"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 17 April 2016

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರೇ ಈ ದೇಶದ ಬೆನ್ನೆಲುಬು. ಆದಾಗ್ಯೂ ಇತ್ತೀಚೆಗೆ ರೈತ ನಿಜಕ್ಕೂ ಆತ್ಮಹತ್ಯೆಯಂಥ ದಾರುಣ ಸ್ಥಿತಿಗೆ ತಲುಪಿದ್ದಾನೆ. ಯಾಕೆ? ಇದರ ಹಿಂದಿರುವ ಪ್ರಬಲ ಕಾರಣಗಳು ಯಾವವು?.. ವಿವರಿಸಿ. (Explain the Main Causes that led to Farmers' suicides recently) (200 words)

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :

☀ಭಾರತ ಒಂದು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ರೈತರೇ ಈ ದೇಶದ ಬೆನ್ನೆಲುಬು. ಆದಾಗ್ಯೂ ಇತ್ತೀಚೆಗೆ ರೈತ ನಿಜಕ್ಕೂ ಆತ್ಮಹತ್ಯೆಯಂಥ ದಾರುಣ ಸ್ಥಿತಿಗೆ ತಲುಪಿದ್ದಾನೆ. ಯಾಕೆ? ಇದರ ಹಿಂದಿರುವ ಪ್ರಬಲ ಕಾರಣಗಳು ಯಾವವು?.. ವಿವರಿಸಿ.
(Explain the Main Causes that led to Farmers' suicides recently)
(200 words)

━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಸಾಮಾನ್ಯ ಅಧ್ಯಯನ
(General Studies)

-ನನ್ನ ಜ್ಞಾನ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಏನಾದರೂ ಪ್ರಮಾದಗಳು ಕಂಡುಬಂದಲ್ಲಿ  ದಯವಿಟ್ಟು ತಾವು ಸಹಕರಿಸಬೇಕಾಗಿ ವಿನಂತಿ.


— ರೈತರ ಆತ್ಮಹತ್ಯೆ ಒಂದು ದುರಂತವಾಗಿದ್ದು, ಭೌಗೋಳೀಕರಣ ಮತ್ತು ಖಾಸಗೀಕರಣದ ನಡುವೆ ಸಿಲುಕಿರುವ ರೈತರು ಬರ, ಬೆಳೆ ವೈಫಲ್ಯ ಮತ್ತು ಆರ್ಥಿಕ ದುಸ್ತಿತಿಯಿಂದ  ಆತ್ಮಹತ್ಯೆಯತ್ತ ಮುಖಮಾಡುವಂತೆ ಮಾಡುತ್ತಿರುವುದು ವಿಷಾದದ ಸಂಗತಿ. ಇತ್ತೀಚಿನ ದಿನಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿದ್ದು, ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಸಾವಿರ ದಾಟಿದೆ. ಇಡೀ ವ್ಯವಸ್ಥೆಯ ‌ಬಗ್ಗೆ ರೈತರು ಹತಾಶಗೊಳ್ಳುವುದರ ಜೊತೆಗೆ ಈ ಕೆಳಗಿನ ಕಾರಣಗಳಿಂದ ಆತ್ಮಹತ್ಯೆಗೆ ಮುಖಮಾಡುತ್ತಿದ್ದಾರೆ.

ಕೃಷಿ ವೆಚ್ಚ ಜಾಸ್ತಿ, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊರತೆ, ಸರ್ಕಾರದ ನಿಲುವು, ಮಾರ್ಗದರ್ಶನದ ಕೊರತೆ ಮತ್ತಿತರ ಕಾರಣಗಳಿಂದಾಗಿ ಹತಾಶರಾಗುತ್ತಿರುವ ರೈತರ ಸಂಖ್ಯೆ ಹೆಚ್ಚಿದೆ. ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯಗಳು ರೈತರಿಗೆ ಆಧುನಿಕ ಕೃಷಿ ವಿಧಾನಗಳು, ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಬೆಳೆಗಳ ಮಾಹಿತಿಯನ್ನು ಒದಗಿಸದೇ  ರೈತರ ನೋವಿಗೆ ವಿ.ವಿ.ಗಳು ಸ್ಪಂದಿಸುತ್ತಿಲ್ಲ, ಮಾರ್ಗದರ್ಶನ ನೀಡುತ್ತಿಲ್ಲ.

ಕೃಷಿ ಮೂಲದಿಂದ ಬರುವ ಆದಾಯ ಅತ್ಯಲ್ಪವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜೀವನ ನಿರ್ವಹಣೆ ಕಷ್ಟವಾಗಿರುವುದೇ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಕೃಷಿ ಉತ್ಪಾದನೆಗೆ ಸೂಕ್ತ ಬೆಲೆ ದೊರೆಯದೆ ನಷ್ಟ ಅನುಭವಿಸುವುದರ ಜೊತೆಗೆ ಸಾಲ ಮತ್ತು ಬಡ್ಡಿಯ ಹೊರೆ ಹೆಚ್ಚಾಗಿ ಗೌರವಯುತವಾದ ನೆಮ್ಮದಿಯ ಜೀವನ ನಡೆಸುವುದು ದುಸ್ತರವಾಗಿದೆ.

