☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ :
★ ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972 : ಟಿಪ್ಪಣಿ ಬರಹ
(Wildlife (protection) Conservation Act - 1972)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪರಿಸರ ಅಧ್ಯಯನ
(Environmental Studies)
ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972, ಭಾರತದ ಸಂಸತ್ತು ಆಂಗೀಕರಿಸಿದ ಒಂದು ಕಾಯ್ದೆಯಾಗಿದ್ದು, ಇದರ ಮುಖ್ಯ ಉದ್ದೇಶ ಗಿಡಮರಗಳನ್ನು ಹಾಗೂ ಪ್ರಾಣಿ ಪ್ರಬೇದಗಳನ್ನು ಸಂರಕ್ಷಿಸುವುದು.
1972ಕ್ಕೆ ಮುನ್ನ, ಭಾರತದಲ್ಲಿ ಕೇವಲ 5 ರಾಷ್ಟ್ರೀಯ ಉದ್ಯಾನವಗಳಷ್ಟೇ ಇದ್ದವು. ಇತರ ಹಲವು ಸುಧಾರಣೆಗಳನ್ನು ತರುವ ಜತೆಗೆ ಈ ಕಾಯ್ದೆಯ ಅನ್ವಯ, ಸಂರಕ್ಷಿತ ಗಿಡಗಳು ಹಾಗೂ ಪ್ರಾಣಿ ಪ್ರಬೇಧಗಳ ಅನುಸೂಚಿಯನ್ನು ಬಿಡುಗಡೆ ಮಾಡಿತು. ಇಂಥ ಸಸ್ಯಗಳನ್ನು ಕಡಿಯುವುದು ಮತ್ತು ಪ್ರಾಣಿಗಳನ್ನು ಬೇಟೆ ಮಾಡುವುದು ನಿಷಿದ್ಧ.
ಈ ಕಾಯ್ದೆಯು ಕಾಡು ಪ್ರಾಣಿಗಳಿಗೆ, ಪಕ್ಷಿಗಲಿಗೆ ಹಾಗೂ ಸಸ್ಯಪ್ರಬೇಧಗಳಿಗೆ ಸುರಕ್ಷೆ ನೀಡುತ್ತವೆ. ಇದಕ್ಕೆ ಸಂಬಂಧಪಟ್ಟ ಇತರ ವಿಷಯಗಳೂ ಈ ಕಾಯ್ದೆಯಲ್ಲಿ ಒಳಗೊಂಡಿವೆ. ಇದು ಇಡೀ ಭಾರತಕ್ಕೆ ಅನ್ವಯವಾಗುವ ಕಾಯ್ದೆಯಾಗಿದ್ದು, ಜಮ್ಮು ಕಾಶ್ಮೀರಕ್ಕೆ ಮಾತ್ರ ಇದು ಅನ್ವಯಿಸುವುದಿಲ್ಲ. ಆ ರಾಜ್ಯಕ್ಕೆ ತನ್ನದೇ ಆದ ಪ್ರತ್ಯೇಕ ವನ್ಯಜೀವಿ ಕಾಯ್ದೆ ಇದೆ.
ವನ್ಯಮೃಗ ಹಾಗೂ ಸಸ್ಯಗಳನ್ನು ರಕ್ಷಿಸುವ ಸಂಬಂಧ ಆರು ಶೆಡ್ಯೂಲ್‍ಗಳಲ್ಲಿ ಇದರ ವಿವರಗಳಿವೆ. ಶೆಡ್ಯೂಲ್ 1 ಹಾಗೂ ಶೆಡ್ಯೂಲ್ 2ರ 2ನೇ ಭಾಗ, ಸಂಪೂರ್ಣ ಸುರಕ್ಷೆಯನ್ನು ನೀಡುತ್ತದೆ. ಇದರ ಅನ್ವಯ ಕಾಯ್ದೆ ಉಲ್ಲಂಘನೆಯಾಗಿ ಗರಿಷ್ಠ ದಂಡ ವಿಧಿಸಲಾಗಿದೆ.
ಶೆಡ್ಯೂಲ್ 3 ಹಾಗೂ ಶೆಡ್ಯೂಲ್ 4ರಲ್ಲಿ ಪಟ್ಟಿ ಮಾಡಿರುವ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಪ್ರಬೇಧಗಳನ್ನು ಸಂರಕ್ಷಿಸುವುದು ಕಡ್ಡಾಯ. ಆದರೆ ಇವುಗಳ ಉಲ್ಲಂಘನೆಗೆ ದಂಡ ಕಡಿಮೆ. ಐದನೇ ಶೆಡ್ಯೂಲ್‍ನಲ್ಲಿ ಬೇಟೆಯಾಡಬಹುದಾದ ಪ್ರಾಣಿಗಳ ಪಟ್ಟಿ ಇದೆ. ಸಸ್ಯಗಳ ವಿವರಗಳು 6ನೇ ಶೆಡ್ಯೂಲ್‍ನಲ್ಲಿದ್ದು, ಇವುಗಳನ್ನು ಬೆಳೆಯುವುದು ಮತ್ತು ಕಟಾವು ಮಾಡುವುದು ನಿಷಿದ್ಧ.

No comments:
Post a Comment