"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 3 January 2017

☀️ VII.ಜೀವನ್ ಪ್ರಮಾಣ್ ಯೋಜನೆ. (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (Jeevan Praman Yojana)

☀️ VII.ಜೀವನ್ ಪ್ರಮಾಣ್ ಯೋಜನೆ. (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(Jeevan Praman Yojana)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)


★ ಜೀವನ್ ಪ್ರಮಾಣ್ ಯೋಜನೆ. :


•► ಜೀವನ್ ಪ್ರಮಾಣ್ ಹಿರಿಯ ನಾಗರಿಕರಿಗೆ ನೀಡುವ ಪೆನ್ಷನ್ ಯೋಜನೆಯ ಬಯೋಮೆಟ್ರಿಕ್ ವ್ಯವಸ್ಥೆಯಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ವ್ಯವಸ್ಥೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಹಾಗೂ ಇತರೆ ಸರ್ಕಾರಿ ಪೆನ್ಷನ್‌ಗಳು ದೊರೆಯುತ್ತವೆ.


•► ದೇಶದಲ್ಲಿರುವ ಸುಮಾರು ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಪೆನ್ಷನ್ ಆಧಾರಿತ ಕುಟುಂಬಗಳಾಗಿದ್ದು, ನಿವೃತ್ತಿಗೊಂಡಿರುವ ನೌಕರ ಅಥವಾ ಅಧಿಕಾರಿಯ ವೇತನ ಹಾಗೂ ಲಭ್ಯತೆಗಳನ್ನು ಆಧರಿಸಿ ಸರ್ಕಾರಗಳ ನೀಡುವ ಪೆನ್ಷನ್ ಇದರ ಅಡಿಯಲ್ಲಿ ಬರಲಿದೆ.


•► ದೇಶದಲ್ಲಿ ಕೇಂದ್ರ ಸರ್ಕಾರದಿಂದ ಸುಮಾರು 50 ಲಕ್ಷದಷ್ಟು ನಿವೃತ್ತರು ಪೆನ್ಷನ್ ಪಡೆಯುತ್ತಿದ್ದರೆ, ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೇ ಸಂಖ್ಯೆಯ ಪೆನ್ಷನ್‌ದಾರರಿದ್ದಾರೆ. ಇದರೊಂದಿಗೆ ಸೇನೆ ಹಾಗೂ ರಕ್ಷಣಾ ಇಲಾಖೆಯ ಸುಮಾರು 25 ಲಕ್ಷ ಯೋಧರೂ ಸಹ ಪೆನ್ಷನ್ ಪಡೆಯುತ್ತಿದ್ದಾರೆ.


•► ಇದೀಗ ಎಲ್ಲ ಪೆನ್ಷನ್‌ದಾರರನ್ನು ಒಂದೇ ಸೂರಿನಡಿ ತರಲು ನಿರ್ಧರಸಲಾಗಿದ್ದು, ಜೀವನ್ ಪ್ರಮಾಣ್ ಯೋಜನೆಯನ್ನು ಜಾರಿಗೊಳಿಸಿದೆ. ಈಗಾಗಲೇ ಸುಮಾರು 5 ಲಕ್ಷಕ್ಕೂ ಅಧಿಕ ಮಂದಿ ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನು ಆನ್‌ಲೈನ್ ಮೂಲಕ ಅಥವಾ ಡಿಜಿಟಲೀಕರಣದ ಮೂಲಕ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದ್ದು, ಡಿಜಿಟಲ್ ಮೂಲಕವೇ ಸರ್ಟಿಫಿಕೇಟ್ ಪಡೆಯಲೂ ಸಹ ಅವಕಾಶವಿದೆ.


•► ಟಿಜಿಟಲ್ ಸರ್ಟಿಫಿಕೇಟ್‌ನಲ್ಲಿ ನಮೂದಾಗುವ ನೋಂದಣಿ ಸಂಖ್ಯೆಯೊಂದಿಗೆ ಪ್ರಮಾಣ್ ಗುರುತಿನ ಚೀಟಿಯನ್ನು ನಿಗದಿತ ಬ್ಯಾಂಕ್‌ನಲ್ಲಿ ಸಲ್ಲಿಸಿ, ಪೆನ್ಷನ್ ಪಡೆಯಬಹುದು. ನೋಂದಣಿ ಕುರಿತು ಮಾಹಿತಿ ಹಾಗೂ ಸಹಕಾರ ಪಡೆಯಲು ನಿಮ್ಮ ಮೊಬೈಲ್‌ನಲ್ಲಿಎಐಎಂದು ಟೈಪ್ ಮಾಡಿ ಒಂದು ಸ್ಪೇಸ್ ನೀಡಿ ನಿಮ್ಮ ನಗರದ ಪಿನ್‌ಕೋಡ್ ಟೈಪ್ ಮಾಡಿ 9938299899 ಸಂಖ್ಯೆಗೆ ಸಂದೇಶ ಕಳುಹಿಸಬಹುದು.

ಮಾಹಿತಿಗಾಗಿ : https://jeevanpramaan.gov.in/ ಗೆ ಸಂಪರ್ಕಿಸಬಹುದು.

No comments:

Post a Comment