"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 17 April 2016

■. ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀ಮುಂಬೈ, ದೆಹಲಿ ಹಾಗೂ ಕೋಲ್ಕತ್ತ ಇವು ದೇಶದ ಮೂರು ದೊಡ್ಡ ನಗರಗಳಾಗಿವೆ.ಇನ್ನುಳಿದೆರಡು ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ. ಇದಕ್ಕೆ ಕಾರಣವೇನು? (Main Reasons to increase high Air pollution in Delhi)

■. ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
☀ಮುಂಬೈ, ದೆಹಲಿ ಹಾಗೂ ಕೋಲ್ಕತ್ತ ಇವು ದೇಶದ ಮೂರು ದೊಡ್ಡ ನಗರಗಳಾಗಿವೆ.ಇನ್ನುಳಿದೆರಡು ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ವಾಯುಮಾಲಿನ್ಯ ಗಂಭೀರ ಸಮಸ್ಯೆಯಾಗಿದೆ. ಇದಕ್ಕೆ ಕಾರಣವೇನು?
(Main Reasons to increase high Air pollution in Delhi)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಸಾಮಾನ್ಯ ಅಧ್ಯಯನ
(General Studies)

-ನನ್ನ ಜ್ಞಾನ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಏನಾದರೂ ಪ್ರಮಾದಗಳು ಕಂಡುಬಂದಲ್ಲಿ  ದಯವಿಟ್ಟು ತಾವು ಸಹಕರಿಸಬೇಕಾಗಿ ವಿನಂತಿ.


— ಸದ್ಯ ರಾಷ್ಟ್ರರಾಜಧಾನಿ ದೆಹಲಿಯು ತ್ವರಿತಗತಿಯಲ್ಲಿ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸುತ್ತಿರುವ ಮೆಟ್ರೋ ನಗರಗಳಲ್ಲೊಂದಾಗಿದ್ದು, ಅತಿ ಹೆಚ್ಚು ವಾಯು ಮಲೀನಗೋಳಿಸುವ ಅಭಿವೃದ್ಧಿ ಹೊಂದುತ್ತಿರುವ ಇತರೆ ನಗರಗಳಿಗಿಂತ ದೆಹಲಿ ಮುಂಚೂಣಿಯಲ್ಲಿದೆ. ಇದರೊಂದಿಗೆ ಭಾರತದಲ್ಲಿ ಅತಿ ಮಾಲಿನ್ಯವುಳ್ಳ ನಗರಗಳಲ್ಲಿ ಕೋಲ್ಕತ್ತಾ, ದೆಹಲಿ, ಲಕ್ನೋ, ಬೆಂಗಳೂರು, ಕಾನ್ಪುರ, ಮುಂಬೈ ಮುಂತಾದ ನಗರಗಳು ಕೂಡಾ ಅಗ್ರಸ್ಥಾನಗಳಲ್ಲಿವೆ.

ವಿಶ್ವ ಆರೋಗ್ಯ ಸಂಸ್ಥೆ ವರದಿಯೊಂದರ ಪ್ರಕಾರ ದೆಹಲಿಯು ಇಡೀ ವಿಶ್ವದಲ್ಲೇ ಅತೀ ಹೆಚ್ಚು ವಾಯು ಮಾಲಿನ್ಯ ಹೊಂದಿದ ಸಿಟಿ ಅನ್ನೋ ಕುಖ್ಯಾತಿ ಪಡ್ಕೊಂಡಿದ್ದಲ್ಲದೇ ದೆಹಲಿಯಲ್ಲಿ ವಾಯುಮಾಲಿನ್ಯವು ಚೀನಾದ ಬೀಜಿಂಗ್‌ಗಿಂತ ಅಪಾಯಕಾರಿ ಮಟ್ಟ ತಲುಪಿರುವುದು ಬಹಿರಂಗಗೊಂಡಿದೆ.

ಪ್ರಸ್ತುತ ದಿನಮಾನಗಳಲ್ಲಿ ಕೋಲ್ಕತ್ತಾ, ದೆಹಲಿ ಮತ್ತು ಮುಂಬೈಗಳು ಅತೀ ವೇಗವಾದ ಬೆಳವಣಿಗೆಯನ್ನು ಹೊಂದುವುದರ ಜೊತೆಗೆ ಅತಿ ಮಾಲಿನ್ಯವುಳ್ಳ ನಗರಗಳಾಗಿದ್ದು, ದೆಹಲಿ ಮಾತ್ರ ಉಳಿದವುಗಳಿಗಿಂತ ಮುಂಚೂಣಿಯಲ್ಲಿದೆ. ಕಾರಣಗಳೇನೆಂದರೆ,

ತೀವ್ರ ನಗರೀಕರಣಗೊಳ್ಳುತ್ತಿರುವುದು. ಮಿತಿಮೀರಿದ ಜನಸಂಖ್ಯೆ ಹಾಗೂ ಅಭಿವೃದ್ಧಿಯ ವೇಗ, ರಸ್ತೆಗಳ ದುರವಸ್ಥೆ, ಮಾಲಿನ್ಯದ ಅವೈಜ್ಞಾನಿಕ ನಿರ್ವಹಣೆ,  ಕೈಗಾರಿಕೆ­ಗಳ ತ್ಯಾಜ್ಯ ಮುಂತಾದವು ಇದಕ್ಕೆ ಪ್ರಮುಖ ಕಾರಣ.

