯುತ್ತದೆ.
+ ಚಿನ್ನವು ಕೆಲವು ವೇಳೆ ಟೆಲುರಿಯಮ್ ಎಂಬ ಖನಿಜದೊಂದಿಗೆ ಕ್ಯಾಲಿವರೈಟ್ (Calaverite) & ಸೈಲ್ವನೈಟ್ (sylvanite), ಪೆಟ್‌ ಸೈಟ್ (Petzite) ಕೈನರೈಟ್ (krennerite), ನೆಗೆಣೈಟ್ (Nagyagite) ಆಗಿ ದೊರೆಯುತ್ತದೆ.
+ ಚಿನ್ನವು ತಾಮ್ರದೊಂದಿಗೆ ಅರಿಕುಪ್ರೈಡ್ (Auri Cupride [Cu₃Au]) ಆಗಿ,
+ ಸೀಸದೊಂದಿಗೆ ನೊವೊಡ್ನೆಪ್ರೈಟ್ (Novodneprite [Aupb3] ಆಗಿ
+ ಪಾದರಸದೊಂದಿಗೆ ವೆಸಿನೈಟ್ (Weishanite [AuAg)3Hg2))ಆಗಿ ದೊರೆಯುತ್ತದೆ. 

+ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಚಿನ್ನವನ್ನು ಉತ್ಪಾದಿಸುವ ರಾಜ್ಯವಾಗಿದೆ.
+ ಭಾರತ ದೇಶದ ಚಿನ್ನದ ಉತ್ಪಾದನೆಯಲ್ಲಿ ಶೇಕಡಾ94.2ರಷ್ಟನ್ನು ಕರ್ನಾಟಕ ಉತ್ಪಾದಿಸುತ್ತದೆ.
+ ಕರ್ನಾಟಕವು ನಿಕ್ಷೇಪದಲ್ಲಿ ದೇಶದ ಶೇ.81ರಷ್ಟು ಒಳಗೊಂಡಿದೆ.
+ ಕರ್ನಾಟಕದಲ್ಲಿ ಪ್ರಮುಖ ಚಿನ್ನದ ನಿಕ್ಷೇಪಗಳೆಂದರೆ ಕೋಲಾರ, ರಾಯಚೂರು, ಚಿತ್ರದುರ್ಗ, ಧಾರವಾಡ, ಗದಗ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಂಡು ಬರುತ್ತದೆ. 

ಕೋಲಾರ ಚಿನ್ನದ ಗಣಿಗಳು ಭಾರತದ ಮೊದಲ ಚಿನ್ನದ ಗಣಿ. ಕೆ.ಜಿ.ಎಫ್‌ನಲ್ಲಿರುವ ಗಣಿಗಳು ಜಗತ್ತಿನ 2ನೇ ಅತಿ ಆಳವಾದ ಚಿನ್ನದ ಗಣಿಗಳಾಗಿವೆ.

+ 1802ರಲ್ಲಿ ಕೋಲಾರದಲ್ಲಿ ಚಿನ್ನ ಪತ್ತೆ ಆಯಿತೆಂದು ದಾಖಲೆ ಇದೆ. + 1871ರಲ್ಲಿ ಒರೆಗಾನ್ ಗಣಿಯಿಂದ ಚಿನ್ನದ ಅದಿರನು, ಮೊದಲು ಉತ್ಪಾದಿಸಲಾಯಿತು.

+ 1905ರವರೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಫ್ರಿಕಾವು ಅತ್ಯಂತ ಹೆಚ್ಚು ಚಿನ್ನ ಉತ್ಪಾದಿಸುವ ರಾಷ್ಟ್ರವಾಗಿತ್ತು.

+ ಆಫ್ರಿಕಾದ ಜೋಹಾನ್ಸ್ ಬರ್ಗ್ನಲ್ಲಿ ಅತಿ ಹೆಚ್ಚು ಚಿನ್ನದ ಗಣಿಗಳಿದ್ದವು ಪ್ರಸ್ತುತವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನ, ಆಸ್ಟ್ರೇಲಿಯಾ, ರಷ್ಯಾ, ಪೆರು ದೇಶಗಳಲ್ಲಿ ಹೆಚ್ಚು ಉತ್ಪಾದನೆ ಮಾಡಲಾಗುತ್ತದೆ.

+ ಅಮೆರಿಕಾದ ಸಂಯುಕ್ತ ಸಂಸ್ಥಾನದ ದಕ್ಷಿಣ ಡಕೋಟಾ, ನೆವಡಾವು ಅಮೆರಿಕಾ ಸಂಯುಕ್ತ ಸಂಸ್ಥಾನದ 2/3 ರಷ್ಟು ಚಿನ್ನವನ್ನು ಪೂರೈಸುತ್ತದೆ.

+ ಚಿಲಿ ಮತ್ತು ಅರ್ಜೆಂಟೈನಾ ಮಧ್ಯದಲ್ಲಿರುವ ದಕ್ಷಿಣ ಆಫ್ರಿಕಾದ ಅಂಟಾಕೋಮಾ ಮರುಭೂಮಿಯಲ್ಲಿ ಜಗತ್ತಿನ ಕಾಲು ಭಾಗದಷ್ಟು ಚಿನ್ನವು ದೊರೆಯುತ್ತದೆ ಎಂದು ಪತ್ತೆಹಚ್ಚಲಾಗಿದೆ.


Sunday, 27 March 2022

★ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (GSI - ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ)

 ★  ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (GSI -Geological Survey of India) =

━━━━━━━━━━━━━━━━━━━━━━━━


ಕೇಂದ್ರ ಗಣಿ ಸಚಿವಾಲಯದ ಅಡಿಯಲ್ಲಿ ಭಾರತದ ಪ್ರಧಾನ ಭೂವೈಜ್ಞಾನಿಕ ಸಂಸ್ಥೆಯಾದ ಈ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ - ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ) ಬರುತ್ತದೆ. ಇದರ ಒಂದು ಪ್ರಮುಖ ವೇದಿಕೆಯಾಗಿ ಕೇಂದ್ರೀಯ  ಭೂವೈಜ್ಞಾನಿಕ ಪ್ರೋಗ್ರಾಮಿಂಗ್ ಮಂಡಳಿ (ಸಿ.ಜಿ.ಪಿ.ಬಿ) ಇರುವುದು.  +  ಇತ್ತೀಚೆಗೆ 172ನೇ ಸಂಸ್ಥಾಪನಾ ದಿನ  ಆಚರಣೆ. + ಖನಿಜ ನಿಕ್ಷೇಪಗಳನ್ನು ಗುರುತಿಸುವಲ್ಲಿ ಮತ್ತು ರಾಷ್ಟ್ರದ ಹೇರಳ ಖನಿಜ ಸಂಪನ್ಮೂಲಗಳನ್ನು ಹೆಚ್ಚಿಸುವಲ್ಲಿ ಜಿಎಸ್‌ಐ ಪ್ರಮುಖ ಪಾತ್ರ + ರೈಲ್ವೆಗಳಿಗೆ ಕಲ್ಲಿದ್ದಲು ನಿಕ್ಷೇಪಗಳನ್ನು ಹುಡುಕಲು 1851ರಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್ ಐ) ಅನ್ನು ಸ್ಥಾಪಿಸಲಾಯಿತು + ರಾಷ್ಟ್ರೀಯ ಭೂವೈಜ್ಞಾನಿಕ ಮಾಹಿತಿ ಮತ್ತು ಖನಿಜ ಸಂಪನ್ಮೂಲ ಮೌಲ್ಯಮಾಪನವನ್ನು ರಚಿಸುವುದು ಮತ್ತು ನವೀಕರಿಸುವುದು ಸೇರಿದೆ. ನೆಲಮಟ್ಟದ ಸಮೀಕ್ಷೆಗಳು, ವಾಯುಗಾಮಿ ಮತ್ತು ಸಾಗರ ಸಮೀಕ್ಷೆಗಳು, ಖನಿಜ ಶೋಧನೆ ಮತ್ತು ವಿಚಾರಣೆಗಳು, ಬಹು-ಶಿಸ್ತಿನ ಭೂವೈಜ್ಞಾನಿಕ, ಭೂ-ತಾಂತ್ರಿಕ, ಭೂ-ಪರಿಸರ ಮತ್ತು ನೈಸರ್ಗಿಕ ಅಪಾಯಗಳ ಅಧ್ಯಯನಗಳು, ಗ್ಲೇಶಿಯಾಲಜಿ (ನೀರ್ಗಲ್ಲು ), ಭೂಕಂಪನ ಟೆಕ್ಟೋನಿಕ್ ಅಧ್ಯಯನ ಮತ್ತು ಮೂಲಭೂತ ಸಂಶೋಧನೆಗಳ ಮೂಲಕ ಪ್ರಮುಖ ಉದ್ದೇಶಗಳನ್ನು ಸಾಧಿಸುವುದು ಇದರ ಪ್ರಮುಖ ಕಾರ್ಯಗಳು  + ಜಿಎಸ್‌ಐನ ಕೇಂದ್ರ ಕಛೇರಿ : ಕೋಲ್ಕತ್ತಾ. + ಗಣಿ ಸಚಿವಾಲಯದ ಜೊತೆ ಸೇರಿಸಲ್ಪಟ್ಟಿರುವ ಕಚೇರಿಗಳಲ್ಲಿ, ಜಿಎಸ್ ಐ ಲಕ್ನೋ, ಜೈಪುರ, ನಾಗ್ಪುರ, ಹೈದರಾಬಾದ್, ಶಿಲ್ಲಾಂಗ್ ಮತ್ತು ಕೋಲ್ಕತ್ತಾದಲ್ಲಿ ಆರು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ ಮತ್ತು ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಘಟಕ ಕಚೇರಿಗಳನ್ನು ಹೊಂದಿದೆ. + ಪ್ರಸ್ತುತ ಇದರ  ಮಹಾನಿರ್ದೇಶಕರು  ಶ್ರೀ ರಾಜೇಂದ್ರ ಸಿಂಗ್ ಗರ್ಖಾಲ್.

