•► ಘರಾನಾ ಜೌಗು ಪ್ರದೇಶ (ತೇವ ಭೂಮಿ)
(Gharana Wetlands)
━━━━━━━━━━━━━━━━━━━━━━━━━
- ಸಂರಕ್ಷಿತ ಜೌಗು ಪ್ರದೇಶ + ಜಮ್ಮು ಮತ್ತು ಕಾಶ್ಮೀರದ ಭಾರತ-ಪಾಕಿಸ್ತಾನ ಗಡಿಯ ಪಕ್ಕದಲ್ಲಿರುವ ರಣಬೀರ್ ಸಿಂಗ್‌ಪುರದ ಘರಾನಾ ಗ್ರಾಮದಲ್ಲಿನ ಜಲಾಶಯ - ಅರೆ-ಶುಷ್ಕ ತೇವ ಪ್ರದೇಶ + ಚೀನಾ, ಸೈಬೀರಿಯಾ ಮತ್ತು ಇತರ ದೇಶಗಳಿಂದ ಬರುವ 50 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆ + ಇದನ್ನು ಪ್ರಮುಖ ಪಕ್ಷಿ ಪ್ರದೇಶ (IBA) ಎಂದು ಘೋಷಿಸಲಾಗಿದೆ + ಜಮ್ಮುವಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಘರಾನಾವು ಮಕ್ವಾಲ್, ಕುಕ್ಡಿಯನ್, ಅಬ್ದುಲ್ಲಿಯನ್ ಮತ್ತು ಪರ್ಗ್ವಾಲ್ ಜೌಗು ಪ್ರದೇಶಗಳಿಂದ ಆವೃತವಾಗಿದೆ + ಇಲ್ಲಿ 170 ಕ್ಕೂ ಹೆಚ್ಚು ತಳಿಯ ಮೂಲವಾಸಿ ಮತ್ತು ವಲಸೆ ಹಕ್ಕಿಗಳು ಚಳಿಗಾಲದಲ್ಲಿ ಸೇರುತ್ತವೆ. + ಈ ಘರಾನಾ ಜೌಗು ಪ್ರದೇಶವು ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ಚಳಿಗಾಲದ ತಿಂಗಳುಗಳಲ್ಲಿ 25,000-30,000 ಪಕ್ಷಿಗಳಿಗೆ ನೆಲೆಯಾಗಿದೆ.
— ಇಲ್ಲಿ ವಲಸೆ ಬರುವ ಪಕ್ಷಿಗಳಲ್ಲಿ ಪ್ರಮುಖವಾದವುಗಳೆಂದರೆ; ಬಾರ್-ಹೆಡೆಡ್ ಗೂಸ್, ನಾರ್ದರ್ನ್ ಪಿನ್‌ಟೇಲ್, ನಾರ್ದರ್ನ್ ಶೊವೆಲರ್, ಬ್ಲ್ಯಾಕ್-ವಿಂಗ್ಡ್ ಸ್ಟಿಲ್ಟ್ ಮತ್ತು ಗ್ರೇ ಹೆರಾನ್ ಸಾಮಾನ್ಯವಾಗಿ ವಲಸೆ ಬರುವ ಪಕ್ಷಿಗಳಾದರೆ, ಘರಾನಾ ವೆಟ್‌ಲ್ಯಾಂಡ್‌ನಲ್ಲಿ ಕಂಡುಬರುವ ಇತರೆ ಹೊಸ ಪ್ರಭೇದದ ಪಕ್ಷಿಗಳೆಂದರೆ ವೈಟ್-ಬ್ರೆಸ್ಟೆಡ್ ಐಬಿಸ್, ಪೈಡ್ ಕಿಂಗ್‌ಫಿಷರ್ ಮತ್ತು ಯುರೇಷಿಯನ್ ವಿಜಿಯನ್ ಗಳಾಗಿವೆ. ಘರಾನಾದಲ್ಲಿ ವಿರಳವಾಗಿ ಕಂಡುಬರುವ ಉಣ್ಣೆಯ ಕುತ್ತಿಗೆಯ ಕೊಕ್ಕರೆಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜೌಗು ಪ್ರದೇಶಕ್ಕೆ ಹಾರಿವೆ.
No comments:
Post a Comment