"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಪಂಚಾಯತ್ ಅಭಿವೃದ್ಧಿ ಅಧಿಕಾರಿ. Show all posts
Showing posts with label ಪಂಚಾಯತ್ ಅಭಿವೃದ್ಧಿ ಅಧಿಕಾರಿ. Show all posts

Tuesday, 2 August 2016

●. ಪಿ.ಡಿ.ಓ (PDO) ನೇಮಕಾತಿ ಪರೀಕ್ಷೆಯ ಅಧ್ಯಯನ ತಯಾರಿಗಾಗಿ ಮಹತ್ವಪೂರ್ಣ ಜಾಲತಾಣಗಳು : (Important Websites for PDO study materials)

●. ಪಿ.ಡಿ.ಓ (PDO) ನೇಮಕಾತಿ ಪರೀಕ್ಷೆಯ ಅಧ್ಯಯನ ತಯಾರಿಗಾಗಿ ಮಹತ್ವಪೂರ್ಣ ಜಾಲತಾಣಗಳು :
(Important Websites for PDO study materials)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಅಧ್ಯಯನ ತಯಾರಿಗಾಗಿ ಸಹಕಾರಿಯಾಗಬಹುದೆಂಬ ವಿಶ್ವಾಸದೊಂದಗೆ ಹಲವು ಗೆಳೆಯರ ಸಹಾಯದೊಂದಿಗೆ ನಾನು ಈ ಕೆಳಗಿನ ಕೆಲವು ಮಹತ್ವಪೂರ್ಣ ಜಾಲತಾಣಗಳನ್ನು ನಿಮ್ಮ "ಸ್ಪರ್ಧಾಲೋಕ" ದಲ್ಲಿ ಮುಂದಿಡಲು ಮಾಡುತ್ತಿರುವ ಒಂದು ಚಿಕ್ಕ ಪ್ರಯತ್ಯ

ಇಲ್ಲಿ ebook format ನಲ್ಲಿ Magazineಗಳು, Publicationಗಳು ವರದಿ, ಕಾರ್ಯ ಪ್ರಕಟನೆಗಳು ಇದ್ದು, ತಮ್ಮ ಅಧ್ಯಯನಕ್ಕೆ ಇವು ಸಹಕಾರಿ ಅಂತ ನನ್ನ ಅನಿಸಿಕೆ.

ಹಾಗೆಯೇ ತಮ್ಮ ಹತ್ರಾನೂ ಇಂತಹ ಮಹತ್ವಪೂರ್ಣ ಮಾಹಿತಿಗಳು ಇದ್ದಲ್ಲಿ ತಾವು ನನ್ನ ಗಮನಕ್ಕೆ  ತರಬೇಕೆಂದು ವಿನಂತಿ.


"ಜ್ಞಾನಕ್ಕಿಂತ ದೊಡ್ಡ ದಾನ ಈ ಜಗತ್ತಿನಲ್ಲಿ ಮತ್ತಿನ್ನೇನೂ ಇಲ್ಲ"


◾️http://www.sirdmysore.gov.in/ —    ಅನಸಾ ರಾಗ್ರಾಸಂಸ್ಥೆ

◾️http://rdpr.kar.nic.in/ — ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

◾️http://rural.nic.in/netrural/rural — ministry of rural development

◾️http://rdpr.kar.nic.in/kvmag.asp - ಕರ್ನಾಟಕ ವಿಕಾಸ (ಮಾಸಿಕ ಪತ್ರಿಕೆ)—ಈ ಪತ್ರಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕಟಿಸಲಾಗುತಿದೆ. ಇದು ಕನ್ನಡದಲ್ಲಿದೆ.

◾️http://karnatakavarthe.org/category/janapada/ 
ಜನಪದ (ಮಾಸಿಕ ಪತ್ರಿಕೆ)—ಈ ಪತ್ರಿಕೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗುತಿದೆ. ಇದು ಕನ್ನಡದಲ್ಲಿದೆ.