Saturday, 19 March 2022

•► ಪ್ರಮುಖ ಪ್ರಾಚೀನ ವಿಶ್ವವಿದ್ಯಾಲಯಗಳು. (Important Ancient Universities)

 •► ಪ್ರಮುಖ ಪ್ರಾಚೀನ ವಿಶ್ವವಿದ್ಯಾಲಯಗಳು.(ಪ್ರಾಚೀನ ಭಾರತದ ಇತಿಹಾಸ)
(Important Ancient Universities)

━━━━━━━━━━━━━━━━━━━━━━━━━━━━━
 (Art and Culture)

1.ತಕ್ಷಿಲಾ  —    ರಾವಲ್ಪಿಂಡಿ ಜಿಲ್ಲೆ, ಪಂಜಾಬ್, ಪಾಕಿಸ್ತಾನ. 2.ನಳಂದಾ —   ಬಿಹಾರದ ಪಾಟ್ನಾ ಹತ್ತಿರ.
3.ವಿಕ್ರಮಶಿಲಾ —    ಭಾಗಲ್ಪುರ್ ಜಿಲ್ಲೆ, ಬಿಹಾರ.
4 ವಲಭಿ ವಿಶ್ವವಿದ್ಯಾಲಯ  —   ಸೌರಾಷ್ಟ್ರ, ಗುಜರಾತ್. 5.ಪುಷ್ಪಗಿರಿ ವಿಶ್ವವಿದ್ಯಾಲಯ  —   ಜಾಜ್‌ಪುರ ಜಿಲ್ಲೆ, ಒಡಿಶಾ. 6.ಸೋಮಪುರ ವಿಶ್ವವಿದ್ಯಾಲಯ  —   ನವೊಗಾಂವ್ ಜಿಲ್ಲೆ, ಬಾಂಗ್ಲಾದೇಶ.


Sunday, 13 February 2022

•► ಅವನತಿಯತ್ತ ಹಲವು ಜೀವ ಪ್ರಭೇದ (2019ರ ಸಮೀಕ್ಷೆಯಂತೆ) (Declining Many Species)

•► ಅವನತಿಯತ್ತ ಹಲವು ಜೀವ ಪ್ರಭೇದ (2019ರ ಸಮೀಕ್ಷೆಯಂತೆ)
(Declining Many Species)

━━━━━━━━━━━━━━━━━━━━━━━━━━━━━━


ನಗರಗಳ ಮೇಲಿನ ಮಾನವನ ವ್ಯಾಮೋಹದಿಂದಾಗಿ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಅವನತಿಯಂಚಿನಲ್ಲಿದೆ. ಸಸ್ತನಿ , ಸರೀಸೃಪ , ಉಭಯಚರ, ಕೀಟ, ಮೀನು ಸಹಿತ ಲೆಕ್ಕಕ್ಕೆ ಸಿಗ ದಷ್ಟು ಪ್ರಭೇದಗಳು ಕಣ್ಮರೆಯಾಗುತ್ತಿದೆ.

·  ಐದು ಜಾತಿಯ ಪ್ರಭೇದಗಳಲ್ಲಿ ವರ್ಷದಲ್ಲಿ ನಾವು ಒಂದನ್ನು ಕಳೆದುಕೊಳ್ಳುತ್ತಿದ್ದೇವೆ.

·  ಒಟ್ಟು 1,000 ದಿಂದ 10,000 ಸಾವಿರ ಪ್ರಭೇದಗಳನ್ನು ವಾರ್ಷಿಕವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಸಂಶೋಧನೆಗಳು ತಿಳಿಸಿವೆ.

·  ಕಳೆದ 28 ವರ್ಷಗಳಲ್ಲಿ ಕೀಟಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದ್ದು, ಇದ ರಿಂದ ಶೇ. 60ರಷ್ಟು ಪಕ್ಷಿಗಳಿಗೆ ಸಿಗುವ ಆಹಾರದ ಪ್ರಮಾಣ ಕಡಿಮೆಯಾಗಿದೆ.

·  ಆವಾಸ ಸ್ಥಾನಗಳ ನಾಶ, ಶೋಷಣೆ ಮತ್ತು ಹವ ಮಾನ ಬದಲಾವಣೆಯಿಂದ ವಿಶ್ವದ ಕಾಡು ಪ್ರಾಣಿ ಗಳು ಪ್ರಸ್ತುತ ಅರ್ಧ ದಷ್ಟು ಕಡಿಮೆಯಾಗಿದೆ.

·  ವಿಶ್ವದಾದ್ಯಂತ ವಾರ್ಷಿಕವಾಗಿ ಮೀನುಗಾರಿಕೆ ಮತ್ತು ಇನ್ನಿತರ ಕಾರಣಗಳಿಂದ ಸಮುದ್ರದಲ್ಲಿರುವ 6,50,000ಕ್ಕೂ ಹೆಚ್ಚು ಪ್ರಭೇದಗಳು ನಾಶಗೊಂಡಿವೆೆ.

·  20 ವರ್ಷಗಳಲ್ಲಿ ಡಾಲ್ಫಿನ್‌ಗಳ ಪ್ರಮಾಣ ಶೇ.65, ಪಿನ್ನಿ ಪೆಡ್‌(ಸಮುದ್ರ ಸಿಂಹಗಳು) ಮತ್ತು ಹಲ್ಲಿನ ತಿಮಿಂಗಿಲಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದೆ.

·  ವಿಶ್ವದ ಪಕ್ಷಿ ಪ್ರಭೇದಗಳಲ್ಲಿ ಶೇ. 40ರಷ್ಟು ಕಡಿಮೆಯಾಗಿದೆ. ವಾರ್ಷಿಕವಾಗಿ 8 ಪ್ರಭೇದಗಳಲ್ಲಿ 1 ಪ್ರಭೇದ ಅಳಿವಿನಂಚಿನಲ್ಲಿದೆ.

·  ಹುಲಿ, ಚಿರತೆ ಮತ್ತು ಬೆಕ್ಕುಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂದಿನ ದಶಕಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ ಎಂಬು ದನ್ನು ಸಂಶೋಧನೆಗಳು ಸ್ಪಷ್ಟಪಡಿಸಿದೆ.

·  ಬೆಕ್ಕು, ಖಡ್ಗಮೃಗ ಮತ್ತು ಇತರ ಪ್ರಾಣಿಗಳ ಚರ್ಮ ಮತ್ತು ದೇಹದ ಭಾಗಗಳನ್ನು ಬಳಸಿಕೊಳ್ಳುತ್ತಿರುವ ಚೀನಾ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿದೆ.

·  ಹಲ್ಲಿಗಳ ಜನನದ ಪ್ರಮಾಣ ಹವಮಾನ ಬದಲಾವಣೆಯಿಂದಾಗಿ ಕಡಿಮೆಯಾಗತ್ತಿದ್ದು, ಇತ್ತೀ ಚಿನ ಅಧ್ಯಯನಗಳ ಪ್ರಕಾರ ಶೇ. 40ರಷ್ಟು ಹಲ್ಲಿ ಗಳು ನಾಶವಾಗಿವೆ. 2080ರ ಹೊತ್ತಿಗೆ ಈ ಜಾತಿಯೇ ನಿರ್ನಾಮಗೊಳ್ಳುತ್ತದೆ ಎನ್ನಲಾಗಿದೆ.

·  ಲಕ್ಷಾಂತರ ಸಂಖ್ಯೆಯಲ್ಲಿದ್ದ ಅಮೆರಿಕಾದ ಕಾಡೆಮ್ಮೆಗಳ ಪ್ರಮಾಣ ಕ್ಷಿಣಿಸುತ್ತಿದೆ.

