☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ :
ಮಸಾಲಾ ಬಾಂಡ್‍ಗಳು : (IAS PRELIMS -2016)
(Masala Bonds)
━━━━━━━━━━━━━━━━━━━━━━━━━━━━━━━━━━
ಬಾಂಡ್ ಎನ್ನುವುದು ಸಾಲ ಸಾಧನವಾಗಿದೆ. ಹೂಡಿಕೆದಾರರಿಂದ ಬಂಡವಾಳವನ್ನು ಕ್ರೋಢೀಕರಿಸಲು ಕಾರ್ಪೊರೇಟ್ ಸಂಸ್ಥೆಗಳು ಈ ವಿಧಾನವನ್ನು ಬಳಸಿಕೊಳ್ಳುತ್ತವೆ.
ಮಸಾಲಾ ಬಾಂಡ್ ಎಂದರೆ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಸಾಗರೋತ್ತರ ದೇಶಗಳಲ್ಲಿ ಬಂಡವಾಳ ಕ್ರೋಢೀಕರಿಸಲು ಬಿಡುಗಡೆ ಮಾಡುವ ಬಾಂಡ್‍ಗಳಾಗಿವೆ.
ಮಸಾಲಾ ಬಾಂಡ್‍ಗಳಿಗಿಂತ ಮುನ್ನ, ಭಾರತದ ಕಾರ್ಪೊರೇಟ್ ಸಂಸ್ಥೆಗಳು ವಿದೇಶಿ ವಾಣಿಜ್ಯ ಸಾಲ ಅಥವಾ ಇಸಿಬಿಗಳನ್ನು ಅವಲಂಬಿಸಬೇಕಿತ್ತು. ಇಸಿಬಿಯಂಥ ಸಾಧನಗಳ ಪ್ರಮಖ ಸವಾಲು ಎಂದರೆ, ಹೀಗೆ ಕ್ರೋಢೀಕರಿಸಿದ ಹಣಕ್ಕೆ ಕರೆನ್ಸಿ ದೊಡ್ಡ ತಡೆಯಾಗುತ್ತಿತ್ತು. ಅಂದರೆ ಇವು ಡಾಲರ್ ರೂಪದಲ್ಲೇ ಇವನ್ನು ಕ್ರೋಢೀಕರಿಸಿ, ಮರುಪಾವತಿಯನ್ನೂ ಡಾಲರ್ ರೂಪದಲ್ಲೇ ಮಾಡಬೇಕಿತ್ತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂಥ ಒಂದು ವರ್ಷದ ಅವಧಿ ಸುಧೀರ್ಘ ಅವಧಿಯಾಗಿರುತ್ತದೆ. ಏಕೆಂದರೆ ಕರೆನ್ಸಿಗಳ ದರಗಳು ನಿಯತವಾಗಿ ವ್ಯತ್ಯಯವಾಗುತ್ತಲೇ ಇರುತ್ತದೆ. ಆದ್ದರಿಂದ ಒಂದು ಈಕ್ವಿಟಿ ಬಿಡುಗಡೆ ಮಾಡುವ ಬಾಂಡ್‍ಗಳು, ಅದರಲ್ಲೂ ಮುಖ್ಯವಾಗಿ ರೂಪಾಯಿಯನ್ನು ಗಳಿಸುತ್ತಿರುವ ಕಂಪನಿಗಳು ಬಾಂಡ್ ಬಿಡುಗಡೆ ಮಾಡುವಲ್ಲಿ ದೊಡ್ಡ ಅಪಾಯ ಸಾಧ್ಯತೆ ಇತ್ತು.
ಆದರೆ ಮಸಾಲಾ ಬಾಂಡ್‍ಗಳು ರೂಪಾಯಿ ಪ್ರಾಬಲ್ಯದ ಬಾಂಡ್‍ಗಳಾಗಿವೆ.
ಇವುಗಳನ್ನು ವಿದೇಶಿ ಖರೀದಿದಾರರಿಗಾಗಿ ಬಿಡುಗಡೆ ಮಾಡಲಾಗುತ್ತದೆ. ಹೀಗೆ ಇದು ಇತರ ಸಾಧನಗಳಿಗಿಂತ ಭಿನ್ನವಾಗಿದೆ. ಮಸಾಲಾ ಬಾಂಡ್‍ಗಳನ್ನು ಬಿಡುಗಡೆ ಮಾಡುವ ಕಾರ್ಪೊರೇಟ್ ಸಂಸ್ಥೆ 10 ಶತಕೋಟಿ ರೂಪಾಯಿ ಮೌಲ್ಯದ ಬಾಂಡ್‍ಗಳನ್ನು ಬಿಡುಗಡೆ ಮಾಡಿ, 11 ಶತಕೋಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಭಾರತೀಯ ರೂಪಾಯಿಯ ಪರಿವರ್ತನೀಯತೆ ಸೀಮಿತವಾಗಿರುವುದರಿಂದ, ಹೂಡಿಕೆದಾರರು 10 ಶತಕೋಟಿ ರೂಪಾಯಿ ಮೌಲ್ಯದ ಡಾಲರ್‍ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಒಂದು ವರ್ಷದ ಬಳಿಕ, ಭಾರತದ ಕಾರ್ಪೊರೇಟ್ ಸಂಸ್ಥೆಗಳು, 11 ಶತಕೋಟಿ ರೂಪಾಯಿ ಮೌಲ್ಯದ ಡಾಲರ್‍ಗಳನ್ನು ಮರುಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಕರೆನ್ಸಿ ಅಪಾಯ ಹೂಡಿಕೆದಾರರಿಗೇ ಇರುತ್ತದೆ.
ಇತ್ತೀಚೆಗೆ ಭಾರತದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆದ ಎಚ್‍ಡಿಎಫ್‍ಸಿ, ಜಗತ್ತಿನ ಪ್ರಪ್ರಥಮ ಮಸಾಲಾ ಬಾಂಡ್ ಬಿಡುಗಡೆ ಮಾಡಿ, 30 ಶತಕೋಟಿ ರೂಪಾಯಿಗಳನ್ನು ಕ್ರೋಢೀಕರಿಸಿದೆ. ರೂಪಾಯಿ ಪ್ರಾಬಲ್ಯದ ಈ ಬಾಂಡ್ ಅನ್ನು ಭಾರತದಿಂದ ಹೊರಗೆ ಅಂದರೆ ಲಂಡನ್ ಷೇರು ವಿನಿಮಯ ಕೇಂದ್ರದಲ್ಲಿ ಬಿಡುಗಡೆ ಮಾಡಿದ್ದು, ಈ ಐತಿಹಾಸಿಕ ಕ್ರಮವು, ಯೂರೋಪ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ನಿರ್ಧಾರ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಆರ್ಥಿಕ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರ ಪರಿಪಕ್ವತಾ ಅವಧಿ ಮೂರು ವರ್ಷಗಳಾಗಿದ್ದು, ವಾರ್ಷಿಕ ಪ್ರತಿಫಲ ಶೇಕಡ 8.33ರಷ್ಟಿದೆ. ಇದು ನಿಗದಿತ ಗುರಿಯ ನಾಲ್ಕು ಪಟ್ಟು ಹೆಚ್ಚು ಖರೀದಿಯಾಗಿದೆ.

No comments:
Post a Comment