◾️http://karnatakavarthe.org/category/march-of-karnataka/
ಮಾರ್ಚ್ ಆಫ್ ಕರ್ನಾಟಕ (ಮಾಸಿಕ ಪತ್ರಿಕೆ)—ಈ ಪತ್ರಿಕೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗುತಿದೆ. ಇದು ಇಂಗ್ಲಿಷ್ ದಲ್ಲಿದೆ.


ಮೇಲೆ ನೀಡಲಾದ ಜಾಲತಾಣಗಳಲ್ಲಿ ವಿಶೇಷವಾಗಿ ಗ್ರಾಮ ಪಂಚಾಯತ್, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಹಾಗೂ ಇತರೇ ಮಹತ್ವಪೂರ್ಣ Additional ಸರಕಾರೀ ಜಾಲತಾಣಗಳು ಇದ್ದು ತಾವು ಅಲ್ಲಿ ಅಧ್ಯಯನಕ್ಕೆ ಉಪಯುಕ್ತವಾದ ಮಾಹಿತಿಯನ್ನು ಪಡೆಯಬಹುದು.

ನಿಮ್ಮ ಸಲಹೆ ನನಗೆ ಅತ್ಯಮೂಲ್ಯವಾದವು :

Saturday, 23 July 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ II: ಪಂಚಾಯತ್ ರಾಜ್ ಅಧಿನಿಯಮ (PDO Study Materials : Panchayath Raj Act)

●.ಪಿಡಿಓ (PDO) ಅಧ್ಯಯನ ಸಾಮಗ್ರಿ II: ಪಂಚಾಯತ್ ರಾಜ್ ಅಧಿನಿಯಮ
(PDO Study Materials : Panchayath Raj Act)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



16. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.

17. ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.

18. ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.

19. ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.

20. ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು

21. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.

22. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.

23. ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.

24. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.

25. ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು .

26. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಯು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿ / ಕ್ಷೇತ್ರ ಸಿಬ್ಬಂದಿಗಳಿಗೆ ಸಭೆಯ ನೋಟಿಸನ್ನು ನೀಡಬೇಕು .

27. ಗ್ರಾಮ ಪಂಚಾಯಿತಿಗೆ ಸಾಮಾನ್. ಸಭೆಗೆ ಏಳು ಪೂರ್ಣ ದಿನಗಳ ನೋಟೀಸನ್ನು ನೀಡಬೇಕು . ಸಭೆಯ ಸೂಚನಾ ಪತ್ರದ ಪ್ರತಿಯನ್ನು ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಹಚ್ಚಿರಬೇಕು.

28. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಅರ್ಧ ಭಾಗ ( ಶೇ.50 ) ಸಭೆಯ ಕೋರಂ ಆಗಿರುತ್ತದೆ.

29. ಗ್ರಾಮ ಪಂಚಾಯಿತಿ ಸಭೆಗೆ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯಬೇಕು.

30. ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದಿನ ದಿನಕ್ಕೆ ಅಥವಾ ತರುವಾಯದ ದಿನಕ್ಕೆ ಮುಂದೂಡಬಹುದು , ಹಾಗೆ ನಿಗದಿಪಡಿಸಿದ ಸಭೆಯ ನೋಟೀಸನ್ನು ಗ್ರಾಮ ಪಂಚಾಯಿತಿ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕು.
...ಮುಂದುವರೆಯುವುದು. 