Saturday, 12 February 2022

•► 2022ನೇ ಸಾಲಿನ IAS, IPS ಹುದ್ದೆಗಳ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಆಹ್ವಾನ : (UPSC Civil Services Exam 2022, CSE Notification)

 •► 2022ನೇ ಸಾಲಿನ IAS, IPS ಹುದ್ದೆಗಳ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಆಹ್ವಾನ :
(UPSC Civil Services Exam 2022, CSE Notification)

━━━━━━━━━━━━━━━━━━━━━━━━━━━━━━

ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್​ಸಿ) 2022ನೇ ಸಾಲಿನ ಐಎಎಸ್, ಐಪಿಎಸ್‌ ಸೇರಿದಂತೆ ಇನ್ನಿತರ ಹುದ್ದೆಗಳ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಯುಪಿಎಸ್​ಸಿ ಅಧಿಕೃತ ವೆಬ್​ಸೈಟ್‌ಗೆ ಲಾಗಿನ್‌ ಆಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರುವರಿ 22 ಕೊನೆಯ ದಿನವಾಗಿದೆ. ಪೂರ್ವಭಾವಿ ಪರೀಕ್ಷೆ ಜೂನ್ ಹಾಗೂ ಮುಖ್ಯ ಪರೀಕ್ಷೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ.

ಹುದ್ದೆಗಳ ಸಂಖ್ಯೆ

ಐಎಎಸ್:  861 ( ಸಂಭಾವ್ಯ)

ವಿದ್ಯಾರ್ಹತೆ: ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪಡೆದಿರಬೇಕು. ಪದವಿ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.

ವಯಸ್ಸು

*ಕನಿಷ್ಠ 21 ವರ್ಷಗಳಾಗಿರಬೇಕು.

ವಯೋಮಿತಿ ಸಡಿಲಿಕೆ

* ಸಾಮಾನ್ಯ ವರ್ಗದ ಅಭ್ಯರ್ಥಿಗಳು– ಗರಿಷ್ಠ 32 ವರ್ಷ

* ಹಿಂದುಳಿದ ವರ್ಗದ ಅಭ್ಯರ್ಥಿಗಳು– ಗರಿಷ್ಠ 35 ವರ್ಷ

* ಪ.ಜಾತಿ, ಪ.ಪಂಗಡ, ಪ್ರವರ್ಗ-1 ಅಭ್ಯರ್ಥಿಗಳು– 37 ವರ್ಷ

* ಅಂಗವಿಕಲ ಅಭ್ಯರ್ಥಿಗಳಿಗೆ –42 ವರ್ಷಗಳು

ಅರ್ಜಿ ಶುಲ್ಕ

ಸಾಮಾನ್ಯ ವರ್ಗದ ಅಭ್ಯರ್ಥಿಗಳು ₹ 100 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ನೇಮಕಾತಿ: ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆಯ ಲಿಂಕ್‌ ಅನ್ನು ಕ್ಲಿಕ್ಕಿಸಿ ಮಾಹಿತಿ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ

* ಲೋಕಸೇವಾ ಆಯೋಗದ ವೆಬ್‌ಸೈಟ್‌ https://upsc.gov.in ಗೆ ಲಾಗಿನ್‌ ಆಗಿ ಅನ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಬೇಕು.

* ಆನ್‌ಲೈನ್‌ ಅರ್ಜಿಯನ್ನು ಎರಡು ಹಂತಗಳಲ್ಲಿ ಭರ್ತಿ ಮಾಡಬೇಕು.

ಮುಖ್ಯ ಮಾಹಿತಿ

* ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 22-02-2022

* ಅಧಿಸೂಚನೆ ಲಿಂಕ್‌: https://www.upsc.gov.in/sites/default/files/Notif-CSP-22-engl-020222F.pdf

* ಯುಪಿಎಸ್‌ಸಿ ವೆಬ್‌ಸೈಟ್‌: https://upsc.gov.in


(Courtesy : ಪ್ರಜಾವಾಣಿ)

•► ಕನ್ನಡ ಭಾಷೆಯ ಸತ್ವವನ್ನು, ಕಾವ್ಯಶಕ್ತಿಯನ್ನು ಬಗೆಬಗೆಯಾಗಿ ಸಮೃದ್ಧಗೊಳಿಸುವಲ್ಲಿ ಪ್ರಾಕೃತ ಭಾಷೆಯ ಪಾತ್ರ. (Role of Prakrit language in enriching the essence of Kannada language and poetry) or •► ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪುನರುತ್ಥಾನ ಪ್ರಕ್ರಿಯೆಯಲ್ಲಿ ಸಂಸ್ಕೃತದಷ್ಟೇ ಮಹತ್ವದ ಪಾತ್ರ ವಹಿಸಿದ್ದು ಪ್ರಾಕೃತ - ಸಮರ್ಥಿಸಿ. (significant role of the Prakrit in the process of resurrecting Kannada language, literature and culture-assert) or •► ಪ್ರಾಕೃತ ಮತ್ತು ಕನ್ನಡ ಸಾಹಿತ್ಯ . (Prakrit and Kannada Literature)

•► ಕನ್ನಡ ಭಾಷೆಯ ಸತ್ವವನ್ನು, ಕಾವ್ಯಶಕ್ತಿಯನ್ನು ಬಗೆಬಗೆಯಾಗಿ ಸಮೃದ್ಧಗೊಳಿಸುವಲ್ಲಿ ಪ್ರಾಕೃತ ಭಾಷೆಯ ಪಾತ್ರ.
(Role of Prakrit language in enriching the essence of  Kannada language and poetry)
or
•► ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪುನರುತ್ಥಾನ ಪ್ರಕ್ರಿಯೆಯಲ್ಲಿ ಸಂಸ್ಕೃತದಷ್ಟೇ ಮಹತ್ವದ ಪಾತ್ರ ವಹಿಸಿದ್ದು ಪ್ರಾಕೃತ - ಸಮರ್ಥಿಸಿ.
(significant role of the Prakrit in the process of resurrecting Kannada language, literature and culture-assert)
or
•► ಪ್ರಾಕೃತ ಮತ್ತು ಕನ್ನಡ ಸಾಹಿತ್ಯ .
(Prakrit and Kannada Literature)

━━━━━━━━━━━━━━━━━━━━━━━━━━━━━━━━━
(ಸಾಮಾನ್ಯ ಕನ್ನಡ)
(ಕನ್ನಡ ಸಾಹಿತ್ಯ ಚರಿತ್ರೆ)



ಪ್ರಾಕೃತವೆಂಬುದು ಹಲವು ಜನಭಾಷೆಗಳನ್ನೊಳಗೊಂಡಿರುವ ಸಮಷ್ಟಿಶಬ್ದ.

ಅಪಭ್ರಂಶ, ಅರ್ಧಮಾಗಧಿ, ಪಾಳಿ, ಪೈಶಾಚಿ, ಮಹಾರಾಷ್ಟ್ರೀ, ಶೌರಸೇನೀ ಮೊದಲಾದ ಜನಭಾಷೆಗಳ ಗುಂಪಿಗೆ ಪ್ರಾಕೃತವೆಂದು ಕರೆಯುತ್ತಾರೆ.

ಬಲ್ಲಿದರ ಭಾಷೆ ಸಂಸ್ಕೃತ. ಜನಸಾಮಾನ್ಯರ ಭಾಷೆ ಪ್ರಾಕೃತ. ಬುದ್ಧ ಮತ್ತು ಮಹಾವೀರರು ತಮ್ಮ ವಿಚಾರಗಳು ಜನಸಾಮಾನ್ಯರಿಗೆ ತಿಳಿಯಬೇಕೆಂಬ ಕಕ್ಕುಲಾತಿಯಿಂದ ಜನರಾಡುವ ಪಾಳಿ–ಪ್ರಾಕೃತ ಭಾಷೆಗಳಲ್ಲಿ ಬೋಧಿಸಿದರು. ಆದ್ದರಿಂದ ಪ್ರಾಕೃತ ಭಾಷೆಗಳು ಸರ್ವಮಾನ್ಯವಾದವು. ಮಹಾಕವಿಗಳು ಪುರಸ್ಕರಿಸಿದರು. ಕತೆ, ಕಾವ್ಯಗಳೂ ಪ್ರಬುದ್ಧ ಶಾಸ್ತ್ರ ಕೃತಿಗಳೂ ವರಸೆಯಾಗಿ ರಚಿತವಾದವು.

ಒನಕೆ ನಾಡು, ಓವನಿಗೆ, ಚತ್ತಾಣ, ಪಗರಣ, ಬೆದಂಡೆಯೆಂಬ ದೇಸಿ ಸಾಹಿತ್ಯ ಪ್ರಕಾರಗಳಿಂದ ಸ್ವತಂತ್ರ ಜನಭಾಷೆಯಾಗಿದ್ದ ಕನ್ನಡ, ಸರ್ವಾಂಗೀಣ ಪುಷ್ಟಿಯಿಂದ ತನ್ನ ಅಭಿವ್ಯಕ್ತಿ ಸಾಧ್ಯತೆಯನ್ನು ವಿಸ್ತರಿಸಲು ಹವಣಿಸಿತ್ತು. ಅದಕ್ಕೆ ನಾನಾ ಜ್ಞಾನಶಾಖೆಗಳ ಸಾರವನ್ನು ಲೀಲಾಜಾಲವಾಗಿ ಸಮರ್ಥವಾಗಿ ಸಂವಹನಿಸಲು ಹೊಸ ಮಾದರಿಗಳು ಬೇಕಿದ್ದವು. ಸಂಸ್ಕೃತ–ಪ್ರಾಕೃತಗಳು ಆ ಅಗತ್ಯವನ್ನು ಪೂರೈಸಿದವು.

