•► ಅವನತಿಯತ್ತ ಹಲವು ಜೀವ ಪ್ರಭೇದ (2019ರ ಸಮೀಕ್ಷೆಯಂತೆ)
(Declining Many Species)
━━━━━━━━━━━━━━━━━━━━━━━━━━━━━━
ನಗರಗಳ ಮೇಲಿನ ಮಾನವನ ವ್ಯಾಮೋಹದಿಂದಾಗಿ ಅನೇಕ ಜಾತಿಯ ಪ್ರಾಣಿ, ಪಕ್ಷಿಗಳು ಅವನತಿಯಂಚಿನಲ್ಲಿದೆ. ಸಸ್ತನಿ , ಸರೀಸೃಪ , ಉಭಯಚರ, ಕೀಟ, ಮೀನು ಸಹಿತ ಲೆಕ್ಕಕ್ಕೆ ಸಿಗ ದಷ್ಟು ಪ್ರಭೇದಗಳು ಕಣ್ಮರೆಯಾಗುತ್ತಿದೆ.
· ಐದು ಜಾತಿಯ ಪ್ರಭೇದಗಳಲ್ಲಿ ವರ್ಷದಲ್ಲಿ ನಾವು ಒಂದನ್ನು ಕಳೆದುಕೊಳ್ಳುತ್ತಿದ್ದೇವೆ.
· ಒಟ್ಟು 1,000 ದಿಂದ 10,000 ಸಾವಿರ ಪ್ರಭೇದಗಳನ್ನು ವಾರ್ಷಿಕವಾಗಿ ಕಳೆದುಕೊಳ್ಳುತ್ತಿದ್ದೇವೆ ಎಂದು ಸಂಶೋಧನೆಗಳು ತಿಳಿಸಿವೆ.
· ಕಳೆದ 28 ವರ್ಷಗಳಲ್ಲಿ ಕೀಟಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದ್ದು, ಇದ ರಿಂದ ಶೇ. 60ರಷ್ಟು ಪಕ್ಷಿಗಳಿಗೆ ಸಿಗುವ ಆಹಾರದ ಪ್ರಮಾಣ ಕಡಿಮೆಯಾಗಿದೆ.
· ಆವಾಸ ಸ್ಥಾನಗಳ ನಾಶ, ಶೋಷಣೆ ಮತ್ತು ಹವ ಮಾನ ಬದಲಾವಣೆಯಿಂದ ವಿಶ್ವದ ಕಾಡು ಪ್ರಾಣಿ ಗಳು ಪ್ರಸ್ತುತ ಅರ್ಧ ದಷ್ಟು ಕಡಿಮೆಯಾಗಿದೆ.
· ವಿಶ್ವದಾದ್ಯಂತ ವಾರ್ಷಿಕವಾಗಿ ಮೀನುಗಾರಿಕೆ ಮತ್ತು ಇನ್ನಿತರ ಕಾರಣಗಳಿಂದ ಸಮುದ್ರದಲ್ಲಿರುವ 6,50,000ಕ್ಕೂ ಹೆಚ್ಚು ಪ್ರಭೇದಗಳು ನಾಶಗೊಂಡಿವೆೆ.
· 20 ವರ್ಷಗಳಲ್ಲಿ ಡಾಲ್ಫಿನ್‌ಗಳ ಪ್ರಮಾಣ ಶೇ.65, ಪಿನ್ನಿ ಪೆಡ್(ಸಮುದ್ರ ಸಿಂಹಗಳು) ಮತ್ತು ಹಲ್ಲಿನ ತಿಮಿಂಗಿಲಗಳ ಪ್ರಮಾಣ ಶೇ. 75ರಷ್ಟು ಕಡಿಮೆಯಾಗಿದೆ.
· ವಿಶ್ವದ ಪಕ್ಷಿ ಪ್ರಭೇದಗಳಲ್ಲಿ ಶೇ. 40ರಷ್ಟು ಕಡಿಮೆಯಾಗಿದೆ. ವಾರ್ಷಿಕವಾಗಿ 8 ಪ್ರಭೇದಗಳಲ್ಲಿ 1 ಪ್ರಭೇದ ಅಳಿವಿನಂಚಿನಲ್ಲಿದೆ.
· ಹುಲಿ, ಚಿರತೆ ಮತ್ತು ಬೆಕ್ಕುಗಳ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂದಿನ ದಶಕಗಳಲ್ಲಿ ಇದರ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ ಎಂಬು ದನ್ನು ಸಂಶೋಧನೆಗಳು ಸ್ಪಷ್ಟಪಡಿಸಿದೆ.
· ಬೆಕ್ಕು, ಖಡ್ಗಮೃಗ ಮತ್ತು ಇತರ ಪ್ರಾಣಿಗಳ ಚರ್ಮ ಮತ್ತು ದೇಹದ ಭಾಗಗಳನ್ನು ಬಳಸಿಕೊಳ್ಳುತ್ತಿರುವ ಚೀನಾ ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಾಗಿದೆ.
· ಹಲ್ಲಿಗಳ ಜನನದ ಪ್ರಮಾಣ ಹವಮಾನ ಬದಲಾವಣೆಯಿಂದಾಗಿ ಕಡಿಮೆಯಾಗತ್ತಿದ್ದು, ಇತ್ತೀ ಚಿನ ಅಧ್ಯಯನಗಳ ಪ್ರಕಾರ ಶೇ. 40ರಷ್ಟು ಹಲ್ಲಿ ಗಳು ನಾಶವಾಗಿವೆ. 2080ರ ಹೊತ್ತಿಗೆ ಈ ಜಾತಿಯೇ ನಿರ್ನಾಮಗೊಳ್ಳುತ್ತದೆ ಎನ್ನಲಾಗಿದೆ.
· ಲಕ್ಷಾಂತರ ಸಂಖ್ಯೆಯಲ್ಲಿದ್ದ ಅಮೆರಿಕಾದ ಕಾಡೆಮ್ಮೆಗಳ ಪ್ರಮಾಣ ಕ್ಷಿಣಿಸುತ್ತಿದೆ.
No comments:
Post a Comment