•►(ಸರಿ ಉತ್ತರಗಳೊಂದಿಗೆ) "ಪ್ರಿಲೀಮ್ಸ್ 2022: ಭಾಗ 2- ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
(Prelims 2022: Daily 10 Multiple Choice Questions)
━━━━━━━━━━━━━━━━━━━━━━━━━━━━━━━━━━━━━━
11. ಪಲ್ಲವರ ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. 'ಅರ್ಜುನನ ತಪಸ್ಸು ಏಕಶಿಲಾ ಬಂಡೆಯ ಕೆತ್ತನೆ' ನರಸಿಂಹವರ್ಮನ್-I ನಿಂದ ನೀರ್ಮಿಸಲಾಯಿತು.
2. ಹಲ್ಮಿಡಿ ಶಾಸನಗಳು' ಪಲ್ಲವರ ಸಂಗೀತದ ಆಸಕ್ತಿಯನ್ನು ಚಿತ್ರಿಸುತ್ತವೆ.
3. ‘ತಚ್ಚಿನ ಚಿತ್ರಂ’ ಎಂಬ ಕೃತಿಯನ್ನು ರಾಜಸಿಂಹನು ರಚಿಸಿರುವನು.
— ಮೇಲಿನವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ.
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.
12.'ಕುರಿಲ್ ದ್ವೀಪಗಳ ವಿವಾದ'ವು ಇತ್ತೀಚೆಗೆ ಸುದ್ದಿಯಲ್ಲಿದ್ದು ಈ ದೇಶಗಳ ಮಧ್ಯೆ ಜ್ವಲಂತವಾಗಿದೆ.
A) ಫಿಲಿಪೈನ್ಸ್ ಮತ್ತು ಚೀನಾ.
B) ಜಪಾನ್ ಮತ್ತು ಚೀನಾ.
C) ಜಪಾನ್ ಮತ್ತು ರಷ್ಯಾ
D) ದ.ಕೋರಿಯಾ ಮತ್ತು ಚೀನಾ.
13.'ಕಾಂಗ್ರೆಸ್‌ನ ಫೈಜ್‌ಪುರ ಅಧಿವೇಶನ'ದ ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ನಡೆಸಿದ ಮೊದಲ ಅಧಿವೇಶನವಾಗಿತ್ತು.
2. ಇದರ ಅಧ್ಯಕ್ಷತೆಯನ್ನು ವಲ್ಲಭಭಾಯಿ ಪಟೇಲ್ ವಹಿಸಿದ್ದರು.
3. ಅಖಿಲ ಭಾರತ ಕಿಸಾನ್ ಕಾಂಗ್ರೆಸ್‌ನ ಅಧಿವೇಶನವು ಕೂಡ ಫೈಜ್‌ಪುರದಲ್ಲಿ ಕಾಂಗ್ರೆಸ್ ಅಧಿವೇಶನದೊಂದಿಗೆ ನಡೆಯಿತು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮತ್ತು 2 ಮಾತ್ರ.
(ಬಿ) 1 ಮತ್ತು 3 ಮಾತ್ರ.
(ಸಿ) 2 ಮತ್ತು 3 ಮಾತ್ರ.
(ಡಿ) 1, 2 ಮತ್ತು 3
14.'ಬಿಲ್ಡ್ ಬ್ಯಾಕ್ ಬೆಟರ್ ವರ್ಲ್ಡ್' (Build Back Better World Initiative) ಉಪಕ್ರಮವು ಇದಕ್ಕೆ ಸಂಬಂಧಿಸಿದುದಾಗಿದೆ.
A) ಜಿ-20
B) ಜಿ 7
C) ಬ್ರಿಕ್ಸ್
D) ಸಾರ್ಕ್
15.ಮೊಘಲ್ ಅವಧಿಯಲ್ಲಿನ 'ಸತ್ನಾಮಿ'(Satnamis)ಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಸತ್ನಾಮಿಗಳು ಹೆಚ್ಚಾಗಿ ರೈತರು, ಕುಶಲಕರ್ಮಿಗಳು ಮತ್ತು ಕೆಳ ಜಾತಿಯ ಜನರಾಗಿದ್ದರು.
2. ಅವರು ಜಾತಿ, ಶ್ರೇಣಿಯ ಅಥವಾ ಹಿಂದೂ ಮುಸ್ಲಿಮರ ನಡುವಿನ ಭೇದಗಳನ್ನು ಗಮನಿಸಲಿಲ್ಲ ಮತ್ತು ಕಟ್ಟುನಿಟ್ಟಾದ ನೀತಿ ಸಂಹಿತೆಯನ್ನು ಅನುಸರಿಸಿದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮಾತ್ರ
(ಬಿ) 2 ಮಾತ್ರ
(ಸಿ) 1 ಮತ್ತು 2 ಎರಡೂ
(ಡಿ) 1 ಅಥವಾ 2 ಅಲ್ಲ.
