"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 3 August 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ VIII: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ (PDO Study Materials : Panchayath Raj Act- 73ed Constitutional Amendment)

●.ಪಿಡಿಓ (PDO) ಅಧ್ಯಯನ ಸಾಮಗ್ರಿ VIII: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(PDO Study Materials : Panchayath Raj Act- 73ed Constitutional Amendment)
•─━━━━━═══════════━━━━━─••─━━━━━═══════════━━━━━─•

★ ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(Panchayath Raj Act- 73ed Constitutional Amendment)


★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



21. 74 ನೇ ತಿದ್ದು ಪಡಿಯಲ್ಲಿ 243 ಕ್ಯೂ ಇದು ಮುನಿಸಿಪಲಿಟಿಗಳ ರಚನೆಯ ಬಗ್ಗೆ ಹೇಳುತ್ತದೆ.

22. 74 ನೇ ತಿದ್ದು ಪಡಿಯಲ್ಲಿ 243 ಆರ್ ನಗರ ಸಭೆಗಳ ರಚನೆ ಬಗ್ಗೆ ವಿವರಿಸುತ್ತದೆ.

23. 74 ನೇ ತಿದ್ದು ಪಡಿಯಲ್ಲಿ 243 ಎಸ್ ವಾರ್ಡ್ ಕಮಿಟಿಗಳ ರಚನೆ

24. 74 ನೇ ತಿದ್ದು ಪಡಿಯಲ್ಲಿ 243 ಟಿ ಸ್ಥಾನಗಳ ಮೀಸಲಾತಿ ಅಂದರೇ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ಸ್ಥಾನಗಳಲ್ಲಿ ಮೀಸಲಾತಿ ಬಗ್ಗೆ ಹೇಳುತ್ತದೆ.

25. 74 ನೇ ತಿದ್ದು ಪಡಿಯಲ್ಲಿ 243 ಯು ನಗರ ಸಭೆಗಳ ಅವಧಿಯ ಬಗ್ಗೆ ಹೇಳುತ್ತದೆ.5 ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.

26. 74 ನೇ ತಿದ್ದು ಪಡಿಯಲ್ಲಿ 243 ವಿ ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಿಸುತ್ತದೆ. ಇದು ಪಂಚಾಯಿತಿಗಳಿಗೆ ಇದ್ದಂತೆಯೇ ಇದೆ.

27. 74 ನೇ ತಿದ್ದು ಪಡಿಯಲ್ಲಿ 243 ಡಬ್ಲ್ಯೂ ಅಧಿಕಾರ ಹಾಗೂ ಜವಾಬ್ದಾರಿಗಳಉ ಇದೂ ಕೂಡ ನಗರಸಭೆ ಹಾಗೂ ಪಾಲಿಕೆಗಳು

28. 74 ನೇ ತಿದ್ದು ಪಡಿಯಲ್ಲಿ 243 ಎಕ್ಸ್ ತೆರಿಗೆ ವಿಧಿಸುವ ಅಧಿಕಾರದ ಬಗ್ಗೆ ಹೇಳುತ್ತದೆ. ಅಲ್ಲದೆ ರಾಜ್ಯ ಸರ್ಕಾರದೊಂದಿಗೆ ತೆರಿಗೆ ಹಂಚಿಕೆಯ ಬಗ್ಗೆಯೂ ಹೇಳುತ್ತದೆ.

29. 74 ನೇ ತಿದ್ದು ಪಡಿಯಲ್ಲಿ 243 ವೈ ಇದು ಹಣಕಾಸು ಆಯೋಗದ ಬಗ್ಗೆ ಹೇಳುತ್ತದೆ.

30. 74 ನೇ ತಿದ್ದು ಪಡಿಯಲ್ಲಿ 243 ಝಡ್ ಲೆಕ್ಕ ಪತ್ರವನ್ನು ನಗರಸಭೆಗಳು ಇಡುವ ಬಗ್ಗೆ ಹೇಳುತ್ತದೆ.

31. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎ ನಗರಸಭೆಯ ಚುನಾವಣೆಗಳ ಬಗ್ಗೆ ಹೇಳುತ್ತದೆ.

32. 74 ನೇ ತಿದ್ದು ಪಡಿಯಲ್ಲಿ 243 ಝಡ್ ಬಿ ರಾಜ್ಯ ಕ್ಷೇತ್ರಗಳಿಗೆ ಇದು ಅನ್ವಯವಾಗುವ ಬಗ್ಗೆ ವಿವರಿಸುತ್ತದೆ.

33. 74 ನೇ ತಿದ್ದು ಪಡಿಯಲ್ಲಿ 243 ಝಡ್ ಸಿ ಪಂಚಾಯಿತಿಗಳಲ್ಲಿ ವಿವರಿಸಿದಂತೆ ಕೆಲವು ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ .

34. 74 ನೇ ತಿದ್ದು ಪಡಿಯಲ್ಲಿ 243 ಝಡ್ ಡಿ ಜಿಲ್ಲಾ ಯೋಜನಾ ಕಮಿಟಿ ಬಗ್ಗೆ ತಿಳಿಸುತ್ತದೆ.

35. 74 ನೇ ತಿದ್ದು ಪಡಿಯಲ್ಲಿ 243 ಝಡ್ ಇ ಮಹಾನಗರ ಪಾಲಿಕೆ ಯೋಜನೆ ಕಮಿಟಿ ಬಗ್ಗೆ ತಿಳಿಸುತ್ತದೆ.

36. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎಫ್ ನಗರಸಭೆಯ ಹಳೆಯ ಕಾಯ್ದೆಗಳ ಮುಂದುವರಿಯುವಿಕೆ ಬಗ್ಗೆ ತಿಳಿಸುತ್ತದೆ.

37. 74 ನೇ ತಿದ್ದು ಪಡಿಯಲ್ಲಿ 243 ಝಡ್ ಜಿ ನ್ಯಾಯಾಲಯಗಳನ್ನು ಚುನಾವಣೆ ವಿಷಯದಲ್ಲಿ ದೂರವಿಡುತ್ತದೆ.

38. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇರುತ್ತಾನೆ.

39. ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ನಿಯಂತ್ರಣಾಧಿಕಾರಿವಿದೆ.

40. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಪೂರ್ಣಕಾಲಿಕ ಕಾರ್ಯದರ್ಶಿ ಇದ್ದು ಅವರು ಸರ್ಕಾರಿ ಅಧಿಕಾರಿಯಾಗಿರುತ್ತಾರೆ.
...ಮುಂದುವರೆಯುವುದು 

No comments:

Post a Comment