ವಾಯು ಮಾಲಿನ್ಯಕ್ಕೆ ದಿನನಿತ್ಯದ ಸಂಚಾರ ದಟ್ಟಣೆಯೊಂದಿಗೆ ಲಾರಿಗಳು ಮತ್ತು ದ್ವಿಚಕ್ರ ವಾಹನಗಳು, ಪ್ರಯಾಣಿಕರ ಕಾರುಗಳಿಗಿಂತ ಹೊರಸೂಸುವ ಹೊಗೆಯ ಪ್ರಮಾಣದಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿವೆ. ಅವುಗಳನ್ನು ನಿಯಂತ್ರಿಸದೇ ಇರುವುದು.

ಅತಿ ಹೆಚ್ಚು ವಾಹನ ಹೊಂದಿರುವ ಮೆಟ್ರೋ ನಗರಗಳ ಪೈಕಿ ದೆಹಲಿ ಮೊದಲ ಸ್ಥಾನದಲ್ಲಿದೆ. ಕಾರಣ ಮುಂಬೈ, ಕೋಲ್ಕತಾ ಹಾಗೂ ಚೆನ್ನೈನಲ್ಲಿರುವ ವಾಹನಗಳ ಕೂಡಿಸಿದರೆ ಆಗುವ ಒಟ್ಟು ಮಾಲಿನ್ಯ ದೆಹಲಿಯೊಂದರಲ್ಲೇ ಆಗುತ್ತದೆ!.

ರಸ್ತೆಯಲ್ಲಿನ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಯಿಂದ ಏಳುವ ಅತಿಯಾದ ಧೂಳು.

ಗಿಡ-ಮರಗಳ ಗಣನೀಯವಾದ ಕಡಿತ, ಮಿತಿಮೀರಿದ ಕಟ್ಟಡಗಳ ನಿರ್ಮಾಣ, ಹೆಚ್ಚುತ್ತಿರುವ ಅಡುಗೆ ತಯಾರಿಕೆ, ನಗರವ್ಯಾಪಿ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನಾ ಸ್ಥಾವರಗಳು ಮತ್ತು ಕೈಗಾರಿಕೆಗಳು.

ದೆಹಲಿಯಲ್ಲಿ ಮಿತಿ­ಮೀರುತ್ತಿರುವ ವಾಯು ಮಾಲಿನ್ಯ ತಡೆಗೆ ಕೈಗೊಳ್ಳಬೇಕಾದ ಪರಿಣಾಮಕಾರಿ ಕ್ರಮಗಳನ್ನು ಇಲ್ಲಿಯವರೆಗೆ ಸರ್ಕಾರವು ನಿರ್ಲಕ್ಷಿಸಿರುವುದು.

ಇವೆಲ್ಲ ಮೇಲಿನ ಸಮಸ್ಯೆಗಳು ಕೋಲ್ಕತ್ತಾ, ದೆಹಲಿ ಮತ್ತು ಮುಂಬೈ ನಗರಗಳಲ್ಲಿಯೂ ಇವೆ ಆದರೆ ದೆಹಲಿಯಷ್ಷು ತೀವ್ರತೆಯಿಂದ ಕೂಡಿಲ್ಲ. ಕಾರಣ ಅಲ್ಲಿನ ಪ್ರಸ್ತುತ ನಗರಗಳ  ಸನ್ನಿವೇಶ, ಸರ್ಕಾರದ ಧೋರಣೆಗಳು, ಪರಿಸರದ ವ್ಯವಸ್ಥೆ ಮುಂತಾದವು.
-------------------

ಆದಾಗ್ಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ಜ.1ರಿಂದ ಜ.15ರವರೆಗೆ ಸಮ- ಬೆಸ ವಾಹನ ಚಾಲನೆ ನಿಯಮವನ್ನು ಪಾಲಿಸಲಾಗುತ್ತಿದೆ. ಇದರಿಂದ ಕೆಲ ಮಟ್ಟಿಗೆ ವಾಯು ಮಾಲಿನ್ಯ ಪ್ರಮಾಣ ಇಳಿದಿರುವುದಂತೂ ನಿಜ. ಈ ಕುರಿತು ನಡೆಸಲಾದ ಅಧ್ಯಯನಗಳು ಕೂಡ ಇದನ್ನೇ ಹೇಳಿವೆ.

No comments:

Post a Comment