Tuesday, 28 June 2016

●.ಪಿ.ಡಿ.ಓ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಕುರಿತು ಸಂಕ್ಷಿಪ್ತ ಮಾಹಿತಿ : (Brief description on(PDO) - Panchayat Development Officer Karnataka)

●.ಪಿ.ಡಿ.ಓ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಕುರಿತು ಸಂಕ್ಷಿಪ್ತ ಮಾಹಿತಿ :
(Brief description on(PDO) - Panchayat Development Officer Karnataka) 
•─━━━━━═══════════━━━━━─••─━━━━━═══════════━━━━━─•

ಆತ್ಮೀಯ ಸ್ಪರ್ಧಾರ್ಥಿಗಳೇ,ಕೆಲವೇ ದಿನಗಳಲ್ಲಿ 638 ಪಿ.ಡಿ.ಓ,638-ಕಾರ್ಯದರ್ಶಿ ಗ್ರೇಡ್-1,ಹೈದ್ರಾಬಾದ್ ಕರ್ನಾಟಕ 177 ಪಿ.ಡಿ.ಓ,ಕಾರ್ಯದರ್ಶಿ ಗ್ರೇಡ್-1, 171.

 ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಧಿಸೂಚನೆ.
GM,3A,3B,2A,2B ಶುಲ್ಕ 500.SC,ST,CAT-1,and others 300.
ಸ್ಪಧಾ೯ತ್ಮಕ ಪರೀಕ್ಷಾ ದಿನಾಂಕ ಸೆಪ್ಟೆಂಬರ್ ತಿಂಗಳು 2016. (According to personal information, May be varied, differs)

 ●.ಪಿ.ಡಿ.ಓ ನೂತನ ಪಠ್ಯಕ್ರಮ :-


ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಪಿ.ಡಿ.ಓ (ಪಂಚಾಯತಿ ಅಭಿವೃದ್ಧಿ ಅಧಿಕಾರಿ), ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್ - 1 ಹುದ್ದೆಗಳ ಭರ್ತಿ ಆದಷ್ಟು ಬೇಗನೇ ಆಗಲಿದೆ. ಈ ಸಂಬಂಧ ಕೆಲವೇ ದಿನಗಳಲ್ಲಿ ಅಧಿಸೂಚನೆಯನ್ನು ಸರಕಾರ ಹೊರಡಿಸಲಿದೆ. ಸ್ಪರ್ಧಾರ್ಥಿಗಳು ಮುಂದಿನ ಪಠ್ಯಕ್ರಮವನ್ನು ಆಧರಿಸಿ ಪರೀಕ್ಷೆ ತಯಾರಿಯನ್ನು ನಡೆಸಬಹುದು.



●.ಪಿ.ಡಿ.ಓ (ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಹುದ್ದಗೆ  :-

ಅರ್ಹತೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
ಮಾಸಿಕ ವೇತನ 20,000 - 36,300 ರೂ
ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನವಿಲ್ಲ, ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಯ್ಕೆ ಮಾಡಲಾಗುತ್ತದೆ.


●.ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮ ಪಂಚಾಯತಿ ಸಹಾಯಕರು ಗ್ರೇಡ್ - 1 ಹುದ್ದೆಗಳಿಗೆ :-

ಅರ್ಹತೆ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ
ಮಾಸಿಕ ವೇತನ 14,550 - 26,700 ರೂ.
ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಸಂದರ್ಶನವಿಲ್ಲ, ನೇರವಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಯ್ಕೆ ಮಾಡಲಾಗುತ್ತದೆ.




●.ಪರೀಕ್ಷೆಯ ಪಠ್ಯಕ್ರಮ :-

1. ಪತ್ರಿಕೆ - 1.

ಸಾಮಾನ್ಯ ತಿಳುವಳಿಕೆ

ಹಾಲಿ ಘಟನಾವಳಿಯ ಮಾಹಿತಿ, ಸಮಾಜ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ, ಸಾಮಾನ್ಯ ವಿಜ್ಞಾನ, ದಿನನಿತ್ಯದ ಆಗು - ಹೋಗುಗಳ ವಿಚಾರಧಾರೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಮಾತು ಸಾಮಾನ್ಯ ಮನೋಸಾಮರ್ಥ್ಯ.

2. ಪತ್ರಿಕೆ - 2.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಬಗ್ಗೆ ನಿರ್ಧೀಷ್ಟ ಪತ್ರಿಕೆ.