ಸಂಸ್ಕೃತ ಮತ್ತು ಪ್ರಾಕೃತ ಭಾಷಾ ಸಾಹಿತ್ಯವನ್ನು ಮಹಾಕವಿಗಳು, ನಾಟಕಕಾರರು ಸಮಾನವಾಗಿ ಗೌರವಿಸಿ ಬಳಸಿದರು. ಸಂಸ್ಕೃತ ನಾಟಕಗಳಲ್ಲಿ ಸಂಸ್ಕೃತಕ್ಕಿಂತ ಪ್ರಾಕೃತವೇ ಪ್ರಧಾನವಾಗಿತ್ತು. ರಾಜನನ್ನು ಬಿಟ್ಟರೆ ಉಳಿದೆಲ್ಲ ಪಾತ್ರಗಳು, ರಾಣಿಯರು ಸಹ ಪ್ರಾಕೃತದಲ್ಲಿ ಮಾತನಾಡಬೇಕಿತ್ತು. ಭಾಸ, ಕಾಳಿದಾಸರ ಎಲ್ಲ ನಾಟಕಗಳಲ್ಲಿ ಪ್ರಾಕೃತದ್ದೇ ದರಬಾರು.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಪ್ರಾಕೃತ ವಹಿಸಿದ ಪಾತ್ರ ದೊಡ್ಡದು. ಕನ್ನಡದಲ್ಲಿ ಗ್ರಂಥ ರಚನೆ ಆರಂಭವಾದದ್ದೇ ಪ್ರಾಕೃತ ಕೃತಿಗಳಿಗೆ ಬರೆದ ವ್ಯಾಖ್ಯಾನಗಳ ಮೂಲಕ. ಆನಂತರ ಶಾಸ್ತ್ರಗ್ರಂಥಗಳ ಅನುವಾದಕ್ಕೆ ತೊಡಗಿದರು. ತರುವಾಯ ಪ್ರಾಕೃತ ಕತೆ, ಕಾವ್ಯಗಳ ಸ್ಫೂರ್ತಿಯಿಂದ ಅಲ್ಲಿನ ಮಾದರಿಗಳಿಗೆ ಮುಗಿಬಿದ್ದರು. ಕನ್ನಡದ ಮುಂಗೋಳಿ ಎನಿಸಿದ ವಡ್ಡಾರಾಧನೆ ಪ್ರಾಕೃತದ ಕೊಡುಗೆ. ಅಲ್ಲಿಂದ ಪ್ರಾಕೃತದ ಪ್ರಭಾವ ಪ್ರವಾಹವಾಯಿತು. ಕನ್ನಡ ಕಾವ್ಯ ಪ್ರಪಂಚದ ತುಂಬಾ ಪ್ರಾಕೃತದ ಹೆಜ್ಜೆಗಳೂಡಿದವು. ಕನ್ನಡಕ್ಕೆ ಮೊಲೆಯೂಡಿ ಕಸುವು ಹೆಚ್ಚಿಸಿದುದನ್ನು ಅರಿಯಲು ಸಾಹಿತ್ಯ ಪ್ರಕಾರಗಳ ಪಕ್ಷಿನೋಟ ಸಾಕು.

ಹಳಗನ್ನಡದಲ್ಲಿ ತೂಗಿ ತೊನೆಯುವ ಕಾವ್ಯ ಪ್ರಕಾರ ‘ಚಂಪೂ’. ಇದು ಕನ್ನಡಕ್ಕೆ ಪ್ರಾಕೃತ ನೀಡಿದ ಮೊದಲ ವರ.

ಸಂಘದಾಸಗಣಿ ವಾಚಕನ ವಸುದೇವ ಹಿಂಡಿ, ಉದ್ಯೋತನ ಸೂರಿಯ ಕುವಲಯಮಾಲ ಕಾವ್ಯಗಳ ದಟ್ಟ ಪ್ರಭಾವದಿಂದ ಚಂಪೂ ರೂಪ ಕನ್ನಡದಲ್ಲಿ ಪಲ್ಲವಿಸಿತು. ಶತಮಾನದಿಂದ ಶತಮಾನಕ್ಕೆ ದಾಂಗುಡಿಯಿಡುತ್ತಾ ಚಂಪೂ ರೂಪ ಮಹಾರಾಜನಾಗಿ ವಿಜೃಂಭಿಸಿತು. ಪಂಪ, ಪೊನ್ನ, ರನ್ನ, ಜನ್ನ, ರುದ್ರಭಟ್ಟ, ಹರಿಹರ ಕವಿಗಳಿಂದ ಚಂಪೂ ಶಿಖರಾರೋಹಣ ಮಾಡಿತು. ಕಂದಪದ್ಯಗಳಿಲ್ಲದ ಚಂಪೂ ಕಾವ್ಯಗಳಿಲ್ಲ. ‘ಕಂದ’ ಛಂದಸ್ಸು ಪ್ರಾಕೃತವು ಕನ್ನಡಕ್ಕೆ ಕೊಟ್ಟಿರುವ ಎರಡನೆಯ ಬಳುವಳಿ.


‘ಪ್ರಾಸ’ ಕನ್ನಡ ಪದ್ಯಗಳ ಜೀವಾಳ. ಪ್ರಾಸಗಳಲ್ಲಿ ಆದಿಪ್ರಾಸ ಪ್ರಾಣಾನಿಲ. ಅಂತ್ಯಪ್ರಾಸವೂ ಸಾಕಷ್ಟಿದೆ. ಕೆಲವೊಮ್ಮೆ ಆದ್ಯಂತಪ್ರಾಸ ಬಳಕೆಯಾಗಿದೆ. ರಗಳೆ ಕಾವ್ಯಗಳಲ್ಲಿ ಇದು ಕಂಡುಬಂದಿದೆ. ಈ ಆದಿಪ್ರಾಸ, ಅಂತ್ಯಪ್ರಾಸ ಮತ್ತು ಆದ್ಯಂತ ಪ್ರಾಸಗಳು ಪ್ರಾಕೃತದ ಮೂರನೆಯ ದೇಣಿಗೆ.

ಹರಿಹರ ಕವಿ ‘ರಗಳೆ’ ಛಂದಸ್ಸಿನ ಕಾವ್ಯಗಳ ಬಾದಷಹ. ಉತ್ಸಾಹ ರಗಳೆ, ಮಂದಾನಿಲ ರಗಳೆ, ಲಲಿತ ರಗಳೆ ಜನಪ್ರಿಯ ಪ್ರಕಾರಗಳು. ಈ ಮೂರೂ ಪ್ರಕಾರಗಳ ರಗಳೆ ಛಂದಸ್ಸನ್ನು ಕನ್ನಡಕ್ಕೆ ಧಾರೆ ಎರೆದದ್ದು ಪ್ರಾಕೃತ. ಇದು ನಾಲ್ಕನೆಯ ಉಪಕಾರ.

ನಡುಗನ್ನಡ ಸಾಹಿತ್ಯದಲ್ಲಿ ‘ಸಾಂಗತ್ಯ’ ಕಾವ್ಯಗಳದ್ದೇ ದರಬಾರು. ರತ್ನಾಕರ ವರ್ಣಿ ಹತ್ತು ಸಾವಿರ ಪದ್ಯಗಳ ‘ಭರತೇಶ ವೈಭವ’ ಮಹಾಕಾವ್ಯ ಬರೆದದ್ದು ಸಾಂಗತ್ಯ ಛಂದಸ್ಸಿನಲ್ಲಿ. ಕನ್ನಡಕ್ಕೆ ಈ ಸಾಂಗತ್ಯ ಮಟ್ಟು ಬಂದದ್ದು ಪ್ರಾಕೃತದಿಂದ. ಐದನೆಯ ಕೊಡುಗೆ ಇದು.

‘ಚರಿತೆ’ಯೆಂಬ ಕಾವ್ಯ ಪ್ರಕಾರ ಕನ್ನಡದಲ್ಲಿ ರೂಢಿಗೆ ಬಂದದ್ದು ಪ್ರಾಕೃತದಿಂದ. ಪರಶುರಾಮ ಚರಿತೆ, ಚಕ್ರೇಶ್ವರ ಚರಿತೆ ಮತ್ತು ಯಶೋಧರ ಚರಿತೆ ಕಾವ್ಯಗಳು ನೆನಪಾಗುತ್ತವೆ. ಚಿದಾನಂದ ಮಲ್ಲಿಕಾರ್ಜುನನ ಸೂಕ್ತಿ ಸುಧಾರ್ಣವ ಮೊದಲಾದ ಕಾವ್ಯ ಸಂಕಲನಗಳು ಪ್ರಾಕೃತದ ಗಾಥಾಸಪ್ತಶತಿಯಂಥ ಸಂಕಲನ ಮಾದರಿಯಿಂದ ರಚಿತವಾದವು.