16.ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ನೆರೆಯ ಮೊಘಲ್ ಪ್ರಾಂತ್ಯಗಳ ಮೇಲೆ ತೆರಿಗೆಯನ್ನು ವಿಧಿಸುವ ಮೂಲಕ ಶಿವಾಜಿ ತನ್ನ ಆದಾಯವನ್ನು ಪೂರಕಗೊಳಿಸಿದನು.
2. ಶಿವಾಜಿ ಜಮೀನ್ದಾರಿ (ದೇಶಮುಖಿ) ವ್ಯವಸ್ಥೆಯನ್ನು ಉತ್ತೇಜಿಸಿದನು.
3. ಶಿವಾಜಿ ಮಿರಾಸ್ದಾರರನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಿದನು.
- ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1 ಮತ್ತು 3 ಮಾತ್ರ
(ಬಿ) 1 ಮತ್ತು 2 ಮಾತ್ರ
(ಸಿ) 2 ಮತ್ತು 3 ಮಾತ್ರ
(ಡಿ) 1, 2 ಮತ್ತು 3
17.'ಸೇಂಟ್ ಪೀಟರ್ಸ್‌ಬರ್ಗ್ ಘೋಷಣೆʼಯು ಇದಕ್ಕೆ ಸಂಬಂಧಿಸಿದುದಾಗಿದೆ.
A.ಅಂತರರಾಷ್ಟ್ರೀಯ ಸೈಬರ್ ಭದ್ರತೆ.
B.ಕಡಲತೀರದ ಯೋಗಕ್ಷೇಮ ಮತ್ತು ಸಿಬ್ಬಂದಿ ಬದಲಾವಣೆ.
C.ಹವಾಮಾನ ಬದಲಾವಣೆ.
D.ಹುಲಿ ಸಂರಕ್ಷಣೆ.
18.ಕೆಳಗೆ ನೀಡಲಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಉಷ್ಣಾಂಶ ಹೆಚ್ಚಾಗಿರುವ ಪ್ರದೇಶಗಳಲ್ಲಿ ಒತ್ತಡವು ಕಡಿಮೆ.
2. ವಾಯುಮಂಡಲದ ಒತ್ತಡವು ಭೂಮೇಲ್ಮೈನಿಂದ ಎತ್ತರಕ್ಕೆ ಹೋದಂತೆ ಕಡಿಮೆಯಾಗುವುದು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ.) 1 ಮಾತ್ರ
(ಬಿ.) 2 ಮಾತ್ರ
(ಸಿ.) 1 ಮತ್ತು 2 ಎರಡೂ
(ಡಿ.) 1 ಅಥವಾ 2 ಆಗಿಲ್ಲ
19. ವೇದಗಳ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಋಗ್ವೇದ ಕಾಲದಲ್ಲಿ, ಸ್ತ್ರೀ ದೇವತೆಗಳ ಉಲ್ಲೇಖವಿಲ್ಲ.
2. ಯಜುರ್ವೇದವು ರೋಗಗಳ ಚಿಕಿತ್ಸೆಗೆ ಸಂಬಂಧಿಸಿದೆ.
3. ಸಾಮವೇದದ ಎಲ್ಲಾ ಶ್ಲೋಕಗಳನ್ನು ಋಗ್ವೇದದಿಂದ ಎರವಲು ಪಡೆಯಲಾಗಿದೆ.
4. ಅಥರ್ವವೇದವು ಧಾರ್ಮಿಕ ಆಚರಣೆಗಳ ನಿರ್ವಹಣೆಗೆ ಸಂಬಂಧಿಸಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(ಎ) 1 ಮತ್ತು 3 ಮಾತ್ರ
(ಬಿ) 1, 2 ಮತ್ತು 4 ಮಾತ್ರ
(ಸಿ) 2, 3 ಮತ್ತು 4 ಮಾತ್ರ
(ಡಿ) 1, 2, 3 ಮತ್ತು 4
20.'ರಾಟೆಲ್ ಜಲ ವಿದ್ಯುತ್ ಯೋಜನೆ'ಯು ಈ ಕೆಳಗಿನ ನದಿಗೆ ಸಂಬಂಧಿಸಿದೆ.
A) ಬ್ರಹ್ಮಪುತ್ರ ನದಿ.
B) ಚೆನಬ್ ನದಿ.
C) ಸಟ್ಲೆಜ್ ನದಿ.
D) ಕೋಸಿ ನದಿ.
No comments:
Post a Comment