"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 24 January 2017

☀️ X.ಸಬಲಾ. (ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ) (SABALA)

☀️ X.ಸಬಲಾ. (ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ)
(SABALA)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


★ ಸಬಲಾ


•► ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ – ಸಬಲಾ:

— ಜೀವನದಲ್ಲಿ ಕಿಶೋರಾವಸ್ಥೆಯು ಮಾನಸಿಕ, ಬೌದ್ಧಿಕ, ಭಾವನಾತ್ಮಕ ಬೆಳವಣಿಗೆಗೆ ಸಂಬಂದಿಸಿದಂತೆ ಒಂದು ಪ್ರಮುಖ ಅವದಿಯಾಗಿದೆ.  ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಒದಗಿಸುವುದಕ್ಕಾಗಿ  ಹೊಸ ಚಿಂತನೆಯ ರೂಪದಲ್ಲಿ ಕಿಶೋರಿ ಶಕ್ತಿ ಯೋಜನೆ ಹಾಗು ಪ್ರಾಯಪೂರ್ವ ಬಾಲಕಿಯರಿಗೆ ಪೌಷ್ಠಿಕ ಆಹಾರ ಕಾರ್ಯಕ್ರಮ ಈ ಎರಡು ಯೋಜನೆಗಳನ್ನು ವಿಲೀನಗೊಳಿಸಿ ಕೇಂದ್ರ ಸಕರ್ಾರವು ಸಬಲ ಎಂಬ ಹೊಸ ಯೋಜನೆಯನ್ನು  ಜಾರಿಗೊಳಿಸಲು , ಕೇಂದ್ರ  ಹಾಗೂ ರಾಜ್ಯ ಸಕರ್ಾರದಿಂದ ಆದೇಶ ಹೊರಡಿಸಲಾಗಿದೆ.

•► ಈ ಯೋಜನೆಯಡಿ  ರಾಜ್ಯದ  9 ಜಿಲ್ಲೆಗಳನ್ನು (ಗುಲ್ಬಗರ್ಾ, ಕೋಲಾರ, ಬೆಂಗಳೂರು, ಬಳ್ಳಾರಿ, ಬಿಜಾಪುರ, ಧಾರವಾಡ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು )   ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ.

•► ಸಬಲ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ಮತ್ತು ಪೌಷ್ಠಿಕೇತರ ಅಂಶಗಳ ಸೇವೆಯನ್ನು ಕಿಶೋರಿಯರಿಗೆ ನೀಡಲಾಗುತ್ತಿದೆ. ಪೂರಕ ಪೌಷ್ಠಿಕ ಆಹಾರ ವನ್ನು 11-14 ವರ್ಷದ ಶಾಲೆ ಬಿಟ್ಟಿರುವ ಮತ್ತು 14-18 ವರ್ಷದ ಎಲ್ಲಾ ಕಿಶೋರಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸಮಗ್ರ ಶಿಶು ಅಬಿವೃದ್ದಿ ಯೋಜನೆಯಡಿ ಒದಗಿಸಲು ಕೇಂದ್ರ ಸಕರ್ಾರದ ನಿದರ್ೇಶನವಿರುತ್ತದೆ.

•► ಪೌಷ್ಠಿಕೇತರ ಅಂಶದಡಿ  ಕಿಶೋರಿಯರಿಗೆ ಆರೋಗ್ಯ ತಪಾಸಣೆ,  ಪೌಷ್ಠಕತೆ ಮತ್ತು ಆರೋಗ್ಯ ಶಿಕ್ಷಣ ,ಕುಟುಂಬ ಕಲ್ಯಾಣ, ಮಕ್ಕಳ ಪಾಲನೆ, ಗೃಹ ನಿರ್ವಹಣೆ, ಸಂತಾನೋತ್ಪತಿ ಮತ್ತು ಲೈಂಗಿಕ ಆರೋಗ್ಯ, ಜೀವನ ಕೌಶಲ್ಯ ಶಿಕ್ಷಣ, ವೃತ್ತಿಪರ/ಕೌಶಲ್ಯ ಅಬಿವೃದ್ದಿ ತರಬೇತಿಯನ್ನು ನೀಡಲಾಗುತ್ತದೆ.

•► 2012-13 ನೇ ಸಾಲಿಗೆ ರೂ.290.55 ಲಕ್ಷಗಳು ಅನುದಾನವನ್ನು ಬಿಡುಗಡೆಗೊಳಿಸಿದ್ದು, ರೂ.290.55 ಲಕ್ಷಗಳ ವೆಚ್ಚ ಮಾಡಲಾಗಿದೆ.

No comments:

Post a Comment