•► "ಪ್ರಿಲೀಮ್ಸ್ 2022: ದೈನಂದಿನ 10 ಬಹು ಆಯ್ಕೆಯ ಮಾದರಿ ಪ್ರಶ್ನೆಗಳು
(Daily 10 Multiple Choice Questions)
━━━━━━━━━━━━━━━━━━━━━━
01.ಭೂಮಿಯ ಕಕ್ಷೆಯಾಚೆಗಿನ ‘ಲ್ಯಾಂಗ್ರೇಜ್ ಪಾಯಿಂಟ್’ ಕುರಿತ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿದೆ?
1) ಈ ಸಂಯೋಜನೆಯಲ್ಲಿ ಸೂರ್ಯ ಮತ್ತು ದೂರದರ್ಶಕದ ನಡುವೆ ಭೂಮಿ ಇರುತ್ತದೆ.
2) ಸೂರ್ಯ, ಭೂಮಿ ಮತ್ತು ದೂರದರ್ಶಕವು ಒಂದೇ ಸರಳ ರೇಖೆಯಲ್ಲಿ ಇರುತ್ತವೆ.
3) ಈ ಸಂಯೋಜನೆಯಲ್ಲಿ ಭೂಮಿಯ ನೆರಳಿನ ಪ್ರದೇಶದಲ್ಲಿ ಸೂರ್ಯನ ಗುರುತ್ವ ಬಲ ಸ್ವಲ್ಪ ಕಡಿಮೆ ಇರುತ್ತದೆ.
A. 1 ಮಾತ್ರ.
B. 1 ಮತ್ತು 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನೆಲ್ಲವೂ.
02. `ಪಿರ್ ಪಂಜಾಲ್ ಶ್ರೇಣಿ`ಯ ಕುರಿತ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿಯಾಗಿದೆ?
1) ಪಿರ್ ಪಂಜಾಲ್ಪರ್ವತ ಶ್ರೇಣಿಯು ಪಶ್ಚಿಮ (ಪಂಜಾಬ್) ಹಿಮಾಲಯದ ಭಾಗವಾಗಿದೆ
2) ಇದು ಒಂದು ಬದಿಯಲ್ಲಿ ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನಡುವೆ ಮತ್ತು ಇನ್ನೊಂದು ಬದಿಯಲ್ಲಿ ಸಿಂಧೂ ನಡುವೆ ವಿಭಜನೆಯನ್ನು ರೂಪಿಸುತ್ತದೆ.
3) ಹಿಮಾಲಯದ ಪೂರ್ವ ಪಿರ್ ಪಂಜಾಲ್ ಶ್ರೇಣಿಯಲ್ಲಿರುವ ರೋಹ್ಟಂಗ್ ಕಣಿವೆಮಾರ್ಗದಲ್ಲಿ ಅಟಲ್ ಸುರಂಗವನ್ನು ನಿರ್ಮಿಸಲಾಗಿದೆ.
A. 1 ಮಾತ್ರ.
B. 1 ಮತ್ತು 3 ಮಾತ್ರ.
C. 2 ಮತ್ತು 3 ಮಾತ್ರ.
D. ಮೇಲಿನೆಲ್ಲವೂ.
03. ಈ ಕೆಳಗಿನ ಯಾವ ಉಪಕ್ರಮಗಳು ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಹೋರಾಟದೊಂದಿಗೆ ಸಂಬಂಧಿಸಿಲ್ಲ.
1. ಚುನಾವಣಾ ತೆರಿಗೆ (Poll Tax) ವಿರುದ್ಧ ಪ್ರಚಾರ.
2. ಬಲವಂತದ ದುಡಿಮೆ ವಿರುದ್ಧ ಅಭಿಯಾನ.
3. 'ಇಂಡಿಯನ್ ಒಪಿನಿಯನ್' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.
4.ಭಾರತೀಯರ ವಲಸೆಯ ಮೇಲಿನ ನಿರ್ಬಂಧದ ವಿರುದ್ಧದ ಅಭಿಯಾನ.
5.ವಿವಾಹಗಳ ನೋಂದಣಿ ಮೇಲಿನ ನಿರ್ಬಂಧದ ವಿರುದ್ಧದ ಅಭಿಯಾನ
(ಎ) 1 ಮಾತ್ರ.
(ಬಿ) 2 ಮಾತ್ರ.
(ಸಿ) 1, 2 ಮತ್ತು 5 ಮಾತ್ರ.
(ಡಿ) 2, 4 ಮತ್ತು 5 ಮಾತ್ರ.
04. ವುಡ್ಸ್ ಡಿಸ್‍ಪ್ಯಾಚ್ (Wood’s Despatch) ಕುರಿತ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
1. ಇದು ಎಲ್ಲಾ ಹಂತಗಳಲ್ಲಿ ಇಂಗ್ಲಿಷ್ ಅನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಿತು.
2. ಇದು ಸ್ತ್ರೀ ಮತ್ತು ವೃತ್ತಿಪರ ಶಿಕ್ಷಣದ ಮೇಲೆ ಒತ್ತಡ ಹಾಕಿತು.
