•► ಅನ್ನಿ ಬೆಸೆಂಟ್ ರವರ ಪ್ರಸಿದ್ಧ ಸಾಹಿತ್ಯ ಕೃತಿಗಳು:
(Annie Besant's famous literary works)
━━━━━━━━━━━━━━━━━━━━━━━━━━━━
ಅನ್ನಿ ಬೆಸೆಂಟ್‍ರು ಐರಿಶ್ ಮೂಲದ ಭಾರತೀಯರ ಹಕ್ಕುಗಳಿಗಾಗಿ ಹೋರಾಡಿದ ಪ್ರಮುಖ ಥಿಯೊಸೊಫಿಸ್ಟ್ ರಾಜಕೀಯ ನಾಯಕಿ, ಬ್ರಿಟಿಷ್ ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಬರಹಗಾರ್ತಿ ಮತ್ತು ವಾಗ್ಮಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು. ಇವರು ವಿವಿಧ ಪ್ರಮುಖ ಚಳುವಳಿಗಳ ಮುಖ್ಯಸ್ಥರಾಗಿ ಮತ್ತು ಮಹಿಳಾ ಹಕ್ಕುಗಳ ಪರವಾದ ಹೋರಾಟದಲ್ಲಿ ನಾಯಕಿಯಾಗಿ 'ಜನತೆಯ ದಣಿವರಿಯದ ಸೇವಕಿ' ಎಂದು ಹೆಸರಾಗಿದ್ದರು.
1.ಅನ್ನಿ ಬೆಸೆಂಟ್ ಅವರ ಪ್ರಸಿದ್ಧ ಸಾಹಿತ್ಯ ಕೃತಿಗಳಲ್ಲಿ ಒಂದಾದ
'ಭಾರತ : ಒಂದು ರಾಷ್ಟ್ರ; ಸ್ವಯಂ ಸರ್ಕಾರಕ್ಕಾಗಿ ಕರೆ' (India: A Nation; A Plea for Self Government) ಎಂಬ ಪುಸ್ತಕವನ್ನು 1915 ರಲ್ಲಿ ಬರೆದರು.
- ಈ ಪುಸ್ತಕದಲ್ಲಿ ಅವರು ಭಾರತೀಯ ದೃಷ್ಟಿಕೋನದಿಂದ ಜ್ವಲಂತ ಭಾರತೀಯರ ಪರಿಸ್ಥಿತಿಗಳು ಮತ್ತು ಸಮಸ್ಯೆಗಳನ್ನು ಬ್ರಿಟಿಷ್ ಗಮನಕ್ಕೆ ತಂದರು ಆ ಮೂಲಕ ಭಾರತದ ನಿಜವಾದ ಹಿತಾಸಕ್ತಿಗಳನ್ನು ಸ್ಪಷ್ಟಪಡಿಸಿದರು..
- ಇದು ರಾಜಕೀಯ ರಚನೆಯನ್ನು ಅಧ್ಯಯನ ಮಾಡುವ ಮೂಲಕ ಮತ್ತು ಭಾರತೀಯ ಪರಿಸ್ಥಿತಿಗಳು ಮತ್ತು ಹಿತಾಸಕ್ತಿಗಳನ್ನು ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗಳೊಂದಿಗೆ ಸಮನ್ವಯಗೊಳಿಸಲು ಪ್ರಯತ್ನಿಸಿತು.
2.ಪುರಾತನ ಲೋಕಜ್ಞಾನ (The Ancient Wisdom)
3.ನಾಸ್ತಿಕತೆಯೆಡೆಗೆ ನನ್ನ ಮಾರ್ಗ.(My path to atheism)
4.ಭಾರತೀಯ ರಾಜಕೀಯದ ಭವಿಷ್ಯ.(The Future Of Indian Politics)
5.ದೇವರಿಲ್ಲದ ಜಗತ್ತು.(A World Without God)
6.ಗಾಂಧಿವಾದಿ ಅಸಹಕಾರ; ಅಥವಾ, ಭಾರತವು ಆತ್ಮಹತ್ಯೆ ಮಾಡಿಕೊಳ್ಳಬೇಕೆ?.(Gandhian Non Cooperation; Or, Shall India Commit Suicide?)
7.ಎದ್ದೇಳು, ಭಾರತ: ಸಮಾಜ ಸುಧಾರಣೆಗಾಗಿ ಕರೆ.(Wake Up, India: A Plea For Social Reform)
8.ಕರ್ಮದ ಅಧ್ಯಯನ.( A Study in Karma)
- ಥಿಯೊಸಾಫಿಕಲ್ ಸೊಸೈಟಿಯ ಸದಸ್ಯರಾಗಿ ಹಾಗೂ ನಂತರದಲ್ಲಿ ಅದರ ಅಧ್ಯಕ್ಷರಾಗಿ ಬೆಸೆಂಟ್ ಅವರು ಪ್ರಪಂಚದಾದ್ಯಂತ ವಿಶೇಷವಾಗಿ ಭಾರತದಲ್ಲಿ ಥಿಯೊಸಾಫಿಕಲ್ ನಂಬಿಕೆಗಳನ್ನು ಪ್ರಚುರಪಡಿಸಲು ಶ್ರಮಿಸಿದರು. ಇವರು ಮೊದಲು 1893 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು ತದನಂತರ ಇಲ್ಲಿಯೇ ನೆಲೆಸಿ ಭಾರತೀಯ ರಾಷ್ಟ್ರೀಯ ಚಳುವಳಿಯಲ್ಲಿ ತೊಡಗಿಸಿಕೊಂಡರು.
-1916 ರಲ್ಲಿ ಅವರು ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು ಹಾಗು ಅದರ ಅಧ್ಯಕ್ಷರಾದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ಸದಸ್ಯರೂ ಕೂಡ ಆಗಿದ್ದರು.
- ಶಿಕ್ಷಣದಲ್ಲಿ ಇವರ ದೀರ್ಘಕಾಲದ ಆಸಕ್ತಿಯು ಬನಾರಸ್‌ನಲ್ಲಿ ಸೆಂಟ್ರಲ್ ಹಿಂದೂ ಕಾಲೇಜನ್ನು ಸ್ಥಾಪಿಸಲು ಕಾರಣವಾಯಿತು (1898).
- ಅನ್ನಿ ಬೆಸೆಂಟ್ ಅವರು "ದಿ ಕಾಮನ್‌ವೆಲ್" (The Commonweal)ಮತ್ತು "ನ್ಯೂ ಇಂಡಿಯಾ" (New India) ಎಂಬ ಎರಡು ದಿನ ಪತ್ರಿಕೆಗಳನ್ನು ಸ್ಥಾಪಿಸಿದರು.
No comments:
Post a Comment