ಕರ್ನಾಟಕ, ಭಾರತದ ಗ್ರಾಮಗಳ ಜನರ ಸ್ಥಿತಿ - ಗತಿಗಳು, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಮತ್ತು ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಕಾರ್ಯಕ್ರಮಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಮತ್ತು ಪಂಚಾಯತ್ ರಾಜ್ಯ.


# ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸಹಾಯಕ ಗ್ರೇಡ್ - 1 ಆಯ್ಕೆಗೋಸ್ಕರ ಪರೀಕ್ಷೆಯು ವಿವಿಧ ಆಯ್ಕೆಗಳ ಮಾದರಿ (ಬಹುಅಂಶ ಆಯ್ಕೆ) ಗಳನ್ವಯ ಪ್ರಶ್ನೆ ಪತ್ರಿಕೆ ಇರುತ್ತದೆ. 200 ಅಂಕಗಳನ್ನೊಳಗೊಂಡ ಎರಡು ಬರಹ ರೂಪದ ಪ್ರಶ್ನೆಗಳಿರುತ್ತವೆ. (ಗೆಜೆಟ್ ನಲ್ಲಿ ಇದೇ ರೀತಿ ಪ್ರಕಟಿಸಿರುತ್ತಾರೆ. ಅಂದರೆ ಈ ಪರೀಕ್ಷೆಗಳು ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ಅರ್ಥೈಸಿಕೊಳ್ಳಬಹುದು)



# ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಸಿದ್ಧಪಡಿಸಿರುತ್ತಾರೆ. ಅಭ್ಯರ್ಥಿಯು ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಯಾವುದಾದರೂ ಒಂದರಲ್ಲಿ  ಉತ್ತರಿಸಬೇಕಾಗುತ್ತದೆ.



# ನೇಮಕಾತಿ ಅರ್ಜಿಗಳು :- ಯಾವುದೇ ಹುದ್ದೆಗೆ ಅಭ್ಯರ್ಥಿಯು ಅರ್ಜಿ ಸಲ್ಲಿಸುವುದಾದಲ್ಲಿ ಅಂತಹ ಅರ್ಜಿಯಲ್ಲಿ ಜಿಲ್ಲೆಗಳ ಪೈಕಿ ಅವನು ಆಯ್ಕೆಯ ಒಂದು ಜಿಲ್ಲೆಯನ್ನು ನಮೂದಿಸಿರಬೇಕು. ಆಯ್ಕೆಯು ಆ ಜಿಲ್ಲೆಗೆ ಸೀಮಿತವಾಗಿರುತ್ತದೆ.



●.PDO ಪರೀಕ್ಷೆಗ ತಯಾರಿಕೆಗೆ ಬೇಕಾದ ಅಗತ್ಯ ಪಠ್ಯಪುಸ್ತಕಗಳು (ನಿರ್ದಿಷ್ಟ ಪತ್ರಿಕೆಗಾಗಿ) :-

1.ಕರ್ನಾಟಕ ಪಂಚಾಯಿತಿ ರಾಜ್ ಕ್ಯಪಿಡಿ.

2.ಪಿಡಿಒ ತರಬೇತಿ ನೀಡುವ ಪಠ್ಯಕ್ರಮ

3.ಅಬ್ದುಲ್ ನಜೀರ್ ಸಾಬ್ ತರಬೇತಿ ಕೇಂದ್ರ ದ ಗ್ರಾಮೀಣ ಅಭಿವೃದ್ಧಿ ತರಬೇತಿ ಪಠ್ಯಕ್ರಮ

4.ಕರ್ನಾಟಕ ವಿಕಾಸ ಮಾಸಪತ್ರಿಕೆ

ಸ್ಪರ್ಧಾ ಚ್ಯತ್ರ pdo ಮಾರ್ಗದರ್ಶಿ..