•► "ಪ್ರಿಲೀಮ್ಸ್ 2022: ದೈನಂದಿನ (07/05/2022) 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
(Prelims 2022: Daily 10 Multiple Choice Questions)
━━━━━━━━━━━━━━━━━━━━━━━━━━━━━━━━━━━━━━
21.'ಉತ್ತರ ವೈದಿಕ ಸಂಸ್ಕೃತ ಸಾಹಿತ್ಯ'ದ ಕುರಿತಾದ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಪ್ರತಿಯೊಂದು ವೇದವು ತನ್ನದೇ ಆದ ಬ್ರಾಹ್ಮಣಕವನ್ನು ಹೊಂದಿದೆ.
2. ಕೆನ್, ಮುಕ್ತಿಕಾ ಮತ್ತು ಕಥಾ ಇವು ಪ್ರಮುಖ ಪುರಾಣಗಳು.
3. ಉಪನಿಷತ್ತುಗಳು ಅಮೂರ್ತವಾದ ತಾತ್ವಿಕ ಚರ್ಚೆಗಳೊಂದಿಗೆ ವ್ಯವಹರಿಸುತ್ತವೆ.
4. ಅರಣ್ಯಕವು ಆತ್ಮ, ಜನನ ಮತ್ತು ಮರಣ ಹಾಗೂ ಅದರಾಚೆಗಿನ ಜೀವನದ ಕುರಿತು ಚರ್ಚಿಸುತ್ತದೆ.
- ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) 1, 2 ಮತ್ತು 3 ಮಾತ್ರ.
(ಬಿ) 1, 3 ಮತ್ತು 4 ಮಾತ್ರ.
(ಸಿ) 3 ಮತ್ತು 4 ಮಾತ್ರ.
(ಡಿ) 1, 2, 3 ಮತ್ತು 4.
https://t.me/spardhalokaa
22. ‘ಪ್ರೊಟೆಕ್ಟೆಡ್ ಪ್ಲ್ಯಾನೆಟ್’ ಎಂಬ ವರದಿಯನ್ನು ಬಿಡುಗಡೆ ಮಾಡಿದವರು...
A.ವಿಶ್ವಸಂಸ್ಥೆ.
B.ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)
C.ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ (UNFCCC)
D.ವಿಶ್ವ ಆರ್ಥಿಕ ವೇದಿಕೆ (WEF)
23. “ವೂಲ್ಫ್ ವಾರಿಯರ್ ರಾಜತಾಂತ್ರಿಕತೆ” (wolf warrior diplomacy) ಎಂಬುದು ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶದ ವ್ಯವಹಾರಗಳಿಗೆ ಸಂಬಂಧಿಸಿದ್ದಾಗಿದೆ.
A.ಉಕ್ರೇನ್
B.ರಷ್ಯಾ
C.ಚೀನಾ
D.ಉತ್ತರ ಕೊರಿಯಾ
24. ‘ಅಜೆಂಡಾ 21’ ಎಂದೇ ಜಗದ್ವಿಖ್ಯಾತವಾಗಿರುವ ಘೋಷಣೆಯು ಯಾವ ಸಮಾವೇಶದಲ್ಲಿ ಹೊರಡಿಸಲಾಯಿತು?
(ಎ) ಸ್ಟಾಕ್‌ಹೋಮ್ ಸಮಾವೇಶ.
(ಬಿ) ವಿಯೆನ್ನಾ ಸಮಾವೇಶ
(ಸಿ) ರಿಯೊ ಶೃಂಗಸಭೆ.
(ಡಿ) ಬಾಸೆಲ್ ಸಮಾವೇಶ
25. ಇತ್ತೀಚೆಗೆ ಸುದ್ದಿಯಲ್ಲಿರುವ 'ಕರೆನ್ ಜನಾಂಗ'ವು ಈ ದೇಶದ ನಿವಾಸಿಗಳು.
A. ಕ್ಯೂಬಾ.
B. ಹಾಂಕಾಂಗ್.
C. ಚೀನಾ.
D. ಮ್ಯಾನ್ಮಾರ್.
26. ಇತ್ತೀಚೆಗೆ ಬಿಡುಗಡೆಯಾದ 'ಆಹಾರ ತ್ಯಾಜ್ಯ ಸೂಚ್ಯಂಕ ವರದಿ'(Food Waste Index)ಯನ್ನು ಪ್ರಕಟಿಸುವವರು,
A. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) .
B. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP).
C. ವಿಶ್ವ ಆಹಾರ ಕಾರ್ಯಕ್ರಮ(WFO)
D. ವಿಶ್ವ ಬ್ಯಾಂಕ್(WB)
27. 'ಕೊಡೊ'(KODO), ಕುಟ್ಕಿ (KUTKI), ಚೆನ್ನ (CHENNA) ಮತ್ತು ಸನ್ವಾ (SANWA) ಶಬ್ದಗಳು ಇತ್ತೀಚೆಗೆ ಸುದ್ದಿಯಲ್ಲಿದ್ದು ಇವಕ್ಕೆ ಸಂಬಂಧಿಸಿವೆ.
A. ಈಶಾನ್ಯ ರಾಜ್ಯಗಳಲ್ಲಿನ ಬುಡಕಟ್ಟುಗಳು.
B. ಅಳಿವಿನಂಚಿನಲ್ಲಿರುವ ದಕ್ಷಿಣ ಭಾರತೀಯ ಭಾಷೆಗಳು.
C. ರಾಗಿಯ ಪ್ರಮುಖ ತಳಿಗಳು.
D. ಎಮ್ಮೆಯ ತಳಿಗಳು.
28. ವಿಜ್ಞಾನಿಗಳು 'ವಿಶ್ವದ ಹಳೆಯ ಪಳೆಯುಳಿಕೆ ಕಾಡಿನ ಅವಶೇಷ'ಗಳನ್ನು ಇಲ್ಲಿ ಪತ್ತೆ ಹಚ್ಚಿದ್ದಾರೆ.
A. ಆಪ್ರಿಕಾ.
B. ಯು.ಎಸ್.ಎ.
C. ರಷ್ಯಾ.
D. ಚೀನಾ.
29. ಏಷ್ಯ, ಯೂರೊಪ್ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಆಯಕಟ್ಟಿನ ಸ್ಥಳವೆಂದರೆ,
A. ಈಜಿಪ್ಟ್.
B. ಸಿರಿಯಾ.
C. ಪ್ಯಾಲಸ್ತೀನ್
D. ಇರಾಕ್.
30. ಇತ್ತೀಚೆಗೆ ಸುದ್ದಿಯಲ್ಲಿರುವ 'ಮಿಷನ್ ಕಲ್ಪತ್ರು'(Mission KALPATRU) ಎಂಬುದು ಇದಕ್ಕೆ ಸಂಬಂಧಿಸಿದುದಾಗಿದೆ.
A. ವನ ಸಂಪತ್ತನ್ನು ಹೆಚ್ಚಿಸಿ ಪರಿಸರ ಸಮತೋಲನ ಕಾಯ್ದುಕೊಳ್ಳುವುದು.
B. ಪತ್ರಿಕೋದ್ಯಮದ ಸ್ಥಿತಿಗತಿಗಳನ್ನು ಸುಧಾರಿಸುವುದು.
C. ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ ಸೌಲಭ್ಯಗಳನ್ನು ಹೆಚ್ಚಿಸುವುದು.
D. ಅಪೌಷ್ಟಿಕತೆ ವಿರುದ್ಧ ಹೋರಾಡುವುದು.
… ಮುಂದುವರೆಯುವುದು.
No comments:
Post a Comment