ಇವೆಲ್ಲ ಬಳುವಳಿಗಿಂತ ಬಹುದೊಡ್ಡ ಕೊಡುಗೆ ಎಂದರೆ ಕನ್ನಡ ನುಡಿಭಂಡಾರವನ್ನು ಶ್ರೀಮಂತಗೊಳಿಸಿದ್ದು. ಸಂಸ್ಕೃತದಿಂದ ಬಂದಿದೆ ಎಂದು ಭಾವಿಸಿರುವ ಸಾವಿರಾರು ಶಬ್ದಗಳು ಮತ್ತು ತದ್ಭವ ರೂಪಗಳು ಪ್ರಾಕೃತದ ಮೂಲಕ ಬಂದಿವೆ. ಹೀಗೆ ಬಗೆಬಗೆಯಾಗಿ ಕನ್ನಡದ ಸತ್ವವನ್ನು, ಕಾವ್ಯಶಕ್ತಿಯನ್ನು ಸಮೃದ್ಧಗೊಳಿಸಿದ ಪ್ರಾಕೃತದ ಉಪಕಾರ ಸ್ಮರಣೆ ಕನ್ನಡಿಗರಾದ ನಮ್ಮದು ಆದ್ಯ ಕರ್ತವ್ಯ.
(Courtesy : ಪ್ರಜಾವಾಣಿ)

Sunday, 30 January 2022

•► ಬ್ಯಾಡ್‌ ಬ್ಯಾಂಕ್‌ ಎಂದರೇನು? ಅವುಗಳ ಕಾರ್ಯನಿರ್ವಹಣೆ ಹೇಗೆ? / ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಸಮಸ್ಯೆ ಬಗೆಹರಿಯಲಿದೆಯೇ? / ಭಾರತದ ಈಗಿನ ಆರ್ಥಿಕ ಸ್ಥಿತಿಗತಿಯಲ್ಲಿ ಬ್ಯಾಡ್‌ ಬ್ಯಾಂಕ್‌ನ ಅವಶ್ಯಕತೆ ಇದೆಯೇ? What is a bad bank? What is the structure of the bad bank? / How will the bad bank work? What does the Principal-Agent mechanism entail? / What kind of resolutions are expected? / Challenges And Benefits Of Having A Bad Bank

 •► ಬ್ಯಾಡ್‌ ಬ್ಯಾಂಕ್‌ ಎಂದರೇನು? ಅವುಗಳ ಕಾರ್ಯನಿರ್ವಹಣೆ ಹೇಗೆ? / ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಸಮಸ್ಯೆ ಬಗೆಹರಿಯಲಿದೆಯೇ? / ಭಾರತದ ಈಗಿನ ಆರ್ಥಿಕ ಸ್ಥಿತಿಗತಿಯಲ್ಲಿ ಬ್ಯಾಡ್‌ ಬ್ಯಾಂಕ್‌ನ ಅವಶ್ಯಕತೆ ಇದೆಯೇ?
What is a bad bank? What is the structure of the bad bank? / How will the bad bank work? What does the Principal-Agent mechanism entail? / What kind of resolutions are expected? / Challenges And Benefits Of Having A Bad Bank

━━━━━━━━━━━━━━━━━━━━━━━━━━━━━━━━━━━━━━━━━━━━━━━━
 

— ಕಳೆದ ಕೇಂದ್ರ ಬಜೆಟ್‌ (2021-22) ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಬ್ಯಾಡ್ ಬ್ಯಾಂಕ್ ರಚಿಸುವುದಾಗಿ ಘೋಷಿಸಿದ್ದರು. ಎಲ್ಲಾ ಬ್ಯಾಂಕ್‌ಗಳ ಬ್ಯಾಲೆನ್ಸ್ ಶೀಟ್ ಅನ್ನು ಸ್ವಚ್ಛಗೊಳಿಸಲು ಬ್ಯಾಡ್ ಬ್ಯಾಂಕ್ ಅವುಗಳಲ್ಲಿರುವ ಬ್ಯಾಡ್ ಅಕೌಂಟ್ (Bad Bank Assets) ಗಳನ್ನು ತನ್ನೊಂದಿಗೆ  ತೆಗೆದುಕೊಳ್ಳಲಿದೆ. ಆರಂಭಿಕ ಹಂತದಲ್ಲಿ 50,000 ಕೋಟಿ ಮೌಲ್ಯದ ಸುಮಾರು 15 ಪ್ರಕರಣಗಳನ್ನು ಉದ್ದೇಶಿತ ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಲಾಗುವುದು ಎಂದು ಎಸ್‌ಬಿಐ ಅಧ್ಯಕ್ಷರು ತಿಳಿಸಿದ್ದಾರೆ. ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ಕೆಟ್ಟ ಆಸ್ತಿಯನ್ನು ಬ್ಯಾಡ್ ಬ್ಯಾಂಕ್‌ನಲ್ಲಿ ವರ್ಗಾಯಿಸಲಾಗುವ ನಿರೀಕ್ಷೆ ಇದೆ
 
ಎಸ್‌ಬಿಐ ಅಧ್ಯಕ್ಷರ ಪ್ರಕಾರ, ಪ್ರಸ್ತುತ 83,000 ಕೋಟಿ ಮೌಲ್ಯದ 38 ಖಾತೆಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತಿದೆ. NARCA ಗುರುತಿಸಲಾದ NPA ಖಾತೆಗಳನ್ನು ಬ್ಯಾಂಕ್‌ಗಳಿಂದ ತೆಗೆದುಕೊಳ್ಳುತ್ತದೆ ಮತ್ತು IDRCL ಸಾಲಗಳ ನಿರ್ಣಯದ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದೆ.


•► ಬ್ಯಾಡ್‌ ಬ್ಯಾಂಕ್‌ ಎಂದರೇನು?
━━━━━━━━━━━━━━━━
ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ವಸೂಲಾಗದ ಸಾಲಗಳ (ಎನ್‌ಪಿಎ) ನಿರ್ವಹಣೆ ಮಾಡಲೆಂದೇ ಸ್ಥಾಪಿಸುವ ಪ್ರತ್ಯೇಕ ಬ್ಯಾಂಕ್‌ ಅನ್ನುಬ್ಯಾಡ್‌ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಎನ್‌ಪಿಎಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ಹೀಗೆ ಮಾಡಿದಾಗ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಸಾಲ ನೀಡಲು ಬ್ಯಾಂಕ್‌ಗಳ ಬಳಿ ಹಣ ಉಳಿಯುತ್ತದೆ. ಬ್ಯಾಂಕ್‌ಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸರಾಗವಾಗಿ ನಡೆಸಲು ಸಾಧ್ಯವಾಗುತ್ತದೆ.

ಬ್ಯಾಡ್‌ ಬ್ಯಾಂಕ್‌ಗಳ ಪರಿಕಲ್ಪನೆ ಹೊಸತೇನೂ ಅಲ್ಲ. ಬ್ಯಾಂಕ್‌ಗಳು ದಿವಾಳಿಯಾಗುವ ಸ್ಥಿತಿ ಬಂದಾಗ ಮತ್ತು ಎನ್‌ಪಿಎ ಪ್ರಮಾಣ ಹೆಚ್ಚಾದಾಗ ವಿಶ್ವದ ವಿವಿಧ ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಆರ್ಥಿಕತೆ ಕುಸಿತದ ಹಾದಿಯಲ್ಲಿ ಇದ್ದಾಗ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಈಗ ಭಾರತವೂ ಈ ಹಾದಿ ಹಿಡಿದಿದೆ.

