"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 24 January 2017

☀️ IX.ಸಾಂತ್ವನ. (SANTVAN)

☀️ IX.ಸಾಂತ್ವನ.
(SANTVAN)
━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


★ ಸಾಂತ್ವನ

•►  ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಲೈಂಗಿಕ  ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಒದಗಿಸುವ ಉದ್ದೇಶದಿಂದ ಸಾಂತ್ವನ ಯೋಜನೆಯನ್ನು   2000-2001 ನೇ ಸಾಲಿನಲ್ಲಿ ಮಂಜೂರು ಮಾಡಲಾಯಿತು. ಇಂತಹ ಮಹಿಳೆಯರಿಗೆ ಕಾನೂನು ನೆರವು, ತಾತ್ಕಾಲಿಕ ಆಶ್ರಯ, ಆರ್ಥಿಕ  ಪರಿಹಾರ, ಹಾಗೂ ತರಬೇತಿ  ನೀಡಿ ಸ್ವಾವಲಂಬಿಗಳಾಗುವಂತೆ ಮಾಡಿ ಸ್ವತಂತ್ರ ಬದುಕು ಸಾಗಿಸಲು ನೆರವಾಗುವುದರ ಜೊತೆಗೆ, ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ  ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿರುತ್ತದೆ.

•►  ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಹಾಗೂ ಪ್ರತಿಯೊಂದು ಕೇಂದ್ರದಲ್ಲಿ  ಶುಲ್ಕ ರಹಿತ ದೂರವಾಣಿ ಒದಗಿಸಲಾಗಿದೆ. ಈ ಮಹಿಳಾ ಸಹಾಯವಾಣಿಯು ದಿನದ 24 ಗಂಟೆಗಳೂ ಸಂಕಷ್ಟಕ್ಕೊಳಕಾದ ಮಹಿಳೆಯರಿಂದ ಕರೆಗಳನ್ನು ಸ್ವೀಕರಿಸುತ್ತದೆ. ಇಂತಹ ಮಹಿಳೆಯರಿಗೆ  ಜಿಲ್ಲಾ  ಸಮಿತಿಯ ಶಿಫಾರಸ್ಸಿನ ಮೇರೆಗೆ ಅವಶ್ಯ ಸೌಲಭ್ಯ ಹಾಗು ಪುನರ್ವಸತಿ   ಸೇವೆಗಳನ್ನು ಪ್ರತಿ ಪ್ರಕರಣದ ಅರ್ಹತೆ ಗನುಗುಣವಾಗಿ ನೀಡಲಾಗುತ್ತದೆ.

•►  ದೌರ್ಜನ್ಯಕ್ಕೊಳಗಾದ ಮಹಿಳೆಗೆ ತಕ್ಷಣ ಆರ್ಥಿಕ ನೆರವು ಅವಶ್ಯಕತೆ ಇದ್ದಲ್ಲಿ 2000 ರೂಪಾಯಿಂದ ಗರಿಷ್ಥ 10,000 ರೂಪಾಯಿಗಳವರೆಗೆ ನೆರವು ನೀಡಲಾಗುವುದು.  ಪ್ರಸ್ತುತ ರಾಜ್ಯದಲ್ಲಿ ಒಟ್ಟು 172 ಸಾಂತ್ವನ  ಕೇಂದ್ರಗಳು ಕಾರ್ಯನಿರತವಾಗಿವೆ.

•►  2013-14ನೇ ಸಾಲಿನಲ್ಲಿ ರೂ.425.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ.  ಇದರೊಂದಿಗೆ ಹೆಚ್ಚುವರಿ ರೂ.17.50 ಲಕ್ಷಗಳನ್ನು ಲೆಕ್ಕ ಶೀರ್ಷಿಕೆ 2235-02-103-0-62-059 ಯಿಂದ ಮರು ಹೊಂದಾಣಿಕೆ ಮಾಡಿಕೊಂಡು, ಒಟ್ಟು ರೂ.442.50 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರ್ಚ್ 2014ರ ಅಂತ್ಯದವರೆಗೆ ರೂ.442.50 ಲಕ್ಷಗಳ ವೆಚ್ಚ ಭರಿಸಲಾಗಿದೆ.

•►  2014-15ನೇ ಸಾಲಿನಲ್ಲಿ ರೂ.800.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ. ಇದರಲ್ಲಿ ಮೊದಲನೇ ಕಂತಿನ ಅನುದಾನ ರೂ.356.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ನವೆಂಬರ್ 2014ರ ಅಂತ್ಯದವರೆಗೆ ರೂ.350.46 ಲಕ್ಷಗಳ ವೆಚ್ಚ ಭರಿಸಲಾಗಿದೆ.

No comments:

Post a Comment