"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 3 January 2017

☀️ VI.ಸಂಸದ್ ಆದರ್ಶ್ ಗ್ರಾಮ ಯೋಜನಾ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು) (Sansad Adarsh Gram Yojana)

☀️ VI.ಸಂಸದ್ ಆದರ್ಶ್ ಗ್ರಾಮ ಯೋಜನಾ (ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು)
(Sansad Adarsh Gram Yojana)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಮುಖ ಯೋಜನೆಗಳು :
(Central Sponsored schemes)



★ ಸಂಸದ್ ಆದರ್ಶ್ ಗ್ರಾಮ ಯೋಜನಾ :

•► ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜಾರಿಗೆ ಬಂದ ಮಹತ್ವದ ಯೋಜನೆಗಳಲ್ಲಿ ಸಂಸದ್ ಆದರ್ಶ್ ಗ್ರಾಮ ಯೋಜನಾ ಮುಖ್ಯವಾದುದು. 2014ರ ಅಕ್ಟೋಬರ್ 11 ರಂದು ಜಯಪ್ರಕಾಶ್ ನಾರಾಯಣರ ಜನ್ಮದಿನಾಚರಣೆಯಂದು ಈ ಯೋಜನೆಗೆ ಪ್ರಧಾನಿಯವರು ಚಾಲನೆ ನೀಡಿದ್ದರು.


•► ಪ್ರತಿ ಲೋಕಸಭಾ ಕ್ಷೇತ್ರದ ಗ್ರಾಮವೊಂದನ್ನು ಅಲ್ಲಿನ ಸಾಂಸದರು ದತ್ತು ತೆಗೆದುಕೊಳ್ಳುವ ಮೂಲಕ ಸಮಗ್ರ ಅಭಿವೃದ್ಧಿ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಪ್ರಮುಖವಾಗಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಯೇ ಇದರ ಮೂಲ ಉದ್ದೇಶವಾಗಿದ್ದು, ಹಳ್ಳಿಗಳಲ್ಲಿ ಸಾಮಾಜಿಕ ಅಭಿವೃದ್ಧಿ, ಸಾಂಸ್ಕೃತಿಕ ಬೆಳವಣಿಗೆಗಳ ಜೊತೆಯಲ್ಲಿ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸುವುದು ಇದರ ಉದ್ದೇಶಗಳಲ್ಲಿ ಸೇರಿವೆ.


•► ಪ್ರತಿ ಸಾಂಸದನಲ್ಲೂ ಗ್ರಾಮೀಣಾಭಿವೃದ್ಧಿಯ ಜವಾಬ್ದಾರಿಯನ್ನು ಮೂಡಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಎಲ್ಲ ಪಕ್ಷಗಳಿಂದಲೂ ಆಯ್ಕೆಯಾಗಿರುವ ದೇಶದ ಯಾವುದೇ ಸಾಂಸದ ಇದರ ಅಡಿಯಲ್ಲಿ ಗ್ರಾಮಗಳನ್ನು ದತ್ತು ಪಡೆಯಬಹುದು.


•► ಗ್ರಾಮವೊಂದನ್ನು ದತ್ತು ಪಡೆಯುವ ಮೂಲಕ ಅಲ್ಲಿಗೆ ಮೂಲಭೂತ ಸೌಲಭ್ಯವನ್ನು ಒದಗಿಸುವುದು, ಸಾರಿಗೆ ಸಂಪರ್ಕ, ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಆದರ್ಶ ಗ್ರಾಮವನ್ನಾಗಿ ಮಾಡುವುದು ಸಾಂಸದನ ಕರ್ತವ್ಯವಾಗಿರುತ್ತದೆ. 2014ರಲ್ಲಿ ಯೋಜನೆ ಜಾರಿಯಾದ ನಂತರ ಆಯ್ಕೆ ಮಾಡಿಕೊಂಡ ಗ್ರಾಮವನು 2016ರ ಒಳಗಾಗಿ ಆದರ್ಶ ಗ್ರಾಮವನ್ನಾಗಿ ಮಾಡಬೇಕು. ಇದಾದನ ನಂತರ ಮತ್ತೆ ಎರಡರಿಂದ ಮೂರು ಗ್ರಾಮಗಳನ್ನು ದತ್ತು ಪಡೆದು 2019ರ ಒಳಗಾಗಿ ಆ ಗ್ರಾಮಗಳನ್ನು ಅಭಿವೃದ್ಧ ಮಾಡಲು ಅವಕಾಶವಿದೆ.


•► ಇದಲ್ಲದೇ ಕೇಂದ್ರ ಸರ್ಕಾರದ ಅನುದಾನ ಬಳಸಿಕೊಂಡು ಮುಂದಿನ ಹತ್ತು ವರ್ಷಗಳಲ್ಲಿ ಆಗಬೇಕಾದ ಆ ಗ್ರಾಮದ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಿ, ಯೋಜನೆಗಳನ್ನು ಜಾರಿಗೊಳಿಸಬಹುದು.


•► ಇದರ ಅಡಿಯಲ್ಲಿ ಆಯ್ಕೆಯಾದ ಗ್ರಾಮವು ಸ್ಮಾರ್ಟ್ ಶಾಲೆಗಳು, ಅಲ್ಲಿನ ಗ್ರಾಮಸ್ಥರೆಲ್ಲರಿಗೂ ಸೂರು ಒದಗಿಸುವುದು, ಗ್ರಾಮದಲ್ಲೇ ಉತ್ತಮ ಆಸ್ಪತ್ರೆಯನ್ನು ನಿರ್ಮಿಸುವುದು ಸೇರಿದಂತೆ ಗುಣಮಟ್ಟದ ಸೌಲಭ್ಯ ದೊರೆಯುವಂತೆ ಮಾಡುವುದಾಗಿದೆ.


•► ಈ ಯೋಜನೆಯಡಿ ಇದುವರೆಗೂ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದಲ್ಲಿರುವ ಜಯಪುರ ಗ್ರಾಮವನ್ನು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ ಬರೇಲಿಯ ಉದ್ವಾ, ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದ ದೀನ್, ಕೇಂದ್ರ ಸಚಿವ ವಿ.ಕೆ. ಸಿಂಗ್ ಗಾಜಿಯಾಬಾದ್‌ನ ಮಿರ್‌ಪುರ್ ಹಿಂದೂ, ಸಾಂಸದ ಅಹ್ಮದ್ ಪಟೇಲ್ ಗುಜರಾತ್‌ನ ವಂದರಿ, ಸಾಂಸದ ಸಚಿನ್ ತೆಂಡೂಲ್ಕರ್ ಆಂಧ್ರಪ್ರದೇಶದ ಗುಡಾರ್ ಗ್ರಾಮವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತಿದ್ದಾರೆ.

•► ಈ ಕುರಿತ ಮಾಹಿತಿಗಾಗಿ  http://www.saanjhi.gov.in/ ವೀಕ್ಷಸಬಹುದು.

No comments:

Post a Comment