l ಬ್ಯಾಂಕ್‌ಗಳು ತಮ್ಮ ಎನ್‌ಪಿಎಗಳನ್ನು ನಿರ್ವಹಿಸಲು ತಮ್ಮಲ್ಲೇ ಒಂದು ಉಪ ಘಟಕವನ್ನು ಸ್ಥಾಪಿಸಿದರೂ ಅದು ಬ್ಯಾಡ್‌ ಬ್ಯಾಂಕ್‌ ಎನಿಸಿಕೊಳ್ಳುತ್ತದೆ. ಇಂತಹ ವ್ಯವಸ್ಥೆಯಲ್ಲಿ ಎನ್‌ಪಿಎ ಮತ್ತು ಸಂಭಾವ್ಯ ಎನ್‌ಪಿಎಯನ್ನು ಬ್ಯಾಡ್‌ ಬ್ಯಾಂಕ್ ಘಟಕಕ್ಕೆ ವರ್ಗಾಯಿಸಲಾಗುತ್ತದೆ

l ಬ್ಯಾಂಕ್‌ಗಳು ತಮ್ಮ ಎನ್‌ಪಿಎಗಳನ್ನು ನಿರ್ವಹಿಸಲು ಪ್ರತ್ಯೇಕ ಬ್ಯಾಂಕ್ ಅನ್ನೇ ಸ್ಥಾಪಿಸಬಹುದು. ಇದೂ ಬ್ಯಾಡ್‌ ಬ್ಯಾಂಕ್ ಎನಿಸಿಕೊಳ್ಳುತ್ತದೆ. ಇಂತಹ ವ್ಯವಸ್ಥೆಯಲ್ಲಿಯೂ ಪ್ರತ್ಯೇಕ ಬ್ಯಾಂಕ್‌ಗೆ ಎನ್‌ಪಿಎ ಮತ್ತು ಸಂಭಾವ್ಯ ಎನ್‌ಪಿಎಗಳನ್ನು ವರ್ಗಾಯಿಸಲಾಗುತ್ತದೆ. ಇದು ಒಂದು ಬ್ಯಾಂಕ್‌ಗೆ ಮಾತ್ರ ಸಂಬಂಧಪಟ್ಟಿರಬಹುದು ಅಥವಾ ಹಲವು ಬ್ಯಾಂಕ್‌ಗಳು ಸೇರಿ ಒಂದು ಬ್ಯಾಡ್‌ ಬ್ಯಾಂಕ್ ಸ್ಥಾಪಿಸಬಹುದು

l ದೇಶದ ಎಲ್ಲಾ ಬ್ಯಾಂಕ್‌ಗಳ ಎನ್‌ಪಿಎಗಳನ್ನು ನಿರ್ವಹಣೆ ಮಾಡಲು ಸರ್ಕಾರವೇ ಒಂದು ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಬಹುದು. ಎನ್‌ಪಿಎ ಮತ್ತು ಸಂಭಾವ್ಯ ಎನ್‌ಪಿಎಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗೆ ವರ್ಗಾಯಿಸಲಾಗುತ್ತದೆ. ಸರ್ಕಾರ ಬೆಂಬಲಿತ ಬ್ಯಾಡ್‌ ಬ್ಯಾಂಕ್‌ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವಿದೆ. ಹೀಗಾಗಿ ಇಂತಹ ವ್ಯವಸ್ಥೆ ಹೆಚ್ಚು ಚಾಲ್ತಿಯಲ್ಲಿ ಇದೆ. ಭಾರತದಲ್ಲೂ ಈಗ ಇಂತಹದ್ದೇ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ

•► ಕಾರ್ಯನಿರ್ವಹಣೆ ಹೇಗೆ?
━━━━━━━━━━━━━━━━
ಸರ್ಕಾರ ಬೆಂಬಲಿತ ಬ್ಯಾಡ್‌ ಬ್ಯಾಂಕ್‌ಗಳ ಸ್ಥಾಪನೆ ವೇಳೆ ಸರ್ಕಾರವೇ ಸ್ವಲ್ಪ ಬಂಡವಾಳ ಹೂಡುತ್ತದೆ. ಈ ಬ್ಯಾಂಕ್‌ಗಳು ಮಾರುಕಟ್ಟೆಯಿಂದಲೂ ಬಂಡವಾಳವನ್ನು ಸಂಗ್ರಹಿಸಲು ಅವಕಾಶವಿರುತ್ತದೆ. ಬಂಡವಾಳ ಕ್ರೋಡೀಕರಣದ ನಂತರ, ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಎನ್‌ಪಿಎಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ವರ್ಗಾವಣೆ ಎಂದರೆ, ಎನ್‌ಪಿಎಗಳನ್ನು ಬ್ಯಾಡ್‌ ಬ್ಯಾಂಕ್ ಖರೀದಿಸುತ್ತದೆ. ಈ ಖರೀದಿ ಬೆಲೆಯು ವಸೂಲಾಗಲು ಬಾಕಿ ಇರುವ ಮೊತ್ತಕ್ಕಿಂತ ಕಡಿಮೆ ಇರುತ್ತದೆ.

ಎನ್‌ಪಿಎಗಳನ್ನು ವಸೂಲಿ ಮಾಡುವ ಮತ್ತು ಅದರಿಂದ ಲಾಭಗಳಿಸುವ ಉದ್ದೇಶದಿಂದ ಅವುಗಳನ್ನು ಬ್ಯಾಡ್‌ ಬ್ಯಾಂಕ್‌ಗಳು ಖರೀದಿಸಿರುತ್ತವೆ. ಇದಕ್ಕಾಗಿ ಸರ್ಕಾರ ಹೂಡಿರುವ ಬಂಡವಾಳ ಮತ್ತು ಮಾರುಕಟ್ಟೆಯಿಂದ ಸಂಗ್ರಹಿಸಿದ ಬಂಡವಾಳವನ್ನು ಬಳಸಲಾಗುತ್ತದೆ. ಹೀಗೆ ಖರೀದಿಸಿದ ಎನ್‌ಪಿಎಗಳನ್ನು ವಸೂಲಿ ಮಾಡಲು ಬ್ಯಾಡ್‌ ಬ್ಯಾಂಕ್‌ಗಳು ಕ್ರಮ ತೆಗೆದುಕೊಳ್ಳುತ್ತವೆ. ಎನ್‌ಪಿಎ ವಸೂಲಿಯೇ ಬ್ಯಾಡ್‌ ಬ್ಯಾಂಕ್‌ಗಳ ಪ್ರಾಥಮಿಕ ಮತ್ತು ಏಕೈಕ ಕರ್ತವ್ಯವಾಗಿರುವ ಕಾರಣ, ಎನ್‌ಪಿಎಗಳ ವಸೂಲಿ ಪ್ರಮಾಣ ಹೆಚ್ಚು ಇರುತ್ತದೆ.

•► ಎಲ್ಲೆಲ್ಲಿ ಇದೆ, ಸ್ಥಿತಿಗತಿ ಏನು?
━━━━━━━━━━━━━━━━
ಸುಸ್ತಿ ಸಾಲ ವಸೂಲು ಮಾಡುವ ಉದ್ದೇಶದಿಮದ ಮೂರು ತಿಂಗಳ ಹಿಂದೆ ಕೇಂದ್ರ ಸರ್ಕಾರ ಇಂಡಿಯಾ ಡೆಟ್‌ ರೆಸೆಲ್ಯೂಷನ್‌ ಕಂಪನಿ (IDRCL), ಹಾಗೂ ನ್ಯಾಷನಲ್‌ ಅಸೆಟ್‌ ರೆಸ್ಯೆಲ್ಯೂಷನ್‌ ಕಂಪನಿ (NARCL)ಯನ್ನು ಸ್ಥಾಪನೆ ಮಾಡಲಾಗಿತ್ತು. ಸದ್ಯ ಇವೆರಡೂ ಕಂಪನಿಗಳು ಸುಸ್ತಿ ಸಾಲ ವಸೂಲಿಯಲ್ಲಿ ತೊಡಗಿಕೊಂಡಿವೆ. ಈಗ ಸ್ಥಾಪನೆ ಮಾಡಲಾಗುತ್ತಿರುವ ಬ್ಯಾಡ್‌ ಬ್ಯಾಂಕ್‌ ಅನ್ನು ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ ನಿಯಂತ್ರಿಸಲಿದೆ.

ಸದ್ಯ ವಿಶ್ವದಲ್ಲಿ ಎಲ್ಲಿಯೂ ಸರ್ಕಾರದ ಬೆಂಬಲದ ಬ್ಯಾಡ್‌ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿ, ಆರ್ಥಿಕ ಬಿಕ್ಕಟ್ಟು ಪರಿಹಾರವಾದ ನಂತರ ಅವುಗಳನ್ನು ಮುಚ್ಚಿವೆ.

1980ರಲ್ಲಿ ಅಮೆರಿಕದ ಮೆಲ್ಲನ್ ಬ್ಯಾಂಕ್‌ ದಿವಾಳಿ ಹಂತ ತಲುಪಿದಾಗ ಬ್ಯಾಡ್‌ ಬ್ಯಾಂಕ್‌ ಅನ್ನು ಸ್ಥಾಪಿಸುವ ಪ್ರಸ್ತಾವವನ್ನು ಇಡಲಾಗಿತ್ತು. ಈ ಪ್ರಸ್ತಾವ ಕಾರ್ಯರೂಪಕ್ಕೆ ಬಂದಿದ್ದು, 1988ರಲ್ಲಿ. ಈ ಬ್ಯಾಡ್‌ ಬ್ಯಾಂಕ್‌ನ ಸ್ಥಾಪನೆಯ ಉದ್ದೇಶ ಈಡೇರಿದ ನಂತರ 1995ರಲ್ಲಿ ಅದನ್ನು ರದ್ದುಪಡಿಸಲಾಯಿತು. ಭಾರತದಲ್ಲಿ 2004ರಲ್ಲಿ ಐಡಿಬಿಐ ಅನ್ನು ಎನ್‌ಪಿಎ ಇಂದ ರಕ್ಷಿಸಲು ಮತ್ತು ಬ್ಯಾಂಕ್‌ ಆಗಿ ಪರಿವರ್ತಿಸಲು ‘ಸ್ಟ್ರೆಸ್ಡ್‌ ಅಸೆಟ್ಸ್ ಸ್ಟೆಬಿಲೈಸೇಷನ್‌ ಫಂಡ್‌’ ಅನ್ನು ಸ್ಥಾಪಿಸಲಾಗಿತ್ತು. ಈ ನಿಧಿಯ ಸ್ಥಾಪನೆಯಿಂದ ಐಡಿಬಿಐಗೆ ₹ 9,000 ಕೋಟಿ ಲಭ್ಯವಾಗಿತ್ತು.

