"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 12 August 2016

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ : ☀★ ಅಳಿವಿನಂಚಿನ "ಸಿಂಹಬಾಲದ ಕೋತಿ" — ಟಿಪ್ಪಣಿ ಬರಹ (Endangered Spices- Lion-tailed Macaque )

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ :

☀★ ಅಳಿವಿನಂಚಿನ "ಸಿಂಹಬಾಲದ ಕೋತಿ" — ಟಿಪ್ಪಣಿ ಬರಹ
(Endangered Spices- Lion-tailed Macaque )
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪರಿಸರ ಅಧ್ಯಯನ
(Environmental Studies)


ಸಿಂಹಬಾಲದ ಕೋತಿಯನ್ನು ವಂಡೆರೂ ಎಂದೂ ಕರೆಯಲಾಗುತ್ತದೆ. ಇದು ದಕ್ಷಿಣ ಭಾರತದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಹಳೆಯ ತಲೆಮಾರಿನ ಕೋತಿ ಪ್ರಬೇಧವಾಗಿದೆ. ಇದು ಅಪರೂಪದ ಪ್ರಾಣಿ ಎಂದು ಎನಿಸಿಕೊಂಡಿದೆ.

ಸಿಂಹಬಾಲದ ಕೋತಿಯ ಕೂದಲುಗಳು ಕಡುಗಪ್ಪಾಗಿರುತ್ತವೆ. ಇದರ ಕೆನ್ನೆಯಿಂದ ಗಲ್ಲದವರೆಗೆ ಬೆಳ್ಳಿ ಬಿಳಿ ಬಣ್ಣ ಆವರಿಸಿರುವುದು ಈ ಕೋತಿಯ ವಿಶೇಷತೆಯಾಗಿದೆ. ಇದರಿಂದ ಜರ್ಮನಿಯಲ್ಲಿ ಇದನ್ನು ಬರ್ಟಾಫೆ ಅಂದರೆ ಗಡ್ಡದ ಆಪ್ ಎಂದು ಕರೆಯಲಾಗುತ್ತದೆ.

ಇದರ ಕೂದಲು ರಹಿತ ಮುಖ ಕಪ್ಪು ಬಣ್ಣದ್ದಾಗಿದೆ. ಇದರ ತಲೆ ಹಾಗೂ ದೇಹದ ಉದ್ದ ಸುಮಾರು 42 ರಿದ 61 ಸೆಂಟಿಮೀಟರ್ ಇರುತ್ತದೆ. ಈ ಕೋತಿ ಸಾಮಾನ್ಯವಾಗಿ 2 ರಿಂದ 10 ಕೆಜಿವರೆಗೂ ತೂಕವಿರುತ್ತದೆ. ಇದು ಚಿಕ್ಕ ಕಪಿಸಂತತಿಯ ಪ್ರಾಣಿ ಎನಿಸಿಕೊಂಡಿದೆ. ಇದರ ಬಾಲ ಮಧ್ಯಮ ಗಾತ್ರದ ಉದ್ದವನ್ನು ಹೊಂದಿದ್ದು, ಸುಮಾರು 25 ಸೆಂಟಿಮೀಟರ್ ಇರುತ್ತದೆ. ಕೊನೆಯಲ್ಲಿ ಕಪ್ಪು ಜವರಿಗಳನ್ನು ಹೊಂದಿದ್ದು, ಸಿಂಹದ ಬಾಲವನ್ನೇ ಹೋಲುತ್ತದೆ.

ಗಂಡು ಕೋತಿಯ ಬಾಲದ ಜವರಿಗಳು ಹೆಣ್ಣು ಕೋತಿಗಳ ಜವರಿಗಳಿಗಿಂತ ಹೆಚ್ಚು ನೀಳವಾಗಿರುತ್ತವೆ. ಇದರ ಗರ್ಭಧಾರಣೆ ಅವಧಿ ಸುಮಾರು ಆರು ತಿಂಗಳು. ಚಿಕ್ಕ ಮರಿಗಳನ್ನು ಒಂದು ವರ್ಷದ ವರೆಗೆ ಜತನದಿಂದ ಕಾಪಾಡಲಾಗುತ್ತದೆ. ಹೆಣ್ಣು ಕೋತಿಗಳು ನಾಲ್ಕನೇ ವರ್ಷದಲ್ಲಿ ಲೈಂಗಿಕ ಪ್ರಬುದ್ಧತೆ ಪಡೆಯುತ್ತವೆ. ಗಂಡುಕೋತಿಗಳು ಆರು ವರ್ಷದ ವೇಳೆಗೆ ಲೈಂಗಿಕ ಪ್ರಬುದ್ಧತೆ ಪಡೆಯುತ್ತವೆ. ಇದು ಸುಮಾರು 20 ವರ್ಷಗಳ ಕಾಲ ಬದುಕುತ್ತದೆ. ಆದರೆ ಪಂಜರದಲ್ಲಿ 30 ವರ್ಷ ವರೆಗೂ ಬದುಕಿದ ನಿದರ್ಶನಗಳಿವೆ.

ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಅನ್ವಯ ಸಿಂಹಬಾಲದ ಕೋತಿಯನ್ನು ಸಂರಕ್ಷಿತ ಪ್ರಬೇಧ ಎಂದು ವರ್ಗೀಕರಿಸಲಾಗಿದೆ.

ಭಾರತದ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ವಂದಲೂರು ಮೃಗಾಲಯವನ್ನು ಸಿಂಹಬಾಲದ ಕೋತಿ ವಂಶಾಭಿವೃದ್ಧಿಯ ಸಮನ್ವಯ ಕೇಂದ್ರವಾಗಿ ಘೋಷಿಸಿದೆ.

ಇತ್ತೀಚೆಗೆ ತಮಿಳುನಾಡಿನ ವಂದಲೂರು ಅರಿಗ್ನಾರ್ ಅನ್ನಾ ಉದ್ಯಾನವನದಲ್ಲಿ ಸಿಂಹಬಾಲದ ಕೋತಿ ತಳಿಯ ವಂಶಾಭಿವೃದ್ಧಿಪಡಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

No comments:

Post a Comment