ಇತ್ತೀಚಿನ ಕೆಲವು ವರ್ಷಗಳಿಂದ ಕೃಷಿಕರು ತಮ್ಮ ಸಣ್ಣ ಹಿಡುವಳಿಯಲ್ಲಿ ಹೆಚ್ಚು ಕೆಲಸ ಇಲ್ಲದೆ ಅರೆ ಉದ್ಯೋಗಿಗಳಾಗಿ, ಪರ್ಯಾಯ ಉದ್ಯೋಗವೂ ಇಲ್ಲದೆ ಸಮಯ ಕಳೆಯಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿದೆ. ಹೊರಗೂ ಕೂಲಿಗಳು ಸಿಗುತ್ತಿಲ್ಲ. ಇದರಿಂದ ಸಕಾಲಕ್ಕೆ ಬಿತ್ತನೆ ಆಗುತ್ತಿಲ್ಲ. ಉತ್ಪಾದನಾ ವೆಚ್ಚ ಜಾಸ್ತಿ ಆಗಿದೆ. ಅದಕ್ಕೆ ತಕ್ಕಂತೆ ಆದಾಯ ಬರುತ್ತಿಲ್ಲ.ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇಂಥ ಸಂದರ್ಭಗಳಲ್ಲಿ ಸಂಕಷ್ಟ ಮತ್ತು ಹತಾಶೆಯಿಂದ ಅವರ ಮನಸ್ಥೈರ್ಯ ಕುಸಿದು ಕೆಟ್ಟ ಚಟಗಳಿಗೆ ಮೊರೆಹೋಗುತ್ತಿದ್ದಾರೆ.

ಕೆಲವೊಮ್ಮೆ ಬೆಳೆಗಳನ್ನು ಸಹ ಬೇಡಿಕೆಗಿಂತ ಹೆಚ್ಚಾಗಿ ಅಪಾರ ಪ್ರಮಾಣದಲ್ಲಿ ಅನಿಯಮಿತವಾಗಿ ಬೆಳೆಯುವುದಲ್ಲದೇ , ಮಾರುಕಟ್ಟೆಗೆ ಬರುವ ವೇಳೆಗೆ ಅವುಗಳ ಬೆಲೆಯೂ ಕುಸಿಯುತ್ತದೆ. ಆಗ ಈ ಬೆಳೆಗಳ ಉತ್ಪಾದನಾ ವೆಚ್ಚವೂ ರೈತರಿಗೆ ಗಿಟ್ಟದೆ ನಷ್ಟ ಎದುರಿಸುವ ಸಂದರ್ಭಕ್ಕೊಳಗಾಗುತ್ತಿರುವುದು.

ರೈತರ ಸೋಲಿನಲ್ಲಿ ಮಧ್ಯವರ್ತಿಗಳ ಪಾಲು ದೊಡ್ಡದು.ಹೆಚ್ಚಿನ ಸಂದರ್ಭಗಳಲ್ಲಿ  ಲಾಭವನ್ನು ಮಧ್ಯವರ್ತಿಗಳೇ ದೋಚಿಕೊಳ್ಳುತ್ತಾರೆ. ಇಳುವರಿ ಬಂದ ಕೂಡಲೇ ಅದನ್ನು ಯೋಗ್ಯ ಬೆಲೆ ಬರುವವರೆಗೂ ಕಾಪಾಡಿಕೊಳ್ಳಲು ಇರಬೇಕಾದ ಸಂರಕ್ಷಣಾ ಸಂಗ್ರಹಾರಗಳಿರದಿರುವುದರಿಂದ ರೈತರು ಇದ್ದ ಬೆಲೆಯಲ್ಲಿ ಮಾರಾಟ ಮಾಡುವ ಆತುರಕ್ಕೊಳಗಾಗುವುದು.

ರೈತರ ಹಿತ ಕಾಯುವ ಸಹಕಾರ ಸಂಸ್ಥೆಗಳೂ ವಿರಳವಾಗಿವೆ. ಸರ್ಕಾರ ರೈತರಿಗೆ ಸಮಯೋಚಿತವಾದ ಸಲಹೆ ಮತ್ತು ಸೂಚನೆಗಳ ಮೂಲಕ ಪರ್ಯಾಯ ಬೆಳೆಗಳ ಉತ್ತೇಜನೆಗೆ ಕ್ರಮ ಕೈಗೊಳ್ಳದಿರುವುದು.

 ವಾಸ್ತವವಾಗಿ ಸಾಲಮನ್ನಾ ಯೋಜನೆ ಅವೈಜ್ಞಾನಿಕ ಹಾಗೂ ದೋಷಪೂರಿತವಾಗಿದೆ. ಆದ್ದರಿಂದ ಸರ್ಕಾರ ರೈತರ ಆತ್ಮಹತ್ಯೆ ತಡೆಗೆ ಸೂಕ್ತ ಯೋಜನೆಯೊಂದನ್ನು ರೂಪಿಸಬೇಕು. ಕೃಷಿ ತಜ್ಞರು, ಮಾನಸಿಕ ಆರೋಗ್ಯ ತಜ್ಞರು, ಅಧಿಕಾರಿಗಳು ಮತ್ತು ಸಂಘಸಂಸ್ಥೆಗಳ ಸಹಯೋಗದೊಂದಿಗೆ ಕೃಷಿ ಕ್ಷೇತ್ರದಲ್ಲಿನ ಸಮಸ್ಯೆನಿವಾರಣೆಗೆ ಸಮಗ್ರ ಯೋಜನೆ ರೂಪಿಸಬೇಕಾದ ಅಗತ್ಯವಿದೆ.

No comments:

Post a Comment