2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಕೆಲವು ಬ್ಯಾಂಕ್‌ಗಳು ತಮ್ಮದೇ ಪ್ರತ್ಯೇಕ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡಿದ್ದವು. ಕೆಲವು ದೇಶಗಳಲ್ಲಿ ಸರ್ಕಾರಗಳೇ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬ್ಯಾಂಕ್‌ ಆಫ್ ಅಮೆರಿಕ, ಸಿಟಿಗ್ರೂಪ್ ಬ್ಯಾಂಕ್‌, ಸ್ವೀಡ್‌ಬ್ಯಾಂಕ್‌ಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬೆಲ್ಜಿಯಂ, ಐರ್ಲೆಂಡ್‌, ಇಂಡೊನೇಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಆರ್ಥಿಕತೆ ಪ್ರಗತಿಯತ್ತ ಹೊರಳಿದ ನಂತರ ಈ ಬ್ಯಾಡ್‌ ಬ್ಯಾಂಕ್‌ಗಳನ್ನು ಮುಚ್ಚಲಾಯಿತು.

•► ಸಮಸ್ಯೆ ಬಗೆಹರಿಯಲಿದೆಯೇ?
━━━━━━━━━━━━━━━━
ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಬ್ಯಾಂಕ್‌ಗಳ ಎನ್‌ಪಿಎ ಹೊರೆ ಸಂಪೂರ್ಣವಾಗಿ ಇಳಿಕೆಯಾಗುವುದಿಲ್ಲ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಎಲ್ಲಾ ಎನ್‌ಪಿಎಗಳನ್ನು ಬ್ಯಾಡ್‌ ಬ್ಯಾಂಕ್ ಖರೀದಿಸುವುದಿಲ್ಲ. ವಿಶ್ವದಲ್ಲಿ ಈವರೆಗೆ ಕಾರ್ಯನಿರ್ವಹಿಸಿದ ಬ್ಯಾಡ್‌ ಬ್ಯಾಂಕ್‌ಗಳು ವಸೂಲಾಗುವ ಸಾಧ್ಯತೆ ಅತ್ಯಧಿಕವಾಗಿರುವ ಎನ್‌ಪಿಎಗಳನ್ನು ಮಾತ್ರ ಖರೀದಿಸಿವೆ. ಹೀಗಾಗಿ ವಸೂಲಾಗುವ ಸಾಧ್ಯತೆ ಇಲ್ಲದ ಎನ್‌ಪಿಎಗಳು ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ಬಳಿಯೇ ಉಳಿಯಲಿವೆ. ಆದರೆ, ಎನ್‌ಪಿಎಯ ಹೊರೆ ಇಳಿಯುತ್ತದೆ. ಎನ್‌ಪಿಎಗಳನ್ನು ವಸೂಲಿ ಮಾಡುವ ಹೊಣೆ ಕಡಿಮೆಯಾಗುತ್ತದೆ.

•► ಭಾರತಕ್ಕೆ ಅಗತ್ಯವಿದೆಯೇ?
━━━━━━━━━━━━━━━━
ಭಾರತದ ಈಗಿನ ಆರ್ಥಿಕ ಸ್ಥಿತಿಗತಿಯಲ್ಲಿ ಬ್ಯಾಡ್‌ ಬ್ಯಾಂಕ್‌ನ ಅವಶ್ಯಕತೆ ಇದೆ ಎಂದು ಭಾರತದ ಬ್ಯಾಂಕ್‌ಗಳು, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಸಲ್ಲಿಸಿರುವ ಮನವಿಯಲ್ಲಿ ವಿವರಿಸಿವೆ. ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಬ್ಯಾಂಕ್‌ಗಳ ಎನ್‌ಪಿಎ ಹೊರೆ ಕಡಿಮೆಯಾಗುತ್ತದೆ. ಬ್ಯಾಲೆನ್ಸ್ ಶೀಟ್‌ನಲ್ಲಿ ಸಮತೋಲನ ಇರುತ್ತದೆ. ಇದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಉತ್ತಮವಾಗುತ್ತದೆ. ಸಾಲ ನೀಡಿಕೆಯಿಂದ ಆರ್ಥಿಕತೆಗೆ ಚಾಲನೆ ದೊರೆಯುತ್ತದೆ ಎಂದು ಬ್ಯಾಂಕ್‌ಗಳು ಪ್ರತಿಪಾದಿಸಿವೆ.

ದೇಶದಲ್ಲಿ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಲಿದೆ. ಆರಂಭಿಕ ಹಂತದಲ್ಲಿ ಸರ್ಕಾರವು ₹ 10,000 ಕೋಟಿಯಿಂದ ₹15,000 ಕೋಟಿ ಅನುದಾನವನ್ನು ಬ್ಯಾಡ್‌ ಬ್ಯಾಂಕ್‌ಗೆ ನೀಡುವ ಸಾಧ್ಯತೆ ಇದೆ. ಇದು ತೆರಿಗೆದಾರರ ಹಣ. ಅಲ್ಲದೆ ಅಗತ್ಯವಿರುವ ಮತ್ತಷ್ಟು ಬಂಡವಾಳವನ್ನು ಬ್ಯಾಡ್‌ ಬ್ಯಾಂಕ್, ಮಾರುಕಟ್ಟೆಯಿಂದ ಸಂಗ್ರಹಿಸಲಿದೆ. ಈ ಬಂಡವಾಳದಿಂದಲೂ ಎನ್‌ಪಿಎಗಳನ್ನು ಖರೀದಿಸಲಾಗುತ್ತದೆ.

ಎನ್‌ಪಿಎಗಳು ವಸೂಲಿಯಾದರೆ ಸರ್ಕಾರ ಹೂಡಿರುವ ಬಂಡವಾಳ ಮತ್ತು ಹೂಡಿಕೆದಾರರ ಬಂಡವಾಳವು ವಾಪಸ್ ಆಗಲಿದೆ. ಎನ್‌ಪಿಎ ವಸೂಲಿ ಆಗದಿದ್ದರೆ, ತೆರಿಗೆದಾರರ ಹಣ ಮತ್ತು ಹೂಡಿಕೆದಾರರ ಹಣ ನಷ್ಟವಾಗಲಿದೆ. ಅಲ್ಲದೆ ಬ್ಯಾಡ್‌ ಬ್ಯಾಂಕ್‌, ಎನ್‌ಪಿಎಗಳ ಗೋದಾಮು ಆಗುವ ಅಪಾಯವೂ ಇದೆ.

•► ರಘುರಾಂ ರಾಜನ್‌ ವಿರೋಧ
━━━━━━━━━━━━━━━━
ರಘುರಾಂ ರಾಜನ್ ಅವರು ಆರ್‌ಬಿಐ ಗವರ್ನರ್‌ ಆಗಿದ್ದ ಕಾಲದಲ್ಲೇ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಸ್ವತಃ ರಾಜನ್‌ ಅವರು ಈ ಚಿಂತನೆಯನ್ನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ.

‘ಸಾಲವನ್ನು ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ವರ್ಗಾವಣೆ ಮಾಡುವುದರಿಂದ ಸಮಸ್ಯೆ ಹೇಗೆ ಬಗೆಹರಿಯುತ್ತದೆ? ಬ್ಯಾಡ್‌ ಬ್ಯಾಂಕ್‌ ಸಹ ಸಾರ್ವಜನಿಕ ಕ್ಷೇತ್ರದ ಬ್ಯಾಂಕೇ ಆಗಿದ್ದರೆ, ಎನ್‌ಪಿಎ ಅನ್ನು ಸ್ಥಳಾಂತರ ಮಾಡಿದ್ದಷ್ಟೇ ಸಾಧನೆಯಾಗಬಹುದು. ಅದರ ಬದಲು, ಬ್ಯಾಡ್‌ ಬ್ಯಾಂಕ್‌ಗೆ ನೀಡುವ ಬಂಡವಾಳವನ್ನು, ನೇರವಾಗಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೇ ಯಾಕೆ ಕೊಡಬಾರದು? ಒಂದು ವೇಳೆ ಬ್ಯಾಡ್‌ ಬ್ಯಾಂಕ್‌ ಖಾಸಗಿ ಕ್ಷೇತ್ರದ್ದಾಗಿದೆ ಎಂದರೆ, ಬರುವ ಹಣದಲ್ಲಿ ಸಾಕಷ್ಟು ಕಡಿತವಾಗುತ್ತದೆ ಎಂಬ ಕಾರಣಕ್ಕೆ ಸಾಲ ನೀಡಿರುವ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಎನ್‌ಪಿಎಯನ್ನು ಅದಕ್ಕೆ ಹಸ್ತಾಂತರಿಸಲು ಹಿಂಜರಿಯಬಹುದು. ಒಟ್ಟಿನಲ್ಲಿ ಈ ಚಿಂತನೆಯಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ’ ಎಂದು ಅವರು ತಮ್ಮ ‘ಐ ಡು ವಾಟ್‌ ಐ ಡು’ ಕೃತಿಯಲ್ಲಿ ಬರೆದಿದ್ದಾರೆ.