3. ಸರ್ಕಾರಿ ಸಂಸ್ಥೆಗಳಲ್ಲಿ ನೀಡುವ ಶಿಕ್ಷಣವು ಜಾತ್ಯತೀತವಾಗಿರಬೇಕು ಎಂದು ಇದು ಒತ್ತಿ ಹೇಳಿತು.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.
05."ನಿರ್ದಿಷ್ಟ ಕುಶಲ ಕಾರ್ಮಿಕ"(Specified Skilled Worker)ರಿಗೆ ಸಂಬಂಧಿದಂತೆ ಸೂಕ್ತ ಕಾರ್ಯಾಚರಣೆ ವ್ಯವಸ್ಥೆಗಾಗಿ ಮೂಲಭೂತ ಚೌಕಟ್ಟು(Basic Framework)ನ ಕುರಿತಂತೆ ಭಾರತ ಸರ್ಕಾರವು ಈ ಕೆಳಕಂಡ ಯಾವ ದೇಶದೊಂದಿಗಿನ ಸಹಕಾರ ಒಪ್ಪಂದಕ್ಕೆ ಅಂಕಿತ ಹಾಕಿದೆ?
A) ಸೌದಿ ಅರೇಬಿಯಾ
B) ಸ್ವಿಟ್ಜರ್‌ಲೆಂಡ್
C) ಜಪಾನ್
D) ಜರ್ಮನಿ.
06.ಈ ಕೆಳಗಿನವುಗಳಲ್ಲಿ ಯಾವ ದೇಶವು ‘ಕ್ವಾಡ್’(Quad)ನ ಸದಸ್ಯ ರಾಷ್ಟ್ರವಾಗಿಲ್ಲ.
A) ಭಾರತ.
B) ಅಮೆರಿಕ.
C) ಜಪಾನ್
D) ಚೀನಾ
07.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಜಾಗತಿಕ ಸುಸ್ಥಿರ ಅಭಿವೃದ್ಧಿ ಶೃಂಗಸಭೆ'(World Sustainable Development Summit)ಯು ಈ ಸಂಸ್ಥೆಯ ವಾರ್ಷಿಕ ಕಾರ್ಯಕ್ರಮವಾಗಿದೆ.
A. ವಿಶ್ವ ಆರ್ಥಿಕ ವೇದಿಕೆ (WEF)
B.ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN)
C.ವಿಶ್ವಸಂಸ್ಥೆಯ ಜಾಗತಿಕ ಹವಾಮಾನ ಬದಲಾವಣೆ ಸಮ್ಮೇಳನ (UNFCCC)
D.ಇಂಧನ ಮತ್ತು ಸಂಶೋಧನಾ ಸಂಸ್ಥೆ (TERI)
08."ಜಾಗತಿಕ ಅಪಾಯಗಳ ವರದಿ"(Global Risk Report) ಯನ್ನು ಬಿಡುಗಡೆ ಮಾಡಿದವರು...
A) ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ(ಯುಎನ್‍ಇಪಿ)
B) ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ' (ಎಫ್‌ಎಟಿಎಫ್)
C) ವಿಶ್ವ ಆರ್ಥಿಕ ವೇದಿಕೆ
D) ವಿಶ್ವ ಬ್ಯಾಂಕು
09.'ಪ್ರಧಾನಮಂತ್ರಿ ಮಾತೃವಂದನಾ ಯೋಜನೆ' ಕುರಿತ ಈ ಕೆಳಗಿನ ಸರಿಯಾದ ಹೇಳಿಕೆ/ಗಳನ್ನು ಪರಿಗಣಿಸಿ.
1.ಈ ಯೋಜನೆಯ ಮೊದಲಿನ ಹೆಸರು ಇಂದಿರಾ ಮಾತೃ ಯೋಜನೆ ಎಂದು.
2. ಮೊದಲ ಜೀವಂತ ಹೆರಿಗೆಗೆ ಮಾತ್ರ ಈ ಸೌಲಭ್ಯ ದೊರೆಯಲಿದೆ.
3. ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನುಸಾರ ಅನುಷ್ಠಾನಗೊಳ್ಳಿಸಲಾಗಿದೆ.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
A) 1 ಮತ್ತು 2 ಮಾತ್ರ
B) 1 ಮತ್ತು 3 ಮಾತ್ರ
C) 2 ಮತ್ತು 3 ಮಾತ್ರ.
D) ಮೇಲಿನ ಎಲ್ಲವೂ.
10. 'ಬಿಂಜರಪುರಿ', 'ಮೋಟು', 'ಘುಮುಸರಿ', ಖರಿಯಾರ್,
ಇತ್ತೀಚೆಗೆ ಸುದ್ದಿಯಲ್ಲಿ ಕಂಡಿದ್ದು?
A) ಬುಡಕಟ್ಟು ನೃತ್ಯಗಳು.
B) ಧೀರ್ಘಾವಧಿ ಬದುಕಬಲ್ಲ ಮರಭೂಮಿ ಸಸ್ಯಗಳು.
C) ಜಾನುವಾರುಗಳ ತಳಿ
D) GI ಟ್ಯಾಗ್ ಮಾಡಲಾದ ವಸ್ತುಗಳು.
...ಮುಂದುವರೆಯುವುದು.
No comments:
Post a Comment