•► ಪರ– ವಿರೋಧ ವಾದ
━━━━━━━━━━━━━━━━
ಬ್ಯಾಡ್‌ ಬ್ಯಾಂಕ್‌ ಕಲ್ಪನೆಯ ಬಗ್ಗೆ ಪರ–ವಿರೋಧ ವಾದಗಳಿವೆ. ವಸೂಲಾಗದ ಸಾಲವನ್ನು ಬೇರೆಕಡೆಗೆ ಹಸ್ತಾಂತರಿಸಿದರೆ ಬ್ಯಾಂಕ್‌ಗಳು ತಮ್ಮ ಮೂಲ ಚಟುವಟಿಕೆಯಾದ ಸಾಲ ನೀಡಿಕೆಯ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತದೆ. ಜತೆಗೆ ವಸೂಲಾತಿಯ ಹೊಣೆಯನ್ನು ತಜ್ಞರಿಗೆ ವಹಿಸಿದಂತಾಗುತ್ತದೆ. ಇದರಿಂದ ವಸೂಲಾತಿ ಪ್ರಮಾಣ ಹೆಚ್ಚಾಗುತ್ತದೆ ಎಂದು ಬ್ಯಾಡ್‌ ಬ್ಯಾಂಕ್‌ ಪರ ವಾದಿಸುವವರು ಹೇಳುತ್ತಾರೆ.

ಬೇರೆಬೇರೆ ಬ್ಯಾಂಕ್‌ಗಳು ಸೇರಿ ನೀಡಿರುವ ಸಾಲವು ವಸೂಲಾಗದೆ ಇದ್ದಾಗ, ಸಾಲಗಾರರ ಆಸ್ತಿ ಮಾರಾಟ ಮಾಡಿ ಹಣ ವಸೂಲು ಮಾಡಲು ಅವಕಾಶ ಇದೆ. ಆದರೆ ಖರೀದಿದಾರರು ಎಲ್ಲಾ ಬ್ಯಾಂಕ್‌ಗಳ ಜತೆಗೆ ವ್ಯವಹಾರ ಮಾಡಬೇಕಾಗುತ್ತದೆ. ಬ್ಯಾಡ್‌ ಬ್ಯಾಂಕ್‌ ರಚನೆಯಾದರೆ ಖರೀದಿದಾರರು ಒಂದೇ ಸಂಸ್ಥೆಯ ಜತೆಗೆ ವ್ಯವಹರಿಸಬಹುದಾಗಿದೆ ಎಂದು  ಇಂಥವರು ವಾದಿಸುತ್ತಾರೆ.

ಆದರೆ, ‘ಒಂದು ಮಾದರಿಯನ್ನಿಟ್ಟುಕೊಂಡು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಾರದು’ ಎಂದು ಬ್ಯಾಡ್‌ ಬ್ಯಾಂಕ್‌ ಚಿಂತನೆಯನ್ನು ವಿರೋಧಿಸುವವರು ಹೇಳುತ್ತಾರೆ.

•► ಪರಿಹಾರವೇ?
━━━━━━━
‘ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯ ಕಲ್ಪನೆ ಒಮ್ಮೆಗೇ ಹುಟ್ಟಿಕೊಂಡದ್ದಲ್ಲ. ಈ ಕುರಿತ ಚರ್ಚೆ ಹಲವು ವರ್ಷಗಳಿಂದ ನಡೆದಿದೆ. 2015ರಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಅಂದಿನ ಗವರ್ನರ್‌ ರಘುರಾಂ ರಾಜನ್‌ ಅವರು ಬ್ಯಾಂಕ್‌ ಸೊತ್ತುಗಳ ಗುಣಮಟ್ಟದ ಪರಿಶೀಲನೆ ನಡೆಸಿದ್ದರು. ಇದರಿಂದಾಗಿ ಸಾಲದ ಅನೇಕ ಖಾತೆಗಳನ್ನು ವಸೂಲಾಗದ ಸಾಲ ಎಂದು ಘೋಷಿಸುವುದು ಬ್ಯಾಂಕ್‌ಗಳಿಗೆ ಅನಿವಾರ್ಯವಾಯಿತು. ಎನ್‌ಪಿಎ ಸಮಸ್ಯೆಗೆ ‘ಬ್ಯಾಡ್‌ ಬ್ಯಾಂಕ್‌’ ಒಂದು ಪರಿಹಾರವಾಗಬಲ್ಲದೇ ಎಂಬ ಚರ್ಚೆಗೆ ಅವರು ನಾಂದಿ ಹಾಡಿದ್ದರು. ಆದರೆ ಇದು ಹೊಸ ಯೋಚನೆಯೇನೂ ಆಗಿರಲಿಲ್ಲ. ಅನೇಕ ಆರ್ಥಿಕ ತಜ್ಞರು ಅದಕ್ಕೂ ಹಿಂದೆಯೇ ಬ್ಯಾಡ್‌ ಬ್ಯಾಂಕ್‌ ಆರಂಭಿಸುವ ಬಗೆಗಿನ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು.

ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಏರುತ್ತಿರುವ ಎನ್‌ಪಿಎ ಪ್ರಮಾಣವನ್ನು ನಿಯಂತ್ರಣಕ್ಕೆ ತರಬೇಕೆಂಬ ಉದ್ದೇಶದಿಂದ 2018ರಲ್ಲಿ ಅಂದಿನ ಹಂಗಾಮಿ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ಪಿಎನ್‌ಬಿ ಅಧ್ಯಕ್ಷ ಸುನಿಲ್‌ ಮೆಹ್ತಾ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಿದ್ದರು. ಬ್ಯಾಂಕ್‌ ಸೊತ್ತುಗಳ ಮರುನಿರ್ಮಾಣದ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಇನ್ನೊಂದರ್ಥದಲ್ಲಿ ಅದು ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯ ಸಾಧ್ಯತೆಯನ್ನು ಪರಿಶೀಲಿಸುವ ಸಮಿತಿಯೇ ಆಗಿತ್ತು. 

(ಕೃಪೆ : ಪ್ರಜಾವಾಣಿ ಮತ್ತು ಇತರೆ ದಿನಪತ್ರಿಕೆಗಳಿಂದ)

Friday, 28 January 2022

☀️ "ಸ್ಪರ್ಧಾಲೋಕ -IAS/KAS in ಕನ್ನಡ" (@spardhalokaa) ಟೆಲೆಗ್ರಾಮ್ ಚಾನೆಲ್ ಪುನಃ ಪ್ರಾರಂಭ!

 ☀️ "ಸ್ಪರ್ಧಾಲೋಕ -IAS/KAS in ಕನ್ನಡ" (@spardhalokaa) ಟೆಲೆಗ್ರಾಮ್ ಚಾನೆಲ್ ಪುನಃ ಪ್ರಾರಂಭ! 

ಕಾರಣಾಂತರಗಳಿಂದ ಸ್ಥಗಿತಗೊಂಡ "ಸ್ಪರ್ಧಾಲೋಕ ಟೆಲೆಗ್ರಾಮ್ ಚಾನೆಲ್ @spardhalokaa ಪುನಃ ಸ್ಪರ್ಧಾರ್ಥಿಗಳ ಬೇಡಿಕೆಯ ಮೇರೆಗೆ  ಐಎಎಸ್ /ಕೆಎಎಸ್ & ಇತರೆ ಪರೀಕ್ಷೆಗಳಿಗಾಗಿ ಕನ್ನಡದಲ್ಲಿ ವಿಸ್ತೃತ ಮಾಹಿತಿಗಳೊಂದಿಗೆ ತಯಾರಾಗಿ  ಸ್ಪರ್ಧೆಗಳಿಗೆ ಎದೆಯೊಡ್ಡುವ ಹೊಸ ಭರವಸೆಯ ಗೆಲುವಿನ  ಆಶಾಕಿರಣದೊಂದಿಗೆ 2022ರಲ್ಲಿ ಪುನಃ ಈ ಸ್ಪರ್ಧಾಲೋಕ ಚಾನೆಲ್ ಅನ್ನು ಪ್ರಾಂಭಿಸಲಾಗಿರುತ್ತದೆ. ಸ್ಪರ್ಧಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.
~ 2022 is Ours!
back AgaIN to gaIN paid by paIN..!

Admins~
@yaseen7ash
@I_m_Mithun


Link to Join — https://t.me/spardhalokaa